ನಿನ್ನ ಕೆಳತುಟಿಯ ಪಕ್ಕ ಇರುವ ಮಚ್ಚೆಯ ಮೇಲಾಣೆ..: ಡಾ. ಪ್ರೀತಿ. ಕೆ. ಎ
ಬೆಳದಿಂಗಳ ನಗುವಿನ ಹುಡುಗಿಯೇ, ಮೊನ್ನೆ ನಿನ್ನನ್ನು ಭೇಟಿಯಾದ ನಂತರ ನಾನು ನಾನಾಗಿ ಉಳಿದಿಲ್ಲ. ನಿನ್ನ ನೆನಪುಗಳನ್ನು ಎಷ್ಟೇ ಕೊಡವಿಕೊಂಡು ಎದ್ದರೂ ಮತ್ತೆ ಮತ್ತೆ ನಿನ್ನೆಡೆಗೇ ವಾಲುತ್ತಿದ್ದೇನೆ. ಮೊದಲಿಗೆ ಇದು ನಿನ್ನೆಡೆಗಿನ ಆಕರ್ಷಣೆಯಷ್ಟೇ ಅಂದುಕೊಂಡಿದ್ದೆ. ಹೆಚ್ಚೆಂದರೆ ಯಾವುದೋ ಗಳಿಗೆಯಲ್ಲಿ ಹುಟ್ಟಿ ಕೆಲವು ದಿನಗಳವರೆಗೆ ಕಾಡಬಹುದಾದ ಮೋಹವೆಂದುಕೊಂಡೆ. ಉಹುಂ.. ನನ್ನೆಣಿಕೆ ತಪ್ಪಾಯಿತು. ನೀನು ನನ್ನನ್ನು ಆವರಿಸಿಕೊಂಡ ಪರಿಗೆ ಬೆರಗಾಗುತ್ತಿರುವಾಗಲೇ ನಿನ್ನ ನೆನಪುಗಳ ಬಂಧದಿಂದ ಬಿಡಿಸಿಕೊಳ್ಳಲು ಹೆಣಗಾಡುತ್ತಿದ್ದೇನೆ. ಯಾರೋ ಗೀಚಿದ ಕವಿತೆಯ ಸಾಲುಗಳಲ್ಲಿ, ಓದಲು ಕೈಗೆತ್ತಿಕೊಂಡ ಕಥೆಯಲ್ಲಿ, ರಫಿಯ ಸಂಗೀತದ ಅಮಲಿನಲ್ಲಿ… … Read more