ಸ್ವಾತಂತ್ರ್ಯ ಭಾರತದಲ್ಲಿ
ನೀರಿಗಾಗಿ ಸೂರಿಗಾಗಿ
ಭಾವಕ್ಕಾಗಿ ಬಾಷೆಗಾಗಿ
ದೇಶದೊಳಗೆ ಕದನ
ಹೇಳು ಯಾರು ಕಾರಣ
ಗುಡಿ ಗೋಪುರ ಮಣ್ಣಾದವು
ಮಸಿದಿ ಚರ್ಚ್ ಮುಕ್ಕಾದವು
ಪ್ರೇಮ ತುಂಬಿದೆದೆ, ಏಕೆ ಕಲ್ಲಾದವು
ಹಸಿ ನೆತ್ತರದ ಕಂಪು, ಸುತ್ತ ಸುಳಿದಾಡಿದವು
75ನೇ ಸ್ವಾತಂತ್ರ್ಯ ಸಂಭ್ರಮಿಸಿದೇವು
ಚುಟಿ ತೊಟ್ಟಿಲ ತೂಗುವರ ನಡುವೆ
ಮೂಲಭೂತ ಹಕ್ಕಿಗಾಗಿ,ಇದ್ದೇ ಇರುವುದು
ದೇಶದಲ್ಲೊಂದು ಗೊಡವೆ
ಅಂಗಲಾಚ ಬೇಕಾಗಿದೆ
ಅರ್ಜಿಗಳ ಮೇಲೆ ಅರ್ಜಿ ಕೊಟ್ಟು
ಇದೇ ಸ್ವಾತಂತ್ರ್ಯದ
ಒಳಗಿನ ಗುಟ್ಟು
ಕೋಪವೆ ನಲ್ಲೆ?
ಕೋಪವೆ ನಿನಗೆ
ನನ್ನ ಮೇಲೆ ನಲ್ಲೆ
ಅದಕ್ಕೆ ನಾ ತಂದೆ
ಕಂಪು ಸೂಸುವ ದುಂಡು ಮಲ್ಲೆ
ನಿನ್ನ ಚೂಟಿ ರೇಗಿಸಿ, ಮತ್ತೆ ರಮಿಸಿ
ಎದೆಗಾನಿಸಿ ಮತ್ತೆ ಪ್ರೇಮಿಸಿ
ಉಸಿರಲೆ ಪಿಸು ನುಡಿದೆ
ನನ್ನ ಮೇಲೆ ಮುನಿಸೆ
ಕೋಪ ನನ್ನ ಮೇಲೆ ತಾನೆ
ಮುಗ್ದ ಮಲ್ಲಿಗೆಗೆ,
ಶಿಕ್ಷೆ ಏಕೆ ಜಾಣೆ
ನಾಲ್ಕುಗಳಿಗೆಯ ಬದುಕು ಅದರದ್ದು
ಇರಲಿ ಕರುಣೆ
ನಲಿಯಲಿ ಬಿಡು ನಲ್ಲೆ
ನಿನ್ನ ಚೆಲುವಲ್ಲಿ ಚೆಲುವಾಗಿ
ದುಂಡು ಮಲ್ಲೆ
ನಿನ್ನ ನೋಟ
ಏನಾಯಿತು ಗೆಳತಿ ಏನಾಯಿತು
ಈಗೀಗ ನಿನ್ನ ನೋಟ
ಏಕೆ ಬರೆದಾಯಿತು
ಸೆಳೆತ ವಿಲ್ಲ ,ಹೃದಯದ
ಮೋರೆ ತವಿಲ್ಲ
ತುಟಿಮೇಲೆ ಕಿರುನಗೆಯ
ಸುಳಿವಿಲ್ಲ
ಕಣ್ಣಾಲಿಯಲಿ
ಕನಸಿನ ಹೊಂಬೆಳಕಿಲ್ಲ
ಹೂ ರಾಶಿಯಲ್ಲಿ ಸಿಂಗಾರಗೊಂಡು
ಸಾಗಿ ಬರುತ್ತಿತ್ತು ತೇರು
ನಿನ್ನ ನೋಟ ಕೇಳಿದಂತಿತ್ತು
ನೀನು ಯಾರು ಯಾರು
ಜೀವನದ ಉತ್ಸಾಹವೇ
ಬಸವಳಿಯಿತು ಆ ಕ್ಷಣ
ನಿನ್ನ ಕಾಣ ಬಂದ ಹೃದಯ ದೊಡನೆ
ಮೌನದ ಸಂಘರ್ಷಣ
-ಜೊನ್ನವ (ಪರಶುರಾಮ್ ಎಸ್ ನಾಗುರ್)