ಈ ಜಗವ ತೋರಲೆಂದೇ ಬಂದ ದೇವದೂತ
ಈ ಜಗವ ತೋರಿ ತಾನೊಬ್ಬನೆ ದೂರ ನಿಂತ
ನನ್ನಪ್ಪ ಈ ಜಗವ ತೋರಿಸಲು ಕರೆತಂದವ
ಎನ್ನ ಕರೆದು ಜಗವ ತೋರಿ ಸುಮ್ಮನೆ ನಿಂತುಬಿಟ್ಟವ.
ಈ ಜಗದ ಪೈಪೋಟಿ, ಅಂಕು ಡೊಂಕು
ನಾವು -ಅವರು -ಇವರು ಎಂಬುದನ್ನೇ ತಿಳಿಸದೆ ಸುಮ್ಮನೆ ನಿಂತುಬಿಟ್ಟವ
ಅವನು ಈ ಭೂಮಿಗೆ ಕರೆತಂದ ಅಷ್ಟೇ,
ಈ ಜಗವ ಏನೆಂದು ತಿಳಿಸಲಿಲ್ಲ
ಎನಗೆ ಈ ಭೂಮಿಯ ಆಕಾಶದಲ್ಲಿ ಹಾರಾಡುವ ರೆಕ್ಕೆಯಾಗಿ
ರೆಕ್ಕೆ ಕೊಟ್ಟು ಹಾರಲು ಹಚ್ಚಿ ದೂರ ನಿಂತವ
ಅಪ್ಪನ ರೆಕ್ಕೆಗಿರುವ ಶಕ್ತಿಯೇ ನನ್ನೊಳಗೆ ಇದೆ
ಅಪ್ಪನ ರೆಕ್ಕೆಗಿರುವ ಬಲವೇ ನನ್ನೊಳಗೆ ಅಡಗಿದೆ
ನಾ ಈ ಲೋಕ ಸ್ವರ್ಗದಲ್ಲಿ ಜಿಗಿಯುವೆ, ಬೆಳೆಯುವೆ
ನಾ ಈ ಲೋಕ ಪರಿಮಳದಿ ಹಾರುಡುವೆ
ನಾ ಈ ಲೋಕ ಶಕ್ತಿಯದಿ ನಿಲ್ಲುವೆ
ನನ್ನ ಜನ್ಮಕೂ ಜೀವನಕ್ಕೂ ಈ ಲೋಕದ ಎನ್ನ ದೇವದೂತವಾದವನ ಎದುರಿಗೆ
ನಾ ಎಷ್ಟೇ ಭಾವನೆಗಳನ್ನು ಒತ್ತಿಟ್ಟರು ಬಚ್ಚಿಟ್ಟರು
ನನ್ನ ಕಾವ್ಯದಿ ಭಾವನೆಯಾಗುವ ಶಕ್ತಿ ನೀನು, ಅಪ್ಪ
ನೀ ಎನ್ನ ಬಾಳಿನ ಆಪ್ತ ಕೈ
ಎನ್ನ ಅಪ್ಪಿಕೊಂಡ ಜಗತ್ತು
ಲೋಕ ಕಿರೀಟದ ಎನ್ನ ಹೊಳಪು ರೂಪ
ನನ್ನೊಳಗಿನ ಶಕ್ತಿ ರೂಪ
ನೀ ಬಾಳ ಬೆಳಗಿದ ದೇವದೂತ ಅಪ್ಪ
-ಶಕುಂತಲಾ ಪ್ರ. ಬರಗಿ