ಧರ್ಮದ ಆಚರಣೆ ಆಸ್ತಿಕವೂ ಅಲ್ಲ.. ನಾಸ್ತಿಕವೂ ಅಲ್ಲ.. ಎನ್ನುವ ವಿಭಿನ್ನ ಕೃತಿ “ಯಡ್ಡಿ ಮಾಮ ಬರಲಿಲ್ಲ”: ಡಾ. ನಟರಾಜು ಎಸ್ ಎಂ
ಇಡೀ ವಾರ ನಾಲ್ಕೈದು ಪುಸ್ತಕಗಳ ಮೇಲೆ ಕಣ್ಣಾಡಿಸಿದ್ದೇನಾದರೂ ಪೂರ್ತಿಯಾಗಿ ಯಾವ ಪುಸ್ತಕವನ್ನು ಓದಲಾಗಿರಲಿಲ್ಲ. ಇತ್ತೀಚೆಗೆ ಹಾವೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ ಲೇಖಕರಿಗೆ ಪ್ರಾಶಸ್ತ್ಯ ಕೊಡಲಿಲ್ಲ ಎನ್ನುವ ದನಿಗಳು, ಪರ್ಯಾಯ ಸಮ್ಮೇಳನ ಎಂಬಂತೆ ಬೆಂಗಳೂರಿನಲ್ಲಿ ಸಾಹಿತ್ಯ ಸಮ್ಮೇಳನವೊಂದನ್ನು ಹಮ್ಮಿಕೊಂಡಿದ್ದರು. ಎರಡೂ ಸಮ್ಮೇಳನಗಳ ಆಹ್ವಾನ ಪತ್ರಿಕೆಗಳ ಮೇಲೆ ಕುತೂಹಲಕ್ಕೆ ಕಣ್ಣಾಡಿಸಿದಾಗ ಹಾವೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಒಬ್ಬೇ ಒಬ್ಬ ಮುಸ್ಲಿಂ ಕವಿಯ ಹೆಸರಿತ್ತು. ಆ ಕವಿಯೂ ಕೂಡ ಸಮ್ಮೇಳನದಿಂದ ಹಿಂದೆ ಸರಿದಿದ್ದು ಎಲ್ಲರಿಗೂ ತಿಳಿದ ವಿಚಾರವೇ … Read more