ಬಸ್ಸಿನಲ್ಲಿಯ ಕಳ್ಳಿ: ಶೈಲಜ ಮಂಚೇನಹಳ್ಳಿ

ಒಂದು ದಿನ ಕೆಲಸದ ನಿಮಿತ್ತ ಚಿಕ್ಕಬಳ್ಳಾಪುರಕ್ಕೆ ಹೋಗಿದ್ದ ನಾನು ಹಿಂದಿರುಗಲು ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಬರುವ ಒಂದು ಖಾಸಗಿ ಬಸ್ಸಿನಲ್ಲಿ ಎರಡು ಸೀಟ್ ಇರುವ ಕಡೆ ಕಿಟಕಿಯ ಪಕ್ಕ ಕುಳಿತಿದ್ದೆ. ಸ್ವಲ್ಪ ಹೊತ್ತಾದ ನಂತರ ಇನ್ನೊಬ್ಬ ಹೆಂಗಸು ನನ್ನ ಪಕ್ಕದ ಸೀಟಿನಲ್ಲಿ ಕುಳಿತರು. ಕಿಟಕಿಯ ಪಕ್ಕದಲ್ಲಿ ಕುಳಿತಿದ್ದರಿಂದ ಎಂದಿನಂತೆ ನನ್ನ ಗಮನ ಹೊರಗಿನ ದೃಶ್ಯಗಳನ್ನು ಕಿಟಕಿಯಿಂದ ಇಣುಕಿ ನೋಡುವಂತೆ ಮಾಡಿತ್ತಾದ್ದರಿಂದ ಪಕ್ಕದಲ್ಲಿದ್ದವರ ಕಡೆ ಅಷ್ಟಾಗಿ ಗಮನ ಕೊಟ್ಟಿರಲಿಲ್ಲ. ಆಕೆ ಕುಳಿತು ಬಹುಶಃ ಒಂದೈದು ನಿಮಿಷವಾಗಿರಬಹುದು ಒಂದು ಮಗುವನ್ನು ಎತ್ತುಕೊಂಡಿದ್ದ … Read more

ಖಾಲಿಯೇ ಭರ್ತಿ!: ಡಾ. ಹೆಚ್ ಎನ್ ಮಂಜುರಾಜ್

ಪ್ರಾಚೀನ ಚೀನಾದ ಮೂರು ಮುಖ್ಯ ಜೀವನಧರ್ಮಗಳಲ್ಲಿ ಮೂಲತಃ ಎರಡು ಅಲ್ಲಿಯವೇ. ಒಂದು ತಾವೋ, ಇನ್ನೊಂದು ಕನ್ಫ್ಯೂಷಿಯಸ್. ಮತ್ತೊಂದು ಬೌದ್ಧವು ಭಾರತದ ಬಿಕ್ಕುಗಳ ಮೂಲಕ ಚೀನಾವನ್ನು ಪ್ರವೇಶಿಸಿದ್ದು. ಕ್ರಿ. ಪೂ. ಆರನೆಯ ಶತಮಾನದಲ್ಲೇ ತಾವೋ ಜನಿಸಿತು. ಇದರ ನಿರ್ಮಾತೃ ಆಚಾರ್ಯ ಲಾವೋತ್ಸೆ. ಇವನು ಚೌ ಚಕ್ರವರ್ತಿಯ ಆಸ್ಥಾನದಲ್ಲಿ ನೌಕರನಾಗಿದ್ದವನು ತರುವಾಯ ವಿರಕ್ತ ಜೀವನ ನಡೆಸಿದನು. ನಮ್ಮ ಉಪನಿಷತ್ತುಗಳ ನಿರ್ಗುಣ ಬ್ರಹ್ಮತತ್ತ್ವ ಮತ್ತು ಬೌದ್ಧರ ನಿರ್ವಾಣ ತತ್ತ್ವಗಳಂತೆ ಇವನ ಮಾತುಗಳಿವೆ. ಪಥವಲ್ಲದ ಪಥವೆಂದೂ ಬಾಗಿಲಿಲ್ಲದ ಹೆಬ್ಬಾಗಿಲೆಂದೂ ಇವನ ಸಿದ್ಧಾಂತವನ್ನು ವರ್ಣಿಸಲಾಗಿದೆ. … Read more

ಓದುವ ಸುಖ ಹಾಗೂ ಅರಿವು: ಗೋಳೂರ ನಾರಾಯಣಸ್ವಾಮಿ

ಓದುವ ಸುಖ ಹಾಗೂ ಅದು ನಮ್ಮಲ್ಲಿ ಮೂಡಿಸುವ ಅರಿವಿದೆಯಲ್ಲ ಅದರ ಆನಂದವೇ ಬೇರೆ. ನಾವು ಏನನ್ನೋ ಓದುವಾಗ ಇನ್ಯಾವುದೋ ಹೊಸದೊಂದು ಕಥೆ, ಚಿಂತನೆ ಹುಟ್ಟುಕೊಳ್ಳುವುದು ಅಥವಾ ಈಗಾಗಲೇ ನಡೆದು ಹೋಗಿರುವ ಘಟನೆಗಳ ನೆನಪು ಕಾಡುವುದು ಮನಸ್ಸಿಗೆ ಒಂಥರ ಮುದ ಅನ್ನಿ. ಕವಿ ಪ್ರೇಮಚಂದನ ಮಾತುಗಳಿವು: “ಒಳ್ಳೆಯವರ ಮಧ್ಯದಲ್ಲಿ ಯಾಕೆ ಅಷ್ಟೊಂದು ದ್ವೇಷ? ಹಾಗೆಯೇ ಕೆಟ್ಟವರ ನಡುವೆ ಯಾಕೆ ಅಷ್ಟೊಂದು ಪ್ರೀತಿ. ಇದೊಂದು ವಿಸ್ಮಯ. ಒಬ್ಬ ವಿದ್ವಾಂಸ ಇನ್ನೊಬ್ಬ ವಿದ್ವಾಂಸ ಎದುರಾದಾಗ, ಒಬ್ಬ ಸಾದು ಇನ್ನೊಬ್ಬ ಸಾದು ಎದುರಾದಾಗ, … Read more

ಸೀನು ಪುರಾಣ: ಡಾ. ವೃಂದಾ ಸಂಗಮ್

ಅರೆ ವ್ಹಾ, ಕ್ಯಾ ಸೀನ್ ಹೈ ಅಂತ ನಿಮಗ ಯಾರಾದರೂ ಹೇಳಿದರೂ ಅಂದರೆ, ಅದು ಭಾಳ ಭಾಳ ಚಂದದ ಸಿನಿಮಾದ ಒಂದು ಚಂದದ ಸೀನ್ ಅಂತನೋ, ಯಾವುದೋ ಒಂದು ಪ್ರಕೃತಿ ರಮ್ಯ, ರಮಣೀಯ ದೃಶ್ಯನೋ ಅಂತ ತಿಳಿದರೆ ನೀವು ನೂರಕ್ಕೆ ನೂರು ತಪ್ಪು. ಮತ್ತ, ಅಂದರೆ, ಅಂದರೇನು, ಅನಲಿಕ್ಕೇ ಬೇಕು. ಯಾಕಂದರೆ, ಆ ಸೀನು ಹಂಗದ. ಇದೇನರೀ, ಯಾವ ಸೀನು, ಅಂತ ಕೇಳಿದರೆ, ನಾನು ಹೇಳೋದಿಷ್ಟೇ, ನಾನು ಅಚ್ಚ ಕನ್ನಡದ, ನಮ್ಮ ಸೀನೂ ಮಾಮಾನ ಸೀನಿನ ಬಗ್ಗೆ … Read more

ಆಸಕ್ತಿಯು ಹವ್ಯಾಸವಾಗಿ ಬದಲಾದ ಕಥೆ…: ಅಶೋಕ ಬಾವಿಕಟ್ಟಿ

ವ್ಯಾಪಾರ, ಮನೆ ಮಕ್ಕಳು …ಇಷ್ಟೇ ಎನ್ನುವಂತಿದ್ದ ಕಾಲವದು. ಬೆಂಗಾಡಿನಂತಿದ್ದ ನಮ್ಮೂರ‌‌ ಪರಿಸರವೂ ಸಹಜವಾಗಿ ಹಸಿರು, ಜಲಪಾತ, ಬೆಟ್ಟಗುಡ್ಡ, ದಟ್ಟಕಾಡು, ನೀರಿನ ಹರಿವು ಇವುಗಳೆಡೆ ಒಂದು ಆಕರ್ಷಣೆ ಹುಟ್ಟಿಸುತ್ತಿದ್ದವು. ಶಾಲಾ ಕಾಲೇಜು ಸಮಯದಲ್ಲಿ ಪ್ರವಾಸಕ್ಕೆಂದು ಹೋದಾಗ ಇಳಿದ ಜೋಗದ ಗುಂಡಿಯೂ ಏರಿದ ಮುಳ್ಳಯ್ಯನಗಿರಿ ಬೆಟ್ಟವೇ ನಮ್ಮ ಪಾಲಿನ ಕೌತುಕಗಳು ಮತ್ತು ದಾರಿಯಲ್ಲಿ ಬರುವ ದಟ್ಟಕಾಡು, ಭೋರ್ಗರೆವ ಜಲಪಾತ, ಮಳೆಗಳೇ ಚೇತೊಹಾರಿ ಚಿತ್ರಗಳು. ವಿಪರೀತ ಆಸ್ಥೆಯಿಂದ ಗಿಡ ನೆಟ್ಟು , ನೀರುಣಿಸಿ, ಟಿಸಿಲೊಡೆದ ಚಿಗುರು ನೋಡಿ ” ನಾ ನೆಟ್ಟ … Read more

ಸೋನೆ ಮುಗಿಲಿನ ಕವಿ ಡಾ.ನಲ್ಲೂರು ಪ್ರಸಾದ್ ಅವರ ಕಾವ್ಯ ಜಿಜ್ಞಾಸೆ: ಸಂತೋಷ್ ಟಿ

“ಕವಿತೆ ನನ್ನೊಳಗೆ ಕೂತು ಪದ ಹಾಡುವುದಿಲ್ಲಜೇಡನಾಗಿ ಅದು ಬಲೆ ನೇಯುವುದೂ ಇಲ್ಲಬದಲಾಗಿ ಕಾಡುತ್ತದೆ ಸುತ್ತೆಲ್ಲಾ ನೋಡುತ್ತದೆಬತ್ತಲಾದ ಬಯಲಲ್ಲಿ ಸೋಮನ ಕುಣಿತ ಮಾಡುತ್ತದೆ”(ಕಾಡುತ್ತವೆ ನೆನಪುಗಳು ಕವಿತೆ, ನವಿಲು ಜಾಗರ) ಎನ್ನುವ ಕಾವ್ಯ ಪ್ರೀತಿಯ ಆಶಯ ಹೊಂದಿರುವ ಕವಿ ಕೆ.ಆರ್. ಪ್ರಸಾದ್ ತಮ್ಮ ಸ್ವ-ಅನುಭವದಿಂದ ಗಟ್ಟಿಗೊಳ್ಳಿತ್ತಾ ಮೊದಲ ಕವಿತೆಯಲ್ಲಿಯೆ ತನ್ನ ತನವನ್ನು ಕಾವ್ಯದ ಬಗೆಗಿನ ಉತ್ಕಟ ಆಕಾಂಕ್ಷೆಯನ್ನು ತೆರೆದಿಡುತ್ತಾರೆ. ಇಲ್ಲಿ ಕಾವ್ಯವು ಸಾರ್ವಜನಿಕ ಇತ್ಯಾತ್ಮಕ ದೃಷ್ಟಿಗೆ ನಿಲುಕುವ ಬತ್ತಲಾದ ಬಯಲಲ್ಲಿ ಇರುವಂತದ್ದು ಮತ್ತು ಸೋಮನ ಕುಣಿತ ಮಾಡುವಂತದ್ದು ಎಂದರೆ ನೇರವಾಗಿ … Read more

ಗುರುಗಳ ಪಾಠ: ಬಿ.ಟಿ.ನಾಯಕ್

ಅದಪ್ಪ ಮೇಸ್ಟ್ರು ಎಂದರೆ ಮಕ್ಕಳಿಗೆ ಬಲು ಪ್ರೀತಿ. ಅವರು ಎಂದೂ ಯಾವ ಮಕ್ಕಳಿಗೂ ಶಿಕ್ಷಿಸಿರಲಿಲ್ಲ. ಅದರ ಬದಲು ಅವರು ಮಕ್ಕಳಿಗೆ ತಮ್ಮ ತುಂಬು ಪ್ರೀತಿಯನ್ನು ಕೊಡುತ್ತಿದ್ದರು. ತಿಂಗಳಿಗೊಮ್ಮೆ ಯಾವುದಾದರೂ ಒಂದು ಸಿಹಿ ತಿಂಡಿಯನ್ನು ತಮ್ಮ ಮನೆಯಲ್ಲಿ ತಯಾರಿಸಿ ತಂದು ಶಾಲೆಯಲ್ಲಿ ಮಕ್ಕಳಿಗೆ ಹಂಚುತ್ತಿದ್ದರು. ಅಲ್ಲದೇ, ತಮ್ಮ ಬೋಧನಾ ಅವಧಿಯಲ್ಲಿ ಯಾವುದೋ ವಿಶೇಷವಾದ ಘಟನೆ ಅಥವಾ ಮನ ಮುಟ್ಟುವ ಒಂದು ಕಥೆಯನ್ನು ಐದರಿಂದ ಹತ್ತು ನಿಮಿಷಗಳಲ್ಲಿ ಹೇಳಿ ಮುಗಿಸುತ್ತಿದ್ದರು. ಹಾಗಾಗಿ, ಅವರ ಸ್ವಭಾವ, ಮಕ್ಕಳ ಬಗ್ಗೆ ಚಿಂತನೆ ಮತ್ತು … Read more

ಕಲಿಕೆಯೋ ನರಳಿಕೆಯೋ !? ಜಿಜ್ಞಾಸೆ: ಡಾ. ಹೆಚ್ ಎನ್ ಮಂಜುರಾಜ್

ಕಲಿಕೆ ನಿರಂತರ ಎಂಬ ಮಾತನ್ನು ಎಲ್ಲರೂ ಬಲ್ಲೆವು. ಆದರೆ ಯಾವುದು ಕಲಿಕೆ? ಯಾವುದು ಅಲ್ಲ? ಎಂಬುದನ್ನು ತಿಳಿಯುವುದು ಕಷ್ಟವೇ. ಇದು ಒಬ್ಬರಿಂದ ಒಬ್ಬರಿಗೆ ಬೇರೆಯೇ ಆಗುವಂಥದು. ನಂಬಿಕೆ ಮತ್ತು ಮೂಢನಂಬಿಕೆಗಳ ವಿಚಾರದಂತೆ. ‘ನನ್ನದು ಮಾತ್ರ ವೈಜ್ಞಾನಿಕ ಮನೋಭಾವ, ಉಳಿದವರದು ಕೇವಲ ನಂಬಿಕೆ’ ಎಂಬ ಅಹಂಭಾವ ಬಹುತೇಕರದು. ಕೆಲವರು ಇನ್ನೂ ಮುಂಬರಿದು ‘ಅವರದು ಮೂಢನಂಬಿಕೆ’ ಎಂದು ಜರಿಯುವರು. ವಿಚಾರವಾದಿಗಳ ವರಸೆ ಇದು. ಇನ್ನೊಬ್ಬರನ್ನು ಮತ್ತು ಇನ್ನೊಂದನ್ನು ಹೀನಾಯವೆಂದು ಪರಿಗಣಿಸುವುದೇ ಮಾನವತೆಗೆ ಮಾಡುವ ದ್ರೋಹ. ತಮ್ಮಂತೆಯೇ ಇತರರೂ ಇರಬೇಕೆಂಬ ಹಕ್ಕೊತ್ತಾಯವೇ … Read more

ನಾಲ್ಮೊಗದ ಬ್ರಹ್ಮನಂತೆ…: ಡಾ.ವೃಂದಾ ಸಂಗಮ್

“ಲೇ, ನಾ ಸುಮ್ಮನಿದ್ದೇನೆಂದರ, ಏನರ ತಿಳೀಬ್ಯಾಡ, ಇಷ್ಟ ದಿನ ನನ್ನ ಒಂದು ಮುಖಾ ನೋಡಿದ್ದಿ, ಇನ್ನ ಮುಂದ ನನ್ನ ಇನ್ನೊಂದು ಮುಖಾ ನೋಡ ಬೇಕಾಗತದ.” ಅಂತ ಯಾರೋ ಯಾರಿಗೋ ಬೈಯಲಿಕ್ಕೆ ಹತ್ತಿದ್ದು ಕೇಳಿಸಿತು. ಬಹುಷಃ ಅದು ಜಂಗಮ ದೂರವಾಣಿಯಲ್ಲಿ ಕಂಡು ಬಂದ ಒಂದು ಕಡೆಯ ಸಂಭಾಷಣೆ ಇರಬೇಕು, ಇನ್ನೊಂದು ಕಡೆಯವರ ಮಾತು ನನಗೆ ಕೇಳಲಿಲ್ಲ. ಆದರೂ, ಯಾರಿಗೋ ತಾವು ಅಂದುಕೊಂಡಂಗ ಕೆಲಸ ಆಗಿಲ್ಲ, ಅದಕ್ಕ, ಅವರು ಇನ್ನೊಬ್ಬರನ್ನ ಬೈಯಲಿಕ್ಕೆ ಹತ್ತಿದ್ದು ಖರೇ. ನಾನು ಈ ಬೈದವರು ಯಾರೂ … Read more

ಮೌಲ್ಯಾಧಾರಿತ ಶಿಕ್ಷಣದ ಕೊರತೆ: ವಿಜಯ್ ಕುಮಾರ್ ಕೆ.ಎಂ.

“ಶಿಕ್ಷಣ”ವೆಂಬುದು ಮನುಷ್ಯನ ಜ್ಞಾನಕ್ಕೆ ಹಚ್ಚುವ ಜ್ಯೋತಿ. ಅಂತಹ ಜ್ಯೋತಿಯಿಂದ ಮೌಢ್ಯದ ತಾಮಸವನ್ನು ಅಳಿಸಿ ಮೌಲ್ಯಯುತ ಮನುಜನಾಗಲು ಸಾಕ್ಷಿಯಾಗಿರುವ ಇಂದಿನ ಶಿಕ್ಷಣದ ವ್ಯವಸ್ಥೆ ಹತ್ತಾರು ಆಯಾಮಗಳಲ್ಲಿ ತನ್ನ ಸತ್ವ ಕಳೆದುಕೊಂಡು ಕೇವಲ ಅಂಕಗಳಿಗೆ ಸೀಮಿತವಾಗಿ ವ್ಯಾಪಾರೀಕರಣದೆಡೆಗೆ ಸಾಗುತ್ತಿರುವಾಗ ಇಂದಿನ ಮಕ್ಕಳ ಮುಂದಿನ ಭವಿಷ್ಯ ನಿಜಕ್ಕೂ ಚಿಂತನೆಗೆ ಎಡೆ ಮಾಡಿಕೊಡದೆ ಇರದು. ಐದು ದಶಕಗಳ ಹಿಂದೆ ತಾಂತ್ರಿಕತೆ ಹೆಚ್ಚಾಗಿರದಿದ್ದರು ಶಾಲಾ ಶಿಕ್ಷಣದಲ್ಲಿ ಮೌಲ್ಯಾಧಾರಿತ ಶಿಕ್ಷಣಕ್ಕೇನು ಕೊರತೆ ಇರಲಿಲ್ಲ. ಕಾರಣ ಅಂದಿನ ಶಿಕ್ಷಣದಲ್ಲಿ ಕೇವಲ ಪಠ್ಯಧಾರಿತ ಶಿಕ್ಷಣವಲ್ಲದೆ ಮಗುವಿನ ಭವಿಷ್ಯಕ್ಕೆ ಬೇಕಾದ … Read more

ಕಪ್ಪೆರಾಯನ ಟ್ರೈನಿಂಗ್….: ರೂಪ ಮಂಜುನಾಥ

ಮನುಷ್ಯ ಭಾಳ ಸ್ವಾರ್ಥಿ ಕಣ್ರೀ. ಏನಾದ್ರೂ ಒಳ್ಳೆಯದಾಗ್ಲಿ, ಕರ್ಮ, ವಿಧಿ, ಹಣೆಬರಹ, ಪ್ರಾರಬ್ಧಗಳನ್ನೆಲ್ಲಾ ಮರ್ತೇಬಿಡ್ತಾನೆ. ತನ್ನ ಸಫಲತೆಯ ಕಾರಣಕ್ಕೆ ತನ್ನ ಸಾಧನೆಯ ಹಾದಿಯ ಪಟ್ಟಿಯನ್ನೇ ಕೊಡ್ತಾನೆ. ಅದೇ ಏನಾದ್ರೂ ವಿಷ್ಯ ಉಲ್ಟಾ ಆಯ್ತಾ, ಆ ಸೋಲಿಗೆಲ್ಲಾ ಕರ್ಮ, ವಿಧಿ…..ಮುಂತಾದವುಗಳ ಮೇಲೆ ಆರೋಪ ಹೊರಿಸಿ ತಾನು ಬಲು ಸಾಚಾ ಅಂತ ತನ್ನ ಹುಳುಕನ್ನ ತೇಪೆ ಹಾಕಿ ಮುಚ್ಚಿಕೊಳ್ತಾನೆ. ನಾನೂ ಮನುಷ್ಯಳೇ ಆಗಿರುವುದರಿಂದ ಇದಕ್ಕೆ ನಾನೂ ಹೊರತಲ್ಲ ಬಿಡಿ.ಇದೇ ರೀತಿ ನಾವು ನುಣುಚಿಕೊಳ್ಳೋದೂಂದ್ರೆ,”ಅಯ್ಯೋ ಯಾಕೋ ಸಮಯ ಕೂಡಿ ಬರ್ಲೇ ಇಲ್ಲ”,ಅಂತ … Read more

ಇದು ಬೇಬಿ ಮೀಲ್ಸ್ ಕಾಲವಯ್ಯ: ಸರ್ವ ಮಂಗಳ ಜಯರಾಮ್

ಮೊನ್ನೆ ನಮಗೆ ಪರಿಚಯದವರೊಬ್ಬರ ಮದುವೆಗೆ ಹೋಗಿದ್ದೆವು. ಮದುವೆ ಊಟಕ್ಕೆ ರಶ್ಶೋ ರಶ್ಶು.. ಹೋಗಲಿ ಮೊದಲು ವೇದಿಕೆ ಹತ್ತಿ ಗಂಡು ಹೆಣ್ಣನ್ನು ಮಾತನಾಡಿಸಿ ಪ್ರೆಸೆಂಟೇಷನ್ ಕವರ್ ಕೊಟ್ಟು ಫೋಟೋಗೆ ಫೋಸ್ ನೀಡಿ ನಂತರ ಊಟಕ್ಕೆ ಹೋಗೋಣವೆಂದು ಹೋದರೆ ಅಲ್ಲಿಯೂ ವಿಪರೀತ ರಶ್ಶು.. ಮತ್ತೇನು ಮಾಡುವುದು ಸರತಿ ಸಾಲಿನಲ್ಲಿ ಒಂದು ಗಂಟೆ ನಿಂತು ಮುಂದೆ ಹೋಗಿದ್ದಾಯಿತು. ಮದುವೆಯಲ್ಲಿ ಗಂಡು ಹೆಣ್ಣಿನ ಸಂಭ್ರಮವೇ ಸಂಭ್ರಮ. ಅವರು ತಮ್ಮದೇ ಆದ ಪ್ರೇಮಲೋಕದಲ್ಲಿ ಅದಾಗಲೇ ವಿಹರಿಸುತ್ತಾ ಇರುತ್ತಾರೆ. ಸುಮ್ಮನೆ ನೆಪ ಮಾತ್ರಕ್ಕೆ ಅಲ್ಲಿ ಬಂದವರ … Read more

ಕನ್ನಡಕ್ಕಾಗಿ ಒಂದನ್ನು ಒತ್ತಿ: ಪಿ. ಎಸ್. ಅಮರದೀಪ್

“ನೀವು ಕರೆ ಮಾಡಿದ ಚಂದಾದಾರರು ಬೇರೊಂದು ಕರೆಯಲ್ಲಿ  ಕಾರ್ಯನಿರತರಾಗಿದ್ದಾರೆ”. ಧ್ವನಿ ಕೇಳಿದಾಗೊಮ್ಮೆ ನಿಮಗೆ ಏನನ್ನಿಸುತ್ತೆ ಹೇಳಿ?!!!!  ಆ ಕಡೆಯವರು ಬಿಜಿ ಇದಾರೆ ಅಂತೆಲ್ಲಾ ನೀವು ಹೇಳಬಹುದು….. ಆದರೆ ನನಗೆ ಮಾತ್ರ  “ಅವ್ರು ಕರ್ನಾಟಕದಲ್ಲೇ ಇದ್ದಾರಪ್ಪ”. ಅಂತ.. ಹೌದಲ್ಲ?!! ಮಾತಿಗೆ ಹೇಳಿದೆ….  ಪ್ರತಿ ಬಾರಿ ಏನಾದರೊಂದು ಬರಹ ಶುರು ಮಾಡುವ ಮುನ್ನ ಏನು ಬರೆಯಬೇಕು… ಯಾವುದರ ಬಗ್ಗೆ ಬರೀಬೇಕು. ಯಾಕೆ ಬರೀಬೇಕು ಅಂತೆಲ್ಲಾ ಅನ್ಸುತ್ತೆ… ಬರೆವಾಗ ನಿಜಕ್ಕೂ ಅಷ್ಟುದ್ದ ಏನಾದರೂ ಬರೆದೇನು ಎಂಬ ಖಾತರಿ ಇರುವುದಿಲ್ಲ….  ನನಗೆ ಸ್ಪಷ್ಟವಾಗಿ … Read more

ಮಧ್ಯಮವರ್ಗದ ಪಾಠವನ್ನು ಮತ್ತೆ ಪರಿಚಯಿಸಿಕೊಟ್ಟ ಆ ಸಂಜೆ. . .: ಡಾ. ಅಮೂಲ್ಯ ಭಾರದ್ವಾಜ್‌

ಒಮ್ಮೆ ಕಾಲೇಜಿನಿಂದ, ಮೀಟಿಂಗ್ ಮುಗಿಸಿ ಹೊರಡುವಷ್ಟರಲ್ಲಿ ತಡವಾಗಿತ್ತು. ಪರೀಕ್ಷೆಯ ಸಮಯವಾದ್ದರಿಂದ ಪ್ರಿನ್ಸಿಪಾಲರು ಎಲ್ಲಾ ಶಿಕ್ಷಕರನ್ನು ಕರೆಸಿ ತಮ್ಮ ತಮ್ಮ ಪ್ರಶ್ನೆ-ಪತ್ರಿಕೆಗಳನ್ನು ತಯಾರಿಸಿ ಕೊಡಲು ನಿರ್ದೇಶಿಸಿದ್ದರು. ಅಂತೆಯೇ ನಾನು ನಿರ್ವಹಿಸುತ್ತಿದ್ದ, ‘ಸಮಾಜಶಾಸ್ತ’್ರ ಪ್ರಶ್ನೆ-ಪತ್ರಿಕೆಯ ಮೂರು ಜೊತೆಯನ್ನು ಸಲ್ಲಿಸಿದ್ದೆ. ಶಕ್ಕುವೂ ತನ್ನ ಇಂಗ್ಲಿಷ್ ಭಾಷೆಯ ಕುರಿತು ನೀಡಿದ್ದಳು. ಎಲ್ಲಾ ಮುಗಿಸಿ ಹೊರಡುವ ಅವಸರದಲ್ಲಿ, ನನಗೆ ಅರಿವಿಲ್ಲದೆ ಪ್ರಿನ್ಸಿಪಾಲರ ಕೊಠಡಿಯಲ್ಲಿಯೇ ನನ್ನ ಪಠ್ಯಕ್ರಮ-ನಕಾಶೆಯನ್ನು ಬಿಟ್ಟು ಬಂದಿದ್ದೆ. ಕಾಲೇಜಿನಾಚೆ ಬಂದಾಗ, ನನ್ನ ಸಹೋದ್ಯೋಗಿ ಮತ್ತು ಹಿರಿಯ ಕನ್ನಡ ಉಪನ್ಯಾಸಕರಾದ ಪ್ರೊ. ಚಂದ್ರಶೇಖರ ಹೆರೂರರು … Read more

“ದೇಶ ದೇಶದಾರತಿ ಬಂದೋ”: ಗೋಳೂರ ನಾರಾಯಣಸ್ವಾಮಿ

ಅಕ್ಕ ಮಾರಮ್ಮ ಗುಡಿಗಾ ಚಿಕ್ಕವೆರೆಡು ಗಿಳಿಬಂದೋ….ಕಪ್ಪು ತುಂಬಿವೋ ಗುಡಿಗೆಲ್ಲಾಕಪ್ಪು ತುಂಬಿವೋ ಗುಡಿಗೆಲ್ಲಾ ಮಾರಮ್ಮ-ಬಣ್ಣ ಬಳದಾವೋ ಗುಡಿಗೆಲ್ಲದೇಶ ದೇಶದಾರತಿ ಬಂದೋ|| ಹಟ್ಟಿ ಮುಂದ ಹರಡಿಕೊಂಡಿದ್ದ ಸೂಜಿ ಮಲ್ಲುಗ ಚಪ್ಪರದ ಕೆಳಗೆ ಕುಳಿತು ಇದುವರೆಗೂ ನಾನು ನಮ್ಮ ಸೀಮೆಯೊಳಗೆ ಎಲ್ಲೂ ಕ್ಯೋಳದೇ ಇರುವ ಈ ಅಪರೂಪದ ಸಾಲುಗಳನ್ನು ಹಾಡುತ್ತಿದ್ದ ನಮ್ಮಜ್ಜಿ ಪುಟ್ಟಸಿದ್ದಮ್ಮನ ಈ ಹಾಡು, ಈ ಹಾಡಿನ ಮೇಲು ಸ್ವರವ ಕೇಳಿ ನನ್ನೆದೆಯೊಳಗಿಂದೆದ್ದ ಸಂಕಟಕ್ಕೆ ಕೊನೆಯಿಲ್ಲದಾಯಿತು. ಆಗ ತಾನೇ ಗದ್ದ ಕೆಲಸದಿಂದ ಬಂದ ನನ್ನ ನೋಡಿದ ಅಜ್ಜಿ ತಾನು ಹಾಡುತ್ತಿದ್ದ … Read more

ಶಿಸ್ತು ಮತ್ತು ನಾವು: ಪರಮೇಶ್ವರಿ ಭಟ್

ಜಗತ್ತಿನಲ್ಲಿ ಅತ್ಯಂತ ಹೆಚ್ಚು ಸುಭಾಷಿತಗಳು, ನೀತಿ ವಾಕ್ಯಗಳು ಇರುವುದು ಎಲ್ಲಿ ಅಂತ ಕೇಳಿದರೆ ಭಾರತದಲ್ಲಿ ಅಂತ ಸುಲಭವಾಗಿ ಹೇಳಿಬಿಡಬಹುದು. ಬೇರೆ ದೇಶಗಳಲ್ಲಿಯೂ ಇರಬಹುದು, ಆದರೆ ನಮ್ಮಲ್ಲಿ ಇರುವಂತಹ ನೀತಿಕಥೆಗಳು ವಿಶ್ವದಾದ್ಯಂತ ಹೆಸರು ಪಡೆದಿವೆ. ಕೆಲವು ವರ್ಷಗಳ ಹಿಂದೆ ನೋಬೆಲ್ ಪುರಸ್ಕಾರ ಪಡೆದ ಯುಗೋಸ್ಲಾವೀಯಾದ ಸಾಹಿತಿಯೊಬ್ಬ “ನಾನು ಭಾರತದ ಜಾತಕದ ಕಥೆಗಳನ್ನು, ಪಂಚತಂತ್ರದ ಕಥೆಗಳನ್ನು ಓದಿ ಬೆಳೆದವನು” ಅಂತ ಹೇಳಿದಾಗ ನನಗೆ ನಿಜಕ್ಕೂ ಆಶ್ಚರ್ಯ ಮತ್ತು ಹೆಮ್ಮೆಯೂ ಆಯಿತು. ಹಿಂದಿನ ಕಾಲದಲ್ಲಿ ಅನುವಾದಿತ ಪುಸ್ತಕಗಳ ಮುಖಾಂತರವೇ ಇತರ ಭಾಷೆಗಳ … Read more

ತ್ವಾಡದ ಶಿಕಾರಿ: ಡಾ. ದೋ. ನಾ. ಲೋಕೇಶ್

ಬಿಲಕ್ಕೆ ನೀರು ಬಿಟ್ಟಿದ್ದೇ ತಡ ಬುಳ, ಬುಳ, ಬುಳಾಂತ ನೀರಲ್ಲಿ ಗುಳ್ಳೆ ಬಂದ ತಕ್ಷಣವೇ ಪಂಚೇಂದ್ರಿಯಗಳೆಲ್ಲ ಎಚ್ಚರವಾಗಿ ಕೈಲಿದ್ದ ಗುದ್ದಲಿಯನ್ನು ಒನಕೆ ಓಬವ್ವನ ಭಂಗಿಯಲ್ಲಿ ಎತ್ತಿ ನಿಂತು ಕಾಯುತ್ತಾ, “ಈ ಬಿಲದಲ್ಲಿ ಪಕ್ಕಾ ತ್ವಾಡ ಐತೆ ಕಣೋ ಅಂದ” ನಟಿ ಅಣ್ಣ. ಉಪ್ಪು ಖಾರ ಹಚ್ಚಿ ಬೆಂಕಿಲಿ ಸುಟ್ಟ ತ್ವಾಡದ ಬಾಡಿನ ರುಚಿ ನೆನೆಯುತ್ತಾ ಬಾಯಲ್ಲಿ ಉದ್ಭವಿಸಿದ ಜೊಲ್ಲನ್ನು ನುಂಗಿ ತದೇಕ ಚಿತ್ತದಿಂದ ಬಿಲದ ಕಡೆ ನೋಡುತ್ತಾ ತೊಡ ಹೊರಬರುವುದನ್ನೇ ಕಾಯುತ್ತಾ ನಿಂತೆ. ಹಿಂದೆಲ್ಲ ಬಯಲುಸೀಮೆಯ ರೈತ … Read more

ಅಮೇರಿಕಾದ ‘ಶ್ವೇತ ಪುಷ್ಪ’ ಎಮಿಲಿ ಡಿಕಿನ್ಸನ್: ಗೀತಾ ಕೆ ಆಚಾರ್ಯ

ಆಂಗ್ಲ ಕವಯಿತ್ರಿ ಎಮಿಲಿ ಬಗ್ಗೆ ಒಂದಿಷ್ಟು ಪರಿಚಯ. 19ನೇ ಶತಮಾನದ ಪ್ರಮುಖ ಕವಯಿತ್ರಿಗಳಲ್ಲಿ ಒಬ್ಬರು ಎಮಿಲಿ ಡಿಕಿನ್ಸನ್. ಅಮೇರಿಕಾದ ಕವಯಿತ್ರಿಯಾದ ಈಕೆಯ ಪೂರ್ಣ ಹೆಸರು ಎಮಿಲಿ ಎಲಿಜಬೆತ್ ಡಿಕಿನ್ಸನ್. 10 ಡಿಸೆಂಬರ್ 1830ರಲ್ಲಿ ಮ್ಯಾಸಚೂಸೆಟ್ಸ್‌ನ ಅಮ್ಹೆರ್ಸ್ಟ್‌ನಲ್ಲಿ ಜನನ. ತಂದೆ ಎಡ್ವರ್ಡ್ ಡಿಕಿನ್ಸನ್, ವಕೀಲರಾಗಿದ್ದವರು. ತಾಯಿ ಎಮಿಲಿ ನಾರ್ಕ್ರಾಸ್ ಡಿಕಿನ್ಸನ್. ಒಬ್ಬ ಸಹೋದರ ಮತ್ತು ಒಬ್ಬಾಕೆ ಸಹೋದರಿ ಎಮಿಲಿಗಿದ್ದರು. ಕವಯಿತ್ರಿ ಎಮಿಲಿ ‘Nun of Amherst’ಎಂದು ಕರೆಯಲ್ಪಡುತ್ತಿದ್ದರು. ಅವರು ನಿತ್ಯ ಶ್ವೇತವಸ್ತ್ರವನ್ನೇ ಧರಿಸಲು ಇಷ್ಟಪಡುತ್ತಿದ್ದರಂತೆ. ಬರಹದ ಹೊರತಾಗಿ ಎಮಿಲಿಯವರಿಗೆ … Read more

ಸೀತಾಳೆ ಹೂ: ಬಿಲಾಲ್ ಶೇಖ್

ಮಳೆ ನಾಡಿನ ಕಾನನದ ಹೂವು ಸೀತಾಳೆ. ಇದು ಒಂದು ಆರ್ಕಿಡ್ ಪ್ರಭೇಧವಾಗಿದ್ದು, ಇದರ ವೈಜ್ಞಾನಿಕ ಹೆಸರು Rhynchostylis retusa. ಧರೆಗೆ ಮಳೆ ಸುರಿಯಲು ಪ್ರಾರಂಭವಾಗಿದ್ದ ಮಳೆಗೆ ಸ್ವಾಗತಿಸಲು ಈ ಸೀತಾಳೆ ಹೂವುಗಳು ಎಲ್ಲೆಡೆ ಅರಳಿ ಕಾಡಿನ ಸೊಬಗನ್ನು ಹೆಚ್ಚಿಸುತ್ತದೆ. ನೋಡಲು ಬಿಳಿ – ನೇರಳ ಅಥವಾ ಬಿಳಿ – ಕಂದು ಬಣ್ಣಗಳ ಮಿಶ್ರಿತವಾಗಿದ್ದು, ನೋಡುಗರ ಕಣ್ಮನ ಸೆಳೆಯುತ್ತದೆ, ಹೂವಿನ ಗುಂಚಲುಗಳು ಯಾರೋ ಇದನ್ನು ಕೈಯಿಂದ ಮಾಲೆಗಳನ್ನಾಗಿ ಮಾಡಿ ತೂಗಿ ಬಿಟ್ಟಂತೆ ಕಾಣುತ್ತದೆ. ಇದಕ್ಕೆ ಸಾಮಾನ್ಯವಾಗಿ ಸ್ಥಳಿಯರು ಸೀತಾದಂಡೆ … Read more

ಮಾಮನ್ನನ್‌ ಎನ್ನುವ ಕಹಿ ಮದ್ದು: ಎಂ ನಾಗರಾಜ ಶೆಟ್ಟಿ

`ಸಿನಿಮಾ ಬಿಡುಗಡೆಯಾದ ಎರಡನೇ ವಾರದಲ್ಲಿ ಚಿತ್ರ ನೋಡುವುದು ಮತ್ತು ಅದರ ಬಗ್ಗೆ ಬರೆಯುವುದು ಕಷ್ಟದ ಕೆಲಸ. ಆಗಲೇ ಹಲವರು ಅದರ ಬಗ್ಗೆ ಬರೆದು-ಹೇಳಿ ಬಿಟ್ಟಿರುತ್ತಾರೆ. ಅವರ ಅಭಿಪ್ರಾಯಗಳು ನಮ್ಮ ತಲೆಯಲ್ಲೂ ನೆಲೆಗೊಂಡು ಬಿಟ್ಟಿರುತ್ತವೆ. ಅದರಿಂದ ಹೊರಬರಲು ಸಾಕಷ್ಟು ತಿಣುಕಬೇಕು. ಕೆಲವು ವಿಮರ್ಶೆಗಳು ಖಂಡಿಸಲೆಂದೇ ಹುಟ್ಟಿಕೊಳ್ಳುತ್ತವೆ! ಕೆಲವರಿಗೆ ಸಿನಿಮಾದ ಅಂತ್ಯವನ್ನು ಹೇಳುವ ಆತುರ. ಇದರಿಂದ ಚಿತ್ರದ ರಸಾಸ್ವಾದನೆಗೆ ಖಂಡಿತ ಧಕ್ಕೆಯಾಗುತ್ತದೆ. ʼಮಾಮನ್ನನ್‌ʼ ನೋಡಿದಾಗ ನನಗೂ ಅದೇ ಆಯಿತು. ಪುಣ್ಯವಶಾತ್‌ ನೋಡುವಂತಿಲ್ಲವೆಂದು ಯಾರೂ ಹೇಳಿರಲಿಲ್ಲ. ʼಪೆರಿಯೇರುಂ ಪೆರುಮಾಳ್‌ʼ ʼಕರ್ಣನ್‌ʼ ಚಿತ್ರದ … Read more