ಮಗಾ ಸಾಹೇಬ..! : ಶರಣಗೌಡ ಬಿ ಪಾಟೀಲ ತಿಳಗೂಳ
ಅಂಚಿನ ಮನೀ ಚಂದ್ರಣ್ಣ ಬಿಸಿಲು ನಾಡಿನ ಕೊನೆಯಂಚಿನ ಹಳ್ಳಿಯವನು. ತಮ್ಮೂರ ಯಾವಾಗ ದೊಡ್ಡದಾಗ್ತಾದೋ ಏನೋ ಅಂತ ಆಗಾಗ ಚಿಂತೆ ಮಾಡತಿದ್ದ ಊರ ಕುದ್ಯಾ ಮಾಡಿ ಮುಲ್ಲಾ ಬಡು ಆದಂಗಾಯಿತು ಅಂತ ಹೆಂಡತಿ ಶಾಂತಾ ಮುಗ್ಳನಕ್ಕಿದ್ದಳು. ಇವನ ಹಳ್ಳಿ ಬಹಳ ಅಂದ್ರ ಬಹಳ ಸಣ್ಣದು ಬೆರಳಿನಿಂದ ಎಷ್ಟು ಬಾರಿ ಎಣಿಸಿದರೂ ಲೆಕ್ಕ ತಪ್ಪುತಿರಲಿಲ್ಲ ಹಳ್ಳಿಯಲ್ಲಿ ಹೆಚ್ಚಿಗೆ ಓದಿವರೂ ಇರಲಿಲ್ಲ ಕೆಲವರು ಹತ್ತನೇ ಒಳಗೇ ಓದು ಮುಗಿಸಿದರೆ ಇನ್ನೂ ಕೆಲವರು ಹೆಬ್ಬೆಟ್ಟೊತ್ತುವವರಾಗಿದ್ದರು. ಚಂದ್ರಣ್ಣ ಅತ್ತ ಅಕ್ಛರಸ್ತನೂ ಅಲ್ಲದೆ ಅನಕ್ಛರಸ್ತನೂ ಅಲ್ಲದೆ … Read more