ಪಂಜು ಕಾವ್ಯಧಾರೆ

ಶಕ್ತಿ ಇಳಿದೊಮ್ಮೆ ನೋಡು ಎದೆಯೊಳಗೆಪ್ರೀತಿ ಒಸರುವುದು ದನಿಯೊಳಗೆಬಿತ್ತಿದವರ್ಯಾರು ಒಲವ ಇಳೆಗೆಹೆಣ್ಣಿಲ್ಲವೆ ಹುಡುಕು ನಿನ್ನೊಳಗೆ?! ತಾಯಾಗಿ ಹಾಲನು ಉಣಿಸಿಸೋದರಿ ಸ್ನೇಹವ ಸೃಜಿಸಿಮಡದಿ ಅಕ್ಕರೆಯಲಿ ರಮಿಸಿನೀನು ಗೆಲುವಾದೆ ಬಯಸಿ!! ಗುರುತಿರದಂತೆ ನೀ ನಟಿಸದಿರುಪಡೆದ ಕರುಣೆಯ ನೆನೆಯುತಿರುಇಂದಿಗೆ ನಾಳೆಗೆ ಮುನಿಯದಿರುಶಕ್ತಿಯಿಂದ ಬೆಳಕು ಕಡೆಗಣಿಸದಿರು!! ಆಕೆಯಿರದೆ ನೀನು ಶೂನ್ಯಹರಸಿ ಕೈಹಿಡಿದರೆ ಮಾನ್ಯಪ್ರೇಮ ಕಡಲು ಅನನ್ಯತೇಲಿದಾಗ ಬದುಕು ಧನ್ಯ.. -ನಿರಂಜನ ಕೆ ನಾಯಕ ಮಗಳಾಗಿ ಬೇಡವಾದೆನೇ…? ಹೆಣ್ಣಿನ ಜನುಮವೇಕೆ ಈ ಭೂಮಿಮ್ಯಾಲ,ಒಡಲ ಬಗೆದು ಕಿಚ್ಚತ್ತು ಉರಿಯುವಜ್ವಾಲೆಯಲಿ ತೇಲಾಡುವಳು ತನ್ನ ಬದುಕಿನಾಗ,ಕಣ್ತೆರೆದು ನೋಡುವ ಮುನ್ನವೇ ಕ್ಷೀಣಿಸುವಳು … Read more

ನಾಲ್ಮೊಗದ ಬ್ರಹ್ಮನಂತೆ…: ಡಾ.ವೃಂದಾ ಸಂಗಮ್

“ಲೇ, ನಾ ಸುಮ್ಮನಿದ್ದೇನೆಂದರ, ಏನರ ತಿಳೀಬ್ಯಾಡ, ಇಷ್ಟ ದಿನ ನನ್ನ ಒಂದು ಮುಖಾ ನೋಡಿದ್ದಿ, ಇನ್ನ ಮುಂದ ನನ್ನ ಇನ್ನೊಂದು ಮುಖಾ ನೋಡ ಬೇಕಾಗತದ.” ಅಂತ ಯಾರೋ ಯಾರಿಗೋ ಬೈಯಲಿಕ್ಕೆ ಹತ್ತಿದ್ದು ಕೇಳಿಸಿತು. ಬಹುಷಃ ಅದು ಜಂಗಮ ದೂರವಾಣಿಯಲ್ಲಿ ಕಂಡು ಬಂದ ಒಂದು ಕಡೆಯ ಸಂಭಾಷಣೆ ಇರಬೇಕು, ಇನ್ನೊಂದು ಕಡೆಯವರ ಮಾತು ನನಗೆ ಕೇಳಲಿಲ್ಲ. ಆದರೂ, ಯಾರಿಗೋ ತಾವು ಅಂದುಕೊಂಡಂಗ ಕೆಲಸ ಆಗಿಲ್ಲ, ಅದಕ್ಕ, ಅವರು ಇನ್ನೊಬ್ಬರನ್ನ ಬೈಯಲಿಕ್ಕೆ ಹತ್ತಿದ್ದು ಖರೇ. ನಾನು ಈ ಬೈದವರು ಯಾರೂ … Read more

“ಕತ್ತಲ ಹೂವು” ನೀಳ್ಗತೆ (ಭಾಗ ೧೨): ಎಂ.ಜವರಾಜ್

ಭಾಗ – 12 ಚೆನ್ನಬಸವಿ ಚೆಲ್ಲಿಕೊಂಡ ಕವ್ಡಗಳನ್ನೇ ನೋಡುತ್ತಲೇ ತುಟಿ ಕುಣಿಸುತ್ತ ಕೈಬೆರಳು ಒತ್ತಿ ಎಣಿಸುತ್ತಿದ್ದ ಕಡ್ಡಬುಡ್ಡಯ್ಯ ಹೇಳುವ ಮಾತಿಗೆ ಕಾದಂತೆ ಕಂಡಳು. ಬಿಸಿಲು ರವ್ಗುಟ್ಟುತ್ತಲೇ ಇತ್ತು. ಆಗ ಹರಿದ ಲುಂಗಿ ಎತ್ತಿಕಟ್ಟುತ್ತ ಪಣ್ಣನೆ ಜಗುಲಿಗೆ ನೆಗೆದ ಚಂದ್ರ ಬಾಗಿಲತ್ತಿರ ಹೋದವನಿಗೆ ಕಂಚಿನ ತಣಗಕ್ಕೆ  ತಂಗ್ಳಿಟ್ಟು ಹಾಕಂಡು, ಅದಕ್ಕೆ ಈರುಳ್ಳಿ ಉಪ್ಪು ಬೆರುಸ್ಕೊಂಡು, ನೀರು ಉಯ್ಕಂಡು ಕಲಸಿ ಕಲಸಿ ಅಂಬ್ಲಿತರ ಮಾಡ್ಕಂಡು ಸೊರಸೊರ ಅಂತ ಕುಡೀತಿದ್ದ ಸೂರಿ ಕಂಡೊಡನೆ ಹೆದರಿ ಪಣ್ಣಂತ ಕೆಳಕ್ಕೆ ನೆಗೆದು ನೀಲ ನಿಂತಿದ್ದ … Read more

ತಮವ ಕಳೆದಾಗ: ಶೇಖರಗೌಡ ವೀ ಸರನಾಡಗೌಡರ್

ಸಿಲಿಕಾನ್ ಸಿಟಿ ಬೃಹತ್ ಬೆಂಗಳೂರು ಮಹಾನಗರಿಯ ಎಲೆಕ್ಟ್ರಾನಿಕ್ ಸಿಟಿಗೆ ಹೊಂದಿಕೊಂಡಿರುವ “ಮಧುವನ” ಕಾಲೋನಿಯ “ಅನಿರೀಕ್ಷಿತಾ” ಅಪಾರ್ಟಮೆಂಟಿನಲ್ಲಿ ವಾಸಿಸುತ್ತಿರುವ ಸಾಫ್ಟ್ವೇರ್ ಇಂಜಿನಿಯರ್ ರಾಹುಲ್ ಪಕ್ಕದ ಕಾಲೋನಿಯಲ್ಲಿ “ಸರಳ ಯೋಗ ಸಂಸ್ಥೆ”ಯವರು ಆಯೋಜಿಸಿದ್ದ ಹತ್ತು ದಿನಗಳ ಯೋಗ ಶಿಬಿರದಲ್ಲಿ ಭಾಗವಹಿಸಲು ತನ್ನ ಹೆಸರನ್ನು ನೊಂದಾಯಿಸಿದ್ದ. “ಧ್ಯಾನ, ಪ್ರಾಣಾಯಾಮ, ಭಕ್ತಿಯೋಗ, ಆಹಾರ ಪದ್ಧತಿ, ವ್ಯಕ್ತಿತ್ವ ವಿಕಸನ ಮತ್ತು ಸಾರ್ಥಕ ಜೀವನಕ್ಕಾಗಿ ಯೋಗ. ಅಲರ್ಜಿ, ಅಸ್ಥಮಾ, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಸಂಧಿವಾತಗಳಂಥಹ ರೋಗಗಳನ್ನು ದೂರವಿಡುವುದಕ್ಕೆ ಯೋಗ. ಪೂಜ್ಯ ವಿವೇಕಾನಂದ ಗುರೂಜಿಯವರ ಅಮೃತವಾಣಿಯ … Read more

“ಕತ್ತಲ ಹೂವು” ನೀಳ್ಗತೆ (ಭಾಗ ೧೧): ಎಂ.ಜವರಾಜ್

ಭಾಗ – 11 ಈಗ ಚೆನ್ನಬಸವಿ ಮೊದಲಿನಂತಿಲ್ಲ. ಅಲ್ಲಿ ಇಲ್ಲಿ ಸುತ್ತುವುದೂ ಕಮ್ಮಿಯಾಗಿತ್ತು. ಹೊಟ್ಟೆನೋವು, ಮೈ ಕೈ ನೋವು, ಸುಸ್ತು ಸಂಕ್ಟದ ಮಾತಾಡುತ್ತಿದ್ದಳು. ಯಾರಾದರು ಸುಮ್ನೆ “ಇದ್ಯಾಕಕ್ಕ” ಅಂತ ಕೇಳಿದರೆ “ನಂಗ ಯಾರ ಏನಾ ಕೆಟ್ಟದ್ ಮಾಡರ.. ಅದ್ಕೆ ಏನ್ ಮಾಡುದ್ರು ನನ್ ಸಂಕ್ಟ ನಿಲ್ದು” ಅಂತ ನಟಿಕೆ ಮುರಿದು ಶಾಪಾಕ್ತ ದೇವ್ರು ದಿಂಡ್ರು ಅಂತ ಮಾಡೋಕೆ ಶುರು ಮಾಡಿದ್ದಳು. ಊರಿನಲ್ಲಿ ಒಬ್ಬ ಗೋವಿಂದ ಅಂತ. ಅವನು ನಿಧಾನಕ್ಕೆ ಜಬರ‌್ದಸ್ತ್ ಪುಡಾರಿಯಾಗಿ ಬೆಳೀತಿದ್ದ. ಊರಾಚೆ ದೊಡ್ಡ ಮನೆಯನ್ನೇ … Read more

ಅನ್ನಪೂರಣಿ – ರುಚಿ ಕಮ್ಮಿ, ಸ್ಮೆಲ್‌ ಜಾಸ್ತಿ: ಎಂ ನಾಗರಾಜ ಶೆಟ್ಟಿ

ʼಅನ್ನಪೂರಣಿ- ದಿ ಗೊಡೆಸ್‌ ಆಫ್‌ ಫುಡ್‌ʼ ಹೆಸರಿನ ತಮಿಳು ಚಿತ್ರ ಸುದ್ದಿ ಮಾಡುತ್ತಿದೆ. ಆಹಾರ ಸಂಸ್ಕೃತಿ, ಮಹಿಳೆಯರ ವೃತ್ತಿ ಸ್ವಾತಂತ್ರ್ಯ ಮತ್ತು- ವಿನಾಕಾರಣ- ಲವ್‌ ಜಿಹಾದ್‌ ಇವು ಚರ್ಚಿತವಾಗುತ್ತಿರುವ ವಿಷಯಗಳು. ಚಿತ್ರ ಆಹಾರದ ಮಡಿವಂತಿಕೆಯನ್ನು ತೋರಿಸುತ್ತದೆ; ವೃತ್ತಿಯ ಆಯ್ಕೆಯ ಬಗೆಗಿನ ಮಹಿಳೆಯರ ಮಿತ ಅವಕಾಶವನ್ನೂ ಪ್ರಸ್ತಾಪಿಸುತ್ತದೆ. ಆದರೆ ಲವ್‌ ಜಿಹಾದ್‌ ಎನ್ನುವುದು ಆರೋಪಿತವಾದದ್ದು ಮಾತ್ರವಲ್ಲ, ಚಿತ್ರದ ಆಶಯಕ್ಕೆ ವಿರುದ್ಧವಾಗಿದೆ. ಆದರೆ ಈ ಚರ್ಚೆಗಳಿಂದಾಗಿ ʼಅನ್ನಪೂರಣಿʼ ಬಿಡುಗಡೆಯ ಬಳಿಕ ಥಿಯೇಟರ್‌ನಲ್ಲಿ ಗಳಿಸಲಾಗದ್ದನ್ನು ಓಟಿಟಿಯ ಮುಖಾಂತರ ಗಳಿಸಿತು. ʼದಿ ಗ್ರೇಟ್‌ … Read more

“ಕತ್ತಲ ಹೂವು” ನೀಳ್ಗತೆ (ಭಾಗ ೧೦): ಎಂ.ಜವರಾಜ್

ಭಾಗ – 10 ನೀಲಳ ಅಪ್ಪ ನಿಂಗಯ್ಯನಿಗೆ ದಮ್ಮು ಸೂಲು ಬಂದು ಏನು ಮಾಡಿದರು ಆಗದೆ ಸತ್ತು ಹೋಗಿ ಈಗ್ಗೆ ಮೂರ‌್ನಾಕು ವರ್ಷಗಳೇ ಆಗಿದ್ದವು. ನೀಲಳ ಕೂದಲು ನೆರೆದು ತಲೆ ಕೂದಲು ಗಂಟುಗಂಟಾಗಿ ಗಟ್ಟಿಯಾಗಿ ಬೆಳ್ಳಗೆ ಕರ‌್ರಗೆ ಮಿಕ್ಸ್ ಆಗಿರೋ ತರ ಆಗಿ ಜಡೆ ಜಡೆಯಾಗಿತ್ತು. ಸುಶೀಲ ಎರಡನೆಯದರ ಮಗೂಗೆ ಬಾಣಂತನಕ್ಕೆ ಬಂದು ಕುಂತಿದ್ದಳು. ಪೋಲಿ ಅಲೀತಿದ್ದ ಸಿದ್ದೇಶನ ಮದ್ವೆ ಮಾತುಕತೆಗಳು ನಡೆದಿದ್ದವು. ಶಿವಯ್ಯ ತನ್ನ ಹನ್ನೊಂದು ಮಕ್ಕಳ ಪೈಕಿ ಗಂಡು ಮಕ್ಕಳು ಬಿಟ್ಟು ಉಳಿದ ಹೆಣ್ಣು … Read more

ಪಂಜು ಕಾವ್ಯಧಾರೆ

ತೋಳಗಳು ಅಳುತ್ತಿದೆ ಪುಟ್ಟ ಕಂದಎತ್ತಿಕೊಳ್ಳುವವರಿಲ್ಲದೇಕೆಸರು ಮೆತ್ತಿದೆ ಮೈಗೆ ಹೆಸರು ಭಾರತಿ ತೋಳಗಳು ಶುಭ್ರ ಬಟ್ಟೆ ತೊಟ್ಟುನಗುವಿನಲಂಕಾರದ ಬೊಟ್ಟನ್ನಿಟ್ಟುಗರತಿಯಂತೆ ಕೈ ಬೀಸುತ್ತಿವೆತಬ್ಬಲಿಯಾದಳು ಭಾರತಿ ತಬ್ಬುವ ತವಕದಲ್ಲಿಪಿತೂರಿಯ ಬಾಕನ್ನು ಅಡಗಿಸಿಟ್ಟಿಹರುಕೆದರಿದ ಕೇಶರಾಶಿಯ ಹಿಡಿದುಗಹಗಹಿಸುತಿಹ ತೋಳಗಳದ್ದು ಆತ್ಮರತಿ ಅಂಗಾಂಗ ಊನ ಮಾಡಿದವುಮುದ್ದು ಭಾರತಿ ಈಗ ಅಂಗವಿಕಲೆತೋಳಗಳ ಸಾಮ್ರಾಜ್ಯದಲ್ಲಿದಾರಿಗಾಣದೇ ನಿಂತಿಹ ಅಬಲೆ ಎದೆಯ ತೋಟದಲ್ಲಿ ಮಾತುಗಳ ಬೆಳೆಯಿಲ್ಲಬೇಡದ ಕಳೆ ಕಸ ಅಡ್ಡಾದಿಡ್ಡಿ ಬೆಳೆದ ಆಕ್ರೋಶತೋಳಗಳ ತೋಳ್ಬಲ ಹೆಚ್ಚಾಗಿದೆಊಳಿಡುತ್ತಿವೆ ಭಾರತಿಯ ಕರುಳ ಬಗೆದು ಏನು ಮಾಡಬಲ್ಲಳು ಅವಳುನಾಲಗೆಯ ಹೊರಗೆಳೆದಿವೆಕೈಕಾಲುಗಳ ಮುರಿದಿವೆತೋಳಗಳ ಕುಯುಕ್ತಿಗೆ ಎಲ್ಲೆಗಳುಂಟೇ!? ತಂದೆ … Read more

“ಕತ್ತಲ ಹೂವು” ನೀಳ್ಗತೆ (ಭಾಗ ೯): ಎಂ.ಜವರಾಜ್

ಭಾಗ -9 ಅವತ್ತು ಅಡಿನಿಂಗಿ ಸಿಲ್ಕ್ ಫ್ಯಾಕ್ಟರಿ ಕಾಂಪೌಂಡ್ ಮೂಲೇಲಿದ್ದ ಮರದ ಕೆಳಗೆ ನೀಲ ಶಿವನಂಜ ನಿಂತಿದ್ದು ನೋಡಿ ಲಕಲಕ ಅಂತ ಊರಿಗೇ ಗೊತ್ತಾಗುವಂತೆ ಮಾತಾಡಿದ್ದಾಯ್ತು. ಆಮೇಲೆ ಏನಾಯ್ತು… ಅವತ್ತೊಂದಿನ ನಡು ಮದ್ಯಾಹ್ನ. ನೀಲ ಕಾಲೇಜು ಮುಗಿಸಿ ಒಬ್ಬಳೇ ಬರುತ್ತಿದ್ದಳು. ನಸರುಲ್ಲಾ ಸಾಬರ ಭತ್ತದ ಮಿಲ್ ಕಾಂಪೌಂಡ್ ಕ್ರಾಸ್ ಹತ್ರ ಟ್ರಿಣ್ ಟ್ರಿಣ್ ಅಂತ ಬೆಲ್ಲು ಮಾಡುತ್ತಾ ಸೈಕಲ್ ಏರಿ ಬಂದ ಶಿವನಂಜ ಸರ‌್ರನೆ ಸೈಕಲ್ ನಿಂದ ಇಳಿದು ಅವಳ ಹೆಜ್ಜೆಗೆ ಹೆಜ್ಜೆ ಹಾಕ್ತ ಸೈಕಲ್ ತಳ್ಳಿಕೊಂಡು … Read more

ಮೌಲ್ಯಾಧಾರಿತ ಶಿಕ್ಷಣದ ಕೊರತೆ: ವಿಜಯ್ ಕುಮಾರ್ ಕೆ.ಎಂ.

“ಶಿಕ್ಷಣ”ವೆಂಬುದು ಮನುಷ್ಯನ ಜ್ಞಾನಕ್ಕೆ ಹಚ್ಚುವ ಜ್ಯೋತಿ. ಅಂತಹ ಜ್ಯೋತಿಯಿಂದ ಮೌಢ್ಯದ ತಾಮಸವನ್ನು ಅಳಿಸಿ ಮೌಲ್ಯಯುತ ಮನುಜನಾಗಲು ಸಾಕ್ಷಿಯಾಗಿರುವ ಇಂದಿನ ಶಿಕ್ಷಣದ ವ್ಯವಸ್ಥೆ ಹತ್ತಾರು ಆಯಾಮಗಳಲ್ಲಿ ತನ್ನ ಸತ್ವ ಕಳೆದುಕೊಂಡು ಕೇವಲ ಅಂಕಗಳಿಗೆ ಸೀಮಿತವಾಗಿ ವ್ಯಾಪಾರೀಕರಣದೆಡೆಗೆ ಸಾಗುತ್ತಿರುವಾಗ ಇಂದಿನ ಮಕ್ಕಳ ಮುಂದಿನ ಭವಿಷ್ಯ ನಿಜಕ್ಕೂ ಚಿಂತನೆಗೆ ಎಡೆ ಮಾಡಿಕೊಡದೆ ಇರದು. ಐದು ದಶಕಗಳ ಹಿಂದೆ ತಾಂತ್ರಿಕತೆ ಹೆಚ್ಚಾಗಿರದಿದ್ದರು ಶಾಲಾ ಶಿಕ್ಷಣದಲ್ಲಿ ಮೌಲ್ಯಾಧಾರಿತ ಶಿಕ್ಷಣಕ್ಕೇನು ಕೊರತೆ ಇರಲಿಲ್ಲ. ಕಾರಣ ಅಂದಿನ ಶಿಕ್ಷಣದಲ್ಲಿ ಕೇವಲ ಪಠ್ಯಧಾರಿತ ಶಿಕ್ಷಣವಲ್ಲದೆ ಮಗುವಿನ ಭವಿಷ್ಯಕ್ಕೆ ಬೇಕಾದ … Read more

ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಶ್ರೀರಾಮಪಟ್ಟಾಭಿಷೇಕಂ – ಒಂದು ತೌಲನಿಕ ವಿವೇಚನೆ: ಸಂತೋಷ್ ಟಿ.

“ರಾಮಾಯಣ ಜಗತ್ತಿನ ಮಹಾಕಾವ್ಯಗಳಲ್ಲಿ ಒಂದು. ಭಾರತಕ್ಕಂತೂ ಅದು ಆದಿ ಕಾವ್ಯ. ಅದನ್ನು ಕಾವ್ಯವೆಂದು ಆಸ್ವಾದಿಸುವ, ಪುರಾಣವೆಂದು ಆರಾಧಿಸುವ ಜನ ಕೋಟಿ ಕೋಟಿ. ಸಾಮಾನ್ಯ ಭಾರತೀಯನಿಗೆ ರಾಮಾಯಣವೊಂದು ಐತಿಹಾಸಿಕ ಘಟನೆ. ಅದರ ಬಗೆಗೆ ಅವನಲ್ಲಿ ಯಾವ ಪ್ರಶ್ನೆಗೂ, ಶಂಕೆಗೂ ಆಸ್ಪದವಿಲ್ಲ. ಸಂಸ್ಕೃತದಲ್ಲಿಯೂ ನಮ್ಮ ದೇಶಭಾಷೆಗಳಲ್ಲಿಯೂ ರಾಮಾಯಣ ಸಾವಿರಾರು ಕೃತಿಗಳಿಗೆ ಆಕರವಾಗಿದೆ. ಸಾವಿರಾರು ಕವಿಗಳಿಗೆ ಸ್ಫೂರ್ತಿಯನ್ನೊದಗಿಸಿದೆ. ಅದರ ಪಾತ್ರಗಳು ಪ್ರಸಂಗಗಳು ಆದರ್ಶಗಳು ನಾನಾ ವಿಧದ ಕಲಾಕೃತಿಗಳಾಗಿ ರೂಪ ತಾಳಿವೆ. ರಾಮಾಯಣ ಎಷ್ಟರ ಮಟ್ಟಿಗೆ ಜನಪ್ರಿಯವಾಯಿತೆಂದರೆ, ಎಷ್ಟು ಕೃತಿಗಳು ಅದನ್ನು ಆಧರಿಸಿ … Read more

ಮಹಿಳೆಯ ಘನತೆಯನ್ನು ಎತ್ತಿ ಹಿಡಿಯುವ ದಿಟ್ಟ ಸಿನಿಮಾ – ಕಾತಲ್‌ ದ ಕೋರ್: ಚಂದ್ರಪ್ರಭ ಕಠಾರಿ

ಪ್ರತಿಭಾವಂತ ಮಲಯಾಳಮ್ ನಿರ್ದೇಶಕ  ಜೊ ಬೇಬಿ –  2021ರಲ್ಲಿ ತೆರೆಗೆ ತಂದ ʼದ ಗ್ರೇಟ್‌ ಇಂಡಿಯನ್‌ ಕಿಚನ್‌ʼ ಸಿನಿಮಾಕ್ಕೂ ಮುಂಚೆ ರೆಂಡು ಪೆಣ್‌ ಕುಟ್ಟಿಕಲ್‌, ಕುಂಜು ದೇವಮ್‌, ಕಿಲೊಮೀಟರ್‌ ಕಿಲೋಮೀಟರ್ ಮತ್ತು ನಂತರ ಕೂಡ ಹಲವು ಸಿನಿಮಾಗಳನ್ನು ಫ್ರೀಡಮ್‌ ಫೈಟ್‌, ಶ್ರೀಧನ್ಯ ಕ್ಯಾಟೇರಿಂಗ್‌ ಸರ್ವೀಸ್ ನಿರ್ದೇಶಿಸಿದ್ದರೂ ʼದ ಗ್ರೆಟ್‌ ಇಂಡಿಯನ್‌ ಕಿಚನ್‌ʼ ಅವರಿಗೆ ಬಹು ಖ್ಯಾತಿಯನ್ನು ತಂದು ಕೊಟ್ಟ ಸ್ತ್ರೀಸಂವೇದನೆಯ ಸಿನಿಮಾ.  ಗೃಹಿಣಿಯನ್ನು ಅಡುಗೆಮನೆಗೆ ಸೀಮಿತಗೊಳಿಸಿ, ಅವಳ ಸ್ವಾತಂತ್ರ್ಯ, ಅಸ್ತಿತ್ವವನ್ನು ಕಸಿದುಕೊಂಡ ಪುರುಷ ಯಜಮಾನಿಕೆಯನ್ನು ಪ್ರಶ್ನಿಸುವ ವಿಶಿಷ್ಟ … Read more

ಮೂರು ಕವನಗಳು: ಸುಮತಿ‌ ಕೃಷ್ಣಮೂರ್ತಿ

ಸಮರ ಮಿಣುಕು ನಕ್ಷತ್ರಗಳ ಒಡ್ಡೋಲಗರಾಕೇಂದು ಆಸ್ಥಾನದಲಿ ಮಹಾ ಕಾಳಗ ಹೆಚ್ಚು ಹೊಳೆಯುವ ಚುಕ್ಕಿ ಯಾವುದೆಂದುಬಾನ್ ಕಡಲ ಹೊಳೆ ಮುತ್ತು ತಾನೇ ಎಂದು ಕೋಟಿ ಕೋಟಿ ತೇಜ ಪುಂಜಗಳಿಗೆಹರಿಯುತಿದೆ ಅಪರಿಮಿತ ಬೆಳಕ ಬುಗ್ಗೆ ಸುಧಾಂಶುವಿನ ಸ್ನಿಗ್ಧ ಸೊದೆಯ ಕುಡಿದುಉನ್ಮತ್ತ ತಾರೆಗಳು ಮನದುಂಬಿ ಕುಣಿದು ಇರಳೂರ ಪ್ರಜೆಗಳಿಗೆ ಹೊನಲು ಹಬ್ಬಸಜ್ಜುಗೊಂಡಿದೆ ಇಂದು ಹುಣ್ಣಿಮೆಯ ದಿಬ್ಬ ಕಾತರದಿ ಕೈ ಕಟ್ಟಿ ಕಾಯುತಿರುವಶಾಮನ ಮನದಲ್ಲಿ ಪ್ರೇಮ ಕಲರವ ಬೆದರುತ್ತ ಬೆವರುತ್ತಾ ಬಂದ ನಲ್ಲೆವಿರಹ ಬೇಗೆಯಲಿ ನರಳಿತ್ತು ಮುಡಿದ ಮಲ್ಲೆ ಯಮುನೆಗೂ ವಿಸ್ತಾರ ಬೆಳದಿಂಗಳುನಾಚುತಲಿ … Read more

“ಕತ್ತಲ ಹೂವು” ನೀಳ್ಗತೆ (ಭಾಗ ೮): ಎಂ.ಜವರಾಜ್

ಭಾಗ – ೮ ಶಿವಯ್ಯನ ಅವ್ವ ಅಡಿನಿಂಗಿ ಸತ್ತು ಎರಡು ಎರಡೂವರೆ ವರ್ಷವೇ ಕಳೆದಿತ್ತು. ಅಡಿನಿಂಗಿ ಮಲಗುತ್ತಿದ್ದ ರೂಮೀಗ ಶಿವಯ್ಯನ ಹಿರೀಮಗನ ಓದಕೆ ಮಲಗಾಕೆ ಆಗಿತ್ತು. ಚಂದ್ರ ತನ್ನ ಅಣ್ಣನ ರೂಮಿಗೆ ಹೋಗಿ ಅವನ ಪುಸ್ತಕಗಳನ್ನು ಎತ್ತಿ ಎತ್ತಿ ನೋಡುತ್ತಿದ್ದ. ಒಂದು ಉದ್ದದ ಬೈಂಡಿತ್ತು. ಅದರ ಮೇಲೆ ಉದ್ದವಾದ ಮರದ ಸ್ಕೇಲಿತ್ತು. ಜಾಮಿಟ್ರಿ ಬಾಕ್ಸಿತ್ತು. ಮೂಲೇಲೆ ಒಂದು ದಿಂಡುಗಲ್ಲಿನ ಮೇಲೆ ಗ್ಲೋಬ್ ಇತ್ತು. ಅದನ್ನು ತಿರುಗಿಸಿದ. ಗೋಡೆಯಲ್ಲಿ ಇಂಡಿಯಾ ಮ್ಯಾಪು ಗಾಂಧೀಜಿ ಫೋಟೋ ತಗಲಾಗಿತ್ತು. ಹೊರಗೆ ಅಣ್ಣನ … Read more

ಚಾಕು ಹಿಡಿದು ನಿಲ್ಲುತ್ತಾನೆ !: ಕೆ ಟಿ ಸೋಮಶೇಖರ ಹೊಳಲ್ಕೆರೆ

ಅವಳು ಯಾರ್ಯಾರೋ ಸುರಸುಂದರಾಂಗರು ಉನ್ನತ ಉದ್ಯೋಗದವರು ಬಂದರೂ ಬೇಡ ನನಿಗೆ ಇಂಜಿನಿಯರೇಬೇಕು ಎಂದು ಬಂದವರೆಲ್ಲರನ್ನು ನಿರಾಕರಿಸಿದಳು. ಕೊನೆಗೆ ಒಬ್ಬ ಇಂಜಿನಿಯರ್ ಒಪ್ಪಿಗೆಯಾದ. ಅವನಿಗೂ ಒಪ್ಪಿಗೆಯಾದಳು. ಮದುವೆಯೂ ಆಯಿತು. ಕಂಪನಿ ಕೊಟ್ಟ ಕಡಿಮೆ ರಜೆಯನ್ನು ಅತ್ತೆ ಮಾವರ, ನೆಂಟರಿಷ್ಟರ ಮನೆಯಂತೆ ಹನಿಮೂನಂತೆ ಅಂತ ಎಲ್ಲಾ ಸುತ್ತಿ ಮುಗಿಸಿದರು. ಎಲ್ಲಾ ಸುತ್ತಾಡಿದಮೇಲೆ ಉದ್ಯೋಗದ ಕೇಂದ್ರ ಸ್ಥಾನವನ್ನು ಬಂದು ಸೇರಲೇಬೇಕಲ್ಲ? ಇಬ್ಬರೂ ಪ್ರತಿದಿನ ಕಂಪನಿಗೆ ಕೆಲಸಕ್ಕೆ ಹೋಗುತ್ತಿದ್ದರು. ಪ್ರತಿದಿನ ಬೆಳಿಗ್ಗೆ 9 ಗಂಟೆಗೆ ಮನೆಬಿಟ್ಟು ಸಂಜೆ 6 ಗಂಟೆಗೆ ಮನೆಗೆ ಬರುತ್ತಿದ್ದರು. … Read more

ಮುತ್ತಾಗದ ‘ಸ್ವಾತಿ ಮುತ್ತಿನ ಮಳೆ ಹನಿ…’: ಎಂ ನಾಗರಾಜ ಶೆಟ್ಟಿ

                  ʼ ಒಂದು ಮೊಟ್ಟೆಯ ಕತೆ ʼ ಯಿಂದ ʼಸ್ವಾತಿ ಮುತ್ತಿನ ಮಳೆ ಹನಿಯೆʼ ತನಕ ರಾಜ್‌ ಬಿ ಶೆಟ್ಟಿ ಹಲವು ಅವತಾರಗಳನ್ನು ಎತ್ತಿದ್ದಾರೆ. ಅವರ ಸೃಜನಶೀಲತೆ ಹಲವು ಪ್ರಯೋಗಳನ್ನು ಆಗು ಮಾಡಿದೆ; ಯಶಸ್ಸೂ ದಕ್ಕಿದೆ. ಅವರ ಹಿಂದಿನ ಚಿತ್ರಗಳಿಗಿಂತ ಭಿನ್ನವಾಗಿರುವ ʼಸ್ವಾತಿ ಮುತ್ತಿನ ಮಳೆ ಹನಿಯೆʼ ಸಿನಿಮಾ ಅವರ ಸಿನಿ ಪಯಣದ ಇನ್ನೊಂದು ʼತಿರುವೆʼನ್ನಬಹುದು. ಇದರಲ್ಲಿ ರಾಜ್‌ ಬಿ ಶೆಟ್ಟಿ ಪ್ರೇಕ್ಷಕರ ಅಭಿರುಚಿಗೆ ಹೊಂದುವ ಸಿನಿಮಾದ ಮಾಡುವ ಬದಲಾಗಿ ತಮಗೆ ಪ್ರಿಯವಾದುದನ್ನು ತೆರೆಯ ಮೇಲೆ ತರುವ … Read more

ಪ್ರತಿ ಸಾವಿನ ಹಿಂದೆ: ಅಶ್ಫಾಕ್ ಪೀರಜಾದೆ

ಸಮೃದ್ಧವಾದ ಜಾನುವಾರು ಸಂಪತ್ತು ಹೊಂದಿದ್ದ ಜನಪದ ಜಗತ್ತು ಅಕ್ಷರಶಃ ತತ್ತರಿಸಿ ಹೋಗಿತ್ತು. ದನಕರುಗಳು ರಾಶಿ ರಾಶಿಯಾಗಿ ಉಸಿರು ಚೆಲ್ಲುತ್ತಿದ್ದವು. ಮೃತ ದೇಹಗಳನ್ನು ಜೇಸಿಬಿ ಬಳಸಿ ಭೂಮಿಯೊಡಲಿಗೆ ನೂಕಲಾಗುತ್ತಿತ್ತು. ಪ್ರಾಣಿಗಳ ಮೂಕ ರೋಧನ ಆ ಭಗವಂತನಿಗೂ ಕೇಳಿಸದಾಗಿ ಆ ದೇವರು ಎನ್ನುವ ಸೃಷ್ಟಿಯೇ ಸುಳ್ಳು ಎನ್ನುವ ಕಲ್ಪನೆ ರೈತಾಪಿ ಜನರಲ್ಲಿ ಮೂಡುವಂತಾಗಿತ್ತು. ಇಂಥ ಒಂದು ಭಯಾನಕ ದುಸ್ಥಿತಿ ಹಿಂದೆಂದೂ ಕಂಡು ಬಂದಿರಲಿಲ್ಲ. ಇಡೀ ರೈತ ಸಮುದಾಯ ಆತಂಕದ ಸ್ಥಿತಿಯಲ್ಲಿ ಕಣ್ಣೀರು ಸುರಿಸುತ್ತ ಕಂಗಾಲಾಗಿ ಕುಳಿತಿದ್ದರೆ ಪಶು ವೈದ್ಯ ಲೋಕ … Read more

ಕಪ್ಪೆರಾಯನ ಟ್ರೈನಿಂಗ್….: ರೂಪ ಮಂಜುನಾಥ

ಮನುಷ್ಯ ಭಾಳ ಸ್ವಾರ್ಥಿ ಕಣ್ರೀ. ಏನಾದ್ರೂ ಒಳ್ಳೆಯದಾಗ್ಲಿ, ಕರ್ಮ, ವಿಧಿ, ಹಣೆಬರಹ, ಪ್ರಾರಬ್ಧಗಳನ್ನೆಲ್ಲಾ ಮರ್ತೇಬಿಡ್ತಾನೆ. ತನ್ನ ಸಫಲತೆಯ ಕಾರಣಕ್ಕೆ ತನ್ನ ಸಾಧನೆಯ ಹಾದಿಯ ಪಟ್ಟಿಯನ್ನೇ ಕೊಡ್ತಾನೆ. ಅದೇ ಏನಾದ್ರೂ ವಿಷ್ಯ ಉಲ್ಟಾ ಆಯ್ತಾ, ಆ ಸೋಲಿಗೆಲ್ಲಾ ಕರ್ಮ, ವಿಧಿ…..ಮುಂತಾದವುಗಳ ಮೇಲೆ ಆರೋಪ ಹೊರಿಸಿ ತಾನು ಬಲು ಸಾಚಾ ಅಂತ ತನ್ನ ಹುಳುಕನ್ನ ತೇಪೆ ಹಾಕಿ ಮುಚ್ಚಿಕೊಳ್ತಾನೆ. ನಾನೂ ಮನುಷ್ಯಳೇ ಆಗಿರುವುದರಿಂದ ಇದಕ್ಕೆ ನಾನೂ ಹೊರತಲ್ಲ ಬಿಡಿ.ಇದೇ ರೀತಿ ನಾವು ನುಣುಚಿಕೊಳ್ಳೋದೂಂದ್ರೆ,”ಅಯ್ಯೋ ಯಾಕೋ ಸಮಯ ಕೂಡಿ ಬರ್ಲೇ ಇಲ್ಲ”,ಅಂತ … Read more

“ಕತ್ತಲ ಹೂವು” ನೀಳ್ಗತೆ (ಭಾಗ ೭): ಎಂ.ಜವರಾಜ್

ಭಾಗ 7 ದಂಡಿನ ಮಾರಿಗುಡಿಲಿ ಕುಣೀತಿದ್ದ ನೀಲಳಿಗೆ ಅವಳ ಅವ್ವ ಸ್ಯಬ್ಬದಲ್ಲಿ ಹೊಡೆದು ಕೆಂಗಣ್ಣು ಬಿಟ್ಟು ಕೆಂಡಕಾರಿದ್ದು ಕಂಡು ದಿಗಿಲುಗೊಂಡ ಚಂದ್ರ ನಿಧಾನಕೆ ಮುಂಡಗಳ್ಳಿ ಬೇಲಿ ಮರೆಯಲ್ಲೇ ಸಾವರಿಸಿಕೊಂಡು ದೊಡ್ಡವ್ವನ ಹಿಂದೆಯೇ ಬಂದು ನಿಂತಿದ್ದ. ಅವನ ಕಿರಿ ತಮ್ಮ ಗೊಣ್ಣೆ ಸುರಿಸಿಕೊಂಡು ಚಂದ್ರನ ತಲೆಯನ್ನು ಸಸ್ದು ಸಸ್ದು ದಂಡಿನ ಮಾರಿಗುಡಿಗೇ ಕರೆದುಕೊಂಡು ಹೋಗುವಂತೆ ಆಕಾಶ ಭೂಮಿ ಒಂದಾಗ ತರ ಕಿಟಾರನೆ ಕಿರುಚುತ್ತ ಕಣ್ಣೀರು ಹರಿಸುತ್ತ ಗೋಳೋ ಅಂತ ಅಳುತ್ತಿತ್ತು. ಚಂದ್ರ ಸಿಟ್ಟುಗೊಂಡು ಅಳುತ್ತಿದ್ದ ತಮ್ಮನನ್ನು ಸೊಂಟದಿಂದ ಕೆಳಗಿಳಿಸಿ … Read more