ಲೇಖನ

ದಂತ ಪುರಾಣ: ಸಂಗೀತ ರವಿರಾಜ್

ಹಾಲು ಕುಡಿಯಲೊಲ್ಲದ ಮಗಳಿಗೆ ಪ್ರೇರೇಪಿಸಲು ಚಂದ್ರನ ತೋರಿಸಿ ಗಣಪತಿಯ ದಂತ ಮುರಿದದ್ದು ಹೇಗೆ ಗೊತ್ತಾ ಎಂಬ ಕತೆಯನ್ನು ಪ್ರಾರಂಭಿಸಿದೆ. ಆನೆ ತಲೆ ಜೋಡಿಸಿದ್ದನ್ನು ನೋಡಿ ನಕ್ಕ ಚಂದ್ರನಿಗೆ ಗಣಪತಿ ಸಿಟ್ಟಿನಿಂದ ತನ್ನ ಮುಖದ ದಂತವನ್ನು ತುಂಡರಿಸಿ ಎಸೆದ ಎಂದು ನನಗೆ ತಿಳಿದ ಗಣಪತಿಯ ‘ ದಂತ’ ಕತೆಯನ್ನು ಹೇಳಿ ಲೋಟ ಖಾಲಿ ಮಾಡಿಸಿದೆ. ಆದರೆ ಈಗ ನಾನು ಮನುಷ್ಯರ ದಂತದ ಕುರಿತ ಸ್ವಾರಸ್ಯಕರ ಕತೆಗಳನ್ನು ಹೇಳಹೊರಟಿರುವೆ. ದೇಹದ ಯಾವ ಅಂಗಕ್ಕು ಚಿಕ್ಕ ಗಾಯವಾದರು ಆ ದಿನ ಏನೋ […]

ಲೇಖನ

ಕಷ್ಟವೇ ದೇವರು………?: ದೀಪಾ ಜಿ.ಎಸ್

ನಮ್ಮ ಜೀವನದಲ್ಲಿ ಕಷ್ಟ ಬಂದಾಗ ಮಾತ್ರ ನಾವುಗಳು ಯಾಕೆ ದೇವರನ್ನ ನೆನಪು ಮಾಡ್ಕೊಂತೀವಿ . ಅದೇ ನಾವು ಸಂತೋಷದಿಂದ ಇದ್ದಾಗ ದೇವರನ್ನ ನೆನಪು ಮಾಡ್ಕೊಳ್ಳೊದೇ ಇಲ್ಲ ಅಲ್ವಾ. ಜೀವನದಲ್ಲಿ ಕಷ್ಟಗಳು ಬಂದಾಗ ನಾವ್ ಯಾಕೆ ತಲೆ ಬಾಗಬೇಕು. ನಾವ್ ಯಾಕೆ ಕಷ್ಟಗಳಿಗೆ ಹೆದರ್ಬೇಕು……? ನಾವ್ ಯಾಕೆ ಕಷ್ಟಗಳಿಗೆ ಅಂಜಬೇಕು…..? ಕಷ್ಟಗಳು ಬಂದಾಗ ನಾವ್ ಯಾಕೆ ಹೆದರಿ ಕೂತ್ಕೋಬೇಕು….? ನಾವ್ ಯಾಕೆ ಅಳ್ಬೇಕು….? ಹೀಗೆ ಹಲವಾರು ಪ್ರಶ್ನೆಗಳು ಹುಟ್ಟಿಕೊಂಡಾಗ ಉತ್ತರ ನಮ್ಮಲ್ಲೇ ಇದೆ ಅಲ್ವ. ನಮ್ಮಲ್ಲೂ ಕೂಡ ಆ […]

ಲೇಖನ

ಬೆರಗೊಂದು ಕೊರಗಾಗಿ ಕಾಡಿದಾಗ…. : ಸುಂದರಿ ಡಿ.

ತನ್ನ ಪಾಡಿಗೆ ತಾನು ಹಾಡಿಕೊಂಡು, ಹನಿಗಳ ಚುಮುಕಿಸಿ, ಬಳುಕುತ ಬಿಸಿಲ ನೇರ ಕೋಲುಗಳ ಸ್ಪರ್ಶದಿಂದಲೇ ಮತ್ತಷ್ಟು ಹೊಳಪಿನಿಂದ ತನ್ನಾಳದ ಮರಳನೂ ಚಿನ್ನದಂತೆ ಹೊಳೆಯಿಸುತ, ಜುಳು-ಜುಳು ನಾದದೊಂದಿಗೇ ಹರಿಯುತಿದ್ದ ನೀರ ಬದಿಯಲಿ ತನ್ನ ಸೊಬಗತೋರುತ, ನೀರ ಸೊಬಗನೂ ಹೆಚ್ಚಿಸಲೆಂಬಂತೆ ಅದರ ಸತ್ವವನೇ ಹೀರಿ ನಿಜವಾದ ಹಸಿರೆಂದರೆ ಇದೇ ಎಂಬಂತೆ ಬೆಳೆದು ನಿಂತಿದ್ದ ಗಿಡಗೆಂಟೆಗಳು, ಅವುಗಳಲ್ಲಿ ಬೆಟ್ಟದ ಹೂವಿನಂತೆ ಇತರರನು ತಮ್ಮತ್ತ ಸೆಳೆವ ಯಾವ ಗೋಜಿಗೂ ಹೋಗದೆ ಬೇಲಿಯ ಹೂವೆಂದೇ ಕರೆಸಿಕೊಂಡರೂ ಸಹಜ ಸೌಂದರ್ಯದ ಕಾರಣವೊಂದರಿಂದಲೇ ತಮ್ಮತ್ತ ತಿರುಗಿ ನೋಡುವಂತೆ […]

ಲೇಖನ

ಮಾಸಗಳ ವೈಶಿಷ್ಟ್ಯ: ಗೀತಾ ಜಿ ಹೆಗಡೆ ಕಲ್ಮನೆ.

ಹೃದಯದ ಹೆಬ್ಬಾಗಿಲಿಗೆ ತೋರಣ ಕಟ್ಟಿ ಹೂವಿನ ಘಮಲಿನ ಅರಿವಳಿಕೆಯಲ್ಲಿ ಮೈನವಿರೇಳಿಸುವ ಶೃಂಗಾರದ ಕನಸು ಹೆಣೆಯುತ್ತ ಅರಿವಿಲ್ಲದೆ, ಅರಿವಾಗದಂತೆ ಹೃದಯ ಸಿಂಹಾಸನದ ಮೆಟ್ಟಿಲು ಒಂದೊಂದಾಗಿ ನಿಧಾನವಾಗಿ ಹತ್ತಿ ತಳವೂರಿದ ಹರೆಯದ ವಸಂತ ಕಾಲದ ನೆನಪು ಎಂದಾದರೂ ಮರೆಯಲು ಸಾಧ್ಯವೆ.  ಅದು ಪ್ರತಿಯೊಬ್ಬರ ಬದುಕಿನ ಸುಂದರ ಕ್ಷಣವದು.  ಹೆಣ್ಣಾಗಲಿ ಗಂಡಾಗಲಿ ಹರೆಯದ ಹೊಸ್ತಿಲಲ್ಲಿ ಮನಸ್ಸು ಬೆಳೆದಂತೆಲ್ಲ ಕನಸೂ ಬೆಳೆಯುವುದು ಸ್ವಾಭಾವಿಕ.  ಅದಕ್ಕೆ ದಿನಕ್ಕೊಂದು ರೆಕ್ಕೆ ಪುಕ್ಕ.  ಬಣ್ಣ ಬಣ್ಣದ ಓಕುಳಿಯ ಸಿಂಪಡಿಕೆ.  ಹರೆಯದ ಕನಸುಗಳು ನೂರೆಂಟು.  ಅದು ಮಾತಿನಲ್ಲಿ ಅಥವಾ […]

ಲೇಖನ

ಹೆಣ್ಣೇ ನಿನ್ನ ಅಂತರಾಳದಲ್ಲಿ ನಿತ್ಯವೂ ಸತ್ಯದ ಹುಡುಕಾಟ…..!?: ದೀಪಾ ಜಿ.ಎಸ್.‌

 ಈಗಿನ ಸ್ವತಂತ್ರದ ಬದುಕಿನಲ್ಲಿ ಒಂದು ಹೆಣ್ಣನ್ನ ನಾಲ್ಕು ಗೋಡೆಗಳ ಮಧ್ಯೆ ಬಂಧಿಸಿ ಅವಳಿಗೆ ಕಾನೂನಿನ ಚೌಕಟ್ಟನ್ನ ನಿರ್ಮಿಸಿ ಅವಳ ಜೀವನವನ್ನ ಕತ್ತಲಿನ ಕೋಣೆಗೆ ತಳ್ಳಿ. ಅವಳಿಗೆ ಜೀವನ ಅಂದರೆ ಏನು ಅನ್ನೋದು ಅವಳಿಗೆ ತಿಳಿಯದ ಹಾಗೆ ಅವಳ ಭಾವನೆಗಳನ್ನ ಹೊಸಕಿ ಹಾಕಿ ಸಂಸಾರದ ಸಾಗರದಲ್ಲಿ ಜವಾಬ್ದಾರಿ ಅನ್ನುವ ಗುಂಡಿಗೆ ತಳ್ಳಿ, ಅಲ್ಲೂ ಅವಳನ್ನ ಎಲ್ಲಾ ತರದಲ್ಲು ಮೂರ್ಖಳನ್ನಾಗಿ ಮಾಡಿ ಅವಳ ಕನಸುಗಳನ್ನ ನುಚ್ಚು ನೂರು ಮಾಡಿ ವ್ಯಂಗ್ಯ ಮಾಡುವ ಈ ಸಮಾಜದಲ್ಲಿ ದೈರ್ಯದಿಂದ ಬದುಕಿ ಬಾಳಿ ತೋರಿಸುವಂತ […]

ಲೇಖನ

ಪ್ರಯಾಗದಲ್ಲೊಂದು ಸಂಜೆ: ಕೃಷ್ಣವೇಣಿ ಕಿದೂರ್.

ಪ್ರವಾಸದ ನಿಮಿತ್ತ ಅಲಹಾಬಾದಿಗೆ ಬಂದಿದ್ದೆವು. ಇಲ್ಲಿನ ಸುಪ್ರಸಿದ್ಧ ಪ್ರಯಾಗಕ್ಕೆ ಭೇಟಿ ಕೊಟ್ಟಾಗ ನದಿಯಲ್ಲಿ ತ್ರಿವೇಣಿ ಸಂಗಮ , ಪ್ರಯಾಗ ನೋಡಲು ಉತ್ಸುಕರಾಗಿದ್ದೆವು. ಗಂಗಾ, ಯಮುನಾ, ಸರಸ್ವತಿ ನದಿಗಳ ಸಂಗಮದ ಪವಿತ್ರ ಸ್ಥಳ ಅದು. ಸಂಜೆಯ ಆರೂವರೆಯ ಸುಮಾರಿಗೆ ತಲುಪಿದೆವು. ಅಲ್ಲಿದ್ದದ್ದು ಒಂದೋ, ಎರಡೋ ದೋಣಿಗಳು. ಅವರಲ್ಲಿ ವಿಚಾರಿಸಿದಾಗ ಒಬ್ಬರು ಬರಲು ಒಪ್ಪಿದರು. ನದೀ ದಡ ನಿರ್ಜನ. ನಾವಿದ್ದ ದೋಣಿ ನೀರಿನಲ್ಲಿ ಸಾಗುವಾಗ ಬಿಳಿಯ ಸೈಬೀರಿಯನ್ ಹಕ್ಕಿಗಳು ಜೊತೆ ಜೊತೆಗೆ ಬರತೊಡಗಿದವು. ಅವಕ್ಕೆ ಬಿಸ್ಕತ್ತು, ಹಣ್ಣು ಕೊಡುವ ಅಭ್ಯಾಸವಾಗಿತ್ತು […]

ಲೇಖನ

“ನಿನ್ನೆ ನಾಳೆಯ ನಡುವೆ” ಪಾಂಡುರಂಗ ಯಲಿಗಾರ: ವೈ. ಬಿ. ಕಡಕೋಳ

2012-13 ನೆಯ ಅವಧಿ ನಾನು ಕನ್ನಡ ವಿಶ್ವವಿದ್ಯಾಲಯದಲ್ಲಿ “ಮುನವಳ್ಳಿ ಒಂದು ಸಾಂಸ್ಕೃತಿಕ ಅಧ್ಯಯನ” ಎಂ. ಫಿಲ್ ಪದವಿಗಾಗಿ ಡಾ. ವ್ಹಿ. ಎಸ್. ಮಾಳಿಯವರ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡುತ್ತಿದ್ದೆ. ಮುನವಳ್ಳಿಯ ಅನೇಕ ಹಿರಿಯರ ಸಂಪರ್ಕದಲ್ಲಿ ಮಾಹಿತಿ ಸಂಗ್ರಹಿಸುತ್ತಿದ್ದೆ. ಮುನವಳ್ಳಿಯ ನಾಟಕವೊಂದು ಮೈಸೂರು ದಸರಾ ಪ್ರದರ್ಶನದಲ್ಲಿ ಪ್ರದರ್ಶನಗೊಂಡ ಬಗ್ಗೆ ಮಾಹಿತಿ ಬೇಕಾಗಿತ್ತು. ಗೆಳೆಯ ಜಯದೇವ ಅಷ್ಠಗಿಮಠ ಈ ವಿಚಾರ ಪಾಂಡುರಂಗ ಯಲಿಗಾರ ಅವರನ್ನು ಕೇಳಬೇಕು. ಅವರು ಬೆಳಗಾವಿಯಲ್ಲಿ ಇರುವರು. ರವಿವಾರ ಮುನವಳ್ಳಿಗೆ ಬರುತ್ತಾರೆ ನೀನು ಅವರನ್ನು ಭೇಟಿಯಾಗಬೇಕು. ನಾನು ಹೇಳಿ […]

ಲೇಖನ

ಕಳೆದು ಹೋಗುವ ಸುಖ (ಭಾಗ 2): ಡಾ. ಹೆಚ್ಚೆನ್ ಮಂಜುರಾಜ್

ಇಲ್ಲಿಯವರೆಗೆ ಏನಾದರೊಂದು ಕೆಲಸಗಳಲ್ಲಿ ಅದರಲ್ಲೂ ರಚನಾತ್ಮಕ ಕಾರ‍್ಯಗಳಲ್ಲಿ ತೊಡಗಿಸಿಕೊಳ್ಳುವ ಮನೋಧರ್ಮ ಇಂದಿನ ಅಗತ್ಯವಾಗಿದೆ. ‘ಕೆಲಸದ ಬಗ್ಗೆ ಮಾತಾಡಿದರೆ ಕೆಲಸ ಮಾಡಿದಂತಾಗುವುದಿಲ್ಲ’ ಎಂದು ಬಹು ಹಿಂದೆಯೇ ವಕ್ರೋಕ್ತಿಯೊಂದನ್ನು ಹೊಸೆದಿದ್ದೆ. ಇಂದು ನಾವು ಕೆಲಸ ಮಾಡುವುದು ಕಡಮೆ; ಅದನ್ನು ಕುರಿತು ಮಾತಾಡುವುದು ಹೆಚ್ಚು. ಬದುಕುವುದು ಕಡಮೆ; ಬದುಕಲು ಮಾಡಿಕೊಳ್ಳುವ ಸಿದ್ಧತೆಯೇ ಹೆಚ್ಚು. ‘ಕಂಪ್ಯೂಟರ್ ಬಳಸಿ ಕೆಲಸ ಮಾಡಬೇಕು; ಕಂಪ್ಯೂಟರ್ ಬಳಸುವುದೇ ಕೆಲಸವಾಗಬಾರದು’ ಎಂದೂ ಇನ್ನೊಮ್ಮೆ ಬರೆದಿದ್ದೆ. ಅಂದರೆ ಮಂತ್ರಕ್ಕಿಂತ ಉಗುಳೇ ಹೆಚ್ಚು ಎಂಬಂತಾಗಿದೆ ನಮ್ಮಗಳ ಪರಿಸ್ಥಿತಿ! ಬಹುತೇಕ ಸಭೆ/ಮೀಟಿಂಗುಗಳ ನಿರ್ಧಾರವೇನೆಂದರೆ […]

ಲೇಖನ

ಕಳೆದು ಹೋಗುವ ಸುಖ (ಭಾಗ 1): ಡಾ. ಹೆಚ್ಚೆನ್ ಮಂಜುರಾಜ್

ಗುರುತಿಸಿಕೊಳ್ಳುವುದಕಿಂತ ಕಳೆದು ಹೋಗುವುದೇ ಈ ಅಖಂಡ ವಿಶ್ವದ ಮೂಲತತ್ತ್ವವಾಗಿದೆ ಅಥವಾ ಗುರುತಿಸಿಕೊಂಡ ಮೇಲೆ ಕಳೆದು ಹೋಗುವುದೇ ಸೃಷ್ಟಿಯ ನಿಯಮವಾಗಿದೆ. ಅದು ಆಕಾಶಕಾಯವೇ ಇರಲಿ, ಜೀವಸೃಷ್ಟಿಯೇ ಇರಲಿ, ಮಾನವ ನಿರ್ಮಿತ ತತ್ತ್ವಸಿದ್ಧಾಂತಗಳೇ ಇರಲಿ, ಪದವಿ-ಪ್ರತಿಷ್ಠೆ-ಹುದ್ದೆ-ಅಧಿಕಾರ-ಅಂತಸ್ತು-ಸಾಧನೆಗಳೇ ಇರಲಿ ಎಲ್ಲವೂ ಕಾಲ ಕ್ರಮೇಣ ಕಳೆದು ಹೋಗುತ್ತವೆ ಮತ್ತು ಹಾಗೆ ಕಳೆದು ಹೋಗಬೇಕು. ಹಳತು ನಶಿಸುತಾ, ಹೊಸತು ಹುಟ್ಟುತಿರಬೇಕು. ‘ನಿದ್ದೆಗೊಮ್ಮೆ ನಿತ್ಯ ಮರಣ; ಎದ್ದ ಸಲ ನವೀನ ಜನನ’ ಎಂದಿಲ್ಲವೇ ಕವಿನುಡಿ. ಅಂದರೆ ಅಸ್ತಿತ್ವವು ವ್ಯಕ್ತಿತ್ವವನ್ನು ಹೊಂದಿದ ಮೇಲೆ ಸಾವು ಶತಸಿದ್ಧ ; […]

ಲೇಖನ

ಈ ಪಟ್ಟಣಗಳಿಗೆ ಏನಾಗಿದೆ?: ಗೌರಿ ಚಂದ್ರಕೇಸರಿ.

ಬಾಲ್ಯದಲ್ಲಿ ನಾವು ಕಂಡುಂಡ ಪಟ್ಟಣಗಳು ಈಗಿನಂತಿರಲಿಲ್ಲ. ಥೇಟ್ ಆದಿ ಕವಿ ಪಂಪ ಬನವಾಸಿಯನ್ನು ಬಣ್ಣಸಿದ ರೀತಿಯಲ್ಲಿ ಕಾಣಿಸುತ್ತಿದ್ದವು. ಹಸಿರುಡುಗೆ ತೊಟ್ಟ ಪ್ರಕೃತಿ, ಕೀ ಕೀ ಎನ್ನುವ ಹಕ್ಕಿಗಳ ಕಲರವದೊಂದಿಗೆ ತೆರೆದುಕೊಳ್ಳುತ್ತಿದ್ದ ಬೆಳಗು, ಮನೆ ಮನೆಯ ಮುಂದೆಯೂ ಬೃಂದಾವನ, ಅಲ್ಲಿ ಚುಕ್ಕೆ ಇಟ್ಟು ರಂಗೋಲಿ ಎಳೆಯುತ್ತಿರುವ ಹೆಂಗಳೆಯರು, ರೇಡಿಯೋದಿಂದ ಹೊರ ಹೊಮ್ಮುತ್ತಿದ್ದ “ಈ ಮಣ್ಣು ನಮ್ಮದು ಈ ಗಾಳಿ ನಮ್ಮದು, ಕಲಕಲನೆ ಹರಿಯುತಿಹ ನೀರು ನಮ್ಮದು” ಎಂಬಂತಹ ಹಾಡುಗಳು, ಬೀದಿ ನಲ್ಲಿಗಳಲ್ಲಿ ನೀರು ಹಿಡಿಯುತ್ತ ನಿಂತ ಗಂಡಸರು, ಹೆಂಗಸರು, […]

ಲೇಖನ

ಒತ್ತಡಮುಕ್ತ ಜೀವನ ಸಾಧ್ಯವೇ ?: ಗಾಯತ್ರಿ ನಾರಾಯಣ ಅಡಿಗ

ಇಂದಿನ ವಿಜ್ಞಾನ ತಂತ್ರಜ್ಞಾನ ಯುಗದಲ್ಲಿ ಒತ್ತಡಯುಕ್ತ ಜೀವನವನ್ನು ನಾವು ನಮಗೆ ಅರಿವಿಗೆ ಬಂದೋ ಬಾರದೆಯೋ ಅದನ್ನು ಹಿಂಬಾಲಿಸಿಕೊಂಡು ಹೋಗುತ್ತಿದ್ದೇವೆ. ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಿದ್ದೇವೆ. ಸ್ವಲ್ಪ ಹೊತ್ತು ಕುಳಿತು ಕಾಫಿ ಹೀರಲು ನಮ್ಮಲ್ಲಿ ಸಮಯವಿಲ್ಲ. ತಂದೆ – ತಾಯಿ, ಬಂಧು – ಬಳಗವನ್ನು ಹತ್ತಿರದಿಂದ ಮಾತನಾಡಲು ನಮ್ಮ ಉದ್ಯೋಗ ಬಿಡುತ್ತಿಲ್ಲ. ಮೊಬೈಲ್ ನಲ್ಲಿ ನಾವು ಗಂಟೆಗಟ್ಟಲೆ ವ್ಯವಹರಿಸುತ್ತೇವೆ. ಆದರೆ ನಮ್ಮ ಮಕ್ಕಳ ಜೊತೆ, ಅವರ ಆಸಕ್ತಿ – ಅಭಿರುಚಿಗಳೊಂದಿಗೆ ಬೆರೆಯುವ ಆಸ್ಥೆ ನಮಗಿಲ್ಲ. ಅವರ ಅನುಭವಗಳನ್ನು ನಮ್ಮೊಡನೆ […]

ಲೇಖನ

ಬರಹ – ನೂರು ನೂರು ತರಹ: ಡಾ. ಹೆಚ್ಚೆನ್ ಮಂಜುರಾಜ್

ಇತ್ತೀಚೆಗೆ ನನ್ನ ಪರಿಚಿತರೊಬ್ಬರು ‘ಬರೆಯುವುದು ಹೇಗೆ?’ ಎಂದು ಕೇಳಿಬಿಟ್ಟರು. ಇದುವರೆಗೂ ಇಂಥ ಪ್ರಶ್ನೆಯೊಂದನು ನಾನು ಕೇಳಿರಲೂ ಇಲ್ಲ; ಕೇಳಿಕೊಂಡಿರಲೂ ಇಲ್ಲ. ಅಚ್ಚರಿಯೆಂದರೆ ಏನೂ ಮಾತಾಡದೆ ಸುಮ್ಮನೆ ನಕ್ಕುಬಿಟ್ಟೆ. ಆಮೇಲನಿಸಿತು, ಗಂಭೀರನಾದೆ. ಇದು ಬರೆಹವೊಂದು ಉದಿಸುವ ಮುಹೂರ್ತ. ಅದನೇ ಬರೆದು ಬಿಡೋಣ ಎಂದು ಕುಳಿತು ಬರೆಯುತ್ತ ಹೋದೆ. ಈ ಬರೆಹ ಜನಿಸಿತು. ಅಂದರೆ ಬರೆಹದ ಪ್ರಾಥಮಿಕ ಲಕ್ಷಣವೇ ಕುಳಿತು ಬರೆಯುತ ಹೋಗುವುದು ಅಷ್ಟೇ. ಪರೀಕ್ಷೆಯಲ್ಲಿ ಮೂರು ಗಂಟೆಗಳ ಕಾಲ ಬರೆಯುತ್ತೇವೆ. ಹೇಗದು ಸಾಧ್ಯವಾಯಿತು? ಏಕಾಗ್ರತೆ, ಉದ್ದೇಶ, ಮನೋಭಾವ ಮತ್ತು […]

ಲೇಖನ

ದಯೆಯ ಯಾದೃಚ್ಛ ಕ್ರಿಯೆ (Random act of kindness): ದಿನೇಶ್ ಉಡಪಿ

ಶುಕ್ರವಾರ ಕಾಲೇಜಿನ ಕೆಲಸಕ್ಕೆ ರಜೆ ಹಾಕಿಕೊಂಡು, ಕೆಲವು ಅಗತ್ಯ ಕೆಲಸಕ್ಕಾಗಿ ಕೆ.ಆರ್.ನಗರಕ್ಕೆ ಹೋಗಬೇಕಿತ್ತು. ಬೆಳಗಿನಿಂದಲೇ ಮೋಡ ಕವಿದ ವಾತಾವರಣವಿತ್ತು, ಅತಿಯಾದ ತೇವಾಂಶದ ಕಾರಣ ವಿಪರೀತ ಶೆಕೆಯೂ ಇತ್ತು. ಮಧ್ಯಾಹ್ನದ ಹೊತ್ತಿಗೆ ಎಲ್ಲಾ ಕೆಲಸ ಮುಗಿಸಿಕೊಂಡು ಮೈಸೂರಿನತ್ತ ಹೊರಟೆ. ಬಿಳಿಕೆರೆ ಹತ್ತಿರ ಬರುವಷ್ಟರಲ್ಲಿ ಮಳೆ ಸುರಿಯತೊಡಗಿತು, ಕುಂಭದ್ರೋಣ ಮಳೆ ಅಂತಾರಲ್ಲ ಹಾಗೆ. ಕಾರಿನ ವೈಪರ್ ಪೂರ್ತಿ ವೇಗದಲ್ಲಿ ನೀರನ್ನು ತಳ್ಳುತ್ತಿದ್ದರೂ ರಸ್ತೆ ಕಾಣದಷ್ಟು ಮಳೆ. ಬಹುತೇಕ ಎಲ್ಲ ವಾಹನಗಳೂ ರಸ್ತೆ ಪಕ್ಕ ಹಾಕಿಕೊಂಡು ನಿಂತಿದ್ದರು. ನನ್ನ ಚಿರಪರಿಚಿತ ರಸ್ತೆ […]

ಲೇಖನ

ಕೋವಿಡ್ ಕಲಿಸಿದ ಪಾಠ: ಗೀತಾ ಜಿ ಹೆಗಡೆ ಕಲ್ಮನೆ.

ಮೊನ್ನೆ ಒಂದಿನ ಸಾಯಂಕಾಲ ಆಗುತ್ತಿದ್ದಂತೆ ಗಂಟಲು ಸ್ವಲ್ಪ ಉರಿ, ನೆಗಡಿಯಾಗುವಾಗ ಆಗುತ್ತಲ್ಲಾ ಹಾಗೆ ಒಂದು ರೀತಿಯ ಇರಿಟೇಷನ್. ಉಸಿರಾಟದಲ್ಲಿ ಸ್ವಲ್ಪ ಕಷ್ಟ ಅಂದರೆ ಬಾಯಿ ತೆರೆದು ಉಸಿರಾಡಬೇಕು ಅನಿಸುವಷ್ಟು. ಸಂಜೆ ದೀಪ ಹಚ್ಚಿ ಸ್ವಲ್ಪ ಭಗವತ್ಗೀತೆ ಪಾರಾಯಣ ಮಾಡುವ ರೂಢಿ. ಎಂದಿನಂತೆ ಸರಾಗವಾಗಿ ಓದಲು ಆಗುತ್ತಿಲ್ಲ. ಸ್ವರವೇ ಹೊರಗೆ ಬರ್ತಿಲ್ಲ. ಅಯ್ಯೋ ಶಿವನೇ….ಇದೆನಾಯಿತು ನನಗೆ? ಪಕ್ಕನೆ ಕೊರೋನಾ ಸಿಂಟೆಮ್ಸ ಹೀಗೀಗೆ ಇರುತ್ತದೆ ಎಂದು ಟೀವಿಯಲ್ಲಿ ಪೇಪರಲ್ಲಿ ವಾಲಗ ಊದುತ್ತಿದ್ದದ್ದು ಜ್ಞಾಪಕ ಬಂತು ನೋಡಿ…. ಸೋಫಾದಲ್ಲಿ ಕೂತವಳು ಸಣ್ಣಗೆ […]

ಲೇಖನ

ಸೂಲಂಗಿಯ ಕತೆ-ವ್ಯಥೆ: ಸುಂದರಿ. ಡಿ

ಅದೊಂದು ದಿನ ಜಮೀನಿನಲ್ಲಿ ಕಬ್ಬು ಕಟಾವು ಕೆಲಸ ನಡೆಯುತ್ತಿತ್ತು, ಹೋಗಿ ನೋಡುವಾಸೆ! ಏಕೆಂದರೆ ಕಬ್ಬು ಬಿತ್ತನೆಯ ಸಮಯದಲಿ ಖುಷಿಯಿಂದಲೇ ನಾನೊಂದಷ್ಟು ನಾಟಿ ಮಾಡಿದ್ದೆ. ಅದೇ ಪ್ರತಿ ದಿನದ ಕಾಯಕವಾದರೆ ಅದು ಈ ಮಟ್ಟದ ಖುಷಿ ಕೊಡಲಾರದು. ಆಗೊಮ್ಮೆ – ಈಗೊಮ್ಮೆ ಜಮೀನಿನ ಮುಖ ನೋಡಿ ಬರುವ ನಮ್ಮನ್ನು ಮರೆತು, ಉಳುವವರೇ ವಾರಸುದಾರರೆಂದು ಜಮೀನು ಎಲ್ಲಿ ತಪ್ಪು ತಿಳಿದೀತೆಂದು ಭಾವಿಸಿ ಅದರ ನಿಜವಾದ ವಾರಸುದಾರರು ನಾವೆಂದು ನೆನಪು ಮಾಡುವ ಸಲುವಾಗಿ ಹೋಗುವ ನಮ್ಮಂಥ ಮಧ್ಯಮವರ್ಗದ ಜನಗಳಿಗೆ ನಿತ್ಯದ ಕಾಯಕವಾಗಿ […]

ಲೇಖನ

‘ಪಾಠವೂ ಮುಖ್ಯ, ಪ್ರಾಣವೂ ಮುಖ್ಯ’: ಬೀರೇಶ್ ಎನ್ ಗುಂಡೂರ್

ಈ ವಯಸ್ಸಿಗೆನೇ ಮೊಬೈಲ್ ಅಬ್ಯಾಸ ಇರಲೇಬಾರದು. ಮಕ್ಳು ಕೆಟ್ಟೋಗ್ತವೆ. ಕಣ್ಣು ಹಾಳಾಗ್ತವೆ. ಅಂತಿದ್ದ ಪಾಲಕರೆಲ್ಲಾ ಈಗ ಅದೇ ಮಕ್ಕಳನ್ನು ಹಿಡಿದು ಮೊಬೈಲ್ ಕೊಟ್ಟು ಹೊಡ್ಡು ಬಡ್ಡು ಕೂರಿಸುತಿದ್ದಾರೆ. ಪರದೆಯ ಮೇಲೆ ಇಟ್ಟ ದೃಷ್ಟಿ ಸ್ವಲ್ಪ ಕದಲಿದರೆ ಸಾಕು, ನೀನು ಸರಿಯಾಗಿ ಕಲಿಯುತ್ತಿಲ್ಲ. ಫೀಸ್ ಕಟ್ಟಿದಿವಿ. ಕಲಿಲಿಲ್ಲ ಅಂದ್ರೆ ಅಷ್ಟೇ ಈ ವರ್ಷ, ಅಂತ ರಾಗ ಹಾಡುತಿದ್ದಾರೆ. ಮಕ್ಕಳಿಗೆ ಇದೊಂತರ ವಿಚಿತ್ರ ಅನಿಸುತಿದ್ದೆ. ಇಷ್ಟು ದಿವಸ ಮೊಬೈಲ್ ಕೇಳಿದರೆ ಕಣ್ಣು ಬಿಡುತಿದ್ದವರು…ಈಗ ಅದೇ ಮೊಬೈಲ್ ಕೊಟ್ಟು ದಿಟವಾಗಿ ನೋಡು, […]

ಲೇಖನ

ಗಿರಿಕನ್ಯೆಯ ಗುನುಗು: ಗೀತಾ ಪ್ರಸನ್ನ

ಅಣ್ಣಾವ್ರ ಗಿರಿಕನ್ಯೆ ಬರ್ತಿತ್ತು ಇವತ್ತು. ಎಷ್ಟ್ ಚೆಂದದ ಜೋಡಿ.. ಚೆನ್ನ ಚೆಲುವೆ. ಜಯಮಾಲಾ ಎಳೇ ಬಳ್ಳಿ, ಅಣ್ಣಾವ್ರ ಕರಿಷ್ಮಾ – ಇಬ್ಬರ ಜೋಡಿ ಆಹಾ.. ಆ ಎವರ್ ಗ್ರೀನ್ ಹಾಡುಗಳು. “ನಗು ನಗುತಾ ನೀ ಬರುವೆ.. ನಗುವಿನಲೆ ಮನ ಸೆಳೆವೆ.. “ ಆಹಾ ಎಂಥಾ ಮುದ. ದೋಣಿಯಲ್ಲಿ ಇಬ್ಬರ ರೋಮ್ಯಾನ್ಸ್!! ಈ ದೋಣಿ ಸೀನ್ ನೋಡಿ ಸೀದಾ ಕಾಲೇಜು ದಿನಕ್ಕೆ ಹೋಯ್ತು ನೆನಪು. ಅಣ್ಣಾವ್ರು ಹುಟ್ಟು ಹಾಕ್ತಾ ಇದ್ರೆ, ಚೆಲುವೆ ಎಳೇ ಬಳ್ಳಿ ಹಾಗೆ ಮರಕ್ಕೆ ಹಬ್ಬಿಕೊಳ್ಳೋ […]

ಲೇಖನ

ಕಾಂತಾಸಮ್ಮಿತ: ಸುಂದರಿ ಡಿ

ಅದೊಂದು ಸಂಜೆ ಸ್ನೇಹಿತೆಯ ಮನೆಗೆ ಹೋಗಲೇಬೇಕಾಯಿತು, ಕಾರಣ ಬಹಳ ಕಾಲ ಸಬೂಬು ಹೇಳಿ ಸಾಕಾಗಿ ಆ ದಿನ ಅವಳ ಮನೆಯ ಬಳಿಯೇ ಹೋಗುವಾಗ ಅವಳ ಕಣ್ಣಲ್ಲಿ ಬಂಧಿಯಾದ ಮೇಲೆ ತಪ್ಪಿಸಿಕೊಳ್ಳುವುದಾದರೂ ಹೇಗೆ? ಕುಳಿತು ಆತಿಥ್ಯ ಸ್ವೀಕರಿಸಿಯೂ ಆಯಿತು. ಯಾರದೋ ಮನೆಗೆ ಹೋಗೋಣವೆಂದು ಕರೆದಳು. ಹೋಗಲು ಮನಸಿಲ್ಲ, ಕಾರಣ ಆಗಲೇ ಸಂಜೆಯಾಗಿತ್ತು, ಜೊತೆಗೆ ಯಾರದೋ ಮನೆಗೆ ನಾನೇಕೆ ಹೋಗುವುದು? ಹಾಗಾಗಿ ಬೇಡವೆಂದು ನಿರಾಕರಿಸಿದೆ. ಆದರೆ ಆಕೆ ಟಪ್ಪರ್‍ವೇರ್ ಡಬ್ಬಿ ಖರೀದಿಸುತ್ತಿದ್ದಳು ಅದನ್ನು ನೋಡಿ ನಾನು ಅಸ್ತು ಎನ್ನಬೇಕಿತ್ತು, ಕಾರಣ […]

ಲೇಖನ

‘ನುಡಿಯೊಳಗಾಗಿ ನಡೆಯದಿದ್ದರೆ ಮೆಚ್ಚ …: ಡಾ. ಹೆಚ್ಚೆನ್ ಮಂಜುರಾಜ್

ಮೋಸ ವಂಚನೆಗಳಲ್ಲಿ ಹಲವು ವಿಧಗಳಿವೆ. ಅವುಗಳಲ್ಲಿ ನನ್ನನ್ನು ತುಂಬ ಕಾಡುವುದು ಆತ್ಮವಂಚನೆ ಎಂಬುದು. ಅಂದರೆ ನಮ್ಮನ್ನು ನಾವೇ ವಂಚಿಸಿಕೊಳ್ಳುವ ವೈಖರಿಯೇ ಕಂಗೆಡಿಸುವ ವಿಚಾರ. ಆತ್ಮವಂಚನೆಯನ್ನೇ ರೂಢಿಸಿಕೊಂಡವರು ಕ್ರಮೇಣ ಬಂಡತನವನ್ನು ಬೆಳೆಸಿಕೊಂಡು ಸಂವೇದನಾಶೂನ್ಯರಾಗುವರೋ? ಅಥವಾ ಸಂವೇದನಾಶೀಲತೆ ಕಡಮೆಯಾದ ಮೇಲೆ ಆತ್ಮವಂಚನೆಗೆ ಇಳಿಯುತ್ತಾರೋ? ಸದಾ ಗೊಂದಲ ನನಗೆ. ನಾವೆಲ್ಲ ಒಂದಲ್ಲ ಒಂದು ಸಲ, ಒಂದಲ್ಲ ಒಂದು ದಿನ ಇಂಥ ಆತ್ಮವಂಚನೆಗೈದವರೇ! ಮನುಷ್ಯರಾದ ಮೇಲೆ ಇದೆಲ್ಲ ಮಾಮೂಲು ಎಂದು ಕೈ ತೊಳೆದುಕೊಂಡು ಬಿಡದೇ ಸೀರಿಯಸ್ಸಾಗಿ ಯೋಚಿಸಿದಾಗ ನನಗೆ ಹೊಳೆದದ್ದು: ಇದೊಂದು ಮನೋಬೇನೆ […]

ಲೇಖನ

ಬದುಕೇ ಶೂನ್ಯವೆಂಬ ನಿಜದನಿಯ ಎಲ್ಲರೆದೆಗೆ ಆವಾಹಿಸಿದ ‘ಕೊರೋನಾ’: ಸುಂದರಿ. ಡಿ.

ಕಾರ್ಮೋಡ ಆವರಿಸಿದ ಇಳಿಸಂಜೆಯ ಮಬ್ಬಾದ ವಾತಾವರಣ ಕುಳಿತು ನೋಡುತಿರಲು ಆ ವಾತಾವರಣವೇ ಇಡೀ ಜಗತ್ತಿಗೆ ಕವಿಯಿತೇ? ಎಂಬ ಪ್ರಶ್ನೆ ಆ ಸವಿಯಾದ ಇಳಿಸಂಜೆಯನ್ನು ಸವಿಗಾಣದಂತೆ ಮನದ ಮೂಲೆಯಲಿ ಮನೆಮಾಡಿದ ಆತಂಕದ ಪರಮಾವಧಿಯ ಸ್ಥಿತಿ ಅಂದಿನದು. ಆದರೂ ಒಮ್ಮೆ ದವಾಖಾನೆಯ ಕಿಟಕಿಯ ಸರಳುಗಳ ಭದ್ರ ಸೆರೆಯಿಂದ ಬಿಡಿಸಿಕೊಂಡು ಬಾಂದಳದ ಬಾನಾಡಿಯಂತೆ ವಿಹರಿಸುತ ಇಳಿಸಂಜೆಯ ಸವಿಯುವಾಸೆ. ಕಿಟಕಿಗಳಿಂದ ಹೊರ ನೋಟ ಮೇಲ್ನೋಟಕ್ಕೆ ಸಂತಸ ಕೊಟ್ಟರೂ, ಮನದ ಮೂಲೆಯಲಿ ಬಲು ಭಾರವ ಬಹಳ ಕಾಲ ಹೊತ್ತ ಅನುಭವ. ಕಳೆದ ರಾತ್ರಿಯ ಕಳೆಯುವುದೇ […]