ವಿಶ್ವಸಂಸ್ಥೆಗೆ ಮಕ್ಕಳಿಂದ ವರದಿ: ಒಂದು ರಾತ್ರಿಯ ಕಥೆ: ನಾಗಸಿಂಹ ಜಿ ರಾವ್
ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯು 1989ರಲ್ಲಿ ಜಾರಿಗೆ ಬಂದಾಗಿನಿಂದ, ಸಹಿ ಹಾಕಿದ ಪ್ರತಿ ದೇಶವು ಐದು ವರ್ಷಗಳಿಗೊಮ್ಮೆ ತಮ್ಮ ದೇಶದ ಮಕ್ಕಳ ಹಕ್ಕುಗಳ ಜಾರಿ ಬಗ್ಗೆ ವರದಿಯನ್ನು ಸಿದ್ಧಪಡಿಸಿ ವಿಶ್ವಸಂಸ್ಥೆಗೆ ಸಲ್ಲಿಸಬೇಕು. ಈ ವರದಿಯನ್ನು ‘ಕಂಟ್ರಿ ರಿಪೋರ್ಟ್’ ಎಂದು ಕರೆಯಲಾಗುತ್ತದೆ. ಭಾರತವು 1992ರಲ್ಲಿ ಈ ಒಡಂಬಡಿಕೆಗೆ ಸಹಿ ಹಾಕಿತು ಮತ್ತು 1997ರಲ್ಲಿ ಮೊದಲ ವರದಿಯನ್ನು ಸಲ್ಲಿಸಿತು. ಎರಡನೇ ವರದಿಯನ್ನು 2003-24ರ ಅವಧಿಯಲ್ಲಿ ಸಿದ್ಧಪಡಿಸಲಾಯಿತು. ಒಡಂಬಡಿಕೆಯ ಪರಿಚ್ಛೇದ 45ರ ಪ್ರಕಾರ, ಸರ್ಕಾರದ ವರದಿಗೆ ಪರ್ಯಾಯವಾಗಿ, ದೇಶದ ಮಕ್ಕಳ ಪರಿಸ್ಥಿತಿಯ … Read more