ಅಮ್ಮ ಅಂದ್ರೆ ಒಂದು ಜೀವಕ್ಕೆ ಜೀವ ತುಂಬೋ ತ್ಯಾಗಮಯಿನೇ ಅಮ್ಮ. ನಾನು ಈ ಭೂಮಿಗೆ ಕಾಲಿಟ್ಟ ಕ್ಷಣದಿಂದ ಹಿಡಿದು ಇಲ್ಲಿಯವರೆಗೂ ನನ್ನ ಜೀವನದಲ್ಲಿ ಒಂದೊಂದು ಕ್ಷಣ ಒಂದೊಂದು ಕಲಿಕೆಯನ್ನು ಕಳಿಸಿದವಳೇ ಅಮ್ಮ. ನನ್ನ ಮೊದಲನೆಯ ಗುರು, ಮೊದಲನೆಯ ಸ್ನೇಹಿತೆ, ಎಲ್ಲಾನು ಅವಳೇ. ಜೀವನದಲ್ಲಿ ಕಷ್ಟಕ್ಕೆ ಎಡವಿ ಬಿದ್ದಾಗ ಮೊದಲು ನೆನಪಾಗೋದೇ ಅಮ್ಮ. ಅಮ್ಮ ಅನ್ನೋ ಪದದಲ್ಲೇ ಅಮೃತಾನೆ ತುಂಬಿರುವಾಗ ನನ್ನ ಹತ್ತಿರಾನೂ ಸಾವು ಅನ್ನೋ ಪದಾನೇ ಸುಳಿಯೋಲ್ಲ.
ಅಮ್ಮ ಅನ್ನೋ ಒಂದು ಜೀವ ಇದ್ರೆ ಸಾಕು ಇಡೀ ಜಗತ್ತನ್ನೇ ಮರೆತುಬಿಡ್ತಿವಿ ಅಲ್ವಾ. ಅಷ್ಟೊಂದು ಶಕ್ತಿ ಇರೋದೇ ಅಮ್ಮ ಅನ್ನೋ ಪದದಲ್ಲಿ ಅವಳು ತನ್ನಲ್ಲಿ ಎಷ್ಟೇ ಕಷ್ಟಗಳಿದ್ರು, ಕಷ್ಟಗಳೇ ಇಲ್ಲದೆ ಇರೋ ತರ ನಗ್ತಾನೇ ಇರುತ್ತಾಳೆ ನನ್ನಮ್ಮ, ತಾನು ಕಷ್ಟಪಟ್ಟು ಬಿಸಿಲು ಮಳೆ ಅನ್ನದೆ ಕೂಲಿ ಕೆಲಸ ಮಾಡಿ ಪೈಸೆ ಪೈಸೆ ಕೂಡಿ ಇಡ್ತಾಳೆ. ಯಾಕೆ ಗೊತ್ತಾ ತನ್ನ ಮಕ್ಕಳನ್ನ ಓದಿಸಬೇಕು, ದೊಡ್ಡ ದೊಡ್ಡ ಅಧಿಕಾರಿಯನ್ನಾಗಿ ಮಾಡಬೇಕು. ಸಮಾಜದಲ್ಲಿ ತನ್ನ ಮಕ್ಕಳು ತಲೆ ಎತ್ತಿ ತಿರುಗಾಡಬೇಕು. ಒಳ್ಳೆ ಹೆಸರು ಗಳಿಸಬೇಕು ಅನ್ನೋದು ಪ್ರತಿ ಒಬ್ಬ ತಾಯಿಯ ಆಸೆಯಾಗಿರುತ್ತೆ.ಹಾಗೆ ನನ್ನ ತಾಯಿ ಆಸೆ ಕೂಡ, ತಾನು ಕಷ್ಟ ಪಟ್ಟಿದ್ದು ತನ್ನ ಮಕ್ಕಳು ಕಷ್ಟ ಪಡಬಾರದು ಅಂತ. ಹಾಗೇನೇ ನನ್ನ ಅಮ್ಮ ಕೂಡ.ತಾನು ಇಡೋ ಪ್ರತಿ ಹೆಜ್ಜೇನು ಕೂಡ ಕಷ್ಟದ್ದೆ ಆದ್ರೂ ಕೂಡ ನಮಗೋಸ್ಕರ ಆ ಕಷ್ಟನೆ ತನ್ನ ಸುಖ ಅಂತ ತನ್ನ ಹೆಜ್ಜೆ ಮುಂದೆ ಇಡ್ತಳೆ.ಇವಳಿಗೆ ನಿಜವಾಗ್ಲೂ ದೇವರು ಅಂತ್ತಾನೆ ಅನ್ಬೇಕು.
ತನ್ನ ಜೀವನವನ್ನ ನಾಲ್ಕು ಗೋಡೆಗಳ ಮದ್ಯೆ ಕಳಿಯೋ ಅವಳು ತನ್ನ ಗಂಡ, ಮಕ್ಕಳ ಖುಷಿಲಿ ತನ್ನ ಸಂತೋಷದ ಕ್ಷಣಗಳನ್ನೇ ಮರೆತಿರ್ತಾಳೆ . ಅಪ್ಪ ಯಾವುದೊ ಸಿಟ್ಟಲ್ಲಿ ಅಥವಾ ಬುದ್ದಿ ಮಾತು ಹೇಳೋಕೆ ಅಂತ ಹೊಡೆದಾಗ, ಮೂಲೇಲಿ ಕೂತು ಅಳುವಾಗ ಅಥವಾ ಮುಖ ಉದಿಸ್ಕೊಂಡು ಕೂತಾಗ ಅಮ್ಮ ಅಲ್ಲದೆ ಬೇರೆ ಯಾರು ಸಮಾಧಾನ ಮಾಡಲು ಬರಲ್ಲ. ಯಾಕೆ ಗೊತ್ತಾ ಹೆತ್ತಕರುಳ ನೋವು ಅವಳಿಗಲ್ಲದೆ ಬೇರೆ ಯಾರಿಗೆ ಬರಲು ಸಾಧ್ಯವಿಲ್ಲಾ . ನಮ್ಮ ಪ್ರತಿ ಗೆಲುವಲ್ಲೂ ಅಮ್ಮನೇ ಮೊದಲ ಗುರು, ಗುರಿ. ಶಾಲೆಲಿ ಗೆಳೆಯರ ಜೊತೆ ಜಗಳ ಮಾಡಿದಾಗ ಅಥವಾ ಬೇರೆ ಹುಡುಗರು ನಮ್ಮನ ಛೇಡಿಸಿದ್ದಾಗ ಅಮ್ಮಂಗೆ ಹೇಳಿ , ಅಮ್ಮನ್ನ ಶಾಲೆಗೆ ಕರ್ಕೊಂಡು ಬಂದಿದ್ದು ಇದೆ. ಒಮ್ಮೆ ಊರಿನ ಪಕ್ಕದ ಗದ್ದೆಲಿ ಶಾಲೆಯಿಂದ ಬರುವಾಗ ಮಾವಿನ ಕಾಯಿಕೀಳೋಕೆ ಹೋದಾಗ ಗದ್ದೆಯವನ ಕೈನಲ್ಲಿ ಸಿಕ್ಕು ಅವನಿಂದ ಅಮ್ಮನ ಹತ್ರ ಚಾಟಿ ಏಟು ತಿಂದಿದ್ದು, ರಾತ್ರಿ ಮಲಗುವಾಗ ಅಮ್ಮ ಅಳುತ್ತ ತಬ್ಬಿ ಹಣೆಗೆ ಮುತ್ತು ಕೊಟ್ಟಿದ್ದು ಎಲ್ಲ ನೆನಪಿದೆ. ಯಾಕೆ ಗೊತ್ತಾ ಯಾಕಾದ್ರೂ ಹೊಡೆದ್ನೋ ಅಂತ ಬಾಚಿ ತಬ್ಬಿ ಹಣೆಗೆ ಮುತ್ತು ಕೊಟ್ಟಿದ್ಲು ಅಮ್ಮ. ಅಂದಿನಿಂದ ಇಂದಿನವರೆಗೂ ಅಮ್ಮ ಒಂದು ಪೆಟ್ಟು ಕೊಡ್ಲಿಲ್ಲ. ಕಣ್ಣಲ್ಲೇ ಹೆದರಿಸ್ತಾರೆ. ಅವಳನ್ನ ಎಷ್ಟೇ ಹೊಗಳಿದರು ಅವಳಿಗೆ ಎಷ್ಟೇ ಬಹುಮಾನ ಕೊಟ್ರು ಸಾಲಲ್ಲ. ನಾವು ಮಾತಾಡೋ ಪ್ರತಿ ಮಾತು ಅವಳದ್ದೇ. ಅವಳನ್ನ ಎಷ್ಟು ಹೊಗಳಿದರು ಸಾಲದು.
ಏನ್ ಗೊತ್ತಾ ನನ್ ಯಾವಾಗ್ಲೂ ಅಂದುಕೊಳ್ಳುತ್ತೇನೆ ನಾನು ದೇವರನ್ನ ನೋಡಿದ್ದೇನೆ,ದೇವರ ಜೊತೆ ಮಾತಾಡಿದ್ದೇನೆ ಅಂತ!!. ಆ.. ಏನ್ ಈ ಹುಡುಗಿ ಹಿಂಗೆ ಹೇಳ್ತಾ ಇದ್ದಾಳೆ ಅಂತ ಅಂದುಕೊಳ್ಳಬಹುದು ಆದ್ರೆ ನಿಜಾನೆ ಹೇಳ್ತಾ ಇದೀನಿ. ಹಿರಿಯರು ಹೇಳಿದ ಒಂದು ಮಾತು
ಏಷ್ಟು ಸತ್ಯ ಈ ಮಾತು ಅಂದ್ರೆ “ಹತ್ತು ದೇವರನ್ನು ಪೂಜಿಸೋ ಕ್ಕಿಂತ ಹೆತ್ತ ತಾಯಿಯನ್ನ ಪೂಜಿಸು” ಅನ್ನೋ ಮಾತು ಸುಳಲ್ಲ. ಅವಳು ತಾಯಿ ಮಾತ್ರ ಅಲ್ಲ ನನ್ನ ಜೀವನದ ದೇವತೆ…ನೇ ಅಂದ್ರೆ ತಪ್ಪಾಗಲ್ಲ. ಜೀವ ಕೊಡೋ ಜನ್ಮದಾತೆ, ಕೈ ತುತ್ತು ನೀಡೋ ಅನ್ನದಾತೆ ಎಲ್ಲಾನೂ ನೀನೇ ಅಮ್ಮ . ಒಂದೊಂದು ಸಲ ಅನ್ಸುತ್ತೆ ನಾನು ಏಷ್ಟು ನೆಗೆಟಿವ್ ಆಗಿ ಯೋಚನೆ ಮಾಡ್ತೀನಿ ಅಂದ್ರೆ ನಾನ್ ಏನು ಮಾಡೋಕೆ ಆಗಲ್ಲ. ಅಥವಾ ನಾನು ಅಂದುಕೊಂಡ ಹಾಗೆ ಓದೋಕೆ ಆಗ್ತಾ ಇಲ್ಲ ಅಂತ ಏಷ್ಟು ನೆಗೆಟಿವ್ ಯೋಚನೆ ಮಾಡ್ತೀನಿ ಅಂತ. ಆದ್ರೆ ನನ್ನ ಅಮ್ಮ ಒಂದೇ ಕ್ಷಣದಲ್ಲಿ ತನ್ನ ಮಾತುಗಳಿಂದ ಆ ನೆಗೆಟಿವ್ ಯೋಚನೆ ಒದ್ದು ಓಡಿಸಿ ಪಾಸಿಟಿವ್ ಯೋಚನೆಗಳನ್ನ ತುಂಬುತ್ತಾ ಬರ್ತಾರೆ ಅದೇ ಅನ್ಸುತ್ತೆ ಅಮ್ಮ ನನಗೆ ಅಸ್ಟ್ ದೈರ್ಯ ಬಂದಿರೋದು.ನೀನೇ ನನಗೆಲ್ಲ ನನ್ನ ಪ್ರಪಂಚದ ದೇವರು ಗೊತ್ತಾ. ನೀನು ಯಾವಾಗಲೂ ಹೇಳ್ತಿಯಲ ನನ್ನ ಮಕ್ಕಳೇ ನನಗೆ ಎಲ್ಲಾ ಅಂತ.ಆಗ ಅನ್ಸುತ್ತೆ ಅಮ್ಮ ನಾನು ಏಷ್ಟು ಪುಣ್ಯ ಮಾಡಿದೀನಿ ನಿನ್ನ ಮಗಳಾಗಿ ಹುಟ್ಟಿದ್ದಕ್ಕೆ ಅಂತ.
ಜೀವನದಲ್ಲಿ ಕಾಣದ ದೇವರನ್ನ ನೋಡಲು ಜಪಿಸೋ ಬದಲು ಕಾಣುವ ದೇವರನ್ನ ಪೂಜಿಸಬೇಕು . ನನ್ನ ಕಣ್ಣಿಗೆ ಕಾಣುವ ದೇವತೆ ಅಂದ್ರೆ ತಪ್ಪಿಲ್ಲ ಅಮ್ಮ.ಅಮ್ಮ ಅನ್ನೋ ಎರೆಡು ಅಕ್ಷರ ನನ್ನ ಜೀವನ ಬದಲಿಸುವ ಅಕ್ಷರ. ಅಮ್ಮ ಅನ್ನೋ ಒಂದು ಜೀವ ನಮಗೆ ಜೀವ ಕೊಟ್ರೆ, ಅಪ್ಪ ಜೀವನ ಹೆಂಗೆ ಅಂತ ಹೇಳಿ ಕೊಡ್ತಾರೆ.. ಅಲ್ವಾ.
-ದೀಪಾ ಜಿ. ಎಸ್.