ಪಂಜುವಿನ ದಶಕದ ಸಂಭ್ರಮದ ವಿಶೇಷಾಂಕಕ್ಕೆ ಬರಹಗಳ ಆಹ್ವಾನ

ಸಹೃದಯಿಗಳೇ,

ಇದೇ ಜನವರಿ ೨೧ನೇ ತಾರೀಖಿಗೆ ಪಂಜುವಿಗೆ ಹತ್ತು ವರ್ಷ ತುಂಬುತ್ತಿದೆ. ಪಂಜುವಿನ ದಶಕದ ಸಂಭ್ರಮದ ಆಚರಣೆಗಾಗಿ ವಿಶೇಷ ಸಂಚಿಕೆಯೊಂದನು ತರಲು ಬಯಸುತ್ತಿದ್ದೇವೆ. ಈ ವಿಶೇಷ ಸಂಚಿಕೆಗೆ ನಿಮ್ಮ ಅಪ್ರಕಟಿತ ಕತೆ, ಕವನ, ಲೇಖನ, ಪುಸ್ತಕ ವಿಮರ್ಶೆ, ಹಾಸ್ಯ ಬರಹ, ಚುಟುಕ, ಪ್ರವಾಸ ಕಥನ, ವ್ಯಂಗ್ಯಚಿತ್ರ, ಛಾಯಾಚಿತ್ರ, ಸಿನಿಮಾ ಸುದ್ದಿ, ಇತ್ಯಾದಿ ಸಾಹಿತ್ಯ ಸಂಬಂಧಿತ ಬರಹಗಳನ್ನು ಕಳುಹಿಸಿಕೊಡಿ. ನಮ್ಮ ಇ ಮೇಲ್ ವಿಳಾಸ editor.panju@gmail.com

ಒಮ್ಮೊಮ್ಮೆ ತಾಂತ್ರಿಕ ತೊಂದರೆಗಳಿಂದ ನೀವು ಕಳುಹಿಸಿದ ಲೇಖನ ನಮಗೆ ತಲುಪದೇ ಇರಬಹುದು. ಆದ ಕಾರಣ ನೀವು ಕಳುಹಿಸುವ ಇ ಮೇಲ್ ಅನ್ನು editor.panju@gmail.com ಇ ಮೇಲ್ ಐಡಿಗೆ ಕಳುಹಿಸುವ ಜೊತೆಗೆ ಅದೇ ಇ ಮೇಲ್ ನ ಮತ್ತೊಂದು ಪ್ರತಿಯನ್ನು (ಸಿಸಿ ಯಾಗಿ) smnattu@gmail.com ಗೆ ಕಳುಹಿಸಬೇಕಾಗಿ ಈ ಮೂಲಕ ವಿನಂತಿ..

ಬರಹಗಳನ್ನು ಕಳುಹಿಸಲು ಕೊನೆಯ ದಿನಾಂಕ: 18.01.2023

Pl note: ಪಂಜು ಅಪ್ರಕಟಿತ ಬರಹಗಳನ್ನಷ್ಟೇ ಸ್ವೀಕರಿಸುತ್ತದೆ. ಲೇಖಕರು ಕಳುಹಿಸುವ ಲೇಖನವು ಬ್ಲಾಗ್, ಎಫ್ ಬಿ, ಸೇರಿದಂತೆ ಬೇರೆ ಎಲ್ಲಾದರು ಪ್ರಕಟವಾಗಿದ್ದರೆ ಅಂತಹ ಬರಹವನ್ನು ಸ್ವೀಕರಿಸುವುದಿಲ್ಲ.

ನಿಮ್ಮ ಲೇಖನಗಳ ನಿರೀಕ್ಷೆಯಲ್ಲಿ ನಾವು..

ಇತಿ

ಪಂಜು ಬಳಗ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x