ಏನಂತ ಸಂಭೋದಿಸಲಿ ನಾ ನಿನ್ನ?: ಮಧು ಅಕ್ಷರಿ
ಏನಂತ ಸಂಭೋದಿಸಲಿ ನಾ ನಿನ್ನ? ಇದೇ ಪ್ರಶ್ನೆಯೊಂದಿಗೆ ಅದೆಷ್ಟು ಪತ್ರಗಳು ನಿನ್ನ ಮನೆಯಂಗಳವನ್ನಿರಲಿ, ಅಂಚೆಪೆಟ್ಟಿಗೆಯ ಮುಖವನ್ನೂ ಕಾಣದೆ, ಹರಿದು ಬರಿದಾಗಿ ಕಸದ ಬುಟ್ಟಿಯಲ್ಲಿ ಮೋಕ್ಷ ಪಡೆದಿವೆಯೋ? ಸಿಕ್ಕಿಬೀಳುವ ಭಯಕ್ಕೆ ಹೆದರಿ, ಅವಶೇಷವನ್ನೂ ಬಿಡದಂತೆ ಸುಟ್ಟು ಸಂಸ್ಕಾರ ಮಾಡಿದ್ದೂ ಆಯ್ತು. ಅಲ್ಲಿಗೆ ಎದೆಯಲ್ಲೋ, ತಲೆಯಲ್ಲೋ, ಅಸಲು ಸರಿಯಾದ ವಿಳಾಸವಿಲ್ಲದೇ, ನನ್ನಲ್ಲಿ ಉದಯಿಸಿದ ನವಿರಾದ ಭಾವನೆಗಳಿಗೆ ಕಾರಣನಾದ ನಿನ್ನ ಪರಿಚಯಿಸುವ ಮೊದಲೇ ಸಂಸ್ಕಾರವಾದದ್ದಾಯಿತು. ಮತ್ತೆ ಕುಳಿತಿರುವೆ ಉಕ್ಕಿಬರುವ ಭಾವಗಳ ಅದುಮಿಡಲಾಗದೇ. ನಿನ್ನೆದೆಗೆ ತಲುಪಿಸಿ ನಿರುಮ್ಮಳವಾಗಿ ಬಿಡುವ ಹಂಬಲದಿಂದ. ವಾಟ್ಸಪ್, ಟಿಂಡರ್, … Read more