ಪ್ರೀತಿ ಹುಟ್ಟೀತು ಹೇಗೆ?: ಎಂ ನಾಗರಾಜ ಶೆಟ್ಟಿ
ಹುಟ್ಟು, ಬಣ್ಣ, ಬಟ್ಟೆಗಳ ಗುರುತಿನಲ್ಲಿತಿನ್ನುವ ಅನ್ನ, ಇರುವ ಜಾಗ, ಮಾಡುವ ಕೆಲಸಅವರಿವರಲ್ಲಿ ಹಂಚಿ,ಮುಟ್ಟದೆಯೇ ದೂರ ನಿಲ್ಲುವಲ್ಲಿಪ್ರೀತಿ ಹುಟ್ಟೀತು ಹೇಗೆ? ಮನೆಗೊಬ್ಬ ದೇವನ ಮಾಡಿಇಲ್ಲಿಗಿಂತ ಅಲ್ಲಿಯೇ ಸರಿಯೆಂದು ಹಾಡಿಇಂದಿನದಕ್ಕೆ ಅಂದಿನ ಕಾರಣ ಗಂಟು ಹಾಕಿತೊತ್ತುಗಳಾಗಿಸಿದವರ ನಡುವೆಪ್ರೀತಿ ಹುಟ್ಟೀತು ಹೇಗೆ? ಮನಸ್ಸುಗಳ ಸುಟ್ಟು ಬೂದಿ ಮಾಡಿಶಾಖದ ಸುತ್ತ ಕುಣಿವವರಕರಕಲು ಎದೆಗಳಲ್ಲಿಪ್ರೀತಿ ಹುಟ್ಟೀತು ಹೇಗೆ? ಅವನು ನಾನೆಂದು, ನಾನು ಅವನೆಂದುಅವನೂ ಅವಳೂ ಒಂದೇ ಎಂದುನಮ್ಮನ್ನು ನಾವೇ ಅರಿಯದೆಪ್ರೀತಿ ಹುಟ್ಟೀತು ಹೇಗೆ? -ಎಂ ನಾಗರಾಜ ಶೆಟ್ಟಿ