ಪಂಜು ಕವಿತೆ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ನಳಿನ ಬಾಲು ಅವರ ಕವಿತೆ
ಕೆಂಪು ಕೆಂಪಾದ ಆ ದಿನ ಮರೆಯಲಾರೆನು ಇನ್ನೂಹಚ್ಚ ಹಸಿರಾಗಿದೆ ಅದರ ನೆನಪು.ಅಯ್ಯೋ ಮನೆಯೆಲ್ಲ ಮೈಲಿಗೆಯಾಯಿತು,ಶಾಲೆಯಿಂದ ಬಂದವಳಿಗೆ ಹಿರಿಯರ ವಟವಟ. ಅರ್ಥವಾಗದೆ ನೋಡಿದೆ ಅಮ್ಮನ ಮುಖವ,ಓಡಿ ಬಂದು ತಬ್ಬಿದಳು ಅರಿವು ಮೂಡಿಸುತ.ಮುಂಜಾನೆಯ ಮೂಡಣದ ದಿನಕರ ಕೆಂಪಾಗುವನಲ್ಲ ಅವನಿಗೂ ಉಂಟೆ ಮೈಲಿಗೆಯ ತಟವಟ? ಅಯ್ಯೋ ಅದನ್ನು ಯಾಕೆ ಮುಟ್ಟಿಸಿಕೊಂಡ್ಯೇ..ದೊಡ್ಡವಳವಳು ನಿಭಾಯಿಸಲಿ ಬಿಡು,ಅಜ್ಜಿಯ ಆಜ್ಞೆಯಂತಹ ಸಲಹೆ,ಅಮ್ಮನ ಕಣ್ಣಲ್ಲಿ ಕಂಡೂ ಕಾಣದಂತಹ ಹತಾಶೆ. ನನ್ನಣ್ಣ ಒಂದು ವರ್ಷ ಹಿರಿಯ,ಅವ ಚಿಕ್ಕವನಂತೆ, ಅದು ಹೇಗೆನಾನು ಮಾತ್ರ ದೊಡ್ಡವಳಾದೆ? ಯಾರನ್ನು ಪ್ರಶ್ನಿಸಲಿ?ಅಮ್ಮನ ತುಂಬಿದ ಕಂಗಳ ಕಂಡು … Read more