
ಈ ವೀಕೆಂಡ್ನಲ್ಲಿ “ಅಲೈದೇವ್ರು” ನಾಟಕವನ್ನು ನೀವು ಮನೆಯಲ್ಲೆ ಕುಳಿತು ನೋಡಬಹುದು. ನೀವು ನೋಡಿ ಫೀಡಬ್ಯಾಕ್ ಕೊಟ್ರೆ ನಮ್ಮ ತಂಡಕ್ಕೆ ಖುಷಿ.
ಲಾಕ್ಡೌನ್ ಇರದಿದ್ರೆ ಇಷ್ಟೊತ್ತಿಗೆ ನಮ್ಮ ಜನರಂಗದಿಂದ “ಅಲೈದೇವ್ರು” ನಾಟಕ ಹತ್ತಾರು ಪ್ರದರ್ಶನ ಕಾಣುತ್ತಿತ್ತೇನೋ. ಸಾಲಸೋಲ ಮಾಡಿ, ಕೆಲವರು ಹತ್ರ ಇಸ್ಕೊಂಡು, ಲಕ್ಷಾಂತರ ರೂಪಾಯಿ ಖರ್ಚು ಮಾಡಿ 35 ಜನ ಹೊಸಬರೊಂದಿಗೆ ನಾಟಕ ಕಟ್ಟಿದ್ದೆವು. ಆದರೆ, ಇನ್ನು ಮುಂದೆ ಪ್ರದರ್ಶನವಾಗುತ್ತೋ ಇಲ್ಲವೋ ಗೊತ್ತಿಲ್ಲ. ಆದ್ದರಿಂದ ಈ ನಾಟಕವು ಈಗ ಜೂನ್ 19ರಿಂದ ಶನಿವಾರ ಬೆಳಿಗ್ಗೆ 7 ಗಂಟೆಯಿಂದ ಜೂನ್ 20 ಭಾನುವಾರ ರಾತ್ರಿ 12ರವರೆಗೆ ಯೂಟ್ಯೂಬ್ ನಲ್ಲಿ ಸಕ್ರಿಯವಾಗಿರುತ್ತದೆ. ನೀವು ಮನೆಯಲ್ಲಿಯೇ ಕುಳಿತು ಮೊಬೈಲ್/ ಕಂಪ್ಯೂಟರ್/ ಲ್ಯಾಪ್ಟಾಪ್/ ಆಂಡ್ರಾಯ್ಡ್ ಟಿವಿಯಲ್ಲಿ ವೀಕ್ಷಣೆ ಮಾಡಬಹುದು.
ಟಿಕೆಟ್ ದರ: ₹ 100 ರೂ. ಫೋನ್ ಪೇ, ಗೂಗಲ್ ಪೇ ಮೂಲಕ ಸಹ (7676464661)ಗೆ ಪಾವತಿಸಬಹುದು.
ಈ ಗೂಗಲ್ ಫಾರ್ಮ್ ಅನ್ನು ಭರ್ತಿ ಮಾಡಿ ನಮಗೆ ಕಳಿಸಿದರೆ ನಿಮ್ಮ ರಿಜಿಸ್ಟರ್ಡ್ ಮೊಬೈಲ್ ಗೆ ನಾಟಕದ ಲಿಂಕ್ ಕಳಿಸಲಾಗುವುದು. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 7676464661/8431390264
-ಅಲೈ ದೇವ್ರು ನಾಟಕ ತಂಡ..