ಕವಿತೆ: ದೇವರಾಜ್ ಹುಣಸಿಕಟ್ಟಿ

ಸಾಕ್ರೆಟಿಸ್ ನ ಋಣದ ಹುಂಜ
ಮತ್ತೆ ಕೂಗುವುದಿಲ್ಲ…

ಅವರು ಬರುವುದು
ಹೀಗೆ…

ದೂರದಿ ವಿಷದ
ಬಟ್ಟಲು ಹಿಡಿದು..
ಕೊರಳಿಗೆ ಉರಳು ಹಗ್ಗವ
ಹೊಸದು..

ಸದ್ದಿಲ್ಲದೇ ….

ಕರುಳ ಕಹಾನಿಗೆ
ಕಿವುಡು ಕುರುಡು
ಮೈ ತುಂಬಾ ಹೊದ್ದು…..
ಚಿತ್ರ ವಿಚಿತ್ರ ಭಗ್ನ
ಕನಸುಗಳಲಿ ಬೆಚ್ಚಿ ಬಿದ್ದು…

ಕಂಸನಂತೆಯೇ
ಕೈಗೆ ಚಿನ್ನದ ಸರಳು ತೊಡಿಸಿ..
ಬೆಳಕನ್ನೇ ಕತ್ತಲೆಂದು
ಪರಿಭಾವಿಸಿ..

ಇತಿಹಾಸದುದ್ದಕ್ಕೂ ಅವರು
ಬರುವುದು ಹೀಗೆ….

ನಿಜದ ಅಸ್ತಿ ಪಂಜರಕೆ
ಸುಳ್ಳಿನ ಮಾಂಸ ಮಜ್ಜೆಯ ತುಂಬಿ….
ವೇಷ ಬದಲಿಸಿ ಮನುವಾದವ ನಂಬಿ….
ಕಲ್ಯಾಣದ ಕೇಡ ಹೊತ್ತು….

ಅವರು ಬರುವುದು ಹೀಗೆ….

ಬಳಪ ಪೆನ್ನು
ಒಂದೊಂದನ್ನೇ ಕಸೆದು….
ಕತ್ತಿ ಗುರಾಣಿ ಈಟಿ..
ಚಾಕು ಬಾಕು ಗುಂಡುಗಳ…
ವಿಧ ವಿಧದಲಿ ಮಸೆದು….

ಅವರು ಬರುವುದು ಹೀಗೆ….
ಋಣದ ಹುಂಜ ಮತ್ತೆ ಕೂಗದ ಹಾಗೆ……

-ದೇವರಾಜ್ ಹುಣಸಿಕಟ್ಟಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
0
Would love your thoughts, please comment.x
()
x