ಕನ್ನಡ ಸಂಘ: ಮನು ಗುರುಸ್ವಾಮಿ
“ಏನ್ರಯ್ಯ ಇಡೀ ಕರ್ನಾಟಕನೇ ಆಳೋ ಪ್ಲಾನ್ನಿದ್ದಂಗದೆ.” ಕಾಡಾ ಆಫೀಸಿನ ಸಿಬ್ಬಂದಿಯೊಬ್ಬ ವ್ಯಂಗ್ಯವಾಡಿದ. “ಆಗೇನೂ ಇಲ್ಲ ಸರ್; ಸಮಾಜಮುಖಿ ಕೆಲಸಕ್ಕಾಗಿ” ವಿಶಾಲ್ ಸಮರ್ಥಿಸಿಕೊಂಡ.“ನಂಗೊತ್ತಿಲ್ವೇ ? ನೀವ್ ಮಾಡೋ ಉದ್ಧಾರ! ಹಾಕಿ ಹಾಕಿ ಸೈನಾ..” ಮತ್ತದೇ ಅಪಹಾಸ್ಯ ಕಿವಿಮುಟ್ಟಿತು.“ಉದ್ಧಾರನೋ ಹಾಳೋ; ಕೆಲ್ಸ ಮುಗಿದಿದ್ರೆ ಪತ್ರ ತತ್ತರಲ್ಲ ಇತ್ಲಾಗೆ” ವಿನೋದ ಕಿಡಿಕಾರಿದ.ಸಂಸ್ಥೆಯೊಂದರ ನೊಂದಣಿಗೆ ಈ ಯುವಕರಿಷ್ಟು ಎಣಗಾಡಿದ್ದು ಆ ಸಿಬ್ಬಂದಿಗೆ ತಮಾಷೆಯಾಗಿ ಕಂಡರೂ ಆ ಹತ್ತದಿನೈದು ಐಕ್ಳು ಮಾತ್ರ ಏನ್ನನ್ನೋ ಸಾಧಿಸಲಿಕ್ಕಿದು ಮುನ್ನುಡಿಯೆಂದೇ ಭಾವಿಸಿದ್ದರು. ಅಂದಹಾಗೆ ಅದು ಆಲಹಳ್ಳಿ. ಹಚ್ಚಹಸಿರಿನಿಂದ ಕೂಡಿರುವ … Read more