ಪಂಜು ಕಾವ್ಯಧಾರೆ ೨

ಅಮ್ಮ ಎಂದರೆ……. ೧ ನಡೆದ ದಾರಿಯಲಿ ಎಷ್ಟೊಂದು ಹೆಜ್ಜೆಗಳು ಅಲ್ಲೆಲ್ಲೋ ದೂರದಲ್ಲಿ ಸಣ್ಣ- ದೊಡ್ಡ ಹೆಜ್ಜೆಗಳಿವೆ; ಒಂದು ನನ್ನದು ಮತ್ತೊಂದು ಈಗ ಮೃದುಪಾದವೂರುವ ನನ್ನಮ್ಮನದು! ೨ ಅಮ್ಮ ರೊಟ್ಟಿ ಬಡಿವಾಗ ಒಲೆ ಉರಿಯ ಝಳದ ಮುಂದೆ ಲೆಕ್ಕವಿಲ್ಲದಷ್ಟು ತಿನ್ನುತ್ತಿದ್ದೆವು ಈಗ ರೊಟ್ಟ ಬಡಿಲಾರದ ಅಮ್ಮನಿಗೆ ಶೆಟ್ಟರಂಗಡಿಯಿಂದ ಲೆಕ್ಕ ಮಾಡಿ ರೊಟ್ಟಿ ತಂದಿತ್ತರೆ ಮಾತಾಡದ ಅಮ್ಮ ನಗುತ್ತಿದ್ದಾಳೆ! ೩ ಉಡಿಸಿ ಉಣಿಸಿ ಖುಷಿ ಪಟ್ಟ ಅಮ್ಮ ಇದೀಗ ಕೈ ತುತ್ತಿಗೆ ಬಾಯ್ತೆರೆಯುತ್ತಿದ್ದಾಳೆ! ೪ ಕೈ ಹಿಡಿದು ನಡೆ- ನುಡಿ … Read more

ಕಥನ ಕವಿತೆ: ಫಕೀರ

    ಕಲಾಕುಂಜದ ಸಂತೆಯಲ್ಲಿ ಅಕ್ಕಪಕ್ಕ ಕಲಾಚಿತ್ರಗಳು ವರ್ಣಭಿತ್ತಿಗಳು ಎಣಿಕೆಗೆ ಸಿಗದಷ್ಟು ಹಾದಿಗುಂಟ ಮೈಲಿಗಟ್ಟಲೇ ಲಕ್ಷಲಕ್ಷ ಜನವೋ ಜನ ಸಾವಿರಾರು ಚಿತ್ರಕಲಾವಿದರು ತಮ್ಮ ತಮ್ಮ ಕಲ್ಪನೆಯ ಕನಸುಗಳೊಂದಿಗೆ ನಿಂತಿಹರು ಚಿತ್ರಪಟದ ಎದುರು -1- ಬಣ್ಣಗಳು ಅಂದು ಮಾತನಾಡುತ್ತಿವೆ ಚಿತ್ರಪಟಗಳು ಅತ್ತಿಂದತ್ತ ಓಡಾಡುತ್ತಿವೆ ಕಲಾರಸಿಕರ ಮನದೊಳಗೆ ಕಲಾವಿದನ ಕಲ್ಪನೆಯ ಚಿತ್ರಗಳು ಅಂದು ಮಾರಾಟಕ್ಕಿವೆ ಲಕ್ಷೋಪಲಕ್ಷ ಕಂಗಳ ಚಿತ್ತ ಅಕ್ಕಪಕ್ಕದಲಿ ನಿಂತ ಚಿತ್ರಪಟಗಳತ್ತ ಅರಸುತಿವೆ ಎಡಬಿಡದೆ ಕಣ್ಣುಗಳನು ಮಿಟುಕಿಸುತಿವೆ ತಮ್ಮನು ಕೊಳ್ಳುವ ರಸಿಕರತ್ತ ಆಸೆ ಕಂಗಳದಿ ಬೆರಗು ಹುಟ್ಟಿಸುವಂತೆ ಕಲಾವಿದನ … Read more

ಪಂಜು ಕಾವ್ಯಧಾರೆ

ಹೆಣ್ಣೊಂದು ತಾಯ್ತನದ ಕಣ್ಣು ಬಾಲ್ಯದಲಿ ಅಂಕುರ ಬೆಳೆಯುತ್ತ ಹೂವು ಸುಮಧುರ ಅಮ್ಮನಿಗೆ ಸಹೋದರಿ ಅಪ್ಪನಿಗೆ ಭಾಗ್ಯದ ಗರಿ ಮನೆ ಬೆಳಗುವ ಜ್ಯೋತಿ ನೀನಿಲ್ಲದ ಜಗವೊಂದು ಭೀತಿ ಹೆಣ್ಣೊಂದು ಅಗಾಧ ಶಕ್ತಿ ಪವಾಡದಂತೆ, ಇದೊಂದು ಸೃಷ್ಟಿ ಒಲಿದರೆ ನಾರಿ ಮುನಿದರೆ ಮಾರಿ ಈ ಗಾಧೆಗೆ ಸರಿ ಸಾಟಿ ಬರೋಬರಿ ಸಂಗೀತ ಸಾಹಿತ್ಯ ದೇವತೆ ಸುಂದರ, ನಯನ ಮನೋಹರ ನೀನಿಲ್ಲದ ಯುಗವೇ ಅವನತಿ ಹೆಣ್ಣೊಂದು ಭಕ್ತಿ, ಕೈ ಮುಗಿಯಲು ಜನ್ಮ ದಾತೆಯ ರೂಪ ಸದಾ ಮಿಗಿಲು ಒಡಲ ಪ್ರೀತಿಯ ಸಾರುವ … Read more

ಪಂಜು ಕಾವ್ಯಧಾರೆ

ಅಜ್ಜ ಬರುವುದ ಇನ್ನೂ ಬಿಟ್ಟಿಲ್ಲ..!! ಅಗೋ..! ನೋಡು ಅಲ್ಲಿ..? ಗೋಡೆನೆತ್ತಿಯ ಮೊಳೆಯಲ್ಲಿ ಅಹಿಂಸಾ ಮೂರುತಿಯ ಬಂಧಿಸಿ ಕಟ್ಟಿ ಹಾಕಿದಂತೆ ನೇತು ಹಾಕಿದೆ ಬಿಟ್ಟ ಕಣ್ಣು ಬಿಟ್ಟ ಹಾಗೆ ಹುಬ್ಬುಗಂಟಿಕ್ಕದೆ ಒಮ್ಮೆ ನಸು ನಗುತ್ತಾ ಜೀಸಸ್ ಕ್ರಿಸ್ತನಂತೆ ಕಾಣುತ್ತಿದ್ದಾನೆ..!! ನನ್ನ ತಾತ ಕೋಲು ಹಿಡಿದು ಸುಕ್ಕುಗಟ್ಟಿದ ಮೈಯ್ಯಲ್ಲಿ ತುಂಡು ಬಟ್ಟೆ ತೊಟ್ಟು ಮೇಲೆ ಹೊದಿಕೆ ಹೊದ್ದು ಕಾಲ್ನಡಿಗೆಯಲ್ಲೇ ಯಾರನ್ನೋ ? ಯಾವುದನ್ನೋ ! ಅರಸುತ್ತಾ , ನಡೆಯುತ್ತಾ ಹೊರಟಂತಿದೆ…!! ಕಪ್ಪು ಜನಾಂಗೀಯ ನಿಂದನೆ ದಹಿಸಿ ಅಹಿಂಸೆಯಿಂದ ಹಿಂಸೆ ಜಯಿಸಿ … Read more

ಪಂಜು ಕಾವ್ಯಧಾರೆ

ನಿನ್ನ ಅಕ್ಷರ ಪ್ರೀತಿ ಅಮರವಾಗಲಿ (ಜಿಎಸ್‍ಎಸ್ ನೆನಪು) ಕನ್ನಡ ಸಾಹಿತ್ಯದ ಕಿರೀಟವಾದೆ ಕನ್ನಡಿಗರ ಮನದ ಮುಕುಟವಾದೆ ಪ್ರೀತಿ ಇಲ್ಲದ ಮೇಲೆ ಎಂದು ಎಲ್ಲರಿಗೂ ಪ್ರೀತಿಯ ಅರ್ಥ ತಿಳಿಸಿದೆ ಕಾಣದ ಊರಿಗೆ ನಿನ್ನ ಪಯಣ ಸದಾ ತುಂಬಿರುವೆ ಜನಮನ ಕನ್ನಡ ಭೂಮಿಯಲ್ಲಿರುವ ಒಂದೊಂದು ಕಣಕಣ ಹಾಡಿ ಹೊಗಳಿದೆ ನಿನ್ನ ಗುಣಗಾನ ಕನ್ನಡಾಂಬೆಯ ಪುತ್ರ ನೀ ಕನ್ನಡಿಗರೆಲ್ಲರ ಮಿತ್ರ ನೀ ದೇಹದಿ ಆತ್ಮ ಅಗಲಿದರೇನು ಭಾವದಿ, ಜೀವದಿ ನಿನ್ನ ನೆನಪು ಅಳಿಯುವುದೇನು? ನಾನು ನೊಂದೆ, ಒಮ್ಮೆ ನಿನ್ನ ನೋಡಬೇಕೆಂಬ ಆಸೆ … Read more

ಪಂಜು ಕಾವ್ಯಧಾರೆ

ಅದೆಷ್ಟು ಕಷ್ಟ ಬುದ್ಧನಾಗುವುದೆಂದರೆ…! ಅದೆಷ್ಟು ಕಷ್ಟ ಈಗ ಬುದ್ಧನಾಗುವುದೆಂದರೆ ಆಸೆಯ ಬಿಡುವ ಯುದ್ಧ ಒಂದೆಡೆಯಾದರೆ ಸಕಲವ ತ್ಯಜಿಸಿ ಎದ್ದು ಬಿಡುವುದು ಇನ್ನೊಂದು! ಕಲ್ಲೆಸೆದವರ ಎದೆಯಲ್ಲಿ ಪ್ರೀತಿ ತುಂಬಿ ಬೆರಳ ಹಾರ ಮಾಡಿದವರ ಕೊರಳಲ್ಲಿ ಶಾಂತಿ ಧ್ವನಿ ನುಡಿಸಿ ರೋಗಕ್ಕೆ ಹೆದರಿ, ಸಾವಿಗೆ ಬೆದರಿ ಮಧ್ಯರಾತ್ರಿ ದಿಗ್ಗನೆ ಎದ್ದು ನಡೆದುಬಿಡುವುದೆಂದರೆ ಉದ್ದುದ್ದ, ಮಾರುದ್ದದ ಬೋಧನೆ ನೀಡದೇ ಸದ್ದು ಮಾಡದೆ ಭೋಧಿಯಡಿಯಲ್ಲಿ ಸಿದ್ಧಿ ಪಡೆದು ಸಿದ್ದಾರ್ಥನ ನಿರ್ವಾಣ ಮಾಡಿ ಗೌತಮನ ನಿರ್ಮಾಣ ಹೊಂದುವುದೆಂದರೆ ಕಡು ಕಷ್ಟವೇ ಅದು!! ಬುದ್ಧನಾಗುವುದೆಂದರೆ ಬರೀ … Read more

ಪಂಜು ಕಾವ್ಯಧಾರೆ

ಒಡೆದ ನೆನಪಿನ ಚೂರುಗಳು…!! ಆ ತೋರು ಬೆರಳು ಸಹ ಕಣ್ಣ ಮಿಟಿಗಿಸುತ್ತ ಮೊಬೈಲ್ನ ಮೂರು ಗಳಿಗೆಯೂ ಬ್ಲಾಕ್ ಮಾಡಿರುವ ವಾಟ್ಸಾಪ್ ನಂಬರ್, ಫೇಸ್ಬುಕ್ನ ಐಡಿ ನೋಡುವುದ ಬಿಡೋದಿಲ್ಲ ಅದಕ್ಕೂ ತಿಳಿದಿರಬೇಕು ನಾವು ದೂರವಾಗಿರುವ ವಿಷಯವು ಪದೇ ಪದೇ ನಿನ್ನ ನೆನಪಿಸುತ್ತಿದೆ !! ನೋಡು ನಮ್ಮನಗಲಿಕೆಯ ಕಂಡು ಆ ಬಸ್ಸು – ಲಾರಿ, ಕಾರು- ಸ್ಕೂಟರುಗಳು ಒಂದೇ ಸಮನೇ ಜೋರು ಸದ್ದು ಮಾಡಿ ರಸ್ತೆಗುಂಟ ಕೇಕೆ ಹಾಕುತ್ತ ಹೊಟ್ಟೆ ಉರಿಸುತ್ತಿವೆ…!! ಒಡೆದ ಕನ್ನಡಿಯೂ ಹೇಳುತ್ತಿತ್ತು ಛಿದ್ರ -ಛಿದ್ರವಾದ ಚೂರುಗಳಲ್ಲಿಯೂ … Read more

ಪಂಜು ಕಾವ್ಯಧಾರೆ

**ಮಾರಿಬಲೆಯಾ ** ಬಲೆಯೆತ್ತಿ ಹೊರಟಿಹರು ಬೆಸ್ತರು ಸಡಗರದಿ ಜಡಿಮಳೇಲಿ ಕಡಲ ತಡಿಗೆ I ಇಂದು ಸಿಕ್ಕಾವೋ? ಭೂತಾಯಿ ಕೊಡವಾಯಿ ಕಂಡಿಕಿ ಜಾರಿ ನನ್ನ ಬಲಿಗೆ I ಬಂದಿಹುದು ಮಳೆಗಾಲ ಬೀಸುವುದೇ ಬಲೆ ಈಗ! ಸಿಕ್ಕೇ ಸಿಕ್ಕಾವು ಎಸುಡಿ ಸಿಗಡಿ I ಮರವಂತೆ ಕಡೆಹೋಪ ಬರುವುದು ಬಾರಿ ಬೆಲೆ ಸಿಕ್ಕರೆ ಭೂತಾಯಿ ಕಂಡಿಕಿ I ಬೋರ್ಗರೆವ ಕಡಲೆಡೆಗೆ ಬಂದಾನೋ ಮೊಗವೀರ ಬೀಸಿದಾ *ಮಾರಿ**ಬಲೆಯಾ I ನನ್ನಯ ಮನೆಯಿಂದ ದೂರಾದ ಮೈಲುವರೆಗೂ ಇಂದು ನನ್ನದೇ ಬಲೆಯೂ I ಬಲೆ ಬಿಡುವುದು … Read more

ಪಂಜು ಕಾವ್ಯಧಾರೆ

೧. *ಒಲವಿನ ಕನಸು * ಕಂಡಿರದ ಮೊಗದ ಮೂರ್ತಿಯನು ಕೆತ್ತಿ… ತನ್ನಿಷ್ಟದ ಭಾವಗಳ ಅದರೆದೆಗೆ ಮೆತ್ತಿ… ಕಣ್ಣಕಾಂತಿಯಲಿ ಸವಿದು ಒಲವ ಸೊಬಗನು… ನೆನಪು-ಕನಸುಗಳ ಜಂಟಿ ಓಲಗದಿ… ಸಾಕ್ಷ್ಯ ಬರೆದಿತ್ತು ಚಂದ್ರಮನ ಕಾಂತಿ… ೨. *ತೆರೆದ ಪುಸ್ತಕದಂತ ಬದುಕು* ತೆರೆದ ಪುಸ್ತಕದಂತ ಬದುಕು ಓದುಗರು ಹಲವರು ಹಲವು ತೆರನವರು ತೆಗಳುವವರು, ಹೊಗಳುವವರು ಓದಿಯು ಓದದಂತಿರುವವರು ಓದದೆಯು ಜರೆಯುವವರು ಓದದೆಯು ಹೊಗಳುವವರು ಎಲ್ಲರ ಬಾಯಿಗೆ ಆಹಾರವಾಗೋ ಬಾಳು ತೆರೆದ ಪುಸ್ತಕದಂತ ಬಾಳು ಎನ್ನ ನೋವುಗಳ ಜ್ವಾಲೆಯಲ್ಲಿ ಚಳಿ ಕಾಯಿಸಿಕೊಂಡವರೆಷ್ಟೋ ಎನ್ನ … Read more

ಪಂಜು ಕಾವ್ಯಧಾರೆ

ಇನ್ನಾದರೂ ತುಸು ಹೊತ್ತು ಖುಷಿಯಿಂದ ಉಳಿದುಬಿಡುತ್ತೇನೆ ಬದುಕಿಗೆ ಬೇಸರ ಬರುವಷ್ಟು .. ಈ ಬದುಕು ಸುರುವಿದ ಅಸಂಖ್ಯ ಅವಕಾಶಗಳ ಎಣಿಸುತ್ತಾ ಕೂತು ಕಳೆದಿದ್ದೇನೆ ಹೀಗೆ ಬಳಸಿಕೊಳ್ಳೋದ ಮರೆತು ಪ್ರತಿ ಖುಷಿಯ ಹಿಂದೊಂದು ಮುಗಿಯದ ಖಾಲಿತನವನ್ನು ಸುಮ್ಮನೇ ಉಳಿಸಿಕೊಂಡಿದ್ದೇನೆ ನನ್ನಂಥ ಕಡುಮೌನಿಯೂ ನಿನ್ನ ಮಾತಿಗೆ ಹಪಹಪಿಸಲು ಶುರುವಿಡುವ ಈ ಹೊತ್ತು ಇಲ್ಲೇ ಸ್ತಬ್ಧವಾಗಲಿ ಬಿಡು ಮಾತು ಮೀರಿದ ಘಳಿಗೆ ಎದುರಿಗಿದ್ದಾಗ … ಬೆರಳ್ಹಿಡಿದು ನಡೆಸಿದ ಕಾಲುಹಾದಿಯ ಬದುಕು ಜಾರಿಸಲು ಶುರುವಿಟ್ಟು ನಗುತಾ ನಿಂತ ಸಮಯ ಬೇಕೆನಿಸಿದೆ ನಿನ್ನ ಸಾಂಗತ್ಯ … Read more

ಪಂಜು ಕಾವ್ಯಧಾರೆ

ನೀವಲ್ಲವೆ… ಬದುಕಲ್ಲಿ ಸಖನಾಗಿ ಒಲವಲ್ಲಿ ಜೊತೆಯಾಗಿ ಮನದಲ್ಲಿ ಹಿತವಾಗಿ ಪ್ರೀತಿ ಅರಳಿಸಿದವರು ದ್ವಂದದಲಿ ನಾನಿರಲು ಕರವಹಿಡಿದೆನ್ನ ಸಿಹಿಕನಸು ಮನದಲ್ಲಿ ಮುಡಿಸಿದವರು ನಾ ಮುನಿಸುಗೊಂಡಾಗ ಮಲ್ಲಿಗೆಗೆ ಮುನಿಸೇಕೆ ಎಂದೆನುತಾ ಮುತ್ತಿಟ್ಟು ಒಳಗೊಳಗೆ ನಕ್ಕವರು ತವರೂರು ಹೊರಟಾಗ ಬಾಗಿಲಬಳಿ ನಿಂದು ಬೇಗ ಬಾ ಎಂದೆನುತಾ ಕಣ್ಣಂಚಲಿ ನೀರ ಹನಿಸಿದವರು ವಾರವೂ ಕಳೆಯುವ ಮುನ್ನ ಮತ್ತೆ ತವರಿಗೆ ಬಂದು ಬೇಗ ಬರುವೆಯಾ ಎನುತ ಬೇಸರದಿ ಎನ್ನ ಕರವ ಹಿಡಿದವರು ಮನದ ವೇದನೆಯ ಮೌನದಲೇ ಮುಟ್ಟಿಸಿ ಮನೆಯ ದಾರಿಯ ತೋರಿದವರು ನೀವಲ್ಲವೆ. -ರೇಷ್ಮಾ … Read more

ಪಂಜು ಕಾವ್ಯಧಾರೆ

ಸ್ವರ್ಗ ಸೃಷ್ಟಿಯಾಗುತಿರಲು ಸುಳಿಯುತಿರುವ ಗಾಳಿ ಗಂಧ ಬಳಿಯಲಿರುವ ಯಮುನೆ ಚಂದ್ರ ಸುಳಿಯದಿರುವ ಸಖನ ನೆನೆದು ನಳಿನೆ ಕಾಯುತಿದ್ದಳು ಅಂದುಗೆ ಧನಿ ‘ಘಲ್” ಎನಲು ಎದೆಯು ಮಿಡಿದು ‘ಝಲ್” ಎನಲು ಬಂದನೇನೆ………. ಮಾಧವನು ಎಂದು ರಾಧೆ ನೊಂದಳು ಸುತ್ತಮುತ್ತ ಭೃಂಗ ಪಾನ ಹೊತ್ತಿ ಎದೆಯ ರಸದ ಗಾನ ಮೆತ್ತನೊಮ್ಮೆ ಮುಖವನೆತ್ತಿ ಮುತ್ತನೊತ್ತ ಬಾರದೇ ಹಾರುತಿತುವ ಸೆರಗ ಬಿಟ್ಟು ಜಾರುತಿರುವ ನೆರಿಗೆ ಬಿಟ್ಟು ಹಾರಿ ಬರುವ ಮುರಳಿಯಡೆಗೆ ನೀರೆ ಓಡಿ ಬಂದಳು ಬಂದ ನಲ್ಲನೊಡನೆ ಕೂಡಿ ಒಂದು ಘಳಿಗೆ ಎಲ್ಲ … Read more

ಪಂಜು ಕಾವ್ಯಧಾರೆ

Me too ಮುಗಿದು ಹೋದ ಕಥೆಗೆ ಅನುಭವಿಸಿಯಾದ ವ್ಯಥೆಗೆ ಯಾಕೆ ಬೇಕಿತ್ತು ಈಗ Me too ಬಿಸಿ ಇರುವಾಗಲೇ ಮುಗಿಸಬೇಕಿತ್ತು ಕಂಪ್ಲೆಂಟ್ ಕೊಟ್ಟು ಆಗುತ್ತಿತ್ತಾಗಲೇ ಗುಟ್ಟು ರಟ್ಟು ಅಂದು ಅನುಭವಿಸುವಾಗ ಮಜ ಈಗ ಅದು ಸಜ ಇರಬಹುದು ಇದಕೆ ಕಾರಣ ದ್ವೇಷ ಜೊತೆಗೆ ಹಣದ ಆಮಿಷ ಯೋಚಿಸಲಿ ಪೂರ್ವಾಗ್ರಹ ಬದಿಗಿಟ್ಟು ಸತ್ಯಾಸತ್ಯತೆಗೆ ಬೆಲೆಕೊಟ್ಟು ಬಲಿಯಾಗದಿರಲಿ ಮರ್ಯಾದೆ ಸುಮ್ಮ ಸುಮ್ಮನೆ ತೆಗೆಯದಿರಲಿ ತಗಾದೆ ನಿಜಕೂ ಅನ್ಯಾಯವಾಗಿದ್ದರೆ ಅದು ಸರಿ ಬರಲಿ ಬೆಳಕಿಗೆ ರಕ್ಕಸರ ತೇವಲಿ ಅನ್ಯಾಯವಾದರೂ ಆಗಿಹರಾಗಲೇ ಬಲಿ … Read more

ಪಂಜು ಕಾವ್ಯಧಾರೆ

ಆರದಿರಲಿ‌ ಬೆಳಕು ಒಲೆ ಉರಿಸುವುದು ಕಲೆಯೇ… ಬಲು ತಾದ್ಯಾತ್ಮಕತೆಯ ಅಲೆ ಮೆಲ್ಲನೆ ಕಡ್ಡಿ ಗೀರಿ ಇನ್ನೂ ಮೆಲ್ಲನೆ ಬೆಂಕಿ ನೀಡಿ ಉಸಿರ ಸಾರ ಹೀರಿ ಚಿಕ್ಕದಾಗಿ ಪೇರಿಸಿಟ್ಟ – ಗರಿ ಗರಿ ಕಾಯಿ ಸಿಪ್ಪೆ ಚಿಕ್ಕ ಚಿಕ್ಕ ಸೌದೆ ಚೂರು ಇದಕ್ಕೆಲ್ಲ ಕಿಚ್ಚು ಹಿಡಿಸಬೇಕೆಂದರೆ ಬೆಂಕಿ ತಲ್ಲೀನತೆಯ ಬೇಡುತ್ತದೆ ತಾಳ್ಮೆ ಪರೀಕ್ಷಿಸುತ್ತದೆ! ಈ ಕಲೆಯ ಅಸ್ಮಿತೆ ಉಳಿಸಲಿಕೋಸ್ಕರ ಏನೇನೆಲ್ಲ ಮಾಡಬೇಕಿದೆ… ಕಣ್ತುಂಬ ನೀರು ತಂದು ಕೊಳವೆ ತುಂಬ ಗಾಳಿ ಊದಿ ಸುರುಳಿ ಸುರುಳಿ ಹೊಗೆಯ ಹೊದೆದು ಬೂದಿಯೊಳಗಿನ … Read more

ಪಂಜು ಕಾವ್ಯಧಾರೆ

ಗುರುದಕ್ಷಿಣೆ ಬಿಳುಪಿಗೂ ಬಿಲ್ಲಿಗೂ ಹೊಸ್ತಿಲಾದ ಹನಿಗೆ ಹುದುಗಿದ್ದ ಚೈತನ್ಯದ ಗುರು ಕಿರಣವೇನೇ? ಮಳೆಹನಿಯ ರಭಸಕ್ಕೆ ತಾಳಿಕೆಯ ತೋರಿಸಿದ ಮರದೆಲೆಯು ಹನಿಗೆ ಗುರು ತಾನೇ? ಹರಿವ ಆಸೆಗೆ ತಗ್ಗಿಗೆ ನುಗ್ಗಿದೊಡೆ ಸಾಗರದ ಹಾದಿಗೊಯ್ದ ಗುರುವು ಭುವಿ ತಾನೇ? ಕಣ್ಣಹನಿ ಮುತ್ತೆಂದು ಒಡನೆ ಚಾಚಿದ ಬೊಗಸೆ ಮೌಲ್ಯದ ಮತಿಹೇಳೋ ಗುರು ತಾನೇ? ರಕ್ತ ಮಾಂಸವಂತೆ ಬುದ್ಧಿ ಭಾವಗಳಂತೆ ಪಂಚಭೂತಗಳಂತೆ ಜೀವದಾ ರಚನೆಗೆ. ಜೀವಿಯ ಜೀವಂತಿಕೆಗೆ ಪಂಚವೆಲ್ಲಾ ಕೊಂಚ! ಕಣಕಣದೊಳೊಕ್ಕಿ ಕಲಿಕೆ ಹುಚ್ಚ ಹಚ್ಚೋ ಅಸಂಖ್ಯಾಣು ಅದ್ಭುತಗಳೇ ಶಿಲ್ಪಿ ಬದುಕೀಗೆ. ದಕ್ಷಿಣೆಯ … Read more

ಪಂಜು ಕಾವ್ಯಧಾರೆ

ಶ್ರಾವಣ…. ಎಲ್ಲೆಲ್ಲೂ ಹಸಿರು, ತಳಿರು ತೋರಣ, ನೀ ಬಂದೊಡನೆ ಬಂಜರು ಭೂಮಿಯಲ್ಲೂ ಹಬ್ಬದ ವಾತಾವರಣ … ಎಲ್ಲೆಲ್ಲೂ ಸಂತೋಷ, ನಗು, ಸಂಭ್ರಮ, ಸ್ವರ್ಗ ವಾಗುವುದು ಧರೆ ಲೆಕ್ಕಿಸದೆ ಪಟ್ಟಣ ಗ್ರಾಮ … ಆದರಲ್ಲಿ ಸಂಭವಿಸಿದ್ದು ಕಾಲನ ತಾಂಡವ, ಹರಿಯಿತು ಜಲ ಧಾರೆ ಲೆಕ್ಕಿಸದೇ ನಿನ್ನಯ ಬರುವಿಕೆಯ… ಆಕ್ರಂಧನ ಮಾತ್ರ ಕೇಳುತಿತ್ತು, ಅಲ್ಲಿ ದೇವರ ಸ್ವಂತ ನಾಡು ಮುಳುಗುತಿತ್ತು…. ನಿಸ್ಸಹಾಯಕರಾದರು ಮನುಜರು, ದಡ ಸೇರದಾದರು ಈಜಿದರೂ…. ನಿನ್ನ ಆಗಮನಕ್ಕೆ ಕಾದಿದ್ದ ಹೂರಾಶಿಗಳೆಲ್ಲ, ನೆಲದ ಮೇಲಿನ ರಂಗೋಲಿಯಾಗದೆಯೇ ಅಸುನೀಗಿದವು… ಎಲ್ಲವನ್ನು … Read more

ಪಂಜು ಕಾವ್ಯಧಾರೆ

ತುಣುಕು ಧೂಪ . . . : ಮನದ ಬಾಗಿಲ ನಡುವೆ ಯಾವ ರೂಪವದು/ ಅಂತರಾಳದಿ ಇರಲಿ ಒಲವ ದೀಪವದು// ಬರಿದೆ ಬೇಸರವೇಕೆ ಇರುಳ ಉರುಳಿನಲಿ/ ಹಗುರವಾಗಲಿ ಎದೆಯು ಆರಿ ತಾಪವದು// ಒಳ ಬಿಕ್ಕ ಹಾವಳಿಗೆ ಒಡಲುರಿಯು ಬೇರೆ/ ಎಲ್ಲಿ ಕರಗಿತು ಹೇಳು ಸುಖದ ಲೇಪವದು// ಸಪ್ಪೆ ಸೂರ್ಯನ ಆಟ ಕತ್ತಲೆಯ ಕಾಟ/ ಯಾಕೆ ಸರಿಯದು ಮುಗಿಲು ಕವಿದ ಶಾಪವದು// ನೂರು ದೇವರ ಪೂಜೆ ಸಲ್ಲಿಸಿದ ಫಲವೇ/ ಕುದಿಯುವುದು ಕಡೆಯಿರದೆ ಮಡಿಲ ಕೋಪವದು// ಚೂರು ಘಮಿಸದೆ ಹೇಳು … Read more

ಪಂಜು ಕಾವ್ಯಧಾರೆ

ಕನಸು ಕನ್ನಡಿಯೊಳಗೆ… ನಮ್ಮ ಖಾಸಗೀ ಕನಸಿನ ಲೋಕದೊಳಗೆ ಪ್ರವೇಶ ಮಾಡುವರು ನಮ್ಮ ಖಾಸಾ ಮಂದಿ ಅಚ್ಚು ಮೆಚ್ಚಿನವರು ಪ್ರೀತಿಪಾತ್ರರು ಸಂಬಂಧಿಕರು ಸ್ನೇಹಿತರು ಮುಂತಾದವರು ಒಮೊಮ್ಮೇ ನಾವು ಕಂಡು ಹೃನ್ಮನ ತುಂಬಿಕೊಂಡ ಸಿನೇಮಾದವರು ಸಿಲೇಬ್ರಟಿಗಳು ಆದರ್ಶ ವ್ಯಕ್ತಿಗಳು ಸಮಾಜಕ್ಕೆ ಮಾದರಿ, ಮಾರಿಯಾದವರು ಹಾಗೇ ಒಮ್ಮೊಮ್ಮೇ ನಮ್ಮ ಸ್ವಪ್ನ ಲೋಕಕ್ಕೆ ಲಗ್ಗೆ ಇಟ್ಟು ಬೆಚ್ಚಿ ಬೀಳಿಸುವರು ಭಯಾನಕ ಚಹರೆಗಳು ವಿಕೃತ ಮನಸ್ಸುಗಳು ದುಷ್ಟರು, ಭ್ರಷ್ಟರು ಸಮಾಜ ಘಾತುಕರು ಖೂಳರು, ಪಿಶಾಚಿಗಳು ಧುತ್ತೆಂದು ಪ್ರಕಟವಾಗುವರು ಎಲ್ಲೋ ಮಾತಾಡಿ ಮರೆತು ಬಿಟ್ಟವರು ಹಗಲ್ಹೋತ್ತು … Read more

ಪಂಜು ಕಾವ್ಯಧಾರೆ

ಸಹಜ-ಸುಧೆ ಸಾಗರದಾಚೆಗೆ ಏನೆಂದು ತೀರಕೇ ಅರಿವಿಲ್ಲ ಅಂಚಿನಾ ಚಿಂತೆಯ ಮಂಥನ ಬೇಕೇ? ಸಾಗರದಲೆಯಿರಲು ಒಂದೊಂದೂ ಅನನ್ಯ ಸೆರೆಯಾಗಲಿ ಕಣ್ಮನ ಅದಕೇ! ಅತಿ ಹೆಚ್ಚು! ಅತಿ ದೊಡ್ಡ! ಅತಿ ಜಾಣ! ಅತಿ ಭಾರ! ಅತಿ ಅವನತಿ ಅತೀತಗಳ ಗತಿಗಿದೆ ಕರ್ಮ ಅವಲೋಕನಗಳ ಕೊನೆ ನಿಲ್ದಾಣವಿಗೋ ಮರ್ಮ| ಜೀವ-ಜೀವವೂ ಆಗಿರೆ ಜೀವಾಳದನ್ವಯ ವ್ಯಾಖ್ಯಾನ ಚಿತ್ರಿಸುತಿದೆ ಅನುಭವದ ಅವ್ಯಯ|| ಸಾಧ್ಯತೆಯ ಸಲೀಸಿಗೆ ಸೋತರದು ಅಫಲ ಸಾಧಕದ ಸ್ಥಾಯಿಯ ಮೆಟ್ಟರೊಲೀತು ಸಫಲ| ಸಾಧು ತಾನೆಂದು ಹೊಳೆಯುತಿರೆ ಸಾರ್ಥಕತೆ ಸದ್ದು-ಸುದ್ದಿಯ ಹಂಗೇ ಸಾಧನೆಯನಳೆವ ಸಾಧನಕೆ? … Read more

ಪಂಜು ಕಾವ್ಯಧಾರೆ

ಗಝಲ್… ಹುಡುಕುತ್ತಾ ಹೊರಟ ನನಗೆ ಕಳೆದುಕೊಂಡಷ್ಟು ಸಿಕ್ಕಿತು ಸಖಾ.. ಬಯಸುತ್ತಾ ಹೊರಟ ನನಗೆ ಬಯಸಲಾರದಷ್ಟು ದಕ್ಕಿತು ಸಖಾ… ನಿನ್ನ ಗುಟ್ಟುಗಳೆಲ್ಲಾ ನನ್ನ ಪಿಸುದ್ವನಿಯಲಿ ರಟ್ಟಾದವು… ಮೆರೆದು ತುಳುಕಿದ ಒಂದೆರಡು ಹನಿ ಜೀವದ ಕೊನೆ ಹೊಕ್ಕಿತು ಸಖಾ… ನಿನ್ನ ಬಾಹುವಿನ ಮುದ ಬಂಧಿಸಿದೆ ಬಿಡದೆ ನನ್ನ ತಾರುಣ್ಯ… ತಾಜಮಹಲಿನ ಗೋರಿ ಇದ ಬಯಸಿ ಬಿಕ್ಕಿತು ಸಖಾ… ಯಮುನೆಯಲ್ಲಾ ಬಸಿದು ತಂದೆ ಬೊಗಸೆಯಲಿ ನನ್ನ ಕಣ್ಣ ಭಾವಕ್ಕೆ… ನನ್ನೆದೆಯ ಗಂಧ ನಿನ್ನ ಹುಮ್ಮಸ್ಸಿನ ಹೂಂ ಗುಟ್ಟುವಿಕೆಗೆ ಸೊಕ್ಕಿತು ಸಖಾ… ಬಡಿದ … Read more

ಪಂಜು ಕಾವ್ಯಧಾರೆ

ದಾವಾಗ್ನಿ ಸೊರಗಿದೆದೆಯ ಇಳಿಬಿದ್ದ ಮಾಂಸದ ಮುದ್ದೆಗಳಂತೆ ಗತ ವೈಭವದ ಪ್ರೀತಿ ಬೆರಳು ಬೆಚ್ಚಗಿನ ಬಯಕೆಗಳು ತಣ್ಣಗಾಗಿ ಚಿರ ನಿದ್ರೆಗೆ ಜಾರಿವೆ ಕಾವು ಕಳೆದಕೊಂಡ ಕಾಯ ಪಡೆದ, ಕಳೆದುಕೊಂಡದ್ದರ ಕುರಿತು ಲೆಕ್ಕಾಚಾರ ನಡೆಸಿದೆ ಸೋತ ಕಂಗಳ ಕಣ್ಣೀರು ಮೈಮೇಲಿನ ಗೀರು ಗಾಯದ ಗುರ್ತುಗಳು ಎದುರಿಟ್ಟುಕೊಂಡು ಪಂಚನಾಮೆಗೆ ತೊಡಗಿದೆ ಭಗ್ನಾವಶೇಷವಾದ ಹೃದಯ ಕುಲುಮೆಯಲೀಗ ಬರೀ ಪ್ರತಿಕಾರದ ದಾವಾಗ್ನಿ ಬೇಯುತಿದೆ. *** ಅಂತರ ಸೂರ‍್ಯನಿಗೆ ಕಣ್ಣಿಲ್ಲ ದೇಹವೆಲ್ಲ ದೃಷ್ಟಿ ! ನದಿಗೆ ಕಾಲಿಲ್ಲ ಶರವೇಗದ ಶಕ್ತಿ ! ಗಾಳಿಗೆ ರೆಕ್ಕೆಗಳಿಲ್ಲ ಹಾರುವ … Read more

ಪಂಜು ಕಾವ್ಯಧಾರೆ

ಹೋಗಬಾರದಿತ್ತು! ಆತ್ಮೀಯ ಸ್ನೇಹಿತ ರೂಮ ಪಾರ್ಟನರ್‍ ಧೀಢರನೆದ್ದು ಹೊರಟೇ ಹೋದ ಏನನ್ನು ಹೇಳದೆ ಕೇಳದೆ ಎಲ್ಲಿ ಕಳೆದು ಹೋದನೋ ಗೊತ್ತಿಲ್ಲ ಆಕಾಶಕ್ಕೆ ಹಾರಿದನೋ, ಭೂಮಿಯೊಳಕ್ಕೆ ಹೂತು ಹೋದನೋ, ಕಾಡಿಗೆ ಹೋದನೋ, ಸುಡಗಾಡಕ್ಕೆ ಹೋದನೋ ಗೊತ್ತಿಲ್ಲ ಹೋಗಿದಂತೂ ನಿಜ ನಮ್ಮನ್ನು ಬಿಟ್ಟು ಈ ಖೋಲೆ ಬಿಟ್ಟು ಇನ್ನೆಲ್ಲಿಗೋ ಅವನಿಗೆ ಅದೇನಾಯಿತೋ ಯಾಕಾದರು ಮನಸು ಬದಲಿಸಿದನೋ ಇನ್ನೂ ಇರುತ್ತೇನೆಂದವನು ಸಡ್ಡನ್ನಾಗಿ ಎದ್ದು ಹೋಗೇ ಬಿಟ್ಟ ದೈವಾಧೀನನಾದನೆಂದೋ ಸ್ವರ್ಗವಾಸಿಯಾದನೆಂದೋ ಜನ ಹೇಳುತ್ತಿದ್ದಾರೆ ನಂಬಲಾಗುತ್ತಿಲ್ಲ ಆತ್ಮೀಯರು ಅಳುತ್ತಿದ್ದಾರೆ ಆಗದವರು ನಗುತ್ತಿದ್ದಾರೆ ಹೋಗುವದೇ ಆಗಿದ್ದರೆ … Read more

ಕಾವ್ಯಧಾರೆ 1

ಹುಡುಕಾಟ ಜಾರಿಯಲ್ಲಿದೆ …. ಮತ್ತೆ ಮತ್ತೆ ಕೆದಕಿ ವಿಶ್ವಸ್ಥ ಚಹರೆಯನ್ನು ಹುಡುಕುತ್ತೇನೆ ಅರಿವು ಸರಸರನೆ ತೆರೆಯುತ್ತೇನೆ ಪ್ರತೀ ಪುಟದಲ್ಲೂ ಅರಸುತ್ತೇನೆ ಅಲ್ಲಿರಬಹುದು.. ಇಲ್ಲವೇ !!? ಇಲ್ಲಂತೂ ಇದ್ದೇ ಇರಬಹುದು ಘಟ್ಟಿಗಿತ್ತಿಯರ ಮಾದರಿಗಳು ಬಂಡೆಯಂತಹ ಹೆಣ್ಣುಗಳು ಎಲ್ಲೆಲ್ಲಿ..? ಪುರಾಣದಲ್ಲಿ ಉಪನಿಷತ್ತುಗಳ ಕಣಜದಲ್ಲಿ ಭಾರತದಲ್ಲಿ, ರಾಮಾಯಣಗಳ ಹಂದರದಲ್ಲಿ ಮಹಾಕಾವ್ಯಗಳ ರಾಶಿಯಲ್ಲಿ ಬೈಬಲ್ಲು ಕುರಾನುಗಳ ಅಂತರಂಗದಲ್ಲಿ ಎಲ್ಲೆಲ್ಲಿದ್ದಾಳೆ ಆಕೆ ಎಲ್ಲೆ ಮೀರಿದಳೆ? ಚಲ್ಲಾಪಿಲ್ಲಿಯಾದಳೆ? ಮತ್ತೆ… ಮತ್ತೆ… ಧೀರ ಮಹಾಪುರುಷರು ಅಣಿ ಮಾಡಿಟ್ಟ ಗಲ್ಲಿಗೇರಿದಳೆ..? ಸಂಶೋಧನೆ ಕಂಗಾಲಾಗುತ್ತೇನೆ ಯಾವ ಪುಟದಲ್ಲೂ ದಿಟ್ಟೆಯರಿಲ್ಲ ಅಗ್ನಿದಿವ್ಯ … Read more

ಕಾವ್ಯಧಾರೆ 2

ಯುಗಾದಿ ನವ ಸಂತಸ ನವ ಸಂಭ್ರಮ ನವ ನವೋಲ್ಲಾಸ ತುಂಬಲು ಮತ್ತೆ ಬಂದಿದೆ ಯುಗಾದಿ ನವ ಚೇತನ ನವ ಭಾವನ ನವ ನವೋತ್ಸಾಹ ಬೀರಲು ಮತ್ತೆ ಬಂದಿದೆ ಯುಗಾದಿ ನವ ಪಲ್ಲವಿ ನವ ಕಿನ್ನರಿ ನವ ನವೋತ್ಕರ್ಷ ಹೊಂದಲು ಮತ್ತೆ ಬಂದಿದೆ ಯುಗಾದಿ ನವ ಬಂಧನ ನವ ಸ್ಪಂದನ ನವ ನವೋದಯ ಹೊಮ್ಮಲು ಮತ್ತೆ ಬಂದಿದೆ ಯುಗಾದಿ ನವ ಬದುಕಿಗೆ ನವ ದಾರಿಗೆ ನವ ನವೋದಕವೆರೆಯಲು ಮತ್ತೆ ಬಂದಿದೆ ಯುಗಾದಿ ನವ ಮಂಥನ ನವ ಚಿಂತನ ನವ … Read more

ಪಂಜು ಕಾವ್ಯಧಾರೆ

ಪಯಣ  ನಿರರ್ಥಕ ಹಾದಿಯಲ್ಲಿ ಅರ್ಥಹೀನ ಹಗಳಿರುಳುಗಳ ಸೆಳುವಲ್ಲಿ ಯಾನ ಹೊರಟ ದೋಣಿಯ ಪಯಣಿಗ ತಲುಪಬೇಕೆನ್ನುವ ಗಮ್ಯ ಇಲ್ಲದಂತೆನಿಸಿ ಬಿಟ್ಟ ಗಾಳಿಯ ದಿಕ್ಕಿಗೆ ಹೊಮ್ಮುವ ಅಲೆಗಳ ನಾಟ್ಯದೊಟ್ಟಿಗೆ ಸಾಗುವ ಹುಚ್ಚು ಪಯಣಿಗ ಬದುಕಿನ ನಾವೆ ಕಾಲದ ಶರಧಿಯಲ್ಲಿ ಅಂಡಲೆಯುತಲೇ ಇದೆ ಇಲ್ಲಿ ಸುಳ್ಳುಗಳನ್ನೇ ಸತ್ಯವೆಂದುಕೊಂಡ ಸಹಯಾತ್ರಿಕರ ಹಿಂಡೇ ಇದೆ ಸ್ವತಃ ವಂಚಿಸುತ್ತಾ ಸಾತ್ವಿಕತೆಯ ಭೋದಿಸುವ ತಂಡೋಪ ತಂಡವೇ ಇದೆ ಕಾಲದ ಸಾಗರ ಮಾತ್ರ ತನ್ನೊಡಲೊಳಗೆ ಎಲ್ಲವನ್ನೂ ಹುದುಗಿಸಿಕೊಳ್ಳುತ್ತ ಉಕ್ಕೇರುತ್ತಲೇ ಇದೆ ತಲೆತಲಾಂತರಗಳಿಂದ ಹಲವು ಬಾರಿ ಒಡಲೊಳಗಿನ ಕಿಚ್ಚನ್ನೆಲ್ಲ ಸುನಾಮಿಯಂತೆ … Read more

ಪಂಜು ಕಾವ್ಯಧಾರೆ

ಮಂಗ ಮತ್ತು ಬೆಕ್ಕುಗಳು ಇಬ್ಬರ ಜಗಳದಿ ಯಾರಿಗೆ ಲಾಭವು ಬನ್ನಿರಿ ನಾವು ತಿಳಿಯೋಣ ನೀತಿಯ ಸಾರುವ ಕಥೆಯನು ಕೇಳಿ ಜೀವನ ಸುಂದರಗೊಳಿಸೋಣ|| ಸುಂದರವಾದ ಊರಿನಲಿ ಬೆಕ್ಕುಗಳೆರಡು ಜೊತೆಯಲ್ಲಿ ಆಡುತಲಿದ್ದವು ಅಲೆಯುತಲಿದ್ದವು ಬದುಕುತಲಿದ್ದವು ಸಂತಸದಿ|| ಹಸಿವನು ನೀಗಲು ಒಂದುದಿನ ಬೆಕ್ಕುಗಳಿಗೆ ಅದು ಸುದಿನ ಪ್ರತಿಮನೆಯಲ್ಲೂ ಬೆಣ್ಣೆಕದ್ದವು ಮರದಡಿ ಬಂದು ಸೇರಿದವು|| ಬೆಣ್ಣೆಯ ಆಸೆ ಹೆಚ್ಚಾಯ್ತು ಇಬ್ಬರ ಜಗಳವು ಶುರುವಾಯ್ತು ನನಗೂ ಜಾಸ್ತಿ ನಿನಗೂ ಜಾಸ್ತಿ ಬೆಣ್ಣೆಯು ಗೆಳೆತನ ಕೆಡಿಸಿತ್ತು|| ಮರದಲಿ ಕುಳಿತಿರೊ ಮಂಗಣ್ಣ ನೋಡುತಲಿದ್ದನು ಜಗಳವನ್ನ ಉಪಾಯ ಹೂಡಿ … Read more

ಕಾವ್ಯಧಾರೆ

ನೀ ಮೌನ ಮುರಿಯಬೇಕು ನೀನು ಮತ್ತೆ ಎಂದಿನಂತೆ ಮಾತಾಡಬಹುದೆಂಬ ನಂಬಿಕೆ ಅರೆ ಘಳಿಗೆ ಸುಮ್ಮನಿರದ ಕನಸುಗಳು ಹುಟ್ಟುವುದನು ತಡೆಯುವವರು ಯಾರು..!? ನನಸಾಗುವ ಹೂ ಅರಳಲು ರವಿ ಹೊಸತಾಗಿಯೆ ಹುಟ್ಟಬೇಕು ನೀ ಮಾತಿಗೆ ಅಮೃತವನುಣಿಸುವ ಮನಸು ಮಾಡಬೇಕು ಒಲವಲಿ ಮೌನ ಮಾತಾಗಿ ಮುತ್ತಾಗುವುದು ಸಾಮಾನ್ಯ ತಾನೇ..? -ಅಕ್ಷತಾ ಕೃಷ್ಣಮೂರ್ತಿ         ಗಜಲ್ ನೀರಡಿಸಿದಾಗ ಬಾಂವಿ ತೋಡಿದಂಗಾತು ಸಾಯುಹೊತ್ತಾಗ ನಿನ್ನ ನೋಡಿದಂಗಾತು ಹ್ಯಾಂಗೈತಿ ನಮ್ಮ ಜೋಡಿ ಗೊತ್ತೇನ ಸಾಕಿ? ಚೂಡಾದ ಜೊತಿ ಚಹಾ ಕೂಡಿದಂಗಾತು.! ಮಾಡಿಲ್ಲದ … Read more

ಪಂಜು ಕಾವ್ಯಧಾರೆ

ಅಪ್ಪ ಅಪ್ಪಾ ಅದೊಂದು ದಿನ ನೀ ಹೇಳಿದೆ ಕಣ್ಣುಗಳನ್ನು ಪಿಳ  ಪಿಳನೆ ಬಿಟ್ಟು ನಿನ್ನನ್ನೇ  ನೋಡುತ್ತಿದ್ದಾ ಈ ಪುಟ್ಟ ಜೀವಕ್ಕೆ, ಮಗಳೇ  ನೀ ನನ್ನ ಮಾತ ನಡೆಸುವೆಯ? ನಿನ್ನ ಬದುಕಿನ  ಪರಪಂಚದಲ್ಲಿ ಕಾಣಿಸುತ್ತಿದ್ದ ಆ ನಿನ್ನ ಆಚಾರಗಳು, ವಿಚಾರಗಳು, ಮಮತೆಯದನಿಯಾಳಗಳು… ಹೀಗೆ.. ನಿನ್ನಪರೂಪದ  ಸಂಗತಿಗಳ ಅರ್ಥೈಸಲಾಗದೆ, ನಿನ್ನೊಲುಮೆಯ ಪ್ರೀತಿಸಾಗರದಲಿ ಮಿಂದೇಳುತ್ತಿದ್ದ ನನಗೆ ನೀನೇ ವಿಸ್ಮಯ ಬೇರೊಂದ ಬಯಸದೆ  ನಾ ಉಲಿದೆ ನೀ ಹೇಳುವ ಮಾತನ್ನೊಂದನ್ನೂ ನಾ ತೆಗೆಯಲಾರೆ. ಅಪ್ಪಾ ನನ್ನಿಂದ ನೀ ದೂರಾದ  ಇಷ್ಟು ವರುಷಗಳೂ ನಡೆದೇ … Read more

ಪಂಜು ಕಾವ್ಯಧಾರೆ

ಹನಿ-ಹನಿ (೧) ಪೋನು ಪೋನು ಇಲ್ಲದೇ  ಬದುಕದ ನಾನು, ನನಗೆ ನಾನೇ ಮಾಡಿಕೊಂಡ ಬೋನು‌..! (೨) ಮಿಸ್ ನಾವೇ ಲೇಟಾದರೂ ಬಸ್ಸಿಗೆ ಹಿಡಿ ಶಾಪ, ಮೇಲೊಂದು ಮಾತು ಬಸ್ಸು, ಜಸ್ಟ್..! (೩) ದಾರಿ ಅರಿತು ಹೋದರೆ ಬದುಕಿನ ದಾರಿ ರಹದಾರಿ, ಇಲ್ಲದಿದ್ದರೆ ಸೇರಬೇಕಾದೀತು ಬೇಗನೆ ಗೋರಿ..! (೪) ಚಂಚಲ ಮುದುಕನಾದರೂ ಮನಸೇಕೋ ಚಂಚಲ, ಮುದುಕನಾದರೂ ಮನಸೇಕೋ ಚಂಚಲ; ಕಾರಣ ಚಂಚಲಾ..|| (೫)ಆತಂಕ ಎಲ್ಲಾ ಮಕ್ಕಳಿಗೂ ಒಂದೇ ಆತಂಕ, ಕಡಿಮೆ ಬರದಿರಲಿ ಅಂಕ..|| (೬) ಬದುಕು ಬದುಕು ಯಾರೋ … Read more

ಪಂಜು ಕಾವ್ಯಧಾರೆ

ಅಕ್ಕನ ವಿಭೂತಿ ರತ್ನದ ಸಂಕೋಲೆ ತೊರೆದು ಜಂಗಮರ ಜೋಳಿಗೆ ಹಿಡಿದು ಅಪರಮಿತಕತ್ತಲೊಳಗೆ ಬೆತ್ತಲೆಯಾಗಿ ಊರೂರು ಅಲೆದು  ಕಲ್ಯಾಣದ ಕಾಂತಾರದ ಖನಿಗೆ ಬಾಗಿದಾಗ  ಮೈ ಮುತ್ತಿದ ಆ ಕೇಶಲಂಕಾರಕ್ಕೆ ಶರಣೆಂದರೆ ಸಾಕೆ….? ಜೋಳಿಗೆಯಲಿ ಜೋತಾಡಿದ ಅನಲದ ಉಂಡೆಯಾಕಾರದ ಮುಖವಾಡ ಒಂದೊಂದು ರೀತಿಹವು ಅಂಗದ ಲಿಂಗಕ್ಕೆ ಕೈ ತೆತ್ತಾಗ ದಕ್ಕಿದ್ದು ಅವರಿಗೆ ಬೂದಿ ಅದು ಬರೀ ಬೂದಿಯೇ! ಅಲ್ಲ ಗಂಡರನ್ನು ಭಸ್ಮ ಮಾಡುವ  ಭಂಡಾರದ ಭಕ್ತಿಯ ವಿಭೂತಿ ಹಣೆ ತಟ್ಟಿ ಮನ ಮುಟ್ಟಿ ಮಡಿಮಡಿಯಾಗಿ ಎಡೆ ಎಲೆಯಲ್ಲಿ ಉರುಳಾಡಿದರು ? … Read more