ಶ್ರೀ. ಗಣಪತ್ ಕಾಕೋಡೇಜಿ, ನಮ್ಮ ಕಾಲೋನಿಯ ಭರವಸೆಯ ಪೋಸ್ಟ್ಮನ್ !: ಎಚ್. ಆರ್. ಲಕ್ಷ್ಮೀವೆಂಕಟೇಶ್

ಲೇಖಕರೊಂದಿಗೆ ಶ್ರೀ. ಗಣಪತ್ ಕಾಕೋಡೇಜಿ

ಕಾಕೋಡೆ ಅವರನ್ನು ನಾನು ಸುಮಾರು ೧೦ ವರ್ಷಕ್ಕೂ ಹೆಚ್ಚು ಸಮಯದಿಂದ ಬಲ್ಲೆ ಎಂದರೆ ತಪ್ಪಾಗಲಾರದು. ನಮ್ಮ ಹಿಮಾಲಯ ಕಾಲೋನಿಯ ಭರವಸೆಯ ಪೋಸ್ಟ್ಮನ್ ಎಂದು ಅವರನ್ನು ಕರೆಯಲು ಹಲವು ಕಾರಣಗಳೂ ಇವೆ. ತನ್ನ ವೃತ್ತಿಯಲ್ಲೂ ಕೆಲವು ಮಹತ್ವವೆಂದು ನಾನು ಕರೆಯುವ (ಬೇರೆಯವರಿಗೆ ಇದು ಅಷ್ಟು ಮುಖ್ಯವಾಗಿ ಕಾಣಿಸದೆ ಇರಬಹುದು) ಕಾರ್ಯಗಳನ್ನು ಅವರು ಮಾಡಿದ್ದಾರೆ ಎಂದರೆ ಸುಳ್ಳಲ್ಲ. ಯಾವುದೇ ಕೆಲಸ ತನ್ನದೇ ಆದ ಮಹತ್ವವನ್ನು ಪಡೆದಿದೆ. ಅದನ್ನು ಎಷ್ಟು ಜನ ಗುರುತಿಸುತ್ತಾರೆ ಎನ್ನುವುದು ಮುಖ್ಯ.

ವರ್ಷ ೨೦೦೮ ರಲ್ಲಿ ನಾವು ನಾನು ಮತ್ತು ನನ್ನ ಹೆಂಡತಿ, Passport/Visa ಮಾಡಿಸಲು Passport Office ಗೆ ಹೋಗಿದ್ದೆವು. ಆದಮೇಲೆ ನಿಮ್ಮ Pass port Documents ನ್ನು ನಿಮ್ಮ ಮನೆಗೇ ಪೋಸ್ಟ್ ಮಾಡುತ್ತೇವೆ ಎಂದು ಅಧಿಕಾರಿಗಳು ವಾಗ್ದಾನ ಮಾಡಿದರು. ಅದಕ್ಕೇ ನಾವು ಪ್ರತಿದಿನವೂ ಪೋಸ್ಟ್ಮನ್ ಬರುವ ದಾರಿಯನ್ನೇ ಕಾಯುತ್ತಿದ್ದೆವು. ಆ ಸಮಯದಲ್ಲಿ ಪರಿಚಿತನಾದವರೇ, ನಾನು ಪ್ರಸ್ತಾಪಿಸುತ್ತಿರುವ ಕಾಕೋಡೆಯವರು. ಅವರು ನಮ್ಮ ಎರಡನೆಯ ಅಂತಸ್ತಿಗೆ ಹತ್ತಿಬಂದು ನಮ್ಮ ಮನೆಯ ಟಪ್ಪಾಲನ್ನು ಸರಿಯಾಗಿ ತಲುಪಿಸುತ್ತಿದ್ದರು. ಅವರಿಗಾಗಿ ಕಾಯುತ್ತಿದ್ದ ನಮ್ಮಿಬ್ಬರ ಕಣ್ಣಿನ ನೋಟದಿಂದಲೇ ಕಾಕೊಡೆಯವರು ಅರಿತು ಮುಗುಳ್ನಕ್ಕು ‘ಆಜ್ ನಹಿ’ ಎಂದು ಹೇಳಿ ಹೋಗುತ್ತಿದ್ದರು. ತಿಂಗಳಿನ ಕೊನೆಯಲ್ಲಿ ಆಜ್ ಆಯಾ ಹೈ ಲೇಲೋ; ಮೇಡಂ ಕ ಆಯಾ ಹೈ ಎಂದು ಒಂದು ಕವರ್ ಕೊಟ್ಟು ಸಹಿಪಡೆದು ಹೋದರು. ನನ್ನ ಕಡೆ ತಿರುಗಿ, ಆಪ್ ಕಾ ಆಗಲೇ ಹಫ್ತಾ ಆಯೇಗಾ. ಫಿಕರ್ ಮತ್ ಕರೋ ಎಂದು ಹೇಳಿದ್ದು ಅಷ್ಟು ಸಮಾಧಾನ ನೀಡಲಿಲ್ಲ. ನಾನು ಇವಳೂ ಇಬ್ಬರೂ ಒಂದೇ ದಿನ ಹೋಗಿದ್ದೆವು. ಆದರೆ ನನ್ನದೇಕೆ ತಡ ಎಂದು ಮನಸ್ಸು ತಡೆಯದೆ ಬಡಬಡಾಯಿಸುತ್ತಿದ್ದೆ. ಗೊತ್ತಲ್ಲ ; ಏನೋ ತಪ್ಪು ನೀವು ಮಾಡೇ ಇರ್ತೀರಿ ಸ್ವಲ್ಪ ಕಾಯ್ಬೇಕು ಅಷ್ಟೇ ಎಂದು ನನ್ನ ಹೆಂಡತಿ ಕಿರುನಗೆ ಎಸೆದಾಗ, ಯಾಕೋ ನನ್ನ ಬಗ್ಗೆ ನನಗೇ ಅನುಮಾನವಾಗತೊಡಗಿತು. ೩-೪ ದಿನ ಹೇಗೋ ಕಷ್ಟಪಟ್ಟು ಕಾದೆ. ನಂತರ ಯಾಕೋ ಮನಸ್ಸು ತಡೆಯಲಿಲ್ಲ. ಜೂನ್ ತಿಂಗಳು, ‘ಸುಯ್ಯೋ’ ಎನ್ನುವ ಗಾಳಿ ಮಳೆ ಬೇರೆ.

ಬರ್ವೆ ನಗರ್ ಪೋಸ್ಟ್ ಆಫೀಸ್ ಗೆ ರಿಕ್ಷಾದಲ್ಲೇ ಹೋದಾಗ, ಕೊಡೆಯಿದ್ದರೂ ರಸ್ತೆಯಿಂದ ಪೋಸ್ಟ್ ಆಫೀಸ್ ಒಳಗೆ ಹೋಗುವುದರೊಳಗೆ ನಾನು ತೊಯ್ದು ತೊಪ್ಪೆಯಾಗಿದ್ದೆ. ಅಂಚೆ ಕಚೇರಿಯ ಒಳಗೆ ಕಣ್ಣುಹಾಯಿಸಿದಾಗ ಕಂಡದ್ದೇನು ? ಪೋಸ್ಟ್ ಮಾಸ್ತರ್ ಒಂದು ಕುರ್ಚಿಯ ಮೇಲೆ ಕೊಡೆ ಹಿಡಿದುಕೊಂಡು ಕೂತಿದ್ದಾರೆ. ಒಂದು ದೊಡ್ಡ ಟಬ್ ನಲ್ಲಿ ಪೋಸ್ಟ್ ಕವರ್, ಪರ್ಸೆಲ್ಸ್ ಎಲ್ಲಾ ಒಟ್ಟಿದ್ದಾರೆ. ಕಟ್ಟಡದ ಛಾವಣಿಯಿಂದ ಗೋಡೆಯಮೇಲೆ ಧಾರಾಕಾರವಾಗಿ ನೀರು ಕೆಳಗೆ ಹರಿದು ಬಂದು ರೂಮಿನ ಹೊರಗೆ ಪುಟ್ಟ ನದಿಯ ತರಹ ಹರಿಯುತ್ತಿದೆ. ಒಂದು ಆಫೀಸ್ ಅದೂ ಪೋಸ್ಟ್ ಆಫೀಸ್ ಗೆ ಯೋಗ್ಯವಲ್ಲದ ಪರಿಸರದ ಕಟ್ಟಡದಲ್ಲಿ ಇವರೆಲ್ಲ ಹೇಗೆ ಕೆಲಸಮಾಡುತಿದ್ದಾರೆ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿತ್ತು. ! ಇದು ನನಗನ್ನಿಸಿತೇ ವಿನಃ ಅಲ್ಲಿನ ಪೋಸ್ಟಲ್ ಪರಿವಾರಕ್ಕೆ ಏನೋ ಆಗಲೇ ಇಲ್ಲವೇನೋ. ಇವೆಲ್ಲ ಸರ್ವೇ ಸಾಮಾನ್ಯವೇನೋ ಎನ್ನುವಂತೆ ಕೆಲವರು ಕಾಗದ ಕವರ್ ಗಳಿಗೆ ಪೋಸ್ಟಲ್ ಮುದ್ರೆ ಹೊಡೆಯುತ್ತಿದ್ದರು.

ನಿಧಾನವಾಗಿ ಮಳೆ ಕಡಿಮೆಯಾಗಿ ನಿಂತಾಗ, ಕೋಣೆಯೊಳಗೆ ಹೋದೆ. ನಮ್ಮ ಮನೆಕಡೆಗೆ ಬರುವ ಪೋಸ್ಟ್ಮನ್ ಕಾಣಿಸಲಿಲ್ಲ. ಅಲ್ಲಿಯೇ ಕೆಲಸಮಾಡುತ್ತಿದ್ದ ಪೋಸ್ಟ್ಮನ್ ಗಳಲ್ಲಿ ಒಬ್ಬನನ್ನು ‘ನನಗೆ ಇನ್ನು ಏಕೆ ಟಪಾಲು ಬರಲಿಲ್ಲ’ ಎಂದು ಕೇಳಿದೆ. ಅವನು ನನಗೆ ಉತ್ತರ ಹೇಳುವ ಪರಿಸ್ಥಿತಿಯಲ್ಲಿರಲಿಲ್ಲ. ‘ಸಾಹೇಬ್ ನೋಡಿ, ಎಲ್ಲಿ ಅಂತ ನಿಮ್ಮ ಕವರ್ ಹುಡುಕಲೀ ? ಎಲ್ಲ ಕಡೆಯೂ ನೀರಿದೆ’. ಎಂದು ಮುಖ ಹಿಂಡಿಕೊಂಡು ಕೊಟ್ಟ ಉತ್ತರದಿಂದ ನಾನು ವಿಚಲಿತನಾದೆ. ಪೋಸ್ಟ್ ಮಾಸ್ತರ್ ಥಂಡಿಯಿಂದ ನಡುಗುತ್ತಿದ್ದರು. ನಾನು ಅವರನ್ನು ಸರ್ ‘Complaint book’ ದೀಜಿಯೇ ಎಂದು ಕೇಳಿದಾಗ ಅವರಿಗೆ ಉತ್ತರ ಕೊಡುವುದು ಕಷ್ಟವಾಯಿತು.’ಆಪ್ ಹೀ ದೇಖ್ ರಹೇ ಹೋ ಮೈ ಉಸೆ ಕಿಧರ್ ಸೆ ಢುಂಡೂ’ ಎಂದಾಗ ನನಗೂ ‘ಪಿಚ್’ ಎನ್ನಿಸಿತು. ಅವರು ‘ಕದಂ’ ಎನ್ನುವವರನ್ನು ಕರೆದು ‘ಇಸ್ಕೊ ಢುಂಡ್ಕೆದೇವ್’, ಎಂದು ಹೇಳಿದಮೇಲೆ ಅರ್ಥಗಂಟೆಯ ನಂತರ ಆ ಪುಸ್ಕಕ ನನ್ನ ಕೈಗೆ ಬಂತು. ಅದರಲ್ಲಿ ಬರೆಯಲು ಮನಸ್ಸು ಬರಲಿಲ್ಲ. ಎಲ್ಲಾ ಮಳೆಯ ನೀರಿನಿಂದ ನೆಂದ ಹಾಳೆಗಳು. ಪೋಸ್ಟ್ ಮಾಸ್ತರ್ ತಮ್ಮ ಸಮಸ್ಯೆಗಳನ್ನು ಒಂದೊಂದಾಗಿ ಹೇಳಲು ಶುರುಮಾಡಿದರು. ಹಮಾರಾ ಪ್ರಾಬ್ಲೆಮ್ಸ್ Public ಕೋ ಮಾಲೂಮ್ ನಹಿ ಪಡ್ತಾ ಹೈ. “ದೇಖೊ ಗಯಾ ಹಫ್ತೆ Senior Departmental Officers ಆಯೇ ಥೆ. ಸಬ್ ದೇಖ್ ಕೆ ಗಯೇ ಹೈ. ಮಾನ್ಸೂನ್ ತಬ್ ಚಾಲೂ ನಹೀ ಹುವಾ ಥಾ. ಹಮಾರಾ ತಕ್ಲೀಫ್ ಕಿಸೀ ಕೋ ಮಾಲೂಮ್ ನಹೀ ಪಡ್ತಾ ಹೈ; ಆಪ್ ಜೈಸಾ ಇಸೇ ದೇಖ್ ಕೆ Complaints ಲಿಖ್ ಕೆ ದೇನೇ ಸೆ ಕುಛ್ ಅಸರ್ ಹೋತಾ ಹೈ ಮುಝೆ ಮಾಲೂಮ್ ನಹೀ ಹೈ” ಎಂದು ಹೇಳಿದಾಗ ಅವರ ಕಂಠನಡುಗುತ್ತಿತ್ತು. ತಲೆಯನ್ನು ಮೇಲೆತ್ತಲೂ ಅವರಿಗೆ ಬೇಸರವಾಗಿತ್ತು.

ಶ್ರೀ. ಗಣಪತ್ ಕಾಕೋಡೇಜಿ

ರಾಜ್ಯ ಸಾರಿಗೆ ವ್ಯವಸ್ಥೆ :

ನನಗೆ ನಿಧಾನವಾಗಿ ಮಹಾರಾಷ್ಟ್ರದ ಕೆಲವು ರಾಜ್ಯ ಸರ್ಕಾರದ ಖಾತೆಗಳ ಗತಿ ವಿಧಾನಗಳ ಬಗ್ಗೆ ಅಲ್ಪ-ಸ್ವಲ್ಪ ತಿಳಿದಿದ್ದಿದ್ದು ನೆನಪಿಗೆ ಬಂತು. ರಾಜ್ಯ ಸಾರಿಗೆ ಬಸ್ ವ್ಯವಸ್ಥೆ ದೇಶದಲ್ಲಿಯೇ ಅತ್ಯಂತ ಕರುಣಾಜನಕವಾಗಿದೆ. ಆ ಬಸ್ ಗಳಲ್ಲಿ ಪ್ರಯಾಣಮಾಡಲು ಬಹಳ ಕಷ್ಟವಾಗುತ್ತದೆ. .

ರೇಷನ್ ಆಫೀಸ್ ವ್ಯವಸ್ಥೆ :

ಆಫೀಸಿನ ಒಳಗೆ ಕೂಡಲು ಸರಿಯಾದ ಕುರ್ಚಿಗಳಿಲ್ಲ ಕೆಲಸಮಾಡಲು Tables ಗಳಿಲ್ಲ. ಕುರಿಯ ರೊಪ್ಪದ ತರಹದ ಚಾಲ್ ಮಾದರಿಯ ಕಟ್ಟಡದ ಪೋಸ್ಟ್ ಆಫೀಸ್ ಗಳು Dadar Post Office ಮತ್ತೆ ಕೆಲವುPost office ಗಳನ್ನು ಬಿಟ್ಟರೆ ಬೇರೆ ಎಲ್ಲಾ ತೀರಾ ಹೀನ ಪರಿಸ್ಥಿತಿಯಲ್ಲಿವೆ. ಅಲ್ಲಿನ ಚಕಾರವೆತ್ತದೆ ಸುಮ್ಮನೆ ಕೆಲಸಮಾಡುತ್ತಾರೆ. ಅವರಿಗೆ ಕೊಟ್ಟಿರುವ ಕಂಪ್ಯೂಟರ್ ಗಳು ಬಹಳ ಹಳೆಯ ಮಾದರಿಯ ಕಳಪೆಯ Computers. ಈಗ Complaint ಪುಸ್ತಕದ ಹಾಳೆಗಳು ಸ್ವಲ್ಪ ಒಣಗಿದ್ದವು. ನಾನು ಎಲ್ಲ ವಿವರಗಳನ್ನು ದಾಖಲಿಸಿದೆ. ಮುಂಬಯಿನಂತಹ ಅಂತಾರಾಷ್ಟ್ರೀಯ ನಗರದಲ್ಲಿ ಇಂಥ ಯಾವ ಅನುಕೂಲಗಳೂ ಇಲ್ಲದ ಪೋಸ್ಟ್ ಆಫೀಸ್ ಇದೆಯೆಂದು ನನಗೆ ಅನ್ನಿಸಿರಲಿಲ್ಲ. ಮಳೆಯಿಂದ ರೂಮಿನೊಳಗೆಲ್ಲಾ ನೀರು ಸೋರುತ್ತಿತ್ತು. ಹೇಗೆ ಈ ಪರಿಸರದಲ್ಲಿ Staff ಕೆಲಸಮಾಡುತ್ತಾರೋ ಅವರ ತಾಳ್ಮೆಗೆ ನಾವು ಪ್ರಶಸ್ತಿಕೊಡಬೇಕು. ಕರ್ನಾಟಕದಲ್ಲಿ ಚಿಕ್ಕ ಹಳ್ಳಿಗಳಲ್ಲೂ ಇಂಥ ಅವ್ಯವಸ್ಥಿತ ಅಂಚೆ ಕಚೇರಿಯನ್ನು ನಾನು ನೋಡಿಲ್ಲ. ಮಳೆಯ ನೀರಿನಿಂದ ನೆಂದ ಗೋಡೆಗಳು ಇದ್ದಾಗ್ಯೂ, ಹೇಗೆ ‘Severe electric shock’ ಹೊಡೆಯಲಿಲ್ಲವೋ ದೇವರಿಗೆ ನೂರು ಪ್ರಣಾಮಗಳನ್ನು ಸಲ್ಲಿಸಬೇಕು ಮುಂತಾಗಿ ಯೋಚಿಸುತ್ತಾ Complaints ಬರೆದು ಸಹಿಹಾಕಿದೆ. ನನಗೆ ಏನೋ ದೊಡ್ಡಕೆಲಸ ಮಾಡಿದ ಭಾವ. ಪೋಸ್ಟ್ ಮಾಸ್ಟರ್ ರವರು, ದೂರದಿಂದ ನಾನು ಬರೆದ ಅಹವಾಲು ಎಷ್ಟರಮಟ್ಟಿಗೆ ಪರಿಣಾಮಕಾರಿಯಾದೀತು ಎಂಬ ಸಂದೇಹ ಭರಿತ ಭಾವನೆಯಿಂದ ನೋಡುತ್ತಿದ್ದರು. ಒಟ್ಟಿನಲ್ಲಿ ನಾನು ಸಧ್ಯದಲ್ಲೇ ನನ್ನ ಕವರ್ ಬರಬಹುದು; ಪೋಸ್ಟ್ಮನ್ ಹತ್ತಿರ ಮನೆಗೆ ಕಳಿಸಿಕೊಡಿ ಎಂದು ಪೋಸ್ಟ್ ಮಾಸ್ಟರ್ ಗೆ ಹೇಳುತ್ತಿರುವಾಗಲೇ, ನಮ್ಮ ಗೆಳೆಯ ಕಾಕೋಡೆಯವರು ಆ ಕಡೆಯಿಂದ ನನ್ನ ಕಡೆ ಬಂದು ‘ಸಾಹೇಬ್ ಕಾಳಜಿ ಮತ್ ಕರೋ; ಮೈ ಆಪ್ ಕ ಲಿಫಾಫಾ ಘರ್ ಮೇ ಲಾಕೆ ದೇತಾ ಹೂಂ. ‘ಆಪ್ ಅಭಿ ಜಾಯಿಯೇ’ ಎಂದರು. ನನಗಂತೂ ನನ್ ‘Visa card’ ಸಿಕ್ಕೇ ಬಿಡ್ತು ಅನ್ನೋ ಅಷ್ಟು ಸಮಾಧಾನವಾಗಿತ್ತು. ಸುಮಾರು ಒಂದು ವಾರದ ಮೇಲೆ ಅದೇ ಕಾಕೋಡೆಯವರೇ ಮನೆಗೆ ಬಂದು ನನ್ನ ಕವರ್ ಕೊಟ್ಟು ಹೋದರು. ನನ್ನ ವೀಸಾ ಸಿಕ್ಕು ನನಗೆ ಅತೀವ ಆನಂದವಾಗಿತ್ತು.

ಆ ದಿನಗಳಲ್ಲಿ ಟೈಮ್ಸ್ ಆಫ್ ಇಂಡಿಯಾ ಪೇಪರ್ ನಲ್ಲಿ ‘Pillar to post’ ಎಂಬ ಒಂದು ಅಂಕಣ ಭಾನುವಾರ ಬರುತ್ತಿತ್ತು. ಅದರಲ್ಲಿ ಸಾರ್ವಜನಿಕರು ತಮ್ಮComplaints ಗಳನ್ನು ಬರೆಯುತ್ತಿದ್ದರು. ನಾನೂ ಒಂದು ಪ್ಯಾರಾದಷ್ಟು Complaints ನನ್ನ ಪೋಸ್ಟ್ ಆಫೀಸ್ ಭೇಟಿ ಮತ್ತು ಅಲ್ಲಿ ನಾನು ಕಂಡ ದಾರುಣ (ಆ)ವ್ಯವಸ್ಥೆಯನ್ನು ಬರೆದು ಕಳಿಸಿದ್ದೆ. ಅದು ಹೇಗೋ ಪ್ರಕಟವೂ ಆಯಿತು. ಹಿಂದೆ ನಾನು ಬರೆದ ಅನೇಕ Complaints ಪ್ರಕಟಣೆಯನ್ನೇ ಕಂಡಿರಲಿಲ್ಲ. ಇದು ನನ್ನ ಅದೃಷ್ಟ ಹಾಗೂ ನಮ್ಮ ಬರ್ವೆನಗರ ಪೋಸ್ಟ್ ಆಫೀಸಿನ ಕರ್ಮಚಾರಿಗಳ ಅದೃಷ್ಟವೂ ಹೌದು.

ಪೋಸ್ಟ್ಮನ್ ಕಾಕೋಡೆಯವರು ನಮ್ಮ ಮನೆಗೆ ಬಂದು ಪೋಸ್ಟ್ ಆಫೀಸ್ ರಿಪೇರಿಯಾಗಿ ಒಂದು ಉತ್ತಮ ವ್ಯವಸ್ಥೆಯಾಗಿದ್ದಕ್ಕೆ ನಾನೇ ಕಾರಣವೆಂದು ನನ್ನನ್ನು ಅಭಿನಂದಿಸಲು ಬಂದಿದ್ದರು. ಅವರು ತಮ್ಮ ಆಫೀಸಿನಲ್ಲಿ ಆದ ಪ್ರಗತಿಯನ್ನು ವಿವರಿಸಿದ ಬಗೆ ಬಹಳ ಮುದಕೊಟ್ಟಿತು.

‘Central Head Post Officers’ ನನ್ನ ಪತ್ರಿಕೆಯ Appeal ನೋಡಿ ಮನನೊಂದು ‘ಬರ್ವೆ ನಗರ್ ಪೋಸ್ಟ್ ಆಫೀಸಿ’ಗೆ ಭೇಟಿನೀಡಿ, ಅಲ್ಲಿನ ಅನಾನುಕೂಲತೆಗಳನ್ನು ಪರಿಶೀಲಿಸಿದರಂತೆ. ಪುಣ್ಯಕ್ಕೆ ಆವತ್ತು ಮಳೆಯೂ ಬಂದಿತ್ತಂತೆ. ನಾನು ವಿವರಿಸಿದ ದೃಶ್ಯವನ್ನು ಮೇಲಿನ ಅಧಿಕಾರಿಗಳೂ ಕಣ್ಣಾರೆ, ಕಂಡು ಬೇಸರಗೊಂಡು ‘ಶಿಫಾರಿಸ್’ ಬರೆದುಕೊಂಡು ಹೋಗಿ ಅವರ ಮೇಲಧಿಕಾರಿಗಳಿಗೆ ವರದಿ ಮಾಡಿದರಂತೆ. ಒಂದು ವಾರದ ಮೇಲೆ ಕಟ್ಟಡ ದುರಸ್ತಿ ತಂಡ ಬಂದು, ಎಲ್ಲವನ್ನು ರಿಪೇರಿ ಮಾಡಿದರಂತೆ. ಇದು ನನಗೆ ಊಹಿಸಲೂ ಆಗದ ಸನ್ನಿವೇಶವಾಗಿತ್ತು. ಎಲ್ಲವೂ “ಹೋಳ್ಕರ್ ಸಾಬ್ ಯಹ್ ಸಬ್ ಆಪ್ ಕೆ ವಜಹ್ ಸೆ ಹುವಾ” (ನನ್ನ ಹೊಳಲ್ಕೆರೆ ಎನ್ನುವ ಹೆಸರನ್ನು ಇಂದಿಗೂ ಮಹಾರಾಷ್ಟ್ರದವರು ‘ಹೋಳ್ಕರ್’ ಎಂದೇ ಕರೆಯುತ್ತಾರೆ) “ಅಬ್ ಹಮ್ ಲೋಗ್ ಘರ್ ಸೆ ಪೆಹನಾ ಹುವಾ Dress ಕೋ ದೀವಾರ್ ಪರ್ ಲಟ್ಕಾ ಸಕ್ತೇ ಹೈ; ಅಬ್ ಛತ್ ಸೆ ಪಾನಿ ಅಂಧರ್ ನಹೀ ಆಯೇಗಾ” ಎಂದು ಕೃತಜ್ಞತಾಪೂರಕವಾಗಿ ತಲೆ ಬಗ್ಗಿಸಿ ನನಗೆ ನಮಿಸಿದ ದೃಷ್ಯ ಊಹಿಸಲಸಾಧ್ಯವಾದ ಸಂಗತಿಯಾಗಿತ್ತು. ಪತ್ರಿಕೆಯಲ್ಲಿ ಬರೆದ Complaints ಗಳು ಹೀಗೆ ಸಾಕಾರವಾಗುತ್ತವೆಯೇ ಎಂಬುವುದು ಇಂದಿಗೂ ನನಗೆ ಅರ್ಥವಾಗುತ್ತಿಲ್ಲ. ಆ ದಿನ ಅದು ನಿಜವಾಗಿ ಆಗಿತ್ತು.

-ಎಚ್. ಆರ್. ಲಕ್ಷ್ಮೀವೆಂಕಟೇಶ್ 


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x