ನಟ, ನಿರ್ಮಾಪಕ ನಮ್ ಜಗದೀಶ ಅಭಿನಯದ ಹಣೆ ಬರಹಕ್ಕೆ ಹೊಣೆ ಯಾರು? ಅಡಿ ಬರಹದ 3rd ಕ್ಲಾಸ್ ಕನ್ನಡ ಸಿನಿಮಾ ಫೆ. 7ಕ್ಕೆ ಬಿಡುಗಡೆಯಾಗಲಿದೆ. ಸಿನಿಮಾ ಎಂದರೆ ಇಂದಿನ ಯುವಪೀಳಿಗೆಗೆ ತುಂಬಾ ಅಚ್ಚುಮೆಚ್ಚು. ಅಂಥದರಲ್ಲಿ ಇತ್ತೀಚಿಗೆ ಹಲವು ಪ್ರತಿಭಾವಂತರು ಕನ್ನಡ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡುತ್ತಲೇ ತಮ್ಮ ಭವಿಷಕ್ಕೆ ತಾವೇ ಮುನ್ನುಡಿಯನ್ನು ಬರೆದುಕೊಳ್ಳುತಿದ್ದಾರೆ. ಆ ಒಂದು ದಾರಿಯಲ್ಲಿ ಸಾಗುತ್ತಿರುವ ನಮ್ ಜಗದೀಶ ಅವರು 3rd ಕ್ಲಾಸ್ (ಹಣೆ ಬರಹಕ್ಕೆ ಹೊಣೆ ಯಾರು?) ಎಂಬ ಅಡಿ ಬರಹದ ಹೊಚ್ಚ ಹೊಸ […]
ಹಾಡ್ಲಹಳ್ಳಿ ಪಬ್ಲಿಕೇಷನ್ ವತಿಯಿಂದ ಉಲಿವಾಲ ಮೋಹನ್ ಕುಮಾರ್ ಅವರ “ಮುಳುಗಿದ್ದೆಲ್ಲಾ ಕಥೆಯಲ್ಲ” ಹಾಡ್ಲಹಳ್ಳಿ ನಾಗರಾಜ್ ಅವರ “ಅಜ್ಜನ ಕಮೋಡು” ಕಾದಂಬರಿ ಹಾಗು “ಮಳೆಯೆಂಬ ಮಾಯಾಂಗನೆ” ಪ್ರಬಂಧ ಹಾಗು ಚಲಂ ಹಾಡ್ಲಹಳ್ಳಿ ಅವರ “ಈ ಮಳೆಗಾಲ ನಮದಲ್ಲ” ಕವನ ಸಂಕಲನ, “ವಿ.ಸೂ. ಹೊಗೆ ಆರೋಗ್ಯಕ್ಕೆ ಒಳ್ಳೆಯದು” ಪುಸ್ತಕಗಳು ಇದೇ ಶನಿವಾರ, ಸೆಪ್ಟೆಂಬರ್ ೪, ೨೦೨೧ ರ ಸಂಜೆ ಐದಕ್ಕೆ ಹಾಸನದ ಸಾಹಿತ್ಯ ಪರಿಷತ್ ಭವನದಲ್ಲಿ ಬಿಡುಗಡೆಯಾಗಲಿವೆ. ಆಸಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಪುಸ್ತಕ ಕೊಳ್ಳುವವರಿಗಾಗಿ ಈ ಐದು ಪುಸ್ತಕಗಳ […]