ನಂದಾದೀಪ ಅವರ “ಕಾವ್ಯದರ್ಶಿನಿ”ಯ ಭಾವನಾತ್ಮಕ ದರ್ಶನ: ದೇವೇಂದ್ರ ಕಟ್ಟಿಮನಿ

ಆಕಾಶಕ್ಕೆ ಅಣಕಿಸುವಷ್ಟು ಅನುಭವ ನನಗಿಲ್ಲ.ನಕ್ಷತ್ರಗಳ ತಪ್ಪು ಎಣಿಕೆಯ ತೊದಲು ಪ್ರಯತ್ನ ನಿಂತಿಲ್ಲ.ಇಂದಲ್ಲ ನಾಳೆ, ನಿನ್ನದೆಲ್ಲ ನನ್ನದು ನನ್ನದೆಲ್ಲ ನಿನ್ನದು,ಆಳವಿಲ್ಲದ ಬಾವಿಯಂತೆ ಬರಿ ಮಾತು ನನ್ನದು.ಓದುಗರ ಮಡಿಲಲ್ಲಿ ಓದಿಗಾಗಿ ಮಿಡಿಯುತ್ತಿರುವ ಕವಿಯಿತ್ರಿ ನಂದಾದೀಪ ಅವರ “ಕಾವ್ಯದರ್ಶಿನಿ” ಇದೊಂದು ಬದುಕಿನ ಪ್ರತಿಕ್ಷಣವೂ ಕಾವ್ಯದ ಕಣ್ಣಿನಿಂದ ದಿಟ್ಟಿಸಿ ಸೆರೆಹಿಡಿದ ಭಾವಗಳ ಸಂಗಮವಾಗಿದೆ. ಶ್ರೀ ಯಲ್ಲಪ್ಪ. ಎಂ. ಮರ್ಚೇಡ್ ಇವರ ಸಾರಥ್ಯದ ಶ್ರೀ ಗೌರಿ ಪ್ರಕಾಶನ ರಾಯಚೂರು ಇವರು ಪ್ರಕಟಿಸಿದ ಈ ಕೃತಿ ಸಾಹಿತ್ಯದ ಹಸಿವಿದ್ದವರಿಗೆ ಕಾವ್ಯಗಳ ರಸದೂಟ, ಮೈ ಮನಗಳಿಗೆ ಹೊಸ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸ್ವಾಮಿ ಆಲದ ಮರದಪ್ಪ: ಎಫ್. ಎಂ. ನಂದಗಾವ

ಚಿಕ್ಕ ಸ್ವಾಮ್ಯಾರು ರಾಯಪ್ಪ ಅವರು ಜ್ವರ ಹಿಡಿದು ಮಲಗಿದ್ದರು. `ನಿನ್ನೆ ರಾತ್ರಿಯವರೆಗೂ ಚೆನ್ನಾಗಿಯೇ ಇದ್ದ ಚಿಕ್ಕ ಸ್ವಾಮ್ಯಾರು ರಾಯಪ್ಪರಿಗೆ ಇಂದು ಬೆಳಿಗ್ಗೆ ಆಗುವಷ್ಟರಲ್ಲಿ ಏನಾಯಿತು?’ ಅಡುಗೆ ಆಳು ಸಿಲ್ವಿಯಾ ಚಿಂತಿಸತೊಡಗಿದ್ದಳು. ಗಂಡ ಉಪದೇಶಿ ಆರೋಗ್ಯಪ್ಪ ಗುಡಿಯಲ್ಲಿ ಪೂಜೆಗೆ ಸಿದ್ಧತೆ ಮಾಡಲು ಹೋದಾಗ, ಅವನ ಹೆಂಡತಿ ಅಡುಗೆ ಆಳು ಸಿಲ್ವಿಯಾ ಕೊಟ್ಟಿಗೆಯನ್ನು ಸ್ವಚ್ಛ ಮಾಡಿ ದನಕರುಗಳಿಗೆ ಹುಲ್ಲು ಹಾಕಿ ಗುರುಗಳ ಮನೆಗೆ ಬಂದಿದ್ದಳು. ಹೊಸದಾಗಿ ತಾಯಿ ಸಂತ ಥೆರೇಸಮ್ಮರ ಗುಡಿ ಮತ್ತು ಪಕ್ಕದಲ್ಲಿ ಗುರುಗಳ ಮನೆಯನ್ನು ಕಟ್ಟಿದಾಗ, ಹಿಂದೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಓದ್ರೋ ಮಕ್ಕಳ .. ಓದ್ರೋ…: ನಾಗಸಿಂಹ ಜಿ. ರಾವ್

ಓದ್ರೋ ಮಕ್ಕಳ.. ಓದ್ರೋ… ಅಂತ ಮಕ್ಕಳಿಗೆ ಹೇಳ್ತಿರೋದು ಪಠ್ಯ ಪುಸ್ತಕ ಓದಿ ಅಂತಲ್ಲ, ಕಥೆ, ಕಾದಂಬರಿ, ಜೀವನಚರಿತ್ರೆಗಳನ್ನ ಓದಿ ಅಂತ ಹೇಳ್ತಿರೋದು, ಪಠ್ಯಪುಸ್ತಕ ಬಿಟ್ಟು ಬೇರೆ ಪುಸ್ತಕ ಓದುವ ಅಭ್ಯಾಸ ಮಕ್ಕಳಿಂದ ದೂರ ಆಗ್ತಿದೆ, ಪುಸ್ತಕಗಳು ಮಾನವನ ಗೆಳೆಯರು, ಕಲ್ಪನೆಯ ಬಾಗಿಲು ಹಾಗೆ ಹೀಗೆ ಅಂತ ಹೇಳ್ತಾ ಇದ್ವಿ, ಈಗ ಈ ವಾಕ್ಯಗಳಿಗೆ ಅರ್ಥವೇ ಇಲ್ಲ ಅನ್ನಿಸೋ ತರ ಆಗಿಹೋಗಿದೆ. ಸದಾ ಮೊಬೈಲು, ರೀಲ್ಸ್ ಇದರಲ್ಲಿಯೇ ಮುಳುಗಿಹೋಗ್ತಿದಾರೆ ನಮ್ಮ ಮಕ್ಕಳು. ಮಕ್ಕಳಲ್ಲಿ ಪದ ಸಂಪತ್ತು ಕಡಿಮೆಯಾಗ್ತಿದೆ.. ಎರಡು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪತ್ರ ರಹಸ್ಯ: ನಾಗಸಿಂಹ ಜಿ. ರಾವ್

, ನಮಸ್ಕಾರ ಮಕ್ಕಳೇ, ನೀವು ಈ ಕಥೆ ಓದೋದಕ್ಕೆ ಶುರು ಮಾಡಿದ್ದೀರಾ ಅಂದ್ರೆ ಮಕ್ಕಳ ಹಕ್ಕುಗಳ ಲೋಕವನ್ನ ಪ್ರವೇಶ ಮಾಡೋಕೆ ಸಿದ್ಧರಾಗಿದೀರಾ ಅಂತ ಅರ್ಥ. ಈ ಕಥೆ ಓದಿದ ಮೇಲೆ ನಿಮ್ಮ ಗೆಳಯರಿಗೆ ಈ ಕಥೆ ಬಗ್ಗೆ ಹೇಳಬೇಕು, ಸರಿನಾ?ಒಂದು ಊರಲ್ಲಿ ಒಂದು ಮಕ್ಕಳ ಸಂರಕ್ಷಣಾ ಗೃಹ ಇತ್ತು. ಏನಪ್ಪಾ ಇದು ಅಂದುಕೊಂಡ್ರಾ? ಮೊದಲು ಅನಾಥಾಲಯ ಅಂತ ಕರೀತಿದ್ವಲ್ಲ ಅದರ ಬದಲಾಗಿ ಮಕ್ಕಳ ಸಂರಕ್ಷಣಾ ಗೃಹ ಅಂತ ಕರಿಬೇಕು, ಅನಾಥ ಮಕ್ಕಳು ಅನ್ನುವ ಬದಲಾಗಿ ರಕ್ಷಣೆ ಪೋಷಣೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೈಗ್ರೇನ್ ಮಾತು !: ಡಾ. ಹೆಚ್ ಎನ್ ಮಂಜುರಾಜ್

‘ಏನೇನೋ ಕುರಿತು ಬರೆಯುತ್ತೀರಿ? ನಿಮ್ಮ ತಲೆನೋವನ್ನು ಕುರಿತು ಬರೆಯಿರಿ!’ ಎಂದರು ನನ್ನ ಸಹೋದ್ಯೋಗಿಯೊಬ್ಬರು. ಸ್ವಲ್ಪ ಹೊತ್ತು ಸುಮ್ಮನಿದ್ದು ಆಮೇಲೆ ಹೇಳಿದೆ: ‘ಏಳೆಂಟು ಅಧ್ಯಾಯಗಳಿರುವ ಇನ್ನೂರು ಪುಟಗಳ ಪುಸ್ತಕವನ್ನೇ ಬರೆದೆ. ಆಮೇಲೆ ನೋವನ್ನು ಹಂಚುವುದು ಸಾಹಿತ್ಯದ ಕೆಲಸವಾಗಬಾರದು ಎಂದು ಹರಿದೆಸೆದೆ!’ ಎಂದೆ. ‘ಹೌದೇ!?’ ಎಂದಚ್ಚರಿಪಟ್ಟರು. ಆಗ ಕವಿ ಬೇಂದ್ರೆ ನೆನಪಾದರು: ‘ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೇ ನೀಡುವೆನು ರಸಿಕ ನಿನಗೆ; ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ ಆ ಸವಿಯ ಹನಿಸು ನನಗೆ’ ಎಂದವರು. ‘ಬೆಂದರೆ ಬೇಂದ್ರೆ ಆದಾರು, ಯಾರು ಬೇಕಾದರೂ’ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕೃಷಿ ಅನುಭವಗಳ ಹೂರಣ “ಗ್ರಾಮ ಡ್ರಾಮಾಯಣ”: ಡಾ. ನಟರಾಜು ಎಸ್ ಎಂ

ಗುರುಪ್ರಸಾದ್ ಕುರ್ತಕೋಟಿಯವರು ನನಗೆ ಅನೇಕ ವರ್ಷಗಳಿಂದ ಎಫ್ ಬಿ ಯಲ್ಲಿ ಪರಿಚಿತರು. ನಮ್ಮ ಇಷ್ಟು ವರ್ಷಗಳ ಪರಿಚಯದಲ್ಲಿ ಅವರ ಅನೇಕ ಚಟುವಟಿಕೆಗಳನ್ನು ಗಮನಿಸುತ್ತಾ ಬಂದಿದ್ದೇನೆ. ಹೊಸದರಲ್ಲಿ ಗುರು ಅವರು ಹಾಸ್ಯ ಬರಹಗಾರರಾಗಿ ಪರಿಚಿತರಾದರು. ಪರಿಚಯದ ನಂತರ ನಮ್ಮ ಪಂಜು ಅಂತರ್ಜಾಲ ಪತ್ರಿಕೆಯಲ್ಲಿ “ಪಂಚ್ ಕಜ್ಜಾಯ” ಎಂಬ ಹಾಸ್ಯ ಲೇಖನಗಳ ಅಂಕಣ ಶುರು ಮಾಡಿದರು. ಅದಾದ ನಂತರ ಬರಹದ ಜೊತೆ ಬೇರೆ ಏನನ್ನಾದರು ಮಾಡಬೇಕೆನ್ನುವ ಅವರ ತುಡಿತ ಅವರನ್ನು ರಂಗಭೂಮಿ ಕಡೆಗೆ ಕರೆದೊಯ್ದಿತು. ಬೆಂಗಳೂರಿನಲ್ಲಿ ಕೆಲ ಕಾಲ ರಂಗಕರ್ಮಿಯಾಗಿದ್ದರು, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಿಲ್ಲಿಸೋಣ ಮಕ್ಕಳ ಆತ್ಮಹತ್ಯೆ: ನಾಗಸಿಂಹ ಜಿ ರಾವ್

” ಕ್ರಿಕೆಟ್ ನೋಡಿದ್ದು ಸಾಕು . ಪಾಠ ಓದು ಹೋಗು , ಅಂತ ಹೇಳಿ ಅವನ ಕೈ ಯಲ್ಲಿದ್ದ ಟಿವಿ ರಿಮೋಟ್ ಕಿತ್ತುಕೊಂಡೆ ಸಾರ್ .. ಕೋಪ ಮಾಡಿಕೊಂಡು ರೂಮ್ ಒಳಗೆ ಹೋಗಿ ಬಾಗಿಲು ಹಾಕಿಕೊಂಡೋನು ಮತ್ತೆ ಈಚೆ ಬರಲೇ ಇಲ್ಲ ಸಾರ್ .. ಅಪ್ಪ ಅಮ್ಮ ಆಗಿ ನಮಗೆ ಅಷ್ಟು ಅಧಿಕಾರ ಇಲ್ವಾ ಸಾರ್ ? ಆತ್ಮಹತ್ಯೆ ಮಾಡಿಕೊಳ್ಳೋ ಪರಿಸ್ಥಿತಿ ಏನಿತ್ತು ನೀವೇ ಹೇಳಿ ಸಾರ್ ? ಮಕ್ಕಳನ್ನ ಹೇಗೆ ಅರ್ಥ ಮಾಡಿಕೊಳ್ಳೋದು ? ?” … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹಗೆಯ ಬೆಂಕಿಯಲ್ಲಿ ಸುಟ್ಟು ಕರಕಲಾದ ಪ್ರೇಮಕಥೆ ಟ್ರಾಯ್: ವರದೇಂದ್ರ ಕೆ ಮಸ್ಕಿ

ಕೃತಿ: ಟ್ರಾಯ್ಪ್ರಕಾರ: ಕಾದಂಬರಿಲೇಖಕರು: ಗಾಯತ್ರಿ ರಾಜ್ ಗ್ರೀಕರು ಟ್ರಾಯ್ ನಗರವನ್ನು ವಶಪಡಿಸಿಕೊಳ್ಳುವ ಸಂಚಿನಲ್ಲಿ ಕಾದಂಬರಿಯ ನಾಯಕಿ, ಓದುಗನ ಮನಸಿನಲ್ಲಿ ಅಪ್ಸರೆಯಾಗಿ, ಪ್ರೇಮದ ವ್ಯಾಖ್ಯಾನವಾಗಿ, ಓದುಗ ತನ್ನ ಪ್ರೇಮಿಯಲ್ಲೂ ಕಾಣಬಹುದಾದಂತಹ ಸ್ಫುರದ್ರೂಪ ಗೊಂಬೆಯಾಗಿ, ಮನದಣಿಯ ನೋಡಿದರೂ ಕಣ್ಣು, ಅರೆಕ್ಷಣವೂ ಬಿಟ್ಟಗಲದಂತೆ ಮನಸೂರೆಗೊಂಡ ದಂತದ ಬೊಂಬೆ “ಹೆಲೆನ್” ಭಾಗಿಯಾಗಿದ್ದಳು ಎಂಬುದು ಸಹಿಸಲಸಾಧ್ಯವಾದುದು. ಕೃತಿ ಓದಿದ ನಂತರ ಇದನ್ನು ಓದುಗನು ಊಹಿಸಿಕೊಳ್ಳಲೂ ಇಷ್ಟಪಡುವುದಿಲ್ಲ ಎಂದಾದ ಮೇಲೆ ಈ ತರಹದ ವಾದವೂ ಕೂಡ ಒಂದಿದೆ, ಒಂದಿತ್ತು ಎಂಬುದನ್ನು ನೇರಾನೇರ ಮೊದಲೇ ನಾನು ತಳ್ಳಿಹಾಕಿಬಿಡುತ್ತೇನೆ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಗಣಪ್ಪನ ಪೂಜೀ ಅರ್ಭಾಟಾಗಿ ಮಾಡೋದೇ…….: ಡಾ.ವೃಂದಾ ಸಂಗಮ್‌

“ಹೂಂ, ಛೊಲೋ ಆಗೋದದಲಾ, ಅದೇ ಎಲ್ಲಾರ ಆಶಾನೂ ಆಗಿರತದ, ಮಕ್ಕಳು ಛೊಲೋತಾಂಗ ಓದಿ, ಅಮೇರಿಕಾದಾಗ ಕೆಲಸ ಮಾಡೋದು ನನಗೇನು ಬ್ಯಾಡನಸತದನು” “ಅಲ್ಲ, ಹೋದ ವರಷ, ಸುಬ್ಬಣ್ನಾ ಗಣಪತಿ ನೋಡಲಿಕ್ಕಂತ ಬಂದಾಂವ, ಹೆಂಗ ಹೇಳಿದಾ, ನೋಡಿದಿಲ್ಲೋ, ಒಂದು ಖುಷಿ ಖಬರ ಅದನಪಾ, ನಮ್ಮ ರಾಹುಲಗ ಅಮೇರಿಕಾದ ಓದಲಿಕ್ಕೆ ಸೀಟು ಸಿಕ್ಕೇದ. ಮುಂದಿನ ವರಷ ಗಣಪತಿ ಹಬ್ಬದಾಗ ಅವಾ ಅಲ್ಲಿರತಾನ ನೋಡು, ಅಂತ, ತಾನೇ ಅಮೇರಿಕಾಕ್ಕ ಹೋದಂಗ ಹೇಳತಾನ. ನಾನೂ ಅವತ್ತೇ ನಿರ್ಧಾರ ಮಾಡೇನಿ, ರಶ್ಮಿನ್ನ ಡಾಕ್ಟರ್‌ ಮಾಡಬೇಕು, ರಂಜುನ್ನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅಂಕಲ್ ಗಣಪತಿ ಇಡ್ತೀವಿ…….: ನಾಗಸಿಂಹ ಜಿ ರಾವ್

ಪ್ರತಿವರ್ಷ ಆಗಸ್ಟ್ ಸೆಪ್ಟೆಂಬರ್ ಬಂತು ಅಂದ್ರೆ ಕೆಲವು ಮಕ್ಕಳ ಗುಂಪು ಗಣಪತಿ ಇಡೋಕೆ ಪ್ಲಾನ್ ಮಾಡುತ್ತಾರೆ, ನಾವು ಅಷ್ಟೇ 1979 ರಲ್ಲಿ ಏಳನೇ ಕ್ಲಾಸ್ ನಲ್ಲಿ ಓದುತ್ತಿದ್ದಾಗ ನಾನು, ಅಶೋಕ, ಗಣೇಶ, ಮಿಲಟರಿ ಮಂಜ, ನನ್ನ ತಮ್ಮ ಪ್ರಸಾದಿ ಗಣಪತಿ ಇಡೋಕೆ ನಿರ್ಧಾರ ಮಾಡಿ ಬಿಟ್ಟೆವು. ಡಬ್ಬಗಳ ಮುಚ್ಚಳದ ಮೇಲೆ ಅಡ್ಡ ವಾಗಿ ಸಂದಿ ಮಾಡಿ ಹಣ ಸಂಗ್ರಹ ಮಾಡೋಕೆ ಶುರು, ಯಾವುದೇ ಪ್ಲಾನಿಂಗ್ ಇಲ್ಲ, ಎಷ್ಟು ಬಜೆಟ್ ಬೇಕು ಅನ್ನೋ ಅಂದಾಜಿಲ್ಲ, ಎದುರಾಗಬಹುದಾದ ಅಪಾಯಗಳ ಅರಿವಿಲ್ಲದೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪೋಸ್ಟ್ ಮ್ಯಾನ್ ಗಂಗಣ್ಣ (ಕೊನೆಯ ಭಾಗ)”: ಎಂ.ಜವರಾಜ್

-13- ಆ ಗುಡುಗು ಸಿಡಿಲು ಮಿಂಚು ಬೀಸುತ್ತಿದ್ದ ಗಾಳಿಯೊಳಗೆ ಉದರುತ್ತಿದ್ದ ಸೀಪರು ಸೀಪರು ಮಳೆಯ ಗವ್ಗತ್ತಲೊಳಗೆ ಮನೆ ಸೇರಿದಾಗ ಎಲ್ಲರೂ ನಿದ್ರೆಗೆ ಜಾರಿದ್ದರು. ಚಿಲಕ ಹಾಕದೆ ಟೇಬಲ್ ಒತ್ತರಿಸಿ ಹಾಗೇ ಮುಚ್ಚಿದ್ದ ಬಾಗಿಲು ತಳ್ಳಿ ಒಳ ಹೋಗಿ ಮೊಂಬತ್ತಿ ಹಚ್ಚಿದೆ. ಕರೆಂಟ್ ಬಂದಾಗ ಮೊಬೈಲ್ ಚಾರ್ಜ್ ಆಗಲೆಂದು ಪಿನ್ ಹಾಕಿ ಒದ್ದೆಯಾದ ಬಟ್ಟೆ ಬಿಚ್ಚಿ ಬದಲಿಸಿ ಕೈಕಾಲು ಮುಖ ತೊಳೆದು ಉಂಡು ಮಲಗಿದವನಿಗೆ ರಾತ್ರಿ ಪೂರಾ ಬಸ್ಟಾಪಿನಲ್ಲಿ ಷಣ್ಮುಖಸ್ವಾಮಿ ಗಂಗಣ್ಣನ ಬಗ್ಗೆ ಆಡಿದ ಮಾತಿನ ಗುಂಗು. ಆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ನಾರಾಯಣ” ಕೇವಲ “ಲಕ್ಷ್ಮಿ” ಜಪ ಮಾಡುತ್ತಾ ಕುಳಿತರೆ!!!!: ಪಿ. ಎಸ್. ಅಮರದೀಪ್

ಏಳು ವರ್ಷವಾಯ್ತು. ಅದೊಂದು ದಿನ ಕಛೇರಿ ಕೆಲಸದ ಮೇಲೆ ಬಳ್ಳಾರಿಗೆ ಹೋಗಿದ್ದೆ. ಅದರ ಹಿಂದಿನ ದಿನ ಸಮಸ್ಯೆಯಾಗಿ ಕೊಪ್ಪಳದ ವೈದ್ಯರ ಬಳಿ ಹೋಗಿದ್ದೆ. “ಯಾವುದಕ್ಕೂ ಕಾರ್ಡಿಯೋ ಎಕೊ ಟೆಸ್ಟ್ ಮಾಡಿಸಿ” ಅಂದಿದ್ದರು. ಅದಕ್ಕೆಂದೇ ವೈದ್ಯರೊಬ್ಬರಲ್ಲಿ ಹೋಗಿದ್ದೆ. ಕಾರಣ ಹೇಳಿದೆ. ಅಲ್ಲಿಗೆ ತಜ್ಞ ವೈದ್ಯರೊಬ್ಬರು ಬಂದು ಬಿಪಿ ಚೆಕ್ ಮಾಡಿದರು. “ಏನ್ರಿ ನೀವು, ಇಷ್ಟು ನೆಗ್ಲೆಕ್ಟ್ ಮಾಡಿದಿರಿ, ನೋಡಿ ಬಿಪಿ ಹೈ ಆಗಿ ನಿಮಗೆ ಮೇಜರ್ ಹಾರ್ಟ್ ಆಟ್ಯಾಕ್ ಆಗಿದೆ “ ಅಂದುಬಿಟ್ಟ… ರೀ ಸ್ವಾಮಿ ಬಿಪಿ ತೀರ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪೋಸ್ಟ್ ಮ್ಯಾನ್ ಗಂಗಣ್ಣ (ಭಾಗ 12)”: ಎಂ.ಜವರಾಜ್

-೧೨-ಕರೋನಾ ನಂತರ ಆಫೀಸಲ್ಲಿ ಕೆಲಸವೂ ಹೆಚ್ಚಾಗಿತ್ತು. ಸರ್ಕಾರದ ನಿಯಮಾವಳಿ ಬದಲಾಗಿತ್ತು. ಕರೋನಾ ಭೀತಿಯಲ್ಲೆ ಮನೆಯಲ್ಲಿ ಅದು ಇದು ಕೆಲಸ ಮುಗಿಸಿ ಬೆಳಗ್ಗೆ ಆರೇಳು ಗಂಟೆಗೆ ಮನೆ ಬಿಟ್ಟರೆ ಆಫೀಸ್ ಕೆಲಸ ಮುಗಿಸಿ ಎರಡೆರಡು ಬಸ್ ಹತ್ತಿ ಮನೆ ಸೇರುತ್ತಿದ್ದುದು ರಾತ್ರಿ ಒಂಭತ್ತು ಹತ್ತು ಗಂಟೆಯಾಗುತ್ತಿತ್ತು. ಈ ಒತ್ತಡದಲ್ಲಿ ಗಂಗಣ್ಣ ಸಿಕ್ಕಿದ್ದು ಮರೆತು ಹೋಗಿತ್ತು. ಆದರೆ ಮೊಬೈಲ್ ಓಪನ್ ಮಾಡಿ ಅದು ಇದು ನೋಡುವಾಗ ಗಂಗಣ್ಣನ ಫೋಟೋ ಕಣ್ಣಿಗೆ ಬಿದ್ದು ನೆನಪಾಗ್ತಿತ್ತು. ಅದು ಬಿಟ್ಟರೆ ಪೋಸ್ಟ್ ಆಫೀಸಲ್ಲಿ ಪೋಸ್ಟ್ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಚಿಗುರು ಫಾರ್ಮ್ ನಲ್ಲಿ ಶ್ರಾವಣ ಉತ್ಸವ

ರವಿ ಅರೋಮಾ ಎಂಟರ್ಪ್ರೈಸಸ್, ಬೆಂಗಳೂರು ನೋಂದಣಿ ಶುಲ್ಕ ಪ್ರತಿಯೊಬ್ಬರಿಗೆ ರೂ 1000/- ಸಮಯ : 31-08-2024, ಶನಿವಾರ ಸ್ಥಳ : ಚಿಗುರು ಫಾರ್ಮ್, ತೇರುಬೀದಿ, ಮರಳವಾಡಿ, ಹಾರೋಹಳ್ಳಿ ,ರಾಮನಗರ ಜಿಲ್ಲೆ ಸಮಯ ಸಾರಿಣಿ ಬೆಳಿಗ್ಗೆ 09.30 AMನೋಂದಣಿ ಮತ್ತು ಉಪಹಾರಸ್ವಾಗತ! ನಾವು ದಿನದ ಈವೆಂಟ್ಗಳನ್ನು ಪ್ರಾರಂಭಿಸುವ ಮೊದಲು ನೋಂದಣಿ ಮತ್ತು ಲಘು ಉಪಹಾರ. 10.00 AMಪರಿಚಯ ಶ್ರಾವಣ ಉತ್ಸವದ ಉದ್ಘಾಟನೆ. 10.30 AMಪಂಚವಟಿ ವನ ಪ್ರಾತ್ಯಕ್ಷಿಕೆ ಡಾ ಜಗನ್ನಾಥ ರಾವ್ , ಪ್ರೊಫೆಸರ್, ಟಿಡಿಯು, ಬೆಂಗಳೂರು ಇವರಿಂದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪೋಸ್ಟ್ ಮ್ಯಾನ್ ಗಂಗಣ್ಣ (ಭಾಗ 11)”: ಎಂ.ಜವರಾಜ್

-೧೧-ಮಾರನೆ ದಿನ ಹತ್ತನ್ನೊಂದು ಗಂಟೆಗೆಲ್ಲ ಬಂದ ಗಂಗಣ್ಣ ಶಿಶುವಾರದ ಜಗುಲಿಲಿ ಧೂಳೊಡೆದು ಕುಂತ. ಕಾಲೇಜಿಗೆ ಚಕ್ಕರ್ ಹೊಡೆದು ಕ್ಯಾಸ್ಟ್ ಸರ್ಟಿಫಿಕೇಟ್ ಮಾಡಿಸಲು ರೆಡಿಯಾಗಲು ತೆಂಗಿನ ಮರಕ್ಕೆ ಒರಗಿಸಿ ನಿಲ್ಲಿಸಿದ್ದ ಸೈಕಲ್ ಒರೆಸುತ್ತಿದ್ದೆ. ಇದೇನು ಗಂಗಣ್ಣ ಇವತ್ತು ಇಷ್ಟು ಬೇಗ ಬಂದಿದಾನೆ ಅಂತ ಅಂದುಕೊಳ್ಳುವುದಕ್ಕು ಅವನು “ಯೋ ಬಾರಪ್ಪ ಇಲ್ಲಿ” ಅನ್ನುವುದಕ್ಕು ಸರಿ ಹೋಯ್ತು. ನಾನು “ಏನ್ ಗಂಗಣ್ಣ ಇವತ್ತು ಇಷ್ಟು ಜಲ್ದಿ ಬಂದಿದಿಯಾ” ಅಂದೆ. ಅಷ್ಟೊತ್ತಿಗೆ ಶಿಶುವಾರದ ಮೇಡಂ ಹೊರ ಬಂದು “ಗಂಗಣ್ಣ ಗುಗ್ರಿ ಕಾಳು ತಿಂತಿಯ.. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಶಾಲೆಗಳಲ್ಲಿ ಜಾರಿಯಾಗದ ಮಕ್ಕಳ ರಕ್ಷಣಾ ನೀತಿ: ನಾಗಸಿಂಹ ಜಿ ರಾವ್

ಮಕ್ಕಳನ್ನು ಶಾಲೆಗೆ ಕರೆತರುವ ವಾಹನಗಳ ಸುಮಾರು ೨೨ ಚಾಲಕರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ, ಈ ಚಾಲಕರು ಕರ್ತವ್ಯ ನಿರ್ವಹಣೆ ಮಾಡುವಾಗ ಮದ್ಯಪಾನ ಮಾಡಿದ್ದರು ಎನ್ನುವ ಆರೋಪ. ಸುಮಾರು ಮೂರು ತಿಂಗಳ ಹಿಂದೆ ಬೆಂಗಳೂರಿನ ಶಾಲೆಗಳಲ್ಲಿ ಬಾಂಬ್ ಇದೆ ಎನ್ನುವ ಹುಸಿ ಇ-ಮೇಲ್ ಶಾಲೆಗಳಿಗೆ ಬಂದಾಗ ಶಾಲೆಯ ಆಡಳಿತ ಮಂಡಳಿ ಪೋಷಕರಿಗೆ ಕರೆ ಮಾಡಿ ನಿಮ್ಮ ಮಕ್ಕಳನ್ನು ಕರೆದುಕೊಂಡು ಹೋಗಿ ಎಂದು ತಿಳಿಸಿದಿದ್ದರಿಂದ ಗಾಬರಿಯಾದ ಪೋಷಕರು ಶಾಲೆಗಳತ್ತ ಓಡಿದ್ದರು. ಪ್ರತಿಷ್ಠಿತ ಶಾಲೆಗಳ ವಿದ್ಯಾರ್ಥಿನಿಯರು ರಸ್ತೆಯಲ್ಲಿ ಹೊಡೆದಾಡಿದರು. ಈ ಹೊಡೆದಾಟದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪೋಸ್ಟ್ ಮ್ಯಾನ್ ಗಂಗಣ್ಣ (ಭಾಗ 10)”: ಎಂ.ಜವರಾಜ್

-೧೦-ನಮ್ಮ ಮುಳ್ಳೂರು ಚಿಕ್ಕಿಯ ತಂಗಿ ಮಗಳು ಮೂರು ದಿನದಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ಇವತ್ತೊ ನಾಳೆಯೊ ನಾಳಿದ್ದೊ ಆಗುವ ಹೆರಿಗೆ ನೋವು. ಡಾಕ್ಟರು ಯಾವುದನ್ನು ಸರಿಯಾಗಿ ಹೇಳದೆ ನಾಳೆ ಬನ್ನಿ ರಾತ್ರಿ ಬನ್ನಿ ಬೆಳಗ್ಗೆ ಬನ್ನಿ ಇದು ಹೆರಿಗೆ ನೋವಲ್ಲ ಅಂತ ಏನೇನೊ ಸಮಜಾಯಿಸಿ ನೀಡುತ್ತಿದ್ದರು. ಮುಳ್ಳೂರು ಚಿಕ್ಕಿಗೆ ತಂಗಿ ಮಗಳ ಕಷ್ಟ ನೋಡಲಾರದೆ ಬಿಕ್ಕಿ ಬಿಕ್ಕಿ ಅಳುತ್ತ ನನ್ನನ್ನು ಕರೆದು ಬೆಂಗಳೂರಿನ ತಂಗಿಗು ತಂಗಿ ಗಂಡನಿಗೂ ಅವರ ಮೂವರು ಗಂಡು ಮಕ್ಳಳಿಗೂ, ಮುಳ್ಳೂರಿನ ತನ್ನವ್ವಳಿಗೂ “ಎರ‌್ಗ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅಣ್ಣ ಮತ್ತು ಪರಿವರ್ತನೆ: ಬಿ.ಟಿ.ನಾಯಕ

ಅದೊಂದು ದಿನ ‘ಅಣ್ಣ’ರಂಗಣ್ಣನ ದರಬಾರು ನಡೆದಿತ್ತು. ಅಲ್ಲಿ ಸುಮಾರು ಹತ್ತರಿಂದ ಹದಿನೈದು ಆತನ ಚೇಲಾಗಳಿದ್ದರು. ಯಾವುದೋ ಗಹನವಾದ ವಿಷಯದ ಬಗ್ಗೆ ಚರ್ಚೆ ನಡೆದಿತ್ತು. ಅವರ ಸಂಭಾಷಣೆ ಹೀಗಿತ್ತು;‘ಅಣ್ಣಾ …ನೀನು ಏನೋ ಹೇಳು, ಆ ಧೀರನ ಪಾಳ್ಯದ ಗೋವಿಂದಣ್ಣ ನಮ್ಮ ಏರಿಯಾಕ್ಕೆ ಬಂದು ಗಲಾಟೆ ಮಾಡಿ, ಸೀನನನ್ನ ಎತ್ತಾಕ್ಕೊಂಡು ಹೋಗಬಾರದಿತ್ತು. ಆತ ಹಾಗೆ ಮಾಡಿ ಅದರ ಕಳಂಕ ನಮ್ಮ ಮೇಲೆ ಹೊರಿಸುವುದಲ್ಲದೆ, ಲಾಭ ಕೂಡಾ ಮಾಡಿ ಕೊಂಡ’ ಎಂದ ರೇವ್ಯ.‘ಏಯ್ ಸುಮ್ಕಿರಲೇ, ಅವನು ಹಾಗ ಮಾಡಿದಾ ಅಂತ ಏನೋ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಂಚಿ ಹೊನ್ನಮ್ಮನ ಹದಿಬದೆಯ ಧರ್ಮ – ಒಂದು ವಿವೇಚನೆ: ಸಂತೋಷ್ ಟಿ

ಮೈಸೂರು ರಾಜ ಸಂಸ್ಥಾನದಲ್ಲಿ ಎಲೆ ಅಡಿಕೆ ನೀಡುವ ಸಂಚಿಯ ಕಾಯಕದ ಸಖಿಯಾಗಿ ವೃತ್ತಿಧರ್ಮದಲ್ಲಿದ್ದ ಹೊನ್ನಮ್ಮನ ಕೃತಿ ‘ಹದಿಬದೆಯ ಧರ್ಮ’ವಾಗಿದೆ. ಚಿಕ್ಕದೇವರಾಜ ಒಡೆಯರ್ ಕಾಲದ ಸರಿಸುಮಾರು ಕ್ರಿ.ಶ. ೧೬೭೨-೧೭೦೪ ನೇ ಶತಮಾನದ ಕಾಲಘಟ್ಟದಲ್ಲಿ ಸರಸ ಸಾಹಿತ್ಯದ ವರದೇವತೆ ಎಂಬ ಅಗ್ಗಳಿಕೆಗೆ ಪಾತ್ರಳಾದವಳು ಹೊನ್ನಮ್ಮ. ದೇವರಾಜಮ್ಮಣ್ಣಿಯ ರಾಣಿ ವಾಸದ ಸಖಿಯಾಗಿ ಎಳಂದೂರಿನಿಂದ ಬಂದು ಸೇರಿದ್ದ ಹೊನ್ನಮ್ಮನು, ಅರಮನೆಯ ಪರಿವಾರಕ್ಕೆ ತಾಂಬೂಲ ಅಥವಾ ಎಲೆಅಡಿಕೆ ನೀಡುವ ಕಾಯಕ ಮಾಡುತ್ತಿದ್ದಳು. ತನ್ನ ಬುದ್ಧಿ ಶಕ್ತಿಯಿಂದ ಅರಮನೆಯ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಾಹಿತ್ಯ ಪರಿಸರದಿಂದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ