ಹೆಣ್ಣೇ ನಿನ್ನ ಅಂತರಾಳದಲ್ಲಿ ನಿತ್ಯವೂ ಸತ್ಯದ ಹುಡುಕಾಟ…..!?: ದೀಪಾ ಜಿ.ಎಸ್.‌

 ಈಗಿನ ಸ್ವತಂತ್ರದ ಬದುಕಿನಲ್ಲಿ ಒಂದು ಹೆಣ್ಣನ್ನ ನಾಲ್ಕು ಗೋಡೆಗಳ ಮಧ್ಯೆ ಬಂಧಿಸಿ ಅವಳಿಗೆ ಕಾನೂನಿನ ಚೌಕಟ್ಟನ್ನ ನಿರ್ಮಿಸಿ ಅವಳ ಜೀವನವನ್ನ ಕತ್ತಲಿನ ಕೋಣೆಗೆ ತಳ್ಳಿ. ಅವಳಿಗೆ ಜೀವನ ಅಂದರೆ ಏನು ಅನ್ನೋದು ಅವಳಿಗೆ ತಿಳಿಯದ ಹಾಗೆ ಅವಳ ಭಾವನೆಗಳನ್ನ ಹೊಸಕಿ ಹಾಕಿ ಸಂಸಾರದ ಸಾಗರದಲ್ಲಿ ಜವಾಬ್ದಾರಿ ಅನ್ನುವ ಗುಂಡಿಗೆ ತಳ್ಳಿ, ಅಲ್ಲೂ ಅವಳನ್ನ ಎಲ್ಲಾ ತರದಲ್ಲು ಮೂರ್ಖಳನ್ನಾಗಿ ಮಾಡಿ ಅವಳ ಕನಸುಗಳನ್ನ ನುಚ್ಚು ನೂರು ಮಾಡಿ ವ್ಯಂಗ್ಯ ಮಾಡುವ ಈ ಸಮಾಜದಲ್ಲಿ ದೈರ್ಯದಿಂದ ಬದುಕಿ ಬಾಳಿ ತೋರಿಸುವಂತ … Read more

ಪ್ರಯಾಗದಲ್ಲೊಂದು ಸಂಜೆ: ಕೃಷ್ಣವೇಣಿ ಕಿದೂರ್.

ಪ್ರವಾಸದ ನಿಮಿತ್ತ ಅಲಹಾಬಾದಿಗೆ ಬಂದಿದ್ದೆವು. ಇಲ್ಲಿನ ಸುಪ್ರಸಿದ್ಧ ಪ್ರಯಾಗಕ್ಕೆ ಭೇಟಿ ಕೊಟ್ಟಾಗ ನದಿಯಲ್ಲಿ ತ್ರಿವೇಣಿ ಸಂಗಮ , ಪ್ರಯಾಗ ನೋಡಲು ಉತ್ಸುಕರಾಗಿದ್ದೆವು. ಗಂಗಾ, ಯಮುನಾ, ಸರಸ್ವತಿ ನದಿಗಳ ಸಂಗಮದ ಪವಿತ್ರ ಸ್ಥಳ ಅದು. ಸಂಜೆಯ ಆರೂವರೆಯ ಸುಮಾರಿಗೆ ತಲುಪಿದೆವು. ಅಲ್ಲಿದ್ದದ್ದು ಒಂದೋ, ಎರಡೋ ದೋಣಿಗಳು. ಅವರಲ್ಲಿ ವಿಚಾರಿಸಿದಾಗ ಒಬ್ಬರು ಬರಲು ಒಪ್ಪಿದರು. ನದೀ ದಡ ನಿರ್ಜನ. ನಾವಿದ್ದ ದೋಣಿ ನೀರಿನಲ್ಲಿ ಸಾಗುವಾಗ ಬಿಳಿಯ ಸೈಬೀರಿಯನ್ ಹಕ್ಕಿಗಳು ಜೊತೆ ಜೊತೆಗೆ ಬರತೊಡಗಿದವು. ಅವಕ್ಕೆ ಬಿಸ್ಕತ್ತು, ಹಣ್ಣು ಕೊಡುವ ಅಭ್ಯಾಸವಾಗಿತ್ತು … Read more

“ನಿನ್ನೆ ನಾಳೆಯ ನಡುವೆ” ಪಾಂಡುರಂಗ ಯಲಿಗಾರ: ವೈ. ಬಿ. ಕಡಕೋಳ

2012-13 ನೆಯ ಅವಧಿ ನಾನು ಕನ್ನಡ ವಿಶ್ವವಿದ್ಯಾಲಯದಲ್ಲಿ “ಮುನವಳ್ಳಿ ಒಂದು ಸಾಂಸ್ಕೃತಿಕ ಅಧ್ಯಯನ” ಎಂ. ಫಿಲ್ ಪದವಿಗಾಗಿ ಡಾ. ವ್ಹಿ. ಎಸ್. ಮಾಳಿಯವರ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡುತ್ತಿದ್ದೆ. ಮುನವಳ್ಳಿಯ ಅನೇಕ ಹಿರಿಯರ ಸಂಪರ್ಕದಲ್ಲಿ ಮಾಹಿತಿ ಸಂಗ್ರಹಿಸುತ್ತಿದ್ದೆ. ಮುನವಳ್ಳಿಯ ನಾಟಕವೊಂದು ಮೈಸೂರು ದಸರಾ ಪ್ರದರ್ಶನದಲ್ಲಿ ಪ್ರದರ್ಶನಗೊಂಡ ಬಗ್ಗೆ ಮಾಹಿತಿ ಬೇಕಾಗಿತ್ತು. ಗೆಳೆಯ ಜಯದೇವ ಅಷ್ಠಗಿಮಠ ಈ ವಿಚಾರ ಪಾಂಡುರಂಗ ಯಲಿಗಾರ ಅವರನ್ನು ಕೇಳಬೇಕು. ಅವರು ಬೆಳಗಾವಿಯಲ್ಲಿ ಇರುವರು. ರವಿವಾರ ಮುನವಳ್ಳಿಗೆ ಬರುತ್ತಾರೆ ನೀನು ಅವರನ್ನು ಭೇಟಿಯಾಗಬೇಕು. ನಾನು ಹೇಳಿ … Read more

ಕಳೆದು ಹೋಗುವ ಸುಖ (ಭಾಗ 2): ಡಾ. ಹೆಚ್ಚೆನ್ ಮಂಜುರಾಜ್

ಇಲ್ಲಿಯವರೆಗೆ ಏನಾದರೊಂದು ಕೆಲಸಗಳಲ್ಲಿ ಅದರಲ್ಲೂ ರಚನಾತ್ಮಕ ಕಾರ‍್ಯಗಳಲ್ಲಿ ತೊಡಗಿಸಿಕೊಳ್ಳುವ ಮನೋಧರ್ಮ ಇಂದಿನ ಅಗತ್ಯವಾಗಿದೆ. ‘ಕೆಲಸದ ಬಗ್ಗೆ ಮಾತಾಡಿದರೆ ಕೆಲಸ ಮಾಡಿದಂತಾಗುವುದಿಲ್ಲ’ ಎಂದು ಬಹು ಹಿಂದೆಯೇ ವಕ್ರೋಕ್ತಿಯೊಂದನ್ನು ಹೊಸೆದಿದ್ದೆ. ಇಂದು ನಾವು ಕೆಲಸ ಮಾಡುವುದು ಕಡಮೆ; ಅದನ್ನು ಕುರಿತು ಮಾತಾಡುವುದು ಹೆಚ್ಚು. ಬದುಕುವುದು ಕಡಮೆ; ಬದುಕಲು ಮಾಡಿಕೊಳ್ಳುವ ಸಿದ್ಧತೆಯೇ ಹೆಚ್ಚು. ‘ಕಂಪ್ಯೂಟರ್ ಬಳಸಿ ಕೆಲಸ ಮಾಡಬೇಕು; ಕಂಪ್ಯೂಟರ್ ಬಳಸುವುದೇ ಕೆಲಸವಾಗಬಾರದು’ ಎಂದೂ ಇನ್ನೊಮ್ಮೆ ಬರೆದಿದ್ದೆ. ಅಂದರೆ ಮಂತ್ರಕ್ಕಿಂತ ಉಗುಳೇ ಹೆಚ್ಚು ಎಂಬಂತಾಗಿದೆ ನಮ್ಮಗಳ ಪರಿಸ್ಥಿತಿ! ಬಹುತೇಕ ಸಭೆ/ಮೀಟಿಂಗುಗಳ ನಿರ್ಧಾರವೇನೆಂದರೆ … Read more

ಕಳೆದು ಹೋಗುವ ಸುಖ (ಭಾಗ 1): ಡಾ. ಹೆಚ್ಚೆನ್ ಮಂಜುರಾಜ್

ಗುರುತಿಸಿಕೊಳ್ಳುವುದಕಿಂತ ಕಳೆದು ಹೋಗುವುದೇ ಈ ಅಖಂಡ ವಿಶ್ವದ ಮೂಲತತ್ತ್ವವಾಗಿದೆ ಅಥವಾ ಗುರುತಿಸಿಕೊಂಡ ಮೇಲೆ ಕಳೆದು ಹೋಗುವುದೇ ಸೃಷ್ಟಿಯ ನಿಯಮವಾಗಿದೆ. ಅದು ಆಕಾಶಕಾಯವೇ ಇರಲಿ, ಜೀವಸೃಷ್ಟಿಯೇ ಇರಲಿ, ಮಾನವ ನಿರ್ಮಿತ ತತ್ತ್ವಸಿದ್ಧಾಂತಗಳೇ ಇರಲಿ, ಪದವಿ-ಪ್ರತಿಷ್ಠೆ-ಹುದ್ದೆ-ಅಧಿಕಾರ-ಅಂತಸ್ತು-ಸಾಧನೆಗಳೇ ಇರಲಿ ಎಲ್ಲವೂ ಕಾಲ ಕ್ರಮೇಣ ಕಳೆದು ಹೋಗುತ್ತವೆ ಮತ್ತು ಹಾಗೆ ಕಳೆದು ಹೋಗಬೇಕು. ಹಳತು ನಶಿಸುತಾ, ಹೊಸತು ಹುಟ್ಟುತಿರಬೇಕು. ‘ನಿದ್ದೆಗೊಮ್ಮೆ ನಿತ್ಯ ಮರಣ; ಎದ್ದ ಸಲ ನವೀನ ಜನನ’ ಎಂದಿಲ್ಲವೇ ಕವಿನುಡಿ. ಅಂದರೆ ಅಸ್ತಿತ್ವವು ವ್ಯಕ್ತಿತ್ವವನ್ನು ಹೊಂದಿದ ಮೇಲೆ ಸಾವು ಶತಸಿದ್ಧ ; … Read more

ಈ ಪಟ್ಟಣಗಳಿಗೆ ಏನಾಗಿದೆ?: ಗೌರಿ ಚಂದ್ರಕೇಸರಿ.

ಬಾಲ್ಯದಲ್ಲಿ ನಾವು ಕಂಡುಂಡ ಪಟ್ಟಣಗಳು ಈಗಿನಂತಿರಲಿಲ್ಲ. ಥೇಟ್ ಆದಿ ಕವಿ ಪಂಪ ಬನವಾಸಿಯನ್ನು ಬಣ್ಣಸಿದ ರೀತಿಯಲ್ಲಿ ಕಾಣಿಸುತ್ತಿದ್ದವು. ಹಸಿರುಡುಗೆ ತೊಟ್ಟ ಪ್ರಕೃತಿ, ಕೀ ಕೀ ಎನ್ನುವ ಹಕ್ಕಿಗಳ ಕಲರವದೊಂದಿಗೆ ತೆರೆದುಕೊಳ್ಳುತ್ತಿದ್ದ ಬೆಳಗು, ಮನೆ ಮನೆಯ ಮುಂದೆಯೂ ಬೃಂದಾವನ, ಅಲ್ಲಿ ಚುಕ್ಕೆ ಇಟ್ಟು ರಂಗೋಲಿ ಎಳೆಯುತ್ತಿರುವ ಹೆಂಗಳೆಯರು, ರೇಡಿಯೋದಿಂದ ಹೊರ ಹೊಮ್ಮುತ್ತಿದ್ದ “ಈ ಮಣ್ಣು ನಮ್ಮದು ಈ ಗಾಳಿ ನಮ್ಮದು, ಕಲಕಲನೆ ಹರಿಯುತಿಹ ನೀರು ನಮ್ಮದು” ಎಂಬಂತಹ ಹಾಡುಗಳು, ಬೀದಿ ನಲ್ಲಿಗಳಲ್ಲಿ ನೀರು ಹಿಡಿಯುತ್ತ ನಿಂತ ಗಂಡಸರು, ಹೆಂಗಸರು, … Read more

ಒತ್ತಡಮುಕ್ತ ಜೀವನ ಸಾಧ್ಯವೇ ?: ಗಾಯತ್ರಿ ನಾರಾಯಣ ಅಡಿಗ

ಇಂದಿನ ವಿಜ್ಞಾನ ತಂತ್ರಜ್ಞಾನ ಯುಗದಲ್ಲಿ ಒತ್ತಡಯುಕ್ತ ಜೀವನವನ್ನು ನಾವು ನಮಗೆ ಅರಿವಿಗೆ ಬಂದೋ ಬಾರದೆಯೋ ಅದನ್ನು ಹಿಂಬಾಲಿಸಿಕೊಂಡು ಹೋಗುತ್ತಿದ್ದೇವೆ. ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಿದ್ದೇವೆ. ಸ್ವಲ್ಪ ಹೊತ್ತು ಕುಳಿತು ಕಾಫಿ ಹೀರಲು ನಮ್ಮಲ್ಲಿ ಸಮಯವಿಲ್ಲ. ತಂದೆ – ತಾಯಿ, ಬಂಧು – ಬಳಗವನ್ನು ಹತ್ತಿರದಿಂದ ಮಾತನಾಡಲು ನಮ್ಮ ಉದ್ಯೋಗ ಬಿಡುತ್ತಿಲ್ಲ. ಮೊಬೈಲ್ ನಲ್ಲಿ ನಾವು ಗಂಟೆಗಟ್ಟಲೆ ವ್ಯವಹರಿಸುತ್ತೇವೆ. ಆದರೆ ನಮ್ಮ ಮಕ್ಕಳ ಜೊತೆ, ಅವರ ಆಸಕ್ತಿ – ಅಭಿರುಚಿಗಳೊಂದಿಗೆ ಬೆರೆಯುವ ಆಸ್ಥೆ ನಮಗಿಲ್ಲ. ಅವರ ಅನುಭವಗಳನ್ನು ನಮ್ಮೊಡನೆ … Read more

ಬರಹ – ನೂರು ನೂರು ತರಹ: ಡಾ. ಹೆಚ್ಚೆನ್ ಮಂಜುರಾಜ್

ಇತ್ತೀಚೆಗೆ ನನ್ನ ಪರಿಚಿತರೊಬ್ಬರು ‘ಬರೆಯುವುದು ಹೇಗೆ?’ ಎಂದು ಕೇಳಿಬಿಟ್ಟರು. ಇದುವರೆಗೂ ಇಂಥ ಪ್ರಶ್ನೆಯೊಂದನು ನಾನು ಕೇಳಿರಲೂ ಇಲ್ಲ; ಕೇಳಿಕೊಂಡಿರಲೂ ಇಲ್ಲ. ಅಚ್ಚರಿಯೆಂದರೆ ಏನೂ ಮಾತಾಡದೆ ಸುಮ್ಮನೆ ನಕ್ಕುಬಿಟ್ಟೆ. ಆಮೇಲನಿಸಿತು, ಗಂಭೀರನಾದೆ. ಇದು ಬರೆಹವೊಂದು ಉದಿಸುವ ಮುಹೂರ್ತ. ಅದನೇ ಬರೆದು ಬಿಡೋಣ ಎಂದು ಕುಳಿತು ಬರೆಯುತ್ತ ಹೋದೆ. ಈ ಬರೆಹ ಜನಿಸಿತು. ಅಂದರೆ ಬರೆಹದ ಪ್ರಾಥಮಿಕ ಲಕ್ಷಣವೇ ಕುಳಿತು ಬರೆಯುತ ಹೋಗುವುದು ಅಷ್ಟೇ. ಪರೀಕ್ಷೆಯಲ್ಲಿ ಮೂರು ಗಂಟೆಗಳ ಕಾಲ ಬರೆಯುತ್ತೇವೆ. ಹೇಗದು ಸಾಧ್ಯವಾಯಿತು? ಏಕಾಗ್ರತೆ, ಉದ್ದೇಶ, ಮನೋಭಾವ ಮತ್ತು … Read more

ದಯೆಯ ಯಾದೃಚ್ಛ ಕ್ರಿಯೆ (Random act of kindness): ದಿನೇಶ್ ಉಡಪಿ

ಶುಕ್ರವಾರ ಕಾಲೇಜಿನ ಕೆಲಸಕ್ಕೆ ರಜೆ ಹಾಕಿಕೊಂಡು, ಕೆಲವು ಅಗತ್ಯ ಕೆಲಸಕ್ಕಾಗಿ ಕೆ.ಆರ್.ನಗರಕ್ಕೆ ಹೋಗಬೇಕಿತ್ತು. ಬೆಳಗಿನಿಂದಲೇ ಮೋಡ ಕವಿದ ವಾತಾವರಣವಿತ್ತು, ಅತಿಯಾದ ತೇವಾಂಶದ ಕಾರಣ ವಿಪರೀತ ಶೆಕೆಯೂ ಇತ್ತು. ಮಧ್ಯಾಹ್ನದ ಹೊತ್ತಿಗೆ ಎಲ್ಲಾ ಕೆಲಸ ಮುಗಿಸಿಕೊಂಡು ಮೈಸೂರಿನತ್ತ ಹೊರಟೆ. ಬಿಳಿಕೆರೆ ಹತ್ತಿರ ಬರುವಷ್ಟರಲ್ಲಿ ಮಳೆ ಸುರಿಯತೊಡಗಿತು, ಕುಂಭದ್ರೋಣ ಮಳೆ ಅಂತಾರಲ್ಲ ಹಾಗೆ. ಕಾರಿನ ವೈಪರ್ ಪೂರ್ತಿ ವೇಗದಲ್ಲಿ ನೀರನ್ನು ತಳ್ಳುತ್ತಿದ್ದರೂ ರಸ್ತೆ ಕಾಣದಷ್ಟು ಮಳೆ. ಬಹುತೇಕ ಎಲ್ಲ ವಾಹನಗಳೂ ರಸ್ತೆ ಪಕ್ಕ ಹಾಕಿಕೊಂಡು ನಿಂತಿದ್ದರು. ನನ್ನ ಚಿರಪರಿಚಿತ ರಸ್ತೆ … Read more

ಕೋವಿಡ್ ಕಲಿಸಿದ ಪಾಠ: ಗೀತಾ ಜಿ ಹೆಗಡೆ ಕಲ್ಮನೆ.

ಮೊನ್ನೆ ಒಂದಿನ ಸಾಯಂಕಾಲ ಆಗುತ್ತಿದ್ದಂತೆ ಗಂಟಲು ಸ್ವಲ್ಪ ಉರಿ, ನೆಗಡಿಯಾಗುವಾಗ ಆಗುತ್ತಲ್ಲಾ ಹಾಗೆ ಒಂದು ರೀತಿಯ ಇರಿಟೇಷನ್. ಉಸಿರಾಟದಲ್ಲಿ ಸ್ವಲ್ಪ ಕಷ್ಟ ಅಂದರೆ ಬಾಯಿ ತೆರೆದು ಉಸಿರಾಡಬೇಕು ಅನಿಸುವಷ್ಟು. ಸಂಜೆ ದೀಪ ಹಚ್ಚಿ ಸ್ವಲ್ಪ ಭಗವತ್ಗೀತೆ ಪಾರಾಯಣ ಮಾಡುವ ರೂಢಿ. ಎಂದಿನಂತೆ ಸರಾಗವಾಗಿ ಓದಲು ಆಗುತ್ತಿಲ್ಲ. ಸ್ವರವೇ ಹೊರಗೆ ಬರ್ತಿಲ್ಲ. ಅಯ್ಯೋ ಶಿವನೇ….ಇದೆನಾಯಿತು ನನಗೆ? ಪಕ್ಕನೆ ಕೊರೋನಾ ಸಿಂಟೆಮ್ಸ ಹೀಗೀಗೆ ಇರುತ್ತದೆ ಎಂದು ಟೀವಿಯಲ್ಲಿ ಪೇಪರಲ್ಲಿ ವಾಲಗ ಊದುತ್ತಿದ್ದದ್ದು ಜ್ಞಾಪಕ ಬಂತು ನೋಡಿ…. ಸೋಫಾದಲ್ಲಿ ಕೂತವಳು ಸಣ್ಣಗೆ … Read more

ಸೂಲಂಗಿಯ ಕತೆ-ವ್ಯಥೆ: ಸುಂದರಿ. ಡಿ

ಅದೊಂದು ದಿನ ಜಮೀನಿನಲ್ಲಿ ಕಬ್ಬು ಕಟಾವು ಕೆಲಸ ನಡೆಯುತ್ತಿತ್ತು, ಹೋಗಿ ನೋಡುವಾಸೆ! ಏಕೆಂದರೆ ಕಬ್ಬು ಬಿತ್ತನೆಯ ಸಮಯದಲಿ ಖುಷಿಯಿಂದಲೇ ನಾನೊಂದಷ್ಟು ನಾಟಿ ಮಾಡಿದ್ದೆ. ಅದೇ ಪ್ರತಿ ದಿನದ ಕಾಯಕವಾದರೆ ಅದು ಈ ಮಟ್ಟದ ಖುಷಿ ಕೊಡಲಾರದು. ಆಗೊಮ್ಮೆ – ಈಗೊಮ್ಮೆ ಜಮೀನಿನ ಮುಖ ನೋಡಿ ಬರುವ ನಮ್ಮನ್ನು ಮರೆತು, ಉಳುವವರೇ ವಾರಸುದಾರರೆಂದು ಜಮೀನು ಎಲ್ಲಿ ತಪ್ಪು ತಿಳಿದೀತೆಂದು ಭಾವಿಸಿ ಅದರ ನಿಜವಾದ ವಾರಸುದಾರರು ನಾವೆಂದು ನೆನಪು ಮಾಡುವ ಸಲುವಾಗಿ ಹೋಗುವ ನಮ್ಮಂಥ ಮಧ್ಯಮವರ್ಗದ ಜನಗಳಿಗೆ ನಿತ್ಯದ ಕಾಯಕವಾಗಿ … Read more

‘ಪಾಠವೂ ಮುಖ್ಯ, ಪ್ರಾಣವೂ ಮುಖ್ಯ’: ಬೀರೇಶ್ ಎನ್ ಗುಂಡೂರ್

ಈ ವಯಸ್ಸಿಗೆನೇ ಮೊಬೈಲ್ ಅಬ್ಯಾಸ ಇರಲೇಬಾರದು. ಮಕ್ಳು ಕೆಟ್ಟೋಗ್ತವೆ. ಕಣ್ಣು ಹಾಳಾಗ್ತವೆ. ಅಂತಿದ್ದ ಪಾಲಕರೆಲ್ಲಾ ಈಗ ಅದೇ ಮಕ್ಕಳನ್ನು ಹಿಡಿದು ಮೊಬೈಲ್ ಕೊಟ್ಟು ಹೊಡ್ಡು ಬಡ್ಡು ಕೂರಿಸುತಿದ್ದಾರೆ. ಪರದೆಯ ಮೇಲೆ ಇಟ್ಟ ದೃಷ್ಟಿ ಸ್ವಲ್ಪ ಕದಲಿದರೆ ಸಾಕು, ನೀನು ಸರಿಯಾಗಿ ಕಲಿಯುತ್ತಿಲ್ಲ. ಫೀಸ್ ಕಟ್ಟಿದಿವಿ. ಕಲಿಲಿಲ್ಲ ಅಂದ್ರೆ ಅಷ್ಟೇ ಈ ವರ್ಷ, ಅಂತ ರಾಗ ಹಾಡುತಿದ್ದಾರೆ. ಮಕ್ಕಳಿಗೆ ಇದೊಂತರ ವಿಚಿತ್ರ ಅನಿಸುತಿದ್ದೆ. ಇಷ್ಟು ದಿವಸ ಮೊಬೈಲ್ ಕೇಳಿದರೆ ಕಣ್ಣು ಬಿಡುತಿದ್ದವರು…ಈಗ ಅದೇ ಮೊಬೈಲ್ ಕೊಟ್ಟು ದಿಟವಾಗಿ ನೋಡು, … Read more

ಗಿರಿಕನ್ಯೆಯ ಗುನುಗು: ಗೀತಾ ಪ್ರಸನ್ನ

ಅಣ್ಣಾವ್ರ ಗಿರಿಕನ್ಯೆ ಬರ್ತಿತ್ತು ಇವತ್ತು. ಎಷ್ಟ್ ಚೆಂದದ ಜೋಡಿ.. ಚೆನ್ನ ಚೆಲುವೆ. ಜಯಮಾಲಾ ಎಳೇ ಬಳ್ಳಿ, ಅಣ್ಣಾವ್ರ ಕರಿಷ್ಮಾ – ಇಬ್ಬರ ಜೋಡಿ ಆಹಾ.. ಆ ಎವರ್ ಗ್ರೀನ್ ಹಾಡುಗಳು. “ನಗು ನಗುತಾ ನೀ ಬರುವೆ.. ನಗುವಿನಲೆ ಮನ ಸೆಳೆವೆ.. “ ಆಹಾ ಎಂಥಾ ಮುದ. ದೋಣಿಯಲ್ಲಿ ಇಬ್ಬರ ರೋಮ್ಯಾನ್ಸ್!! ಈ ದೋಣಿ ಸೀನ್ ನೋಡಿ ಸೀದಾ ಕಾಲೇಜು ದಿನಕ್ಕೆ ಹೋಯ್ತು ನೆನಪು. ಅಣ್ಣಾವ್ರು ಹುಟ್ಟು ಹಾಕ್ತಾ ಇದ್ರೆ, ಚೆಲುವೆ ಎಳೇ ಬಳ್ಳಿ ಹಾಗೆ ಮರಕ್ಕೆ ಹಬ್ಬಿಕೊಳ್ಳೋ … Read more

ಕಾಂತಾಸಮ್ಮಿತ: ಸುಂದರಿ ಡಿ

ಅದೊಂದು ಸಂಜೆ ಸ್ನೇಹಿತೆಯ ಮನೆಗೆ ಹೋಗಲೇಬೇಕಾಯಿತು, ಕಾರಣ ಬಹಳ ಕಾಲ ಸಬೂಬು ಹೇಳಿ ಸಾಕಾಗಿ ಆ ದಿನ ಅವಳ ಮನೆಯ ಬಳಿಯೇ ಹೋಗುವಾಗ ಅವಳ ಕಣ್ಣಲ್ಲಿ ಬಂಧಿಯಾದ ಮೇಲೆ ತಪ್ಪಿಸಿಕೊಳ್ಳುವುದಾದರೂ ಹೇಗೆ? ಕುಳಿತು ಆತಿಥ್ಯ ಸ್ವೀಕರಿಸಿಯೂ ಆಯಿತು. ಯಾರದೋ ಮನೆಗೆ ಹೋಗೋಣವೆಂದು ಕರೆದಳು. ಹೋಗಲು ಮನಸಿಲ್ಲ, ಕಾರಣ ಆಗಲೇ ಸಂಜೆಯಾಗಿತ್ತು, ಜೊತೆಗೆ ಯಾರದೋ ಮನೆಗೆ ನಾನೇಕೆ ಹೋಗುವುದು? ಹಾಗಾಗಿ ಬೇಡವೆಂದು ನಿರಾಕರಿಸಿದೆ. ಆದರೆ ಆಕೆ ಟಪ್ಪರ್‍ವೇರ್ ಡಬ್ಬಿ ಖರೀದಿಸುತ್ತಿದ್ದಳು ಅದನ್ನು ನೋಡಿ ನಾನು ಅಸ್ತು ಎನ್ನಬೇಕಿತ್ತು, ಕಾರಣ … Read more

‘ನುಡಿಯೊಳಗಾಗಿ ನಡೆಯದಿದ್ದರೆ ಮೆಚ್ಚ …: ಡಾ. ಹೆಚ್ಚೆನ್ ಮಂಜುರಾಜ್

ಮೋಸ ವಂಚನೆಗಳಲ್ಲಿ ಹಲವು ವಿಧಗಳಿವೆ. ಅವುಗಳಲ್ಲಿ ನನ್ನನ್ನು ತುಂಬ ಕಾಡುವುದು ಆತ್ಮವಂಚನೆ ಎಂಬುದು. ಅಂದರೆ ನಮ್ಮನ್ನು ನಾವೇ ವಂಚಿಸಿಕೊಳ್ಳುವ ವೈಖರಿಯೇ ಕಂಗೆಡಿಸುವ ವಿಚಾರ. ಆತ್ಮವಂಚನೆಯನ್ನೇ ರೂಢಿಸಿಕೊಂಡವರು ಕ್ರಮೇಣ ಬಂಡತನವನ್ನು ಬೆಳೆಸಿಕೊಂಡು ಸಂವೇದನಾಶೂನ್ಯರಾಗುವರೋ? ಅಥವಾ ಸಂವೇದನಾಶೀಲತೆ ಕಡಮೆಯಾದ ಮೇಲೆ ಆತ್ಮವಂಚನೆಗೆ ಇಳಿಯುತ್ತಾರೋ? ಸದಾ ಗೊಂದಲ ನನಗೆ. ನಾವೆಲ್ಲ ಒಂದಲ್ಲ ಒಂದು ಸಲ, ಒಂದಲ್ಲ ಒಂದು ದಿನ ಇಂಥ ಆತ್ಮವಂಚನೆಗೈದವರೇ! ಮನುಷ್ಯರಾದ ಮೇಲೆ ಇದೆಲ್ಲ ಮಾಮೂಲು ಎಂದು ಕೈ ತೊಳೆದುಕೊಂಡು ಬಿಡದೇ ಸೀರಿಯಸ್ಸಾಗಿ ಯೋಚಿಸಿದಾಗ ನನಗೆ ಹೊಳೆದದ್ದು: ಇದೊಂದು ಮನೋಬೇನೆ … Read more

ಬದುಕೇ ಶೂನ್ಯವೆಂಬ ನಿಜದನಿಯ ಎಲ್ಲರೆದೆಗೆ ಆವಾಹಿಸಿದ ‘ಕೊರೋನಾ’: ಸುಂದರಿ. ಡಿ.

ಕಾರ್ಮೋಡ ಆವರಿಸಿದ ಇಳಿಸಂಜೆಯ ಮಬ್ಬಾದ ವಾತಾವರಣ ಕುಳಿತು ನೋಡುತಿರಲು ಆ ವಾತಾವರಣವೇ ಇಡೀ ಜಗತ್ತಿಗೆ ಕವಿಯಿತೇ? ಎಂಬ ಪ್ರಶ್ನೆ ಆ ಸವಿಯಾದ ಇಳಿಸಂಜೆಯನ್ನು ಸವಿಗಾಣದಂತೆ ಮನದ ಮೂಲೆಯಲಿ ಮನೆಮಾಡಿದ ಆತಂಕದ ಪರಮಾವಧಿಯ ಸ್ಥಿತಿ ಅಂದಿನದು. ಆದರೂ ಒಮ್ಮೆ ದವಾಖಾನೆಯ ಕಿಟಕಿಯ ಸರಳುಗಳ ಭದ್ರ ಸೆರೆಯಿಂದ ಬಿಡಿಸಿಕೊಂಡು ಬಾಂದಳದ ಬಾನಾಡಿಯಂತೆ ವಿಹರಿಸುತ ಇಳಿಸಂಜೆಯ ಸವಿಯುವಾಸೆ. ಕಿಟಕಿಗಳಿಂದ ಹೊರ ನೋಟ ಮೇಲ್ನೋಟಕ್ಕೆ ಸಂತಸ ಕೊಟ್ಟರೂ, ಮನದ ಮೂಲೆಯಲಿ ಬಲು ಭಾರವ ಬಹಳ ಕಾಲ ಹೊತ್ತ ಅನುಭವ. ಕಳೆದ ರಾತ್ರಿಯ ಕಳೆಯುವುದೇ … Read more

ಆಚರಣೆಗೆ ಸಿಮೀತವಾಗದಿರಲಿ. . . . . : ಶಿವಲೀಲಾ ಹುಣಸಗಿ ಯಲ್ಲಾಪುರ

ಯಾರಿಗೆಲ್ಲ ಬೇಡ ಹೇಳಿ ಎರಡು ಹೊತ್ತಿನ ಊಟ, ಮೈ ಮುಚ್ಚಲು ಬಟ್ಟೆ, ನೆತ್ತಿಗೆ ಮಳೆ, ಗಾಳಿ, ಚಳಿಯಿಂದ ರಕ್ಷಣೆ, ಹರಿದ ಕಂಬಳಿ, ಕೌದಿ, ಚಾದರ, ಹರಕು ಚಾಪಿ, ಗೋಣಿಚೀಲ ಅಪರೂಪಕ್ಕೊಮ್ಮೆ ಮೈ ಸೋಪು, ತಲೆಗೆ ಎಣ್ಣೆ ಹಚ್ಚಿಕೊಂ ಡು ಬದುಕ ಕಳೆದ ಅದೆಷ್ಟೋ ಪ್ರತಿಮೆಗಳು ಕಣ್ಣಮುಂದೆ ಹಾದು ಹೋಗಿರುವುದನ್ನು ಅಥವಾ ಅನುಭವಿಸಿರುವುದ ನ್ನು ಎಂದಾದರೂ ಮರೆಯಲಾದಿತೇ?? ಅವನ್ನೆಲ್ಲ ಒದಗಿಸಲು ಕತ್ತಲೆಯಲಿ ಕರಗಿದವರಾರು?? ಕರಿಕಲ್ಲ ಪಾಠಿ ಬಳಪ ಬರೆದಿದ್ದಕ್ಕಿಂತ ತಿಂದಿದ್ದೆ ಜಾಸ್ತಿ. ಗಂಟಲಲ್ಲಿ ಸಿಕ್ಕ ಬಳಪದ ಚೂರ ಹೊರತೆಗೆದು … Read more

ಗುರುವೇ ಸರ್ವಸ್ವ: ಫರಜಾನಾ ಹಬುಗೋಳ

“ಶಿವಪಥವರಿವಡೆ ಗುರುಪಥ ಮೊದಲು” ಎಂದು ಶರಣರು ಹೇಳಿದ್ದಾರೆ. ಜೀವನದಲ್ಲಿ ಗುರಿ ಹಾಗೂ ಗುರು ಬಹುಮುಖ್ಯ. ಗುರುಗಳು ಬೀರಿದ ಪ್ರಭಾವದಿಂದ ಜೀವನದ. ದಿಕ್ಕನ್ನೇ ಬದಲಾಗಿ ಯಶಸ್ಸನ್ನು ಕಂಡು ಸಾಧನೆಯ ಹಾದಿ ತುಳಿದವರ ಸಂಖ್ಯೆ ಸಾಕಷ್ಟಿದೆ. ಗುರಿ ಮುಟ್ಟಲು ಸೋಪಾನ ಅಗತ್ಯ. ಗುರು ಸ್ಥಾನಕ್ಕೆ ತನ್ನದೇ ಆದ ಘನತೆ ಗೌರವಗಳೊಂದಿಗೆ ತನ್ನದೇ ಆದ ಔನ್ನತ್ಯವೂ ಇದೆ. ನಗುರೋರಧಿಕಂ ತತ್ವಂನ ಗುರೋರಧಿಕಂ ತಪಃ| ತತ್ವಜ್ಞಾನಾತ್ ಪರಂ ನಾಸ್ತಿ ತಸ್ಮೈಶ್ರೀ ಗುರುವೇ ನಮಃ°|| ಗುರುವಿಗಿಂತಲೂ ಅಧಿಕವಾದ ತತ್ವವಿಲ್ಲ; ಗುರುವಿಗಿಂತಲೂ ಅಧಿಕವಾದ ತಪಸ್ಸಿಲ್ಲ; ತತ್ವಜ್ಞಾನಕ್ಕಿಂತಲೂ … Read more

ರಾಧಾಕೃಷ್ಣ: ಆರಾ

“ನೀನೆ ನನ್ನಯ ಪ್ರಾಣ ನೀನೆ ತ್ರಾಣ. ನೀನೆ ಆಸರೆ ನೀನೇನೆ ನನ್ನ ಜೀವನ.. ಸನಿಹವೆ ನೀ ಇರದಿರಲು… ಹುಡುಕಿದೆ ನನ್ನ ಮನವನ್ನೆ!. ಕಣ್ಣೆದುರು ನೀನಿರದೆ, ಕಾಣದೆ ಹೋದೆ ನನ್ನೆ ನಾ ರಾಧೆ. ನಿನ್ನ ಬಿಟ್ಟು ಹೇಗೆ ಇರಲಿ ನಾನು ಒಬ್ಬಳೆ……” ಪ್ರಸ್ತುತ ಕೊರೋನಾ ಸಂಕಷ್ಟದಲ್ಲಿ ಹಿರಿಯ-ಕಿರಿಯ ಭೇದಭಾವವಿಲ್ಲದೆ ಎಲ್ಲರ ಮನಸೂರೆಗೊಂಡಿರುವ ಧಾರಾವಾಹಿ ರಾಧಾಕೃಷ್ಣ. ರಾಧಾಕೃಷ್ಣರ ಅಮರ ಪ್ರೇಮಕಥೆಯ ಸಾರಾಂಶವನ್ನೊಳಗೊಂಡಿದೆ. ಇದಾಗಲೇ ಹಿಂದಿಯಲ್ಲಿ 450 ಕ್ಕೂ ಅಧಿಕ ಎಪಿಸೋಡ್ ಗಳನ್ನು ದಾಟಿ ನೋಡುಗರ ಮನಗೆದ್ದಿದೆ. ಕನ್ನಡದಲ್ಲಿ 100ಕ್ಕೂ ಅಧಿಕ … Read more

ಹಬೆಯಾಡುವ ಇಡ್ಲಿ!: ದಿನೇಶ್‌ ಉಡಪಿ

ಎರಡು ದಿನಗಳಿಂದ ಬಿಟ್ಟು ಬಿಟ್ಟು ಮಳೆ ಸುರಿಯುತ್ತಾ ಇತ್ತು. ಇಂದು ಸಂಜೆಯಂತೂ ಅದರ ಆರ್ಭಟ ಜೋರಾಗಿ ಸುಮಾರು ಹೊತ್ತು ಮಳೆ ಬಂದಿತ್ತು. ಕಾಲೇಜಿನಿಂದ ಬಂದವನು ಮನೆ ಸೇರುವಷ್ಟರಲ್ಲಿ ತೋಯ್ದು ತೊಪ್ಪೆಯಾಗಿದ್ದೆ. ಒಂದು ಬಿಸಿ ನೀರಿನ ಸ್ನಾನ ಮುಗಿಸಿ, ಬಟ್ಟೆ ಬದಲಿಸಿ, ಮಳೆಯ ಸೊಬಗನ್ನು ಸವಿಯುತ್ತಾ ಕಿಟಕಿಯ ಮುಂದೆ ಕೂತಿದ್ದೆ. ಸ್ವಲ್ಪ ಹೊತ್ತಿನಲ್ಲಿ ಬಿಸಿ ಚಹಾದ ಕಪ್‌ ಮತ್ತು ಪ್ಲೇಟಿನಲ್ಲಿ ಕಾಯಿ ಚಟ್ನಿಯೊಂದಿಗೆ ಹಬೆಯಾಡುವ ಇಡ್ಲಿ ಮುಂದೆ ಬಂದು ಕೂತಿತ್ತು!. ಇಳಿ ಸಂಜೆಯ ಮಬ್ಬು-ಮಳೆ,-ಚಳಿ, ಮತ್ತು ಹಬೆಯಾಡುವ ಇಡ್ಲಿ, … Read more

ಆನ್ಲೈನ್ ಶಿಕ್ಷಣದಿಂದ ಸರ್ಕಾರಿ ಶಾಲಾ ಶಿಕ್ಷಕರುಗಳಿಗೆ ಆಗುತ್ತಿರುವ ತೊಂದರೆಗಳು : ತೇಜಾವತಿ ಹುಳಿಯಾರ್

ದೇಶದೆಲ್ಲೆಡೆ ಜನಜೀವನದೊಂದಿಗೆ ಮಕ್ಕಳ ವಿದ್ಯಾಭ್ಯಾಸವನ್ನೂ ಅಸ್ತವ್ಯಸ್ತಗೊಳಿಸಿರುವ ಕೊರೋನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಶೈಕ್ಷಣಿಕ ವರ್ಷದ ಆರಂಭದಿಂದಲೂ ಮಕ್ಕಳ ವಿದ್ಯಾಭ್ಯಾಸ ಗೊಂದಲದ ಗೂಡೇ ಆಗಿದೆ. ಒಂದು ಕಡೆ ಇಷ್ಟೊಂದು ದೀರ್ಘ ಕಾಲದ ರಜೆಯಿಂದಾಗಿ ಮಕ್ಕಳು ತಾವು ಕಲಿತದ್ದೆಲ್ಲವನ್ನು ಮರೆತು ಕುಳಿತಿದ್ದಾರೆ. ಇನ್ನೊಂದೆಡೆ ಶಿಕ್ಷಕರು ಮಕ್ಕಳನ್ನು ಈ ಪರಿಸ್ಥಿತಿಯಲ್ಲಿ ಕಲಿಕೆಗೆ ಅಣಿಗೊಳಿಸಿಕೊಂಡು ಶಿಕ್ಷಣ ನೀಡುವುದು ಸವಾಲಿನ ಕೆಲಸವಾಗಿದೆ. ಎಲ್ಲಾ ಮಕ್ಕಳಿಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಶಾಲೆಯ ಸಿದ್ದ ಭೌತಿಕ ಕಲಿಕಾ ಕೊಠಡಿಗಳಲ್ಲಿ ಬೋಧನೆ ಮಾಡಲು ಅವಕಾಶವಿಲ್ಲದ ಈ ಸಂದರ್ಭದಲ್ಲಿ ಮಕ್ಕಳ ಮೂಲ … Read more

ವರ್ಕ್ ಪ್ರಮ್ ಹೊಮ್ (WFH) ಆಗು -ಹೋಗುಗಳು: ಪ್ರವೀಣ್ ಶೆಟ್ಟಿ, ಕುಪ್ಕೊಡು

ಹಿಂದೆ ಒಂದು ಕಾಲ ಇತ್ತು, ತಿಂಗಳಿಗೆ ಒಂದು WFH ತಗೆದುಕೊಳ್ಳಲು ಮ್ಯಾನೇಜರ್ ಗಳ ಕೈಕಾಲು ಹಿಡಿಯಬೇಕಾಗುತಿತ್ತು. ಆದರೆ ಕೊರೊನಾ ಎಲ್ಲಾ ರೀತಿಯ ವರ್ಕ್ ಕಲ್ಚರ್ ಅನ್ನೇ ಬುಡಮೇಲು ಮಾಡಿಬಿಟ್ಟಿದೆ. ಸರಕಾರ ಲಾಕಡೌನ್ ಜೊತೆಗೆ ಐಟಿ ಕಂಪನಿ ನೌಕರರು ಮನೆಯಿಂದಲೇ ಕಾರ್ಯನಿರ್ವಹಿಸಿ ಎಂದು ಆದೇಶ ನೀಡಿದ ನಂತರ ಕಂಪನಿಗಳು ಮೊದ ಮೊದಲಿಗೆ ಹೆದರಿದರೂ, ಅತೀ ಶೀಘ್ರವಾಗಿ ಹೊಸ ರೀತಿಯ ಕೆಲಸದ ವಾತಾವರಣಕ್ಕೆ ಹೊಂದಿಕೊಂಡವು. ತಮ್ಮ ಉದ್ಯೋಗಿಗಳಿಗೆ ಲ್ಯಾಪ್‌ಟಾಪ್, ಡೆಸ್ಕ್‌ಟಾಪ್ ಗಳನ್ನು ಅವರವರ ಮನೆಗಳಿಗೆ ತಲುಪಿಸಲಾಯಿತು. ನೆಟ್ವರ್ಕ್ ಗಾಗಿ ಕಂಪನಿಯಿಂದ … Read more

ಪತ್ರಿಕೋದ್ಯಮಕ್ಕೆ ಕಾಲಿಡುತ್ತಿದೆ “ಡಬಲ್ ಸ್ಟಾಂಡರ್ಡ್” ಎಂಬ ಭೂತ!: ಚವೀಶ್‌ ಜೈನ್‌

ಪತ್ರಿಕೋದ್ಯಮ ಎನ್ನುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕನೇ ಆಧಾರ ಸ್ಥಂಬ. ದೇಶದ ಪ್ರತಿಯೊಂದು ವಿಚಾರಗಳಲ್ಲಿ ಮಹತ್ತರ ಪಾತ್ರವಹಿಸುವ ಸಮಾಜದ ಅವಿಭಾಜ್ಯ ಅಂಗ. ಧಮನಿತರ ಮತ್ತು ದನಿ ಇಲ್ಲದವರ ಧ್ವನಿಯಾಗುವುದೇ ಪತ್ರಿಕೋದ್ಯಮದ ಉದ್ದೇಶ. ನಿಷ್ಪಕ್ಷಪಾತವಾಗಿ, ಜಾತಿ-ಮತಗಳನ್ನು ಲೆಕ್ಕಿಸದೆ, ಅಧಿಕಾರ-ಸ್ಥಾನವನ್ನು ಚಿಂತಿಸದೆ, ತಪ್ಪು-ಒಪ್ಪುಗಳ ಕುರಿತು ಅವಲೋಕಿಸಿ, ಧೈರ್ಯದಿಂದ ತಪ್ಪನ್ನು, ಆಡಳಿತ ಲೋಪವನ್ನು ಪ್ರಶ್ನಿಸುವುದೇ ಪತ್ರಿಕೋದ್ಯಮದ ಜವಾಬ್ದಾರಿ ಮತ್ತು ಕರ್ತವ್ಯ. ರಾಷ್ಟ್ರವಾದ, ರಾಷ್ಟ್ರದ ಹಿತಾಸಕ್ತಿ, ಭದ್ರತೆ, ಅಖಂಡತೆ, ಸಮಗ್ರತೆ ಪತ್ರಿಕೋದ್ಯಮದ ಸಿದ್ಧಾಂತದಲ್ಲಿ ಅಡಗಿರಬೇಕಾದ ಮೂಲ ಚಿಂತನೆಗಳು. ಇವೆಲ್ಲವನ್ನೂ ಒಳಗೊಂಡ ಪತ್ರಿಕೋದ್ಯಮ ಸುಸ್ಥಿರ ಸಮಾಜದ … Read more

ದೇವಮಾನವ: ಡಾ. ದೋ. ನಾ. ಲೋಕೇಶ್

ಮಾಸಿದ ಬಟ್ಟೆ, ತಲೆಗೆ ಸುತ್ತಿದ ಕೊಳಕು ಟವೆಲ್, ಎಣ್ಣೆ, ನೀರು ಕಾಣದೆ ಧೂಳು ತುಂಬಿದ, ಕನಿಷ್ಟ ದಿನಕೊಮ್ಮೆ ಬಾಚಣಿಗೆಯೂ ಕಾಣದೆ ಗುಂಗುರು ಗುಂಗುರಾದ ಕೇಶರಾಶಿಯನ್ನು ಹೊಂದಿದ್ದ, ತನ್ನ ಶಿಳ್ಳೆಯೊಂದರಿಂದಲೇ ಹಯವೇಗದಲ್ಲಿ ಓಡುತ್ತಿದ್ದ ಬಸ್ಸನ್ನು ನಿಲ್ಲಿಸುತ್ತಿದ್ದ, ಹಾಗೂ ನಿಂತಿದ್ದ ಬಸ್ಸನ್ನು ಅದೇ ಶಿಳ್ಳೆಯಿಂದ ಚಲಿಸುವಂತೆ ಮಾಡುತಿದ್ದ ಎಲ್ಲರ ನಡುವೆ ಇದ್ದೂ ಇಲ್ಲದಂತಿದ್ದ ಅವನೊಬ್ಬನಿದ್ದ. ಅವನ ಹೆಸರೇ ಕ್ಲೀನರ್. ಹಿಂದೆ ನಮ್ಮ ಬಾಲ್ಯದಲ್ಲಿ ಹಳ್ಳಿಗಾಡಿನ ಸಾರಿಗೆ ಸಂಪರ್ಕ ಸಾಧನಗಳೆಂದರೆ ಖಾಸಗಿ ಬಸ್ಸುಗಳೇ. ಈಗಿನಂತೆ ಸಾರಿಗೆ ಸಂಸ್ಥೆಯ ಬಸ್ಸುಗಳಾಗಲಿ, ಜನಗಳನ್ನು ಸರಕು … Read more

ಬ್ಯಾಚುಲರ್ ಬದುಕಿನ ಬಾನ್ಗಡಿಗಳು…: ವಿನಾಯಕ ಅರಳಸುರಳಿ

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕಳಿಕೆ ಶುರುವಾಗಿದೆ. “ನೋಡ್ತಿರು…ದೊಡ್ಡ ಸಾಧನೆ ಮಾಡಿ ನಾನೇನು ಅಂತ ತೋರಿಸ್ತೀನಿ ಅವಳಿಗೆ!” ಅರ್ಧ ಕೆಜಿ ಅಳು, ಎರೆಡು ಕ್ವಿಂಟಾಲ್ ಹತಾಶೆ, ಎರೆಡು ಡಜನ್ ರೊಚ್ಚು, ಐದೂವರೆ ಕ್ವಾಟರ್ ನಶೆ ಹಾಗೂ ಸಾವಿರಾರು ಗ್ಯಾಲನ್ ದುಃಖ… ಇವೆಲ್ಲ ಒಟ್ಟಾಗಿ ಬೆರೆತ ಧ್ವನಿಯೊಂದು ಹಾಗಂತ ಅಬ್ಬರಿಸುತ್ತದೆ. “ಹೂ ಮಚ್ಚೀ.. ನೀನೇನಾದ್ರೂ ಅಚೀವ್ಮೆಂಟ್ ಮಾಡ್ಲೇಬೇಕು. ನಿನ್ನ ಬಿಟ್ಟೋಗಿದ್ದು ಎಷ್ಟು ದೊಡ್ಡ … Read more

ಕೊರೋನಾ ಕಾಲದಲ್ಲಿ ಹೆಣ್ಣುಮಕ್ಕಳ ಕೌಟುಂಬಿಕ ಸಮಸ್ಯೆಗಳು: ತೇಜಾವತಿ ಹುಳಿಯಾರು

ಹಿಂದೆಂದೂ ಕಾಣದೊಂದು ಸೂಕ್ಷ್ಮ ಅಣುಜೀವಿ ಇಂದು ವಿಶ್ವದೆಲ್ಲೆಡೆ ಹರಡಿ ತನ್ನ ಕಬಂಧಬಾಹುವನ್ನು ವಿಸ್ತರಿಸಿಕೊಂಡು ದಿನದಿಂದ ದಿನಕ್ಕೆ ದ್ವಿಗುಣಗೊಳ್ಳುತ್ತ ಇಡೀ ಮನುಕುಲವನ್ನೇ ತಲ್ಲಣವನ್ನುಂಟುಮಾಡಿದೆ. ವಿಜ್ಞಾನ – ತಂತ್ರಜ್ಞಾನಕ್ಕೇ ಸವಾಲೊಡ್ಡಿರುವ ಪರಿಸ್ಥಿತಿ ನಮ್ಮ ಕಣ್ಣೆದುರೇ ಇದೆ. ಎಲ್ಲರ ನಿದಿರೆಯಲ್ಲೂ ಸಿಂಹಸ್ವಪ್ನವಾಗಿರುವ ಕೊರೋನಾ ಮಹಾಮಾರಿಯಾಗಿ ತನ್ನ ಅಟ್ಟಹಾಸವನ್ನು ಮರೆಯುತ್ತಾ ಪ್ರಕೃತಿಯ ಮುಂದೆ ಎಲ್ಲವೂ ಶೂನ್ಯವೆಂಬ ನೀತಿಯನ್ನು ನೆನಪಿಸಿದೆ. ಒಂದೆಡೆ ರೋಗದ ಹರಡುವಿಕೆ ದಿನದಿಂದ ದಿನಕ್ಕೆ ದ್ವಿಗುಣವಾಗುತ್ತ ತನ್ನ ವೇಗದ ತೀವ್ರತೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದರೆ ಮತ್ತೊಂದೆಡೆ ಹೇಗೋ ಜೀವನ ಸಾಗಿಸುತ್ತಿದ್ದ ಹಲವಾರು ಕುಟುಂಬಗಳ ಪರಿಸ್ಥಿತಿ … Read more

ಕುಡಿತದ ದಾಸರೇ ನಿಮಗಾಗಿ: ಪ್ರೇಮ್

ಕುಡಿತದ ದುಷ್ಪರಿಣಾಮವನ್ನು ನಾನು ಹಲವು ಕುಟುಂಬಗಳ, ಸಂಬಂಧಿಕರನ್ನು ನೋಡಿ ಕಣ್ಣಾರೆ ಕಂಡವಳು. ಅದೇ ಬೇಸರದಲ್ಲಿ, ಒಟ್ಟಿಗೆ ಭಯ, ಗಾಬರಿ, ಹತಾಶೆ, ನೋವು, ಬೇಸರ, ಕೊಳಕು, ನರಕ ಎಲ್ಲಾ ಭಾವಗಳೂ ಮನದಲ್ಲಿ ಒತ್ತರಿಸಿ ಬರುವುವು. ಯಾರೇ ಆಗಲಿ ಯಾವುದಕ್ಕೂ ದಾಸರಾಗಬಾರದು. ನಮ್ಮ ಮನಸ್ಸು, ನಮ್ಮ ಕೆಲಸ, ನಮ್ಮ ಭಾವನೆಗಳು ನಮ್ಮ ಹಿಡಿತದಲ್ಲಿ ಇರಬೇಕು. ಕುಡಿತ ಸುಳ್ಳನ್ನು ಪ್ರೋತ್ಸಾಹಿಸುತ್ತದೆ. ಯಾಕೋ ಆ ಸುಳ್ಳು ತುಂಬಾ ನೋವು ಕೊಡುತ್ತದೆ. ಹಲವಾರು ಬಾರಿ ಜೀವನದಲ್ಲಿ ಸುಳ್ಳುಗಳಿಂದ ಹತಾಶಳಾಗಿರುವೆವು ನಾವು. ಅದು ಮತ್ತೆ ಜೀವನದಲ್ಲಿ … Read more

ಸಂವೇದನಾಶೀಲ ಯುವ ಕವಿ ಕಾಜೂರು ಸತೀಶ್: ಕಾವ್ಯ ಎಸ್

ನಾನು ಇಂದು ಪರಿಚಯಿಸುತ್ತಿರುವುದು, ನಮ್ಮ ನಿಮ್ಮೆಲ್ಲರೊಂದಿಗೆ ಸಾಮಾನ್ಯರಂತಿರುವ, ಭಿನ್ನತೆಯಲ್ಲಿ ವಿಭಿನ್ನತೆ ಮೆರೆಯುವ ಕೊಡಗಿನ ಪ್ರತಿಭಾನ್ವಿತ., ಸಂವೇದನಾಶೀಲ ಯುವ ಕವಿ.. ಶಿಕ್ಷಕ.. ಅನುವಾದಕ.. ಸಾಹಿತಿ.. ಚಿಂತಕ ಕಾಜೂರು ಸತೀಶ್ ರವರ ಬಗ್ಗೆ. ಶ್ರೀ. ನಾರಾಯಣ್ ಮತ್ತು ಶ್ರೀಮತಿ. ವಿಶಾಲಾಕ್ಷಿ ಯವರ ಪ್ರೀತಿಯ ಪುತ್ರ K. N. ಸತೀಶ್. ಇವರ ವಾಸ್ತವ್ಯ ಸೋಮವಾರಪೇಟೆ ತಾಲೋಕಿನ ಕಾಜೂರು ಗ್ರಾಮ. ಸತೀಶ್ ರವರ ಕವಿತೆಗಳನ್ನು ಜೀರ್ಣಿಸಿಕೊಳ್ಳಲು ಎರೆಡೆರೆಡು ಬಾರಿಯಾದರೂ ಓದುವ ನಾನು ಅವರ ಕವಿತೆಗಳ ಬಗ್ಗೆ ಏನು ಹೇಳಲು ಸಾಧ್ಯ..? ಎಂಬ ಪ್ರಶ್ನೆ … Read more

ಜೀವನದ ಗತಿಯನ್ನು ಬದಲಿಸುವ ‘ಗುರು’: ತೇಜಾವತಿ ಎಚ್.ಡಿ

ಮಾತೃ ದೇವೋಭವ ಪಿತೃ ದೇವೋಭವ ಆಚಾರ್ಯ ದೇವೋಭವ ಅತಿಥಿ ದೇವೋಭವ ಬ್ರಹ್ಮನಾಗಿದ್ದಾನೆ, ಅವನೇ ವಿಷ್ಣುವೂ ಕೂಡ. ಅವನೇ ಸಾಕ್ಷಾತ್ ಪರಬ್ರಹ್ಮ ಆದ್ಯಂತಿಕ ಸತ್ಯ. ಅಂತಹ ಗುರುವಿಗೆ ನಮಸ್ಕಾರ. ಗುರುವಿನಲ್ಲೇ ಪರಬ್ರಹ್ಮನನ್ನು ಕಾಣುವ ಮೂಲಕ ಅವನನ್ನು ಪೂಜ್ಯ ಭಾವನೆಯಿಂದ ನೋಡುತ್ತೇವೆ. ಇಂದಿಗೂ ಕೂಡ ಯಾವುದೇ ಕಾರ್ಯವನ್ನು ಮಾಡುವ ಸಂದರ್ಭದಲ್ಲಿ ನಾವು ಈ ಶ್ಲೋಕವನ್ನು ಪಠಿಸುತ್ತೇವೆ. ಸಮಾಜ ಇಷ್ಟೊಂದು ಗೌರವವನ್ನು ಶಿಕ್ಷಕರಿಗೆ ನೀಡುವಾಗ ಅವರೂ ಕೂಡ ತಮ್ಮ ಜವಾಬ್ದಾರಿಯನ್ನು ನಿಭಾಯಿಸುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಶಿಕ್ಷಕ ಸಕಾರಾತ್ಮಕತೆಯ ಕಿರಣವಾಗಿದ್ದು ಎಂತಹ … Read more

ಕೊಡೆಯ ಕಡ್ಡಿಗಳು ಮತ್ತು ಬೆಚ್ಚನೆಯ ನೆನಪು: ಸಾವಿತ್ರಿ ಹಟ್ಟಿ

ಒಂಬತ್ತು ವರ್ಷದ ಹಿಂದಿನ ನೆನಪು. ಕೊಡೆ ಹಿಡ್ಕೊಂಡು ಅವಸರದಾಗ ಹೊಂಟಾಕಿಗಿ “ಹಿ ಹೀ ಹೀ ಸಾವಿತ್ರಿ ಊಟ ಆಯ್ತಾ” ಅಂತ ಆ ಹಾಲಿನ ಚಿಗವ್ವ ಕೇಳಿದಾಗ ಅಕಿಗೆ ಉತ್ತರ ಹೇಳೂಕ್ಕಿಂತ ನನ್ನೊಳಗ ಎದ್ದ ಪ್ರಶ್ನೆಗೆ ಉತ್ರ ಹೊಳೀಲಿಲ್ಲ. ‘ಊಟಾಯ್ತಾ ಸಾವಿತ್ರಿ’ ಅಂತಷ್ಟೇ ಕೇಳಿದ್ರ ನಡೀತಿರಲಿಲ್ಲನು! ಮತ್ಯಾಕ ಈಕಿ ಅಷ್ಟೂ ಬೆಳ್ಳನ್ನ ಹಲ್ಲು ತಗದು ಹಿಹೀಹೀ ಅಂತ ನಕ್ಳು ಅಂತ ತಲಿ ಕೆರಕೊಂಡು ಆಕಿಗಿ ಉತ್ತರಿಸೂವಷ್ಟರಾಗ ಮತ್ತೆ ಕೇಳೀದ್ಲು, “ ಅಲ್ಲಾ ಸಾವಿತ್ರಿ ತುಂಬಾ ಬೆಳ್ಳಗಿದ್ದೀಯಲ್ಲಾ, ಕಪ್ಪಾಗ್ತೀನಿ ಅಂತ … Read more