ಕುಟುಂಬವೆಂದರೆ ಒಬ್ಬ ವ್ಯಕ್ತಿಯಲ್ಲ, ಅವನೊಡನೆ ನಿಲ್ಲುವ ಪ್ರಪಂಚವೇ ಕುಟುಂಬ ಎನ್ನುವ “ಅಜ್ಜನ ಕಮೋಡು”: ಡಾ. ನಟರಾಜು ಎಸ್.‌ ಎಂ.

ಈ ತಿಂಗಳ ಮೊದಲ ವಾರದಲ್ಲಿ ಹಾಸನಕ್ಕೆ ಹೋಗಿದ್ದೆ. ನಮ್ಮ ನಡುವಿನ ಅಧ್ಬುತವಾದ ಅನುವಾದಕರಾದ ಜೆವಿ ಕಾರ್ಲೊ ಸರ್‌, ಮೈಸೂರಿನ ಕಥೆಗಾರ ಗೆಳೆಯ ಡಾ. ಗವಿಸ್ವಾಮಿ ಸಿಕ್ಕಿದ್ದರು. ಅವರ ಜೊತೆ ಮಾತನಾಡಿ ಸಂಜೆ ಹಿರಿಯ ಸಾಹಿತಿಗಳಾದ ಹಾಡ್ಲಹಳ್ಳಿ ನಾಗರಾಜು ರವರನ್ನು ಭೇಟಿಯಾದೆ. ಹಾಸನದ ಬಳಿ ಅತ್ತಿಹಳ್ಳಿಯ ತೋಟದ ಮನೆಯಲ್ಲಿ ವಾಸವಿರುವ ಹಿರಿಯರಾದ ನಾಗರಾಜುರವರನ್ನು ಭೇಟಿಯಾದ ದಿನ ಹೊರಗೆ ಸಣ್ಣನೆ ತುಂತುರು ಮನೆ ಹನಿಯುತ್ತಿತ್ತು. ಒಂದೆರಡು ಗಂಟೆ ಅವರೊಡನೆ ಹರಟೆ ಹೊಡೆದು ರಾತ್ರಿ ಊಟ ಮಾಡಿ ವಾಪಸ್ಸು ಬರುವಾಗ ನನ್ನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜುವಿಗೆ ನೆರವಾಗಿ

ಸಹೃದಯಿಗಳೇ, ನಿಮಗೆ ತಿಳಿದಂತೆ ಕಳೆದ ಒಂಬತ್ತು ವರ್ಷಗಳಿಂದ ಪಂಜು ಪತ್ರಿಕೆ ಕನ್ನಡದ ಸೇವೆಯಲ್ಲಿ ನಿರತವಾಗಿದೆ. ಪ್ರತಿ ವರ್ಷದ ಹೋಸ್ಟಿಂಗ್‌ ವೆಚ್ಚ, ವೆಬ್‌ ಡೊಮೈನ್‌ ನವೀಕರಣ ವೆಚ್ಚ ಮತ್ತು ಇತರ ವೆಚ್ಚಗಳು ಹೆಚ್ಚತ್ತಲೇ ಹೋಗುತ್ತಿವೆ. ಈ ಎಲ್ಲಾ ವೆಚ್ಚಗಳನ್ನು ಪಂಜು ಇಷ್ಟು ವರ್ಷ ನಿಭಾಯಿಸುತ್ತಲೇ ಬಂದಿದೆ. ಹೆಚ್ಚುತ್ತಿರುವ ತಂತ್ರಜ್ಞಾನಗಳ ಜೊತೆಗೆ ಅವುಗಳಿಗೆ ಹಣ ನೀಡಬೇಕಾದ ಅವಶ್ಯಕತೆ ಕೂಡ ಇರುವುದರಿಂದ ನಿಮಗೆ ಪಂಜುವಿಗೆ ನೆರವಾಗುವ ಮನಸಿದ್ದರೆ ನಿಮಗೆ ಅನಿಸಿದ್ದಷ್ಟು ಹಣವನ್ನು ಪಂಜುವಿಗೆ ಡೊನೇಟ್‌ ಮಾಡಿ. Google pay/ Phone Pay: … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮರ ಕಡಿಯುವುದಾಗಲಿ ಅಥವಾ ಅದನ್ನು ಘಾಸಿಗೊಳಿಸುವುದಾಗಲಿ ಮಾಡುವುದು ಬಿಷ್ಣೋಯಿ ಧರ್ಮಕ್ಕೆ ವಿರುದ್ಧವಾದುದ್ದು: ಮಿತಾಕ್ಷರ

ಇತಿಹಾಸದಲ್ಲಿ ನಡೆದ ಅತಿ ಘೋರ ಘಟನೆ ಅದು ನಡೆದದ್ದು ರಾಜಸ್ಥಾನದ ಜೋಧಪುರದಲ್ಲಿ ಅಲ್ಲಿನ ರಾಜ ಅಜಿತ ಸಿಂಹ ತನ್ನ ಅರಮನೆಯ ಸೌಂದರ್ಯ ಹೆಚ್ಚಿಸಲು ತನ್ನ ರಾಜ್ಯದ ಬಿಷ್ಣೋಯಿ ಸಮಾಜದವರೆ ಹೆಚ್ಚಾಗಿದ್ದ ಜೆಹ್ನಾದ್‌ನ ಗ್ರಾಮದಲ್ಲಿ ಸಮೃದ್ಧವಾಗಿ ಬೆಳೆದ ಖೇಜ್ರಿ ವೃಕ್ಷಗಳನ್ನು ಕತ್ತರಿಸಿ ತರುವಂತೆ ಮಂತ್ರಿ ಗಿರಿಧರ ಭಂಡಾರಿಗೆ ಆಜ್ಞೆಪಿಸಿದ. ಸೈನಿಕರೊಡನೆ ಹೊರಟ ಮಂತ್ರಿ ಗ್ರಾಮದಲ್ಲಿ ಮರ ಕಡಿಯಲು ಮುಂದಾದ. ಸುದ್ದಿ ತಿಳಿದು ಮರಗಳನ್ನು ಮಕ್ಕಳಂತೆ ಪೋಷಿಸಿ ಬೆಳೆಸುವ ಅಲ್ಲಿನ ಬಿಷ್ಣೋಯಿ ಸಮಾಜದ ಅಮೃತಾದೇವಿ ಬಿಷ್ಣೋಯಿ ತಕ್ಷಣ ಮರಗಳ ರಕ್ಷಣೆಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬೆರಗು ಹುಟ್ಟಿಸುವ ಬೇತಾಳ: ರಾಜಶ್ರೀ. ಟಿ. ರೈ. ಪೆರ್ಲ

ಊರ ದೇವರ ಜಾತ್ರೆ ಬಂತು ಎಂದರೆ ಒಂಥರಾ ತನು ಮನದಲ್ಲಿ ಹೊಸ ಹುರುಪು ಹುಟ್ಟಿಕೊಳ್ಳುತ್ತದೆ. ಹಳೇಯ ನೆನಪುಗಳು, ಊರಿಗೆ ಬರುವ ಅಥಿತಿಗಳ ಸ್ವಾಗತದ ತಯಾರಿ. ಅದರಲ್ಲೂ ಧಕ್ಷಿಣ ಕನ್ನಡ ಕಾಸರಗೋಡು ಈ ಭಾಗದಲ್ಲಿ ದೇವಸ್ಥಾನದ ಜಾತ್ರೆಯೆಂದರೆ ಒಂದು ಬಗೆಯ ಸಾಂಸ್ಕøತಿಕ ಉತ್ಸವವೇ ಸರಿ.ಅಲ್ಲಿ ಎಲ್ಲವೂ ಉಂಟು ಎನ್ನುವ ಹಾಗೆ. ಪ್ರತೀ ದಿನ ನಿಗದಿತ ಹೊತ್ತಿಗೆ ನಡೆಯುವ ಪೂಜೆ ಮತ್ತು ಇತರ ನಿತ್ಯ ನೈಮಿತ್ತಿಕ ಕ್ರಿಯೆ ವಿಧಿಯನ್ನು ಬಿಟ್ಟರೆ ಕೆಲವು ಹಬ್ಬದ ಸಮಯಕ್ಕೆ ಸಣ್ಣ ಸಂಭ್ರಮ. ಆದರೆ ಜಾತ್ರೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬಡತನಕ್ಕೂ ಸೊಗಸಿದೆ ಎನ್ನುವ ಮುಕ್ಕಾದ ಭಿಕ್ಷಾಪಾತ್ರೆ ಬೌಲ್: ಡಾ. ನಟರಾಜು ಎಸ್.‌ ಎಂ.

ಎಂ ಎಸ್‌ ಮೂರ್ತಿಯವರ ಆಟೋಗ್ರಾಫ್‌ ಇರುವ ಅವರ ಬೌಲ್‌ ಕಾದಂಬರಿ ನನ್ನ ಕೈ ಸೇರಿ ಹತ್ತು ದಿನವಾಗಿರಬಹುದು. ಮೊದಲ ದಿನ ಊರಿನಲ್ಲಿ ಪುಸ್ತಕ ಓದಲು ಕುಳಿತಾಗ ಎರಡು ನಿಮಿಷಕ್ಕೆ ಒಂದು ಪುಟದಂತೆ ಐವತ್ತು ಪುಟಗಳ ಮೊದಲ ಅಧ್ಯಾಯವನ್ನು ಓದಿ ಮುಗಿಸಿದ್ದೆ. ಉಳಿದ ಅ‍ಧ್ಯಾಯಗಳನ್ನು ಬಿಡುವಿದ್ದಾಗ ಓದಿಕೊಂಡು ಇವತ್ತು ಬೆಳಿಗ್ಗೆ ಈ ಪುಸ್ತಕದ ಓದು ಪೂರ್ತಿಯಾಯಿತು. ಒಂದಷ್ಟು ಪುಟಗಳಲ್ಲಿನ ವಿಷಯಗಳು ಅದರಲ್ಲೂ ಗುರುಪರಂಪರೆಯ ಕುರಿತು ಬರೆದ ಅಧ್ಯಾಯಗಳು ಚೂರು confuse ಆದಂತೆ ಅನಿಸಿದ್ದರಿಂದ ಆ ಪುಟಗಳನ್ನು ಮತ್ತೆ ಓದಿಕೊಂಡೆ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ಹಸಿ ರಕ್ತ ಮುಸಿ ಮುಸಿ ನಗುತ್ತಲಿತ್ತುಎಡ ಬಲದ ಭುಜಹತ್ತಿ ಕ್ರೌರ್ಯ ಮೆರೆಯುತ್ತಲಿತ್ತುತಾನು ನಗುತ್ತಲೇ ಪ್ರಶ್ನೆ ಕೇಳುತ್ತಿತ್ತು? ಯಾರೊಳಗೆ ನಾನಿಲ್ಲ ?ನನ್ನ ಬಲ್ಲವರಿಲ್ಲನಿನ್ನೊಳಗಿನ ಅವನಅವನೊಳಗಿನ ನಿನ್ನನಡುವಿನಅಂತರ ಇಷ್ಟೇಅದು ನಾನು! ನಿನ್ನೊಳಗಿನ ನನಗೆನಾನಾ ಮುಖಗಳುನಾನಿದ್ದೆ ನನ್ನಂತೆನೀನೇ ತೊಡಿಸಿದೆಸಿದ್ದಾಂತದ ಸೋಗಿನಲ್ಲಿಧರ್ಮಾಂಧತೆಯ ಮಸಿಯನಾನೇನು ಮಾಡಲಿಕರ್ತವ್ಯ ಮುಗಿಸಿದೆಕಾರಣ ಇಷ್ಟೇಅದು ನಾನು! ಸಿಡಿವುದಷ್ಟೇ ಗೊತ್ತುಗುಂಡಿಗೆಕಡಿಯುವುದಷ್ಟೇ ಗೊತ್ತುಮಚ್ಚಿಗೆಪಾಪ ಅವುಗಳ ತಪ್ಪಿಲ್ಲತಪ್ಪಿಗೆ ತೀರ್ಪಿಷ್ಟೇಅದು ನಾನು ! ಹೆತ್ತವರೋ ಹೊತ್ತವರೋತುತ್ತಿಟ್ಟು ಸಾಕಿದವರೋಯಾರ ಕಣ್ಣೊರೆಸುವೆ ?!ನೀ ಸತ್ತನಂತರಬೇಕೇ ನಿಜ ಕಾರಣ ?ಹ್ಞೂಂ..!ಅದು ನಾನೆಂಬನೀನು ಅಷ್ಟೇ !! ಹಸಿ ರಕ್ತ ಮುಸಿ ಮುಸಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಗಾಡಿ ಹೋಟೆಲ್: ಎಸ್.ಗಣೇಶ್

ಸದಾಶಿವನಿಗೆ ಒಂದು ದೊಡ್ಡ ಚಟವಿತ್ತು. ತಿನ್ನೋ ಚಟ. ಯಾವಾಗಲೂ ಬಾಯಿ ಆಡ್ತಾನೇ ಇರಬೇಕು. ಅವರು, “ಗಾಡಿ ಹೋಟೆಲ್” ತಿಂಡಿ ಚಪಲ. ಮನೆಯಲ್ಲಿನ ಮೇವು ಹಿಡಿಸುತ್ತಿರಲಿಲ್ಲ. ಹೊರಗಡೆಯ ಯಾವುದೇ ತಿನಿಸು ಬಿಡುತ್ತಿರಲಿಲ್ಲ. ಬೇರೆ ಊರಿಗೆ ಹೋದರೂ.. ರಸ್ತೆ ಬದಿ ಕಾಣುತ್ತಿದ್ದ ಗಾಡಿ ಹೋಟೆಲ್ ಕಡೆಯೇ ಗಮನ. ಊಟದ ವಿಷಯಕ್ಕೆ ಎಷ್ಟೋ ಸಲ, ಮಡದಿ ಗಂಗಾಂಬ ಜೊತೆ ಜಗಳವಾಡಿಕೊಂಡು ಕಳೆದ ವರ್ಷ 12 ಬಾರಿ “ಗಾಡಿ ಹೋಟೆಲ್” ಜೊತೆ 1 ಬಾರಿಗೆ 1 ವಾರದಂತೆ ಸಂಸಾರ ಮಾಡಿದ ರೆಕಾರ್ಡ ಇದೆ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸೋಲಿಗರ ಜೊತೆ ಒಂದು ದಿನ: ಶೈಲಜೇಷ ಎಸ್.

ಮಳೆಗಾಲದ ಕಾಡು ಹೇಗೆ ಇರುತ್ತದೆ ಎಂದು ನಾನು ಹೇಳ ಬೇಕಿಲ್ಲ ಅಲ್ಲವೇ, ಅಂತ ಒಂದು ಸ್ಥಳ ಚಾಮರಾಜ ಜಿಲ್ಲೆಯ ಬಿಳಿಗಿರಿ ರಂಗನ ಬೆಟ್ಟ. ಸಾಮಾನ್ಯವಾಗಿ ಎಲ್ಲರೂ ಬಾಲ್ಯದಲ್ಲಿ ಪ್ರಯಾಣ ಅಂತ ಹೋಗುತ್ತಿದ್ದದ್ದೆ ವರುಷಕ್ಕೆ ಒಮ್ಮೆಯೋ ಅಥವಾ ಎರಡು ಬಾರಿಯೊ ಅಷ್ಟೆ, ಈಗ ಹಾಗಿಲ್ಲ ಪ್ರತಿವಾರದ ಕೊನೆಯ (weekend) ದಿನಗಳನ್ನು ಪ್ರಯಾಣದ ದಿನಗಳೆಂದೆ ಘೋಷಿಸಬಹುದು ಅಷ್ಟರ ಮಟ್ಟಿಗೆ ಎಲ್ಲರೂ ಪ್ರಯಾಣದಲ್ಲಿ ಇರುವವರೆ. ಕಾಡು, ಮೇಡು, ಚಾರಣ, ತೀರ್ಥಕ್ಷೇತ್ರ, ಪ್ರೇಕ್ಷಣೀಯ ಸ್ಥಳಗಳ, ರೆಸಾರ್ಟ್, ಹೋಮ್ ಸ್ಟೇಗಳು ಹೀಗೆ ಎಲ್ಲೆಲ್ಲೂ ಜನರಿಂದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ಯಾರ ಮಾನಸ್ಯಾಗ ಏನೈತೋ! ಬೊಗಸೆಯಾಗೆ ಏನಿಲ್ಲಕಣ್ಣ ತುಂಬಿ ಕಂಬನಿ ತುಳುಕ್ಯಾವಲ್ಲಯಾರ ಮನಸ್ಯಾಗ ಏನೈತೋಕಾಣದ ಆ ದ್ಯಾವನೆ ಬಲ್ಲ ಹೊರಳ್ಯಾದ ಹಕ್ಕಿ ಮರಳಿ ಗೂಡಿಗೆಹೋಗುವುದಾದರೂ ಹಾರಿ ಎಲ್ಲಿಗೆ?ಹಾರಲಿಕ್ಕ ಇರುವುದು ಆಕಾಸ ದಿಟಬದುಕೆನೆದ್ದರೂ ಭೂಮಿ ಮ್ಯಾಗೆ ಎಲ್ಲಿಂದ ಬಂದಿಯೋಅಲ್ಲಿಗೆ ಹೋಗಾಂವ ನೀಖರೇ ಅಂದ್ರ ನಿನ ಬದ್ಕು ಮೂರು ದಿನದ ಸಂತಿ ಐತಿಖದರಿರಲಿ ತಿಳಕೊಂಡು ಬಾಳು ನೀ ಎಷ್ಟಾಂತ ಹೊರ್ತಿಬವಣೆಗಳ ಮೂಟೆಗಳಇಷ್ಟಲಿಂಗ ಇಟ್ಟಂಗ್ ಆಗತೈತೆಯಾಕೆ ನೀ ಸುಮ್ನೆ ಚಿಂತಿ ಮಾಡ್ತಿ ಎಲ್ಲರೂ ಸಾಯೋವ್ರೆ ಒಂದ್ ದಿವ್ಸಅಮರ ಯಾರಿಲ್ಲ ಈ ಲೋಕದಾಗನೀ ನಡದಂತೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹೊಟ್ಟೆಪಾಡಾ..? ಸಾಧನೆಯಾ..?: ಮಧುಕರ್ ಬಳ್ಕೂರು

“ಯಾಕೋ ನನ್ ಟೈಮೇ ಚೆನ್ನಾಗಿಲ್ಲ. ಹಾಳಾದ್ದು ಈ ಟೈಮಲ್ಲೆ ಒಳ್ಳೊಳ್ಳೆ ಯೋಚನೆಗಳು ಬರ್ತವೆ. ಆದರೂ ಏನು ಮಾಡೋಕೆ ಆಗ್ತಾ ಇಲ್ಲ. ಥತ್…” ಹೀಗೆ ನಿಮಗೆನೆ ಗೊತ್ತಿಲ್ಲದಂತೆ ದಿಢೀರ್ ಅಂತ ಒಂದು ಅಸಹನೆ ಸ್ಪೋಟಗೊಳ್ಳುತ್ತೆ. ಖಂಡಿತ ನಿಮ್ಮ ಸಮಸ್ಯೆ ಇರೋದು ಟೈಮ್ ಚೆನ್ನಾಗಿಲ್ಲ ಅಂತಲ್ಲ. ನಿಜ ಹೇಳಬೇಕಂದ್ರೆ ಟೈಮು ಚೆನ್ನಾಗಿರೋದಕ್ಕೆನೆ ನಿಮ್ಮಲ್ಲಿ ಒಳ್ಳೆಯ ಯೋಚನೆಗಳು ಬರ್ತಿರೋದು. ಇನ್ನು ಹೇಳಬೇಕಂದ್ರೆ ನಿಮ್ಮಲ್ಲಿ ಒಳ್ಳೆಯ ವಿಚಾರಗಳು ಮೂಡುತ್ತಿವೆ ಅಂದ್ರೆ ಅದನ್ನ ಕಾರ್ಯರೂಪಕ್ಕೆ ಇಳಿಸುವುದಕ್ಕೆ ಇದಕ್ಕಿಂತ ಒಳ್ಳೆ ಟೈಮ್ ಮತ್ತೊಂದಿಲ್ಲ. ಆದರೂ ನಿಮಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಉಪ್ಪಿನ ಸತ್ಯಾಗ್ರಹ, ಅಸಹಕಾರ ಚಳುವಳಿಯ ಕೇಂದ್ರವಾಗಿದ್ದ ಬಸ್ರೂರು: ರಾಘವೇಂದ್ರ ಅಡಿಗ ಎಚ್ಚೆನ್.

ಭಾರತ ಸ್ವಾತಂತ್ರ್ಯ ಪಡೆದು 75 ವರ್ಷಗಳು ಸಂದಿದೆ. ಈ ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಮಹನೀಯರು ತಮ್ಮ ಜೀವನ, ಜೀವಗಳನ್ನು ತ್ಯಾಗ ಮಾಡಿ ಭಾರತಮಾತೆಗೆ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ. ಅದೇ ರೀತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಈ ಸಮಯದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಕರಾವಳಿ ಕರ್ನಾಟಕ ಅದರಲ್ಲಿಯೂ ಬಸ್ರೂರು, ಸುತ್ತಮುತ್ತಲಿನ ಜನರ ಕೊಡುಗೆಗಳ ಬಗ್ಗೆ ಚಿಕ್ಕ ಪರಿಚಯ ನೀಡುವ ಉದ್ದೇಶ ಇಲ್ಲಿಯದು. ಇಂದಿನ ಬಸ್ರೂರು ಹಿಂದೆಲ್ಲಾ ವಸುಪುರ ಎಂದು ಕರೆಯಲ್ಪಡುತ್ತಿತ್ತು ಇದು ಕರಾವಳಿಯ ವಾರಾಹಿ ನದಿ ದಂಡೆಯ ಮೇಲಿರುವ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಶ್ರಾವಣ ಮಾಸದ ಗೌರೀ ಹಬ್ಬದ ನೆನಪುಗಳು: ಡಾ. ವೃಂದಾ ಸಂಗಮ್

ಶ್ರಾವಣ ಮಾಸ ಅಂದರ ಹಬ್ಬಗಳ ಮಾಸ. ಅದು ಶುರುವಾಗೋದೇ, “ಈ ಸಲಾ ಐದು ಶುಕ್ರವಾರ ಬಂದಿಲ್ಲ, ನಾಲ್ಕೇ ವಾರ ಬರತಾವ. ಅದರಾಗೂ ಮೊದಲನೇ ವಾರ ನಾಗರ ಚೌತಿ, ಹಂಗಾದರ, ಎರಡನೇ ವಾರ, ಅಂದರ, ವರ ಮಹಾಲಕ್ಷ್ಮಿ ಏಕಾದಶೀನೋ, ದ್ವಾದಶೀನೋ, ಇರತದ, ಈ ಸಲಾ ಈ ಗೌರವ್ವನೂ ನಮಗ ಖರ್ಚು ಕಡಿಮೀ ಮಾಡ್ಯಾಳ.” ಅನ್ನುವ ಲೆಕ್ಕಾಚಾರದಿಂದ. ಯಾಕೆಂದರೆ, ಶ್ರಾವಣ ಮಾಸದ ಗೌರಿದೇವಿ ಅಂದರ ಭಕ್ತಿ ಎಷ್ಟೋ, ಮಡಿನೂ ಅಷ್ಟೇ, ಅಲ್ಲದೇ ಖರ್ಚೂ ಅಷ್ಟೇ ಹೆಚ್ಚು. ಶ್ರಾವಣ ಮಾಸದ ಖರ್ಚು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನೀನಿಲ್ಲದೇ ಇನ್ನೇನಿದೆ….: ಪೂಜಾ ಗುಜರನ್ ಮಂಗಳೂರು.

ಅದೆಷ್ಟು ದಿನಗಳು ಉರುಳಿದವುನಿನ್ನ ನೋಡದೆ ಮಾತು ಆಡದೆ.ಆದರೂ ನೀನೆಂಬ ಗುಂಗು..ಎದೆಯಲಿ ಮೂಡಿಸಿದ ರಂಗು..ಇವತ್ತಿಗೂ ಅಚ್ಚಳಿಯದೆ ಉಳಿದಿದೆ.ಇರಬೇಕು ಜೊತೆಯಲಿಒಂದಷ್ಟು ಮನಸ್ಸಿನ ಭಾರಗಳನ್ನುಇಳಿಸಿ ಅಳಿಸಲು.ಅದಿಲ್ಲದೆ ಹೋದಾಗಲೇ ಈಮನಸ್ಸುಗಳು ಭಾರವಾಗಿಬದುಕು ನಿರ್ಜೀವವಾಗುತ್ತದೆ.ತಡೆದಿರುವ ಮಾತುಗಳನ್ನು ನಿನ್ನವರೆಗೂ ತಲುಪಿಸಲು ಆಗದೆ ಒದ್ದಾಡಿದ ಕ್ಷಣಗಳು ಬಲು ಭೀಕರವಾಗಿತ್ತು‌. ಸಂಬಂಧಗಳನ್ನು ಜೋಡಿಸುವುದು ಸುಲಭ. ಆದರೆ ಅದನ್ನು ಉಳಿಸಿ ಬೆಳೆಸುವುದೇ ಬದುಕಿನ ಬಹುದೊಡ್ಡ ಸವಾಲು. ಇದೆಲ್ಲವನ್ನು ಅರ್ಥ ಮಾಡಿಕೊಳ್ಳಲು ನಿನ್ನ ಅನುಪಸ್ಥಿತಿಯೇ ಬರಬೇಕಾಯಿತು. ನನಗೆ ಗೊತ್ತಿಲ್ಲ. ಈ ಸಂಬಂಧಗಳು ಯಾಕೆ ಹುಟ್ಟುತ್ತವೆ ಎಂದು.‌ ನೀನು ನನ್ನ ಬದುಕಲ್ಲಿ ಯಾಕೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಸಂಪ್ರೀತಿ ಲೋಕದಲ್ಲೊಂದು ರೋಚಕ ಪಯಣ”: ಅನುಸೂಯ ಯತೀಶ್

ಕಾವ್ಯವೆಂದರೆ ಕೇವಲ ಒಡಿಬಡಿ ಕೌರ್ಯಗಳ ಅನಾವರಣವಲ್ಲ. ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಬರಹಗಳ ಸೃಷ್ಟಿಯದು. ನೋಂದವರ ಪಾಲಿಗೆ ಅಳುವ ಮಗುವನ್ನು ಲಾಲಿಸಿ ಪಾಲಿಸಿ ಸಂತೈಸುವ ಹೆತ್ತವ್ವನ ಮಡಿಲು‌, ಅಂತಕರಣದ ತೊಟ್ಟಿಲು, ಭರವಸೆಯ ಬೆಳದಿಂಗಳು, ಅನುಭವಗಳ ಹಾರ, ಪ್ರೀತಿ ಪ್ರೇಮದ ಸಮ್ಮಿಲನ. ಒಟ್ಟಾರೆ ಜೀವ ಕಾರುಣ್ಯವೇ ಕಾವ್ಯವಾಗಿದೆ. ಜೀವನ ಎಂಬುದು ಸಮತಟ್ಟಾದ ನುಣ್ಣನೆಯ ದಾರಿಯಂತಲ್ಲ. ಹುಬ್ಬು ತಗ್ಗುಗಳನ್ನು, ಅಂಕುಡೊಂಕುಗಳನ್ನು ಒಳಗೊಂಡ ದುರ್ಗಮ ಹಾದಿಯದು. ನಮಗರಿವಿಲ್ಲದಂತೆ ತಿರುವುಗಳನ್ನು ಪಡೆದುಕೊಂಡು, ಅನಿರೀಕ್ಷಿತವಾಗಿ ಘಟಿಸುವ ಸವಾಲುಗಳ ಸರಮಾಲೆಯದು. ಕೆಲವೊಮ್ಮೆ ನಮ್ಮ ತೀರ್ಮಾನಗಳೇ ನಮಗೆ ತಿರುಮಂತ್ರಗಳಾಗಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹರಿದ ಮುಗಿಲು: ರಾಯಸಾಬ ಎನ್. ದರ್ಗಾದವರ

ಆಗತಾನೇ ಪಶ್ಚಿಮದಲ್ಲಿ ದಿನನಿತ್ಯದ ಕೆಲಸ ಮುಗಿಸಿ ಧಗಧಗ ಉರಿಯುತ್ತಿದ್ದ ಸೂರ್ಯ ಊರು ಮುಂದಿನ ಎರಡು ಗುಡ್ಡಗಳ ಮಧ್ಯ ಅವುಗಳನ್ನು ತಿಕ್ಕಿಕೊಂಡು ಹೋಗುತ್ತಿರುವದಕ್ಕೋ, ಇಲ್ಲವೇ ಅವನದೇ ಶಾಖದಿಂದಲೋ ಕೆಂಪಾದಂತೆ ಕಂಡು ಮುಳಗಲು ತಯಾರಾಗಿದ್ದನು. ನೋಡಲು ಹೆಣ್ಣಿನ ಹಣೆಯ ಮೇಲಿರುವ ಕುಂಕುಮದಂತೆ ನೋಡುಗರಿಗೆ ಭಾಸವಾಗುತ್ತಿತ್ತು. ಬಿಸಿಲನ್ನು ಇಷ್ಟೋತನ ಸಹಿಸಿ ಬಿಸಿಯನ್ನು ಬೆಂಕಿ ಅಂತೆ ಬೀಸುತ್ತಿದ್ದ ಗಾಳಿಯು ತನ್ನ ವರೆಸಿಯನ್ನು ಬದಲಿಸಿ ತುಸು ತಂಪನ್ನು ತಣಿದ ಮೈಗೆ ಹಿತವೇನಿಸುವಷ್ಟು ಮುದವನ್ನು ನೀಡುತ್ತಿತ್ತು. ಹೊತ್ತಿನ ತುತ್ತಿಗಾಗಿ ತೆರಳಿದ್ದ ಹಕ್ಕಿಗಳು ಗೂಡು ಸೇರಿ ಸುತ್ತಲಿನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಗೀತ ಸಂತ ಸುಬ್ಬಣ್ಣ: ಡಾ. ಹೆಚ್ ಎನ್ ಮಂಜುರಾಜ್

ಮಾನವನೆದೆಯಲಿ ಆರದೆ ಉರಿಯುತಿದ್ದ ಪ್ರಜ್ವಲಿಪ ಗೀತಜ್ಯೋತಿ ಶಿವಮೊಗ್ಗ ಸುಬ್ಬಣ್ಣ ಎಂಬ ಸುಗಮ ಸಂಗೀತದರಸ ಮೊನ್ನೆ ಶಾಂತವಾದರು. ಕನ್ನಡ ಸುಗಮ ಸಂಗೀತವನು ಜನಪ್ರಿಯಗೊಳಿಸಿದವರು ಅವರು. ಸಿ ಅಶ್ವತ್ಥ್ ಅವರ ಹೆಸರಿನೊಂದಿಗೆ ಬೆಸೆದಿದ್ದ ತಂತು. ತಮ್ಮ ಎಂಬತ್ನಾಲ್ಕರ ವಯೋಮಾನದಲಿ ಅಸ್ತಂಗತರಾದ ಹಾಡು ಪಾಡಿನ ನೇಸರನೀತ. ಇವರ ನಿಜ ನಾಮಧೇಯ ಜಿ ಸುಬ್ರಹ್ಮಣ್ಯಂ. ತಂದೆ ಗಣೇಶರಾವ್, ತಾಯಿ ರಂಗನಾಯಕಮ್ಮ. ಶಿವಮೊಗ್ಗ ಜಿಲ್ಲೆಯ ನಗರ ಗ್ರಾಮದಲಿ 1938 ರಲಿ ಜನಿಸಿದರು. ಪ್ರತಿದಿನವೂ ಪೂಜೆ ಪುರಸ್ಕಾರ ನಡೆಯುತಿದ್ದ ಮನೆತನ. ತಾತನವರಾದ ಶಾಮಣ್ಣನವರು ಸಂಗೀತ ಕೋವಿದರು. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಿನ್ನ ಇಚ್ಛೆಯಂತೆ ನಡೆವೆ: ಮನು ಗುರುಸ್ವಾಮಿ

ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕಾಣಸಿಗುವ ವಿಭಿನ್ನ ವ್ಯಕ್ತಿತ್ವದ ಬರಹಗಾರರು. ತಮ್ಮನ್ನು ಜರಿದವರಿಗೆ ತಮ್ಮ ಕವಿತೆಗಳ ಮೂಲಕವೇ ಉತ್ತರ ಕೊಟ್ಟು, ಓದಿದರೆ ಕೆ ಎಸ್ ನರಸಿಂಹಸ್ವಾಮಿ ಅವರ ಕವಿತೆಗಳನ್ನೇ ಓದಬೇಕು ಎನ್ನುವಷ್ಟರ ಮಟ್ಟಿಗೆ ಒಂದು ಕಾಲದಲ್ಲಿ ಜನಪ್ರಿಯರಾಗಿದ್ದ ಕವಿ. ‘ಮೈಸೂರು ಮಲ್ಲಿಗೆ’ ಕವನ ಸಂಕಲನದ ಮೂಲಕ ಕನ್ನಡಿಗರ ಮನಮನೆಯಲ್ಲಿ ಮಾತಾದ ಪ್ರೇಮಕವಿ; ಅಲ್ಲಲ್ಲ ದಾಂಪತ್ಯ ಕವಿ. ನವೋದಯ, ರೋಮ್ಯಾಂಟಿಕ್ ಚಳವಳಿಯ ಕಾಲಘಟ್ಟದಲ್ಲಿ ಹೆಚ್ಚಾಗಿ ಗುರುತಿಸಿಕೊಳ್ಳುವ ಕೆ ಎಸ್ ನ “ನಾನು ಬರೆದ ಕವಿತೆಗಳು ಪ್ರೇಮಕವಿತೆಗಳಲ್ಲ, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಆಟಗಾಯಿ ಕಥೆಗಳು ಧ್ಯಾನಸ್ಥ ಸ್ಥಿತಿಗೆ ಜಾರಿ ಒಳಗಣ್ಣಿಂದ ನೋಡುವ ಪರೀಕ್ಷಿತ ಗುಣ ರೂಪದ್ದು”: ಎಂ.ಜವರಾಜ್

ಆನಂದ್ ಗೋಪಾಲ್ ಅವರ ‘ಆಟಗಾಯಿ’ ಕಥಾ ಸಂಕಲನ ನನ್ನ ಕೈಸೇರಿ ಸುಮಾರು ದಿನಗಳಾದರು ಓದಲು ಆಗದೆ ತಡವಾಗಿ ನೆನ್ನೆ ಬಿಡುವು ಮಾಡಿಕೊಂಡು ಒಂದೇ ಗುಕ್ಕಿಗೆ ಓದಿ ಮುಗಿಸಿದೆ. ಇಲ್ಲಿನ ಹನ್ನೊಂದು ಕಥೆಗಳಲ್ಲಿ ಐದಾರು ಕಥೆಗಳು ನನ್ನನ್ನು ಇನ್ನಿಲ್ಲದಂತೆ ಕಾಡಿದವು ಎಂಬುದಕ್ಕೆ ಅವುಗಳಲ್ಲಿನ ವಿಭಿನ್ನ ನಿರೂಪಣೆಯ ಕಥಾಧಾಟಿ! ‘ಆಟಗಾಯಿ’ ಗ್ರಾಮ್ಯ ಸೊಗಡಿರುವ ಪದ. ಇದರ ಮೂಲ ಭಾಷಾ ನುಡಿಗಟ್ಟು ‘ಪಗಡೆ’! ನನ್ನ ಕಾದಂಬರಿಗೆ ನಾನಿಟ್ಟ ಮೊದಲ ಹೆಸರು ‘ಪಗಡೆ’. ಕಾದಂಬರಿಯ ವಸ್ತು ವಿಷಯ ಮಾಸಾಳಿಗ ಮಾದಿಗರ ಕುಟುಂಬವೊಂದರ ಕುಲಕಸುಬು, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ