ಕನ್ನಡದ ಉತ್ತಮವಾದ ಕವಿತೆಗಳನ್ನು ಓದುಗರಿಗೆ ತಲುಪಿಸುವ ನಿಟ್ಟಿನಲ್ಲಿ ಪಂಜು ಯೂ ಟ್ಯೂಬ್ ಚಾನಲ್ ಶುರು ಮಾಡಿದ್ದೇವೆ. ತಮ್ಮ ಕವಿತೆಗಳಿಗಿಂತ ಬೇರೆ ಕವಿಗಳ ಕವಿತೆಗಳನ್ನು ವಾಚಿಸುವ ಅವಕಾಶ ಪಂಜುವಿನ ಯೂ ಟ್ಯೂಬ್ ಚಾನಲ್ಲಿನಲ್ಲಿದೆ. ಬೇರೆಯವರ ಕವಿತೆಯನ್ನು ವಾಚಿಸುವ ಇಚ್ಚೆಯಿದ್ದರೆ ನೀವು ವಾಚಿಸಿರುವ ಕವಿತೆಯ voice ಸ್ಯಾಂಪಲ್ ಕಳಿಸಿ. ಉತ್ತಮವಾಗಿ ವಾಚನ ಮಾಡುವವರಿಗೆ ನಮ್ಮ ಯೂ ಟ್ಯೂಬ್ ಚಾನಲ್ ನಲ್ಲಿ ಕವಿತೆ ವಾಚಿಸುವ ಅವಕಾಶ ನೀಡಲಾಗುವುದು. ನಿಮ್ಮ ಕವಿತೆಯನ್ನು ಬೇರೆಯವರಿಂದ ವಾಚಿಸುವ ಇಚ್ಚೆ ಇದ್ದರೆ ನಿಮ್ಮ ಕವನ ಸಂಕಲನವನ್ನು ನಮಗೆ ಕಳುಹಿಸಬಹುದು. ಕವನ ಸಂಕಲನದಲ್ಲಿನ ಕವನಗಳಲ್ಲಿ ವಾಚನಕ್ಕೆ ಸರಿ ಹೊಂದುವ ಕವನಗಳನ್ನಷ್ಟೇ ವಾಚಕರಿಗೆ ನೀಡಲಾಗುವುದು.
ಇದರಲ್ಲಿ ಆಸಕ್ತಿ ಉಳ್ಳವರು ಸಂಪರ್ಕಿಸಿ: editor.panju@gmail.com, smnattu@gmail.com,
ನಮ್ಮ ಯೂ ಟ್ಯೂಬ್ ಚಾನಲ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ..
ಧನ್ಯವಾದಗಳೊಂದಿಗೆ
ಪಂಜು ಬಳಗ