ಮಕ್ಕಳ ಲೋಕ

ಕೌದಿ ಕಥೆಗಳು: ಗಂಗಮ್ಮ ಮಂಡಿಗೇರಿ

ರಾಕೇಶ್ ಎಂಬ ಬಾಲಕಿ ತನ್ನ ತಂದೆ ತಾಯಿ ಜೊತೆ ಬಡ ಜೀವನವನ್ನು ನಡೆಸುತ್ತಿದ್ದ. ತಂದೆ ಹೆಸರು ಸುರೇಶ ಮತ್ತು ತಾಯಿ ಸುಮಾ. ಚಿಕ್ಕವನಿದ್ದಾಗ ತಂದೆ-ತಾಯಿ ಎಲ್ಲಾ ಕೊಟ್ಟು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು ಆರೋಗ್ಯವಂತನಾಗಿ ಬೆಳೆದ ಆದರೆ ಅವನಲ್ಲಿ ಯಾವುದೇ ಕೌಶಲ ವಾಗಲಿ ಕಲೆಯಾಗಲಿ ಬರಲಿಲ್ಲ ರಾಕೇಶ ಸೋಮಾರಿಯಾಗಿ ಬೆಳೆಯುವುದನ್ನು ಕಂಡು ತಂದೆ ತಾಯಿಯು ಮನೆಯಲ್ಲೇ ಉಳಿಸಿಕೊಂಡರು.

ದಿನಕಳೆದಂತೆ ರಾಕೇಶನಿಗೆ ಬಡತನದ ಬೆಂಕಿ ತಗುಲಿತ್ತು. ಅವನಿಗೆ ಹೊಟ್ಟೆಬಟ್ಟೆಯ ಚಿಂತೆ ಶುರುವಾಯಿತು ಆದರೂ ಅವನು ಊರಿನಲ್ಲಿ ಸೋಮಾರಿಯಾಗಿ ಓಡಾಡುತ್ತಾ ತಿರುಗಾಡುತ್ತಾ ಸಮಯವನ್ನು ವ್ಯಯ ಮಾಡುತ್ತಾ ದಿನೇದಿನೇ ಬಡತನವನ್ನು ಬಡತನದಲ್ಲಿ ಬೇಯ ತೊಡಗಿದನು ಆದರೆ ಅವನಿಗೆ ಒಂದು ದಿನವೂ ಬುದ್ಧಿನೇ ಬರಲಿಲ್ಲ ಅವನಲ್ಲಿ ದುಡಿಯುವ ಆಸೆಯೇ ಚಿಗುರಲಿಲ್ಲ.

ವಯಸ್ಸಾದ ತಂದೆ-ತಾಯಿ ಕಾಯಿಲೆಗೆ ತುತ್ತಾದರು ಆಗ ರಾಕೇಶನಿಗೆ ಏನು ಮಾಡಬೇಕೆಂದು ತಿಳಿಯದೆ ಕೈಯಲ್ಲಿ ದುಡ್ಡು ಇಲ್ಲದೆ ಯೋಚನೆ ಮಾಡುತ್ತ ರಸ್ತೆಯಲ್ಲಿ ಅಲೆದಾಡಲು ಪ್ರಾರಂಭಿಸಿದ. ಯಾರದೋ ಮನೆಯ ಕಾಂಪೌಂಡಿನ ಮೇಲೆ ತೊಳೆದುಹಾಕಿದ್ದು ಕೌದಿಯೊಂದು ಕಾಣಿಸಿತು. ರಂಗುರಂಗಿನ ಕೌದಿಯನ್ನು ನೋಡಿದ ರಾಕೇಶನಿಗೆ ಒಳ್ಳೆ ಯೋಚನೆಗಳು ಬರಬೇಕಿತ್ತು ಆದರೆ ರಾಕೇಶ ಆ ಕೌದಿಯನ್ನು ಕದ್ದು ಅದನ್ನು ಇನ್ನೊಬ್ಬರಿಗೆ ಮಾರಿದರೆ ನನಗೆ ಇದರಿಂದ ಹಣ ಸಿಗಬಹುದು ಎಂದು ಯೋಚಿಸಿದ ಮತ್ತೆ ಅದನ್ನು ಕದ್ದೆ ಬಿಟ್ಟ. ಅಂತಹ ರಂಗುರಂಗಿನ ಕೌದಿಯನ್ನು ನೀಟಾಗಿ ಮಡಚಿ ಪ್ಯಾಕ್ ಮಾಡಿ ಪೇಟೆಗೆ ತೆಗೆದುಕೊಂಡು ಹೋದನು ಪೇಟೆಯಲ್ಲಿ ರಾಕೇಶ ಕೌದಿಯನ್ನು 300 ರೂ ಗೆ ಮಾರಿದ. ನಂತರ ಮನೆಗೆ ಹೋಗಿ ತಂದೆಯನ್ನು ಆಸ್ಪತ್ರೆಗೆ ಸೇರಿಸಿದ ಹಣ ಸಾಕಾಗಲಿಲ್ಲ ಆದರೂ ಅವರು ಚೇತರಿಸಿಕೊಂಡು ಆರೋಗ್ಯವಂತರಾಗಿ ಮನೆಗೆ ಬರುತ್ತಾರೆ.

ಆದರೆ ರಾಕೇಶನ ಕನಸಿನಲ್ಲಿ ಅವನ ಸ್ನೇಹಿತರೆಲ್ಲರು ಅವನನ್ನು ಕೌದಿ ಕಳ್ಳ ಕೌದಿ ಕಳ್ಳ ಕಳ್ಳ ಕಳ್ಳ ಎಂದು ಹಾಸ್ಯ ಮಾಡಿ ನಗುತ್ತಿದ್ದಂತೆ ಕನಸು ಕಂಡ. ಇದರಿಂದ ರಾಕೇಶ್ ಬಹಳ ಖಿನ್ನತೆಯನ್ನು ಅನುಭವಿಸಿದ ಮತ್ತು ಒಮ್ಮೆ ಯೋಚಿಸಿದ ನಾನು ಬರೀ ಕೌದಿಗಳನ್ನು ಕದ್ದು ಹಣ ಸಂಪಾದಿಸಿದೆ ಆದರೆ ಕೌದಿ ಕದಿಯುವಾಗ ಎಂದಾದರೂ ಒಂದು ದಿನ ಸಿಕ್ಕಿಹಾಕಿಕೊಳ್ಳಬಹುದು ನನಗೆ ಕಳ್ಳ ಎಂಬ ಪಟ್ಟ ಸಿಗಬಹುದು ಎಂಬುದನ್ನು ಯೋಚಿಯೇ ಇರಲಿಲ್ಲ.. ಇನ್ನುಮೇಲೆ ಕೌದಿ ಕದಿಯುವದನ್ನು ಬಿಟ್ಟು ನಾನು ನನ್ನ ಕೈಯಾರೆ ಹೊಸ ಕೌದಿಗಳನ್ನು ತಯಾರಿಸಿ ಮಾರಾಟ ಮಾಡಿದರೆ ನಾನು ಸ್ವಂತ ಉದ್ಯೋಗ ನಡೆಸಬಹುದು ಎಂದು ಯೋಚಿಸಿ ರಾಕೇಶ ಮನೆಮನೆಗಳಿಗೆ ಹೋಗಿ ಚಿಂದಿ ಬಟ್ಟೆಗಳನ್ನು ಕೇಳಿ ಪಡೆದು ಸಂಗ್ರಹಿಸಿಕೊಂಡು ಸ್ವಂತ ಕೌದಿ ಹೊಲಿಯುವುದನ್ನು ಪ್ರಾರಂಭಿಸಿದ. ಇನ್ನು ಕೌದಿ ವ್ಯಾಪಾರವೇ ನನ್ನ ಸ್ವಂತ ಉದ್ಯೋಗ ಎಂದುಕೊಂಡು ವ್ಯಾಪಾರ ಶುರುಮಾಡಿದ. ತಂದೆ ತಾಯಿಯರನ್ನು ಚೆನ್ನಾಗಿ ನೋಡಿಕೊಂಡ. ರಾಕೇಶ ತಯಾರಿಸಿ ಅವುಗಳನ್ನು ಮಾರಿ ಜೀವನ ನಡೆಸುತ್ತಾ ಒಂದು ಉತ್ತಮವಾದ ಸಂತೋಷವಾದ ಜೀವನವನ್ನು ನಡೆಸಲು ಪ್ರಾರಂಭಿಸಿದ.

ರಾಕೇಶ್ ನ ಉದ್ಯೋಗಕ್ಕೆ ಸಾಥ್ ನೀಡಲು ತಾಯಿ ಸುಮಾ ಮತ್ತು ತಂದೆ ಸುರೇಶ ಇಬ್ರೂನೂ ಕೆಲಸದಲ್ಲಿ ತೊಡಗಿಸಿಕೊಂಡರು ನೆರಳಿನಲ್ಲಿ ಕುಳಿತು ಕೆಲಸ ಮಾಡಬಹುದಾದ್ದರಿಂದ ಅವರು ದುಡಿಮೆಯಲ್ಲಿ ತೊಡಗಿಸಿಕೊಂಡರು. ಮನೆಯ ಆರ್ಥಿಕ ಪರಿಸ್ಥಿತಿ ಉತ್ತಮವಾಗತೊಡಗಿತ್ತು. ಅಂದಿನಿಂದ “ಸೋಮಾರಿ ರಾಕೇಶ್” ಎಂಬುದರ ಬದಲಾಗಿ ನಮ್ಮೂರಿನ “ಉದ್ಯಮಿ ರಾಕೇಶ್” ಎಂಬುದಾಗಿ ಹೆಸರು ಚಿರಪರಿಚಿತವಾಯ್ತು…

-ಗಂಗಮ್ಮ ಮಂಡಿಗೇರಿ


ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *