ಗಣಕರಂಗ (ರಿ), ಧಾರವಾಡ ಆಯೋಜಿಸಿರುವ ಕವನ ವಾಚನ ಅಥವಾ ಜನಪದ ಶೈಲಿಯಲ್ಲಿ ಗಾಯನ ಸ್ಪರ್ಧೆ

 

#ಗಣಕರಂಗ (ರಿ), ಧಾರವಾಡ ಆಯೋಜಿಸುವ ವಿಶ್ವಜ್ಞಾನ ದಿನ ದ ಪ್ರಯುಕ್ತ ‘ಬಾಬಾಸಾಹೇಬ ಡಾ.ಅಂಬೇಡ್ಕರ್ ಕುರಿತ ಜಾನಪದ ಶೈಲಿಯ ಮುಕ್ತ ಕವನ ವಾಚನ ಮತ್ತು ಗಾಯನ ಸ್ಪರ್ಧೆಗೆ ಸ್ವಾಗತ .

ಎಲ್ಲರಿಗೂ ಮುಂಚಿತವಾಗಿ (ಏಪ್ರಿಲ್-14) ವಿಶ್ವಜ್ಞಾನ ದಿನದ ಶುಭಾಶಯಗಳು.

ಆತ್ಮೀಯರೇ, ನಿಮಗೆ ಈಗಾಗಲೇ ಗೊತ್ತಿರುವಂತೆ ಗಣಕರಂಗ (ರಿ), ಧಾರವಾಡ ಸಂಸ್ಥೆಯು ಇಲ್ಲಿಯವರೆಗೆ ಹಲವಾರು ಕಾರ್ಯಕ್ರಮಗಳನ್ನು ಸಭಾವೇದಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳ ಆನ್-ಲೈನ್ ದಲ್ಲಿ ಯಶಸ್ವಿಯಾಗಿ ನಡೆಸಿದೆ. ಅದರ ಮುಂದುವರಿಕೆಯಾಗಿ, ಈಗ ಬರುವ ಏಪ್ರಿಲ್-14ರಂದು ‘ವಿಶ್ವಜ್ಞಾನ ದಿನ’ದ ಪ್ರಯುಕ್ತ ವಾಟ್ಸಪ್ ಆನ್-ಲೈನ್ ಕವನ ರಚನೆ, ವಾಚನ ಮತ್ತು ಗಾಯನ ಸ್ಪರ್ಧೆಯನ್ನು ದಿನಾಂಕ:14-04-2021, ಬುಧವಾರ ಸಮಯ ಬೆಳಿಗ್ಗೆ 8ರಿಂದ ರಾತ್ರಿ 8ಗಂಟೆಯವರೆಗೆ ಆಯೋಜಿಸುತ್ತಿದೆ.

ಸ್ಪರ್ಧೆಯ ವಿಷಯ : ವಿಶ್ವರತ್ನ ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೦ನೇ ಜಯಂತಿ ಪ್ರಯುಕ್ತ ಅವರ ಕುರಿತು ಜನಪದ ಶೈಲಿಯ ಸ್ವರಚಿತ ಕವನ ವಾಚನ ಅಥವಾ ಗಾಯನ

ಸ್ಪರ್ಧೆಯ ನಿಯಮಗಳು:

1. ಇದಕ್ಕಿಂತ ಮೊದಲು ಎಲ್ಲಿಯೂ ಪ್ರಕಟವಾಗಿರದ ಜಾನಪದ ಶೈಲಿಯ ಕನಿಷ್ಠ 5 ನಿಮಿಷ ಅಥವಾ ಗರಿಷ್ಠ 10 ನಿಮಿಷದೊಳಗಿನ ಕವನವನ್ನು ಬಳಗದಲ್ಲಿ ಹಾಕಿ ಜೊತೆಗೆ ವಾಚನ ಅಥವಾ ಅದೇ ಕವನದ ಗಾಯನದ ವಿಡಿಯೋವನ್ನು ಏಪ್ರಿಲ್ 14ರಂದು ಬೆಳಿಗ್ಗೆ 10ರಿಂದ ರಾತ್ರಿ 8ಗಂಟೆಯೊಳಗೆ ಮಾತ್ರ ಕಳಿಸಬೇಕು. ಮೊಬೈಲ್ ನ್ನು ಕಡ್ಡಾಯವಾಗಿ ಅಡ್ಡಲಾಗಿ (Horizontal) ಹಿಡಿದು ವಿಡಿಯೋ ಮಾಡಿರಬೇಕು. ವಿಡಿಯೋ ಆರಂಭದಲ್ಲಿ ಗಣಕರಂಗ ಸ್ಪರ್ಧೆಯ ಹೆಸರು, ನಿಮ್ಮ ಹೆಸರು ಮತ್ತು ಪೂರ್ಣ ವಿಳಾಸ ಹೇಳಿರಬೇಕು.

2. ಒಬ್ಬರು ಒಂದೇ ವಿಡಿಯೋ ಕಳಿಸಬೇಕು ; ಜನಪದ ಶೈಲಿಯ ಕವನ ವಾಚನ ಅಥವಾ ಗಾಯನಕ್ಕೆ ಜನಪ್ರಿಯ ಹಾಡಿನ ಮ್ಯುಜಿಕ್ ಟ್ರ್ಯಾಕ್ ಕೂಡ (ಕರೋಕೆ) ಬಳಸಿಕೊಂಡು ಹಾಡಬಹುದಾಗಿದೆ.

3. ಜನಪದ ಶೈಲಿಯ ಸ್ವರಚಿತ ಕವನದ ವಾಚನ ಮತ್ತು ಗಾಯನದ ವಿಡಿಯೋಗಳನ್ನು ಗಣಕರಂಗ ಯೂಟೂಬ್ ಚಾನೆಲ್ ದಲ್ಲಿ (ನಾವು) ದಿನಾಂಕ 14/04/2021ರಂದು ರಾತ್ರಿ 10ಗಂಟೆಗೆ  ಅಪ್ಲೊಡ್ ಮಾಡಲಾಗುವುದು. ನಂತರ ಸ್ಪರ್ಧಾಳುಗಳಿಗೆ ಲಿಂಕ್ ಕಳಿಸಲಾಗುವುದು. ದಿನಾಂಕ 15/04/2021 ರಿಂದ 18/04/2021 ರ ರಾತ್ರಿ 8 ಗಂಟೆಯ ತನಕ ಅಲ್ಲಿ ಸ್ಪರ್ಧಾಳುಗಳ ವಿಡಿಯೋಗಳಿಗೆ ಬರುವ ವ್ಯೂವ್(Views), ಲೈಕ್(Likes), ಕಾಮೆಂಟು(Comments)ಗಳ ಸಂಖ್ಯೆಯನ್ನಾಧರಿಸಿ ಫಲಿತಾಂಶವನ್ನು ದಿನಾಂಕ 19/04/2021ರ ಬೆಳಿಗ್ಗೆ 10ಗಂಟೆಯಿಂದ ಫಲಿತಾಂಶ ಪ್ರಕಟಣೆ ಪ್ರಾರಂಭವಾಗುತ್ತದೆ

4. ಈ ಸ್ಪರ್ಧೆಯಲ್ಲಿ ಯಾವುದೇ ರೀತಿಯ ಅವಹೇಳನಕಾರಿ, ಅಪಮಾನಿಸುವ, ಸಮಾಜವಿರೋಧಿ, ಸಂವಿಧಾನ ವಿರೋಧಿ, ದೇಶದ ಭಾವೈಕ್ಯತೆಗೆ ದಕ್ಕೆ ತರುವ ವಿಷಯಗಳಿರಬಾರದು. ಹಾಗೇನಾದರೂ ಕಂಡು ಬಂದರೆ ಕವನವನ್ನು ಆರಂಭದಲ್ಲಿಯೇ ತಿರಸ್ಕರಿಸಲಾಗುವುದು.

5. ಈ ಸ್ಪರ್ಧೆಯ ಕವನ ವಾಚನ ಅಥವಾ ಅದೇ ಕವನದ ಗಾಯನಕ್ಕೆ ನಿಮ್ಮದೇ ವಿಶೇಷವಾದ ಆಕರ್ಷಕ ಶೀರ್ಷಿಕೆ ಕಡ್ಡಾಯವಾಗಿರಲಿ, ಕವನದ ಕೊನೆಯಲ್ಲಿ ನಿಮ್ಮ ಇತ್ತೀಚಿನ ಸಂಪೂರ್ಣ (ಪಿನ್ ಕೋಡ್ ಸಹಿತ) ವಿಳಾಸ ಹಾಗೂ ಮೊಬೈಲ್ ಸಂಖ್ಯೆ ಹಾಗೂ ಇತ್ತೀಚಿನ ಭಾವಚಿತ್ರವನ್ನು ಕಡ್ಡಾಯವಾಗಿ ಕಳಿಸಬೇಕು. ಸ್ಪರ್ಧೆಯ ಆಶಯಕ್ಕೆ ಬದ್ಧವಾಗಿಲ್ಲದ ಕವನಗಳನ್ನು ಪರಿಗಣಿಸಲಾಗುವುದಿಲ್ಲ.

6. ಸ್ವರಚಿತ ಕವನ ಮತ್ತು  ಅದೇ ಕವನದ ಗಾಯನದ ವಿಡಿಯೋ ಕಡ್ಡಾಯವಾಗಿ ಗಣಕರಂಗ ಕವಿಮಿತ್ರರು-1 ಅಥವಾ ಗಣಕರಂಗ ಕವಿಮಿತ್ರರು-2 ಅಥವಾ ಗಣಕರಂಗ ಕವಿಮಿತ್ರರು-3 (ಯಾವುದಾದರು ಒಂದು) ವಾಟ್ಸಪ್ ಗುಂಪಿನಲ್ಲಿ ಹಾಕಬೇಕು. ಸಂಯೋಜಕರ ಮತ್ತು ಗಣಕರಂಗ ಮುಖ್ಯಸ್ಥರ ವೈಯಕ್ತಿಕ ನಂಬರಿಗೆ ವಾಟ್ಸಪ್ ಮಾಡುವ ಕವನ ಮತ್ತು ಗಾಯನದ ವಿಡಿಯೋಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ. ಸಹಕರಿಸಿರಿ.

7. ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆಯುವ ಮೂವರಿಗೆ ಪುಸ್ತಕ ಗೌರವ ಬಹುಮಾನದ ಜೊತೆಗೆ ವಿಶೇಷ ಉಡುಗೊರೆ ನೀಡಿ ಗೌರವಿಸಲಾಗುವುದು. ನಿಯಮಗಳಿಗನುಸಾರವಾಗಿ ಸ್ವರಚಿತ ಜನಪದ ಶೈಲಿಯ ಕವನ ಮತ್ತು ಗಾಯನದ ವಿಡಿಯೋ ಕಳಿಸಿ, ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ನೀಡಲಾಗುವುದು. ಐವರು ಕವಿಗಳ ಉತ್ತಮ ಸ್ವರಚಿತ ಕವನಗಳ ಗಾಯನವನ್ನು ಗಮನಿಸಿ ಮೆಚ್ಚುಗೆಯ ಗಾಯನ-ಕವನಗಳೆಂದು ಆಯ್ಕೆ ಮಾಡಿ ಪುಸ್ತಕ ಗೌರವದೊಂದಿಗೆ ಗೌರವಿಸಲಾಗುವುದು.

8. ವಿಶೇಷ ಸೂಚನೆ: ಈ ಸ್ಪರ್ಧೆಯಲ್ಲಿ  ವಿಜೇತರಾದವರಿಗೆ ಪುಸ್ತಕ ಹಾಗೂ ಇತರೇ ಬಹುಮಾನಗಳನ್ನು  ಇದೇ ತಿಂಗಳಿನಲ್ಲಿ ಗಣಕರಂಗ ಸಂಸ್ಥೆಯು  ಧಾರವಾಡದಲ್ಲಿ ಆಯೋಜಿಸುವ ಡಾ. ಅಂಬೇಡ್ಕರ್ ಅವರ 130ನೇ ಜಯಂತಿಯ ಕಾರ್ಯಕ್ರಮದಲ್ಲಿ ಗಣ್ಯರಿಂದ ಬಹುಮಾನ ವಿತರಣೆ ಮಾಡಲಾಗುವುದು. 

ಸ್ಪರ್ಧೆಯ ನಿಯಮಗಳನ್ನು ದಯವಿಟ್ಟು ಸಾವಧಾನವಾಗಿ ಸಂಪೂರ್ಣ ಓದಿಕೊಳ್ಳಿ, ಅನಗತ್ಯ ವಿಚಾರಿಸಬೇಡಿ.

9. ತೀರ್ಪುಗಾರರ ತೀರ್ಪಿಗೆ ಎಲ್ಲ ಸ್ಪರ್ಧಿಗಳು ಬದ್ಧರಾಗಿರಬೇಕು. ಗೌರವಾನ್ವಿತ ತೀರ್ಪುಗಾರರ ತೀರ್ಪು ಅಂತಿಮವಾಗಿರುತ್ತದೆ. ಈ ವಿಷಯದಲ್ಲಿ ಯಾವುದೇ ಚರ್ಚೆಗೆ ಅವಕಾಶವಿಲ್ಲ. ಸಹಕರಿಸಿರಿ.

10.ಮುಕ್ತ ಅವಕಾಶದ ಈ ಸ್ಪರ್ಧೆಯಲ್ಲಿ ವಿಶ್ವದ ಎಲ್ಲಾ ಭಾಗಗಳಿಂದ ಆಸಕ್ತರೆಲ್ಲರೂ ಭಾಗವಹಿಸಬಹುದು. ವಿನಾಕಾರಣ ಚರ್ಚೆಗೆ ಆಸ್ಪದವಿಲ್ಲ. ಸ್ಪರ್ಧಾಶಿಸ್ತನ್ನು ಕಟ್ಟುನಿಟ್ಟಾಗಿ ಪಾಲಿಸದವರನ್ನು ತಕ್ಷಣವೇ ವಾಟ್ಸಪ್ ಗುಂಪಿನಲ್ಲಿ ಬ್ಲಾಕ್ ಮಾಡಲಾಗುವುದು. ಅಂಥವರನ್ನು ಮುಂದಿನ ನಮ್ಮ ಯಾವುದೇ ಸ್ಪರ್ಧೆಗಳಿಗೆ ಪರಿಗಣಿಸುವುದಿಲ್ಲ.

11. ದಯವಿಟ್ಟು ಸ್ಪರ್ಧೆಯ ಸಮಯದಲ್ಲಿ ಸ್ಪರ್ಧೆಯ ವಿಷಯದ ಹೊರತಾಗಿ ಬೇರೆ ಏನನ್ನೂ ಗಣಕರಂಗ ಕವಿಮಿತ್ರರು ವಾಟ್ಸಪ್ ಗುಂಪುಗಳಲ್ಲಿ ಹಾಕಬಾರದು. ದಯವಿಟ್ಟು ಸಹಕರಿಸಬೇಕು.

12. ಕವನಗಳ ಪಠ್ಯ ಮತ್ತು ಗಾಯನದ ವಿಡಿಯೋವನ್ನು ಗಣಕರಂಗ ಕವಿಮಿತ್ರರು-1 ಅಥವಾ ಗಣಕರಂಗ ಕವಿಮಿತ್ರರು-2 ಅಥವಾ ಗಣಕರಂಗ ಕವಿಮಿತ್ರರು-3 ಇವುಗಳಲ್ಲಿ ಯಾವುದಾದರೊಂದು (ಗುಂಪಿಗೆ) ಬಳಗಕ್ಕೆ ಮಾತ್ರ ಕಳುಹಿಸಬೇಕು.

13. ದಯವಿಟ್ಟು ಎಲ್ಲಾ ಕವಿಮಿತ್ರರ ಸಹಕಾರವಿರಲಿ. ಸ್ಪರ್ಧೆಗೆ ಬರುವ, ಸೂಕ್ತವೆನಿಸುವ ಕವನಗಳನ್ನು ಸ್ಪರ್ಧೆಯ ನಂತರದ ದಿನಗಳಲ್ಲಿ ಗಣಕರಂಗ ಪ್ರಕಾಶನದಿಂದ ಮುದ್ರಣ ಅಥವಾ ಡಿಜಿಟಲ್ ಆವೃತ್ತಿ ಸೇರಿದಂತೆ ಆಧುನಿಕ ತಂತ್ರಜ್ಞಾನದ ಸೂಕ್ತ ಆವೃತ್ತಿ/ರೂಪದಲ್ಲಿ ಪ್ರಕಟಿಸುವಿಕೆಯ ಹಕ್ಕನ್ನು ಪ್ರಕಾಶನವು ಹೊಂದಿರುತ್ತದೆ.

14. ಈ ಕೆಳಗಿನ ಯಾವುದಾದರು ಒಂದು ಲಿಂಕನ್ನು ಒತ್ತುವ ಮೂಲಕ ನೀವುಗುಂಪಿಗೆ ಸೇರಿಕೊಳ್ಳಬಹುದು.

ಗಣಕರಂಗ ಕವಿಮಿತ್ರರು-೧

https://chat.whatsapp.com/CQoP5OFW7K6BGvHNntZpQi

ಗಣಕರಂಗ ಕವಿಮಿತ್ರರು-2

https://chat.whatsapp.com/IGYfdKH9eld5yfA2o7EMCv

ಗಣಕರಂಗ ಕವಿಮಿತ್ರರು-3

https://chat.whatsapp.com/JH9p3RR9icN8W0HESRfYjM

ಈ ಸ್ಪರ್ಧೆಯ ಕುರಿತು ಹೆಚ್ಚಿನ ಮಾಹಿತಿಗೆ ಮಾತ್ರ ಸಂಪರ್ಕಿಸಿರಿ :

ಗಣಪತಿ ಗೋ ಚಲವಾದಿ (ಗಗೋಚ), ಸ್ಪರ್ಧೆಯ ಸಂಯೋಜಕರು-9620685599 ಮತ್ತು 9740691429

ಮತ್ತು

ಸಿದ್ಧರಾಮ ಹಿಪ್ಪರಗಿ, ಮುಖ್ಯಸ್ಥರು, ಗಣಕರಂಗ (ರಿ), ಧಾರವಾಡ. 9845109480, 9902674005.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x