ಭಾರತಿ ಮತ್ತು ಆರತಿ
ಇಬ್ಬರದೂ ಬಾರಿ ಪ್ರೀತಿ
ದೇಹ ಎರಡು ಅತ್ಮ ಒಂದೇ
ಅಂತ ಎಲ್ಲರೂ ಅನ್ನುವುದೇ
ದಿನವೂ ಒಬ್ಬ ಹುಡುಗ
ಮುಗುಳ್ನಗುತ್ತಿದ್ದ ಕಾಲೇಜಲಿ ಪಾಠ ಕೇಳುವಾಗ
ಆರತಿಗೆ ಹಿಡಿಸಿದ ಪೋರ
ಕಾರಣ ಆತ ಭಾರೀ ಸುಂದರ
ಭಾರತಿಗೆ ಹೇಳಿದಳು ಗುಟ್ಟು
ಭಾರತಿ ನೋಡಿದಳು ದುರುಗುಟ್ಟಿ
ಅಂದಳು “ಆತ ನೋಡೋದು ನಿನ್ನನ್ನು
ಪ್ರೀತಿ ಮಾಡೋದು ನನ್ನನ್ನು!”
ಹುಡುಗ ಬಂದನು ಇವರ ಹತ್ತಿರ
ಹೆಚ್ಚಾಯ್ತು ಹುಡುಗಿಯರ ಕಾತರ
ಕೇಳಿದರು “ಪ್ರೀತಿಸುವೆ ಯಾರನ್ನ?
ನನ್ನನ್ನ ಇಲ್ಲಾ ಇವಳನ್ನ?”
ಸುಂದರ ಅಂದ”ನಕ್ಕಿದ್ದು ನೋಡಿ ನಿಮ್ಮಿಬ್ಬರನ್ನ
ನಾ ಪ್ರೀತಿಸುವದು ನಿಮ್ಮಿಬ್ಬರಲ್ಲಿ ಒಬ್ಬಳ ಅಕ್ಕನ್ನ!”
-ವಿದ್ಯಾ ಗಾಯತ್ರಿ ಜೋಶಿ