ರೂಮಿಗೆ ತಲುಪಿದ್ದೆ ತಡವಾಯಿತು ಎಂದು ಮುಖ ತೊಳೆದುಕೊಳ್ಳದ್ದೆ ಸ್ವಚ್ಚಾಗಿರುವ ಮಂಚದ ಮೇಲೆ ತಲೆ ಇಟ್ಟಿದ್ದೆ ತಡ. ಗಾಢ ರಾತ್ರಿಯಲ್ಲಿ ಗಾಢ ನಿದ್ರೆಗೆ ಜಾರಿದ್ದೆ ತಿಳಿಯಲಿಲ್ಲ. ಕೊಂಚ ಸಮಯದ ಬಳಿಕ ರೂಮಿನ ಹೊರಗಡೆ ಯಾರೊ ಕಿರುಚುವ ಶಬ್ದಗಳು ಕಿವಿಗೆ ಬಡೆಯುತ್ತಿದ್ದರು ಕನಸೇ ಎಂಬಂತೆ ನಾನು ನನ್ನ ರೂಮಿನ ಇನ್ನೊಬ್ಬ ಸಹೋದ್ಯೋಗಿ ಗೊರಕೆ ಹೊಡಿಯುತ್ತ ಮಲಗಿದ್ದೆವು. ದಡ್ ದಡ್ ದಡ್ ದಡ್ ರೂಮಿನ ಹೊರಗಡೆ ಯಾರೊ ಬಾಗಿಲು ಬಡೆಯುವ ಶಬ್ದ ಕೇಳಿದರು ಕೇಳದಂತೆ ಕುಂಭಕರಣರಂತೆ ಮಲಗಿದ್ದೆವು. ರೂಮಿನ ಹೊರಗಡೆ ಮತ್ತಷ್ಟು ಗಲಿಬಿಲಿ ಗೊಂಡ ಶಬ್ದ ಜೋರಾಗಿದ್ದು ಇಬ್ಬರನ್ನು ಎಚ್ಚರಿಸಿತು. ಈಗ ದಡ್ ದಡ್ ದಡ್ ದಡ್ ಮತ್ತಷ್ಟು ಶಬ್ದ ಜೋರಾಗಿ ಕೇಳಿ ನನ್ನ ಸಹೋದ್ಯೋಗಿ ರೂಮಿನ ಬಾಗಿಲು ತೆಗೆದು ನೋಡಿದಾಕ್ಷಣ ರೂಮಿಗೆ ಕಪ್ಪು ತುಂಬಿದ ಹೊಗೆ ರಪ್ ಎಂದು ನಮ್ಮನ್ನ ಆವರಿಸಿತು ನಮಗೆ ಒಂದು ಕ್ಷಣ ಜೀವ ದಸಕ್ ಎನಿಸಿತು. ಹೋಟೆಲ್ ಮೇಲ್ವಿಚಾರಕ ಬಂದು ನಮ್ಮ ಮುಂದೆ ನಿಂತು ಅಲ್ಲಿ ನಡೆದಿರುವ ಅವಘಡವನ್ನ ಒಂದೇ ಬಾರಿಗೆ ತಮಿಳುನಲ್ಲಿ ನುಡಿದು ಹೊಟೇಲಿನ ಹಲವು ರೂಮಿನ ಬಾಗಿಲು ತಟ್ಟುತ್ತ ಎಲ್ಲರನ್ನು ಎಚ್ಚರಿಸುತ್ತ ಅಲ್ಲಿರುವ ಪರಿಸ್ಥಿತಿಯ ಬಗ್ಗೆ ಹೇಳುತ್ತಾ ಹೋದ. ಎಲ್ಲರೂ ಏಳಿ ಹೋಟೆಲ್ ಎರಡನೆ ಫ್ಲೋರ್ ನಲ್ಲಿ ಶಾರ್ಟ್ ಸರ್ಕ್ಯುಟ್ ಆಗಿ ಬೆಂಕಿ ಹತ್ತಿದೆ ನಾವೆಲ್ಲರೂ ಹೊರಡಬೇಕೆಂದು ಹೇಳಿದ.
ಆ ಹೋಟೆಲ್ ಮೂರು ಫ್ಲೋರ್ ನ ಕಟ್ಟಡವದು ಅದರಲ್ಲಿ ನಮ್ಮ ತಂಡದವರೆ ಸರಿಸುಮಾರು ಹತ್ತರಿಂದ ಹದಿನೈದು ಜನ. ಯಾರು ಯಾವ ರೂಮಿನಲ್ಲಿ ಇದ್ದಾರೆ ಎನ್ನುವುದೆ ಮರೆತುಹೋಯಿತು.
ಆ ಹೊಗೆ ತುಂಬಿದ ಹೋಟೆಲ್ನಲ್ಲಿ ಎಲ್ಲರೂ ಬೆಚ್ಚಿ ಬಿದ್ದು ಓಡುವುದು ನೋಡಿದರೆ ಕಣ್ಣ ಮುಂದೆ ಬದುಕಿನ ಕೆಲವು ನೆನಪುಗಳು ಒಂದು ಕ್ಷಣ ರಪ್ ಅಂತ ಹಾದು ಹೋದವು. ಭಯದ ಅಲೋಚನೆಯಲ್ಲೇ ಇದ್ದ ನನ್ನ ಮತ್ತು ಸಹೋದ್ಯಗಿಯನ್ನ ಮತ್ತೊಮ್ಮೆ ಎಚ್ಚರಿಸಿದ ಮೇಲ್ವಿಚಾರಕ. ಎಡಗಡೆ ಓಡಿ ಓಡಿ ಎಂದು ಅರಚಿದ್ದು ಕೇಳಿದ್ದೆ ತಡ ಚಾರ್ಜಿಂಗ್ ಇಟ್ಟ ಮೊಬೈಲ್ ಹಾಗೂ ಮೂಲೆಗೆ ಸೇರಿದ ಚಪ್ಪಲಿ ಜೇಬಿಗೂ ಕಾಲಿಗೂ ಹಾಕಿಕೊಂಡು ಓಡಲುತ್ತಿದೆವು. ಎರಡನೆ ಫ್ಲೋರ್ ನಲ್ಲಿಯೆ ಸರಿಸುಮಾರು ನಮ್ಮ ಸಹೋದ್ಯೋಗಿ ಗಳು ಸೇರಿ ಅಲ್ಲಿರುವ ಬೇರೆ ಕಡೆಯಿಂದ ಬಂದು ರೂಮ್ ನಲ್ಲಿ ಉಳಿದುಕೊಂಡವರು ಸೇರಿದಿನಂತೆ ಹದಿನೈದು ಜನ. ರೂಮಿನ ಎಡಗಡೆ ತಿರುಗಿ ಹೋಟೆಲ್ ನ ಎಕ್ಸಿಟ್ ಕಂಡಿತು. ಎಲ್ಲರಿಗೂ ಕೊಂಚ ಜೀವ ಬಂದಂತಯಾಯಿತು.
ಆದರೆ ನಮ್ಮ ಅದೃಷ್ಟ ಯಾವ ಮಟ್ಟಿಗೆ ಇತ್ತೆಂದರೆ ಆ ಎಕ್ಸಿಟ್ ಬಾಗಿಲು ಗಾಜಿನಿಂದ ಕೂಡಿದ್ದು ಅದಕ್ಕೆ ದೊಡ್ಡದೊಂದು ಕೀಲಿ ಜಡಿದಿದ್ದರು. ಮತ್ತೊಮ್ಮೆ ಅಲ್ಲಿರುವ ಎಲ್ಲರಿಗೂ ನಡುಕ ಶುರುವಾಯಿತು. ನಮ್ಮಲ್ಲಿ ನಾವೇ ಇನ್ನೇನೂ ಮುಗಿತು ನಮ್ಮ ಬದುಕೆಂದು ದೇವರ ನೆನಪಿಸಿಕೊಳ್ಳುತ್ತ ಆಗೆಯೇ ನಿಂತ ಸ್ಥಳದಲ್ಲೇ ಇದ್ದೆವು. ಎಲ್ಲರ ಹಿಂದೆ ನಿಂತುಕೊಂಡಿದ್ದ ಹೋಟೆಲ್ ನ ಮೇಲ್ವಿಚಾರಕ ಬಾಗಿಲ ಬಳಿ ಇದ್ದ ಹೂವಿನ ಗುಂಡಿಯನ್ನು ತೆಗದುಕೊಂಡು ಬಾಗಿಲನ್ನು ಸಿನಿಮಾದ ಹೀರೊ ರೀತಿಯಲ್ಲಿ ಗಾಜಿನಿಂದ ಇದ್ದ ಬಾಗಿಲನ್ನ ಟಳ್ ಟಳ್ ಟಳ್ ಟಳ್ ಎಂದು ಹೊಡೆದಿದ್ದೆ ತಡ ಮೊದಲು ನನ್ನ ಜೀವ ಉಳಿಯಲಿ ದೇವರೆ ಎಂದು ಎಲ್ಲರೂ ನಾ ಮುಂದು ತಾ ಮುಂದು ಎಂದು ಬಾಗಿಲು ದಾಟಿ ಇಕ್ಕಟ್ಟಿರುವ ಹೊರಾಂಗಣಕ್ಕೆ ಬಂದು ಮೆಲ್ಲಗೆ ಉಸಿರುತೆಗೆದುಕೊಂಡೆವು.
ಜೀವ ಉಳಿಯಿತೆಂದು ಸಮಾಧಾನ ಆಗುವಷ್ಟರಲ್ಲಿ ನಮಗೆ ಇನ್ನೊಂದು ಸಮಸ್ಯೆ ಶುರುವಾಯಿತು. ನಮ್ಮ ಸಹೋದ್ಯೋಗಿ ಗಳು ಶಾರ್ಟ್ ಸರ್ಕ್ಯೂಟ್ ಆದ ಪಕ್ಕದ ಮತ್ತು ಎದರುಗಡೆ ರೂಮಿನಲ್ಲಿ ತಂಗಿದ್ದವರು ಹೊಟೇಲ್ ಹೊರಗಡೆಯ ಹೊರಾಂಗಣದಲ್ಲಿ ಕಾಣಲೇ ಇಲ್ಲ. ನಮಗೆ ಹೃದಯ ಬಾರಿ ಜೋರಾಗಿ ಬಡೆದುಕೊಳ್ಳುವುದಕ್ಕೆ ಶುರುವಾಯಿತು. ನಾನು ನಮ್ಮ ಸಹೋದ್ಯೋಗಿಯವರು ಎರಡನೆ ಫ್ಲೋರ್ ನಲ್ಲಿರುವವರಿಗೆ ಒಬ್ಬರಾಗಿ ಕರೆ ಮಾಡಿ ಅವಘಡ ತಿಳಿಸುವದರಲ್ಲೇ ಒಂದಿಬ್ಬರು ಕೆಳಗಡೆಯೆ ಬಂದರು. ಅದರಲ್ಲಿ ಎರಡೂ ರೂಮ್ ನಲ್ಲಿರುವ ನಾಲ್ಕು ಜನರಲ್ಲಿ ಯಾರು ಒಬ್ಬರು ಕರೆಯನ್ನು ಸ್ವೀಕರಿಸುತ್ತಿಲ್ಲ ಎಂದು ಎಲ್ಲರೂ ಭಯದಲ್ಲಿಯೇ ಒಂದಲ್ಲ ಹಲವೂ ಬಾರಿ ಕರೆ ಮಾಡಿದಾಗ ಒಮ್ಮೆ ತೂಗಡಿಕೆಯಲ್ಲಿ ಕರೆಯನ್ನ ರಿಸೀವ್ ಮಾಡಿದ್ದ ಸಹೋದ್ಯೋಗಿ ಗಾಬರಿಯಲ್ಲಿಯೇ ಅಲ್ಲಿರುವ ಪರಿಸ್ಥಿತಿ ಯನ್ನ ಹೇಳಿದ್ದೆ ತಡ ಎದ್ದೊವೂ ಬಿದ್ದವೋ ಎಂದು ರೂಮಿನಿಂದ ಹೊರಾಂಗಣಕ್ಕೆ ಬಂದು ನಮ್ಮ ಕಣ್ಣಿಗೆ ಬಿದ್ದಾಗಲೆ ನೆಮ್ಮದಿಯೆನಿಸಿದ್ದು.
ಇಲ್ಲಿ ತಮಾಷೆಯ ವಿಚಾರವೆಂದರೆ ಆ ಹೊಟೇಲನಲ್ಲಿ ತಂಗಿದ್ದ ಕೆಲವು ವ್ಯಕ್ತಿಗಳು ಬೆಂಕಿ ಹತ್ತಿದೆ ಎನ್ನುವ ಭಯದಲ್ಲಿ ಯಾವ ಉಡುಪಿನಲ್ಲಿ ಇದ್ದರೋ ಅದೇ ಉಡುಪಿನಲ್ಲಿ ಒಬ್ಬರು ಟವಲ್ ಕಟ್ಟಿಕೊಂಡು, ಒಬ್ಬರು ಒಂದಕ್ಕೊಂದು ಹೊಂದದ ಚಪ್ಪಲಿಗಳು ಹಾಕಿಕೊಂಡು, ಗಡಬಿಡಿಯಲ್ಲಿ ಒಬ್ಬರು ಉಲ್ಟಾ ಅಂಗಿಯನ್ನು ತೊಟ್ಟುಕೊಂಡು ಬಂದಿದ್ದರು. ಅವರನ್ನು ನೋಡಿ ನಗುವಿನ ಜೊತೆಗೆ ಜೀವ ಉಳಿಯುತು ದೇವರೆ ಎನ್ನುವ ಮುಖಭಾವ ಮುಖದ ಮೇಲೆ ಎದ್ದು ಕಾಣುತ್ತಲಿತ್ತು. ಈ ಅವಘಡದಿಂದ ನನಗೂ ನಮ್ಮ ಸಹೋದ್ಯೋಗಿಗಳ ಜೊತೆ ಗೆಳೆತನ ಮತ್ತಷ್ಟು ಗಟ್ಟಿಯಾಯಿತು.
ಕೊನೆಯಲ್ಲಿ ಕಲಿತ ಜೀವನದ ಪಾಠ!
ಮನುಷ್ಯ ತನ್ನ ಜೀವಕ್ಕೆ ಕುತ್ತು ಬರುವವರೆಗೂ ಬೇರೆಯವರ ಜೀವನದ ಬಗ್ಗೆ ಬದುಕಿನ ಬಗ್ಗೆ ಹಗುರವಾಗಿ ಮಾತಾನಾಡುತ್ತಲೆ ಇರುತ್ತಾನೆ. ಈ ಅವಘಡ ಅಂತ ಸೊಕ್ಕನ್ನ ಮುರಿಯಿತು ಎನ್ನುವುದು ಅಲ್ಲಿ ಕೆಲವು ವ್ಯಕ್ತಿಗಳ ಮಾತಿನಲ್ಲಿ, ಕಣ್ಣಿನಲ್ಲಿ ಮತ್ತು ಮುಖದ ಮೇಲಿನ ಭಾವನೆಗಳಲ್ಲಿ ತಿಳಿಯಿತು.
–ಮಂಜುನಾಥ್ ಚಿನಕುಂಟಿ