ಭಾವನೆಗಳ ಭಾವೋದ್ವೇಗ: ರೇಖಾ ಶಂಕರ್

ಮನಸು ತಾ ತಿಳಿದದ್ದು ಅಂತರಂಗದಲ್ಲಿ ಕೂಡಿಹಾಕಿ ಕಲೆಹಾಕಿ ಒಂಚೂರು ಮುದವಾಗಿಸಿ ಇಮ್ಮಡಿಗೊಳಿಸಿಕೊಂಡು ಅರುಹುವ ಮಾತಿನ ಅನಾವರಣವೇ ” ಭಾವನೆ” . ಭಾವನೆ ಎಂದರೆ ವ್ಯಕ್ತಿಯೊಳಗೆ ಅಡಗಿದ್ದ ವಸ್ತುವಿನ ಅಥವಾ ಸನ್ನಿವೇಶಕ್ಕೆ ಸಂಬಂಧಿಸಿ ನೀಡುವ ಪ್ರತಿಕ್ರಿಯೆ. ಭಾವನೆಯು ಸಂತೋಷ, ನೋವು, ಆಕರ್ಷಣೆ ಅಥವಾ ಮೋಹಿತದಿಂದ ಗುರುತಿಸಲ್ಪಟ್ಟ ಮಾನಸಿಕ ದೈಹಿಕ ಪ್ರತಿಕ್ರಿಯೆಗಳ ಸೂಚಕ.
ಇದು ಪ್ರತಿಕ್ರಿಯೆಗಳ ಅಸ್ತಿತ್ವವನ್ನು ತಿಳಿಸಬಹುದು ಆದರೆ ಅದರ ಸ್ವರೂಪ ಅಥವಾ ತೀವ್ರತೆಯ ಬಗ್ಗೆ ಏನನ್ನೂ ಸೂಚಿಸುವುದಿಲ್ಲ. ಭಾವನೆಯು ಉತ್ಸಾಹ ಅಥವಾ ನಿರುತ್ಸಾಹಗಳ ಬಲವಾದ ಸೂಚ್ಯಾರ್ಥವನ್ನು ಹೊಂದಿರುತ್ತದೆ ಹಾಗೂ ಧನಾತ್ಮಕ ಮತ್ತು ಋಣಾತ್ಮಕ ಪ್ರತಿಕ್ರಿಯೆಗಳನ್ನು ಒಳಗೊಂಡಿರುತ್ತದೆ.

ಭಾವನೆಗಳು ನಮಗೆ ಅಂತ್ಯವಿಲ್ಲದ ಅನುಭವಗಳನ್ನು ಅನುಭವಿಸಲು ಅನುವು ಮಾಡಿಕೊಡುತ್ತದೆ. ಜೀವನದ ಎಲ್ಲ ಏರಿಳಿತಗಳು ನಮಗಾಗಿ ಹುಟ್ಟುಹಾಕಿಟ್ಟು ಸಂತೋಷ ಮತ್ತು ದುಃಖಗಳನ್ನು ಅನುಸಂಧಿಸಿ ಅನುಭವಿಸುವ ಸಾಮರ್ಥ್ಯವನ್ನು ನೀಡುತ್ತವೆ. ಸಂಬಂಧಗಳ ಮೂಲಕ ಹೊಂದಿಕೊಳ್ಳುವ ಮಾರ್ಗವನ್ನು ವ್ಯಕ್ತಪಡಿಸಲು ಮತ್ತು ಅದರಂತೆ ಮುನ್ನಡೆಯು ಹಾಗೆ ಮಾಡಲು, ಜೀವನದ ಪ್ರಾಮುಖ್ಯತೆಯಲ್ಲಿ ಕಂಡಿರುವ ಉತ್ತಮ ಆಯ್ಕೆಗಳನ್ನು ಮಾಡಿ ಮತ್ತು ಅದರ ಘಟನೆಗಳಿಗೆ ನಮ್ಮ ಪ್ರತಿಕ್ರಿಯೆಗಳನ್ನು ಗುರುತಿಸಲು ಅವು ನಮಗೆ ಸಹಾಯ ಮಾಡುತ್ತವೆ. ಸಾಮಾನ್ಯವಾದ ಸಂಗತಿಗಳ ಅನುಭವವಾಗಿ ಮತ್ತು ಒಳ್ಳೆ ಮಾರ್ಗ ತೋರಿಸುವ ಮನೋವೈದ್ಯಕೀಯದಂತೆ ಕೆಟ್ಟ ವಿಚಾರದ ಕಾಯಿಲೆಗಳಲ್ಲಿ ಸರಿಯಾದ ಪ್ರತಿಕ್ರಿಯೆ ನೀಡಲು ಭಾವನೆಯು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಭಾವನೆಗಳ ಬಗ್ಗೆ ನೀವು ಏನನ್ನು ಮುಖ್ಯವಾಗಿಟ್ಟುಕೊಂಡು ಯೋಚಿಸುತ್ತೀರಿ ಎಂಬುದು ಮುಖ್ಯ. ಆದರೆ ಭಾವನೆಗಳ ಬಗ್ಗೆ ನಮ್ಮೊಳಗೆ ಆಧಾರವಾಗಿರುವ ನಂಬಿಕೆಗಳ ಅನಾವರಣವಾಗಿ ಅವುಗಳ ಬಗ್ಗೆ ತಿಳಿದಿರಲಿ ಅಥವಾ ಇಲ್ಲದಿರಲಿ-ಜೀವನದಲ್ಲಿ ಉತ್ಸಾಹದ ಮೇಲೆ ಪರಿಣಾಮ ಬೀರಬಹುದು.

ನಿಮ್ಮ ಭಾವನೆಗಳನ್ನು ಬದಲಾಯಿಸಬಹುದೇ?

ನೀವು ಸ್ನೇಹಿತನ ರಜಾದಿನದ ಪಾರ್ಟಿಗೆ ಬಂದಾಗ ಆಪ್ತ ಸ್ನೇಹಿತ ನಿಮ್ಮನ್ನು ನಿರ್ಲಕ್ಷಿಸುತ್ತಾನೆ ಎಂದು ಕಲ್ಪಿಸಿಕೊಳ್ಳಿ. ನೀವು ಕೋಪಗೊಳ್ಳುತ್ತೀರಿ ಅಥವಾ ಅಸಮಾಧಾನಗೊಳ್ಳುತ್ತೀರಿ, ಸರಿ. . ? ಆದರೆ ನೀವು ಪರಿಸ್ಥಿತಿಯ ಬಗ್ಗೆ ವಿಭಿನ್ನವಾಗಿ ಯೋಚಿಸಲು ಪ್ರಯತ್ನಿಸಿದರೆ-ಬಹುಶಃ ನಿಮ್ಮ ಸ್ನೇಹಿತ ನಿಮ್ಮನ್ನು ನೋಡಿಲ್ಲ ಅಥವಾ ಅತಿಥಿ ಸತ್ಕಾರದಿಂದ ವಿಚಲಿತರಾಗಿರಬಹುದು. ಹಾಗೆಯೆ ಅದು ನಿಮ್ಮನ್ನು ಶಾಂತಗೊಳಿಸಲು ಮತ್ತು ನಿಮ್ಮಲ್ಲಿಯ ಋಣಾತ್ಮಕ ಭಾವನೆಯಿಂದ ಅಸಮಾಧಾನದಿಂದ ವರ್ತಿಸದಂತೆ ತಡೆಯಲು ಸಹಾಯ ಮಾಡುತ್ತದೆ. ಕಷ್ಟಕರವಾದ ಭಾವನೆಗಳನ್ನು ನಿರ್ವಹಿಸುವ ಸಾಮರ್ಥ್ಯ ಮತ್ತು ಮನಸಿನಲಿ ಅಡಗಿದ್ದುದನ್ನು ತೀವ್ರಗೊಳಿಸದೆ ಬಿಗಿದಿಟ್ಟುಕೊಳ್ಳುವ ಸಾಧನೆಯನ್ನೆ “ಭಾವನೆಯ ನಿಯಂತ್ರಣ” ಎಂದು ಕರೆಯಬಹುದು. ಉತ್ತಮ ಮಾನಸಿಕ ಆರೋಗ್ಯದ ಬಗ್ಗೆ ನೈತಿಕ ನಿರ್ಧಾರ ತೆಗೆದುಕೊಳ್ಳುವುದು ಮತ್ತು ಅದರ ಸ್ಮರಣೆಯಿಂದ ಯೋಗಕ್ಷೇಮದಂತಹ ಹಲವಾರು ಸಕಾರಾತ್ಮಕ ಫಲಿತಾಂಶಗಳೊಂದಿಗೆ ಸಂಬಂಧ ಹೊಂದಿದೆ. “ಮರುಮೌಲ್ಯಮಾಪನ” ಇನ್ನೊಮ್ಮೆ ಪ್ರಮಾಣೀಕರಿಸುವ ಎಂಬ ನಿರ್ದಿಷ್ಟ ಮಾನಸಿಕ ನಿರ್ವಹಣೆಯ ತಂತ್ರವನ್ನು ಬಳಸುವುದು, ಇದು ಭಾವನಾತ್ಮಕವಾಗಿ ಅಸಮಾಧಾನಗೊಳ್ಳುವ ಘಟನೆಯನ್ನು ಹೆಚ್ಚು ಸಕಾರಾತ್ಮಕವಾಗಿ ವ್ಯಕ್ತಪಡಿಸುತ್ತ ಮರುವ್ಯಾಖ್ಯಾನಿಸುವುದನ್ನು ಒಳಗೊಂಡಿರುತ್ತದೆ.

ಆದರೂ ಕೆಲ ವ್ಯಕ್ತಿತ್ವದ ಮನುಷ್ಯರು ಭಾವನೆಗಳ ಮೇಲೆ ಯಾವರೀತಿ ಗಟ್ಟಿಯಾಗಿ ನಿಯಂತ್ರಣವನ್ನು ಹೊಂದಿದ್ದೇವೆ ಎಂದು ನಂಬುವುದಿಲ್ಲ. ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಹಲವಾರು ಹೊಸ ಅಧ್ಯಯನಗಳು ನಡೆದು ನಂಬಿಕೆಯಿಂದ ಹೇಗೆ ವರ್ತಿಸುತ್ತೇವೆ ಮತ್ತು ನಾವು ಹೇಗೆ ಭಾವಿಸುತ್ತೇವೆ ಎಂಬುದರ ಮೇಲೆ ಎಷ್ಟು ರೀತಿಯ ಪರಿಣಾಮ ಬೀರಬಹುದು ಎಂಬುದನ್ನು ದೃಢಪಡಿಸಿದೆ. ” ಭಾವನೆಗಳು ತೊಂದರೆಗೆ ಯಾತಕ್ಕಾಗಿ ಕಾರಣವಾಗಬಹುದು ” ದೊಡ್ಡವರಿಂದ ಚಿಕ್ಕ ವಯಸ್ಸಲ್ಲಿಯೇ ಸ್ವಾಭಾವಿಕವಾಗಿ ಸಂಭವಿಸುವ ಕೆಲ ಕೆಟ್ಟ ಭಾವನೆಗಳನ್ನು ನಿರ್ಲಕ್ಷಿಸಲು ಮತ್ತು ನಿಗ್ರಹಿಸಲು ಕಲಿಸಲಾಗಿದೆ. ಆಗಾಗ್ಗೆ ನಾವು ಅನುಭವಿಸುವ ಭಾವನೆಗಳು ಕೆಟ್ಟವು ಅಥವಾ ನಮ್ಮನ್ನು ಕೆಟ್ಟದಾಗಿ ಮಾಡುತ್ತವೆ ಎಂದು ನಮಗೆ ಕಲಿಸಲಾಗುತ್ತದೆ. ಪರಿಣಾಮವಾಗಿ, ನಾವು ಅವುಗಳನ್ನು ನಿರ್ಲಕ್ಷಿಸಲು ಕಲಿಯುತ್ತೇವೆ ಮತ್ತು ಅವುಗಳ ಅಸ್ತಿತ್ವವನ್ನು ನಿರಾಕರಿಸುತ್ತೇವೆ.

ಭಾವನಾತ್ಮಕ ಮತ್ತು ಮಾನಸಿಕ ಯೋಗಕ್ಷೇಮವನ್ನು ಅನುಭವಿಸಲು, ನಮ್ಮ ಭಾವನೆಗಳನ್ನು ಗುರುತಿಸಿಕೊಂಡು ಮತ್ತು ಹೇಗೆ ಅಳವಡಿಸಿಕೊಳ್ಳಬೇಕೆಂಬುದು ಕಲಿಯುವುದು ಬಹಳ ಮುಖ್ಯ. ನಾವು ನಮ್ಮ ಭಾವನೆಗಳಲ್ಲ. ನಾನು ಅಂದುಕೊಂಡಂತೆ ವರ್ತಿಸಬೇಕಾಗಿಲ್ಲ ಅಥವಾ ಆಗಬೇಕಾಗಿಲ್ಲ. ಬೇರೆ ರೀತಿಯಲ್ಲಿ ಹೇಳುವುದಾದರೆ, ನಾನು ಕೋಪಗೊಂಡಾಗ ಕೋಪದಿಂದ ವರ್ತಿಸಬೇಕು ಎಂದಲ್ಲ. ಅಕ್ಷರಶಃ ನನ್ನ ಭಾವನೆಗಳಾಗದೆ ನಾನು ಹೇಗೆ ಭಾವಿಸುತ್ತೇನೆ ಎಂದು ಸುರಕ್ಷಿತವಾಗಿ ಸಂವಹನ ಮಾಡಲು ನಾನು ಕಲಿಯಬಹುದು. ಭಾವನೆಗಳು ಒಳ್ಳೆಯದು ಅಥವಾ ಕೆಟ್ಟದ್ದಲ್ಲ. ಭಾವನೆಗಳು ಸರಿ ಅಥವಾ ತಪ್ಪು ಅಲ್ಲ. ಅದು ಕೇವಲವಷ್ಟೇ. ಅಲ್ಲದೆ, ಭಾವನೆಗಳಿಗೆ ದೃಢೀಕರಣದ ಅಗತ್ಯವಿದೆ. ಇದರರ್ಥ ಅದರಿಂದ ವ್ಯಕ್ತವಾದ ನಡೆ ನುಡಿಗಳು ನಿಜವೆಂದು ಒಪ್ಪಿಕೊಳ್ಳಬೇಕೆಂಬುದು ಮಾತ್ರ. ನಿಮ್ಮ ಭಾವನೆಗಳನ್ನು ಸ್ವೀಕರಿಸಿ ಮತ್ತು
ಕೆಲವೊಮ್ಮೆ ನೀವು ಅದರ ಮೂಲವನ್ನು ಅರ್ಥಮಾಡಿಕೊಳ್ಳುವಿರಿ ಮತ್ತು ಕೆಲವೊಮ್ಮೆ ಅದು ಹೇಗೆ ವ್ಯಕ್ತವಾಯ್ತು ಎಂಬುದರ ಕುರಿತು ನಿಮಗೆ ಯಾವುದೇ ಸುಳಿವು ಇರುವುದಿಲ್ಲ. ಅವೆಲ್ಲವನ್ನೂ ಮೌಲ್ಯೀಕರಿಸಿ ಭಾವನೆಗಳಿಂದ ಆಗುವ ರೀತಿ ನಿಯಮಗಳೆಲ್ಲ ಆಗು ಹೋಗುಗಳೆಲ್ಲದರ ಬಗ್ಗೆ ಸಕಾರಾತ್ಮಕತೆಯೇ ಹೆಚ್ಚೆಂದು ಒಪ್ಪಿಕೊಳ್ಳಿ ಮತ್ತು ಅವುಗಳನ್ನು ಸ್ವೀಕಾರಾರ್ಹ ರೀತಿಯಲ್ಲಿ ಹೊರತರಲು ಅನುಮತಿಸಿ.

ಭಾವನಾರೂಪದಿಂದ ಭೌತಿಕವಾಗಿವೆ
“ಹೊಟ್ಟೆಯಲ್ಲಿ ಚಿಟ್ಟೆಗಳು ಹಾರಿದ ಹಾಗೇ ” ಎಂದು ಎಂದಾದರೂ ನೀವು ಕೇಳಿದ್ದೀರಾ? ಹೀಗೆಂದರೆ ನಮ್ಮ ದೇಹವು ನಾವು ಹೇಗೆ ಭಾವಿಸುತ್ತೇವೆ ಎಂಬುದಕ್ಕೆ ಅನುಗುಣವಾಗಿ ಪ್ರತಿಕ್ರಿಯಿಸುತ್ತದೆ ಎಂಬುದು. ನಿಮ್ಮ ಭಾವನೆಗಳನ್ನು “ಒಳ್ಳೆಯದು” ಅಥವಾ “ಕೆಟ್ಟದು” ಎಂದು ಲೇಬಲ್ ಮಾಡುವುದು ಎಂದಿಗೂ ಸಹಾಯಕವಾಗುವುದಿಲ್ಲ. ನಿಮ್ಮ ಅನುಭವದ ಭಾಗವಾಗಿ ಅವುಗಳನ್ನು ಸ್ವೀಕರಿಸಿ. ನಂತರ ನೀವು ಹೇಗೆ ಭಾವಿಸುತ್ತೀರಿ ಎಂಬುದನ್ನು ಹಂಚಿಕೊಳ್ಳಲು ಪ್ರಾರಂಭಿಸಬಹುದು. ಇದು ನಿಮ್ಮ ಜೀವನದಲ್ಲಿ ಹೆಚ್ಚು ಧನಾತ್ಮಕ ಫಲಿತಾಂಶಗಳನ್ನು ಸೃಷ್ಟಿಸುತ್ತದೆ.

ಭಾವನೆಗಳನ್ನು ಹಂಚಿಕೊಳ್ಳುವುದು
ನಿಮ್ಮ ಭಾವನೆಗಳನ್ನು ಪದಗಳಲ್ಲಿ ವಿವರಿಸಲು ಪ್ರಯತ್ನಿಸಿ, ವಿಶ್ವಾಸಾರ್ಹ ಸ್ನೇಹಿತ, ಕುಟುಂಬದ ಸದಸ್ಯರು ಅಥವಾ ಮಾನಸಿಕ ಆರೋಗ್ಯ ವೃತ್ತಿಪರರೊಂದಿಗೆ ಮಾತನಾಡುವುದು ನೀವು ಮನದೊಳಗೆ ಹೊಂದಿರುವ ಭಾವನೆಗಳೆಲ್ಲವನ್ನು ಹಂಚಿಕೊಳ್ಳಲು ನಿಮಗೆ ಅನುಮತಿಸುತ್ತದೆ. ಸರಿಯಾದ ವ್ಯಕ್ತಿಯೊಂದಿಗೆ ಮಾತನಾಡುವುದರಿಂದ ನೀವು ಒಂಟಿತನವನ್ನು ಕಡಿಮೆ ಮಾಡಬಹುದು. ಆರೋಗ್ಯಕರ ಮತ್ತು ಸುರಕ್ಷಿತ ಔಟ್ಲೆಟ್ ಹೊಂದಿರುವ ಅಹಿತಕರ ಭಾವನೆಗಳ ಶಕ್ತಿಯನ್ನು ಕಡಿಮೆ ಮಾಡಬಹುದು.

ಕೋಪವನ್ನು ಒಪ್ಪಿಕೊಳ್ಳುವುದು ಮತ್ತು ನಿರ್ವಹಿಸುವುದು ಹೇಗೆ ಎಂದು ತಿಳಿಯಿರಿ. ಕೋಪವನ್ನು ಸಾಮಾನ್ಯವಾಗಿ ದ್ವಿತೀಯ ಭಾವನೆ ಎಂದು ಕರೆಯಲಾಗುತ್ತದೆ. ಇದು ಭಯ, ನೋವು ಅಥವಾ ನಿರಾಶೆಯ ಭಾವನೆಗಳನ್ನು ಅನುಸರಿಸುತ್ತದೆ ಎಂದರ್ಥ. ಯಾವುದು ನಿಮ್ಮನ್ನು ಹೆದರಿಸುತ್ತದೆ, ನೋವುಂಟು ಮಾಡುತ್ತದೆ ಅಥವಾ ನಿರಾಶೆಗೊಳಿಸುತ್ತದೆ ಎಂಬುದನ್ನು ಗುರುತಿಸಿ ಮತ್ತು ಮಾತನಾಡಿ. ಕೋಪಕ್ಕೆ ಪ್ರತಿಕ್ರಿಯಿಸುವ ನಿಮ್ಮ ದೇಹದ ಸಂಕೇತಗಳನ್ನು ಗುರುತಿಸಿ. ನಂತರ, ನಿಮ್ಮ ಭಾವನೆಗಳು ಕಾರ್ಯರೂಪಕ್ಕೆ ಬರುವ ಮೊದಲು ಅದರ ಬಗ್ಗೆ ಮಾತನಾಡಿ. ನಿಮ್ಮ ಕೋಪದ ಮೂಲಕ ಹೇಗೆ ಮಾತನಾಡಬೇಕೆಂದು ನಿಮಗೆ ಕಲಿಸುವ ಅನೇಕ ಕೋಪ ನಿರ್ವಹಣೆ ತರಗತಿಗಳಿವೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ನಿಮ್ಮ ಕೋಪವು ನಿಮ್ಮನ್ನು ನಿರ್ವಹಿಸುವ ಮೊದಲು ಅದನ್ನು ನಿರ್ವಹಿಸಿ.

ನಿಮ್ಮನ್ನು ವ್ಯಕ್ತಪಡಿಸಿ.
ಬರಹ ಮತ್ತು ಕಲಾಕೃತಿಗಳು ಭಾವನೆಗಳನ್ನು ಪ್ರಕ್ರಿಯೆಗೊಳಿಸಲು ಪರಿಣಾಮಕಾರಿ ಮಾರ್ಗಗಳಾಗಿವೆ. ನಿಮ್ಮ ಅನಿಸಿಕೆಗಳನ್ನು ಬರೆಯುವುದು ಅಥವಾ ಚಿತ್ರಿಸುವುದು ಅವುಗಳನ್ನು ಹೊರತರುತ್ತದೆ. ಕಥೆ ಹೇಳುವುದು, ಕಲೆ, ಮತ್ತು ಬರವಣಿಗೆ ಆರೋಗ್ಯಕರ ಔಟ್ಲೆಟ್ ಆಗಿದ್ದು ಅದು ನಮ್ಮೊಳಗೆ ಹುದುಗಿರುವ ಭಾವನೆಗಳನ್ನ ಪ್ರಕ್ರಿಯೆಗೊಳಿಸಲು ಸಹಾಯ ಮಾಡುತ್ತದೆ. ಅರ್ಥಮಾಡಿಕೊಳ್ಳಲು ಮತ್ತು ಹಂಚಿಕೊಳ್ಳಲು ಕಲಿಯುವುದು ನಿಮ್ಮ ಒಳಗಿನ ಅನುಭವಗಳನ್ನು ಅಂಗೀಕರಿಸಲು ಮತ್ತು ಸ್ವೀಕರಿಸಲು ನಿಮಗೆ ಅನುಮತಿಸುತ್ತದೆ. ಅಲ್ಲದೆ ನಿಮ್ಮ ಭಾವನೆಗಳನ್ನು ನೀವು ಹಂಚಿಕೊಂಡಾಗ ನೀವು ದೀರ್ಘಕಾಲೀನ ಆರೋಗ್ಯಕರ ಸಂಬಂಧಗಳನ್ನು ನಿರ್ಮಿಸುತ್ತೀರಿ. ಹೆಚ್ಚಾಗಿ ನೀವು ಸಂವಹನವನ್ನು ಸುಧಾರಿಸುತ್ತೀರಿ ಮತ್ತು ಹೆಚ್ಚಿನ ಯೋಗಕ್ಷೇಮವನ್ನು ಅನುಭವಿಸುತ್ತೀರಿ. ನಿಮ್ಮ ಭಾವನೆಗಳನ್ನು ಅಳವಡಿಸಿಕೊಳ್ಳುವುದು ನಿಮ್ಮ ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯಕ್ಕೆ ಮುಖ್ಯವಾಗಿದೆ.

ನಿಮ್ಮ ಭಾವನೆಗಳನ್ನು ಒಳಗೆ ಇಟ್ಟುಕೊಳ್ಳುವುದು ಬಹಳಷ್ಟು ನಕಾರಾತ್ಮಕ ಫಲಿತಾಂಶಗಳನ್ನು ಉಂಟುಮಾಡಬಹುದು. ನಿಮ್ಮ ಭಾವನೆಗಳನ್ನು ನೀವು ಅನುಭವಿಸಲು ಮತ್ತು ಹಂಚಿಕೊಳ್ಳಲು ಅವಕಾಶ ಮಾಡಿಕೊಡಿ. ನಿಮ್ಮ ಮನಸ್ಸು ಹಗುರವಾಗಿ ಇತರರೊಂದಿಗೆ ಹೆಚ್ಚು ಸಂಪರ್ಕ ಹೊಂದುವಿರಿ. ನಮ್ಮ ಭಾವನೆಗಳ ಸಂವಹನದೊಂದಿಗೆ ಎಲ್ಲರೊಂದಿಗೆ ಬೆರೆತು ಉತ್ಸಾಹದಿಂದಿರೋಣ ಏನಂತೀರಿ. . !!
-ರೇಖಾ ಶಂಕರ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x