“ಕತ್ತಲ ಹೂವು” ನೀಳ್ಗತೆ (ಭಾಗ ೭): ಎಂ.ಜವರಾಜ್
ಭಾಗ 7 ದಂಡಿನ ಮಾರಿಗುಡಿಲಿ ಕುಣೀತಿದ್ದ ನೀಲಳಿಗೆ ಅವಳ ಅವ್ವ ಸ್ಯಬ್ಬದಲ್ಲಿ ಹೊಡೆದು ಕೆಂಗಣ್ಣು ಬಿಟ್ಟು ಕೆಂಡಕಾರಿದ್ದು ಕಂಡು ದಿಗಿಲುಗೊಂಡ ಚಂದ್ರ ನಿಧಾನಕೆ ಮುಂಡಗಳ್ಳಿ ಬೇಲಿ ಮರೆಯಲ್ಲೇ ಸಾವರಿಸಿಕೊಂಡು ದೊಡ್ಡವ್ವನ ಹಿಂದೆಯೇ ಬಂದು ನಿಂತಿದ್ದ. ಅವನ ಕಿರಿ ತಮ್ಮ ಗೊಣ್ಣೆ ಸುರಿಸಿಕೊಂಡು ಚಂದ್ರನ ತಲೆಯನ್ನು ಸಸ್ದು ಸಸ್ದು ದಂಡಿನ ಮಾರಿಗುಡಿಗೇ ಕರೆದುಕೊಂಡು ಹೋಗುವಂತೆ ಆಕಾಶ ಭೂಮಿ ಒಂದಾಗ ತರ ಕಿಟಾರನೆ ಕಿರುಚುತ್ತ ಕಣ್ಣೀರು ಹರಿಸುತ್ತ ಗೋಳೋ ಅಂತ ಅಳುತ್ತಿತ್ತು. ಚಂದ್ರ ಸಿಟ್ಟುಗೊಂಡು ಅಳುತ್ತಿದ್ದ ತಮ್ಮನನ್ನು ಸೊಂಟದಿಂದ ಕೆಳಗಿಳಿಸಿ … Read more