ಪ್ರಕಟಣೆ

ಕನ್ನಡ ಕಲರವ – ಆನ್ಲೈನ್ ಸಾಹಿತ್ಯಕೂಟದ ವಿವಿಧ ಸ್ಪರ್ಧೆಗಳು

ಕನ್ನಡ ಕಲರವ – ಆನ್ಲೈನ್ ಸಾಹಿತ್ಯಕೂಟ
“ಇದು ಕನ್ನಡ ಸಾಹಿತ್ಯಾಸಕ್ತರ ಜೀವಾಳ”

23 ಏಪ್ರಿಲ್‍ 2020 ರಲ್ಲಿ ರಚಿತವಾದ ಈ ತಂಡವು ಈವರೆಗೆ ಯಶಸ್ವಿಯಾಗಿ ಸಾಹಿತ್ಯ ಸೇವೆಯಲ್ಲಿ ಒಂದು ವರ್ಷವನ್ನು ಪೂರೈಸಲಿದೆ. ಆ ನಿಟ್ಟಿನಲ್ಲಿ ಮೂರು ದಿನಗಳ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.

20-ಏಪ್ರಿಲ್-2021 : ನ್ಯಾನೋ ಕಥಾ ಸ್ಪರ್ಧೆ
*) 150 ಪದಮಿತಿಯ ಸ್ವತಂತ್ರ ವಿಷಯದ ಮೇಲೆ ಕಥೆ ರಚಿಸಿ (mobileನಲ್ಲಿ unicode fontನಲ್ಲಿ ಟೈಪ್ ಮಾಡಿದ ಕಥೆ) ಏಪ್ರಿಲ್ 20 ರಂದು avvapustakaalaya@gmail.com ಗೆ ಕಳಿಸಿಕೊಡಬೇಕು.

21-ಏಪ್ರಿಲ್-2021 : ಸ್ವರಚಿತ ಕವನ ವಾಚನ ಸ್ಪರ್ಧೆ
*) ನಿಮ್ಮ ಪರಿಚಯ ಸೇರಿಸಿ, 03 ನಿಮಿಷದ ಒಳಗಿನ ಸ್ವರಚಿತ ಕವನ ವಾಚನದ ವೀಡಿಯೋ ಅನ್ನು 9742029908 ನಂಬರಿನ ವಾಟ್ಸಾಪ್ ಗೆ ಏಪ್ರಿಲ್ 21 ರಂದು ಕಳಿಸಿಕೊಡಬೇಕು. ವೀಡಿಯೋ landscape (16:9 ratio) ನಲ್ಲಿ ಚಿತ್ರೀಕರಿಸಿರಬೇಕು.

22-ಏಪ್ರಿಲ್-2021 : ಆಶುಭಾಷಣ ಸ್ಪರ್ಧೆ
*) ಕೊಡುವ ಎರಡು ವಿಷಯಗಳಲ್ಲಿ ಒಂದು ವಿಷಯವನ್ನು ಆಯ್ಕೆ ಮಾಡಿಕೊಂಡು, 3 ನಿಮಿಷ ಮೀರದಂತೆ zoom ಅಥವಾ google meet ನಲ್ಲಿ ಮಾತನಾಡಬೇಕು.
*) ಈ ಸ್ಪರ್ಧೆಯು ಸಂಜೆ 7.30 ಕ್ಕೆ zoom ಅಥವಾ google meet ನಲ್ಲಿ ಶುರುವಾಗುತ್ತದೆ. ಹಾಗೂ ಲಿಂಕ್ ಅನ್ನು 22 ರಂದು ಕೊಡಲಾಗುತ್ತದೆ.

ಎಲ್ಲಾ ಸ್ಪರ್ಧೆಗಳು ನಿಗದಿತ ದಿನಾಂಕ ಹಾಗೂ ಸಮಯದಂದೇ ನಡೆಯುತ್ತವೆ. ಕಾಲಾವಕಾಶ ಮೀರಿದ ನಂತರ ಬಂದ ಬರಹಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ. ಎಲ್ಲಾ ಸ್ಪರ್ಧೆಗಳ ಫಲಿತಾಂಶವನ್ನು ಏಪ್ರಿಲ್ 23 ರಂದು ಕನ್ನಡ ಕಲರವ ಫೇಸ್ಬುಕ್ ಲೈವ್ ನಲ್ಲಿ ತಿಳಿಸಲಾಗುತ್ತದೆ.
ಪ್ರತೀ ಸ್ಪರ್ಧೆಯ 3 ರಿಂದ 5 ಜನ ವಿಜೇತರಿಗೆ ಪುಸ್ತಕ ಬಹುಮಾನವಿರುತ್ತದೆ.
ಉತ್ತಮ ಬರಹಗಳನ್ನು avvapustakaalaya ಬ್ಲಾಗಿನಲ್ಲಿ ಪ್ರಕಟಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
ಅನಂತ ಕುಣಿಗಲ್
ಸಂಸ್ಥಾಪಕ ಅಧ್ಯಕ್ಷರು, ಕನ್ನಡ ಕಲರವ
ಮೊ : 9742029908


ಸ್ಪರ್ಧೆಗಳಿಗೆ ನೊಂದಣಿ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ :
https://docs.google.com/forms/d/e/1FAIpQLSf-eu0dqVOHfPdmb9g_qzcCso1DZsLmZtQQT6OkJ-QabPyJWg/viewform?usp=pp_url


ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *