ಡಾ|| ಎ.ಪಿ.ಜೆ. ಅಬ್ದುಲ್ ಕಲಾಂ ಕುರಿತು ಲೇಖನ ಸ್ಪರ್ಧೆಗೆ ಲೇಖನಗಳ ಆಹ್ವಾನ

ಡಾ|| ಎ.ಪಿ.ಜೆ. ಅಬ್ದುಲ್ ಕಲಾಂ ಸಮಾಜ ಸೇವಾ ಸಂಸ್ಥೆ ಯಾಪಲದಿನ್ನಿ, ರಾಯಚೂರು

ಕಲಾಂ ಸಂಸ್ಥೆಯು ಗ್ರಾಮೀಣ ಪ್ರದೇಶದಲ್ಲಿ ಯೋಗ ಶಿಬಿರ ರಕ್ತದಾನ ಶಿಬಿರ ವ್ಯಕ್ತಿತ್ವ ವಿಕಸನ ಬಡ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ಕಲಾಂ ಕಲ್ಪ ವೃಕ್ಷವನ ಕಲಾಂ ಸ್ಮಾರಕ ಇನ್ನೂ ಹಲವಾರು ಸಾಮಾಜಿಕ ಚಟುವಟಿಕೆಗಳಮೂಲಕ ಗ್ರಾಮೀಣ ಪ್ರದೇಶದಲ್ಲಿ ಪ್ರತಿವರ್ಷ ವಿವಿಧ ಕಾರ್ಯಕ್ರಮವನ್ನು ಮಾಡುತ್ತಾ, ಸಮಾಜದ ಸುಧಾರಣೆಗಾಗಿ ವಿವಿಧ ರೀತಿಯ ಕ್ಷೇತ್ರದಲ್ಲಿ ತಮ್ಮದೇ ಆದ ಸಾಧನೆ ಮಾಡುತ್ತಿರುವ ವ್ಯಕ್ತಿಗಳನ್ನು ಗುರುತಿಸಿ, ಪ್ರತಿವರ್ಷ ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಜಯಂತಿಯಂದು ಅವರನ್ನು ಗುರುತಿಸಿ ಸನ್ಮಾನಿಸುತ್ತಿದ್ದರು. ಈ ರೀತಿಯ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿರುವ ಸಂಸ್ಥೆಯು ಇಂದಿಗೆ ಸ್ಥಾಪನೆಯಾಗಿ 10 ವರ್ಷ ಕಳೆದಿದೆ, ಈ ಒಂದು ಸುಸಂದರ್ಭದಲ್ಲಿ ಈ ವರ್ಷ ಏನಾದ್ರು ಒಂದು ಸಾಹಿತ್ಯಿಕ ಚಟುವಟಿಕೆ ಮಾಡಬೇಕೆಂದಾಗ ಡಾ|| ಎ.ಪಿ.ಜೆ. ಅಬ್ದುಲ್ ಕಲಾಂ ಕುರಿತು ಲೇಖನ ಸ್ಪರ್ಧೆ ಮಾಡೋಣವೆಂದು ತೀರ್ಮಾನಿಸಲಾಯಿತು. ಆದ ಕಾರಣ ಡಾ|| ಎ.ಪಿ.ಜೆ. ಅಬ್ದುಲ್ ಕಲಾಂ ಸಮಾಜ ಸೇವಾ ಸಂಸ್ಥೆ-2021ರ, ದಶಮಾನೋತ್ಸವ ಕಾರ್ಯಕ್ರಮ ಅಂಗವಾಗಿ ಲೇಖನ ಸ್ಪರ್ಧೆ ನನ್ನ ದೃಷ್ಟಿಯಲ್ಲಿ ಕಲಾಂ ಎಂಬ ವಿಷಯದೊಂದಿಗೆ ಸ್ಪರ್ಧೆ ಏರ್ಪಡಿಸಲಾಗಿದೆ. ನೀವು ಭಾಗವಹಿಸಿ…ನಿಮ್ಮ ಸ್ನೇಹಿತರನ್ನು ಭಾಗವಹಿಸಲು ತಿಳಿಸಿ…

◾ಸ್ಪರ್ಧೆಯ ಷರತ್ತುಗಳು:*

📌 ನಾಡಿನ ಮತ್ತು ಹೊರರಾಜ್ಯದ ಆಸಕ್ತ ಲೇಖಕರು, ಕವಿಗಳು, ಸಾಹಿತ್ಯಾಸಕ್ತರು ನನ್ನ ದೃಷ್ಟಿಯಲ್ಲಿ ಕಲಾಂ ಎಂಬ ವಿಷಯದ ಈ ಲೇಖನ ಸ್ಪರ್ಧೆಯಲ್ಲಿ ಭಾಗವಹಿಸಬಹುದು.

📌 ನನ್ನ ದೃಷ್ಟಿಯಲ್ಲಿ ಕಲಾಂ ಎಂಬ ವಿಷಯವನ್ನು ಕುರಿತು ಎರಡು ಪುಟ A4 ಸೈಜ್ ನಲ್ಲಿ ಆಗುವಷ್ಟು ಲೇಖನ ಬರೆದು ಕಳಿಸಬಹುದು.

📌 ಅತ್ಯುತ್ತಮವಾದ ಬರಹದ ಮೂರು ಲೇಖನಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಎಂಬ ಬಹುಮಾನಗಳು ಉಂಟು.

📌ಆಯ್ಕೆಯಾದ ಲೇಖನಗಳನ್ನು ಒಟ್ಟಿಗೆ ಸಂಪಾದಿಸಿ ಒಂದು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು.

📌 ಸ್ವಂತದ ಕನ್ನಡದಲ್ಲಿಯೇ ಬರೆದಿರುವ ಲೇಖನವಾಗಿದ್ದು, ಲೇಖನವು ಫೇಸ್ಬುಕ್ ವಾಟ್ಸಪ್ಪ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಿಯೂ ಪ್ರಕಟವಾಗಿರಬಾರದು, ಪ್ರಕಟಣೆ ಆಗಿರುವ ಲೇಖನಗಳು ಸ್ಪರ್ಧೆಗೆ ಬಂದಿದ್ದರೆ ಅವುಗಳನ್ನು ಪರಿಗಣಿಸುವುದಿಲ್ಲ.

📌 ಲೇಖನವನ್ನು ನುಡಿ, ಬರಹ ಅಥವಾ ಯುನಿಕೋಡ್ನಲ್ಲಿಯೇ ಟೈಪ್ ಮಾಡಿದ್ದಿರಬೇಕು,

📌 ಟೈಪ್ ಮಾಡಿದ ಲೇಖನವನ್ನು e-ಮೇಲ್ ಅಥವಾ ವಾಟ್ಸಪ್ ನಲ್ಲಿ ಮಾತ್ರ ಕಳಿಸಬೇಕು.

📌 ಲೇಖನ ಬರೆದಿರುವುದನ್ನು ಅಥವಾ ಟೈಪ್ ಮಾಡಿರುವುದನ್ನು ಫೋಟೋ ಕ್ಲಿಕ್ ಮಾಡಿ ಸೆಂಡ್ ಮಾಡುವಂತಿಲ್ಲ, ಆ ರೀತಿಯಲ್ಲಿ ಕಂಡು ಬಂದರೆ ಸ್ಪರ್ಧೆಗೆ ಪರಿಗಣಿಸುವುದಿಲ್ಲ.

📌 ಲೇಖನ ಬರೆದವರು ತಮ್ಮ ಇತ್ತೀಚಿನ ಫೋಟೋ, ಸಂಪೂರ್ಣ ವಿಳಾಸ, ಫೋನ್ ನಂಬರ್ ಲೇಖನ ಜೊತೆಗೆ ಕಳಿಸಬೇಕು.

📌 ನನ್ನ ದೃಷ್ಟಿಯಲ್ಲಿ ಕಲಾಂ ಎಂಬ ವಿಷಯ ಕುರಿತು ಬರೆಯುವಾಗ ಯಾರೂ ಕೂಡ ಎ ಪಿ ಜೆ ಅಬ್ದುಲ್ ಕಲಂ ರವರ ಜೀವನ ಚರಿತ್ರೆ ಬರೆಯುವಂತೆ ಇಲ್ಲ, ಆ ರೀತಿಯಲ್ಲಿ ಬರೆದ ಲೇಖನಗಳನ್ನು ತಿರಸ್ಕರಿಸಲಾಗುವುದು.

📌 ಲೇಖನ ಕಳುಹಿಸಲು ಕೊನೆಯ ದಿನಾಂಕ:20-04-2021, ಸಂಜೆ 5 ಗಂಟೆ.

📌 ಸಂಸ್ಥೆಯ ತೀರ್ಮಾನವೇ ಅಂತಿಮ ತೀರ್ಮಾನ ಯಾವುದೇ ಪತ್ರ ವ್ಯವಹಾರಕ್ಕೆ ಅವಕಾಶ ಇರುವುದಿಲ್ಲ.

📌 ಹೆಚ್ಚಿನ ಮಾಹಿತಿಗಾಗಿ ಮತ್ತು ಲೇಖನ ಕಳಿಸಲು ವಾಟ್ಸಪ್ಪ್ ಸಂಖ್ಯೆಗಳು,
ಯಲ್ಲಪ್ಪ ಎಮ್ ಮರ್ಚೆಡ್: 9972767961,
ನರಸಿಂಹಲು: 97429 02031 ಮತ್ತು
ಇ ಮೇಲ್ ID: masaparcr@gmail.com

ನೀವು ಭಾಗವಹಿಸಿ…ನಿಮ್ಮ ಸ್ನೇಹಿತರನ್ನು ಭಾಗವಹಿಸಲು ತಿಳಿಸಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x