ಸಾಫಲ್ಯ: ಉಮೇಶ್‌ ದೇಸಾಯಿ

ಅದು ಅಖಿಲ ಭಾರತ ಮಟ್ಟದ ಸಂಗೀತದ ಅಂತಿಮ ಕಾರ್ಯಕ್ರಮ. ಕನ್ನಡದ ಆ ವಾಹಿನಿ ಅನೇಕ ವರ್ಷಗಳಿಂದ ಈ ಸ್ಫರ್ಧೆ ಏರ್ಪಡಿಸುತ್ತ ಬಂದಿದೆ. ಇಂದು ಅಂತಿಮ ಸುತ್ತು. ಎಲ್ಲ ಸ್ಫರ್ಧಿಗಳಲ್ಲೂ ವಿಚಿತ್ರ ತಳಮಳ ಈಗಾಗಲೇ ಈ ವಾಹಿನಿಯ ಈ ಅಂತಿಮಸ್ಫರ್ಧೆಯ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಂತೆಯೇ ಇತರೇ ಸುದ್ದಿವಾಹಿನಿಗಳಲ್ಲಿ ಈ ಕುರಿತು ಅನೇಕ ಚರ್ಚೆಗಳಾಗಿವೆ…ಯಾರು ಗೆಲ್ಲಬಹುದು ಪ್ರಶಸ್ತಿಯನ್ನು ಈ ಕುರಿತಾಗಿ ಅಲ್ಲಲ್ಲಿ ಬೆಟಿಂಗ್ ಕೂಡ ನಡೆಯುತ್ತಿದೆ ಎಂಬ ಸುದ್ದಿಯೂ ಅನೇಕ ವಾಹಿನಿಗಳಲ್ಲಿ ಹರಿದಾಡುತ್ತಿತ್ತು. ಸ್ಫರ್ಧಿಗಳಲ್ಲಿ ತಳಮಳವಿತ್ತು ನಿಜ ಅಂತೆಯೇ … Read more

ತಲಾಖ್: ಸಿದ್ದರಾಮ ತಳವಾರ, ದಾಸ್ತಿಕೊಪ್ಪ.

ಊರಿನ ಮುಂಭಾಗದಲ್ಲೇ ಶತಮಾನಗಳಷ್ಟು ಹಳೆಯದಾದ ಹುಣಸೀಮರದ ಬುಡದಲ್ಲಿ ಪೇಚು ಮಾರಿ ಹಾಕಿಕೊಂಡು ತಲೆ ಮೇಲೆ ಕೈ ಹೊತ್ತು ಕೂತ ಕರವೀರನನ್ನು ಸಮಾಧಾನ ಮಾಡಲು ಯಾರೊಬ್ಬರೂ ಮುಂದೆ ಬರಲಿಲ್ಲ. ಅಷ್ಟಕ್ಕೂ ಅಲ್ಲೇನಾಗಿತ್ತು ಎಂದು ಅದಾರಿಗೂ ಸ್ಪಷ್ಟವಾಗಿ ಗೊತ್ತಾಗಿರಲಿಲ್ಲ. ಎಲ್ಲರ ಮುಖದಲ್ಲೂ ಭಯ, ಸಂಶಯ, ಆಶ್ಚರ್ಯ, ಸಂದೇಹವೇ ಮನೆ ಮಾಡಿದಂತಿತ್ತು. ಆಗಷ್ಟೇ ಕಚೇರಿಯಿಂದ ಬಂದ ಮಂಜನಿಗೆ ಇದಾವುದರ ಪರಿವೆಯೂ ಇರಲಿಲ್ಲವಾದರೂ ಅಲ್ಲಿ ಏನೋ ಒಂದು ದುರ್ಘಟನೆ ಜರುಗಿರಬಹುದೆಂಬ ಗುಮಾನಿಯಂತೂ ಮಂಜನ ತಲೆಯಲ್ಲಿ ಓಡುತ್ತಿತ್ತು. “ ಹಾಂ,, ನನ್ ಮಗಳು ಅಂಥಾದ್ದೇನು … Read more

ಶೃತಿ ನೀ ಮಿಡಿದಾಗ (ಭಾಗ ೨): ವರದೇಂದ್ರ.ಕೆ ಮಸ್ಕಿ

ಸುಶಾಂತನ ಪ್ರೇಮ ಪತ್ರ ಓದುತ್ತ ಓದುತ್ತ ಶೃತಿಯ ಅಂತರಂಗದಿ ಪ್ರೇಮದ ಬೀಜ ಮೊಳಕೆ ಒಡೆದು ಬಿಟ್ಪಿತು. ಇದು ಪ್ರೇಮವೋ, ಅಥವಾ ಪ್ರಥಮಬಾರಿಗೆ ಒಬ್ಬ ಹುಡುಗನ ಮನದ ಭಾವಕೆ ಸ್ಪಂದಿಸುವ ವಯೋಸಹಜ ಆಕಾಂಕ್ಷೆಯೋ ತಿಳಿಯದ ದ್ವಂದ್ವಕ್ಕೆ ಶೃತಿಯ ಮನಸು ಹೊಯ್ದಾಡಿ ವಯೋಸಹಜವಾಗಿ ಮೂಡುವ ಭಾವನೆಯೇ ಪ್ರೀತಿ ಅಲ್ಲವೆ? ಹೌದು ಎಂದುಕೊಂಡಳು. ಯವ್ವನ ದೇಹಕ್ಕೆ ಮಾತ್ರ ಆಗಿದ್ದ ಶೃತಿಯ ಮನಸಿಗೂ ಯವ್ವನ ಬಯಸುವ ಪ್ರೀತಿ, ಪ್ರೀತಿ ನೀಡುವ ಹೃದಯ ಒಂದಿದೆ ಎಂದು ತೋರಿಸಿದ ನಿಜ ಪ್ರೇಮಿ ಸುಶಾಂತ. ಅವನ ಪ್ರೇಮವನ್ನು … Read more

ದೇವ್ರಾಟ..: ತಿರುಪತಿ ಭಂಗಿ

ಪ್ಯಾಟಿಗೆ ಹೋಗಿದ್ದ ಹನಮ್ಯಾ ಪೋಲಿಸರ ಕೈಯಾಗ ಸಿಕ್ಕಾಕ್ಕೊಂಡ ಬಲ್ಲಂಗ ಗಜ್ಜತಿಂದಿದ್ದ. ‘ಸತ್ನೋ ಯಪ್ಪಾ..’ ಅಂತ ನರಳ್ಯಾಡಕೋತ, ಕುಂಟಕೋತ, ಕುಂಡಿಮ್ಯಾಲ ಗಸಾಗಸಾ ತಿಕ್ಕೋತ ಮನಿಹಾದಿ ಹಿಡದಿದ್ದ. “ಈ ಪೋಲಸ್ರಿಗೆ ಮುಕಳಿ-ಮಾರಿ ಯಾವ್ದಂತ ಒಂದೂ ಗೊತ್ತಿಲ್ಲ, ದಬಾದಬಾ ದನಾ ಬಡ್ದಂಗ ಬಡಿತಾರ, ನಮ್ದ ಎಂತ ಸರಕಾರೋ,ಎಂತಾ ಕಾನೂನೋ..ಏನ್ ಆಡಳಿತಾನೋ..ನಮ್ಮ ದೇಶದಾಗ..! ಎಲ್ಲ ದೇವ್ರಾಟ. ಮೈತುಂಬ ಹಿಗ್ಗಾಮುಗ್ಗಾ ಪೋಲಿಸ್ರು ಥಳಸಿದ ಏಟಿಗೆ ಹನಿಮ್ಯಾನಿಗೆ ಎಂದೂ ನೆನಪಾಗದ ದೇಶದ ಸರಕಾರ, ಕಾನೂನು, ಆಡಳಿತಗಳೆಲ್ಲ ನೆನಪಾಗಿ ಮೈತುಂಬ ಪರಚಿದಂತಾದವು. ನಮಗ ರಕ್ಷಣಾ ಕೊಡವ್ರ ನಮಗ … Read more

ಶೃತಿ ನೀ ಮಿಡಿದಾಗ: ವರದೇಂದ್ರ.ಕೆ ಮಸ್ಕಿ

ಸದಾ ಕಪ್ಪು ಕೂದಲ ಗಡ್ಡಧಾರಿ ಮಿಂಚು ಮಾತುಗಳ ರಾಯಭಾರಿ ನಗುವಿನ ಸಮಯಗಳಿಗೆ ಸೂತ್ರಧಾರಿ. ರಸವತ್ತಾದ ಹೃದಯ ಸಿಂಹಾಸನದಿ ನೆಲೆ ಊರುವ ಅಧಿಕಾರಿ, ಅಂಗಾರಕನ ಬಣ್ಣ ಗರುವಿನ ವಿಶಾಲ ಮನ, ಅವನಿಯ ತಾಳ್ಮೆ ಸುಗುಣಗಳ ಗಣಿ ಸುಶಾಂತ ಒಲವಿನ ಪುಷ್ಪ ಹಿಡಿದು ಬದುಕೆಲ್ಲ ನೀನೆ, ನೀನಿಲ್ಲದೆ ಮತ್ತೇನಿದೆ ನಿನ್ನ ಒಲವಿನ ಒಂದು ಬೊಗಸೆಯಲಿ ನನ್ನ ಹಿಡಿದುಬಿಡು ಗೆಳತಿ ಎಂದು ದೊಂಬಾಲು ಬಿದ್ದವನ ಅಸ್ತಿತ್ವ ಅವಳ ಒಲುಮೆ ಪಡೆಯಲು ಕಳೆದುಹೋದರೂ ಪರವಾಗಿಲ್ಲ ಎನ್ನುವಷ್ಟು ಹುಚ್ಚು ಪ್ರೇಮ ಹಚ್ಚಿಕೊಂಡವನು. ಸದಾ ಕಣ್ಗಳಲಿ … Read more

ಮಂಗಳ: ಗಿರಿಜಾ ಜ್ಞಾನಸುಂದರ್

ಮಧ್ಯರಾತ್ರಿಯ ಹೊತ್ತು, ಹೊರಗೆ ನಾಯಿಗಳ ಕೆಟ್ಟ ಕೂಗು. ಕೇಳಲು ಹಿಂಸೆ ಅನಿಸುತ್ತಿದೆ. ನರಳುತ್ತಿರುವ ಗಂಡ. ದಿನವೂ ಕುಡಿದು ಬಂದು ಹಿಂಸೆ ಮಾಡುತ್ತಿದ್ದ ಮನುಷ್ಯ. ಅವನನ್ನು ಉಳಿಸಿಕೊಳ್ಳುವುದು ಅಸಾಧ್ಯ ಅನ್ನಿಸುತ್ತಿದೆ. ಅವನು ಕುಡಿದುಬಂದಿರುವುದರಲ್ಲಿ ಏನಾದರು ಬೆರೆತಿತ್ತೋ ಏನೋ ತಿಳಿದಿಲ್ಲ. ಅಥವಾ ಡಾಕ್ಟರ್ ಹೇಳಿದಂತೆ ಅವನು ಕುಡಿತ ನಿಲ್ಲಿಸದ ಕಾರಣದಿಂದ ಅವನ ಅಂಗಾಂಗಗಳು ತೊಂದರೆ ಆಗಿವೆಯೇನೋ. ಏನು ಮಾಡಲೂ ತೋಚುತ್ತಿಲ್ಲ ಅವಳಿಗೆ. ಹೆಸರಲ್ಲಷ್ಟೇ ಮಂಗಳ ಎಂದು ಉಳಿದಿತ್ತು. ಬೇರೆಲ್ಲವೂ ಅವಳಿಗೆ ಜೀವನದಲ್ಲಿ ಅಮಂಗಳವೇ. ಅವಳ ಜೀವನ ಹೀಗೆಯೇ 22 ವರ್ಷದಿಂದ … Read more

ಕಾಲದ ಚಿತ್ರ: ಎಂ. ಜವರಾಜ್

ರಾತ್ರಿ ಹತ್ತಾಯ್ತು. ಕರೆಂಟ್ ಇಲ್ಲದೆ ಊರು ಗಕುಂ ಎನುವ ಹೊತ್ತಲ್ಲಿ ಬೀದಿಯಲ್ಲಿ ನಿಂತ ಅಕ್ಕಪಕ್ಕದ ಮನೆಯವರು ಗುಸುಗುಸು ಮಾತಾಡುತ್ತ ಇದ್ದರು. ಕರೆಂಟ್ ಇಲ್ಲದ್ದರಿಂದ ಟಿವಿ ನ್ಯೂಸ್ ನೋಡಲು ಆಗದೆ ದಿಂಬಿಗೆ ತಲೆ ಕೊಟ್ಟೆ. ಕರೋನಾ ಭೀತಿಯಿಂದ ದೇಶ ಪ್ರಕ್ಷುಬ್ಧವಾಗಿ ನಾಳಿನ ಜನತಾ ಕರ್ಫ್ಯೂಗೆ ಸನ್ನದ್ಧವಾಗಿತ್ತು. ಆಗಲೇ ಹೆಂಡತಿ ನಿದ್ರೆಗೆ ಜಾರಿದ್ದಳು. ನನ್ನ ಮಗಳು ಸೆಕೆಗೊ ಸೊಳ್ಳೆ ಹೊಡೆತಕೊ ಹೊರಳಾಡುತ್ತ ಕೈ ಕಾಲು ಆಡಿಸುತ್ತಿದ್ದಳು.ಹಬ್ಬದ ಹೊತ್ತಲ್ಲಿ ಇದೆಂಥ ಕೆಲ್ಸ ಆಯ್ತು.. ಛೇ! ಈ ಸಾರಿ ಯುಗಾದಿಗೆ ಏನೇನು ಮಾಡಬೇಕು. … Read more

ಅನಾದಿ ಮೊರೆಯ ಕೇಳಿ..: ತಿರುಪತಿ ಭಂಗಿ

“ಭಾಳಂದ್ರ ಇನ್ನ ಒಂದೆರ್ಡ ದಿನ ಉಳಿಬಹುದ… ನಮ್ಮ ಕೈಯಿಂದ ಮಾಡು ಪ್ರಯತ್ನಾ ನಾಂವ ಮಾಡೀವಿ, ಇನ್ನ ಮಿಕ್ಕಿದ್ದ ಆ ದೇವ್ರರ್ಗೆ ಬಿಟ್ಟದ್ದ.” ಡಾಕ್ಟರ್ ಕಡ್ಡಿ ಮುರದ್ಹಂಗ ಮಾತಾಡಿದ್ದ ಕೇಳಿದ ಶಿವಕ್ಕನ ಎದಿ ಒಮ್ಮಿಗಿಲೆ ‘ದಸಕ್’ ಅಂದ ಕೈಕಾಲಾಗಿನ ನರಗೋಳಾಗಿದ್ದ ಸಕ್ತಿ ಪಟಕ್ನ ಹಿಂಡಿ ಹಿಪ್ಪಿ ಆದಾಂಗ ಆಗಿತ್ತು. ಎಷ್ಟೊತ್ತನಕಾ ದಂಗ್ ಬಡ್ದಾಂಗಾಗಿ ಪಿಕಿ ಪಿಕಿ ಕಣ್ಣ ಬಿಟಗೋತ, ಡಾಕ್ಟರಪ್ಪನ ನೋಡಕೋತ ನಿಂತ ಕೊಂಡ್ಳು. ಅದೆಲ್ಲಿತ್ತೋ ಎಲ್ಲಿಲ್ಲೋ ಅಕಿ ಎದಿಯಾಗಿನ ದುಕ್ಕದ ಶಳುವು ಒಮ್ಮಿಗಿಲೆ ಉಕ್ಕಿ ಬಂದದ್ದ ತಡಾ, … Read more

ಮತ್ತದೇ ಬೇಸರ: ಎನ್.ಎಚ್.ಕುಸುಗಲ್ಲ

ದೀರ್ಘಕಾಲದ ಎದೆನೋವು ತಾಳಲಾರದೆ ತತ್ತರಿಸಿ ಹೋಗಿದ್ದ ನೀಲಜ್ಜನಿಗೆ ಕಳೆಯುವ ಒಂದೊಂದು ನಿಮಿಷವೂ ಒಂದೊಂದು ಘಳಿಗೆಯಾಗುತ್ತಿದೆ. ಆಸರೆಯಾಗಬೇಕಾದ ಮಕ್ಕಳು ಹೊಟ್ಟೆಪಾಡಿನ ಕೆಲಸ ಅರಸಿ ಪಟ್ಟಣ ಸೇರಿದ್ದರು. ಊರುಗೋಲಾಗಬೇಕಾಗಿದ್ದ ಪತ್ನಿಯೂ ತೀರಿಹೋಗಿದ್ದಳು. ತಲತಲಾಂತರದಿಂದ ಬಂದಿದ್ದ ಕಂಬಳಿ ನೇಯುವ ಕಾಯಕವನ್ನು ಮಕ್ಕಳು ನೆಚ್ಚಿರಲಿಲ್ಲ. ಈ ಕೊರಗೂ ನೀಲಜ್ಜನಿಗಿತ್ತು. ಗಂಡು ಮಕ್ಕಳು ಪಟ್ಟಣ ಸೇರಿದರೇನಂತೆ ಮಗಳು ರುಕ್ಮಿಣಿ ಪಾದರಸದಂತೆ ಮನೆಯಲ್ಲಿ ಓಡಾಡಿಕೊಂಡು ಅಪ್ಪನ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಳು. ರುಕ್ಮಿಣಿ ಅಪ್ಪನ ಜೊತೆ ಇರುವುದರಿಂದ ಗಂಡು ಮಕ್ಕಳು ಅಪ್ಪನ ಬಗ್ಗೆ ಚಿಂತೆ ಮಾಡುತ್ತಿರಲಿಲ್ಲ. ಆದರೆ ಆರು … Read more

ಮಂಜಯ್ಯನ ಮಡಿಕೆ ಮಣ್ಣಾಗಲಿಲ್ಲ: ಜಗದೀಶ ಸಂ.ಗೊರೋಬಾಳ

ಬಹಳ ವರ್ಷಗಳಿಂದ ತಿರುಗದ ತಿಗರಿಯ ಶಬ್ದ ಕೇಳಿ ಮಂಜಯ್ಯನ ಮನಸ್ಸು ಕದಡಿತು. ಯಾವ ಶಬ್ದ ಕೇಳಿ ಮಂಜಯ್ಯ ತನ್ನ ಅರ್ಧಾಯುಷ್ಯ ಕಳೆದನೋ ಆ ಶಬ್ದ ಇಂದು ಮಂಜಯ್ಯನಿಗೆ ಅನಿಷ್ಟವಾಗಿದೆ. ಎದೆಬಡಿತ ಜಾಸ್ತಿಯಾಗಿ, “ಯಾರೇ ಅದು ಸುಗಂಧಿ ತಿಗರಿ ಸುತ್ತೋರು? ನಿಲ್ಸೆ ಅನಿಷ್ಟಾನಾ!” ಎಂದು ಕೂಗುತ್ತಾ ಕಿವಿ ಮುಚ್ಚಿಕೊಂಡನು ಮಂಜಯ್ಯ. ಸುಗಂಧಿ ತಿಗರಿ ಕಡೆ ಹೋಗುವಷ್ಟರಲ್ಲಿ ಶಬ್ದ ನಿಂತಿತ್ತು. ಪಕ್ಕದ ಮನೆಯ ಚಿಕ್ಕ ಹುಡುಗನೊಬ್ಬನು ತಿಗರಿಯನ್ನು ತಿರುಗಿಸಿ ಆಟವಾಡಿ ಸುಗಂಧಿ ಬರುವಷ್ಟರಲ್ಲಿ ಓಡಿ ಹೋಗಿದ್ದನು. ತಿಗರಿ ತಿರುಗಿಸುವುದೆಂದರೆ ಮಕ್ಕಳಿಗೆ … Read more

ಮುಚ್ಚಿದ ಕಿಟಕಿ: ಜೆ.ವಿ.ಕಾರ್ಲೊ

ಇಂಗ್ಲಿಷಿನಲ್ಲಿ: ಆಂಬ್ರೊಸ್ ಬಿಯರ್ಸ್ ಕನ್ನಡಕ್ಕೆ: ಜೆ.ವಿ.ಕಾರ್ಲೊ ಇದು 1830ರ ಮಾತು. ಅಮೆರಿಕಾದ ಒಹಾಯೊ ರಾಜ್ಯದ ಸಿನ್ಸಿನಾಟಿ ನಗರದಿಂದ ಕೊಂಚ ದೂರದಲ್ಲಿ ಅಂತ್ಯವೇ ಕಾಣದಂತ ವಿಸ್ತಾರವಾದ ದಟ್ಟ ಕಾಡು ಹಬ್ಬಿತ್ತು. ಈ ಕಾಡಿನ ಸರಹದ್ದಿನಲ್ಲಿ ನೆಲೆಸಿದ್ದ ಕುಟುಂಬಗಳಲ್ಲಿ ಬಹಳಷ್ಟು ಜನ ಹೊಸ ಬದುಕನ್ನು ಹುಡುಕಿಕೊಂಡು ಮತ್ತೂ ಮುಂದೆ ಹೋಗಿದ್ದರು. ಹಾಗೆ ಉಳಿದವರಲ್ಲಿ ಅವನೊಬ್ಬ ಕಾಡಿನ ಅಂಚಿನಲ್ಲೊಂದು ಮರದ ದಿಮ್ಮಿಗಳ ಗುಡಿಸಲೊಂದನ್ನು ಕಟ್ಟಿಕೊಂಡು ವಾಸಿಸುತ್ತಿದ್ದ. ನಾನು ನೋಡಿದಂತೆ ಎಂದೂ ನಗೆಯಾಡದ, ಯಾರೊಂದಿಗೂ ಬೆರೆತು ಮಾತನಾಡದ ಅವನು ಆ ನಿಶ್ಶಬ್ಧ ಕತ್ತಲ … Read more

ಪ್ರೇಮ ಷರತ್ತು: ಸುಜಾತ ಕೋಣೂರು

ಕುಶಲ ಶಿಲ್ಪಿಯ ಕಲೆಯ ಸಾಕಾರವೆಂಬಂತೆ ಅಲಂಕಾರಿಕ ಕಂಬಗಳು. ಈಗ ತಾನೆ ಗರಿಗೆದರಿ ನರ್ತಿಸುವುದೇನೋ ಎಂಬಂತೆ ನವಿಲು, ಹಂಸಗಳು ತೇಲುವ ಸುಂದರ ಸರೋವರ ನಿಜವಾದುದೇ ಎನಿಸುವಂತೆ, ಕಾಳಿದಾಸ ಕಾವ್ಯದ ಶೃಂಗಾರ ಜೋಡಿ ದು:ಶ್ಯಂತ ಶಕುಂತಲಾರ ಏಕಾಂತದ ಹೂವಿನ ಉಯ್ಯಾಲೆ, ಸುತ್ತಲೂ ಹಸಿರು ವನದ ದೃಶ್ಯಾವಳಿಗಳನ್ನು ಚಿತ್ರಿಸಲಾಗಿರುವ ಸುಂದರ ಭಿತ್ತಿಗಳು. ಕಾಲಡಿಗೆ ಮಕಮಲ್ಲಿನ ಮೆತ್ತನೆ ಹಾಸು. ಬಣ್ಣ ಬಣ್ಣದ ಹೂವಿನ ಅಲಂಕಾರ ತುಂಬಿಕೊಂಡಿರುವ ಚಿನ್ನ ಲೇಪನದ ಕಿಟಕಿ ಮತ್ತು ಬಾಗಿಲಿನ ಚೌಕಟ್ಟುಗಳು. ಹೊಸ್ತಿಲಿಗೆ ಸುಂದರ ರಂಗೋಲಿ.ಕುಸುರಿಯ ರೇಶಿಮೆಯ ಮೇಲುಹೊದಿಕೆಯ ಪಲ್ಲಂಗಕ್ಕೆ … Read more

ಸ್ವಗತ: ನಾಗರೇಖಾ ಗಾಂವಕರ

ಎರಡನೇಯ ಗರ್ಭವೂ ಹೆಣ್ಣೆಂದು ಗೊತ್ತಾಗಿದೆ. ಗಂಡ ಆತನ ಕುಟುಂಬ ಸುತಾರಂ ಮಗುವನ್ನು ಇಟ್ಟುಕೊಳ್ಳಲು ತಯಾರಿಲ್ಲ. ತಾಯಿಯೊಬ್ಬಳು ಒತ್ತಾಯದ ಗರ್ಭಪಾತಕ್ಕೆ ಸಿದ್ಧಳಾಗಿ ಕೂತಿದ್ದಾಗಿದೆ, ತಾಯಿಯ ಗರ್ಭದೊಳಗಿನ ಭ್ರೂಣ ಬಿಕ್ಕಳಿಸುತಿದೆ. ಅಯ್ಯೋ! ಅವರು ಬಂದೇ ಬರುತ್ತಾರೆ. ನನ್ನನ್ನು ಕತ್ತರಿಸಿ ಹೊರಗೆಸೆಯಲು. ಅವರಿಗೇನೂ ಅದು ಹೊಸತಲ್ಲ. ಆದರೆ ನನ್ನಮ್ಮನಿಗೆ ನಾನು ಏನೂ ಅಲ್ಲವೇ? ಅವಳ ರಕ್ತದ ರಕ್ತ ನಾನು. ಅವಳ ಮಾಂಸದ ಮುದ್ದೆ ನಾನು. ಅಮ್ಮ ದಯವಿಟ್ಟು ಹೇಳಮ್ಮ. ಅವಳಿಗೆ ನನ್ನ ದನಿ ಕೇಳುತ್ತಿಲ್ಲವೇ? ಅಮ್ಮನ್ಯಾಕೆ ಮೂಕಿಯಾಗಿದ್ದಾಳೆ.. ಸಪ್ಪಗಿದ್ದಾಳೆ.. ನನಗೆ ಗೊತ್ತು. … Read more

ದುರಂತ: ಗೀತಾ ಜಿ. ಹೆಗಡೆ, ಕಲ್ಮನೆ.

ಅದೊಂದು ಮಲೆನಾಡಿನ ಪುಟ್ಟ ಹಳ್ಳಿ.  ಅಲ್ಲಿ ಸುರೇಶನದು ಒಪ್ಪವಾದ ಸಂಸಾರ.  ಅವನಿಶ್ಚೆಯನರಿತ ಸತಿ, ಮುದ್ದಾದ ಒಬ್ಬಳೇ ಮಗಳು, ವಯಸ್ಸಾದ ಪ್ರೀತಿಯ ಅಮ್ಮ.  ಇವರೊಂದಿಗೆ ಬದುಕಿನ ಗತಿ ಸುಗಮವಾಗಿ ಸಾಗುತ್ತಿರುವಾಗ ಕೂಡಿಟ್ಟ ಅಲ್ಪ ಸ್ವಲ್ಪ ಹಣ ಸೇರಿಸಿ ಸರ್ಕಾರದ ಯೋಜನೆಯಡಿಯಲ್ಲಿ ಸಿಕ್ಕ ಒಂದೂವರೆ ಲಕ್ಷ ರೂಪಾಯಿ ಹಾಗೂ ಹೆಂಡತಿಯ ಒತ್ತಾಯದ ಮೇರೆಗೆ ಅವಳ ತವರಿನ ಒಡವೆ ಕೂಡಾ ಮಾರಿ ಎರಡು ರೂಮಿರುವ ಪುಟ್ಟದಾದ ಹೆಂಚಿನ ಮನೆ ಕಟ್ಟಿದ.  ಅದೇನೊ ಸಂಭ್ರಮ, ಸಂತೋಷ ಮನೆಯವರೆಲ್ಲರ ಮುಖದಲ್ಲಿ.  ತಮ್ಮದೇ ಆದ ಸ್ವಂತ … Read more

ಆತ್ಮ(ಮಿಯ)ಗೆಳೆಯ: ಜಯಂತ್ ದೇಸಾಯಿ

ಅದೊಂದು ದಿನ ಸುಬ್ಬರಾಯ ಆಟ ಆಡುತ್ತಾ ಆಡುತ್ತಾ ಮನೆಯಿಂದ ಎಷ್ಟೋ ದೂರ ಇರೋ ಮೊಬೈಲ್ ಟವರ್ ಹತ್ತಿರ ಹೋದ. ಅಲ್ಲಿ ಬಿದ್ದಿದ್ದ ಬಾಲ್ ತೆಗೆದುಕೊಂಡು ಯಾರ ಜೊತೆ ಮಾತಾಡುತ್ತಾ ಇದ್ದಂತೆ ಮಾಡಿ ತಿರುಗಿ ವಾಪಸ ಬಂದ. ಬಂದ ಮಗನನ್ನು ತಾಯಿ ರಾಧಾ ಯಾರ್ ಜೊತೆ ಮಾತಾಡುತ್ತಿದ್ದೆ ಅಲ್ಲಿ ಅಂದರೆ, ಅಮ್ಮ ಅವನು ಯಾರೋ ನನ್ನ ಸಹಾಯ ಬೇಕು ಅಂತಿದ್ದ ಅಮ್ಮ ಕಾಯುತ್ತಿದ್ದಾಳೆ ನಾಳೆ ನೋಡುವ ಅಂತ ಹೇಳಿ ಬಂದೆ ಅಂದ. ಆದ್ರೆ ತಾಯಿಗೆ ಏನೋ ಅನುಮಾನ ಬಂದು … Read more

ಕಾಮಣ್ಣ ಮಕ್ಕಳೊ: ರೇಣುಕಾ ಕೋಡಗುಂಟಿ

ಅಂದು ಹೋಳಿ ಹುಣ್ಣಿಮೆಯ ದಿನ ಬಳಿಗಾರ ಓಣಿಯ ಮಕ್ಕಳೆಲ್ಲ ಸೇರಿ ರಾಗಾ, ಶರಣಾ, ಮಲ್ಲಾ, ಮಂಜಾ ಇವರ ಮುಂದಾಳತ್ವದಲ್ಲಿ ಒಟ್ಟು 12 ಜನ ಮಕ್ಕಳು ಕಾಮಣ್ಣನ್ನ ಕೂರಿಸಾಕ ನಿರ್ಧಾರ ಮಾಡಿದ್ದರು. ಅಲ್ಲಿ ಇಲ್ಲಿ ಸ್ವಲ್ಪ ಪಟ್ಟಿ ಎತ್ತಿ ಒಂದು ಟೆಂಟ್ ಹೊಡೆದು ತಯಾರಿ ಮಾಡಿದ್ದರು. ಒಂದು ಹಳೆ ಅಂಗಿ ಪ್ಯಾಂಟು ತಂದು ಅದರಲ್ಲಿ ಹುಲ್ಲು ತುಂಬಿ, ಅಂಗಿನ್ನು ಪ್ಯಾಂಟನ್ನು ಸೂಜಿ ದಾರದಿಂದ ಹೊಲಿದು ಕಾಮಣ್ಣನ್ನ ರೆಡಿ ಮಾಡಿದ್ದರು. ಕಾಮಣ್ಣನ ಹೊಟ್ಟೆಯನ್ನು ದಪ್ಪವಾಗಿ ಕಾಣುವಂತೆ ಮಾಡಿದ್ದರು. ಕುಂಬಾರ ಮನಿಯಿಂದ … Read more

ಮಾಯಕಾರ: ತಿರುಪತಿ ಭಂಗಿ

ತಮ್ಮ ತಲೆಯಲ್ಲಿ ಅಲ್ಲಲ್ಲಿ ಹುಟ್ಟಿಕೊಂಡ ಬಿಳಿ ಕೂದಲು ನೋಡಿದೊಡನೆ ಅವತ್ತು, ತನ್ನ ವಯಸ್ಸು ದಿನೆದಿನೆ ಮಂಜುಗಡ್ಡೆಯಂತೆ ಕರಗುತ್ತಿದೆ ಎಂಬ ಅರಿವಾಗಿ ಸಾವಕಾರ ಸಿದ್ದಪ್ಪನ ಮನದಲ್ಲಿ ಶೂನ್ಯ ಆವರಿಸಿತು.“ನನಗೆ ಮಕ್ಕಳಾಗಲಿಲ್ಲ, ಆಗುವುದೂ ಇಲ್ಲ, ನಾನೊಬ್ಬ ಎಲ್ಲ ಇದ್ದು, ಏನೂ.. ಇಲ್ಲದ ನತದೃಷ್ಟ, ಕೈಲೆ ಆಗದವನು, ಮಕ್ಕಳನ್ನು ಹುಟ್ಟಿಸಲು ಆಗದ ಶಂಡ ನಾನು…..”ನೂರೆಂಟು ವಿಚಾರಗಳನ್ನು ಮನದಲ್ಲಿ ರಾಶಿ ಹಾಕಿಕೊಂಡು ನೆನೆ-ನೆನೆದು ವ್ಯಥೆಪಟ್ಟ. ಯಾರಿಗೂ ಗೊತ್ತಾಗದಂತೆ ಬೆಂಗಳೂರು, ಕಾರವಾರ, ಕೇರಳ, ಸುತ್ತಾಡಿ ನಾ..ನೀ.. ಅನ್ನುವ ನಂಬರ್ ಒನ್ ವೈದ್ಯರ ಮುಂದೆ ತಾವು … Read more

ಪದ್ಮಜಾ: ಮಲ್ಲಪ್ಪ ಎಸ್.

“ಅಮ್ಮಾ ನನ್ನ ಪೆನ್ಸಿಲ್ ಬಾಕ್ಸ ಎಲ್ಲಿ?” ಅನಿತಾ ಮಾಡು ಹಾರಿ ಹೋಗುವಂತೆ ಕಿರುಚಿದಳು. “ ಅಲ್ಲೇ ಇರಬೇಕು ನೋಡೆ. ನೀನೇ ಅಲ್ವಾ ನಿನ್ನೆ ರಾತ್ರೆ ಜಾಮಿಟ್ರಿ ಮಾಡ್ತಾ ಇದ್ದವಳು?” ಪದ್ಮಜಾ ಒಲೆಯ ಮೇಲೆ ಇದ್ದ ಬಾಣಲೆಯಲ್ಲಿಯ ಒಗ್ಗರಣೆ ಸೀದು ಹೋಗುತ್ತಲ್ಲಾ ಎಂದು ಚಡಿಪಡಿಸುತ್ತಾ ಕೈ ಆಡಿಸಲು ಚಮಚಕ್ಕಾಗಿ ಹುಡುಕಾಡುತ್ತಾ ಬಾಗಿಲಕಡೆ ಮುಖ ಮಾಡಿ ಉತ್ತರಿಸುತ್ತಿದ್ದಳು. “ಅಮ್ಮಾ ನನ್ನ ಇನೊಂದು ಸಾಕ್ಸ ಕಾಣುತ್ತಿಲ್ಲ. ಲೇ ಅನಿ-ಶನಿ ನನ್ನ ಸಾಕ್ಸ ಎಲ್ಲಿ ಬಿಸಾಕಿದ್ದಿಯೇ?” ದಕ್ಷ ಒಂದು ಕಾಲಲ್ಲಿ ಸಾಕ್ಸ ಹಾಕಿ … Read more

ಕೆಂಪರೋಡ್..!: ತಿರುಪತಿ ಭಂಗಿ

ಕೆ.ಎ-28 ಎಫ್-6223 ಕರ್ನಾಟಕ ಸಾರಿಗೆ ಬಸ್ಸು ಗಾಳಿಯ ಎದೆ ಸೀಳಿಕೊಂಡು ಬಂವ್.. ವ್.. ವ್.. ಎಂದು ರಾಗ ಎಳೆಯುತ್ತ, ಕ್ಯಾಕರಸಿ ಹೊಗೆ ಉಗುಳುತ್ತ, ತಗ್ಗು ದಿನ್ನೆಯಲ್ಲಿ ಜಿಗಿದು, ಕುಣಿದು ದಣಿವರಿಯದೆ, ಚಾಲಕನ ಒತ್ತಡಕ್ಕೆ ಮನಿದು, ಮುನಿದು ‘ನಿಗಿನಿಗಿ’ ಕೆಂಡ ಉಗಳುವ ಸೂರಪ್ಪನ ಕಾಟಾಚಾರ ಸಹಿಸಿಕೊಂಡು ಬಿಜಾಪೂರದತ್ತ ಹೊರಟಾಗ ಬರೊಬ್ಬರಿ ಎರಡು ಗಂಟೆಯಾಗಿ ಮೇಲೆ ಒಂದಿಷ್ಟು ನಿಮಿಷಗಳಾಗಿದ್ದವು. ಖಾಸಗಿ ಬಸ್ಸಿನ ಸುಖಾಸನಗಳ ಮೇಲೆ ತಣ್ಣಗೆ ಕುಳಿತು ಬರಬೇಕೆಂದವನಿಗೆ, ಇದ್ದಕಿದ್ದಂತೆ ತಲೆಯಲ್ಲಿ ಅದೇನು ಸೇರಿಕೊಂಡಿತೋ, ವಿಠಲಸ್ವಾಮಿ ಸರಕಾರಿ ಬಸ್ಸಿನ ಬಾಗಿಲು … Read more

ಅವರೆಲ್ಲಿ, ಇವನೆಲ್ಲಿ…???: ಬಸವರಾಜ ಕಾಸೆ

ಅನಿಲ್ ಮತ್ತು ಸುನೀಲ್ ಕೆಲಸ ಮಾಡುವ ಕಂಪನಿ ಮಾಲೀಕನ ಮಗನ ಅದ್ದೂರಿ ಮದುವೆ ಅರಮನೆ ಮೈದಾನದಲ್ಲಿ ಏರ್ಪಡಿಸಲಾಗಿತ್ತು. ಸರದಿ ಸಾಲಿನಲ್ಲಿ ನಿಂತು ಶುಭಾಶಯ ಕೋರಿದ ನಂತರ ಔತಣಕೂಟಕ್ಕೆ ಆಗಮಿಸಿದರು. ವಿಧ ವಿಧವಾದ ಭಕ್ಷ್ಯ ಭೋಜನಗಳಿಂದ ಕೂಡಿದ ರುಚಿಯ ಪರಿಮಳ ಸುತ್ತಲೂ ಪಸರಿಸಿತ್ತು. ಎರಡು ನಿಮಿಷ ನಿಂತು ನೋಡಿದ ಸುನೀಲಗೆ ಆಶ್ಚರ್ಯ. “ಅರೇ ಅನಿಲ್, ಅಲ್ಲಿ ನೋಡೋ. ರಾಮಣ್ಣ, ಶಾಮಣ್ಣ, ಸೀನ ಎಲ್ಲಾ ಇಲ್ಲೇ ಇದಾರೆ” “ಎಲ್ಲೋ” “ಆ ಕಡೆ ಮತ್ತು ಈ ಕಡೆ ಎರಡು ಕೌಂಟರು ನೋಡೋ” … Read more

ಕತೆ: ಸೂರಿ ಹಾರ್ದಳ್ಳಿ

ಕಂಪನಿಯೊಂದರಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದು ಆರಂಕಿಯ ಸಂಬಳ ಪಡೆಯುತ್ತಿದ್ದ ಕಾಶೀಪತಿಗೆ ಸಾಲದ ತುರ್ತು ಅವಶ್ಯಕತೆಯೇನೂ ಇರದಿದ್ದರೂ ಆ ಜಾಹಿರಾತು ಅವನ ತಲೆಯಲ್ಲಿ ದುಷ್ಟ ಯೋಚನೆಗಳನ್ನು ತುಂಬಿದ್ದಂತೂ ನಿಜ. ಪತ್ರಿಕೆಯೊಂದರಲ್ಲಿ ಪ್ರಕಟವಾದ ‘ವೈಯಕ್ತಿಕ ಸಾಲ ಬೇಕಾಗಿದೆಯೇ? ಕೇವಲ ಮೂರು ಪರ್ಸೆಂಟ್ ಬಡ್ಡಿಯಲ್ಲಿ ಎರಡು ಕೋಟಿ ರೂ.ಗಳ ತನಕ ಸಾಲ ಪಡೆಯಿರಿ. ಸಂಪರ್ಕಿಸಿ..’ ಎಂಬ ಕ್ಲಾಸಿಫೈಡ್ ಜಾಹೀರಾತು ಬೆಳಗಿನ ಬಿಸಿ ಬಿಸಿ ಕಾಫಿ ಹೀರುತ್ತಿದ್ದ ಕಾಶೀಪತಿಯ ಕಣ್ಣಿಗೂ ಬಿದ್ದಿತ್ತು, ಅವನ ಹೆಂಡತಿ ಮಾದೇವಿಯ ಕಣ್ಣಿಗೂ ಬಿದ್ದಿತ್ತು. ಕಾಶೀಪತಿ ಪತ್ರಿಕೆಯ ಇತರ ಸುದ್ದಿಗಳನ್ನು … Read more

ಕಟಾವು: ವೀಣಾ ನಾಗರಾಜು

‘ಲಚ್ಚೀ ಏ ಲಚ್ಚೀ ಅದೇನು ಮಾಡ್ತಾ ಇದ್ದೀಯಮ್ಮೀ ಒಳಗೇ ಆಗಲೇ ಏಟೋತ್ತಾಗದೆ ಬಿರನೆ ಒಂದೆರಡು ತುತ್ತು ಉಂಡು ಬರಬಾರದಾ.? ಮಧ್ಯಾಹ್ನಕ್ಕೆ ಅಂತಾ ಒಂದು ಮುದ್ದೆ ಹೆಚ್ಚಾಗಿ ಬುತ್ತಿ ಕಟ್ಕೋ ಉಂಬಕೆ ವಸಿ ಸಮಯ ಆದರೂ ಸಿಗ್ತದೇ. ನೀ ಹಿಂಗೇ ಉಂಡಿದ್ದೆಲ್ಲಾ ಕೈಗೆ ಕಾಲಿಗೆ ಇಳಿಸ್ಕೊಂಡು ಕುಂತರೇ ಇವೊತ್ತೂ ಆ ಗುತ್ತಿಗೆದಾರ ಶಾಮಣ್ಣನ ತಾವ ಉಗಿಸಿಕೊಳ್ಳೋದರ ಜೊತಿಗೆ ಒಂದು ಗಂಟೆ ಸಂಬಳಕ್ಕೂ ಕತ್ತರಿ ಹಾಕಿಸ್ಕೋಬೇಕಾಗುತ್ತೆ. ಮೊದಲೇ ನಮ್ಮ ಗ್ರಹಚಾರ ಬೇರೆ ಸರಿ ಇಲ್ಲಾ ನಿನ್ನೆ ಸ್ವಲ್ಪ ತಡವಾಗಿ ಹೋಗಿದ್ದಕ್ಕೆ … Read more

ಕುಯಿರನ ಕನಸು ಮತ್ತು ಮಗಳು: ಜಗದೀಶ ಗೊರೋಬಾಳ

ಅಂದು ಸಾವಂತಿಗೆ ಅದೇಕೋ ತಲೆನೋವು ವಿಪರೀತವಾಗಿತ್ತು. ಮನೆಯಂದಾಚೆ ಹೋಗಲಾರದಷ್ಟು ಅಸ್ವಸ್ಥಳಾಗಿದ್ದಳು. ರಾತ್ರಿಯಿಡಿ ಅವಳ ತಲೆಯಲ್ಲಿ ಅನಿರೀಕ್ಷಿತ ಯೋಚನೆಗಳು ಲಗ್ಗೆ ಇಟ್ಟಿದ್ದೇ ಇದಕ್ಕೆ ಕಾರಣವಿರಬಹುದು. “ ನನಗೂ ಅವರಂತಾದರೇ ನನ್ನ ಗುಲಾಬಿಯ ಗತಿಯೇನು? ಗುಲಾಬಿಗೆ ಊಟ ಯಾರು ಕೊಡ್ತಾರೆ? ಗುಲಾಬಿಯನ್ನು ಶಾಲೇಗ್ ಕಳಿಸೋರ್ಯಾರು? ಗುಲಾಬಿಗೆ ರಾತ್ರಿ ಕತೆ ಹೇಳಿ ಮಲಗಿಸೋರ್ಯಾರು” ಎಂಬ ಆಲೋಚನೆಗಳಿಂದ ಸಾವಂತಿಯ ತಲೆ ಚಿತ್ರವಿಚಿತ್ರವಾಗಿತ್ತು. ಈ ರೀತಿ ಯೋಚನೆಗಳಿಂದ ಸಾವಂತಿ ಬೆಚ್ಚಿಬೀಳಲು ಕಾರಣವಿತ್ತು. ಸಾವಂತಿಯದು ಚಿಕ್ಕ ಬಡ ಕುಟುಂಬ. ಗಂಡ ಕುಯಿರ ಮತ್ತು ಎಂಟು ವರ್ಷದ … Read more

ದಾಳ..: ಸತೀಶ್ ಶೆಟ್ಟಿ ವಕ್ವಾಡಿ..

ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಬೇಸಿಗೆಯ ಬಿಸಿಲಿನ ಭರಕ್ಕೆ ಬಳಲಿದ ಧರೆ ತಂಪಾಗಿತ್ತು. ಮಧ್ಯಾಹ್ನವಾದರೂ , ಆಗಸದಲ್ಲಿ ಕಪ್ಪುಗಟ್ಟಿದ ಮೋಡಗಳ ದಾಳಿಗೆ ಬೆದರಿ ಸೂರ್ಯ ಕಣ್ಣು ತೆರೆದಿರಲಿಲ್ಲ. ಇಂದು ಸಹ ಭುವಿಯ ಮೇಲೆ ಮತ್ತೆ ದಾಳಿ ಮಾಡಲು ಮೋಡಗಳ ದಂಡು ಸಜ್ಜಾಗುತ್ತಿತ್ತು, ಪಡುವಣದ ಕಡಲ ಕಡೆಯಿಂದ ಬೀಸುತ್ತಿರುವ ಗಾಳಿ ಸಂಜೆಯ ಮೇಘರಾಜನ ಅಬ್ಬರಕ್ಕೆ ಪಕ್ಕವಾದ್ಯವೆಂಬಂತೆ ಜೋರಾಗಿ ಬೀಸುತ್ತಿತ್ತು. ಇಂತಹ ತಣ್ಣಗಿನ ವಾತಾವರಣದಲ್ಲೂ ಅಲ್ಲಿ ನೆರೆದವರೆಲ್ಲ ಬೆವತ್ತಿದ್ದರು. ನರಹರಿ ಒಳಬೈಲು ಅವರ ಮನೆಯ ಫ್ಯಾನುಗಳು ಅವಿರತವಾಗಿ ಕಾರ್ಯನಿರ್ವಹಿಸುತ್ತಿದ್ದರೂ … Read more

ಕನ್ನಡಿಗಂಟದ ಬಿಂದಿ: ಡಾ.ಅಜಿತ್ ಹರೀಶಿ

ಜೇಡ ತನ್ನೊಳಗಿನಿಂದ ತಾನು ಅಂಟನ್ನು ಸ್ರವಿಸುತ್ತಾ ಬಲೆ ನೇಯುತ್ತಲೇ ಇತ್ತು. ಸೂರ್ಯನ ಕಿರಣಗಳು ಬಲೆಯ ಮೇಲೆ ಬಿದ್ದಾಗ ಕಣ್ಣಿಗೆ ಬಣ್ಣದೋಕುಳಿಯಾಗುತ್ತಿತ್ತು. ದಿನವೂ ಅದೊಂದು ಚಿತ್ತಾಪಹಾರಿಯಾದ ದೃಶ್ಯವಾಗಿತ್ತು. ಆದರೆ ಇಂದೇಕೋ ಕಿರಿಕಿರಿ ಉಂಟುಮಾಡುತ್ತಿದೆ ಎಂದು ಅನ್ನಿಸಿತು. ಕೆಲಸದ ರಾಜಮ್ಮ ಅದಾಗಲೇ ನನ್ನ ರೂಮಿಗೆ ಬಂದು ನೆಲ ಗುಡಿಸುತ್ತಿದ್ದಳು. ರಾಜಮ್ಮ, ಮೇಲೆಲ್ಲಾ ನೋಡು, ಕಸ ಹೊಡೆಯೋದೇ ಇಲ್ಲ. ಹೇಳದೇ ಯಾವ ಕೆಲಸವನ್ನೂ ಇತ್ತೀಚೆಗೆ ನೀನು ಮಾಡಲ್ಲ’ ತುಸು ಗಡಸು ಧ್ವನಿಯಲ್ಲಿ ಜೇಡರ ಬಲೆ ತೋರಿಸುತ್ತಾ ಹೇಳಿದೆ. ಅಯ್ಯೋ, ಇದೊಳ್ಳೆ ಆಯ್ತಲ್ಲಾ … Read more

ಅಗ್ನಿ ಸ್ಪರ್ಶ: ಭಾರ್ಗವಿ ಜೋಶಿ

ಅಲ್ಲಿ ಜನಸಾಗರ ನೆರೆದಿತ್ತು, ಜಾತಿ ಮತದ ಬೇಧವಿಲ್ಲದೆ ನೆರೆದಿದ್ದ ಜನ.. ಎಲ್ಲರಲ್ಲೂ ಮನೆ ಮಾಡಿದ ಮೌನ, ತುಂಬಿದ ಕಣ್ಣೀರು. ಕಳೆದುಕೊಂಡ ಮಾಣಿಕ್ಯ ಬದುಕಿದ ರೀತಿಯೇ ಹಾಗಿತ್ತು. ಶ್ರೀನಿವಾಸ ರಾಯರು ತಮ್ಮ 60ವರ್ಷ ಸಾರ್ಥಕ ಬದುಕಿನ ಪಯಣ ಮುಗಿಸಿ ಪರಲೋಕ ಸೇರಿದ್ದರು. ಬದುಕಿರುವಷ್ಟು ದಿನ ಆದರ್ಶ ಜೀವನ ನಡೆಸಿದ್ದರು, ಜಾತಿ ಭೇಧವಿಲ್ಲದೆ, ಮೇಲು ಕೀಳು, ಬಡವ ಶ್ರೀಮಂತ ಎಂಬ ಬೇಧವಿಲ್ಲದೆ ಎಲ್ಲರನ್ನು ಪ್ರೀತಿಸುತ್ತಿದ್ದರು. ಪರೋಪಕಾರಕ್ಕೆ ಹೆಸರಾಗಿದ್ದರು. ಅನಾರೋಗ್ಯ, ಮಕ್ಕಳ ವಿದ್ಯಾಭ್ಯಾಸ ಹೀಗೆ ಹಲವಾರು ಇವರಿಂದ ಸಹಾಯ ಪಡೆದಿದ್ದರು. ಇವರ … Read more

ನನ್ನವಳ ನೆನಪು: ಶ್ರೀರಂಗ. ಕೆ. ಆರ್

ಅದೇನೋ ಅಂದು ಮನಸ್ಸು ತಳಮಳಗೊಂಡಿತ್ತು. ಮಲಗಿ ಮೂರು ಸುತ್ತು ಹೊರಳಾಡಿದರೂ ಕಣ್ಣಿಗೆ ನಿದ್ದೆ ಹತ್ತಲಿಲ್ಲ. ಆಗ ನಿನ್ನಪ್ಪನಿಂದ ಕರೆಬಂದದ್ದು. ನಿನಗೆ ಹೆರಿಗೆ ನೋವು, ಆಸ್ಪತ್ರೆಯಲ್ಲಿದ್ದೇವೆ ಎಂದು. ಆಗಲೇ ಓಡಿ ಬರಬೇಕೆಂದುಕೊಂಡೆ. ಪರವಾಗಿಲ್ಲ ನಾವೆಲ್ಲರೂ ಇದ್ದೇವೆ ತೊಂದರೆಯಿಲ್ಲ, ಬೆಳಗ್ಗೆ ಬಂದರಾಯಿತು ಎಂದರು ಮಾವ. ಆದರೂ ನನಗೆ ಸಮಾಧಾನವಿರಲಿಲ್ಲ. ನಿನ್ನ ಕನಸುಗಳಿಲ್ಲದೆ ಮಲಗಿದವನೇ ಅಲ್ಲ ನಾನು, ಅಂದೇಕೋ ಕಣ್ಣುಗಳು ಮುಚ್ಚಲೇ ಇಲ್ಲ. ಮಲಗಿದ್ದ ಕೋಣೆಯ ಮೇಲ್ಛಾವಣಿಯ ಪರದೆಯ ಮೇಲೆ ನಿನ್ನ ಜೊತೆ ಕಳೆದ ಕ್ಷಣಗಳ ನೆನಪುಗಳು ಮೂಡಿಬರುತ್ತಿದ್ದವು. ಅವನ್ನೇ ನೋಡುತ್ತ … Read more

ಹೊಸ ಬೆಳಕು: ವೈ. ಬಿ. ಕಡಕೋಳ

ವಂದನಾಳ ಬಾಳಿನಲ್ಲಿ ಏನೋ ದುಗುಡ. ಮುಖ ಸಪ್ಪೆಯಿಂದ ಮನೆಗೆಲಸದಲ್ಲಿ ಆಸಕ್ತಿ ಇಲ್ಲದಂತೆ ಮೋಬೈಲ್‍ದಲ್ಲಿ ಏನನ್ನೋ ಟೈಪಿಸುತ್ತ ಕುಳಿತಿದ್ದಳು. ಅದೇ ಸಂದರ್ಭ ಆ ಕಡೆಯಿಂದ ಅವಳ ಗೆಳತಿಯ ಕರೆ ಬಂತು ”ಹಲೋ ವಂದನಾ ಏನು ಮಾಡುತ್ತಿರುವೆ. ”? ಪ್ರಶ್ನೆ ಬರುವುದಷ್ಟೇ ತಡ ದುಃಖ ಉಮ್ಮಳಿಸಿ ಬಂದು ಅಳತೊಡಗಿದಳು. ಆ ಕಡೆಯಿಂದ ಮಾತೇ ಬರದಾದಾಗ ಇವಳ ಅಳುವ ಧ್ವನಿಯನ್ನು ಕೇಳಿ ಸುಮ ”ಯಾಕೆ ಏನಾಯಿತೇ ನಿನಗೆ, ಯಾಕೆ ಈ ಅಳು. ”? ಎಂದೆಲ್ಲ ಪ್ರಶ್ನೆಗಳ ಸುರಿಮಳೆಯೇ ಸುಮಳಿಂದ ಬಂದಾಗ ವಂದನಾ … Read more

ನ್ಯಾನೋ ಕಥೆಗಳು: ವೆಂಕಟೇಶ್‌ ಚಾಗಿ

೧) ಹೊಸ ವರ್ಷಹೊಸ ವರ್ಷ ಬಂದಿತೆಂದು ಅವನಿಗೆ ತುಂಬ ಖುಷಿ. ಹೊಸ ವರ್ಷದ ಸಡಗರ ಭರ್ಜರಿಯಾಗಬೇಕೆಂಬುದು ಅವನ ಅಭಿಲಾಷೆ. ಅದರಂತೆ ತನ್ನ ಸ್ನೇಹಿತರೊಂದಿಗೆ ಸೇರಿ ದೊಡ್ಡ ಔತಣಕೂಟವನ್ನೆ ಏರ್ಪಡಿಸಿದ.ಮೋಜು ಮಸ್ತಿಯೊಂದಿಗೆ ಪಾರ್ಟಿ ಜೋರಾಗಿಯೇ ಆಯ್ತು. ಹೊಸ ವರ್ಷಕ್ಕೆ ಹೊಸ ಕ್ಯಾಲೆಂಡರ್ ಖರೀದಿಸಿದ. ಹೊಸ ಡೈರಿಯೊಂದನ್ನು ಖರೀದಿ ಮಾಡಿದ. ಡೈರಿಯ ಮೊದಲ ಪುಟದಲ್ಲಿ ತಾನು ಈ ವರ್ಷದಲ್ಲಿ ಕೈಗೊಳ್ಳ ಲೇಬೇಕಾದ ಕಾರ್ಯಗಳನ್ನು ಪಟ್ಟಿ ಮಾಡಿದ. ಸನ್ನಡತೆ , ನೈತಿಕತೆ ,ಉತ್ತಮ ಹವ್ಯಾಸ , ಉಳಿತಾಯ ಮುಂತಾದ ಗುಣಗಳನ್ನು ರೂಢಿಸಿಕೊಳ್ಳಲೇಬೇಕೆಂದು … Read more

ರೈತ (ಪುಟ್ಟ ಕತೆ): ವೆಂಕಟೇಶ ಚಾಗಿ

ಆಗ ನಾನಿನ್ನು  ಪುಟ್ಟ ಹುಡುಗ. ಎರಡೇ ತರಗತಿಯಲ್ಲಿ ಓದುತ್ತಿರುವಾಗಲೇ ಅಪ್ಪ ನನ್ನನ್ನು ಹೊಲಕ್ಕೆ ಕರೆದುಕೊಂಡು ಹೋಗುತ್ತಿದ್ದ. ಅಪ್ಪನಿಗೆ “ಅಪ್ಪಾ , ನಾನೂ ರೈತ ಆಗ್ಲಾ? ” ಅಂತ ಕೇಳಿದ್ದೆ.  ಅಪ್ಪನ ಕೆಲಸಗಳೋ ಒಂದಲ್ಲ ಎರಡಲ್ಲ. ನಸುಕಿನ ಜಾವ ಏಳುತ್ತಲೇ ಅಪ್ಪನ ಕಾಯಕ ಶುರುವಾಗುತ್ತಿತ್ತು. ಅಮ್ಮ ಮಾಡಿಕೊಟ್ಟ ನಾಲ್ಕೈದು ರೊಟ್ಟಿ  , ಪಲ್ಲೆ ಒಂದು ಬಟ್ಟೆಯಲ್ಲಿ ಕಟ್ಟಿಕೊಂಡು ಬಾಯಾರಿಕೆಗಾಗಿ ಮಣ್ಣಿನ ಬಾಟಲ್ ನಲ್ಲಿ ನೀರು ತುಂಬಿಕೊಂಡು ಎರಡು ಎತ್ತುಗಳನ್ನು ಹಿಡಿದು ಹೊರಟರೆ ಮುಗೀತು ಮತ್ತೆ ಸಂಜೆ ಆರಕ್ಕೆ ಅಪ್ಪ … Read more