“ಕಿಂಚಿತ್ತೇ ಸಹಾಯ!”: ರೂಪ ಮಂಜುನಾಥ

ಈ ಕತೆಯ ನಾಯಕಿ ಸುಮ ಆ ದಿನ ಕೂಡಾ ಪಕ್ಕದ ಮನೆಯ ಆ ಹೆಂಗಸು ತನ್ನ ಗಂಡನ ಆಟೋನಲ್ಲಿ ಕೂತು ಕೆಲಸಕ್ಕೆ ಹೋಗುವುದನ್ನ ಕಂಡು”ಅಬ್ಬಾ, ಅದೇನು ಪುಣ್ಯ ಮಾಡಿದಾಳಪ್ಪಾ. ಅವರ ಮನೆಯವರು ಏನೇ ಕೆಲಸವಿದ್ದರೂ ಸರಿಯೆ, ಸಮಯಕ್ಕೆ ಸರಿಯಾಗಿ ಬಂದು ಹೆಂಡತಿಯನ್ನ ಆಟೋನಲ್ಲಿ ಕೂರಿಸಿಕೊಂಡು ಕೆಲಸಕ್ಕೆ ಕರೆದುಕೊಂಡು ಹೋಗಿ ಬಿಟ್ಟು ಬರ್ತಾರೆ. ಅಯ್ಯೋ, ನಮ್ ಮನೇಲೂ ಇದಾರೇ ದಂಡಕ್ಕೆ!ಏನೇ ಕಷ್ಟ ಪಡ್ತಿದ್ರೂ ಕ್ಯಾರೇ ಅನ್ನೋಲ್ಲ. ಇತ್ತೀಚೆಗಂತೂ ಬಲ್ ಮೋಸ ಆಗೋಗಿದಾರೆ! ನಾನು ಗಾಡಿ ಕಲಿತಿದ್ದೇ ತಪ್ಪಾಯಿತೇನೋ! ಏನ್ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಕತ್ತಲ ಹೂವು” ನೀಳ್ಗತೆ (ಭಾಗ ೩): ಎಂ.ಜವರಾಜ್

-೩- ಅವತ್ತು ಮಳೆ ಜೋರಿತ್ತು. ಬಿರುಗಾಳಿ. ಶಿವಯ್ಯನ ಮನೆಯ ಮಗ್ಗುಲಿಗಿದ್ದ ದೊಡ್ಡ ವಯನುಗ್ಗೆ ಮರ ಬೇರು ಸಮೇತ ಉರುಳಿತು. ಮರದ ರೆಂಬೆ ಕೊಂಬೆಗಳು ಮನೆಯ ಮೇಲೂ ಬಿದ್ದು ಕೈಯಂಚು ನುಚ್ಚಾಗಿದ್ದವು. ಮಳೆಯಿಂದ ಮನೆಯೆಲ್ಲ ನೀರು ತುಂಬಿತ್ತು. ಶಿವಯ್ಯ, ಅವನ ಹೆಂಡತಿ ಸಿದ್ದಿ ಮಕ್ಕಳನ್ನು ತಬ್ಬಿಕೊಂಡು ಕೊಟ್ಟಿಗೆ ಮೂಲೇಲಿ ನಿಂತು ಸೂರು ನೋಡುವುದೇ ಆಯ್ತು. ಪಕ್ಕದ ಗೋಡೆಯಾಚೆ ಅಣ್ಣ ನಿಂಗಯ್ಯನ ಮನೆಯಲ್ಲಿ ಆರು ತಿಂಗಳ ಹೆಣ್ಗೂಸು ಕರ್ರೊ ಪರ್ರೊ ಅಂತ ಒಂದೇ ಸಮ ಅರಚುತ್ತಿತ್ತು. ಶಿವಯ್ಯ ‘ಅಣ್ಣ.. ಅಣೈ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ಅವಳು ಅಂಧಕಾರದಿಅನುದಿನವ ದೂಡಿದಳುಒಂದೇ ತೆರದಿತನ್ನ ಪಯಣವ ನಡೆಸಿದಳುಬಾಳಿನಲ್ಲಿ ಸುಖ ದುಃಖ ಏನೆಂದರೆಮುಗುಳ್ನಗುವಳುಎಲ್ಲವೂ ಇದ್ದು ಇಲ್ಲವೆಂಬಂತೆ….. ತನ್ನೆಲ್ಲಾ ನೋವ ಮರೆತಳುಆಸೆ ಕನಸುಗಳ ಬಚ್ಚಿಟ್ಟಳುಕಂಬನಿಯ ಹೊರಸೂಸದಂತೆಕಣ್ಣಂಚಿನಲ್ಲಿ ಇಟ್ಟವಳು….. ಮನದಲ್ಲಿ ನೂರು ವೇದನೆಮುಖದಲ್ಲಿ ಒಂದು ತೋರದೆಸಹನೆಯ ಮೂರುತಿಸದಾ ಹಸನ್ಮುಖಿಯಂತೆ….. ಆದರವಳ ಕಣ್ಣೋಟವುಸಾವಿರ ಕಥೆಗಳ ಹೇಳುತಿಹವು…..ಆಕಾಶದೆತ್ತರದ ಗುಣದವಳುಪಾತಾಳಕ್ಕದುಮಿದರು ಮುಳುಗಲಿಲ್ಲಬೆಳಗಿದಳು ತಾನಿರುವಲೆಲ್ಲ….. *ಮತ್ತೆ ಮುಂಜಾವು ತುಸು ನಸುಕಿನಲ್ಲಿ ಕೂಗುತ್ತಿದೆ ಕೋಳಿಎದ್ದೇಳಿ ಬೆಳಗಾಯಿತ್ತೆಂದು…ಹಕ್ಕಿಗಳ ಕಲರವ…ಅಂಬಾ ಎನ್ನುವ ಕೂಗು…ಕರ್ಣಗಳ ಸೆಳೆಯುತ್ತಿವೆ… ದಟ್ಟರಣ್ಯವ ಸೀಳಿತೆಂಗು ಮಾಮರಗಳನಡುವೆ ಭೂಮಿಗಿಳಿದಾಯಿತು ರವಿಕಿರಣ…ನಿನ್ನೆಯ ಕೆಲಸಕ್ಕೆ ಜೋತುಬಿದ್ದನರನಾಡಿಗಳ ಪುನಶ್ಚೇತನಗೊಳಿಸೆಮತ್ತೆ ಬಂದಿದೆ ಮುಂಜಾವು… ಘಮ ಘಮಿಸುವ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಕರುಳಿನ ಕರೆ”: ರೂಪ ಮಂಜುನಾಥ

ಆ ದಿನ ಮನೆಯ ಒಡತಿ ಪ್ರೇಮ, ನಾಟಿಕೋಳಿ ಸಾರಿನ ಜೊತೆಗೆ ಬಿಸಿಬಿಸಿ ಮುದ್ದೆ ಮಾಡಿದ್ದಳು. ಆದಾಗಲೇ ರಾತ್ರೆ ಎಂಟೂವರೆ ಆಗಿತ್ತು. “ಅಮ್ಮಾವ್ರೇ ನಾನು ಮನೆಗೆ ಹೊಂಡ್ಲಾ?ವಾರದಿಂದ್ಲೂವ ಒಟ್ಟಿರ ಬಟ್ಟೆ ಸೆಣಿಯಕೇಂತ ವತ್ತಾರೇನೇ ನೆನೆಯಾಕಿ ಬಂದೀವ್ನಿ. ಈಗ್ ಓಗಿ ಒಗ್ದು ಒಣಾಕಬೇಕು”, ಎಂದು ಮನೆಯೊಡತಿಯ ಅಪ್ಪಣೆಗಾಗಿ ಕಾಯುತ್ತಾ ಅಡುಗೆ ಕೋಣೆಯ ಮುಂದೆ ನಿಂತಳು ಶಿವಮ್ಮ. ಅದಕ್ಕೆ ಪ್ರೇಮ, ”ಚಿನ್ಮಯ್ ಗೆ ತಿನ್ನಿಸಿ ಆಯ್ತಾ ಶಿವಮ್ಮಾ?”, ಅಂದ್ಲು. ಅದಕ್ಕೆ ಶಿವಮ್ಮ, ಕಂಕುಳಲ್ಲಿ ಎತ್ತಿಕೊಂಡ ಕೂಸನ್ನೇ ವಾತ್ಸಲ್ಯಪೂರಿತಳಾಗಿ ನೋಡುತ್ತಾ, ”ಊ ಕಣ್‌ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಕತ್ತಲ ಹೂವು” ನೀಳ್ಗತೆ (ಭಾಗ ೨): ಎಂ.ಜವರಾಜ್

-೨- ಸಂಜೆ ನಾಲ್ಕರ ಹೊತ್ತು. ಚುರುಗುಟ್ಟುತ್ತಿದ್ದ ಬಿಸಿಲು ಸ್ವಲ್ಪ ತಂಪಾದಂತೆ ಕಂಡಿತು. ಕಾಡಿಗೆ ಹೋಗಿದ್ದ ಹಸು ಕರು ಕುರಿ ಆಡುಗಳು ಊರನ್ನು ಪ್ರವೇಶ ಮಾಡುತ್ತಿದ್ದವು. ಅದೇ ಹೊತ್ತಲ್ಲಿ ಉದ್ದದ ಬ್ಯಾಗು ನೇತಾಕಿಕೊಂಡು ಕೈಯಲ್ಲಿ ಕಡ್ಲೇಕಾಯಿ ಪೊಟ್ಟಣ ಹಿಡಿದು ಒಂದೊಂದಾಗಿ ಬಿಡಿಸಿ ಬಿಡಿಸಿ ಮೇಲೆ ಆಂತುಕೊಂಡು ಕಡ್ಲೇಬೀಜ ಬಾಯಿಗಾಕಿ ತಿನ್ನುತ್ತಾ ಸ್ಕೂಲಿಂದ ಬರುತ್ತಿದ್ದ ಚಂದ್ರನಿಗೆ, ಹಸು ಕರು ಕುರಿ ಆಡುಗಳ ಸರದಿಯ ನಂತರ ಮೇವು ಮೇಯ್ಕೊಂಡು ಮಲಕಾಕುತ್ತ ಹೊಳೆ ಕಡೆಯಿಂದ ಒಕ್ಕಲಗೇರಿಯ ಕಡೆ ಹೋಗುತ್ತಿದ್ದ ಲಿಂಗಾಯಿತರ ಹಾಲು ಮಾರುವ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ʼಕುಲುಮೆʼ ಬೆಳಗಿದ ಬಾಳು: ಎಂ ನಾಗರಾಜಶೆಟ್ಟಿ

ʼಕುಲುಮೆʼ ದಸ್ತಗಿರ್ ಸಾಬ್, ಕೋಡಿಕ್ಯಾಂಪ್ ತರೀಕೆರೆ ಇವರ ಜೀವನ ವೃತ್ತಾಂತ- ಬಿಕ್ಕಲಂ ರಹಮತ್ ತರೀಕೆರೆ. ಹೀಗೆಂದರೆ ಪ್ರಾಧ್ಯಾಪಕ, ವಿಮರ್ಶಕ, ಸಂಶೋಧಕ, ಪ್ರಬಂಧಕಾರ ರಹಮತ್ ತರೀಕೆರೆ ಅವರ ಬಾಳಚಿತ್ರಗಳ ʼಕುಲುಮೆʼಗೆ ಕಿಂಚಿತ್ತೂ ಊನವಾಗುವುದಿಲ್ಲ; ಬದಲು ಹೆಚ್ಚು ಅರ್ಥಪೂರ್ಣವಾಗುತ್ತದೆ. ಕಾರಣ: ರಹಮತ್ ತರೀಕೆರೆಯವರ ಆತ್ಮಕಥನ ʼಕುಲುಮೆʼಯ ಪ್ರತಿ ಅಧ್ಯಾಯದಲ್ಲೂ ದಸ್ತಗಿರ್ ಸಾಬರಿದ್ದಾರೆ. ಕುಲುಮೆ ದತ್ತಣ್ಣ ಎನ್ನುವ ಖ್ಯಾತಿಯ, ಸಾವ್ಕಾರ್ರೆ ಎಂದರೆ ಬೀಗುವ ದಸ್ತಗಿರ್ ಸಾಬ್, ಕುಲುಮೆ ಮತ್ತು ಬೇಸಾಯವನ್ನುಮೂಲ ವೃತ್ತಿ ಮಾಡಿಕೊಂಡಿದ್ದರೂ ಹೊಟ್ಟೆಪಾಡಿಗಾಗಿನೂರೆಂಟು ವೇಷ ತೊಡಲು ಹಿಂಜರಿಯದವರು. ಸರ್ಕಸ್ ಕಂಪೆನಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತಾಡುವ ಸಿನಿಮಾ – ಜವಾನ್: ಚಂದ್ರಪ್ರಭ ಕಠಾರಿ

. ಕಳೆದ ವರ್ಷಗಳಲ್ಲಿ ತೆರೆಕಂಡ ಬಾಹುಬಲಿ, ಕೆಜಿಎಫ್‌, ಪುಷ್ಪದಂಥ ಸೂಪರ್‌ ಹುಮನ್ ಅಂದರೆ ಎಂಥದ್ದೇ ಕಷ್ಟಗಳು ಎದುರಾದರೂ ತನ್ನ ದೈಹಿಕ ಶಕ್ತಿ, ಬುದ್ದಿಮತ್ತೆಯಿಂದ ನಿವಾರಿಸುವ ಅತೀವ ಆತ್ಮವಿಶ್ವಾಸದ ಮ್ಯಾಚೊ(macho) ಸಿನಿಮಾಗಳು ಪ್ಯಾನ್‌ ಇಂಡಿಯಾ ಪ್ರದರ್ಶನಗೊಂಡು ನೂರಾರು ಕೋಟಿಗಳ ಲಾಭವನ್ನು ಗಳಿಸಿದವು. ಮಿಸ್ಸಾಯ(messiah) ಅಥವಾ ಸರ್ವರ ಸಕಲ ಸಂಕಷ್ಟಗಳಿಗೆ ಏಕೈಕ ನಿವಾರಕನಾಗಿ ರೂಪಿತವಾಗಿರುವ ಇಂತಹ ಸಿನಿಮಾಗಳಲ್ಲಿ ಹಿಂಸೆ, ರಕ್ತಪಾತ ಕಣ್ಣಿಗೆ ರಾಚುವಷ್ಟು ಅತಿಯಾಗಿ ಕಂಡು ಬಂದಿದ್ದರೂ ಪ್ರೇಕ್ಷಕರು ಅದನ್ನೇ ಮನೋರಂಜನೆಯಾಗಿ ಸಂಭ್ರಮಸಿದ್ದು ಸಮಾಜ ಮನೋವಿಜ್ಞಾನ ಅಧ್ಯಯನಕ್ಕೆ ಒಳಪಡುವಂಥ ವಿಷಯ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೂರು ಕವನಗಳು: ದಯಾನಂದ ರೈ ಕಳ್ವಾಜೆ

“ಮೌನ ತಪ್ಪಿದ ಹಾದಿ”.. ಮೆಲ್ಲುಲಿದು ಪಾದಸರಮೌನವಾಯಿತು ಮತ್ತೆಅವಳ ಪಾದದಿ ಮಲಗಿ ಸದ್ದಿಲ್ಲದೇ…ಅವಳಿರುವ ಸೂಚನೆಗೆನಲಿವ ಗೆಜ್ಜೆಯೆ ದನಿಯುನಿಂತಲ್ಲೆ ಮೈ ಮರೆತು ಕಲ್ಲಾದಳೇಕೆ?!ಯಾರದೋ ಕಾಯುವಿಕೆಬಿಟ್ಟ ಕಿವಿ ಬಿರು ನೋಟಆಗಾಗ ಅವಳಿದಿರುಯಾರ ಕಡೆಗೇ…?ಸಹಜ ಸುಂದರಿಯವಳುನೀಳಕೇಶದ ರಾಶಿ…ಇನಿತಿಲ್ಲ ನವಯುವಗದಥಳಕು ಬಳುಕೂ…ಕಲ್ಲ ಚಪ್ಪಡಿಯಲ್ಲಿ ಬಿಮ್ಮನೇ ಪವಡಿಸುತಕಣ್ಣೆಡೆಯ ಕೇಶವನು ಕಿವಿಗಿಟ್ಟಳು..ಕಣ್ಣಂಚು ನೀರಹನಿಕೈ ಬಿಗಿದ ಫೋನೊಂದುಆಗಾಗ ಅದರೆಡೆಗು ಹರಿದ ದೃಷ್ಟಿ….ಬಂತೊಂದು ಸಂದೇಶಮರೆತು ಬಿಡು ನನ್ನಿದಿರಕಾಯದಿರು ನನ್ನೊಲವಮೂಗಿಯನು ಕೈಹಿಡಿದು ನಾ ಬಾಳಲಾರೆ…ಬಿಗಿದ ಗಂಟಲು ಬೇನೆಅಳುವಿಗೂ ದನಿಯಿಲ್ಲಬಿಕ್ಕಿದಳು ಮೌನದಲಿ ಹಾಯೆನಿಸುವಷ್ಟು..ಪಾದಸರ ಕಂಪಿಸಿತುಮತ್ತೆ ಚೇತನವಾಯ್ತುಹದಗೆಟ್ಟ ಭಾವದಲಿ ಪುಟಿದೆದ್ದಳೂ…ಕಡಲಾಚೆ ಮರೆಯಾದಸಂಜೆಗೆಂಪಿನ ಸೂರ್ಯಬಸಿದ ರಕ್ತದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ವಾಟ್ಸ್‌ ಅಪ್‌ ಚಾನೆಲ್‌

ಪಂಜು ವಾಟ್ಸ್‌ ಅಪ್‌ ಚಾನೆಲ್‌ ಫಾಲೋ ಮಾಡಲು ಕೆಳಗಿನ ಲಿಂಕ್‌ ಮೇಲೆ ಒತ್ತಿ ನಂತರ ಫಾಲೋ ಬಟನ್‌ ಒತ್ತಿ…. https://whatsapp.com/channel/0029Va9PS6c1CYoQUgzYRr0u ಕನ್ನಡದ ಬರಹಗಳನ್ನು ಹಂಚಿ ಹರಡಿ

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ಮಿಡ್ ನೈಟ್ @ಪ್ರೀಡಂ ಹೀಗೆ ಏಕಾಂತದಲ್ಲಿಇರಲು ಯಾವಾಗಲೂನನಗೆ ಇಷ್ಟಇದು, ಅವನು ಬಿಟ್ಟು ಹೋದಹಲವುಗಳಲ್ಲಿ ಇದು ಕೂಡ. ಪ್ರತಿ ರಾತ್ರಿ ಎರಡು ಪೆಗ್ ವೈನ್ಮತ್ತವನ ಖಾಲಿ ನೆನಪುಇಷ್ಟೇ, ಚಂದ್ರನ ಆಸರೆಯಲ್ಲಿಮಧು ಹೀರುತ್ತಾ,ತೇಲುತ್ತಾ ಹಾಗೆ ಒರಗಿಕೊಳ್ಳುವೆ. ಒಮ್ಮೊಮ್ಮೆ ಅವನೊಂದಿಗೆ ಕಳೆದತುಂಟ ಪೋಲಿ ನೆನಪುಗಳುಬೇಡವೆಂದರುನನ್ನ ಅಂಗಾಲಿಗೆ ಮುತ್ತಿಡುತ್ತಾಬಲವಂತವಾಗಿ ಕಾಡಿಸುತ್ತವೆ. ಹೂ ಮುಗುಳಿಗೆತಾಕಿಸಿದ ಅವನ ಕಿರುನಾಲಿಗೆ ರುಚಿ,ಮತ್ತೆ ಮತ್ತೆಕವಾಟಗಳೆರಡು ಬಯಸುತ್ತವೆ. ಸಿಕ್ಕು ಬಿದ್ದಕೂದಲಲ್ಲಿ ಅವನಾಡಿಸಿದಕಿರು ಬೆರಳಾಟಮತ್ತೆ ಬೇಕನಿಸುತ್ತದೆ. ಹೀಗೀಗ ಬರೀ ಖಾಲಿ,ಎರಡು ಪೆಗ್ ವೈನ್ ಜೊತೆಅವನ ನೆನಪಿನೊಂದಿಗೆಹಾಗೊಮ್ಮೆ ಹಿಗೊಮ್ಮೆಬೆರಳುಗಳು ಇಣುಕಿ ಬಂದಾಗಲೇಚಿಂತೆ ಕಳೆದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅತೀ ಕಡಿಮೆ ದರದಲ್ಲಿ ಅಮರನಾಥನ ಯಾತ್ರೆ ಹಾಗೂ ದೇವರ ದಯೆಯನ್ನು ಕಣ್ಣಾರೆ ಕಂಡದ್ದು..: ಶ್ರೇಯ ಕೆ ಎಂ

ಪ್ರವಾಸ, ದೇಶ ಸುತ್ತು ಕೋಶ ಓದು ಎನ್ನುವ ನಾಣ್ಣುಡಿಯಂತೆ ಪುಸ್ತಕ ಓದುವುದು ಚಿಕ್ಕಂದಿನಿಂದ ಇದ್ದ ಹವ್ಯಾಸ, ಅದರ ಜೊತೆ ದೇಶ ಸುತ್ತುವುದು ಕೂಡ. ಅಂದರೆ ಚಿಕ್ಕಂದಿನಿಂದ ನಮ್ಮ ಕರ್ನಾಟಕದ ಪ್ರತೀ ಪ್ರದೇಶವನ್ನು ಸುತ್ತಿದ್ದೇನೆ. ಆದರೆ ಕನ್ಯಾಕುಮಾರಿ ಯಿಂದ ಕಾಶ್ಮೀರದ ವರೆಗೆ ಇಡೀ ಭಾರತ ಸುತ್ತುವುದು ಕೂಡ ಒಂದು ಕನಸು. ಈ ಕನಸಿಗೆ ಸಾಕಾರಗೊಂಡಿದ್ದು ಮೊನ್ನೆಯ ಅಮರನಾಥ ಯಾತ್ರೆ. ಕರ್ನಾಟಕದಿಂದ ಶುರುವಾಗಿ,ದೆಹಲಿ, ಅಂಬಾಲ, ಕಾಟ್ರಾ,ಕಾಶ್ಮೀರ, ರಾಜಸ್ತಾನ್, ಗುಜರಾತ್ ಹೀಗೆ ಭಾರತ ವನ್ನು ಒಂದು ಸುತ್ತು ಪ್ರದಕ್ಷಿಣೆ ಹಾಕಿದ ರೀತಿಯಲ್ಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಎಲಿಜಿಬಲ್ ಬ್ಯಾಚುಲರ್ “: ರೂಪ ಮಂಜುನಾಥ, ಹೊಳೆನರಸೀಪುರ.

ಕಸದಿಂದ ರಸ ಮಾಡುವ ಕುಶಲತೆಯಿಂದ ತನ್ನ ಬೆವರಿನ ಮಣ್ಣಿನಿಂದ ಸುಂದರ ಬಾಲನನ್ನು ತಿದ್ದಿತೀಡಿದ ಲೋಕದ ಮೊತ್ತಮೊದಲ ಕ್ರಿಯೆಟಿವ್ ಅಂಡ್ ಇನ್ನೋವೇಟಿವ್ ಹೆಣ್ಣು ಜಗನ್ಮಾತೆ ಪಾರ್ವತಿಯಾದರೆ, ಏನೋ ಅಚಾತುರ್ಯದಿಂದ, ತನ್ನಿಂದಲೇ ತರಿದು ಹೋದ ಪುತ್ರನ ಮುಂಡಕ್ಕೆ, ಆನೆಯ ರುಂಡವನ್ನು ಸೇರಿಸಿದ ಮೊತ್ತಮೊದಲ ಟ್ರಾಸ್ಪ್ಲಾಂಟ್ ಸರ್ಜನ್ ನಮ್ಮ ಡಾ॥ಶಿವಪ್ಪನವರು!ಇಂಥ ಅಸಾಧ್ಯರ ಪುತ್ರನಾದ ಮೇಲೆ ನಮ್ಮ ಕರಿವದನ, ವಿನಾಯಕ ಸಾಧಾರಣವಾದ ಹೀರೋ ಆಗಲು ಸಾಧ್ಯವೇ? ಹ್ಯೂಮರಸ್, ಕ್ಲೆವರ್, ಜೋವಿಯಲ್, ಡಿಪ್ಲೊಮೆಟಿಕ್, ಸ್ಮಾರ್ಟ್, ವೈಸ್, ಒಟ್ಟಿನಲ್ಲಿ ಟೋಟಲೀ ಎಲ್ಲ ವಿಚಾರದಲ್ಲಿಯೂ ಜೀನಿಯಸ್ ಗುಣಗಳಿಂದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಕತ್ತಲ ಹೂವು” ನೀಳ್ಗತೆ (ಭಾಗ ೧): ಎಂ.ಜವರಾಜ್

-೧- ಸಂಜೆ ಆರೋ ಆರೂವರೆಯೋ ಇರಬಹುದು. ಮೇಲೆ ಕಪ್ಪು ಮೋಡ ಆವರಿಸಿತ್ತು. ರಿವ್ವನೆ ಬೀಸುವ ಶೀತಗಾಳಿ ಮೈ ಅದುರಿಸುವಷ್ಟು. ಕಪ್ಪುಮೋಡದ ನಿಮಿತ್ತವೋ ಏನೋ ಆಗಲೇ ಮಬ್ಬು ಮಬ್ಬು ಕತ್ತಲಾವರಿಸಿದಂತಿತ್ತು. ಕೆಲಸ ಮುಗಿಸಿ ಇಲವಾಲ ಕೆಎಸ್ಸಾರ್ಟೀಸಿ ಬಸ್ಟಾಪಿನಲ್ಲಿ ಮೈಸೂರು ಕಡೆಗೆ ಹೋಗುವ ಸಿಟಿ ಬಸ್ಸಿಗಾಗಿ ಕಾಯುತ್ತಿದ್ದ ಚಂದ್ರನಿಗೆ ಮನೆ ಕಡೆ ದಿಗಿಲಾಗಿತ್ತು. ಆಗಲೇ ಒಂದೆರಡು ಸಲ ಕಾಲ್ ಬಂದಿತ್ತು. ಬೇಗನೆ ಬರುವೆ ಎಂದು ಹೇಳಿಯೂ ಆಗಿತ್ತು. ಹಾಗೆ ಹೇಳಿ ಗಂಟೆಯೇ ಉರುಳಿತ್ತು. ಸಮಯ ಕಳಿತಾ ಕಳಿತಾ ಮನೆ ಕಡೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಎರಡು ಸಾವಿರ ವರ್ಷಗಳ ಹಿಂದಿನ ಸಂಗಂ ಸಾಹಿತ್ಯ ಪುರನಾನೂರು

ತಮಿಳು ಮೂಲ: ಪ್ರೊ. ಸಾಲಮನ್‌ ಪಾಪಯ್ಯಅನುವಾದ: ಡಾ. ಮಲರ್‌ ವಿಳಿ ಕೆಪ್ರೆಸಿಡೆನ್ಸಿ ವಿಶ್ವವಿದ್ಯಾಲಯ ಹಾಡು- ೧( ಧರ್ಮತಪ್ಪದ ರಾಜನ ಆಳ್ವಿಕೆ) ರಾಜನೇಬಾನ ಮಿತಿಯವನೇ! ದೇವನೇ!ನಿನ್ನ ಹೊಗಳದವರನ್ನು,ಅವರ ತಪ್ಪುಗಳನ್ನು,ನೀ ಸಹಿಸಿಕೊಳ್ಳುವೆ.ಅವರ ತಪ್ಪು,ಸಹಿಸಿಕೊಳ್ಳತಕ್ಕದ್ದಲ್ಲಎಂದು ಕಂಡರೆ,ಅವರನ್ನು ಅಳಿಸುವುದು ಹೇಗೆಂದುಯೋಚಿಸುವ ಜ್ಞಾನದಿ ನೀ ಆಗಸದಂತೆ ವಿಶಾಲವಾದವನು. ಹಗೆಗಳ ಅಳಿಸುವ ಸಾಮರ್ಥ್ಯದಲ್ಲಿನೀ ಆಗಸವ ತಾಕಿ ಬೀಸುವಗಾಳಿಯಂತಹವನು.ಅವರನ್ನು ಅಳಿಸುವುದರಲ್ಲಿಗಾಳಿಯೊಡನೆ ಬರುವ ಬೆಂಕಿಯಂತಹವನು. ಎಲ್ಲರಿಗೂ ಒಳಿತನ್ನುಂಟು ಮಾಡುವುದರಲ್ಲಿ ನೀನುನೀರಿನಂತಹವನು.ಬೆಳಗಿನ ಹೊತ್ತು ಪೂರ್ವದಲಿನಿನ್ನ ಕಡಲಲಿ (ಉದಯಿಸುವ)ಕಾಣುವ ಸೂರ್ಯಸಂಜೆಯಲಿ ಬೆಳ್ಳನೆಯ ಅಲೆಗಳಿರುವನಿನ್ನ ಪಶ್ಚಿಮ ಕಡಲಲಿ ಮುಳುಗುವುದು.ಇವುಗಳ ನಡುವೆ ಸದಾಹೊಸ ಹೊಸ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಖಾಸಗಿ ನೈಸರ್ಗಿಕ ಕ್ರಿಯೆ ಹಸ್ತಮೈಥುನ ವಸ್ತುವುಳ್ಳ ಸಿನಿಮಾ – ಓ ಮೈ ಗಾಡ್‌ 2: ಚಂದ್ರಪ್ರಭ ಕಠಾರಿ

2012 ತೆರೆಕಂಡ ಉಮೇಶ್‌ ಶುಕ್ಲಾ ನಿರ್ದೇಶನದ ಸಿನಿಮಾ ʼಓಹ್‌ ಮೈ ಗಾಡ್‌ʼ ಸಿನಿಮಾ ತನ್ನ ಕಥಾವಸ್ತುವಿನಿಂದ ಪ್ರೇಕ್ಷಕರ ಗಮನ ಸೆಳೆದಿತ್ತು. ಈ ಚಿತ್ರದಲ್ಲಿ ಪರೇಶ್‌ ರಾವಲ್‌ ಮತ್ತು ಅಕ್ಷಯ್‌ ಕುಮಾರ್‌ ಪ್ರಧಾನ ಭೂಮಿಕೆಯಲ್ಲಿದ್ದರು. ಅದರಲ್ಲೂ ಅಖಂಡ ನಾಸ್ತಿಕ, ಅಲ್ಲದೆ ವ್ಯವಹಾರ ಚತುರನಾಗಿ ಪರೇಶ್‌ ರಾವಲ್‌ ತಮ್ಮ ಅತ್ಯುತ್ತಮ ನಟನೆಯಿಂದ ಸಿನಿಮಾದ ಗೆಲುವಿಗೆ ಕಾರಣವಾಗಿದ್ದರು. ಪ್ರಾಕ್ತನ ವಸ್ತುಗಳ ವ್ಯಾಪಾರ ಮಾಡುವ ಕಾಂಜಿ ಲಾಲ್ಜಿ ಮೆಹ್ತಾನ ಅಂಗಡಿ ಭೂಕಂಪಕ್ಕೆ ತುತ್ತಾದಾಗ, ವಿಮಾ ಕಂಪನಿಯವರು ಭೂಕಂಪ, ಪ್ರವಾಹ ಇತ್ಯಾದಿಗಳು act of … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಅಂತರಂಗದ ಅರ್ಥವ್ಯಾಪ್ತಿಯನ್ನು ಹಿಗ್ಗಿಸಿ ಎಡತಾಕಿ ಕಾಡುವ ಒಂದು ಹದವಾದ ಕಥಾಕೃತಿ”: ಎಂ‌. ಜವರಾಜ್

ಮುಂಬೈನ ಭಾರತೀಯ ಸಾಹಿತ್ಯ ವಿಚಾರ ಸಂಕಿರಣವೊಂದರಲ್ಲಿ ಕಥೆಗಾರ ಯಶವಂತ ಚಿತ್ತಾಲರು “ಬರಹಗಾರ ಶ್ರೇಷ್ಟತೆಯ ವ್ಯಸನಕ್ಕೆ ತುತ್ತಾಗದೆ ಸಾಹಿತ್ಯದಲ್ಲಿ ಶಿಷ್ಟ ಕ್ಲಿಷ್ಟ ಶ್ರೇಷ್ಠ ಎಂಬಂಥ ‘ಮನೋ ಒರತೆ’ ಗೆ ಒಳಗೊಳ್ಳುವ ಒಳಸುಳಿಗಳ ರಚನೆ ಬಿಟ್ಟು ಸ್ಪಷ್ಟ, ಸರಳ, ಪ್ರಯೋಗಶೀಲ, ಸೃಜನಶೀಲ ರಚನೆಯತ್ತ ಚಿತ್ತ ಹರಿಸಿದರೆ ಅಂತಹ ಬರಹದಲ್ಲಿ ವಿಶಿಷ್ಟತೆ ಕಾಣಬಹುದು. ಇದರಿಂದ ಲೇಖಕನನ್ನು ಬರಹದ ಶ್ರೇಷ್ಟತೆಯ ವ್ಯಸನಕ್ಕೆ ತುತ್ತಾಗುವುದನ್ನು ತಪ್ಪಿಸುತ್ತದೆ. ಒಮ್ಮೆ ಈ ಶ್ರೇಷ್ಟತೆಯ ವ್ಯಸನ ಆವರಿಸಿದರೆ ಅದರಿಂದ ಹೊರ ಬರಲಾರದೆ ಆತನಿಂದ ಹೊಸತೇನನ್ನೂ ನಿರೀಕ್ಷಿಸಲಾಗದು” ಅನ್ನೊ ಅಭಿಪ್ರಾಯ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಎರಡು ಕವಿತೆಗಳು: ಡಾ. ಡಿ. ಎಸ್. ಪ್ರಭಾಕರಯ್ಯ

ಯಾರು ಹಿತವರು ನಿನಗೆ ಓ ಮನಸೇಯಾರು ಹಿತವರು ನಿನಗೆಒಮ್ಮೆ ಅತ್ತ ಬಾಗುವೆಒಮ್ಮೆ ಇತ್ತ ಬಾಗುವೆಒಮ್ಮೆ ಅತ್ತಿಂದಿತ್ತ ಇತ್ತಿಂದತ್ತ ಒದ್ದಾಡುವೆ. ಓ ಮನವೇಯಾರು ಹಿತವರು ನಿನಗೆಗೆದ್ದರೂ ಸಹಿಸಲಾರೆಸೋತರೂ ಸಹಿಸಲಾರೆ,ಗೆದ್ದು ಸೋತಿಲ್ವ, ಸೋತು ಗೆದ್ದಿಲ್ವಸೋಲು ಗೆಲುವುಗಳಿಲ್ಲದ ಜೀವನವುಂಟೇ ಓ ಮನವೇಯಾರು ಹಿತವರು ನಿನಗೆಕನಿಕರ ಎಲ್ಲೂ ಕರಕರ‌ ಎನ್ನುತಿಲ್ಲಹಾನಿಕರವೇ ನಿನ್ನಮೂಲಮಂತ್ರವಾಯಿತಲ್ಲ.ಬದುಕಲಾರೆ, ಬದುಕಿಸಲಾರೆ. ಓ ಮನವೇಯಾರು ಹಿತವರು ನಿನಗೆವರಿ ಆಗಿದ್ದಕ್ಕಿಂತ ಉರಿ ಆಗಿದ್ದೇ ಹೆಚ್ಚು, ಮಾತುಗಳಲ್ಲಿ ನಿಸ್ವಾರ್ಥತೆಕೆಲಸ ಕಾರ್ಯಗಳಲ್ಲಿ ಸ್ವಾರ್ಥತೆ. ಓ ಮನವೇಯಾರು ಹಿತವರು ನಿನಗೆ.ಒಳಗೆ ಬಳುಕು ಹೊರಗೆ ತಳುಕುಏನು ನಿನ್ನ ನೀತಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಒಂದ್ ಡೇ ವಿತ್ ಗಣಪ!: ರೂಪ ಮಂಜುನಾಥ

ಆ ದಿನ ಭಾದ್ರಪದ ಶುಕ್ಲದಾ ಚೌತಿ! ಬೆಳಗಿನಿಂದಲೇ ಮುದ್ದು ವಿನಾಯಕನನ್ನು ಸ್ವಾಗತಿಸಲು ಸಂಭ್ರಮದಿಂದ ಮಿಂದುಮಡಿಯನುಟ್ಟು, ದೇವರ ಮನೆಯ ಮಾಡಿ ಅಚುಕಟ್ಟು, ಪೂಜಾ ಸಲಕರಣೆಗಳನ್ನು ಜೋಡಿಸಿಟ್ಟು, ಹೂ ಬಿಡಿಸಿಟ್ಟು, ಫಲತಾಂಬೂಲ ನೈವೇದ್ಯಕಿಟ್ಟೂ, ಗಣಪನಿಗೆ ಒಳ್ಳೆಯ ಪೀಠವಿಟ್ಟೂ, ಅಡಿಗೆಮನೆಗೆ ಹೆಜ್ಜೆಯಿಟ್ಟು, ನಮ್ಮ ಈಶಣ್ಣನ ಮಗ ಗಣಪ್ಪನ ಜೊತೆಗೆ ನಮ್ಮಮನೆಯಲಿರುವ ಗಣಪ್ಪನಿಗೆ( ನನ್ ಮಗನೂ ಸ್ವಲ್ಪ ಠೊಣಪನೇ) ಇಷ್ಟವಾಗುವ ಅಡಿಗೆಯ ತಯಾರಿಯಲ್ಲಿದ್ದೆ. ಅಪ್ಪ ಮಕ್ಕಳು ಎದ್ದುಸ್ನಾನ ಮಾಡಿ ಪೂಜೆ ಮಾಡಲು ಸಿದ್ದವಾದರು. ನಮ್ಮ ಟ್ಯಾಬ್ ಗುರುಗಳನ್ನ “ ಸ್ವಾಮಿ ಬರ್ತೀರಾ”?ಅಂದಿದ್ದೇ ತಡ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಎರಡು ಕವಿತೆಗಳು: ಜ್ಯೋತಿಕುಮಾರ್‌ ಎಂ.

ಅವರವರ ಭಾವ ಶವ ಹುಗಿದು ಬಂದವರುದೋಷ ಕಳೆಯಲೆಂದುಗುಂಡಿ ತೆಗೆದವನವಸ್ತ್ರ ತುಂಬಿಸಿದರು.ಕೂಲಿಯವರು ಹೊಟ್ಟೆತುಂಬ ಕಳ್ಳು ಕುಡಿದುದೋಷವನುಜೀರ್ಣಿಸಿಕೊಂಡರು. ತಾವು ಮಾಡಿದಪಾಪ ಕರ್ಮಗಳುಕಳೆಯಲೆಂದು,ಭಿಕ್ಷಾ ತಟ್ಟೆಗೆಚಿಲ್ಲರೆ ಎಸೆದರು.ಪಾಪದ ಅಕ್ಕಿಯಅನ್ನ ಬೇಯಿಸಿ ತಿಂದುಅವರು ಅರಗಿಸಿಕೊಂಡರು. ಕೈಗಂಟಿದ ರಕ್ತದಕಲೆ ತೊಳೆಯಲೆಂದುಒಂದಿಷ್ಟು ಕಂತೆದಾನ ಕೊಟ್ಟರು.ರಕ್ತ ಕಲೆಯ ಊಟವಅನಾಥ ಮಕ್ಕಳು ಉಂಡುರಕ್ತಗತವಾಗಿಸಿಕೊಂಡರು. ಪಾಪದ ಪಿಂಡವೆಂದುಹಡೆದು ತೊಟ್ಟಿಗೆಎಸೆದು ಹೋದರು.ನಡುರಾತ್ರಿಯಲಿಸಿಕ್ಕ ಕೂಸುಬಂಜರು ಜೀವನದಅದೃಷ್ಟವೆಂದುನಡು ವಯಸ್ಸಿನದಂಪತಿಗಳುಕಣ್ಣಿಗೊತ್ತಿಕೊಂಡರು. ಯಾವುದು ದೋಷ?ಯಾವುದೀ ಕರ್ಮ?ಯಾರ ರಕ್ತದ ಕಲೆ?ಯಾರು ಪಾಪದ ಪಿಂಡ?ಜೀವನ, ಭಾವನ, ಪಾವನ.ಅವರವರ ಭಾವಕ್ಕೆಅವರವರದೆ ಭಕ್ತಿ,ಅವರಿವರಿಗೆ ಅದೆ ಶಕ್ತಿ. ಕಾರಣ ಮನಸ್ಸುಗಳಬೆಸೆದುಕೊಂಡಾಗ,ಬಿಸುಪು ಕೈಗಳಸ್ಪರ್ಶ ರೋಮಾಂಚನದಿಂ,ಸುಮ್ ಸುಮ್ಮನೆಆಲಂಗಿಸಿಕೊಂಡಾಗ,ಬಳಿ ಸಾರಿಮುದ್ದಾಡಿಕೊಂಡಾಗ,ಕತ್ತಲೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಾಲ್ಕು ಕವಿತೆಗಳು: ಲಿಂಗರಾಜ ಸೊಟ್ಟಪ್ಪನವರ

ಈ ಹಂಗಾಮಕೆ ಹೀಗೆಗಾಳಿಯ ಸುಮ್ಮನೆ ಒಂದು ಬೀಸುಏನು ಕಾರಣವಿರುತ್ತೆ ಹೇಳು ಒಳಗೆಳೆದುಕೊಂಡ ಈ ಕ್ಷಣದ ಉಸಿರಿಗೆಯಾರ ಹೆಸರಿತ್ತು ಕೇಳುಎಷ್ಟೇ ನಿಟ್ಟುಸಿರುಗಳ ತರುವಾಯವೂ ನಿನ್ನ ಪುಪ್ಪಸಗಳಲಿಉಳಿದೆ ಉಳಿಯುತ್ತೇನೆ ನಾನು ಬರಿ ಹೆಸರಿಗೆ ಇಷ್ಟು ಉಬ್ಬಿ ಹೋಗುವಿಯಲ್ಲಾಇನ್ನು ಕುಪ್ಪಸವ ನಾನೇ ಹೊಲಿದು ತರುವೆಎಷ್ಟಾದರೂ ಉಬ್ಬುದಿಬ್ಬವೇರುತ್ತ ಸಾಗಲಿ ತೇರುಮಬ್ಬು ಹರಿದ ತರುವಾಯ ಕಣ್ಣುಜ್ಜಿಕೊಳ್ಳುವ ಚುಮು ಚುಮು ಮುಂಜಾವುಕಣ್ಣೆದುರೆ ಕರಗುವ ಕಾನು ಬಾನುಬೆಳ್ಳಿ ನಕ್ಷತ್ರಗಳು ಆನು ತಾನುಹರಿವ ತೊರೆಯ ಮೆರೆವ ನೊರೆಯಲಿಯಾವ ದುಃಖ ಎಂಥ ಸುಖ ಬರುವ ಹಬ್ಬಕೆಬೇನಾಮಿ ಸುಖಗಳನು ನಿನ್ನ ಹೆಸರಿಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ