ವಿಷಾದ
ದುಡಿಯುವುದಕ್ಕೆ ನೂರಾರು ದಾರಿ
ಆಯ್ಕೆ ಯಾರದ್ದು ನಮ್ಮದ
ಇಲ್ಲ ನಮ್ಮ ಓದಿನದ್ದ ಈಗಲೂ
ಗೊಂದಲವಿದೆ ಯಾರನ್ನ ಕೇಳಲಿ
ಕೇಳಿದರೆ ತಿಳಿದರು ಕೇಳಿದೆ
ಎಂಬುವ ವಿಷಾದ
ಕುಳಿತಲ್ಲಿ ಕುಳಿತು ಗಣಕಯಂತ್ರವನ್ನು
ಕುಟ್ಟುತ್ತ ನನ್ನನ್ನ ನಾನು ಮರೆತಿದ್ದೆ
ಕೆಲಸ ಮುಖ್ಯವ ನೆಮ್ಮದಿ ಮುಖ್ಯವ
ಮತ್ತೊಂದು ಪ್ರೆಶ್ನೆ ನಿದ್ದೆಯೆ ನನ್ನ
ಮನಸನ್ನ ಕೇಳಿತು ಅದಕ್ಕೂ
ಉತ್ತರಿಸುವುದಕ್ಕೂ ವಿಷಾದ
ಬರಿ ದೂರುಗಳೇ ಅವರ ಮೇಲೆ
ಇವರು ಇವರ ಮೇಲೆ ಅವರು ಯಾರದ್ದು ಸರಿ
ದೂರು ಕೊಟ್ಟಿದ್ದ
ಅದಕ್ಕೆ ತಕ್ಕ ಹಾಗೆ
ಕಾರಣಗಳು ಹೇಳಿದ್ದ ಇದಕ್ಕೂ ತೆಲೆ
ಕೆಡುವ ಗುದ್ದಾಟಗಳು
ಟಾರ್ಗೆಟ್ ಎಂಬ ಕೊಂಡಿಗೆ ನೇತು
ಬಿದ್ದು ತೂಗಾಡುತ್ತಿದ್ದೇವೆ
ಅದೂ ಎಲ್ಲರಿಗೂ ತಿಳಿದಿದೆ
ಅದಕ್ಕೆ ಕಾರಣ ಹಣವೆಂಬ
ಪೆಡಂಭೂತ
ಆಗೆ ನೋಡಿದರೆ ನಾವೇ ಅದಕ್ಕೂ
ದೊಡ್ಡ ಪೆಡಂಭೂತ ಯಾಕೇಳಿ ಅದೂ
ಏನು ಕೇಳುವುದಿಲ್ಲ ನಾವೇ ಅದರ
ಧಾವಂತದಲ್ಲಿದ್ದೇವೆ
ಇನ್ನು ಕೆಲಸವೆಂಬುದು ಒತ್ತಡಕ್ಕೆ
ಬಿದ್ದಾಗ ಇಲ್ಲಿಂದ ಹೊರಟುಬಿಡಬೇಕೆಂಬ
ಪರದಾಟ
ಕೊನೆಗೆ ಯಾರೋ ಸತ್ತರೂ ಎಂಬುವ
ಸುದ್ಧಿ ಕೊಟ್ಟು ಗ್ಯಾಪ್ ತೆಗೆದುಕೊಳ್ಳುವ
ಚಟ ಆಮೇಲೆ ಅಯ್ಯೋ ಈ ಕಾರಣ
ಕೊಟ್ಟೆನಲ್ಲ ಎಂಬ ವಿಷಾದ
*
ಮೊಬೈಲ್ ನೋಡುವ ಹುಡುಗಿ!
ಗದ್ದಲಗಳ ನಡುವೆಯು
ಶಂಖ ಕಿವಿಯ ಹುಡುಗಿ
ಅವಳ ಪಾಡಿಗೆ ಅವಳು
ಕಿವಿಯಲ್ಲಿ ಏರ್ ಪೊಡ್
ಹಾಕಿಕೊಂಡು ಮೊಬೈಲ್ ನೋಡುತ್ತ
ತಲೆ ತೂಗುತ್ತಿದ್ದಳು
ಅವಳ ನೋಟಕ್ಕೆ ಕಾಯುವ ನಾನು
ನೋಡಿದರು ನೋಡದಂತೆ ನನ್ನ
ಮೊಬೈಲ್ ನೋಡುತ್ತಿದೆ
ಥಟ್ಟನೆ ನೋಡಿದಳು
ನನ್ನ ಮೈಯೆಲ್ಲಾ ಮೊಬೈಲ್ನಂತೆ ಕಂಪಿಸಿತು
ಆಗೆ ಒಂದು ಸಣ್ಣ ಕಿರುನಗೆ ಬಿಸಾಕಿದಳು
ಆಗ ನನ್ನ ಪಾಡು ಹರೊ ಹರ
ಟೀ ಕಾಫಿ ಟೀ ಕಾಫಿ ಎಂದು ಟೀ
ಮಾರುವವ ಅವಳನ್ನ ನೋಡಿ
ಮೆಲ್ಲನೆ ಟೀ ಬೇಕೆಂದ ಅವಳು
ತಲೆಯಿಂದ ಬಲಗಡೆ ಎಡಗಡೆ ಗೋಣು
ಅಲ್ಲಾಡಿಸಿ ಬೇಡವೆಂದಳು ಅವನು ನಿರಾಸೆಯಿಂದ
ಟೀ ಕಾಫಿ ಎಂದು ವದುರುವ ಗೋಜಿಗೆ ಹೋಗದೆ
ಹೊರಟೆ ಹೋದ ಅವಳು ಕಂಣ್ಣೋಟ
ಮತ್ತೆ ತಲೆ ಕೆಡುಸುವ ಮೊಬೈಲ್ ಮೇಲೆ
ನನ್ನ ನೋಟ ಅವಳ ಮೇಲೆ
ಇನ್ನೇನು ಕೊನೆಯ ನಿಲ್ದಾಣ
ಬಂದೆ ಬಿಟ್ಟಿತು ಅವಳು ಎದ್ದಳು
ಅವಳ ಅಪ್ಪನೂ ಅಥವಾ ಅಂಕಲ್
ಎದ್ದನು ನಾನು ಅವಳನ್ನ ಹಿಂಬಾಲಿಸಲು
ತಡವಾಗಿ ಎದ್ದೆ ಅದೇ ಸಮಯಕ್ಕೆ ನನ್ನ
ಮೊಬೈಲ್ ಕಂಪಿಸಿತು ಜೇಬಿಗೆ ಕೈ ಹಾಕಿ
ಕಿವಿಯ ಬದಿಗೆ ಹಿಡಿದುಕ್ಕೊಳ್ಳುವ ಹೊತ್ತಿಗೆ
ಮೊಬೈಲ್ ನೋಡುವ ಹುಡುಗಿ
ಕಾಣದಂತೆ ಮಾಯವಾದಳು
ಸಣ್ಣಯ ಧ್ವನಿ ದೊಡ್ಡದಾಗಿ ಇದು
ಮೈಸೂರು ರೈಲ್ವೆ ನಿಲ್ದಾಣ
ನಿಮ್ಮನ್ನು ಸ್ವಾಗತ್ತಿಸುತ್ತದೆ ಎಂದು
ಸ್ವಾಗತಿಸುತ್ತಿತ್ತು
*
ಚಪ್ಪಲಿಯ ಗೋಳಾಟ
ತುಳಿದ ಕಸವೆಷ್ಟೋ
ಅಳಿಸಿದ ಮನಸೆಷ್ಟೋ
ಕಾರಣವಿಲ್ಲದೆ ಎಲ್ಲರ
ಮೇಲು ರೇಗಿದೆಷ್ಟೋ
ಎಲ್ಲಕ್ಕೂ ಕಾರಣ ಕೊಡುವ
ನೀನು ನಮ್ಮನ್ನ ಮೂಲೆ
ಗುಂಪು ಮಾಡಿದೆ
ಪ್ರತಿ ದಿನವೂ ನಮ್ಮ ನರಳಾಟ
ಯಾರಿಗೂ ಹೇಳಿದರು
ಕೇಳುವ ಆತ್ಮೀಯತೆ ಯಾರಲ್ಲಿದೆ
ಅಲ್ಲೊಂದು ಜೋಡಿ ನಮ್ಮ ಆಗೆ
ಗುಂಪು ಸೇರಿದೆ ಈಗ ಮನಸ್ಸು
ಹಗುರಿವೆನಿಸಿತು
ಮೊದಲು ನಾನು ಮಾತನಾಡಿಸಲ
ಅದರ ಮಾತಿಗೆ ನಾನು ಕಾಯಲ
ಹೊಚ್ಚಿಲ ದಾಟಿ ಹೊಳಗಡೆ
ಹೋಗದ ನಾವು ಇತ್ತೀಚೆಗೆ
ಮನೆಯಲ್ಲ ತಿರುಗುತ್ತಿದ್ದೇವೆ
ಅದಕ್ಕೂ ನಮ್ಮಲ್ಲಿ ಸಂತೋಷವಿದೆ
ಕೊನೆಗೆ ಮಲಗುವ ವೇಳೆ
ಕಾಲಿಗೆಟಕುವ ಮಂಚದ ಕೆಳಗೆ ಮಲಗಿದ್ದೇವೆ
ಅದಕ್ಕೂ ಸಮಾದಾನವಿದೆ
ಹೀಗಿಗಾ ಎಲ್ಲೆಂದರೆ ಅಲ್ಲಿ ನಾವು ನುಸುಳುತ್ತಿದ್ದೇವೆ
ಅದು ಎಲ್ಲರಿಗೂ ಸಮ್ಮತವಿದೆ
ನಮಗೆ ಅಹಃ ಬಡಿದಿದೆ
ಅದ್ಕಕೆಂದೆ ಅವನು
ದಿಡಿರನೆ ಎದ್ದವನೆ ಪರ ಪರ
ಎಳೆದುಕೊಂಡು ಎಲ್ಲಿಗೆ ಹೋದ
ಆ ಸ್ಥಳ ತಿಳಿಯಲಿಲ್ಲ
ಅಲ್ಲಿಯೂ ಹಳೆಯ ಕಾಲದ ಮೂಲೆ ಗುಂಪು
ನಮ್ಮ ಆಗೆ ಸಾಕಷ್ಟು ಗುಂಪು
ಕಿವಿ ಗೂಯ್ ಗುಟ್ಟುವ ಶಬ್ದ
ಆಗೆಯೇ ನಿದ್ದೆ ಆವರಿಸಿತು
ಎದ್ದಾಗ ಯಾವಾಗಲೂ ಜೊತೆಯಿರುವ
ಗೆಳತಿ ಕಾಣಲೇ ಇಲ್ಲ ಗಾಬರಿಯಾಯಿತು
ಅರಿಚಿದೆ ಕಿರುಚಿದೆ ಅತ್ತೆ ಗೋಳಾಟವಿಟ್ಟೆ
ಯಾರಿಗೂ ಕೇಳಿಸಿತೋ ಇಲ್ಲವೂ
ಮತ್ತೊಮ್ಮೆ ನಿದ್ದೆ ಹತ್ತಿ ಏಳುವ ವೇಳೆಗೆ
ನನ್ನ ಪಕ್ಕದಲ್ಲಿಯೇ ಇದ್ದಳು ಕೇಳಿದೆ
ಎಲ್ಲಿಗೆ ಹೋಗಿದ್ದೆ ಅವಳು ಏನೂ
ಮಾತನಾಡದೆ ಸುಮ್ಮನೆ ಅಳುತ್ತಿದ್ದಳು
ಮತ್ತೊಂದು ಅಳು ಎಲ್ಲಿಂದಲೂ
ಕೇಳಿಸುತ್ತಿತ್ತು
-ಮಂಜುನಾಥ್ ಸಿ ಬಿ
Superb
Super brother..