ಸೊಕ್ಕಿನ ಕೋಗಿಲೆ: ಚೇತನ್ ಕೆ ಹೊನ್ನವಿಲೆ
ಅವಳು ಇದ್ದದ್ದು ಹಾಗೆ!! ಸೊಕ್ಕಿನ ಕೋಗಿಲೆ ಹಾಗೆ!! ಆ ಕೋಗಿಲೆಯ ಕಂಠಕ್ಕೆ ತೂಗದ ತಲೆಗಳಿಲ್ಲ, ಮಣಿಯದ ಮನಗಳಿಲ್ಲ. ಹೆಸರು ಪೂರ್ವಿ!! ಮನೆಯವರು ಪ್ರೀತಿಯಿಂದ ಇಟ್ಟ ಹೆಸರು. ಹಾಡೋದಕ್ಕೆ ಅಂತಲೇ ಹುಟ್ಟಿದವಳು. ಹಾಡಲು ನಿಂತರೆ ಸಂಧಿಸುತ್ತಿದ್ದುದು, ಕರ್ಣಗಳನ್ನಲ್ಲ!! ತೊಯ್ದ ಆತ್ಮಗಳನ್ನ!! ಆ ತನ್ಮಯತೆಯನ್ನು, ಅವಳು ಅದನ್ನು ಅನುಭವಿಸುವ ಸೊಬಗನ್ನು ನೋಡಲು, ಕಲಾರಸಿಕರು ಹಾತೊರೆಯುವರು. ಸೊಕ್ಕಿನ ಕಂಠದಿಂದ ಬರುತ್ತಿದ್ದ ಧ್ವನಿ , ಹೃದಯ ಕಿತ್ತು ಬಂದಂತೆ. ಸಹಜ ಮಾತಿನಲ್ಲೂ, ದೂರಬೆಟ್ಟದ ದೇವಸ್ಥಾನದ ಗಂಟೆ ಹೊಡೆದಂತೆ. ಕೊರಳಿನ ಮಾಧುರ್ಯ!! … Read more