ವೃದ್ಧಜೀವ ಹರೋಹರ!: ಹುಳಗೋಳ ನಾಗಪತಿ ಹೆಗಡೆ
ಅಂದಾಜು ಮೂರು ದಿನಗಳಾಗಿರಬಹುದು, ಬಾಳಕೃಷ್ಣ ಮಾಮಾ ತಮ್ಮ ಊರುಗೋಲಿಗಾಗಿ ತಡಕಾಡಲು ಪ್ರಾರಂಭಿಸಿ. ಯಾವ ಸುತ್ತಿನಲ್ಲಿ ತಡಕಾಡಿದರೂ ಕೈಗೆ ಸಿಗೂದೇ ಇಲ್ಲ ಅದು! ತಡಕಾಡುವ ಐಚ್ಛಿಕ ಕ್ರಿಯೆಯೊಂದಿಗೆ ‘ಪಾರತೀ, ನನ್ ದೊಣ್ಣೆ ಎಲ್ಲಿ…?’ ಎಂಬ ಅನೈಚ್ಛಿಕ ಕರೆಯೂ ಬೆರೆತಿದೆ. ಪಿತುಗುಡುವ ವೃದ್ಧಾಪ್ಯದ ಸಿನುಗು ನಾತದೊಂದಿಗೆ ಮೂರು ದಿನಗಳ ಅವರ ಮಲಮೂತ್ರಾದಿ ಸಕಲ ವಿಸರ್ಜನೆಗಳೂ ಒಂದರೊಳಗೊಂದು ಬೆರೆತು ಮನುಷ್ಯ ಮಾತ್ರರು ಕಾಲಿಡಲಾಗದಂತಹ ದುರ್ನಾತ ಆ ಕೋಣೇಲಿ ಇಡುಕಿರಿದಿದೆ. ಬಾಳಕೃಷ್ಣ ಮಾಮನ ಗೋಳನ್ನು ಕೇಳಿ ಅವನನ್ನು ಆ ಉಚ್ಚಿಷ್ಟಗಳ ತಿಪ್ಪೆಯಿಂದ ಕೈಹಿಡಿದು … Read more