“ಕತ್ತಲ ಹೂವು” ನೀಳ್ಗತೆ (ಭಾಗ ೬): ಎಂ.ಜವರಾಜ್

ಭಾಗ – 6 ದಂಡಿನ ಮಾರಿಗುಡಿಲಿ ಹಾಕಿರೊ ಮೈಕ್ ಸೆಟ್ಟಿಂದ ಪರಾಜಿತ ಪಿಚ್ಚರ್ ನ ‘ಸುತ್ತ ಮುತ್ತಲು ಸಂಜೆ ಗತ್ತಲು..’ ಹಾಡು ಮೊಳಗುತ್ತಿತ್ತು. ಸುಣ್ಣಬಣ್ಣ ಬಳಿದುಕೊಂಡು ಹೊಳೆಯುತ್ತಿದ್ದ ಮಾರಿಗುಡಿ ಮುಂದೆ ಐಕ್ಳುಮಕ್ಳು ಆ ಹಾಡಿಗೆ ಥಕ್ಕಥಕ್ಕ ಅಂತ ಕುಣಿಯುತ್ತಿದ್ದವು. ಅವುಗಳೊಂದಿಗೆ ಕಿಸಿಕಿಸಿ ಅಂತ ಪಾಚಿ ಕಟ್ಟಿಕೊಂಡಿದ್ದ ಹಲ್ಲು ಬಿಡುತ್ತ ನೀಲಳೂ ಕುಣಿಯುತ್ತಿದ್ದಳು. ಈ ಐಕಳು ಕುಣಿಯುತ್ತಾ ಕುಣಿಯುತ್ತಾ ಗುಂಪು ಗುಂಪಾಗಿ ಒತ್ತರಿಸಿ ಒತ್ತರಿಸಿ ಅವಳನ್ನು ಬೇಕಂತಲೇ ತಳ್ಳಿ ಇನ್ನಷ್ಟು ಒತ್ತರಿಸಿ ನಗಾಡುತ್ತಾ ಎಂಜಾಯ್ ಮಾಡುತ್ತಿದ್ದವು. ನೀಲಳು ಆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸ್ವಾಮ್ಯಾರ `ಸೌಜನ್ಯ’ : ಎಫ್. ಎಂ. ನಂದಗಾವ

ಬೆಂಗಳೂರಿನ ಸಂಚಲನ ಪ್ರಕಾಶನ ಸಂಸ್ಥೆಯು ಪ್ರಕಟಿಸುತ್ತಿರುವ, ಎಫ್. ಎಂ. ನಂದಗಾವ ಅವರ ಹೊಸ ಕಥಾ ಸಂಕಲನ ಘಟ ಉರುಳಿತು’ ಇಷ್ಟರಲ್ಲೇ ಬಿಡುಗಡೆಯಾಗಲಿದೆ. ಅದರಲ್ಲಿ ಒಟ್ಟು ಹತ್ತು ಕತೆಗಳಿದ್ದು, ಅವುಗಳಲ್ಲಿನ ಕೆಲವು ನಾಡಿನ ಹಲವಾರು ಪತ್ರಿಕೆಗಳಲ್ಲಿ ಈಗಾಗಲೆ ಪ್ರಕಟಗೊಂಡು ಓದುಗರ ಗಮನ ಸೆಳೆದಿವೆ. ಪ್ರಸ್ತುತಘಟ ಉರುಳಿತು’ ಕಥಾ ಸಂಕಲನದಲ್ಲಿನ ಸ್ವಾಮ್ಯಾರ ಸೌಜನ್ಯ’ ಕತೆ ‘ಪಂಜು’ವಿನ ಓದುಗರಿಗಾಗಿ. . “ಊರಾಗ, ಬಾಳ ಅನ್ಯಾಯ ಆಗಾಕ ಹತ್ತೇದ, ಸ್ವಾಮ್ಯಾರು ಎಡವಟ್ಟ . . ” ಸಂತ ಅನ್ನಮ್ಮರ ಗುಡಿಯ ವಿಚಾರಣಾ ಗುರುಗಳ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ದೀವಾಪುರ: ರವಿರಾಜ್ ಸಾಗರ್. ಮಂಡಗಳಲೆ.

ತವರು ನೆಲಕ್ಕೆ ಕಾಲಿಡುತ್ತಿದ್ದಂತೆ ಕಳೆದುಕೊಂಡ ಅಮೂಲ್ಯ ವಸ್ತುವೊಂದು ಮತ್ತೆ ಸಿಕ್ಕಾಗಿನ ಸಂತಸ, ಮತ್ತದೇನೂ ಅನುಭೂತಿ, ನವ ಯುವಕರಲ್ಲಿ ಕಾಣುವಷ್ಟು ಉತ್ಸಾಹ, ಎಂಭತ್ತರ ಇಳಿವಯಸ್ಸಿನ ನಾರಣಪ್ಪನಲ್ಲಿ ಆದ್ರೆಮಳೆಯ ವರದಾನದಿಯಂತೆ ಉಕ್ಕಿ ಹರಿಯುತ್ತಿತ್ತು. ಬಹಳ ದಶಕದ ನಂತರ ಅಮೆರಿಕದಿಂದ ಊರಿಗೆ ಬರುತಿದ್ದ ನಾರಣಪ್ಪ ಅವರನ್ನು ಸ್ವಾಗತಿಸಲು ಊರಿನ ಅರಳೀಕಟ್ಟಿ ಬಳಿ ಒಂದಿಷ್ಟು ಜನ ಜಮಾಯಿಸಿದ್ದರು. ಅಮೆರಿಕದಿಂದ ಬರುತ್ತಿದ್ದಾರೆ ಎಂದಮೇಲೆ ನಾರಣಪ್ಪ ಅವರು ಅಲ್ಲಿ ಇಂಜಿನಿಯರೋ, ಡಾಕ್ಟರೋ, ವಿಜ್ಞಾನಿಯೋ, ಯಾವುದೋ ದೊಡ್ಡ ನೌಕರಿಗೋ ಹೋಗಿರಬೇಕೆಂದು ತಿಳಿಯಬೇಡಿ. ಅವರು ಎಪ್ಪತ್ತರ ದಶಕದ ಗೇಣಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸ್ತ್ರೀ ಮತ್ತು ದಲಿತ ಸಂವೇದನೆಯ ವೈರುಧ್ಯಗಳ ನಡುವಿನ ಮಾನವೀಯ ಮೌಲ್ಯಗಳ ಶೋಧ: ಎಂ ಜವರಾಜ್

ನಾನು ಈಚೆಗೆ ಕಣ್ಣಾಡಿಸಿದ ಒಂದು ಕೃತಿ ಕೆ.ಶ್ರೀನಾಥ್ ಅವರ ‘ಕನಸು ಸೊಗಸು’. ಇದಕ್ಕು ಮುನ್ನ ಇವರ ಕೆಲವು ಬರಹಗಳನ್ನು ಫೇಸ್ ಬುಕ್ ನಲ್ಲಿ ಗಮನಿಸಿದ್ದೆ. ಅವು ಮನುಷ್ಯನನ್ನು ಮನುಷ್ಯನನ್ನಾಗಿ ನೋಡುವ ಸ್ಪಂದಿಸುವ ಪ್ರಗತಿಪರವಾದ ಧ್ವನಿಪೂರ್ಣವಾದ ಮಾನವೀಯ ತುಡಿತದ ಬರಹಗಳು. ಆಗಾಗ ಎಫ್.ಬಿ ಲೈವ್ ಗೆ ಬರುವ ಕೆ.ಶ್ರೀನಾಥ್ – ಕಥೆ ಕವಿತೆ ವಾಚಿಸಿ ಗಮನ ಸೆಳೆದವರು. ವೀಣೆ ಮತ್ತಿತರ ವಾದ್ಯ ನುಡಿಸುವ, ವಿವರಿಸುವ ಬಹುಗುಣವುಳ್ಳವರು. ಇದಲ್ಲದೆ ಕನ್ನಡ ಕಿರುತೆರೆ, ಹಿರಿತೆರೆ ಕಲಾವಿದರೂ ಕೂಡ. ಇವರ ಬರಹಗಳನ್ನು ಗಮನಿಸಿದಂತೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಇದು ಬೇಬಿ ಮೀಲ್ಸ್ ಕಾಲವಯ್ಯ: ಸರ್ವ ಮಂಗಳ ಜಯರಾಮ್

ಮೊನ್ನೆ ನಮಗೆ ಪರಿಚಯದವರೊಬ್ಬರ ಮದುವೆಗೆ ಹೋಗಿದ್ದೆವು. ಮದುವೆ ಊಟಕ್ಕೆ ರಶ್ಶೋ ರಶ್ಶು.. ಹೋಗಲಿ ಮೊದಲು ವೇದಿಕೆ ಹತ್ತಿ ಗಂಡು ಹೆಣ್ಣನ್ನು ಮಾತನಾಡಿಸಿ ಪ್ರೆಸೆಂಟೇಷನ್ ಕವರ್ ಕೊಟ್ಟು ಫೋಟೋಗೆ ಫೋಸ್ ನೀಡಿ ನಂತರ ಊಟಕ್ಕೆ ಹೋಗೋಣವೆಂದು ಹೋದರೆ ಅಲ್ಲಿಯೂ ವಿಪರೀತ ರಶ್ಶು.. ಮತ್ತೇನು ಮಾಡುವುದು ಸರತಿ ಸಾಲಿನಲ್ಲಿ ಒಂದು ಗಂಟೆ ನಿಂತು ಮುಂದೆ ಹೋಗಿದ್ದಾಯಿತು. ಮದುವೆಯಲ್ಲಿ ಗಂಡು ಹೆಣ್ಣಿನ ಸಂಭ್ರಮವೇ ಸಂಭ್ರಮ. ಅವರು ತಮ್ಮದೇ ಆದ ಪ್ರೇಮಲೋಕದಲ್ಲಿ ಅದಾಗಲೇ ವಿಹರಿಸುತ್ತಾ ಇರುತ್ತಾರೆ. ಸುಮ್ಮನೆ ನೆಪ ಮಾತ್ರಕ್ಕೆ ಅಲ್ಲಿ ಬಂದವರ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಕತ್ತಲ ಹೂವು” ನೀಳ್ಗತೆ (ಭಾಗ ೫): ಎಂ.ಜವರಾಜ್

ಭಾಗ 5 ಬೆಳಗಿನ ಜಾವದೊತ್ತಲ್ಲಿ ಮುಂಗಾರು ಬೀಸ್ತಿತ್ತು. ಶೀತಗಾಳಿ. ದೊರ, ವಾಟೀಸು, ಕಾಂತ, ಕುಮಾರ, ಚಂದ್ರ ಎಲ್ಲ ಶಿಶುವಾರದ ಜಗುಲಿ ಮೇಲೆ ಶೀತಗಾಳಿಗೆ ನಡುಗುತ್ತ ತುಟಿ ಅದುರಿಸುತ್ತ ಪಚ್ಚಿ ಆಡುತ್ತಿದ್ದವು. ಶೀತಗಾಳಿ ಜೊತೆಗೆ ಸಣ್ಣ ಸಣ್ಣ ಹನಿ ಉದುರಲು ಶುರು ಮಾಡಿತು. ಶಿಶುವಾರದ ಜಗುಲಿ ಕೆಳಗೆ ನೆಲ ಕೆಂಪಗಿತ್ತು. ಕೆಮ್ಮಣ್ಣು. ಕೆಂಪು ಅಂದ್ರೆ ಕೆಂಪು. ಹನಿ ಉದುರುವುದ ಕಂಡು ಪಚ್ಚಿ ಆಡುವುದನ್ನು ನಿಲ್ಲಿಸಿ ಕೆಳಗಿಳಿದು ಮೊನಚಾದ ಬೆಣಚು ಕಲ್ಲು, ಕಡ್ಡಿ ತೆಗೆದುಕೊಂಡು ಕೆಮ್ಮಣ್ಣು ಕೆದಕಿ ಅಲ್ಲೆ ಅವರವರದೇ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ಕನ್ನಡ ಬಳಗ ನೋಡ ಬನ್ನಿರಿ ಗೆಳೆಯರೆನಮ್ಮ ಕನ್ನಡ ಬಳಗವನುಕಸ್ತೂರಿಯ ತವರನ್ನು. . . . ವಿಕ್ರಮಾರ್ಜುನ ಸಾಹಸ ಭೀಮಅವತಾರ ತೋರಿದವು.ಪಂಚತಂತ್ರ ರಾಮಚರಿತಪುರಾಣವು ಬೆಳಗಿದವು ಪ್ರಭುವಿನ ಜೊತೆಯಲ್ಲಿ ಅಕ್ಕನುಅಣ್ಣನು ಪುಣ್ಯವಿದೇನುರೀರಗಳೆಯ ಜೊತೆಯಲಿ ಷಟ್ಟದಿಕೀರ್ತನೆ ನೃತ್ಯವ ನೋಡಿರೀ ಶ್ರೀರಾಮನ ನಾಕು ಕನಸನು ಸಣ್ಣಕಥೆಯಲಿ ಹೇಳಿದ ಮಂಕುತಿಮ್ಮಮಲ್ಲಿಗೆ ಸಂಪಿಗೆ ಬಕುಲದ ಹೂಗಳುಅರಳಿವೆ ನೋಡು ಬಾರೊ ತಮ್ಮ ಕಾಂತಿಯಿಂದ ಹೊಳೆಯುವ ಬಹುವಿಧವಾಸ್ತಿಶಿಲ್ಪದ ಚಂದವುಕಣ್ಣೆದುರಿದ್ದರು ಕಾಣದಾಗಿದೆಕವಿದಿದೆ ಕಪ್ಪು ಮೋಡವು -ಡಾ. ಶಿವಕುಮಾರ್ ಆರ್ ಕನ್ನಡಉಸಿರುಸಿರಲಿ ಹೆಸರೆಸರಲಿಹೊಸೆದಿರಲಿ ಕನ್ನಡ.ಕಸುವಾಗಲಿ ಬೆಸಗೊಳ್ಳಲಿಜಸವಾಗಲಿ ಕನ್ನಡ. ಹಸಿರಸಿರ ಸಹ್ಯಾದ್ರಿಯೇಶಿಖರ ನಿನಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಡಿಜಿಟಲ್ ಯುಗದಲ್ಲಿ ಕನ್ನಡ ಮತ್ತು ಸೃಜನಶೀಲತೆ: ವಿಜಯ್ ದಾರಿಹೋಕ

ಸುಮಾರು ಏಳು ಸಾವಿರ ಕಿಲೋ ಮೀಟರ್ ದೂರದ ಸ್ವೀಡನ್ ನಿಂದ, ಬಾಳೆಕಾಯಿಯ ಹಲ್ವಾ ಮಾಡುವ ವಿಧಾನ ತಿಳಿಸುವಂತೆ ಅಮ್ಮನಿಗೆ ಕರೆ ಮಾಡಿದಾಗ ಆಕೆ, ಯು ಟ್ಯೂಬ್ ಗೆ ಹೋಗಿ ಭಟ್ ಎನ್ ಭಟ್ ಎನ್ನುವ ಚಾನ್ನೆಲ್ ಹುಡುಕಿ, ಅಲ್ಲಿ ಕೊಟ್ಟ ಅಡುಗೆ ವಿಡಿಯೋ ನೋಡಿ ಮಾಡು, ಚೆನ್ನಾಗಿರುತ್ತೆ ಅಂದು ಬಿಡಬೇಕೇ?. ಕೇವಲ ಒಂದು ಸ್ಮಾರ್ಟ್ ಫೋನ್ ಹಾಗೂ 4G ಯ ನೆಟ್ವರ್ಕ್ ಜೊತೆಗೆ ಅಮ್ಮ ಈಗ ಡಿಜಿಟೀಕರಣದ ತೆಕ್ಕೆಗೆ ಬಂದಿರುವ ಬಗ್ಗೆ ನನಗೆ ಸ್ಪಷ್ಟ ಸಂದೇಶ ಸಿಕ್ಕಿತು. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ದೇಶ ದೇಶಗಳ ಗಡಿಗಳ ಗೂಗಲ್ ನೋಟ: ಎಫ್. ಎಂ. ನಂದಗಾವ

ಪ್ರಭುತ್ವಕ್ಕೆ ತನ್ನ ಆಡಳಿತಕ್ಕೆ ಒಳಪಟ್ಟ ಪ್ರದೇಶದ ನಿಗದಿಗೆ ನಕಾಶೆ ಬೇಕು. ಊರುಗಳ, ಹೋಬಳಿಗಳ, ತಾಲ್ಲೂಕುಗಳ, ರಾಜ್ಯಗಳ, ರಾಷ್ಟ್ರಗಳ ನಕಾಶೆ ಎಂದಾಗ ಅವುಗಳ ಭೌಗೋಳಿಕ ವ್ಯಾಪ್ತಿ ನಿಗದಿಯಾಗಬೇಕು, ಆ ವ್ಯಾಪ್ತಿಯನ್ನು ನಿಗದಿ ಮಾಡುವುದು ಎಂದರೆ ಗಡಿ ಅಥವಾ ಎಲ್ಲೆಯನ್ನು ಗುರುತಿಸುವುದು. ಗಡಿ ಗೆರೆಯು ಅಥವಾ ಎಲ್ಲೆಯ ರೇಖೆಯು ಆಯಾ ಭೌಗೋಳಿಕ ಪ್ರದೇಶದ ವ್ಯಾಪ್ತಿಯನ್ನು ಗುರುತಿಸುವ ಗೆರೆ. ಇದು ದೇಶ ದೇಶಗಳ ನಡುವಣ ಲಕ್ಷö್ಮಣ ರೇಖೆ. ಪರವಾನಿಗೆ, ರಹದಾರಿ ದಾಖಲೆ (ಪಾಸ್ ಪೋರ್ಟ) ಇಲ್ಲದೇ ಈ ಕಡೆಯವರು ಆ ಕಡೆಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಗಾ ಸಾಹೇಬ..! : ಶರಣಗೌಡ ಬಿ ಪಾಟೀಲ ತಿಳಗೂಳ

ಅಂಚಿನ ಮನೀ ಚಂದ್ರಣ್ಣ ಬಿಸಿಲು ನಾಡಿನ ಕೊನೆಯಂಚಿನ ಹಳ್ಳಿಯವನು. ತಮ್ಮೂರ ಯಾವಾಗ ದೊಡ್ಡದಾಗ್ತಾದೋ ಏನೋ ಅಂತ ಆಗಾಗ ಚಿಂತೆ ಮಾಡತಿದ್ದ ಊರ ಕುದ್ಯಾ ಮಾಡಿ ಮುಲ್ಲಾ ಬಡು ಆದಂಗಾಯಿತು ಅಂತ ಹೆಂಡತಿ ಶಾಂತಾ ಮುಗ್ಳನಕ್ಕಿದ್ದಳು. ಇವನ ಹಳ್ಳಿ ಬಹಳ ಅಂದ್ರ ಬಹಳ ಸಣ್ಣದು ಬೆರಳಿನಿಂದ ಎಷ್ಟು ಬಾರಿ ಎಣಿಸಿದರೂ ಲೆಕ್ಕ ತಪ್ಪುತಿರಲಿಲ್ಲ ಹಳ್ಳಿಯಲ್ಲಿ ಹೆಚ್ಚಿಗೆ ಓದಿವರೂ ಇರಲಿಲ್ಲ ಕೆಲವರು ಹತ್ತನೇ ಒಳಗೇ ಓದು ಮುಗಿಸಿದರೆ ಇನ್ನೂ ಕೆಲವರು ಹೆಬ್ಬೆಟ್ಟೊತ್ತುವವರಾಗಿದ್ದರು. ಚಂದ್ರಣ್ಣ ಅತ್ತ ಅಕ್ಛರಸ್ತನೂ ಅಲ್ಲದೆ ಅನಕ್ಛರಸ್ತನೂ ಅಲ್ಲದೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮರಕುಟಿಗ ನೀಲಣ್ಣ: ಮಂಜಯ್ಯ ದೇವರಮನಿ, ಸಂಗಾಪುರ

ನಮ್ಮ ಊರಿನಲ್ಲಿ ಯಾರಾದರೂ ಬಲಶಾಲಿ ಇರುವನೋ ಎಂದು ಕೇಳಿದರೆ ನೀಲಣ್ಣನನ್ನು ತೋರಿಸಬೇಕು. ಆರು ಅಡಿ ಎತ್ತರದ ಗಟ್ಟಿಮುಟ್ಟಾದ ಶರೀರ, ಕಡುಕಪ್ಪ ಮೈಬಣ್ಣ, ತೆಲತುಂಬ ಕೂದಲು, ಗಡ್ಡ ಮೀಸೆ ಪೊಗರ್ದಸ್ತಾಗಿ ಬೆಳೆದಿವೆ. ಬಲಿಷ್ಠವಾದ ತೋಳುಗಳು, ಬಲತೊಳಿಗೆ ಅಜ್ಜಯ್ಯನ ತಾಯತ ಕಟ್ಟಿದ್ದಾನೆ. ಮೈಮೇಲೆ ಅಂಗಿ ಹಾಕಿದ್ದನ್ನು ನಾನೆಂದು ನೋಡಿಲ್ಲ. ಉಡಲಿಕ್ಕೆ ದಪ್ಪ ದಟ್ಟಿನ ಪಂಚೆ, ಹೆಗಲ ಮೇಲೆ ಅರಿತವಾದ ಕೊಡಲಿ ಇದು ನಮ್ಮೂರ ಮರಕುಟಿಗ ನೀಲಣ್ಣನ ಚಿತ್ರ. ನೀಲಣ್ಣ ವರಟನಾದರೂ ನಡೆನುಡಿಯಲ್ಲಿ ಅತ್ಯಂತ ವಿನಯಶಾಲಿ. ಮಗುವಿನಂತ ಮನಸ್ಸು. ಮಕ್ಕಳ ಅಂದರೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪುಟ್ಟ ಆರತಿ ಕೊಟ್ಟ ಮಣ್ಣಿನ ಕೇಕು: ಸವಿತಾ ಇನಾಮದಾರ್

‘ಮೇಡಂ, ಇಂದು ಆಫೀಸಿಗೆ ಹೋಗುವಾಗ FM ರೇಡಿಯೋದಲ್ಲಿ ನಿಮ್ಮ GST ಜಾಹಿರಾತು ಕೇಳಿದೆ ‘ ಅಂತ ಮೊನ್ನೆ ನನ್ನ ಪರಿಚಯದವರು ಫೋನ್ ಕಾಲ್ ಮಾಡಿ ಹೇಳಿದಾಗ ತುಂಬಾ ಖುಷಿ ಆಯಿತು. ಮೊದಲೆಲ್ಲ ‘ಇಂದಿನ ರೇಡಿಯೋ ಧಾರಾವಾಹಿ ತುಂಬಾ ಚೆನ್ನಾಗಿ ಮೂಡಿ ಬಂತು ಕಣೆ ‘ ಅಥವಾ ‘ ಮೇಡಂ, ಇಂದಿನ ನಿಮ್ಮ ಕವನ ವಾಚನ ಕೇಳಿ ಕಂಗಳು ತುಂಬಿ ಬಂದವು’ ಅಂತ ಸ್ನೇಹಿತರು, ಪರಿಚಯದವರು ಹೇಳುತ್ತಿದ್ದಾಗ ತುಂಬಾ ಖುಷಿ ಆಗುತ್ತಿತ್ತು. ಕೇಳುಗರ ಪ್ರತಿಕ್ರಿಯೆಗಳು ತುಂಬಾ ಮುಖ್ಯ. ಹದಿನೈದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪೀಗ: ಡಾ. ಶಿವಕುಮಾರ್‌ ಡಿ ಬಿ

ಪರ್ನಳ್ಳಿ ಗಂಗಪ್ಪ ಅಲಿಯಾಸ್ ಪೀಗ ತಂದೆಯ ಕಾರಣದಿಂದಾಗಿ ಸಮಾಜದ ನಿರ್ಲಕ್ಷಕ್ಕೆ ಗುರಿಯಾಗಿದ್ದ. ಈತನ ತಂದೆ ನಾಗಪ್ಪ ಕುಡುಕ. ಹೆಂಡತಿ ಮಕ್ಕಳ ಮೇಲೆ ಒಂದು ಚೂರು ಜವಾಬ್ದಾರಿ ಇಲ್ಲದವ, ಊರಿನ ಯಾವುದೋ ಒಂದು ಜಗಳದಲ್ಲಿ ಕಾಲಿಗೆ ಗಾಯ ಅದು ಗ್ಯಾಂಗ್ರಿನ್ ಆಗಿ ಗುಣಪಡಿಸಲಾಗದೆ ಸತ್ತ. ಈ ನಾಗಪ್ಪನಿಗೆ ಹುಟ್ಟಿದವರು ಮೂರು ಜನ ಗಂಡು ಮಕ್ಕಳು. ಮೂರು ಜನರ ಶಿಕ್ಷಣ ಬಾಲ್ಯದಲ್ಲಿಯೇ ಮೊಟಕಾಯಿತು. ತಾಯಿಯ ಮಾತನ್ನು ಕೇಳದ ಈ ಮೂವರು ಐದು, ಆರರವರೆಗೂ ಶಾಲೆಯಲ್ಲಿ ಕಲಿಯಲಿಲ್ಲ. ಹೊಲ ಗದ್ದೆ ಬಯಲುಗಳಲ್ಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕರ್ಮ……..: ರೂಪ ಮಂಜುನಾಥ

“ಥೂ ಬೋ…. ಮಕ್ಳಾ! ಹರಾಮ್ ಚೋರ್ಗುಳಾ? ಕೆಲ್ಸಕ್ ಬಂದು ಬೆಳ್ಬೆಳಗ್ಗೇನೇ ಏನ್ರೋ ನಿಮ್ ಮಾತುಕತೆ ಕಂಬಕ್ತ್ ಗುಳಾ!ಇರಿ ಇರಿ ನಿಮ್ಗೆ ಹೀಗ್ ಮಾಡುದ್ರಾಗಲ್ಲ. ಸರ್ಯಾಗ್ ಆಪಿಡ್ತೀನಿ ಇವತ್ತಿಂದ ನೀವ್ ಮಾಡೊ ದರಿದ್ರದ ಕೆಲಸಕ್ಕೆ ನಿಮ್ ಕೂಲಿ ಐವತ್ತು ರೂಪಾಯಿ ಅಷ್ಟೆ. ಬೇಕಾದ್ರೆ ಇರಿ. ಇಲ್ದೋದ್ರೆ, ನಿಮ್ಗೆಲ್ಲಿ ಬೇಕೋ ಅಲ್ಲಿ ನೆಗೆದ್ಬಿದ್ದು ಸಾಯ್ರೀ”, ಅಂದು ಮಂಡಿಯೂರಿ ಕೂತು ಬಾರ್ ಬೆಂಡಿಂಗ್ ಮಾಡುತ್ತಿದ್ದ ಕೆಲಸದವರು ಭುವನ್ ಮತ್ತೆ ಅಮೋಲ್ ನನ್ನ ಮಾಲೀಕ ಬಿಪುಲ್ ತನ್ನ ಬೂಟು ಕಾಲಿನಿಂದ ಒದ್ದು, ಇಬ್ಬರ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ಉತ್ತರ ದಶಶಿರನಹಂಕಾರ ಮುರಿದು ಮಣ್ಣಾಗುವ ಘಳಿಗೆಹೆಬ್ಬಾಣವ ಹೂಡಿ ರಾಘವನು ಹೂಂಕರಿಸಿದ ಪರಿಗೆಅಂತರಿಕ್ಷ ಈಗ ಅಕ್ಷರಶಃ ಸ್ತಬ್ಧಮಂಡೋದರಿಯ ಎದೆಯಲನಲ ಅಬ್ಬರಿಸಿ ದಗ್ದ… ಜನಕನಂಗಳದಲಿ ಏಕೋ ನರಳುತಿದೆ ಪಾರಿಜಾತನಡೆಯುವದ ನೆನೆಸಿ ನಡುಗಿದನೆ ಆ ಜಾತವೇದ?ಮೌನವಾಗಿದೆ ಅಂಬುಧಿ ಅಂಬುಗಳ ಒಳಗಿಳಿಸಿಮೂಡಣದ ಕಣ್ಣಂಚ ಹನಿ ಎದೆಯಾಳಕಿಳಿಸಿ…. ಅದೋ ಉರುಳಿದೆ ವಿಪ್ರ ಶ್ರೇಷ್ಠನ ಶೀರ್ಷಒಂದಲ್ಲ ಎರಡಲ್ಲ ಸರಿಯಾಗಿ ಹತ್ತುಹರಿತ ರಾಮನ ಶರಕೆ ಶರಣಾದ ರಾವಣನಇಪ್ಪತ್ತು ಕಣ್ಣುಗಳಲ್ಲೂ ಗತ್ತೋ ಗತ್ತು…. ಮೆಲ್ಲ ಮೆಲ್ಲನೆ ಅಡಿಯಿಟ್ಟು ಬಂದಳಾ ಸುಮಬಾಲೆಕಣ್ಣಲ್ಲಿ ನೂರಾರು ಹೊಂಗನಸ ಮಾಲೆನಗುಮುಖದ ಒಡೆಯ ಎದುರುಗೊಳ್ಳಲೆ ಇಲ್ಲತೋಳ್ತೆರೆದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ದೇಶದಲ್ಲಿ ಅಭಿವೃದ್ಧಿಯಾಗಬೇಕಾದ ಶಿಕ್ಷಣ ವ್ಯವಸ್ಥೆ”: ವಿದ್ಯಾಶ್ರೀ ಭಗವಂತಗೌಡ್ರ

ಮಾನವನ ಮೂಲಭೂತ ಸೌಕರ್ಯಗಳಾದ ಗಾಳಿ, ನೀರು, ಆಹಾರ, ವಸತಿ ಜೊತೆಗೆ ಶಿಕ್ಷಣವೂ ಒಂದು ಎಂದರೆ ತಪ್ಪಾಗಲಾರದು. ಅನಾದಿ ಕಾಲದಿಂದಲೂ ವಿದ್ಯೆಗೆ ಮಹತ್ವದ ಸ್ಥಾನವಿದೆ. “ವಿದ್ಯೆ ಇರುವವನ ಮುಖವು ಮುದ್ದು ಬರುವಂತಿಕ್ಕು, ವಿದ್ಯೆ ಇಲ್ಲದವನ ಬರಿ ಮುಖವು ಹಾಳೂರು ಹದ್ದಿನಂತಿಕ್ಕು “ಎಂಬ ಸರ್ವಜ್ಞ ನ ಮಾತು ಇಂದಿಗೂ ಪ್ರಸ್ತುತ. ದೇಶ ୭೬ ನೇ ಸ್ವಾತಂತ್ರ ದಿನದ ಹೊಸ್ತಿಲಲ್ಲಿದೆ. ಆದರೆ ಬಡತನ, ನಿರುದ್ಯೋಗ, ಹಸಿವು, ಅನಕ್ಷರತೆ ಇನ್ನೂ ದೇಶದಿಂದ ತೊಲಗಿಲ್ಲ. ದೇಶದ ಹಲವಾರು ಸಮಸ್ಯೆಗಳಿಗೆ ಶಿಕ್ಷಣ ಮದ್ದಾಗಬಲ್ಲದು. “ಮನೆಯೇ ಮೊದಲ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅಂಡೇ ಪಿರ್ಕಿ ಅಮೀರ..: ಶರಣಬಸವ. ಕೆ.ಗುಡದಿನ್ನಿ

ದೋ ಅಂತ ಮೂರಾ ಮುಂಜಾನಿಯಿಂದ ಬಿಡ್ಲಾರದ ಸುರಿಯೋ ಮಳ್ಯಾಗ ಅವನ್ಗೀ ಎಲ್ಲಿ ನಿಂತ್ಕಂಡು ಚೂರು ಸುಧಾರಿಸ್ಕೆಳ್ಳಬೌದೆಂಬ ಅಂದಾಜು ಹತ್ಲಿಲ್ಲ. ಹಂಗಾ ನೆಟ್ಟಗ ನಡದ್ರ ಪೂಜಾರಿ ನಿಂಗಪ್ಪನ ಮನೀ ಅದರ ಎಡಕ್ಕಿರದೇ ಅಮೀರನ ತೊಟಗು ಮನಿಯಂಗ ಕಾಣೊ ತಗ್ಡಿನ ಶೆಡ್ಡು. ಗಂವ್ವೆನ್ನುವ ಇಂತಾ ಅಪರಾತ್ರ್ಯಾಗ ಅಮೀರನೆಂಬೋ ಆಸಾಮಿ ಹಿಂಗ್ ಅಬ್ಬೇಪಾರಿಯಂಗ ಓಣಿ ಓಣ್ಯಾಗ ತಿರಗಾಕ ಅವ್ನ ಹಾಳ ಹಣೀಬರ ಮತ್ಯಾ ಮಾಡ್ಕೆಂಡ ಕರುಮಾನ ಕಾರಣ ! ಅವ್ನ ಹೇಣ್ತೀ ನೂರಾನಿ ರಾತ್ರ್ಯಾಗಿಂದ ಒಂದ್ಯಾ ಸವನ ಹೆರಿಗಿ ಬ್ಯಾನಿ ಅಂತ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಾನ್ಸೀ. . . : ಗೀತಾ ನಾಗರಾಜ.

ಮುಗ್ಧ ಮಾನ್ಸಿ ಗೆ ಸಿಕ್ಕ ಮಹಾ ಒರಟು ಗಂಡ ಪರೀಕ್ಷಿತ್.ಅವನ ಒರಟುತನಕ್ಕೆ ಬೇಸತ್ತು ಹೋಗಿದ್ದರೂ ಹೇಗೋ ಸಂಸಾರವನ್ನು ನಿಭಾಯಿಸಲೇ ಬೇಕಾದ ಅನಿವಾರ್ಯತೆ ಅವಳಿಗೆ. ಅಣ್ಣ ಸಂಪ್ರೀತನಿಗೆ ಅವಳೆಂದ್ರೆ ಪ್ರಾಣ.ಡಬಲ್ ಡಿಗ್ರಿ ಮಾಡಿದ್ದ. ತುಂಬಾ ನೇ ಇಂಟಲಿಜೆಂಟ್.ಪರಸ್ಪರ ಸದಾಕಾಲ ಇಬ್ಬರೂ ಕಷ್ಟ – ಸುಖಗಳನ್ನು ಹಂಚಿಕೊಳ್ಳುತ್ತಾರೆ.ಇದೊಂದೆ ಅವರ ಮನ ತೃಪ್ತಿಹೊಂದುವ ಆಯಾಮವಾಗಿತ್ತು. ಹೀಗೇ, ಕೆಲ ದಿನಗಳ ನಂತರ ಸಂಪ್ರೀತನಿಗೆ ಅವನದೇ ಕಂಪನಿಯ ಸ್ಟೆನೋ ಕನಕಳ ಪರಿಚಯವಾಗುತ್ತದೆ.ಪರಿಚಯ ಪ್ರೀತಿಯಾಗಿ, ಪ್ರೀತಿ ಪ್ರೆಮವಾಗಿ, ಒಂದು ಹದಕ್ಕೆ ಬಂದಾಗ,ಅವನೇ “ಮಾನ್ಸಿ ನಾನೊಂದು ಹುಡಗೀನ್ನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ನನ್ನವ್ವ ಬೆವರುತ್ತಾಳೆ. . . . . . ಕೆಂಡ ಕಾರುವರಣ ಭೀಕರ ಬಿಸಿಲನ್ನು ತಲೆಗೆ ಸುತ್ತಿಕೊಂಡುಮಾಸಿದ ಸೀರೆಯಜೋಳಿಗೆಯಲಿ ಬೆತ್ತಲೆ ಮಗುವ ಮಲಗಿಸಿಜಗದ ಹೊಟ್ಟೆ ತುಂಬಿಸಲೆಂದುಭತ್ತ ನಾಟಿ ಮಾಡುವಾಗನನ್ನವ್ವ ಬೆವರುತ್ತಾಳೆಮಂಜುನಾಥನ ಮಾತಾಡಿಸಲುಮಾರಿಕಾಂಬೆಯ ಮುಂದೆ ಸೆರಗೊಡ್ಡಲುಚಾಮುಂಡಿಯ ಕಾಲುಗಳಲಿ ಬಿಕ್ಕಳಿಸಲುಮಹಾನಗರದ ಗಗನಚುಂಬಿ ಕಟ್ಟಡದಬುಡದ ಸಂದಿಯಲಿಉಸಿರಾಡಲು ಕಷ್ಟ ಪಡುತಿರುವಕರುಳ ಬಳ್ಳಿಯ ಬೆನ್ನ ಸವರಲೆಂದುತಿರುಗಾಡುವಾಗನನ್ನವ್ವ ಬೆವರುತ್ತಾಳೆತುಂಡು ಬ್ರೆಡ್ಡುಅರ್ಧ ಕಪ್ಪು ಹಾಲು ಕೊಟ್ಟುಪತ್ರಿಕೆಯಲಿ ಫೋಟೋ ಹಾಕಿಸಿಕೊಳ್ಳುವತೆರಿಗೆಗಳ್ಳರ ದುಡ್ಡಿನಲಿ ಮಾಡುವಸಮಾನತೆಯ ಕಾರ್ಯಕ್ರಮದಊಟದ ಮನೆಯಲಿಕಸ ಹೊಡೆಯುವಾಗನನ್ನವ್ವ ಬೆವರುತ್ತಾಳೆಒಂಟಿ ಚಪ್ಪಲಿಯನ್ನು ಬೀದಿಯಲಿಬಿಸಾಕುವಂತೆಬಿಟ್ಟು ಹೋದವರಮನೆ ಮುರಿಯದೆಮೂಕ ಪರದೆಗಳಹಿಂದೆ ತುಟಿ ಕಚ್ಚಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ