ಕತ್ರಿ ಪತ್ರಿ ಛತ್ರಿ
ಪುಟ್ಟ ದಿನಾಲು ಓದುವುದು ಖಾತ್ರಿ
ಪೂಜಿಸುವನು ದೇವರಿಗೆ ಎರಿಸಿ ಪತ್ರಿ
ಮಳೆ ಬಂದಾಗ ತರುವನು ಛತ್ರಿ
ಪರೀಕ್ಷೆ ಅಂಕಗಳಿಗೆ ಬಿದ್ದರೆ ಕತ್ರಿ
ಅಪ್ಪ ಬಯ್ಯುವುದು ಖಾತ್ರಿ
ಅವ್ವನು ಸಿಟ್ಟಾಗ್ತಾಳೇ ಗೊತ್ರಿ
ಅಂದಿನದ ಅಂದಿಗೆ ಓದುವನು ರಾತ್ರಿ
ಅಂಕಗಳು ಹೆಚ್ಚುವುದು ಖಾತ್ರಿ
ಬಾಯಿಗೆ ಹಾಕ್ತಾರೆ ಮೈಸೂರ ಪಾಕ್ ರೀ ..
-ನಾಗರಾಜನಾಯಕ ಡಿ.ಡೊಳ್ಳಿನ
ಇಷ್ಟ – ಕಷ್ಟ
ಸ್ನಾನವ ಮಾಡಲು
ಬಲು ಇಷ್ಟ
ಬಿಸಿ – ಬಿಸಿ ನೀರಾದರೆ
ಬಲು ಕಷ್ಟ!
ಪಾಠವ ಓದಲು
ಬಲು ಇಷ್ಟ
ಲೆಕ್ಕವ ಮಾಡಲು
ಬಲು ಕಷ್ಟ!
ಮೊಬೈಲ್ ಗೇಮು
ಬಲು ಇಷ್ಟ
ಕಬಡ್ಡಿ ಖೊ – ಖೋ
ಬಲು ಕಷ್ಟ!
ಬಣ್ಣದ ಚಿತ್ರವ ಬರೆಯಲು
ಬಲು ಇಷ್ಟ
ಹೋಮ್ ವರ್ಕ್ ಮಾಡಲು
ಬಲು ಕಷ್ಟ!
ಸೌತೆಕಾಯಿ ತಿನ್ನಲು
ಬಲು ಇಷ್ಟ
ಹಾಗಲಕಾಯಿ ಎಂದರೆ
ಬಲು ಕಷ್ಟ!
ಅಮ್ಮನ ಅಡುಗೆಯು
ಬಲು ಇಷ್ಟ
ಪಿಜ್ಜಾ ಬರ್ಗರ್ ಅಂದರೆ
ಬಲು ಕಷ್ಟ!
-ಪರಮೇಶ್ವರಪ್ಪ ಕುದರಿ