“ಕತ್ತಲ ಹೂವು” ನೀಳ್ಗತೆ (ಭಾಗ ೧೨): ಎಂ.ಜವರಾಜ್
ಭಾಗ – 12 ಚೆನ್ನಬಸವಿ ಚೆಲ್ಲಿಕೊಂಡ ಕವ್ಡಗಳನ್ನೇ ನೋಡುತ್ತಲೇ ತುಟಿ ಕುಣಿಸುತ್ತ ಕೈಬೆರಳು ಒತ್ತಿ ಎಣಿಸುತ್ತಿದ್ದ ಕಡ್ಡಬುಡ್ಡಯ್ಯ ಹೇಳುವ ಮಾತಿಗೆ ಕಾದಂತೆ ಕಂಡಳು. ಬಿಸಿಲು ರವ್ಗುಟ್ಟುತ್ತಲೇ ಇತ್ತು. ಆಗ ಹರಿದ ಲುಂಗಿ ಎತ್ತಿಕಟ್ಟುತ್ತ ಪಣ್ಣನೆ ಜಗುಲಿಗೆ ನೆಗೆದ ಚಂದ್ರ ಬಾಗಿಲತ್ತಿರ ಹೋದವನಿಗೆ ಕಂಚಿನ ತಣಗಕ್ಕೆ ತಂಗ್ಳಿಟ್ಟು ಹಾಕಂಡು, ಅದಕ್ಕೆ ಈರುಳ್ಳಿ ಉಪ್ಪು ಬೆರುಸ್ಕೊಂಡು, ನೀರು ಉಯ್ಕಂಡು ಕಲಸಿ ಕಲಸಿ ಅಂಬ್ಲಿತರ ಮಾಡ್ಕಂಡು ಸೊರಸೊರ ಅಂತ ಕುಡೀತಿದ್ದ ಸೂರಿ ಕಂಡೊಡನೆ ಹೆದರಿ ಪಣ್ಣಂತ ಕೆಳಕ್ಕೆ ನೆಗೆದು ನೀಲ ನಿಂತಿದ್ದ … Read more