ಪಂಜು ಕಾವ್ಯಧಾರೆ

ಸೂಂಕತ್ತಿ ಹೂವುಗಳು ಕೆಂಪಗೆ ಮೈಯರಳಿ ನಿಂತವು ರಸ್ತೆಯ ಬದಿಗೆನನಗಿಂತ ಸುಂದರಿ ಯಾರೆಂದವು ಸುಮ್ಮಗೆ ಚೆಲುವೆಲ್ಲ ನಂದೆ ಎಂದವು ನಾಚಿ ನೀರಾದಂತೆಲಜ್ಜೆಯ ಬಿಂಕ ದಿಬ್ಬಣವೇರಿ ಕುಣಿದಂತೆ ಮಳೆಯ ಕಾಸರದ ಮುಂಗಾರಿನ ಆಗಮನಕೆಚಿತ್ತಾಕರ್ಷಕ ಹಸಿರು ಭೂರಮೆಯ ಸಿಂಗಾರಕೆ ಗುಲ್ ಮೊಹರೆಯೊತ್ತಿ ಅಗಸದ ಡಿಂಬಿಗೆ ಅರಳಿಕೊನಕೊನರಿ ಪುತ್ಕರಿಸಿ ಕೆಂಪು ಗೋಣು ಚೆಲ್ಲಿ ಕ್ರಾಂತಿಯೊ ಶಾಂತಿಯೊ ನಾನಿರುವುದೆ ಹೀಗೆ ಕೆಂಪಗೆಹಸಿರು ಮರದೊಳಗೆ ಕಾಯಿ ಹೂವಾಗಿ ಅರಳಿದೆಕೆಂಪಗೆ ಕಾಡ ಹಾದಿಯ ಹೂವಾದರೂ ನಾನು ಸೊಗಸೆ ಸೊಗಸುಸೊಗಯಿಸುವ ಹೂವೆ ಆದರೂ ಎಲ್ಲರ ಕಾಂಬ ಕಣ್ಣು ಎಲ್ಲರೆದೆಯ … Read more

ಖಾಸಗಿ ಕಂಪನಿಗಳ ಗೋಳು: ಮಂಜುನಾಥ್. ಚಿನಕುಂಟಿ

ಮಿಡಲ್ ಕ್ಲಾಸ್ ಕುಟುಂಬದ ಹುಡುಗರು ಅಥವಾ ಹುಡುಗಿಯರ ಬದುಕು ಹೊಂದಾಣಿಕೆಯೊಂದಿಗೆಯೇ ಸರಿದೂಗಿಸುವ ಪರಿಸ್ಥಿತಿಗೆ ಬಂದು ನಿಂತಿದೆ. ಅದೂ ಸಂಸಾರ, ಜೀವನವೆಂಬ ಪಾಠದಲ್ಲಲ್ಲ ಕೆಲಸ ಎನ್ನುವ ದುಡಿಮೆಯಲ್ಲಿ. ಈ ಮಿಡಲ್ ಕ್ಲಾಸ್ ಕುಟುಂಬದ ತಂದೆ ತಾಯಿಯ ಆಲೋಚನೆಗಳು ಎಲ್ಲಿಗೆ ಸೀಮಿತವಾಗಿರುತ್ತವೆ ಎಂದರೆ, ನನ್ನ ಮಕ್ಕಳಿಗೆ ಒಂದೊಳ್ಳೆ ಶಿಕ್ಷಣ ಕೊಡಿಸಿದ್ದೇನೆ ಯಾವುದೋ ಖಾಸಗಿ ಕಂಪನಿಯಲ್ಲಿ ಕೆಲಸ ಸಿಕ್ಕರೆ ಸಾಕು ತಿಂಗಳಿಗೆ ಮನೆಗೆ ಹಾಗೂ ಸಾಲಕ್ಕೆ ತೀರಿಸುವ ಮೊತ್ತ ಕಳುಹಿಸಿದರೆ ಸಾಕು ಜೀವನವೆಂಬದುನ್ನು ಸಾಯುವವರೆಗೂ ಸರಿದೂಗಿಸಕೊಂಡು ಹೋಗಬಹುದು ಎಂಬ ನಂಬಿಕೆ. ಅದು … Read more

ಕಥಾ ಜಗತ್ತಿನ ಸುಂದರ ಲೋಕ ‘ತಿತ್ತಿಬ್ವಾಸನ ಟೈಟಾನ್ ವಾಚು’: ಶಿವಕುಮಾರ ಸರಗೂರು

ಕಥಾ ಪ್ರಪಂಚದಲ್ಲಿ ಪಂಜೆ ಮಂಗೇಶರಾಯರು ಕನ್ನಡಕ್ಕೆ ನೀಡಿದ ಕಾಣ್ಕೆ ಅತ್ಯಮೂಲ್ಯವಾದದು. ತದನಂತರದ ಕಾಲದಲ್ಲಿ ಸಣ್ಣಕಥೆಗಳ ಜನಕರೆಂದೇ ಹೆಸರಾದ ಮಾಸ್ತಿ ಅವರು ಸಣ್ಣಕಥೆಯನ್ನು ತಮ್ಮ ಬರವಣಿಗೆಯ ಮುಖ್ಯ ಮಾಧ್ಯಮವನ್ನಾಗಿ ಬಳಸಿದರು ಮಾತ್ರವಲ್ಲ ಬೆಳೆಸಿದರು. ಚಾಮರಾಜನಗರ ಪರಿಸರವು ಕಥಾ ಜಗತ್ತಿಗೆ ತೆರೆದುಕೊಳ್ಳಲು ಹವಣಿಸುತ್ತಿರುವ ಈ ಕಾಲದಲ್ಲಿ ಕೊಳ್ಳೇಗಾಲದ ಸೂಕ್ಷ್ಮ ಸಂವೇದನಾಶೀಲ ಬರಹಗಾರರಾದ ದಿಲೀಪ್ ಎನ್ಕೆ ಅವರ ನಾಲ್ಕನೇ ಪುಸ್ತಕ ತಿತ್ತಿಬ್ವಾಸನ ಟೈಟಾನ್ ವಾಚು ಹೊರ ಬಂದಿರುವುದು ಹೆಮ್ಮೆಯ ವಿಷಯವಾಗಿದೆ. ಒಂಬತ್ತು ಕಥೆಗಳಲ್ಲಿ ಹರಡಿಕೊಂಡಿರುವ ಈ ಸಂಕಲನವು ಭಾಷೆ, ವಸ್ತು, ತಂತ್ರ … Read more

ಸುನಿಲ್ ಅಗಡಿ ಫೋಟೋಗ್ರಫಿ

ಸುನಿಲ್ ಅಗಡಿ ವೃತ್ತಿಯಿಂದ ಮೆಕ್ಯಾನಿಕಲ್ ಅಭಿಯಂತರರು. ಕವಿಗಳ ತವರು ಎಂದು ಕರೆಸಿಕೊಳ್ಳುವ ” ಧಾರವಾಡ ” ಇವರ ಸ್ವಂತ ಊರು. ಕವನಗಳ ಬರೆಯುವುದು ಬಿಡುವಿನ ಸಮಯದ ಹವ್ಯಾಸ ಹಾಗು ವನ್ಯಜೀವಿಗಳು ಹಾಗೂ ಪಕ್ಷಿಗಳ ಚಟುವಟಿಕೆಗಳನ್ನು ಕ್ಯಾಮರಾ ಕಣ್ಣಿನಿಂದ ಸೆರೆಹಿಡಿಯುವುದು ಇವರ ಮತ್ತೊಂದು ಹವ್ಯಾಸವಾಗಿದೆ. Instagram profile : agadis_wild_world Facebook page : Panorama – Agadi Brothers Photography

ವಿಜ್ಞಾನ ಭವನದಲ್ಲಿ ಮಕ್ಕಳ ಹಕ್ಕುಗಳ ಭಾಷಣ : ಒಂದು ಜೀವನ ಪಾಠ: ನಾಗಸಿಂಹ ಜಿ ರಾವ್

2011ರಲ್ಲಿ ದೆಹಲಿಯ ರಾಷ್ಟ್ರೀಯ ಸಾರ್ವಜನಿಕ ಸಹಕಾರ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ (NIPCCD) ಆಯೋಜಿಸಿದ್ದ ಒಂದು ತಿಂಗಳತರಬೇತಿಯಲ್ಲಿಭಾಗವಹಿಸಿದ್ದೆ. NIPCCD ನಮ್ಮ ದೇಶದ ಒಂದು ಪ್ರಮುಖ ಸಂಸ್ಥೆಯಾಗಿದ್ದು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿಗೆ ಸಂಬಂಧಿಸಿದ ತರಬೇತಿ, ಸಂಶೋಧನೆ, ಮತ್ತು ನೀತಿ ರೂಪಿಸುವಿಕೆಯಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಇದು ಮಕ್ಕಳ ಹಕ್ಕುಗಳು, ಶಿಕ್ಷಣ, ಆರೋಗ್ಯ, ಮತ್ತು ರಕ್ಷಣೆಗೆ ಸಂಬಂಧಿಸಿದ ಕಾರ್ಯಕ್ರಮಗಳ ಮೂಲಕ ಸಾಮಾಜಿಕ ಕಲ್ಯಾಣವನ್ನು ಪ್ರೋತ್ಸಹಿಸುವುದಲ್ಲದೆ ಸರ್ಕಾರೀ ಅಧಿಕಾರಿಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳ ಕಾರ್ಯಕರ್ತರಿಗೆ ನಿರಂತರವಾಗಿ ತರಬೇತಿಗಳನ್ನು ಆಯೋಜನೆ ಮಾಡುತ್ತಿರುತ್ತದೆ. ನಾನು … Read more

ನಮ್ಮ ಇಂದ್ರತ್ತೆ: ಒಂದು ಪುಸ್ತಕದ ಹುಚ್ಚಿನ ಕಥೆ: ನಾಗಸಿಂಹ ಜಿ ರಾವ್

ನನ್ನ ಒಂಬತ್ತನೇ ತರಗತಿಯ ದಿನಗಳು ಒಂದು ಸಾಹಸಕಥೆಯಂತಿತ್ತು. ಆಗ ನಾನು ಕನ್ನಡ ಮಾಧ್ಯಮದ ವಿದ್ಯಾರ್ಥಿ, ಆದರೆ ನನ್ನ ಒಳಗೊಂದು ವಿಶಾಲವಾದ ಜಗತ್ತಿತ್ತು—ಪುಸ್ತಕಗಳ ಜಗತ್ತು. ಆ ಜಗತ್ತಿನಲ್ಲಿ ನಾನು ಸಾಹಸಿಯಾಗಿರುತ್ತಿದ್ದೆ, ಕಾಲ್ಪನಿಕ ದೇಶಗಳಲ್ಲಿ ವಿಹರಿಸುತ್ತಿದ್ದೆ, ಕತೆಗಳ ರಸದೌತಣದಲ್ಲಿ ಮಿಂದೇಳುತ್ತಿದ್ದೆ. ಆದರೆ, ಈ ಜಗತ್ತಿನ ದ್ವಾರವನ್ನು ತೆರೆಯಲು ನನಗೊಂದು ದೊಡ್ಡ ಸವಾಲಿತ್ತು—ನಮ್ಮ ಇಂದ್ರತ್ತೆ. ಇಂದ್ರತ್ತೆ ಒಬ್ಬ ಸಾಮಾನ್ಯ ಗೃಹಿಣಿ ಅಲ್ಲ . ಅವರು ಶಿಕ್ಷಕಿಯಾಗಿ ಕೆಲಸ ನಿರ್ವಹಿಸಿದ್ದರು, ಮಕ್ಕಳಿಗೆ ಸಂಗೀತದ ಸೊಗಸಾದ ಲೋಕವನ್ನು ಪರಿಚಯಿಸುತ್ತಿದ್ದರು. ಅವರ ಕಂಠದಿಂದ ಹೊರಬರುವ ಶಾಸ್ತ್ರೀಯ … Read more

ಹೊಸ ಪುಸ್ತಕ “ಹುಟ್ಟು ಸಾವು ಎರಡರ ನಡುವೆ…

ಈಗಷ್ಟೇ ತಮ್ಮ ಮೂರನೇಯ ವಿಭಿನ್ನ ಕಾದಂಬರಿ ಮೂಲಕ ಮತ್ತೊಮ್ಮೆ ಓದುಗರನ್ನು ತಲುಪಲು ಹೊರಡುತ್ತಿರುವ ಬರಹಗಾರ ಪ್ರಮೋದ ಕರಣಂ, ಕನ್ನಡದ ಭಾಷೆ ಮತ್ತು ಸೊಗಡುಗಳನ್ನು ಸೊಗಸಾಗಿ ದುಡಿಸಿಕೊಳ್ಳುವ ಕಲೆಗಾರರು. ಶಬ್ದಗಳ ಸಂಗ್ರಹವನ್ನು ದುಡಿಸಿಕೊಳ್ಳುವುದು ಅವರ ಸಾಹಿತ್ಯದಲ್ಲಿ ಎದ್ದು ಕಾಣುವ ಅಂಶ. ಪ್ರಸ್ತುತ “ಹುಟ್ಟು ಸಾವು ಎರಡರ ನಡುವೆ” ಎನ್ನುವ ತಲೆ ಬರಹದಿಂದಲೇ ಆಕರ್ಷಿಸುತ್ತಾ, ಮಧ್ಯದಲ್ಲಿ ಏನಿಲ್ಲಾ ಎಂದು ನಮ್ಮನೆಲ್ಲಾ ಕೇಳುವಂತೆ ಆಗಾಧವಾದ ವಸ್ತು ವಿನ್ಯಾಸದೊಂದಿಗೆ ಈ ಕಾದಂಬರಿ ಕಟ್ಟಿಕೊಟ್ಟಿದ್ದಾರೆ. ಮೂಲತಃ ಸಂಬಂಧಗಳ ಮತ್ತು ಸಾದೃಶ್ಯ ವರ್ಣಣೆಗಳ ಮಧ್ಯದಲ್ಲಿ ಹೆಚ್ಚಿನಂಶ … Read more

ನಮ್ಮ ಗೋದವ್ವಜ್ಜಿ: ಎಫ್.ಎಂ.ನಂದಗಾವ

ಸೊಸೆಯತ್ತ ಮುಖ ಮಾಡಿ, ʻಇರ್ಲಿ ಬಿಡವ, ಕೂಸು ಅದಕ್ಕೇನ ಗೊತ್ತಾಗ್ತದ?ʼ ಎನ್ನುತ್ತಾ ಅಜ್ಜ ಅರಳಪ್ಪ, ಮೊಮ್ಮಗ ಅಂತಪ್ಪನ ಕಡೆ ತಿರಗಿ, ʻಕೂಸ, ನಾ ಯಾಕ ಸುಳ್ಳ ಹೇಳಲಿ?ʼ ʻನೀ ನಿನ್ನೆ ರಾತ್ರಿ ಪೂಜಿಗೆ ಹೋಗಿದ್ದಿ. ನಿನಗ ಮುಂಜಾನಿ ಒಂಬುತ್ತೂವರಿತನ ಎಚ್ಚರ ಆಗಿಲ್ಲ.ʼ ʻಹೌದ ಅಜ್ಜಾ, ನೀ ಹೇಳೂದು ಖರೆ ಅದ. ನಾ ಇಂದ ತಡಾ ಮಾಡಿ ಎದ್ನಿʼ ʻ… …ʼ ʻಆದರೂ ಅಜ್ಜ, ನಿನ್ನೆ ರಾತ್ರಿ ಪೂಜಿಗೆ ನೀ ಬರಬೇಕಿತ್ತು. ರಾತ್ರಿ ಪೂಜಿಯೊಳಗ ಸ್ವಾಮಿಗಳು ಕಬ್ಬಿಣದ ದೊಡ್ಡ … Read more

ಮೇಷ್ಟ್ರು ಡೈರಿ ೧: ಲಿಂಗರಾಜು ಕೆ ಮಧುಗಿರಿ.

ಎಂದಿನಂತೆ ಶಾಲೆಯ ಬಿಸಿಯೂಟಕ್ಕೆ ತರಕಾರಿ ತರಲು ಹೆಂಡತಿ ಜೊತೆ ಹೋಗಿದ್ದೆ. ರಸ್ತೆ ಬದಿಯ ತರಕಾರಿ ಅಂಗಡಿಯಮ್ಮನ ಜೊತೆ ಸುಮಾರು ಒಂದರವತ್ತೊಂದರ ವಯಸ್ಸಿನ ಅಜ್ಜಿ ಕೂಡಾ ಮೊಳಕೆ ಕಟ್ಟಿದ್ದ ಹೆಸರುಕಾಳು, ತೆಂಗಿನಕಾಯಿ ಮಾರುತ್ತಾ ಕುಳಿತಿತ್ತು. ತರಕಾರಿ ತೆಗೆದುಕೊಳ್ಳುತ್ತಾ ತರಕಾರಿಯಮ್ಮನ ಜೊತೆ ಮಾತನಾಡುತ್ತಿದ್ದ ಹೆಂಡತಿಯನ್ನು ನೋಡಿದ ಆ ಅಜ್ಜಮ್ಮ, “ಏ ಎಂಗ್ಸೆ ಪ್ರಂಗ್ನೆಂಟ್ ಇದ್ದಂಗ್ ಇದ್ಯ, ಇಂಗೆ ಬಿಗ್ಯಗಿರೋ ಡ್ರೆಸ್ಸಾ ಆಕಬರದು? ಯರ‍್ಯಾರ್ ಕಣ್ ಎಂಗರ‍್ತವೋ ಏನೋ, ಮೈ ತುಂಬಾ ಬಟ್ಟೆ ಆಕಂಡ್ ಓಡಾಡು” ಎಂದು ಅಧಿಕಾರಯುತವಾಗಿ ಹೆಂಡತಿಗೆ ಸಲಹೆ … Read more

ಹೊತ್ತಿಗೆಯ ಹೊತ್ತು: ರಜನಿ ಜಿ‌ ಆರ್

ಪುಸ್ತಕವೆಂಬುದು ಜ್ಞಾನ ಪ್ರಸರಣದ ಮುಖ್ಯ ಮಾಧ್ಯಮ/ವಾಹಿನಿಯಾಗಿದೆ. ಪುರಾತನ ಕಾಲದಿಂದಲೂ ಪುಸ್ತಕಗಳ ಮಹತ್ವ ಅತ್ಯಂತ ಪ್ರಮುಖ ಸ್ಥಾನದಲ್ಲಿರುವುದು ಶ್ಲಾಘನೀಯ. ಭರತ ಖಂಡದಲ್ಲಿ ಉಪಯುಕ್ತವಾದ ಮಾಹಿತಿಗಳು, ತಾಳೆಗರಿ ಗಳಲ್ಲಿ ಬರೆದಿರುವ ಉದಾಹರಣೆಗಳೂ ಈಗಲೂ ಲಭ್ಯವಿದೆ. ಯಾವುದೇ ವಿಷಯವನ್ನು/ ಮಾಹಿತಿಯನ್ನು ಅಕ್ಷರ ರೂಪಕ್ಕಿಳಿಸಿ ಮುದ್ರಣದ ಮೂಲಕ ಓದುಗರನ್ನು ತಲುಪುವಂತೆ ಮಾಡುವುದೇ ಪುಸ್ತಕ. ಮಧ್ಯಕಾಲೀನ ಯುರೋಪಿನ ಪುನರುತ್ಥಾನದ ಕಾಲಘಟ್ಟದಲ್ಲಿ ಜಾನ್ ಗ್ಯುಟೆನ್ ಬರ್ಗ್ ರವರು ಅನ್ವೇಷಿಸಿದ ಮೊದಲಿಗೆ ಪುಸ್ತಕ ಮುದ್ರಣ ವ್ಯವಸ್ಥೆಯು ಬೆಳಕಿಗೆ ಬಂತು. ಅನಂತರ ಜ್ಞಾನ ಪ್ರಸರಣದ ಕಾರ್ಯ ವು ತೀವ್ರಗತಿಯಲ್ಲಿ … Read more

ವಿಶ್ವಸಂಸ್ಥೆಗೆ ಮಕ್ಕಳಿಂದ ವರದಿ: ಒಂದು ರಾತ್ರಿಯ ಕಥೆ: ನಾಗಸಿಂಹ ಜಿ ರಾವ್

ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯು 1989ರಲ್ಲಿ ಜಾರಿಗೆ ಬಂದಾಗಿನಿಂದ, ಸಹಿ ಹಾಕಿದ ಪ್ರತಿ ದೇಶವು ಐದು ವರ್ಷಗಳಿಗೊಮ್ಮೆ ತಮ್ಮ ದೇಶದ ಮಕ್ಕಳ ಹಕ್ಕುಗಳ ಜಾರಿ ಬಗ್ಗೆ ವರದಿಯನ್ನು ಸಿದ್ಧಪಡಿಸಿ ವಿಶ್ವಸಂಸ್ಥೆಗೆ ಸಲ್ಲಿಸಬೇಕು. ಈ ವರದಿಯನ್ನು ‘ಕಂಟ್ರಿ ರಿಪೋರ್ಟ್’ ಎಂದು ಕರೆಯಲಾಗುತ್ತದೆ. ಭಾರತವು 1992ರಲ್ಲಿ ಈ ಒಡಂಬಡಿಕೆಗೆ ಸಹಿ ಹಾಕಿತು ಮತ್ತು 1997ರಲ್ಲಿ ಮೊದಲ ವರದಿಯನ್ನು ಸಲ್ಲಿಸಿತು. ಎರಡನೇ ವರದಿಯನ್ನು 2003-24ರ ಅವಧಿಯಲ್ಲಿ ಸಿದ್ಧಪಡಿಸಲಾಯಿತು. ಒಡಂಬಡಿಕೆಯ ಪರಿಚ್ಛೇದ 45ರ ಪ್ರಕಾರ, ಸರ್ಕಾರದ ವರದಿಗೆ ಪರ್ಯಾಯವಾಗಿ, ದೇಶದ ಮಕ್ಕಳ ಪರಿಸ್ಥಿತಿಯ … Read more

ರಗಳೆ!: ರೂಪ ಮಂಜುನಾಥ, ಹೊಳೆನರಸೀಪುರ

ಸ್ನೇಹಿತರೆ, ನಾನು ಪ್ರೌಢಶಾಲೆ ಓದುವಂಥ ಕಾಲದಲ್ಲಿ ನಮಗೆ ಕನ್ನಡ ಭಾಷೆಯನ್ನ ಕಲಿಸೋಕಿದ್ದ ಮಾಸ್ತರರು ಎಂ.ರಂಗಯ್ಯನವರು ಅರ್ಥಾತ್ ಎಂಆರ್ ಸರ್. ಎಂದಿನಂತೆ ಕನ್ನಡ ಪೀರಿಯಡ್ನಲ್ಲಿ ಮಾಡೋ ಪಾಠವೆಲ್ಲಾ ಮಾಡಿ ಮುಗಿಸಿ, ಆಚೆ ಹೋಗುವಾಗ, “ನಾನು ನಾಳೆ ರಗಳೆ ಮಾಡ್ತೀನಿ”, ಅಂದು ಕ್ಲಾಸಿಂದ ಆಚೆಗೆ ಹೊರಟುಬಿಟ್ರು. ನಾನು ಸರ್ ಹೇಳಿದ ಮಾತು ಕೇಳಿ ಗೊಂದಲದ ಗೂಡಾಗಿಬಿಟ್ಟು ನನ್ನ ಪಕ್ಕದಲ್ಲಿ ಕುಳಿತಿದ್ದ ಗೆಳತಿ ಕವಿತಳಿಗೆ,”ಲೇ ಏನೇ ಇದೂ? ಸರ್ ಏನ್ ರಗಳೆ ಮಾಡ್ತಾರೋ! ಮನೇಲಿ ಏನಾದ್ರೂ ರಗಳೆ ಮಾಡಿದಾಗ ನಮ್ಮಮ್ಮನ ಹತ್ರ … Read more

ಆಕಾಶ ನದಿ ಬಯಲು ಪುಸ್ತಕ ಬಿಡುಗಡೆ ಸಮಾರಂಭ

ಮೇರಿ ಆಲಿವರ್ ಕವಿತೆಗಳು ಆಕಾಶ ನದಿ ಬಯಲು ಆಯ್ಕೆ ಮತ್ತು ಅನುವಾದ: ಚೈತ್ರಾ ಶಿವಯೋಗಿಮಠ ಪುಸ್ತಕ ಬಿಡುಗಡೆ: ಎಚ್.ಎಸ್. ರಾಘವೇಂದ್ರ ರಾವ್ ಪುಸ್ತಕ ಕುರಿತು: ಓ.ಎಲ್. ನಾಗಭೂಷಣಸ್ವಾಮಿ ಮುಖ್ಯ ಅತಿಥಿ: ಶ್ರೀಮತಿ ರತ್ನಾ ಶಿವಯೋಗಿಮಠ ಉಪಸ್ಥಿತಿ:ಸುಮಿತ್ ಮೇತ್ರಿಚೈತ್ರಾ ಶಿವಯೋಗಿಮಠ ನಮ್ಮೊಂದಿಗೆ: ನವೀನ್ ಸನದಿ, ಶ್ರುತಿ ಬಿ.ಆರ್, ಡಾ. ಕಾವ್ಯಶ್ರೀ ಎಚ್, ಡಾ. ಎಸ್. ರಾಮಲಿಂಗೇಶ್ವರ (ಸಿಸಿರಾ), ಜಿ.ಎಸ್. ಕುಮಾರ್, ದಾದಾಪೀರ್ ಜೈಮನ್, ಶಶಾಂಕ್ ಎಸ್.ಆರ್, ಸ್ವ್ಯಾನ್ ಕೃಷ್ಣಮೂರ್ತಿ ದಿನಾಂಕ: 27 ಏಪ್ರಿಲ್ 2025, ಭಾನುವಾರ ಬೆಳಗ್ಗೆ 10-30ಕ್ಕೆ … Read more

ಪಥವೋ! ಪಂಥವೋ !?: ಡಾ. ಹೆಚ್ ಎನ್ ಮಂಜುರಾಜ್

‘ಸುಮ್ಮನೆ ಗಮನಿಸಿ; ಅದರೊಂದಿಗೆ ಗುರುತಿಸಿಕೊಳ್ಳಲು ಹೊರಡಬೇಡಿ’ ಎಂದರು ಓಶೋ ರಜನೀಶರು. ಇದನ್ನೇ ಭಗವದ್ಗೀತೆಯು ಬೇರೊಂದು ರೀತಿಯಲ್ಲಿ ‘ನಿಷ್ಕಾಮ ಕರ್ಮ’ ಎಂದಿದೆ. ಇದರ ಎದುರು ರೂಪವೇ ಸಕಾಮ ಕರ್ಮ. ಇದು ಲೋಕಾರೂಢಿ. ಏನಾದರೊಂದು ನಿರೀಕ್ಷೆ, ಪರೀಕ್ಷೆಗಳನ್ನಿಟ್ಟುಕೊಂಡು ಮಾಡುವಂಥ ಕೆಲಸ. ‘ನನ್ನನ್ನು ಗುರುತಿಸಲಿ, ಮೆಚ್ಚಲಿ, ಹತ್ತು ಜನರ ಮುಂದೆ ಕೀರ್ತಿಸಲಿ’ ಎಂಬ ಲೌಕಿಕ ಮೋಹಕ! ನಿಷ್ಕಾಮವು ಹಾಗಲ್ಲ. ತನ್ನ ಪಾಡಿಗೆ ತಾನು ಕೆಲಸಗಳನ್ನು ಮಾಡಿಕೊಂಡು ಹೋಗುವಂಥದು. ಯಾರು ಮೆಚ್ಚಲಿ, ಬಿಡಲಿ. ಇದು ನೈಸರ್ಗಿಕ. ಚೈತ್ರೋದಯವಾಯಿತೆಂದು ಮರಗಿಡಗಳು ತಮ್ಮದೇ ಆದ ರೀತಿಯಲ್ಲಿ … Read more

ಗಡಿ: ಶ್ರೀಪ್ರಸಾದ್

ಅಣ್ಣೇ ಗೌಡ ಮತ್ತು ಮರೀಗೌಡರದ್ದು ಊರಿನ ಗೌರವಸ್ತ ಕುಟುಂಬ. ಇವರ ಅಪ್ಪ ಲಿಂಗೇ ಗೌಡರು ಊರಿನವರಿಗೆಲ್ಲ ಒಂದಿಲ್ಲೊಂದು ಕೆಲಸದಲ್ಲಿ ನೆರವಾಗಿದ್ದರಿಂದ ಇವರ ಕುಟುಂಬದ ಬಗ್ಗೆ ಊರ ಜನಕ್ಕೆ ಅದೇನೋ ಆತ್ಮೀಯತೆ ಮತ್ತು ಗೌರವ ಇತ್ತು. ಅಗರ್ಭ ಅನ್ನೋವಷ್ಟು ಅಲ್ಲದಿದ್ದರೂ ಒಂದೆರಡು ತಲೆಮಾರು ಕೂತು ತಿನ್ನೋವಷ್ಟು ಆಸ್ತಿ ಅಂತೂ ಇತ್ತು. ಲಿಂಗೇ ಗೌಡರು ಹೋಗಿ 3 ವರ್ಷ ಆಯ್ತು… ಅಲ್ಲಿಂದಲೇ ಶುರುವಾಗಿದ್ದು ಮಕ್ಕಳಿಬ್ಬರ ನಡುವೆ ಆಸ್ತಿಯ ಕುರಿತು ಶೀತಲ ಸಮರ… ಮುಂದೆ ತಗಾದೆ ಬೇಡ ಅಂದುಕೊಂಡು ದೊಡ್ಡ ಗೌಡರು … Read more

”ಒಂಟಿ ಶೂನ ಸಾಹಸ”: ನಾಗಸಿಂಹ ಜಿ ರಾವ್

ಜೀವನದಲ್ಲಿ ಕೆಲವು ಅವಕಾಶಗಳು ಎಲ್ಲಿಂದ ಬರುತ್ತವೆ ಹೇಗೆ ಬರುತ್ತವೆ ಎಂಬುದನ್ನು ಊಹಿಸಲು ಅಸಾಧ್ಯ. ಅವಕಾಶಗಳೊಂದಿಗೆ ಸವಾಲುಗಳು ಇರುತ್ತವೆ ಇದು ನನ್ನ ಅನುಭವ ನಾನು ಒಂದು ದಿನ ಮಧ್ಯಾಹ್ನ ಕಚೇರಿಯಲ್ಲಿ ಕುಳಿತಿದ್ದಾಗ ಒಂದು ದೊಡ್ಡ ಅವಕಾಶ ನನ್ನ ಬಾಗಿಲು ತಟ್ಟಿತು. ರಾಜ್ಯದ ಪ್ರಸಿದ್ಧ ಅಂಗವಿಕಲರ ಸಂಸ್ಥೆ APD ಇಂದ ಕರೆ ಬಂದಿತ್ತು ”ನಾಗಸಿಂಹ ಸಾರ್ ನಮ್ಮ ಸಂಸ್ಥೆಯ ಶಾಲೆಯ ಮಕ್ಕಳು ‘ಯೂಥ್ ಎಕ್ಸ್ಚೇಂಜ್’ ಕಾರ್ಯಕ್ರಮದ ಅಡಿಯಲ್ಲಿ ಸ್ಕಾಟ್ಲೆಂಡ್‌ಗೆ ಹೋಗುತ್ತಿದ್ದಾರೆ ಅಲ್ಲಿ ನಮ್ಮ ಮಕ್ಕಳು ತಮ್ಮ ಪ್ರತಿಭೆ ಪ್ರದರ್ಶನ ಮಾಡಬೇಕು … Read more

ಚಂದಿರನ ಮೊಗದಲಿ: ಗೋಳೂರು ನಾರಾಯಣಸ್ವಾಮಿ

ಆ ಸೊಬಗು ಮತ್ತೆ ಬರುತಿದೆಬಾಳಲಿ ಸಂತೋಷ ತರುತಿದೆ ಯೌವನದ ಗುಂಡಿಗೆಯಲಿ ನೂರಾರು ಬಯಕೆ ಮೂಡಿಕಾಲು ಜಾರಿ ಬಿದ್ದು ಮೇಲೆದ್ದ ಖುಷಿ ಮರುಕಳಿಸುತಿದೆಹೂವು ಚಿಟ್ಟೆ ಅಕ್ಷರ ಹಾಡಿನ ಜಾಡು ಹಿಡಿದು ಹೊರಟ ಕನ್ನಡಿಗನ ಹೃದಯ ಹುಟ್ಟೂರಿಗೆ ಮರಳಿ ಬರುತಿದೆ ಮಲೆನಾಡಿನ ಭತ್ತದ ಗದ್ದೆಗಳನು ದಾಟಿ ಬಂದ ಜನಪದ ಹಾಡು ಕಪನಿ ಕಾವೇರಿಯಲಿ ಮಿಂದು ಪೂರ್ವ ಘಟ್ಟಗಳನು ತಲುಪಿವೆ ಬಹುಕಾಲ ಕಾದು ಕುಳಿತ ಪ್ರೇಮಿಯೊಬ್ಬನ ಹೃದಯ ಮುಟ್ಟಿವೆ ಆದಿ ಹಲವಾರ ದಿಂದ ಹೊರಟ ತಂಬೂರಿ ನಾದವು ಸರಗೂರಯ್ಯನ ಪರಿಶೆಯೊಂದಿಗೆ ಮಂಟೇದಯ್ಯನ … Read more

ಗಜಲ್: ಜಯಶ್ರೀ ಭ. ಭಂಡಾರಿ

ಗಝಲ್ 1 ಸಿಡಿಲ ನಡುವಣ ಕೋಲ್ಮಿಂಚು ಬದುಕಿಗೆ ಭರವಸೆ ಮೂಡಿಸಿತೇಕಡಲಾಳದ ಮುತ್ತು ರತ್ನಗಳು ಕೊರಳಿಗೆ ಹಾರ ತೊಡಿಸಿತೇ ಮೊದಲ ಮಳೆಯ ಮಣ್ಣಘಮ ಇನಿಯನ ನೆನಪುತರುವುದಲ್ಲವೇಕದಲದೆ ಮಗ್ಗಲು ಕೂತು ಹರಟಿದ ಸಂಭ್ರಮ ಕಾಡಿಸಿತೇ ಮೋಡಗಳ ಮರೆಯಿಂದ ಹಾರಿ ಬಂದ ಹನಿಗಳನು ವರ್ಣಿಸಲಸದಳವುಬೇಡುತ ‌ ಸಾಗಿದ ಒಲವ ಪಯಣ ದೂರ ದೂಡಿಸಿತೇ ಮಡಿಲ ಮಾತು ಅದೇಕೋ ಅಬ್ಬರವ ಕಳೆದುಕೊಂಡು ಸೋತಿದೆಸಡಿಲ ಬಂದ ಒಡಲಾಳದಿ ಬೆಂದು ಉಬ್ಬರವ ಊಡಿಸಿತೇ ಆಸೆಯ ಬೇರಿಗೆ ನೀರೆರೆದು ಹದವಾಗಿ ಹಬ್ಬಿಸಬೇಕಿದೆ ಜಯಾಬಿಸಿಯ ಚಹಾ ಹೀರುವಾಗ ಹೃದಯರಾಗ … Read more

ಅವಳ ಮ್ಯಾರಥಾನು ಓಟ: ರಶ್ಮಿ ಕಬ್ಬಗಾರು

೧ಇಗೋ ಬಿಸಿಲ ಮಾರ್ಚಿನಲ್ಲಿ ಅವಳಿಗೇಅಂತ ವಿಶೇಷ ರಂಗ ಸಜ್ಜಿಕೆ ಹಾರ ಶಾಲು ಹಣ್ಣು ಹೂವುಕೇಳಲೊಂದಿಷ್ಟು ಕಿವಿಗಳು ಸಾವಿರ ವರುಷಗಳಲೀ ಉಳಿದೇ ಹೋದ ಕಥನಗಳನ್ನಪೋಣಿಸಿ ತೊಡುವ ಪ್ರತಿಜ್ಞೆಗೈದಿದ್ದಾಳೆಹಗಲು ರಾತ್ರಿಯ ಲೆಕ್ಕವಿಡದೆ ಗಳಿಸಿದ್ದುಸೆಪರೀಟ್ ಇಡದೇಮನೆ ಮoದಿಯ ಬಿಸಿಯೂಟದಖಯಾಲಿಡದೆಮನೆಗೆ ಮಾರಿಊರಿಗುಪಕಾರಿ ಇತ್ಯಾದಿ ಇತ್ಯಾದಿಗಳಿಗೆಲ್ಲ ಸೊಪ್ಪು ಹಾಕದೇಸಾಧನೆಗಳ ಹಾದಿಯಲಿಮುಂದೆ ಮುಂದೆ ೨ಬೇಕಾದ್ದು ಮಾಡಿ ನೋಡಿ ಸಂಮಾನಸುಮ್ಮನಾಗೋಲ್ಲ ಅವಳುಸಂತ್ರಪ್ತಿ ಯೆನ್ನೊ ಮಾತೇ ಇಲ್ಲಸೀತಾ ದ್ರೌಪದಿ ತಾರಾ ಅಹಲ್ಯಾಹಳೇ ಕ್ಯಾಸೆಟ್ಟು ಮತ್ತೆ ಮತ್ತೆ ರೀ ಪ್ಲೇಮತ್ತೆ ಮತ್ತೆ ಹೊಸ ಸಂಮಾನ ಬಾಚಿಕೊಳ್ಳುತಾಳೆ ೩ದಿನ ದಿನವೂ ಒಣಗೋಗುತಿದಾಳೆವಿಮರ್ಶಕರ … Read more