ಮೂರು ಕವಿತೆಗಳು: ಗೀತಾ ಡಿ. ಸಿ.
೧. ಮಹಾಕಾವ್ಯ ಬೀಜ ಮೊಳಕೆಯೊಡೆದುಮಣ್ಣಿನಾಳಕ್ಕೆ ಬೇರೂರುತ್ತಲೇಕತ್ತಲ ಮಣ್ಣಗರ್ಭ ಸೀಳಿಬೆಳಕು ಮೋಡ ಗಾಳಿ ಮಳೆಬಿಸಿಲು ಬೆಳದಿಂಗಳಿಗೆಮೈಯ್ಯೊಡ್ಡುತ್ತಾ ಮೊಗ್ಗಾಗಿಹೂವು ಹೀಚು ಕಾಯಿಹಣ್ಣಾಗಿ ಮಾಗಿ ಮಣ್ಣುಸೇರುವ ಅನುದಿನದಾಟಅಷ್ಟು ಸುಲಭದ್ದೇನೂ ಅಲ್ಲ. ಇಲಿ ಹೆಗ್ಗಣಗಳಾದಿಯಾಗಿದೊಡ್ಡ ಬೇರುಗಳ ನಡುವೆದಿಟ್ಟತನದಿ ಗಟ್ಟಿ ಬೇರೂರಿಒಂದಿಷ್ಟು ಚಿಗುರ ಚಾಚಿದರಷ್ಟಕ್ಕೇಮುಗಿಯುವುದಿಲ್ಲ..ಬಿಸಿಲು ಮಳೆ ಗಾಳಿಗಳ ಹೊಡೆತಕ್ಕೆದನಕರುಗಳ ಮನುಜರಕೈಕಾಲು ಬಾಯಿಗಳಿಂದಲೂಬಚಾವಾಗಬೇಕು! ತನ್ನ ಗುರುತೂರಲುಬೀಜ ಮೊಳಕೆಯೊಡೆದುಹಣ್ಣಾಗಿ ಮಣ್ಣಸೇರಿಮತ್ತೆ ಚೆಗುರೊಡೆಯಲುನಿತ್ಯ ಕನಸು ಭರವಸೆಗಳಹೊತ್ತು ನಂಬಿಕೆಯೇ ತಾನಾಗಿಬಯಲಲ್ಲಿ ಬಯಲಾಗಿಎಚ್ಚರದಿ ಸಹಜತನದಲಿತನ್ನನೊಡ್ಡಿಕೊಳ್ಳುತ್ತಲಿರಬೇಕು.. ಮುಗಿಲೆತ್ತರಕೆ ಬೆಳೆದರಷ್ಟೆ ಸಾಕೆ?ಮೊಗ್ಗು ಹೂವಾಗಿ ಕಂಪಬೀರಬೇಕುಹೀಚು ಕಾಯಾಗಿ ಹಣ್ಣಾಗಿಬಯಸಿದವರ ಬೊಗಸೆತುಂಬಬೇಕುನಂಬಿದವರ ಹಸಿವೆ ನೀಗಬೇಕು…ತಿಂದವರ ತೃಪ್ತಿರಲಿ ಬೀಜಮತ್ತೆ … Read more