“ಕತ್ತಲ ಹೂವು” ನೀಳ್ಗತೆ (ಭಾಗ ೧೧): ಎಂ.ಜವರಾಜ್
ಭಾಗ – 11 ಈಗ ಚೆನ್ನಬಸವಿ ಮೊದಲಿನಂತಿಲ್ಲ. ಅಲ್ಲಿ ಇಲ್ಲಿ ಸುತ್ತುವುದೂ ಕಮ್ಮಿಯಾಗಿತ್ತು. ಹೊಟ್ಟೆನೋವು, ಮೈ ಕೈ ನೋವು, ಸುಸ್ತು ಸಂಕ್ಟದ ಮಾತಾಡುತ್ತಿದ್ದಳು. ಯಾರಾದರು ಸುಮ್ನೆ “ಇದ್ಯಾಕಕ್ಕ” ಅಂತ ಕೇಳಿದರೆ “ನಂಗ ಯಾರ ಏನಾ ಕೆಟ್ಟದ್ ಮಾಡರ.. ಅದ್ಕೆ ಏನ್ ಮಾಡುದ್ರು ನನ್ ಸಂಕ್ಟ ನಿಲ್ದು” ಅಂತ ನಟಿಕೆ ಮುರಿದು ಶಾಪಾಕ್ತ ದೇವ್ರು ದಿಂಡ್ರು ಅಂತ ಮಾಡೋಕೆ ಶುರು ಮಾಡಿದ್ದಳು. ಊರಿನಲ್ಲಿ ಒಬ್ಬ ಗೋವಿಂದ ಅಂತ. ಅವನು ನಿಧಾನಕ್ಕೆ ಜಬರ್ದಸ್ತ್ ಪುಡಾರಿಯಾಗಿ ಬೆಳೀತಿದ್ದ. ಊರಾಚೆ ದೊಡ್ಡ ಮನೆಯನ್ನೇ … Read more