ಬೈಸಿಕಲ್ ಥೀವ್ಸ್ ವಿಮರ್ಶೆ: ಕಿರಣ್ ಕುಮಾರ್ ಡಿ

‘ಬೈಸಿಕಲ್ ಥೀವ್ಸ್’ ೧೯೪೮ರಲ್ಲಿ ಇಟಾಲಿಯನ್ ಭಾಷೆಯಲ್ಲಿ ತೆರೆಕಂಡ ಚಲನಚಿತ್ರ. ಇಟಾಲಿಯಲ್ಲಿ “ಲಾದ್ರಿ ದಿ ಬೈಸಿಕ್ಲೆಟ್” ಹೆಸರಿನಲ್ಲಿ ತೆರೆಕಂಡಿತು. ಚಲನಚಿತ್ರದ ಕಥೆಯನ್ನು ಸಿಸೇರ್ ಜವಟ್ಟಿನಿಯವರು ೧೯೪೬ರಲ್ಲಿ ಪ್ರಕಟಗೊಂಡ “ಲಾದ್ರಿ ದಿ ಬೈಸಿಕ್ಲೆಟ್” ಕಾದಂಬರಿಯಿಂದ ಅಳವಡಿಸಿಕೊಂಡು ಬರೆದಿದ್ದಾರೆ. ಈ ಚಲನಚಿತ್ರವನ್ನು ವಿಟ್ಟೋರಿಯಾ ಡಿ ಸಿಕಾ ಅವರು ನಿರ್ದೇಶಿಸಿದ್ದಾರೆ. ಈ ಚಲನಚಿತ್ರ ೨ನೇ ವಿಶ್ವಯುದ್ಧದ ನಂತರ ತೆರೆಕಂಡಿದ್ದು. ೨ನೇ ವಿಶ್ವಯುದ್ಧ ಮುಗಿದ ಮೇಲೆ ಇಟಾಲಿಯಲ್ಲಿ ಎದುರಾದ ಉದ್ಯೋಗದ ಸಮಸ್ಯೆಯನ್ನು ಮತ್ತು ಬಡತನವನ್ನು ಹಲವಾರು ಪಾತ್ರದ ಮೂಲಕ ಹೇಳುತ್ತದೆ ಈ ಚಲನಚಿತ್ರ.

ಚಲನಚಿತ್ರದ ಕಥೆ :- ಬಸ್ಸಿನಲ್ಲಿ ಬರುವ ಒಬ್ಬ ಅಧಿಕಾರಿಯ ಸುತ್ತ ಅಲ್ಲಿರುವ ಜನ ಮುತ್ತಿಕೊಳ್ಳುತ್ತಾರೆ. ಅ ಅಧಿಕಾರಿ ಅಲ್ಲಿಗೆ ಬಂದು ೨ ವಾರವಾಯಿತು ಎಂದು ಹೇಳುತಾ ರಿಚಿ ರಿಚಿ ಎಂದು ಕೂಗುತ್ತಾನೆ. ರಿಚಿಯ ಸ್ನೇಹಿತ ನೀನು ಕಿವುಡನ ಅಂತ ಹೇಳಿ, ಅವನನ್ನು ಕರೆದುಕೊಂಡು ಹೋಗುತ್ತಾನೆ.ಇಟ್ಟಿಗೆ ಕೆಲಸ ಮಾಡುವವನು ಆ ಅಧಿಕಾರಿಗೆ, ನಾನು ಹಸಿವಿನಿಂದ ಸಾಯಬೇಕೆ? ಎಂದು ಅಧಿಕಾರಿಗೆ ಕೇಳುತ್ತಾನೆ. ಅಧಿಕಾರಿಯು ಕ್ಷಮಿಸಿ ನನ್ನ ಕೈಯಲ್ಲಿ ಏನು ಮಾಡೋಕೆ ಆಗುತ್ತಿಲ್ಲ, ಸಮಾಧಾನದಿಂದ ಇರಿ ನಾವು ಪ್ರಯತ್ನಿಸುತ್ತೇವೆ ಮತ್ತು ನಿಮ್ಮೆಲ್ಲರಿಗೂ ಕೆಲಸ ಒದಗಿಸಲಾಗುತ್ತದೆ ಎಂದು ಹೇಳುತ್ತಾರೆ. ಅಧಿಕಾರಿ, ರಿಚಿಗೆ ನಿನಗೆ ಕೆಲಸ ಸಿಕ್ಕಿದೆ ಎಂದು ಹೇಳುತ್ತಾನೆ. ರಿಚಿ ಯಾವ ಕೆಲಸ ಎಂದಾಗ ಅಧಿಕಾರಿ ಭಿತ್ತಿಚಿತ್ರವನ್ನು ಅಂಟಿಸುವ ಕೆಲಸ ಎಂದು ಹೇಳಿದ. ರಿಚಿಗೆ ಅಧಿಕಾರಿ ಪತ್ರಗಳನ್ನು ನೀಡಿ, ಅಲ್ಲಿಗೆ ಹೋಗಿ ನಿನ್ನ ಉದ್ಯೋಗದ ಕಾಗದ ಪಡೆದುಕೂ ಎಂದ. ಅಲ್ಲಿದ್ದ ಜನ ನಮ್ಮಗೆ ಕೆಲಸ ಎಂದಾಗ ಅಲ್ಲಿ ಸಲ್ಪ ಸಮಯ ಅವರುಗಳ ಮಧ್ಯೆ ಸಂಭಾಷಣೆ ನೆಡೆಯುತ್ತದೆ. ಅಧಿಕಾರಿ ರಿಚಿಗೆ ಸೈಕಲ್ ತೆಗೆದುಕೊಂಡು ಹೋಗಲು ಹೇಳುತ್ತಾನೆ. ರಿಚಿ ನನ್ನ ಬಳಿ ಸೈಕಲ್ ಇಲ್ಲ ಎಂದಾಗ ಅಲ್ಲಿದ್ದ ಕೆಲವರು ನಮ್ಮ ಬಳಿ ಸೈಕಲ್ ಇದೆ ಎನ್ನುತ್ತಾರೆ, ಆದರೆ ಅಧಿಕಾರಿ ಒಪ್ಪುವುದಿಲ್ಲ ಮತ್ತು ರಿಚಿಗೆ ಸೈಕಲ್ ಇದ್ದರೆ ಕೆಲಸ ಇಲ್ಲ ಅಂದ್ರೆ ಕೆಲಸ ಇಲ್ಲ ಎಂದು ಹೇಳುತ್ತಾನೆ. ರಿಚಿ ಸೈಕಲ್ ಇದೆ ಎಂದು ಅಲ್ಲಿಂದ ತೆರಳುತ್ತಾನೆ.

ರಿಚಿ ತನ್ನ ಹೆಂಡತಿಯ ಬಳಿ ಹೋಗಿ ನನಗೆ ಕೆಲಸ ಸಿಕ್ಕಿದೆ ಆದರೆ ಆ ಕೆಲಸ ಪಡೆಯಲು ನಮ್ಮಿಂದ ಸಾಧ್ಯವಿಲ್ಲ ಎಂದು ಹೇಳುತ್ತಾನೆ. ಹೆಂಡತಿ ಹೇಕೆ ಎಂದು ಕೇಳುತ್ತಾಳೆ. ರಿಚಿ ಸೈಕಲ್ ಇಲ್ಲದೆ ಕೆಲಸವಿಲ್ಲ ಎಂದು ಹೇಳಿದ. ಗಂಡ ಹೆಂಡತಿಯ ನಡುವೆ ಸ್ವಲ್ಪ ಮಾತುಕತೆ ನಡೆದ ನಂತರ, ರಿಚಿ ಹೆಂಡತಿ ಮರಿಯಾ ತನ್ನ ಗಂಡನಿಗೆ ಸೈಕಲ್ ಕೊಡಿಸಲು ಒಪ್ಪಿಕೊಂಡಳು. ಮರಿಯಾ ಮನೆಯಲ್ಲಿದ್ದ ಹೊದಿಕೆಗಳನ್ನು ಮಾರಿ ಸೈಕಲ್ ಕೊಡಿಸಿದಳು ತನ್ನ ಗಂಡನಿಗೆ. ಸೈಕಲ್ ತೆಗೆದುಕೊಂಡು ರಿಚಿ ಕೆಲಸಕ್ಕೆ ಸೇರುತ್ತಾನೆ. ಕೆಲಸದ ಮೊದಲ ದಿನವೇ ಸೈಕಲ್ ಕಳೆದುಕೊಳ್ಳುತ್ತಾನೆ ರಿಚಿ. ನಂತರ ತನ್ನ ಮಗನೊಂದಿಗೆ ಸೇರಿ ಸೈಕಲ್ ಹುಡುಕಲು ರಿಚಿ ತೆರಳುತ್ತಾನೆ. ಸೈಕಲ್ ಸಿಗುತ್ತಾ ಇಲ್ಲ ಎಂಬುದೇ ಈ ಚಲನಚಿತ್ರದ ಕಥೆ.

ಚಲನಚಿತ್ರದ ವಿಮರ್ಶೆ :- ‘ಬೈಸಿಕಲ್ ಥೀವ್ಸ್’ ೨ನೇ ಜಾಗತಿಕ ಮಹಾಯುದ್ಧ ಮುಗಿದ ನಂತರ ಇಟಾಲಿಯಲ್ಲಿ ಎದುರಾಗುವ ಬಡತನ ಮತ್ತು ಉದ್ಯೋಗದ ಸಮಸ್ಯೆಯನ್ನು ವಿಸ್ತಾರವಾಗಿ ಹೇಳುವ ಚಲನಚಿತ್ರವಾಗಿದೆ. ರಿಚಿ ಎಂಬ ವ್ಯಕ್ತಿ ಕೆಲಸಕ್ಕೆ ಅರ್ಜಿ ಸಲ್ಲಿಸಿರುತ್ತಾನೆ. ರಿಚಿಗೆ ಕೆಲಸ ದೊರೆಯುತ್ತದೆ ಒಂದು ಷರತ್ತಿನ ಆಧಾರದ ಮೇಲೆ ಅದುವೆ ಸೈಕಲ್ ಇರಬೇಕು ಅಂತ. ರಿಚಿ ಹೆಂಡತಿ ಸೈಕಲ್ ಅನ್ನು ರಿಚಿಗೆ ಕೊಡಿಸುತ್ತಾಳೆ. ರಿಚಿ ಕೆಲಸಕ್ಕೆ ಸೇರಿದ ದಿನವೇ ತನ್ನ ಸೈಕಲ್ ಕಳೆದುಕೊಂಡು, ಸೈಕಲ್ ಹುಡುಕಲು ಬಹಳ ಕಷ್ಟ ಪಡುತ್ತಾನೆ. ಕೊನೆಗೆ ಸೈಕಲ್ ಸಿಗದೆ ಹತಾಶನಾಗಿ ಮನೆಗೆ ಹೋಗುವ ದೃಶ್ಯದೊಂದಿಗೆ ಚಲನಚಿತ್ರ ಮುಗಿಯುತ್ತದೆ.

ಚಲನಚಿತ್ರದ ದೃಶ್ಯಗಳ ಮೂಲಕ ನಿರ್ದೇಶಕ ನಮಗೆ ಏನು ಹೇಳುತ್ತಿದ್ದಾರೆ ನೋಡೋಣ ಬನ್ನಿ

 1. ಅಧಿಕಾರಿ ಮತ್ತು ಜನಗಳ ನಡುವಿನ ಮಾತುಕತೆ ದೃಶ್ಯ :- ಚಲನಚಿತ್ರದ ಪ್ರಾರಂಭದ ೩ನಿಮಿಷಗಳು ನಿರುದ್ಯೋಗಿಗಳ ಸಮಸ್ಯೆಯನ್ನು ಹೇಳುವ ದೃಶ್ಯ. ಒಬ್ಬ ಅಧಿಕಾರಿಯ ಸುತ್ತ ನಿಲುವ ಜನ ತಾವು ಕೆಲಸಕ್ಕೆ ಹಾಕಿದ ಅರ್ಜಿಯ ಸ್ಥಿತಿಯನ್ನು ಕೇಳುತ್ತಿದ್ದರು. ಅಧಿಕಾರಿ ರಿಚಿಯ ಹೆಸರನ್ನು ಕೊಗುತ್ತನೆ ಮತ್ತು ಅವನಿಗೆ ಹೇಳಿದ ನಿನಗೆ ಕೆಲಸ ಸಿಕ್ಕಿದೆ, ಸೈಕಲ್ ತೆಗೆದುಕೊಂಡು ಕೆಲಸಕ್ಕೆ ಹೋಗು ಅಂದ. ರಿಚಿ ಸೈಕಲ್ ಇಲ್ಲ ಸ್ವಲ್ಪ ದಿನ ನೆಡೆದುಕೊಂಡೆ ಹೋಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ. ಅಧಿಕಾರಿ ಸೈಕಲ್ ಇದ್ದರೆ ಕೆಲಸ ಅಂದಾಗ ಅಲ್ಲಿದ ಜನ ನನ್ನ ಬಳಿ ಸೈಕಲ್ ಇದೆ ಎಂದು ಹೇಳುತ್ತಾರೆ. ರಿಚಿ ನನ್ನ ಬಳಿ ಸೈಕಲ್ ಇದೆ ಎಂದು ಹೇಳಿ ಅಲ್ಲಿಂದ ತೆರಳುತ್ತಾನೆ. ಈ ದೃಶ್ಯದಿಂದ ನಾವು ತಿಳಿಯಬಹುದು ನಮಗೆ ಉದ್ಯೋಗವು ಎಷ್ಟು ಮುಖ್ಯ ಎಂದು.
 2. ನೀರಿಗಾಗಿ ಸರತಿ ಸಾಲಿನಲ್ಲಿ ಕಾಯುತ್ತಿರುವ ಮಹಿಳೆಯರ ದೃಶ್ಯ :- ರಿಚಿ ತನ್ನ ಹೆಂಡತಿ ಬಳಿ ಕೆಲಸದ ವಿಷಯವನ್ನು ಹೇಳಲು ಬರುತ್ತಾನೆ. ರಿಚಿ ಹೆಂಡತಿ ಮರಿಯಾ ಮನೆಗಾಗಿ ನೀರನ್ನು ಹಿಡಿಯುತ್ತಿದ್ದಾಳೆ. ರಿಚಿ ತನ್ನ ಹೆಂಡತಿಗೆ ಕೆಲಸ ಸಿಕ್ಕಿದೆ ಆದರೆ ಆ ಕೆಲಸ ಪಡೆಯಲು ಓಂದು ಸೈಕಲ್ ಬೇಕು ಎಂದು ಹೇಳಿದ. ಮರಿಯಾ ನೀನು ಸೈಕಲ್ ಅನ್ನು ಗಿರವಿ ಹಿಡ ಬಾರದಿತ್ತು ಎಂದಳು. ರಿಚಿ ಅದಕ್ಕೆ ನಾವು ಹಸಿವಿನಿಂದ ಸಾಯಬೇಕೆ ಅದಕ್ಕೆ ಗಿರವಿ ಇಟ್ಟೆ ಎಂದು ಹೇಳುತ್ತಾನೆ. ಮರಿಯಾ ಮನೆಯಲ್ಲಿದ್ದ ಹೊದಿಕೆಗಳನ್ನು ಒಗೆಯಲು ಶುರುಮಾಡುತ್ತಾಳೆ. ಈ ದೃಶ್ಯ ನಮಗೆ ನೀರು ಮತ್ತು ಆಹಾರ ಎಷ್ಟು ಮುಖ್ಯ ಎಂದು ಹೇಳುತ್ತದೆ.
 3. ಸೈಕಲ್ ಅನ್ನು ಬಿಡಿಸಲು ಹೊದಿಕೆಗಳನ್ನು ಗಿರವಿ ಇಡುವ ದೃಶ್ಯ:- ಮರಿಯಾ ಹೊದಿಕೆಗಳನ್ನು ಗಿರಿವಿ ಇಡಲು ತನ್ನ ಗಂಡನೊಂದಿಗೆ ಬರುತ್ತಾಳೆ. ಗಿರವಿದಾರ ಒಂದು ಮೊತ್ತವನ್ನು ಹೇಳಿದ, ಅದಕ್ಕೆ ಮರಿಯಾ ಏರಡು ಹೊದಿಕೆಗಳು ಹೊಸದು ಮೂರು ಹಳೆಯದು ಎಂದು ಹೇಳಿ ಸ್ವಲ್ಪ ಜಾಸ್ತಿ ದುಡ್ಡು ಕೊಡಿ ಹೇಂದಳು. ೭೫೦೦ ದುಡ್ಡು ಪಡೆದ ಮರಿಯಾ ತನ್ನ ಗಂಡನಿಗೆ ಕೊಟ್ಟಳು. ರಿಚಿ ೬೦೦೦ ನೀಡಿ ತನ್ನ ಸೈಕಲ್ ಹಿಂಪಡೆದ. ಈ ದೃಶ್ಯದಿಂದ ನಾವು ನಮ್ಮ ಮನೆಯಲ್ಲಿರುವ ವಸ್ತುಗಳನ್ನು ಕಷ್ಟ ಕಾಲದಲ್ಲಿ ಗಿರವಿ ಅಥವಾ ಮಾರುತ್ತೇವೆ ಎಂಬುದನ್ನು ತಿಳಿಯಬಹುದು.
 4. ರಿಚಿ ಕೆಲಸಕ್ಕೆ ಸೇರುವ ದೃಶ್ಯ :- ಸೈಕಲ್ ತೆಗೆದುಕೊಂಡು ರಿಚಿ ತನಗೆ ಕೆಲಸ ನೀಡುವ ಕಛೇರಿಗೆ ತೆರಳುತ್ತಾನೆ. ರಿಚಿಗೆ ನಾಳೆಯಿಂದ ಕೆಲಸಕ್ಕೆ ಬರುವಂತೆ ಸೂಚಿಸಲಾಯಿತು. ರಿಚಿ ಬಹಳ ಸಂತೋಷದಿಂದ ತನ್ನ ಹೆಂಡತಿ ಬಳಿ ಬಂದು ತನಗೆ ಕೆಲಸ ಸಿಕ್ಕಿದೆ ಎಂದು ಹೇಳಿದ. ತನ್ನಗೆ ಹೊಸ ಬೂಟುಗಳು, ೬೦೦೦ ಸಂಬಳ ಮತ್ತು ಪ್ರತ್ಯೇಕ ಕೊಠಡಿ ನೀಡುತ್ತಾರೆ ಎಂದು ಹೇಳುತ್ತಾ ತನ್ನ ಹೆಂಡತಿಯನ್ನು ಸೈಕಲ್ ಮೇಲೆ ಕೂರಿಸಿಕೊಂಡು ಮನೆಗೆ ತೆರಳುತ್ತಾನೆ. ಈ ದೃಶ್ಯದಲ್ಲಿ ನಾವು ಒಬ್ಬ ಮನುಷ್ಯನಿಗೆ ಉದ್ಯೋಗ ದೊರೆತರೆ ಆಗುವ ಸಂತೋಷವನ್ನು ಕಾಣಬಹುದು.
 5. ಕಾಲಜ್ಞಾನಿಯನ್ನು ಬೇಟಿ ಮಾಡುವ ದೃಶ್ಯ :- ಮನೆಗೆ ಹೋಗುವ ದಾರಿಯಲ್ಲಿ ಮರಿಯಾ ಸೈಕಲ್ ನಿಲ್ಲಿಸಲು ಹೇಳುತ್ತಾಳೆ ತನ್ನ ಗಂಡನಿಗೆ. ರಿಚಿಗೆ ಇಲ್ಲಿಯೇ ಇರು ಎಂದು ಹೇಳಿ, ಮರಿಯಾ ಕಟ್ಟಡದ ಒಳಗಡೆ ಹೋದಳು. ಸ್ವಲ್ಪ ಸಮಯದ ನಂತರ ರಿಚಿ ತನ್ನ ಸೈಕಲ್ ನೋಡಿಕೊಳ್ಳುವಂತೆ ಒಬ್ಬ ಹುಡುಗನಿಗೆ ಹೇಳಿ ಕಟ್ಟಡದ ಒಳಗಡೆ ಹೋಗುತ್ತಾನೆ. ಅಲ್ಲಿ ತನ್ನ ಹೆಂಡತಿ ೫೦ ಇಟಾಲಿಯ ಹಣ ನೀಡಿ ಒಬ್ಬ ಮಹಿಳೆಯ ಹತ್ತಿರ ಭವಿಷ್ಯ ಕೆಳುತ್ತಿದ್ದಾಳೆ ಎಂದು ತಿಳಿದನು. ರಿಚಿ ಮರಿಯಾಗೆ ಎರಡು ಮಕ್ಕಳ ತಾಯಿ ನೀನು, ಈ ಸುಳ್ಳು ಭವಿಷ್ಯವನ್ನು ನಂಬುತ್ತೀಯಾ ಎಂದು ಅವಳಿಗೆ ಹೇಳಿ ಮನೆಗೆ ಇಬ್ಬರು ಸೈಕಲ್ ಮೂಲಕ ತೆರಳುತ್ತಾರೆ. ಈ ದೃಶ್ಯದಿಂದ ನಾವು ಜನರ ಭಾವನೆಗಳನ್ನು ಮತ್ತು ಮೂಢನಂಬಿಕೆಗಳನ್ನು ತಿಳಿಯಬಹುದು.
 6. ರಿಚಿ ಮತ್ತು ತನ್ನ ಮಗ ಕೆಲಸಕ್ಕೆ ಹೋಗುವ ದೃಶ್ಯ :- ಮುಂದಿನ ದಿನದ ಬೆಳ್ಳಗೆ ರಿಚಿಯ ಮಗ ಬ್ರುನೂ ಸೈಕಲ್ ಅನ್ನು ಸ್ವಚ್ಛ ಮಾಡುತ್ತಾನೆ. ಅಪ್ಪ ಮತ್ತು ಮಗ ಕೆಲಸಕ್ಕೆ ಹೋಗಲು ಸಿದ್ಧರಾಗುತ್ತರೆ. ಬ್ರುನೋ ತನ್ನ ಚಿಕ್ಕ ಸಹೋದರನಿಗೆ ಚಳಿಯಾಗದಂತೆ ಕಿಟ್ಟಕಿ ಮುಚ್ಚುತ್ತಾನೆ. ಮರಿಯಾ ಇಬ್ಬರಿಗೂ ಅಡುಗೆ ಮಾಡಿ ಅವರನ್ನು ಕೆಲಸಕ್ಕೆ ಕಳಿಸುತ್ತಾಳೆ. ರಿಚಿ ತನ್ನ ಮಗ ಕೆಲಸ ಮಾಡುವ ಪೆಟ್ರೋಲ್ ಬಂಕ್ ಹತ್ತಿರ ಬಿಟ್ಟು ತನ್ನ ಕೆಲಸಕ್ಕೆ ತೆರಳುತ್ತಾನೆ. ರಿಚಿ ಸಂಜೆ ಬರುತ್ತೇನೆ ಇಲ್ಲಿಯೇ ಇರು ಅಂತ ಹೇಳುತ್ತಾನೆ ತನ್ನ ಮಗನಿಗೆ. ಈ ದೃಶ್ಯದಿಂದ ನಾವು ಪ್ರತಿನಿತ್ಯ ನಗರಗಳಲ್ಲಿ ವಾಸಿಸುವ ಜನರು ಕೆಲಸಕ್ಕೆ ಹೋಗುವುದರ ಚಿತ್ರಣವನ್ನು ಕಾಣಬಹುದು. ಬ್ರುನೋ ಶಾಲೆಗೆ ಹೋಗುತ್ತಿಲ್ಲ ಎಂಬುದು ಗಮನಾರ್ಹ. ಬಾಲಕಾರ್ಮಿಕ ಪದ್ಧತಿ ಇಟಾಲಿಯಲ್ಲಿ ಇತ್ತು ಎಂಬುದನ್ನು ಈ ದೃಶ್ಯದಿಂದ ಅರ್ಥಮಾಡಿಕೊಳ್ಳಬಹುದು.
 7. ಸೈಕಲ್ ಕಳೆದುಕೊಳ್ಳುವ ದೃಶ್ಯ :- ರಿಚಿ ತನ್ನ ಕೆಲಸ ಮಾಡುವಾಗ ಒಬ್ಬ ಕಳ್ಳ ರಿಚಿಯ ಸೈಕಲ್ ಅನ್ನು ಕಳ್ಳತನ ಮಾಡುತ್ತಾನೆ. ರಿಚಿ ಅವನನ್ನು ಹಿಡಿಯಲು ಓಡುತ್ತಾನೆ. ರಿಚಿ ಒಂದು ಲಾರಿಯನ್ನು ಹತ್ತಿ ಅವನನ್ನು ಎಲ್ಲಾ ಕಡೆ ಹುಡುಕುತ್ತಾನೆ. ರಿಚಿ ಸೈಕಲ್ ಸಿಗದೆ ಪೋಲಿಸ್ ಠಾಣೆಗೆ ದೂರು ನೀಡಲು ಹೋಗುತ್ತಾನೆ. ಪೋಲಿಸ್ ಹುಡುಕುತ್ತೇವೆ ಎಂದು ಅವನಿಗೆ ಹೇಳಿದ. ರಿಚಿ ಬಸ್ ಮೂಲಕ ತನ್ನ ಮಗನ ಹತ್ತಿರ ಬಂದು ಅವನನ್ನು ಮನೆಗೆ ಕರೆದುಕೊಂಡು ಹೋಗುತ್ತಾನೆ. ಬ್ರುನೋ ಸೈಕಲ್ ಎಲ್ಲಿ ಎಂದಾಗ ರಿಚಿ ರಿಪೇರಿ ಇದೆ ಅಂತ ಸುಳ್ಳು ಹೇಳುತ್ತಾನೆ.
 8. ಸೈಕಲ್ ಹುಡುಕುವ ದೃಶ್ಯ :- ರಿಚಿ ಬೈಹಕೊ ಎಂಬ ಮನುಷ್ಯನ ಹತ್ತಿರ ಸೈಕಲ್ ಹುಡುಕಲು ಸಹಾಯ ಮಾಡುವಂತೆ ಕೇಳುತ್ತಾನೆ. ಮರಿಯಾ ಅಲ್ಲಿಗೆ ಬಂದು ವಿಷಯ ತಿಳಿದು ಕಣ್ಣೀರು ಹಾಕುತ್ತಾಳೆ. ಬೈಹಕೊ ನಾಳೆ ಸೈಕಲ್ ಸಿಗುತ್ತಾದೆ ಸಮಾಧಾನವಾಗಿರಿ ಎಂದು ಮರಿಯಾಗೆ ಹೇಳುತ್ತಾನೆ. ಮರುದಿನ ರಿಚಿ, ಬ್ರುನೋ ಮತ್ತು ಬೈಹಕೊ ಸೈಕಲ್ ಹುಡುಕಲು ಸೈಕಲ್ ಮಾರುಕಟ್ಟೆಗೆ ಬರುತ್ತಾರೆ. ಬ್ರುನೋ ಬೈಹಕೊಗೆ ಸೈಕಲ್ ನ ಸಂಪೂರ್ಣ ಮಾಹಿತಿ ನೀಡುತ್ತಾನೆ. ಎಲ್ಲಾರು ಓಂದೊಂದು ದಿಕ್ಕಿನಲ್ಲಿ ಹುಡುಕುತ್ತಾರೆ. ರಿಚಿಗೆ ಒಂದು ಅಂಗಡಿಯ ಮುಂದೆ ಇದು ತನ್ನ ಸೈಕಲ್ ಬಿಡಿ ಭಾಗ ಎಂದು ಅಲ್ಲಿದ ಪೋಲಿಸ್ ಸಹಾಯದಿಂದ ಸೀರಿಯಲ್ ಸಂಖ್ಯೆ ನೋಡುತ್ತಾನೆ. ಆ ಸೈಕಲ್ ತನ್ನದು ಅಲ್ಲ ಎಂದು ತಿಳಿದ, ಬೈಹಕೊ ರಿಚಿ ಮತ್ತು ಬ್ರುನೋ ಇಬ್ಬರನ್ನು ಇನ್ನೊಂದು ಮಾರುಕಟ್ಟೆಗೆ ಲಾರಿಯ ಮೂಲಕ ಕಳಿಸುತ್ತಾನೆ. ರಿಚಿ ಅಲ್ಲಿ ಕಳ್ಳನನ್ನು ಒಬ್ಬ ಮುದುಕನ ಜೊತೆ ನೋಡಿ, ಜೊರಾಗಿ ಕಳ್ಳ ಕಳ್ಳ ಎಂದು ಕೂಗುತ್ತಾ ಓಡುತ್ತಾನೆ. ರಿಚಿಗೆ ಅವನು ಸಿಗುವುದಿಲ್ಲ, ರಿಚಿ ಅವನ ಜೊತೆ ಇದ್ದ ಮುದುಕನ್ನನು ಹುಡುಕುತ್ತಾನೆ ಮತ್ತು ಅವನ ಹತ್ತಿರ ಕಳ್ಳನ ಬಗ್ಗೆ ಕೇಳುತ್ತಾನೆ. ಅ ಮುದುಕ ಏನು ಹೇಳುವುದಿಲ್ಲ. ಈ ದೃಶ್ಯದಲ್ಲಿ ನಾವು ನೋವು, ಹತಾಶೆಯನ್ನು ಕಾಣಬಹುದು.
 9. ಚಾರ್ಚ್ ನ ದೃಶ್ಯ :- ರಿಚಿ ಅ ಮುದುಕನ ಹತ್ತಿರ ಹೇಗಾದರೂ ನಿಜ ತಿಳಿಯಬೇಕು ಎಂದು ಅವನ್ನನು ಹಿಂಬಾಲಿಸುತ್ತಾನೆ. ಅ ಮುದುಕ ಚಾರ್ಚ್ ನ ಒಳಗಡೆ ಇರುತ್ತಾನೆ, ರಿಚಿ ಅವನಿಗೆ ನಿಜ ಹೇಳಲು ಒತ್ತಡ ಹಾಕುತ್ತನೆ. ಮುದುಕ ನಿಜ ಹೇಳದೆ ಅಲ್ಲಿಂದ ಹೊರಡುತ್ತಾನೆ. ಚರ್ಚ್ ನಲ್ಲಿ ಪ್ರಾರ್ಥನೆ ನಡೆಯುತ್ತಿದ್ದರು ರಿಚಿಗೆ ತನ್ನ ಸೈಕಲ್ ಬಗ್ಗೆ ಚಿಂತೆ ಇರುತ್ತದೆ ವಿನಹ ಬೇರೆ ಯಾವುದು ಚಿಂತೆ ಇರುವುದಿಲ್ಲ, ಏಕೆಂದರೆ ಸೈಕಲ್ ಸಿಗದೆ ಇದ್ದರೆ ಅವನಿಗೆ ಕೆಲಸ ಇಲ್ಲ ಎಂಬುದು ಅವನಿಗೆ ತಿಳಿದಿದೆ. ಅ ಮುದುಕ ಚರ್ಚ್ ಇಂದ ಹೋಗುತ್ತಾನೆ. ರಿಚಿ ತನ್ನ ಮಗನ ಮೇಲೆ ಸಿಟ್ಟನ್ನು ತೋರಿಸುತ್ತಾನೆ. ಬ್ರುನೋಗೆ ಹಸಿವು ಆಗಿರುತ್ತದೆ.
 10. ಹೋಟೆಲ್ ನ ದೃಶ್ಯ :- ರಿಚಿ ತನ್ನ ಮಗನ ಹಸಿವು ತಿಳಿದು ಹೋಟೆಲ್ ಗೆ ಕರೆದುಕೊಂಡು ಹೋಗುತ್ತಾನೆ. ಹೋಟೆಲ್ ಒಳಗಡೆ ಇಂಪಾದ ಸಂಗೀತ ಕೇಳುತ್ತಾ ಊಟವನ್ನು ಇಬ್ಬರು ಸವಿಯುತ್ತಾರೆ. ಬ್ರುನೋ ಅಲ್ಲಿ ಶ್ರೀಮಂತ ಕುಟುಂಬವು ತರ ತರಹದ ಭೋಜನಗಳನ್ನು ತಿನ್ನುವುದನ್ನು ನೋಡುತ್ತಾನೆ. ಅದನ್ನು ಗಮನಿಸಿದ ರಿಚಿ ನಾವು ಅದನ್ನು ತಿನ್ನಬೇಕು ಅಂದರೆ ನಮ್ಮಗೆ ನೂರಾರು ತಿಂಗಳು ಬೇಕು ಎಂದ.
 11. ಕಳ್ಳ ಸಿಕ್ಕ ದೃಶ್ಯ :- ರಿಚಿ ಕೊನೆಗೆ ಕಳ್ಳನನ್ನು ಹಿಡಿಯುತ್ತಾನೆ ಮತ್ತು ಅವನ ಮನೆಗೆ ಹೋಗಿ ತನ್ನ ಸೈಕಲ್ ಎಲ್ಲಿ ಎಂದು ಕೇಳುತ್ತಾನೆ. ಬ್ರುನೋ ಹೋಗಿ ಪೋಲಿಸ್ ಅನ್ನು ಕರೆದುಕೊಂಡು ಬರುತ್ತಾನೆ. ಪೋಲಿಸ್ ವಿಚಾರಣೆ ಮಾಡಿ ಸಾಕ್ಷಿ ಇಲ್ಲದೆ, ರಿಚಿಗೆ ಅಲ್ಲಿಂದ ಹೋರಾಡಿ ಜನ ಸೇರಿದ್ದಾರೆ ಎಂದ. ರಿಚಿಗೆ ಬೇರೆ ದಾರಿಯಿಲ್ಲದೆ ಅಲ್ಲಿಂದ ತನ್ನ ಮಗನೊಂದಿಗೆ ಹೋರಡುತ್ತಾನೆ.
 12. ಅಪ್ಪನನ್ನು ಕಳ್ಳನಾಗಿ ನೋಡಿದ ಮಗನ ದೃಶ್ಯ :- ರಿಚಿ ತನ್ನ ಮಗನಿಗೆ ಬಸ್ಸಿನ ಮೂಲಕ ಮನೆಗೆ ಹೋಗು, ನಾನು ಸ್ವಲ್ಪ ಸಮಯದ ನಂತರ ಬರುತ್ತೇನೆ ಎಂದ. ರಿಚಿ ಅಲ್ಲಿದ ಒಂದು ಸೈಕಲ್ ಕದ್ದ, ಅಲ್ಲಿದ ಜನ ಅವನ್ನನು ಹಿಡಿದರು ಮತ್ತು ಪೋಲಿಸ್ಗೆ ನೀಡಲು ಕರೆದುಕೊಂಡು ಹೋಗುತ್ತಿದ್ದರು. ಬ್ರುನೋ ಇದ್ದನು ಗಮನಿಸಿ ಅಪ್ಪ ಅಪ್ಪ ಎಂದು ಅಳುವುದನ್ನು ನೋಡಿದ ಸೈಕಲ್ ಮಾಲೀಕ, ಬೀಡಿ ಇವನ್ನನು ಎಂದ. ಕೊನೆಗೆ ರಿಚಿ ಮತ್ತು ಬ್ರುನೋ ಕೈ ಕೈ ಹಿಡಿದುಕೊಂಡು ಮನೆಗೆ ತೆರೆಳುತ್ತಾರೆ.

ಈ ಚಲನಚಿತ್ರವು ನಮಗೆ ಬಡತನ, ಉದ್ಯೋಗದ ಸಮಸ್ಯೆ, ಹಸಿವು, ಶ್ರೀಮಂತಿಕೆ, ಕಳ್ಳತನ, ಹತಾಶೆ, ನೋವು, ದುಃಖ, ಕೋಪ, ಸುಖ, ಸಂತೋಷ, ಮಾನವನ ದಿನ ನಿತ್ಯದ ಪರಾದಟ ಮತ್ತು ಮುಂತಾದ ಅಂಶಗಳನ್ನು ವಿವರಾಣಾತ್ಮಕವಾಗಿ ತೋರಿಸುವ ಒಂದು ಚಲನಚಿತ್ರವಾಗಿದೆ. ಒಂದು ಕುಟುಂಬದ ಮೂಲಕ ನಿರ್ದೇಶಕ ಇಡೀ ಸಮಾಜದ ದೃಶ್ಯ ಕಾವ್ಯವನ್ನೆ ನಮ್ಗೆ ನೀಡಿದ್ದಾನೆ. ಈ ಚಲನಚಿತ್ರ ಪ್ರಪಂಚದ ೧೦೦ ಅತ್ಯುತ್ತಮ ಚಲನಚಿತ್ರಗಳಲ್ಲಿ ಒಂದು. ತಂದೆ-ತಾಯಿ ತನ್ನ ಕುಟುಂಬಕ್ಕೆ ಏನೆಲ್ಲಾ ಮಾಡುತ್ತಾರೆ ಎಂದು ತೋರಿಸಿಕೊಡುವ ಚಲನಚಿತ್ರ ಎನ್ನಬಹುದು.

-ಕಿರಣ್ ಕುಮಾರ್ ಡಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x