ಚನ್ನಪಟ್ಟಣ ಗೊತ್ತಲ್ಲ, ಗೊಂಬೆಗಳ ನಾಡು ಎಂದು ಅದಕ್ಕೆ ಸರ್ಕಾರ ನೀಡುವ ಬಿರುದು. ಹಿಂದೂ ಮುಸ್ಲಿಂ ಭಾವೈಕ್ಯದ ನಾಡು ಎಂದು ಜನಸಾಮಾನ್ಯರ ನುಡಿ. ಕನ್ನಡ ವೇದಿಕೆಗಳು ಕನ್ನಡ ಸಂಘಟನೆಗಳು ಕನ್ನಡ ಸಂಘ ಸಂಸ್ಥೆಗಳು ಹತ್ತಾರು ಇವೆ. ಜನರ ಬದುಕು ಅವರ ವ್ಯಾಪಾರ ವಹಿವಾಟು ಬದುಕು ಬವಣೆಯೊಂದಿಗೆ ಅಪರೂಪಕ್ಕಾದರೂ ಒಂದೊಂದು ಸಾಹಿತಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದುಂಟು.
ಆದರೆ ಇಲ್ಲಿ ಮುಸ್ಲಿಂ ಸಮುದಾಯದ ಉರ್ದು ಭಾಷೆಯಲ್ಲಿ ಪಾಂಡಿತ್ಯ ಹೊಂದಿರುವುದು, ಒಳ್ಳೊಳ್ಳೆ ಕೆಲಸ ಕಾರ್ಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕೆಲವರ ಆಶಯದಂತೆ ಉರ್ದು ಕವಿಗೋಷ್ಠಿ, ಉರ್ದು ನಾಟಕ, ಅಭಿನಯ ಉರ್ದು, ಖವಾಲಿ ಗಳ ಕಾರ್ಯಕ್ರಮಗಳು ಸಹ ನಡೆಯುತ್ತದೆ.
ನಾನು ಒಬ್ಬ ಮುಸ್ಲಿಂ ಜಾತಿಗೆ ಸೇರಿದ ಕನ್ನಡದ ಕವಿಯಾಗಿ ನಮ್ಮೂರಿನಲ್ಲಿ(ಮದ್ದೂರು ನನ್ನೂರು ). ಮೀಸಲಾತಿ ಹೊಂದಿದ್ದೆ. ನನ್ನ ಬಗ್ಗೆ ಪತ್ರಿಕೆಗಳಲ್ಲಿ ಸುದ್ದಿಗಳು ಪ್ರಕಟವಾಗುತ್ತಿದ್ದವು. ಹಳ್ಳಿಯ ಸುದ್ದಿಯಾಗಿರುವುದರಿಂದ ಒಮ್ಮೆ ಉರ್ದು ಪತ್ರಿಕೆಯ ವರದಿಗಾರ ನನ್ನನ್ನು ಭೇಟಿ ಮಾಡಿ ಸಂದರ್ಶನ ಪಡೆದು ನನ್ನ ಭಾವಚಿತ್ರದೊಂದಿಗೆ ಒಂದು ಸುದ್ದಿ ಮಾಡಿ ಉರ್ದು ಪತ್ರಿಕೆಯಲ್ಲಿ ಪ್ರಕಟಿಸಿದ್ದ. ಆ ಸುದ್ದಿ ಚನ್ನಪಟ್ಟಣದ ಮುಸ್ಲಿಂ ಬಾಂಧವರಿಗೆ ತಿಳಿಯಿತು. ಸರಿ, ಅವರೆಲ್ಲರೂ ಸೇರಿ ತಮ್ಮ ಮಾಸಿಕ ಸಭೆಯಲ್ಲಿ ನನ್ನ ಬಗ್ಗೆ ವಿಷಯ ಪ್ರಸ್ತಾಪಿಸಿ, ಈ ತಿಂಗಳ ಕಾರ್ಯಕ್ರಮದಲ್ಲಿ ನನ್ನನ್ನ ಮುಖ್ಯ ಅತಿಥಿಯನ್ನಾಗಿ ಕಾರ್ಯಕ್ರಮ ಅಧೂರಿಯಾಗಿ ಮಾಡುವುದಾಗಿ ಮಾತುಕತೆ ನಡೆದಿತ್ತು. ಸುಮಾರು ಐದು ಜನರಿಗೆ ಸನ್ಮಾನ ಮಾಡುವುದಾಗಿ ಮತ್ತು ಇಡೀ ಕಾರ್ಯಕ್ರಮದ ಖರ್ಚು ವೆಚ್ಚ ಸಮಾನವಾಗಿ ಹಂಚಿಕೊಳ್ಳುವಂತೆ ಸಂಘದ ಅಧ್ಯಕ್ಷರ ಮಾತಿಗೆ ಎಲ್ಲರ ಒಪ್ಪಿಗೆ ಇತ್ತು. ಚನ್ನಪಟ್ಟಣದಲ್ಲಿ ಉರ್ದು ಮುಷಾಯಿರಾ ದಿನಾಂಕ ಸಮಯ ಮತ್ತು ಸ್ಥಳದ ಬಗ್ಗೆ ನನಗೂ ಆಹ್ವಾನಿತರು ಬಂದು ತಿಳಿಸಿದರು. ತಾವು ಬಂದು ಈ ಕಾರ್ಯಕ್ರಮದಲ್ಲಿ ದಯಮಾಡಿ ಭಾಗವಹಿಸಬೇಕೆಂದು ಮನವಿ ಮಾಡಿಕೊಂಡರು ಆಹ್ವಾನ ಪತ್ರಿಕೆಯ ಜೊತೆಯಲ್ಲಿ ಒಂದು ಸ್ವೀಟ್ ಬಾಕ್ಸ್ ಸಹ ನೀಡಿದ್ದರು. ನನಗೆ ಮುಜುಗರವಾದರೂ ಅವರ ಪ್ರೀತಿ ವಿಶ್ವಾಸಕ್ಕೆ ಎದುರಾಡದೆ ಸಂತೋಷದಿಂದ ಸ್ವೀಕರಿಸಿದೆ.
ಬಿಡುವಿನ ಸಮಯದಲ್ಲಿ ಮುಷಾಯಿರಾದ ಬಗ್ಗೆ ಮಾಹಿತಿ, ಗಣ್ಯರು ಯಾರ್ಯಾರು, ವಿಶೇಷ ಆಹ್ವಾನಿತರ ಬಗ್ಗೆ ಇತರೆ ವಿಷಯಗಳು ಅಧ್ಯಯನ ಮಾಡಿದೆ. ಅಲ್ಲಿ ನನಗೊಂದು ಶಾಕ್ ಆಯ್ತು ಏನ್ ಮಾಡೋದು ಒಪ್ಪಿಕೊಂಡು ಬಿಟ್ಟಿದ್ದೇನೆ. ಹೋಗುವುದೊ ಬಿಡುವುದೊ ಎಂಬ ಚಿಂತೆ ಕಾರ್ಯಕ್ರಮ ಇನ್ನೂ ಒಂದು ವಾರ ಇದ್ದಂತೆ ಶುರುವಾಯಿತು. ಒಂದು ರೀತಿಯ ಮನೋರೋಗದಂತೆ. ಒಂದು ವಿಷಯ ನಿಮಗೆ ಹೇಳೋದೇ ಮರೆತುಬಿಟ್ಟೆ ಅದೇನಂದರೆ ಉರ್ದು ಮುಷಾಯಿರ ಕಾರ್ಯಕ್ರಮದ ಸಮಯ ರಾತ್ರಿ 10 ಗಂಟೆಯಿಂದ ಮುಂಜಾನೆ 5:00 ವರೆಗಿತ್ತು. ಹೀಗೂ ಕಾರ್ಯಕ್ರಮ ಮಾಡ್ತಾರ?!ಎಂದುಕೊಂಡೆ ಮೊದಲೇ ನನ್ನ ಕನ್ನಡದ ಸ್ನೇಹಿತರು ನನಗೆ ಆಡಿಕೊಳ್ಳುತ್ತಿದ್ದರು “ಸಾಬರ ಲೆಕ್ಕ ಎಲ್ಲಾ ಉಲ್ಟಾಪಲ್ಟ ಅಥವಾ ಉರ್ದು ಭಾಷೆ ಬಲಗೈಯಲ್ಲಿ ಬಲಗಡೆಯಿಂದ ಎಡಗಡೆಗೆ ಬರೆಯುವ ಸಾಲು ಕೆಲವು ಮೂಢನಂಬಿಕೆ ನಿಮ್ಮಿಂದಲೇ ಒಂತರ ನಿಮ್ಮಲ್ಲೇ ಒಂತರ “ಇತ್ಯಾದಿಯಾಗಿ ಗೊಂದಲದೊಳಗೊಂದು ಗೊಂದಲದಂತಿತ್ತು
ರಾತ್ರಿ ಊಟವಾದ ಮೇಲೆ ಮನೆಯಲ್ಲಿ ಹೆಂಡತಿಗೆ ಹೇಳಿದೆ “ಇಲ್ಲೇ ಪಕ್ಕದ ಊರು ಚೆನ್ನಪಟ್ಟಣದಲ್ಲಿ ಒಂದು ಕವಿಗೋಷ್ಠಿ ಕಾರ್ಯಕ್ರಮವಿದೆ. ನಾನು ಹೋಗಿ ಬರುತ್ತೇನೆ. ಸಮಯ ರಾತ್ರಿ 10 ರಿಂದ ಮುಂಜಾನೆ. ನನಗೂ ಇದು ಹೊಸದು ಅಲ್ಲಿಗೆ ಹೋಗಿ ಬಂದು ವಿಷಯ ನಿನಗೆ ತಿಳಿಸ್ತೀನಿ” ಎಂದೇ ಹೆಂಡತಿ ರಾಗ ಶುರುವಾಗಿತ್ತು. “ಅಲ್ರಿ ಹಗಲು ಕಾರ್ಯಕ್ರಮಕ್ಕೆ ಹೋಗೋದು ನೋಡಿದ್ದೇನೆ ಕೇಳಿದ್ದೇನೆ ಇದೆಂಥದು ರಾತ್ರಿ ಕಾರ್ಯಕ್ರಮ ರಾತ್ರಿ ಸಮಯ ಹೇಗೋ ಏನೋ ನನಗೆ ಗಾಬರಿಯಾಗುತ್ತೆ ಏನಾದರೂ ನೇಪಾ ಹೇಳಿ ತಪ್ಪಿಸಿಕೊಳ್ಳಿ “ಎಂದಳು. ” ಗಾಬರಿಯಾಕೆ ಅವರೇ ಬಂದು ನನ್ನ ಕರೆದುಕೊಂಡು ಹೋಗ್ತಾರೆ ಅವರೇ ಬಂದು ಬಿಟ್ಟು ಹೋಗುತ್ತಾರೆ” ಎಂದೆ. ಆದರೂ ರಾತ್ರಿ. . . . “ಏನು ಆಗೋದಿಲ್ಲ ಸುಮ್ಮನೆ ಇರು” ಎಂದು ನನ್ನ ಹೆಂಡತಿನ ಸುಮ್ಮನಿರಿಸಿ ಮೌನದಲ್ಲಿ ಅವಳಿಂದ ಅನುಮತಿ ಪಡೆದುಕೊಂಡೆ.
ನನಗೆ ಉರ್ದು ಭಾಷೆ ಬರುವುದಿಲ್ಲ. ಏನಾದರೂ ಮಾತನಾಡಿ ಎಂದರೆ ಏನು ಹೇಳುವುದು? ನಮ್ಮ ಧರ್ಮ ನಮ್ಮ ಜಾತಿಯವನಾಗಿ ಉರ್ದು ಬರಲ್ಲ ಅಂದರೆ ಅವಮಾನ ಅಲ್ಲವೇ. ಸರಿ, ” ನನಗೆ ಶುದ್ಧ ಉರ್ದು ಭಾಷೆ ಬರುವುದಿಲ್ಲ ವೇದಿಕೆಯಲ್ಲಿ ನಾನು ಕನ್ನಡದಲ್ಲಿ ಮಾತನಾಡುತ್ತೇನೆ ಮತ್ತು ಕನ್ನಡದಲ್ಲಿ ಒಂದು ಕವಿತೆ ವಾಚನ ಮಾಡುವೆ “ಎಂದು ಅವರಿಗೆ ತಿಳಿಸಿದೆ ನನ್ನ ಇಬ್ಬರು ಭಾವ ಮೈದನರು ನಾವು ಬರುತ್ತೇವೆ ಎಂದು ಹೇಳಿದರು. ಅವರು ಬರುವುದು ನನ್ನ ರಕ್ಷಣೆಗಷ್ಟೇ. ನಾನು ಅವರಿಗೂ ಹೇಳಿದೆ ಗಾಬರಿಯಾಗುವಂತದ್ದು ಏನು ಇಲ್ಲ ನಾನೇ ಹೋಗಿ ಬರುತ್ತೇನೆ ಎಂದು ಎಲ್ಲರಿಗೂ ಮತ್ತೊಮ್ಮೆ ಸಾಂತ್ವನ ಸಮಾಧಾನ ಮಾಡಿದೆ.
ಅಂದು ನಾನು ರಾತ್ರಿ ಊಟ ಮುಗಿಸಿ ಕುಳಿತಿದ್ದೆ ಅಷ್ಟ್ರಲ್ಲೇ ಒಂದು ಕಾರು ಬಂದು ನಮ್ಮ ಮನೆಯ ಮುಂದೆ ನಿಂತಿತ್ತು. ಮುಖ್ಯ ಅತಿಥಿಗಳನ್ನು ಕರೆಯುವುದಕ್ಕೆ ಕರೆದುಕೊಂಡು ಹೋಗಲು 3 ಮಂದಿ ಒಂದು ಹೂಗುಚ್ಛ ನೀಡಿ ನನ್ನನ್ನು ಕರೆದುಕೊಂಡು ಹೋದರು ಚನ್ನಪಟ್ಟಣದ ಆ ಸ್ಥಳಕ್ಕೆ ತಲುಪಿದೆವು. ಒಬ್ಬ ಶ್ರೀಮಂತ ಮನೆಯಲ್ಲಿ ಊಟದ ವ್ಯವಸ್ಥೆಯಾಗಿತ್ತು ಎಲ್ಲರೂ ಹೊಟ್ಟೆ ಬಿರಿಯುವಷ್ಟು ಬಿರಿಯಾನಿ ತಿಂದು ತೇಗಿಕೊಂಡು ಓಡಾಡುವ ವ್ಯಕ್ತಿಗಳನ್ನು ನಾನು ನೋಡಿದೆ ನನಗೆ ಕನ್ನಡದ ಒಂದು ಹಳೆ ಕಪ್ಪು ಬಿಳುಪು ಚಿತ್ರದ ಹಾಡು ನೆನಪಾಯಿತು ವಿವಾಹ ಭೋಜನವಿದು ವಿಚಿತ್ರ ಭಕ್ಷಗಳಿವು ” ಮನಸ್ಸಿನಲ್ಲಿ ಊಹಿಸಿಕೊಂಡು ನಗುನಗುತ್ತಾ ಒಳಗೆ ಹೋದೆ, ಅಲ್ಲಿಂದ ಜನರು ಊಟ ಮಾಡಿ ಎಂದರು ನಾನು ಊಟ ಆಯ್ತು ಎಂದೆ ಇರಲಿ ಸ್ವಲ್ಪ ಊಟ ಮಾಡಿ ಗಣ್ಯರೊಂದಿಗೆ ಎಂದರು ನಾನು ಏನು ಹೇಳದ ಸ್ಥಿತಿಯಲ್ಲಿದ್ದೆ ಸರಿ ಊಟಕ್ಕೆ ಕುಳಿತೆ ಸ್ವಲ್ಪ ಹೂವು ಬಿರಿಯಾನಿ ಹಾಕಿಸಿಕೊಂಡು ಅಕ್ಕಿ ಕಾಳುಗಳನ್ನು ಎಣಿಸುವಂತೆ ಊಟ ಮಾಡುತ್ತಿದ್ದೆ ಹಿಂದಿನಿಂದ ನನ್ನ ಬೆನ್ನ ಮೇಲೆ ಒಬ್ಬ ದಡಿಯ ನಗುತ್ತಾ ನಾಚಕೋಬೇಡಿ ಊಟ ಮಾಡಿ ಎಂದು ಬೆನ್ನು ತಟ್ಟಿ ಹೇಳಿದ ನನ್ನ ಪ್ರಕಾರ ಅವನ ಐದು ಬೆರಳು ನನ್ನ ಬೆನ್ನಿನ ಮೇಲೆ ಇಳಿದಿರಬಹುದು ಏನೋ ಅಷ್ಟು ಉರಿಯುತ್ತಿತ್ತು ನಾನು ಕೋಪದಿಂದ ಹಿಂದೆ ನೋಡಿದವನೇ ಆ ಅಜಾನುಬಾಹುವಿನ ನೋಡಿದ ಕೂಡಲೇ ನಗು ಮುಖದಲ್ಲೇ ಆಗಲಿ ಊಟ ಮಾಡ್ತಿದ್ದೀನಲ್ಲ ಎಂದು ಒಂದು ನಗೆ ಬಿಸಾಕಿದೆ ಸ್ವೀಟ್ ಗಳು ಶರಬತ್ ಗಳು ಹಣ್ಣುಗಳು ಐಸ್ ಕ್ರೀಮ್ ಕೋಲ್ಡ್ ರಿಂಗ್ಸ್ ಎಲ್ಲವೂ ಆಯಿತು ಹೇಳಬೇಕಾದರೆ ಒಂದು ಮದುವೆಯ ಊಟಕ್ಕಿಂತಲೂ ಮಿಗಿಲಾಗಿಯೇ ಇತ್ತು ಸರಿ ಊಟದ ಶಾಸ್ತ್ರ ಅಥವಾ ಕಾರ್ಯಕ್ರಮ ಅಥವಾ ಮೊದಲ ಗೋಷ್ಟಿ ಮುಗಿಯಿತು.
10:00 ಸರಿಯಾಗಿ ವೇದಿಕೆಯ ಮುಂಭಾಗದಲ್ಲಿದ್ದ ಹಾಸನಗಳು ಒಮ್ಮೆಲೇ ತುಂಬಿ ಹೋದವು ವೇದಿಕೆಯಲ್ಲಿ ಗಮಗಮಿಸುವ ಬಣ್ಣ ಬಣ್ಣದ ಬೆಳಕಿನ ವ್ಯವಸ್ಥೆ ಮೈ ಸೆಟ್ಟುಗಳು ದೊಡ್ಡ ದೊಡ್ಡ ಸ್ಪೀಕರ್ ಗಳು 18 ಅಲ್ಲಲ್ಲೂ ಕಂಡವು ವೇದಿಕೆಯ ಹಂಚಿಕೊಳ್ಳುವ ಕೆಲ ಮಂದಿಯೊಂದಿಗೆ ನಾನು ಸಭೆಯ ಮುಂದಿನ ಸಾಲಿನ ತಾಲ್ಸಾಗಿದೆ ಅಲ್ಲಿ ಕುಳಿತಿದ್ದ ಜನ ಎದ್ದು ಬನ್ನಿ ಎಂದು ನಮಗೆ ಸ್ಥಳಾವಕಾಶ ಮಾಡಿ ಕೊಟ್ರು ನಾವೆಲ್ಲರೂ ಕುಳಿತು ಕೊಂಡೆವು.
ಕಾರ್ಯಕ್ರಮ ಪ್ರಾರಂಭವಾಯಿತು ಎಲ್ಲವೂ ಉರ್ದು ಭಾಷೆಯಲ್ಲಿತ್ತು. ಮೊದಲಿಗೆ ಪ್ರಾರ್ಥನೆ ನಮ್ಮ ಮಸೀದಿಯ ಇಮಾಮ್ ರವರಿಂದ ಎಂದು ಕಾರ್ಯಕ್ರಮ ನಿರೂಪಕ ಹಿಮಾಮ್ ಸಾಹೇಬರು ಪವಿತ್ರ ಕುರನ್ನ ಕೆಲಸಗಳನ್ನು ಅತ್ಯಂತ ಗಟ್ಟಿ ಧ್ವನಿಯಲ್ಲಿ ವಾಚಿಸಿದರು. ತಮ್ಮಮಾತಿನಲ್ಲಿ ನನ್ನ ಬಗ್ಗೆ ಉರ್ದು ಭಾಷೆಯಲ್ಲಿ ತುಂಬ ಸೊಗಸಾಗಿ ವರ್ಣಿಸಿ ಈ ಕಾರ್ಯಕ್ರಮದ ಕೇಂದ್ರ ಬಿಂದು ಎಂದು ಬಣ್ಣಿಸಿದರು ಆಗ ನಾನು ಎದ್ದು ನಿಂತು ನಮಸ್ಕಾರದ ಶೈಲಿಯಲ್ಲಿ ಎರಡು ಕೈಗಳನ್ನು ಅತ್ಯಂತ ಭಕ್ತಿಯಿಂದ ಜೋಡಿಸಿದೆ ಅಷ್ಟರಲ್ಲಿ ನನಗೆ ಜ್ಞಾನೋದಯವಾಯಿತು ನಾನು ಬಂದಿರುವುದು ಉರ್ದು ಕಾರ್ಯಕ್ರಮಕ್ಕೆ ಇಲ್ಲಿ ಸೇರಿದವರು ಎಲ್ಲಾ ಶೋತ್ರುಗಳೆಲ್ಲರೂ ಮುಸ್ಲಿಮರೇ ಎಂದು ನಾನು ತಕ್ಷಣ ಅಸ್ಸಲಾಮು ಅಲೈಕುಂ ರಹಮತಲ್ಲ ಎಂದೆ ಎಲ್ಲರೂ ಪ್ರತಿ ಉತ್ತರ ವಾಲಿಕುಂ ಅಸ್ಸಲಾಂ ಎಂದರು ಹಾಗೆ ನಾನು ಜೈ ಹಿಂದೆ ಎಂದಾಗ ಎಲ್ಲರ ತಾಕವಿಸಿದೆ ಅವರಿಗೆ ಆಶ್ಚರ್ಯವಾಗಿರಲು ಬಹುದು ಸರಿ ಸುಮ್ಮನಾದರು ಹೀಗೆ ಎಲ್ಲರೂ ಸ್ವಾಗತ ಕೋರಿದ ನಂತರ ಪ್ರಾಸ್ತಾವಿಕ ನುಡಿಗಳನ್ನು ಸಂಘದ ಮತ್ತು ಒಬ್ಬ ಹಿರಿಯ ವ್ಯಕ್ತಿ ಹೇಳಿದರು.
ಆ ಕಾರ್ಯಕ್ರಮದಲ್ಲಿಯೂ ಯಾವುದಕ್ಕೂ ಚಪ್ಪಾಳೆ ತಟ್ಟುವ ಹಾಗಿಲ್ಲ ಶಿಲೆ ಹೊಡೆಯುವ ಹಾಗಿಲ್ಲ ಬದಲಾಗಿ ಮಾಶಾ ಅಲ್ಲಾ ಸುಭಾನಲ್ಲ ಎಂದು ಹೇಳಬಹುದು ಎಂಬ ವಿಚಾರ ನನಗೆ ಗೊತ್ತಿರಲಿಲ್ಲ ಅವರೆಲ್ಲ ಹೇಗೆ ಏನೋ ಉರ್ದು ಭಾಷೆಯ ಜೈ ಅನ್ನಿಸಿಕೊಳ್ಳುತ್ತಾರೆ. ನನ್ ಕಥೆ ಹೇಳಿ ನನಗೆ ನನ್ನ ಬಗ್ಗೆನೇ ಚಿಂತೆಯಾಗಿತ್ತು.
ಸರಿ ಕವಿಗೋಷ್ಠಿ ಪ್ರಾರಂಭವಾಯಿತು ಕವಿ ತಾನು ರಚಿಸಿರುವ ಕಾವ್ಯ ವಾಚಿಸುವ ಅದರಲ್ಲಿಯೂ ಶ್ರೇಷ್ಠ ಸಾಲುಗಳನ್ನು ಎರಡು ಮೂರು ಬಾರಿ ಹೇಳುತ್ತಾನೆ. ಆಗ ಪ್ರೇಕ್ಷಕರು ವಾ ಕ್ಯಾ ಬಾತ್ ಹೈ ಮಾಶಾ ಅಲ್ಲಾ ಎಂದಾಗ ಕವಿ ಎಲ್ಲರಿಗೂ ನಮಸ್ಕರಿಸುತ್ತಾನೆ ಒಂದೊಂದು ಕವಿತೆಗಳು ಪ್ರೇಕ್ಷಕರು ಅನುಭವಿಸಿ, ಆನಂದಿಸಿ ಪ್ರತಿಕ್ರಿಯೆ ಮಾಡುವ ಮಾಡುತ್ತಿದ್ದ ಕವಿಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಕವಿತೆ ತುಂಬಾ ಚೆನ್ನಾಗಿತ್ತು ಎಂದಾಗ ಕಾಣಿಕೆಗಳು ನೀಡುತ್ತಾರೆ ನೋಟಿನ ಹಾರ ಹಾಕುವುದು ಟೋಪಿಗೆ ನೋಟು ಕಾಣುವಂತೆ ಹಾಗೆ ಪಿನ್ಚುಕ್ಕಿ 500 ನೋಟು ನೂರರ ನೋಟು ಕೈಗೆಟ್ಟು ಶುಭ ಕೋರುವಂತೆ ಹರಸಿ ಹೋಗುತ್ತಾರೆ
ಇದೆಲ್ಲಾ ನನಗೆ ಹೊಸತು ಹೀಗೆಲ್ಲ ಇದಿಯಾ ನನಗಂತೂ ತುಂಬಾ ಆಶ್ಚರ್ಯವಾಯಿತು. ಕಾರ್ಯಕ್ರಮದ ಮಧ್ಯೆ ಬೀಡಾ ಟೀ ಬಿಸ್ಕೆಟ್ ಗಳು ಎಲ್ಲರಿಗೂ ಸರಬರಾಜುವಾಗುತ್ತಿತ್ತು ಹಾಗಾಗಿ ನಿದ್ದೆ ಯಾರಿಗೂ ಇರಲಿಲ್ಲ ನಾನು ಕೂಡ ರಾತ್ರಿ ಇಡೀ ಎಚ್ಚರವಾಗಿಯೇ ಇದೆ ಆದರೂ ಕೆಲವೊಮ್ಮೆ ನನಗೂ ಮುಂದೆ ಕುಳಿತಿರುವ ನೂರಾರು ಸಂಖ್ಯೆಯ ಪ್ರೇಕ್ಷಕರು ಸಾವಿರಾರು ಸಂಖ್ಯೆಯಲ್ಲಿ ಕಾಣುವಂತೆ ಭಾಸವಾಗುತ್ತಿತ್ತು. ದೀಪಗಳೆಲ್ಲ ಒಂದರ ಪಕ್ಕದಲ್ಲಿ ಒಂದು ಕಾಣುತ್ತಿದ್ದರು ಎಚ್ಚರ ವಹಿಸಿಕೊಂಡ ಕುಳಿತುಕೊಂಡಿದ್ದೆ.
ಆ ಮುಷಾರದಲ್ಲಿ ನೆನಪಿನ ಕಾಣಿಕೆಯಾಗಲಿ ಸರ್ಟಿಫಿಕೇಟ್ ಆಗಲಿ ಯಾರಿಗೂ ಕೊಡಲಿಲ್ಲ ಮೇಲಾಗಿ ಹೂವಿನ ಹಾರಗಳು ನೋಟಿನ ಹಾರಗಳು ಒಳ್ಳೆಯ ಕವಿತೆಗಳಿಗೆ ಶ್ರೇಷ್ಠ ಕವಿಗಳಿಗೆ ನೀಡಿ ಪ್ರೋತ್ಸಾಹ ನೀಡುತ್ತಿದ್ದರು. ಸಮಯ ಸುಮಾರು ಮಧ್ಯರಾತ್ರಿ ಎರಡು ಗಂಟೆಯಾಗಿತ್ತು ನನ್ನ ಸರದಿ ಬಂತು ಅಸ್ಟ್ರಲ್ಲೇ ನಾನು ಕನ್ನಡದ ಕವಿ ಕನ್ನಡದಲ್ಲಿ ಮಾತನಾಡುವುದು ಉರ್ದು ಭಾಷೆ ಬರುವುದಿಲ್ಲ ಎಂದಾಗ ಪರವಾಗಿಲ್ಲ ಹೇಳಿ ಕೆಲವರಿಗಾದರೂ ಕನ್ನಡ ಅರ್ಥವಾಗುತ್ತೆ ಇದೊಂದು ವಿಶೇಷ ಕಾರ್ಯಕ್ರಮ ಭಾಷಾ ಸಮನ್ವಯ ಕಾರ್ಯಕ್ರಮ ಎಂದು ಅಲ್ಲಿದ್ದ ಮುಖ್ಯಸ್ಥರು ನನಗೆ ಸಮಾಧಾನ ಮಾಡಿ ಹೇಳಿದರು ನಾನು ನನ್ನ ಮಾತುಗಳನ್ನು ಪ್ರಾರಂಭಿಸಿದೆ. ಉರ್ದು ಮುಷಾಯಿರಾದಲ್ಲಿ ಕನ್ನಡ ಕಾವ್ಯ ವಾಚನ ಇದು ನಿಜವಾಗಿಯೂ ವಿಶೇಷ ಕಾರ್ಯಕ್ರಮ ಈ ಕಾರ್ಯಕ್ರಮದ ಪ್ರಾಯೋಜಕರಿಗೆ ಇದಕ್ಕಾಗಿ ಶ್ರಮಿಸುತ್ತಿರುವ ಸಹೋದರ ಸದಸ್ಯರೇ ನಿಮಗೆಲ್ಲರಿಗೂ ನನ್ನ ಅಸ್ಸಲಾಮು ಅಲೈಕುಂ ಎಂಬ ಎಲ್ಲಾ ಪ್ರೇಕ್ಷಕರಿಂದ ಪ್ರತಿ ಉತ್ತರ ಬಂತು ನನ್ನ ವಿದ್ಯಾಭ್ಯಾಸ ಎಲ್ಲಾ ಕನ್ನಡದಲ್ಲಿ ಆಗಿರುವುದರ ಅದರಿಂದ ಮತ್ತು ನಾನು ಕರ್ನಾಟಕದಲ್ಲಿ ಜನ್ಮ ತಾಳಿರುವುದರಿಂದ ರಾಜ್ಯ ಭಾಷೆಗೆ ಎಲ್ಲರೂ ಗೌರವಿಸಬೇಕು ಎಂಬುದು ನನ್ನ ನಿಲುವು ಹಿರಿಯರೇ ಪೂಜ್ಯರೇ ದಾರ್ಶನಿಕರೇ ಚಿಂತಕರೆ ಮತ್ತು ಎಲ್ಲಾ ಕಾವ್ಯಸಕ್ತರೆ ಸಹೋದರ ಸಹೋದರಿಯರೇ ಎನ್ನುತ್ತಿದ್ದಂತೆ ಜೋರಾದ ಧ್ವನಿಯಲ್ಲಿ ವಾಹವಾ ಕ್ಯಾ ಬಾತ್ ಎಂದು ಕೂಗಿ ಕೆಲವು ಮಂದಿ ಹೇಳಿದರು.
ನನ್ನ ಕವಿತೆಯ ಶೀರ್ಷಿಕೆ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಎಂದೆ
ಆಗಲೇ ಸಭಿಕರು ವಹಾ ಸುಭನಲ್ಲಾ ಮೈಸೂರಿಗೆ ಹುಲಿ ಕ್ಯಾ ಬಾತ್ ಎಂದರು
ನಾನು ಮನಸ್ಸಿನಲ್ಲೇ ಲೆಕ್ಕ ಹಾಕಿದೆ ಅಯ್ಯೋ ದೇವರೇ ನಾನೇನು ಕವಿತೆನೆ ಪ್ರಾರಂಭ ಮಾಡಿಲ್ಲ ಏನ್ ಈಜನ ಅಂತಿದ್ದಾರೆ ಕವಿತೆ ಇವರಿಗೆ ಎಷ್ಟರಮಟ್ಟಿಗೆ ಅರ್ಥವಾಗುವುದು ಏನಾದರೂ ಹೇಳಿಕೊಳ್ಳಲಿ ನನ್ನ ಪಾಡಿಗೆ ನಾನು ಕವಿತೆವಾಚಿಸಿ ಬಿಡುವುದು ಸರಿ ಎನಿಸಿತು.
ಶೌರ್ಯ ಸಾಹಸ ಪರಾಕ್ರಮಿಧೀರ ವೀರಾ ಶೂರ ಕರ್ನಾಟಕದ ಇತಿಹಾಸದಲ್ಲಿ ಮೈಸೂರು ಹುಲಿ ಅಮರ ರಾಜನೀತಿ ನಿಪುಣ ಕನ್ನಡ ನಾಡಿನ ದಿಟ್ಟ ಕಾವಲುಗಾರ ಕನ್ನಡಿಗರ ಕಣ್ಮಣಿ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಕವಿತೆ ಮುಂದುವರೆಸುತಿದ್ದಂತೆ ಸವಿಕರಲ್ಲಿ ಐದಾರು ಜನ ಎದ್ದು ನೇರವಾಗಿ ನನ್ನತ್ರ ಬರುತ್ತಿರುವುದು ಕಂಡೆ ನನಗೆ ಗಾಬರಿಯಾಯಿತು ಎಲ್ಲಿ ಇವರ ಭಾಷಾ ವಿರೋಧಿಗಳು ಏನೋ ಎಂಬಂತೆ ಹೃದಯ ಬಡಿತ ಜಾಸ್ತಿ ಆಯಿತು ಅವರ ಅವರು ಹತ್ತಿರ ಬರುತ್ತಿದ್ದಂತೆ ಗಮನಿಸಿದಾಗ ಅವರ ಕೈಗಳ ತುಂಬಾ ಗುಲಾಬಿ ಹೂಗಳು ಬಿಡಿಸಿರುವ ಪಕಳೆಗಳು ಮತ್ತು ಒಬ್ಬನ ಕೈಯಲ್ಲಿ ನೋಟಿನ ಹಾರ ಹಿಡಿದುಕೊಂಡು ಕುಣಿಯುತ್ತ ನನ್ನತ್ರ ಬಂದು ನನ್ನ ಕೊರಳಿಗೆ ಹಾರ ಹಾಕಿ ಕೈಕುಲುಕಿದರು ಉಳಿದವರು ಬಿಡಿ ಹೂಗಳನ್ನು ನನ್ನ ಮೇಲಿಂದ ಸುರಿದರು ನಾನು ಧನ್ಯವಾದಗಳು ಕಳಿಸಿಕೊಟ್ಟೆ.
ನನ್ನ ಅಂತರಂಗ ಹೇಳಿದ್ದು ಏನು ನನ್ನ ಕವಿತೆಯ ಸಾಲು ಅವರಿಗೆ ಅರ್ಥವಾಯಿತೆ, ಚೆನ್ನಾಗಿತ್ತೆ ಏನೋ ಎಲ್ಲಾ ಗೊಂದಲಮಯ ಸರಿ ನಾನು ನನ್ನ ಕವಿತೆ ವಾಚಿಸುವ ಕಾಯಕ ಮುಂದುವರೆಸಿದೆ.
ದೈವ ಭಕ್ತಿ ಶ್ರದ್ಧೆ ಪ್ರಜೆಗಳಲ್ಲಿ ವಿದ್ವಾಂಸರಲ್ಲಿ ಗೌರವ ಅಭಿಮಾನ ಕೂಡಿ ಗೋಪುರ ದೇವಾಲಯ ಮಸೀದಿ ಚರ್ಚುಗಳ ನಿರ್ಮಾಣ
ಮಠ ಮಾನ್ಯರಲ್ಲಿ ಜನಸಾಮಾನ್ಯರಲ್ಲಿ ಶಾಂತಿ ನೆಮ್ಮದಿ ಸಮಾಧಾನ
ನೂರು ಜನ ದಿನದ ಕುರಿಯಲ್ಲ ಒಂದು ದಿನದ ಹುಲಿಯಾಗಿದ್ದ ಸುಲ್ತಾನ್
ಮತ್ತೆ ಸುಭಾನಲ್ಲ ಕ್ಯಾ ಬಾತ್ ಕ್ಯಾ ಅವಾಜ್ ಕ್ಯಾ ಹು ಕಹಾ ಎಂದು ವೇದಿಕೆಯಲ್ಲಿದ್ದ ಹಿರಿಯರು ಬಂದು ನನ್ನನ್ನು ತಬ್ಬಾಡಿದರು ಶುಭಾಶಯ ಕೋರಿದರು ನಾನು ಆ ರಾತ್ರಿಯಲ್ಲಿ ಅವರ ಅಲಿಂಗನದ ರಭಸಕ್ಕೆ ಬೆವತು ನೀರಾಗಿದ್ದೆ ಅವರಿಗೂ ಧನ್ಯವಾದಗಳು ಹೇಳುತ್ತಾ ಮತ್ತೆ ಮುಂದುವರಿಸಿ ಮುಕ್ತಾಯಗೊಳಿಸಿದೆ ನಾನು ಟಿಪ್ಪು ಸುಲ್ತಾನ್ ನಿನಗೆ ಕೋಟಿ ಕೋಟಿ ಹೃದಯ ನಮನ ಎಂದ ಕೂಡಲೇ ಪ್ರೇಕ್ಷಕರು ನರೇ ತಕ್ಬೀರ್ ಅಲ್ಲಾಹು ಎಂದು ಕೂಗಿದರು.
ಈ ಕವಿತೆ ನಿಮಗೆ ಪ್ರಿಯವಾಗಲಿ ಕವಿಗೆ ಶುಭವಾಗಲಿ ಎಂದರು.
” ಹುಕುಂರಾನೆ ದೀನ್ ನಿನಗೆ ಶ್ರದ್ದಾಂಜಲಿ ನೀಡಿದೆ ಈ ಮನ “
ಪ್ರೇಕ್ಷಕರು ನೂರ ಇಸ್ಲಾಂ ಜಿಂದಾಬಾದ್ ನೂರೇ ಇಸ್ಲಾಂ ಜಿಂದಾಬಾದ್ ಎಂದರು ಅಂದರೆ ಇಸ್ಲಾಂ ನ ಗೌರವ ಸದಾ ಕಾಲ ಹಸಿರಾಗಿರಲಿ ನಮಗೆ ಉಸಿರಾಗಿರಲಿ.
ಕವಿ: ಸಲ್ತಾನತೆ ಸುಲ್ತಾನ್ ನೀನು ಮಹಾತ್ಮ ನೀನು ದೈವಾಧೀನ
ಪ್ರೇಕ್ಷಕರು ಮಾಶಾ ಅಲ್ಲಾ ಸುಭಾನಲ್ಲ ಸುಲ್ತಾನಕ ಸುಲ್ತಾನ್ ಜಿಂದಾಬಾದ್ ಅಂದರೆ ವೀರಸೈನಿಕರ ನಾಯಕ ನೀನು ಮಹಾತ್ಮ ನೀನು ಅಮರ
ಕವಿ: ಶ್ರೀರಂಗಪಟ್ಟಣ ನಿನ್ನಿಂದ ಪಾವನ
ಪ್ರೇಕ್ಷಕರು ಶ್ರೀರಂಗಪಟ್ಟಣ ಸುಲ್ತಾನ್ ಟಿಪ್ಪು ಜಿಂದಾಬಾದ್ ಎಂದರು.
ಕವಿತೆ ವಾಚನ ಮುಗಿಯಿತು ಈಗ ಸುಮಾರು 10 ಜನ ನನ್ನತ್ರ ಬಂದರು ವೇದಿಕೆ ಅಧ್ಯಕ್ಷರಿಂದ ಶಾಲು ಹೊಂದಿಸಿ ಸನ್ಮಾನ ಮಾಡಿದರು ಎಲ್ಲರೂ ಮುಬಾರಕ್ ಮುಬಾರಕ್ ಹೋ ಎಂದು ಕೂಗಿ ಕೂಗಿ ಹೇಳುತ್ತಿದ್ದರು ನಾನು ಎಲ್ಲರತ್ತ ಕೈಬೀಸಿ ಧನ್ಯವಾದಗಳನ್ನು ಮುಗುಳ್ನಗೆಯಿಂದಲೇ ಹೇಳುತ್ತಿದ್ದೆ.
ಈಗ ಉಳಿದ ಕವಿಗಳ ಕವಿತೆಗಳ ವಾಚನವಾಯಿತು ಮತ್ತೆ ಮತ್ತೆ ಟೀ ಬಿಸ್ಕೆಟ್ ಹಾಗೂ ಶರಬತ್ತುಗಳ ಸರಬರಾಜು ನಡೆಯುತ್ತಿತ್ತು ಸಮಯ ನಾಲ್ಕು ಗಂಟೆಯಾಗಿತ್ತು ನಿದ್ದೆ ಯಾರಿಗೂ ಇರಲಿಲ್ಲ ನನಗೂ ಸಹ ಅಧ್ಯಕ್ಷರ ಭಾಷಣದಲ್ಲಿ ನನ್ನನ್ನು ಹಾಡಿ ಹೊಗಳಿದರು ನಂತರ ದುವಾ ಆಯ್ತು ವಂದನೆಗಳನ್ನು ಸಲ್ಲಿಸಿ ಅತ್ಯಂತ ಪ್ರೀತಿ ಆಧಾರಗಳಿಂದ ನನಗೆ ನಮ್ಮೂರಿಗೆ ಕಳುಹಿಸಿಕೊಟ್ಟರು.
ಇದು ನನ್ನ ಪಾಲಿಗಂತೂ ಮರೆಯಲಾರದಂತಹ ಕವಿಗೋಷ್ಠಿ ಕಾರ್ಯಕ್ರಮವಾಗಿದ್ದು.
-ಹೆಚ್. ಶೌಕತ್ ಆಲಿ ಮದ್ದೂರು