ಯಾವುದೇ ಸಮಸ್ಯೆಯಿಂದಲೂ ಹೊರ ಬರುವ ಮಾರ್ಗ: ಕೆ. ಶ್ರೀನಿವಾಸ ರೆಡ್ಡಿ

ಬದುಕಿನಲ್ಲಿ ಪರಿವರ್ತನೆಯೆಂಬುದು ನಿರಂತರವಾಗಿದೆ. ಈ ಪರಿವರ್ತನೆಗಳು ಸವಾಲುಗಳನ್ನು ನಾವು ಬಹುತೇಕ ಸಮಸ್ಯೆಗಳು ಎಂತಲೇ ಪರಿಗಣಿಸುತ್ತೇವೆ. ಆದ್ದರಿಂದಲೇ ನಾವು ಅದರಿದ ಬಳಲುವುದು ಕುಗ್ಗಿಹೋಗುವುದೇ ಇದೆ. ಇದರಿಂದ ನಮಗೆ ಮತ್ತೂ ಹಾನಿಯಾಗುತ್ತದೆ. ಸವಾಲನ್ನು ಎದುರಿಸಲು ಅಗತ್ಯವಾಗಿರುವ ಸಂಪನ್ಮೂಲಗಳನ್ನು ನಾವು ದುರ್ಬಲಗೊಳಿಸಿಕೊಳುತ್ತೇವೆ. ಈಗ ನಾವು ಮಾಡುವುದಾದರೂ ಏನು? ಗಮನಿಸಿದರೆ ಇಲ್ಲಿ ಎಲ್ಲವೂ ಫಲಿತಾಂಶಗಳೇ ಆಗಿವೆ. ನಮ್ಮ ದೃಷ್ಟಿಯಲ್ಲಿ ಸೋಲೆಂದರೆ ನಾವು ಅಂದುಕೊಂಡದ್ದು ಆಗದಿರುವುದು. ಸಮಸ್ಯೆಯೆಂದರೆ ನಾವು ಅದನ್ನು ಎದುರಿಸಲಾರವೇನೋ ಇದರಿದ ನಮಗೆ ಹಾನಿಯೇ ಆಗುವುದೇನೋ ಹಾನಿಯಾದರೆ ಏನು ಮಾಡುವುದು ಎಂಬ ಊಹೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನೆನಪು: ಕೆ. ನಲ್ಲತಂಬಿ

ತಮಿಳಿನಲ್ಲಿ: ವಣ್ಣನಿಲವನ್ಕನ್ನಡಕ್ಕೆ: ಕೆ. ನಲ್ಲತಂಬಿ “ಹೋಗಲಿಕ್ಕೆ ಒಂದು ಗಂಟೆ, ಬರಲಿಕ್ಕೆ ಒಂದು ಗಂಟೆ. ಅಲ್ಲಿ ಅಣ್ಣನ ಮನೆಯಲ್ಲಿ ಹತ್ತು ನಿಮಿಷ ಆಗುತ್ಯೇ? ಈಗ ಗಂಟೆ ಹತ್ತೂವರೆ ಆಗಲಿದೆ. ಎರಡು ಎರಡುವರೆಯೊಳಗೆ ಬಂದು ಬಿಡಬಹುದು. ಹೋಗಿ ಹಣ ತೆಗೆದುಕೊಂಡು ಬಾ” ಎಂದ ಸೆಲ್ಲಚ್ಚಾಮಿ. ಸರೋಜಳಿಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಅಲ್ಲಿ ಕಲ್ಲಿಡೈಕುರುಚ್ಚಿ ರಾಮಸಾಮಿಯನ್ನು ನೆನಪು ಮಾಡಿಕೊಂಡರೆ ವಾಕರಿಕೆ ಬರುತ್ತದೆ.“ನಾನು ಅಂಗಡಿಯನ್ನು ನೋಡಿಕೊಳ್ಳುತ್ತೇನೆ. ನೀವು ಹೋಗಿ ಕೇಳಿ ತೆಗೆದುಕೊಂಡು ಬನ್ನಿ” ಎಂದಳು ಸರೋಜ. “ಅದು ಗೊತ್ತಿಲ್ಲವೇನು. ನಾನು ನಿನ್ನನ್ನು ಹೋಗಲು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಗ್ರೀಸ್‍ಮನ್: ಡಾ. ಶಿವಕುಮಾರ ಡಿ.ಬಿ 

ಅಂದು ಜಯಣ್ಣ ಎಂದಿನಂತೆ ಇರಲಿಲ್ಲ. ಕೊಂಚ ವಿಷಣ್ಣನಾಗಿ ಕೂತಿದ್ದ. ಅವನ ತಲೆಯಲ್ಲಿ ಮಗಳ ಶಾಲಾ ಶುಲ್ಕ, ಮನೆಗೆ ಬೇಕಾಗಿರುವ ದಿನಸಿ ಪದಾರ್ಥಗಳಿಗೆ ಯಾರ ಬಳಿ ಹಣಕ್ಕಾಗಿ ಅಂಗಲಾಚುವುದು? ಎಂಬ ಚಿಂತೆ ಆವರಿಸಿತ್ತು. ಇತ್ತೀಚೆಗೆ ಯಾಕೋ ಮೊದಲಿನಂತೆ ಲಾರಿಗಳು ಟ್ರಕ್ ಲಾಬಿಯಲ್ಲಿ ಸರಿಯಾಗಿ ನಿಲ್ಲುತ್ತಿರಲಿಲ್ಲ. ಹೀಗಾಗಿ ಲಾರಿಗಳಿಗೆ ಗ್ರೀಸ್ ತುಂಬುವ ಕೆಲಸವು ಸರಿಯಾಗಿ ನಡೆಯದೆ ಸಂಸಾರದ ನಿರ್ವಹಣೆ ಕಷ್ಟವಾಗಿತ್ತು. ಅದರಲ್ಲೂ ಜಯಣ್ಣನ ಅಕ್ಕಪಕ್ಕದ ವೃತ್ತಿಸ್ನೇಹಿತರೇ ಅವನಿಗೆ ಪೈಪೋಟಿಯಾಗಿ ನಿಂತಿದ್ದರು. ಲಾರಿ ತಮ್ಮ ಮುಂದೆ ನಿಲ್ಲುವುದೇ ತಡ ತಾ ಮುಂದು, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಲೀಮ ಭಾರತಿ ಅವರ “ಕಾರ್ಲ್ ಮಾರ್ಕ್ಸ್ ಜೀವನ ಪರಿಚಯ” ಒಂದು ಮರು ಓದು.: ಅಶ್ಫಾಕ್ ಪೀರಜಾದೆ.

ಕಮ್ಯೂನಿಸಂ : ಎಲ್ಲ ಸ್ವತ್ತೂ ಸಮುದಾಯಕ್ಕೆ ಸೇರಿದುದೆಂದೂ ಪ್ರತಿಯೊಬ್ಬ ವ್ಯಕ್ತಿಯೂ ಶಕ್ತ್ಯನುಸಾರವಾಗಿ ದುಡಿದು ಆವಶ್ಯಕತೆಗೆ ಅನುಸಾರವಾಗಿ ಪ್ರತಿಫಲ ಪಡೆಯಬೇಕೆಂದೂ ಪ್ರತಿಪಾದಿಸುವ ತತ್ತ್ವ (ಸಾಮ್ಯವಾದ).ಮಾರ್ಕ್ಸ್ ಮತ್ತು ಎಂಗೆಲ್ಸ್‌ ರಿಂದ ಪ್ರಪ್ರಥಮವಾಗಿ ಶಾಸ್ತ್ರೀಯವಾಗಿ ಪ್ರತಿಪಾದಿತವಾದ ಈ ತತ್ತ್ವಕ್ಕೆ ವೈಜ್ಞಾನಿಕ ಸಮಾಜವಾದವೆಂದೂ ಹೆಸರಿದೆ. (ವಿಕಿಪಿಡಿಯಾ) ಕಾಲ ಎಂಬುದು ಎಂದಿಗೂ ನಿಂತ ನೀರಲ್ಲ. ಸದಾ ಹರಿಯುತ್ತಲೇ ಇರುವ ಮಹಾ ಪ್ರವಾಹ. ಹಲವಾರು ತಿರುವು, ಹಲವಾರು ಘಟ್ಟಗಳು ಮತ್ತು ಪಲ್ಲಟಗಳು ಸಂಭವಿಸುತ್ತಲೇ ಹೊಸ ಹೊಸ ಸಾಮಾಜಿಕ, ರಾಜಕೀಯ, ಸಾಹಿತ್ಯಿಕ ಸಿದ್ಧಾಂತಗಳು, ಆಯಾಮಗಳು ಕೊನೆಗೆ ಒಂದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಜಾದು ಕಾರ್ಯಕ್ರಮ: ಹೆಚ್. ಶೌಕತ್ ಆಲಿ ಮದ್ದೂರು

ಒಂದು ದಿನ ಶಾಲೆಗೆ ಒಬ್ಬ ಜಾದುಗಾರ ಬಂದ. ಬಂದವನೇ ಅದು ಇದು ಎನ್ನದೆ ಸೀದಾ ತನ್ನ ಪರಿಚಯ ಮಾಡಿಕೊಂಡ “ಎಲ್ಲರಿಗೂ ನಮಸ್ಕಾರ ನನ್ನ ಹೆಸರು ರಾಜ, ನಾನು ಮನರಂಜನೆಗಾಗಿ ಜಾದು ಮಾಡುತ್ತೇನೆ. ಶಾಲೆಯ ಮಕ್ಕಳಿಗೆ ಒಂದು ಅವಧಿ ಬಿಡುವು ಮಾಡಿಕೊಡಿ ಹಾಗೆ ಮಕ್ಕಳನ್ನು ಒಂದು ಕಡೆ ಸೇರಿಸಿ, ನಾನು ನಿಮ್ಮಿಂದ ಏನನ್ನು ನಿರೀಕ್ಷಿಸುವುದಿಲ್ಲ ದಯಮಾಡಿ ಅವಕಾಶ ಮಾಡಿಕೊಡಿ ಮೇಡಂ “ಎಂದು ಮುಖ್ಯ ಶಿಕ್ಷಕಿಯಲ್ಲಿ ಬೇಡಿಕೊಂಡಾಗ ಮುಖ್ಯ ಶಿಕ್ಷಕಿ ಕೆಲವು ಶರತ್ತುಗಳನ್ನು ಹೇಳಿ ಸಮಯ ಒಂದು ಅವಧಿ ಮಾತ್ರವೇ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬೆತ್ತಲೆ ಒಂದು ಸುಂದರವಾದ ಸ್ಥಿತಿ ಎನ್ನುವ “ಅತ್ತರ್”:‌ ಡಾ. ನಟರಾಜು ಎಸ್‌ ಎಂ

ತಮ್ಮ “ಬೇರು” ಕೃತಿಗಾಗಿ ಕೇಂದ್ರ ಯುವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಗೆಳೆಯ ಶ್ರೀಧರ ಬನವಾಸಿಯವರು ಕಳೆದ ವಾರ ‌ತಮ್ಮ ಪಂಚಮಿ ಪ್ರಕಾಶನದಿಂದ ಹೊರ ತಂದಿರುವ ಕೆ ನಲ್ಲತಂಬಿಯವರ ಹೊಚ್ಚ ಹೊಸ ಕೃತಿ “ಅತ್ತರ್” ಅನ್ನು ಕಳುಹಿಸಿಕೊಟ್ಟಿದ್ದರು. ಸಾಹಿತ್ಯ ಲೋಕದಲ್ಲಿ ಹೆಸರು ಮಾಡಿರುವ ಗೆಳೆಯ ಶ್ರೀಧರ್‌ ತಮ್ಮ ಪ್ರಕಾಶನ ಸಂಸ್ಥೆಯಿಂದ ನಲವತ್ತೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. “ಅತ್ತರ್”‌ ಇವರ ಸಂಸ್ಥೆ ಪ್ರಕಟಿಸಿರುವ ಕೆ ನಲ್ಲತಂಬಿಯವರ ಮೊದಲ ಪುಸ್ತಕ. ಕೆ ನಲ್ಲತಂಬಿಯವರು ಅನುವಾದ ಕ್ಷೇತ್ರದಲ್ಲಿ ತುಂಬಾ ಹೆಸರು ಮಾಡಿರುವವರು. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ನಿನ್ನ ಸಂಧಿಸಿದ ಕುರಿತು ಒಂದಿನಿತೂ ಕಾಣಿಸದಕತ್ತಲೆಯ ಪ್ರಖರತೆಯಲ್ಲಿನಿನ್ನ ಸಂಧಿಸಿದ ಕುರಿತು… ಈರ್ವರ ಭೋರ್ಗರೆವ ಮೌನಗಳುಡಿಕ್ಕಿ ಹೊಡೆದು..ಗುಡುಗೂ.. ಸಿಡಿಲೂ..!ಅಂತಿಪ್ಪ ಕಾಲದ ನೆತ್ತಿಯನ್ನುತುಸುವೇ ನೇವರಿಸುತ್ತಾತೇವದ ಅರಿವಾಗಿ ನಿಂತೆ..ತೇಲು ಮೋಡವ ಹೊತ್ತನಿನ್ನ ಕಣ್ಣು ಹನಿಸಿದ್ದು ಇರಬಹುದೇಅನಿಸಿ ಒಂದಷ್ಟು ನಿಟ್ಟುರಿಸು.. ನಿನ್ನ ಮುಂಗುರುಳ ಗಾಳಿಗೆ ತಾಕಿಸದ್ದಿಲ್ಲದ ಮಾತುಗಳ ಪಟ ಪಟ ಸದ್ದು..ಬಯಲು ಆಗಸದ ತಾರೆಗಳು ನಮ್ಮ ಕಂಡಾವುಎಂಬ ನಾಚಿಕೆ ತುಸು ಹೆಚ್ಚು ನನಗೇ.. ಗಳಿಗೆಗಳು ಉರುಳಿದವು..ಸೂರ್ಯನ ಟಾರ್ಚು ಮೊಗದ ಮೇಲೆ ನೇರಾ..ಎಲ್ಲಿದ್ದೇನೆ ನಾನು ಅಂದುಕೊಳ್ಳುವಷ್ಟರಲ್ಲೇನೀನೆಲ್ಲಿ ಮಂಗ ಮಾಯ …? ಹಾ.. ಅಲ್ನೋಡು ಸುಟ್ಟು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಮ್ಮ ಶ್ರೀರಾಮಚಂದ್ರನಿಗೊಂದು ಹೆಣ್ಣು ಕೊಡಿ: ಪ್ರಶಾಂತ್ ಬೆಳತೂರು

ಹೆಗ್ಗಡದೇವನಕೋಟೆಯಿಂದ ೨೫ ಕಿ.ಮೀ. ದೂರದಲ್ಲಿರುವ ಬೆಟ್ಟದ ಕೆಳಗಿನ ಕೂಲ್ಯ‌ ಗ್ರಾಮದ ನಮ್ಮ ಈ ಶ್ರೀರಾಮಚಂದ್ರ ಓದಿದ್ದು ಎಸ್. ಎಸ್. ಎಲ್. ಸಿ.ಯವರೆಗೆ ಮಾತ್ರ.ಬಾಲ್ಯದಿಂದಲೂ ಓದಿನಲ್ಲಿ ಆಸಕ್ತಿ ಇರದ ಶ್ರೀರಾಮಚಂದ್ರನಿಗೆ ದನ-ಕುರಿಗಳೆಂದರೆ, ಹೊಲದ ಕೆಲಸಗಳನ್ನು ಮಾಡುವುದೆಂದರೆ ಎಲ್ಲಿಲ್ಲದ ಅತೀವ ಪ್ರೀತಿ.ಪರಿಣಾಮವಾಗಿ ಓದುವುದರಲ್ಲಿ ಆಸಕ್ತಿಯನ್ನು ಕಳೆದುಕೊಂಡಿದ್ದ ಇವನಿಗೆ ಶಾಲೆಯೆಂದರೆ ರುಚಿಗೆ ಒಗ್ಗದ ಕಷಾಯ.ಸದಾ ಕೊನೆಯ ಬೆಂಚಿನ ಖಾಯಂ ವಿದ್ಯಾರ್ಥಿಯಾಗಿ ಮೇಷ್ಟ್ರುಗಳ ಕೆಂಗಣ್ಣಿಗೆ ಗುರಿಯಾಗಿ ಅವರು ಆಗಾಗ ಕೊಡುತ್ತಿದ್ದ ಬೆತ್ತದೇಟಿಂದ ಇವನ ಕೈಗಳು ಜಡ್ಡುಗಟ್ಟುವುದಿರಲಿ ಮೇಷ್ಟ್ರು ಕೈಗಳೇ ಸೋತು ಸುಣ್ಣವಾಗಿದ್ದವು. ಶೇ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ರೋಬೊಟ್ ರಗಳೆ”: ಅರವಿಂದ. ಜಿ. ಜೋಷಿ.

ಅಂದು ಮೂವತ್ತೊಂದನೇಯ ತಾರೀಖು, ಎಂದರೆ ಆ ಮಾಹೆಯ ಕೊನೆಯ ದಿನ. ಎಂದಿನಂತೆ ಮನೆಗೆಲಸ ಪೂರೈಸಿ ಹೊರಟು ನಿಂತ ನಿಂಗಿಯನ್ನು ಕಂಡ ಪಮ್ಮೀ “ಏಯ್. . . ನಿಂಗೀ. . . ನಾಳೆಯಿಂದ ನೀ ಕೆಲಸಕ್ಕೆ ಬರೋದು ಬೇಡ”ಎಂದಾಗ ಶಾಕ್ ಹೊಡೆಸಿಕೊಂಡವಳ ತರಹ ನಿಂತ ನಿಂಗಿ-“ಯಾಕ್ರವ್ವಾ. . ಬೇರೆ ಕಡೆ ಎಲ್ಲಾದ್ರೂ ಹೋಗ್ತಿದ್ದೀರಾ?, ನನ್ನ ಕಡೆಯಿಂದ ಏನಾದ್ರೂ ತೆಪ್ಪ ಆಗೈತಾ? ನಾನು ಉಸಾರಾಗೇಅವ್ನೀ. . , ಎರಡೂ ಡೋಸ್ ವ್ಯಾಕ್ಸಿನೇಷನ್ ಕೂಡ ಹಾಕ್ಸೊಂಡಿದ್ದೀನಿ. . ಮತ್ಯಾಕ್ರವ್ವಾ. ?” ಹೀಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಆಸ್ತಿವಾರ: ರಾಜಶ್ರೀ ಟಿ. ರೈ ಪೆರ್ಲ

“ಅಪ್ಪ ಯಾಕೆ ಹಾಗೆ ಹೇಳಿದರು ಎಂದು ನನಗೆ ಗೊತ್ತಾಗಲಿಲ್ಲ. ಮೋಳಿಯ ಮನೆಯವರು ನಮ್ಮಷ್ಟು ಸಿರಿವಂತರೇನು ಅಲ್ಲ ನಿಜ, ಆದರೆ ದೂರದ ಸಂಬಂಧಿಕರು ಎಂಬ ನೆಲೆಯಲ್ಲಿ ನಾನು ಆತ್ಮೀಯವಾಗಿ ಮಾತನಾಡಿದ್ದೆ. ಮದುವೆ ಮನೆಯಲ್ಲಿಯೇ ಅಪ್ಪನ ಮುಖ ಊದಿಕೊಂಡಿತ್ತು. ಊಟದ ಹೊತ್ತಿಗೆ ಸ್ವಲ್ಪ ಅವಕಾಶ ಸಿಕ್ಕಿದ್ದೇ ನನಗೆ ಮಾತ್ರ ಕೇಳುವಂತೆ ಗಡುಸಾಗಿಯೇ ಪಿಸುಗುಟ್ಟಿದ್ದರು. “ಅವರ ಹತ್ತಿರ ಅತಿಯಾದ ಆಪ್ತತೆಯೇನು ಬೇಕಾಗಿಲ್ಲ, ಅವರು ಜನ ಅಷ್ಟು ಸರಿ ಇಲ್ಲ. ನಮಗೂ ಅವರಿಗೂ ಆಗಿ ಬರಲ್ಲ” ಅಪ್ಪನ ಪಿಸುಗುಟ್ಟುವಿಕೆಯಲ್ಲಿ ಬುಸುಗುಟ್ಟುವ ಭಾವ ತುಂಬಿತ್ತು. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಸಂಪಾದಕರಿಗೊಂದು ಪತ್ರ”: ಎಂ. ಜವರಾಜ್

-೧- ಸರ್ ನಮಸ್ಕಾರ, ಏನ್ ಸರ್ ನೀವು ಆಡಾಡ್ತ ಹತ್ತು ವರ್ಷ ತುಂಬಿಸಿ ಬಿಟ್ಟಿರಲ್ಲ. ಗ್ರೇಟ್ ಸರ್. ಹತ್ತು ವರ್ಷ ಅಂದ್ರೆ ಸಾಮಾನ್ಯನ ಸರ್. ಸಾಹಿತ್ಯ ಸಂಬಂಧಿತ ಪತ್ರಿಕೆಯನ್ನು ಮಾಡಿ ಅದರಲ್ಲು ಸಾಹಿತ್ಯಾಸಕ್ತ ಆನ್ ಲೈನ್ ಓದುಗರನ್ನು ಹಿಡಿದಿಟ್ಟುಕೊಂಡು ನಿಗಧಿತವಾಗಿ ಪತ್ರಿಕೆ ರೂಪಿಸುವುದಿದೆಯಲ್ಲ ಸುಮ್ನೆನಾ ಸರ್. ಪ್ರತಿ ಸಂಚಿಕೆಗೂ ಕಥೆ, ಕವಿತೆ, ವಿಮರ್ಶೆ, ಪ್ರಬಂಧ ತರಹದ ಭಿನ್ನ ಬರಹಗಳನ್ನು ಆಯ್ದು ಸೋಸಿ ರಂಗೋಲಿ ಚಿತ್ತಾರದಾಗೆ ತುಂಬುವುದಿದೆಯಲ್ಲ ಅದು ಸರ್. ಅದಕ್ಕೆ ನಾನ್ ಹೇಳಿದ್ದು ಗ್ರೇಟ್ ಅಂತ. ಈ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಹೃದಯದ ಪ್ರಾರ್ಥನೆಗೆ ವರವೊಂದು ಸಿಗಲಾರದೆನೋ”..?: ಪೂಜಾ ಗುಜರನ್

ಏನೂ ಬರೆಯಲಿ. ಮನಸ್ಸು ನಿನ್ನ ಸಾಂಗತ್ಯದ ಹಾದಿಯಲ್ಲಿ ಕಾಯುತ್ತಿದೆ ಎಂದೋ..? ಅಥವಾ ಮನದ ನೋವನ್ನು ಒಮ್ಮೆ ನಿವಾರಿಸಿ ಜೊತೆಯಾಗು ಎಂದೋ..? ಇದೆಲ್ಲ ಮನದ ಕೋರಿಕೆ. ಆ ದೇವರಿಗೆ ಇಟ್ಟ ಹರಕೆ. ದೈವಾಂಶ ತುಂಬಿರುವ ಮಣ್ಣಲ್ಲಿ ಬದುಕುವ ನನಗೆ ನಂಬಿರುವ ನಂಬಿಕೆಗಳೆ ದಾರಿದೀಪ. ಇದೆಲ್ಲ ನಿನ್ನ ಅರಿವಿಗೆ ಬರದ ಸತ್ಯವೇನೋ.?ನನ್ನ ಪತ್ರದ ನಿರೀಕ್ಷೆ ನೀನು ಮಾಡುತ್ತಿಯೋ ಇಲ್ಲವೋ ನಾ ಅರಿಯೆನು.ಪತ್ರಗಳನ್ನೇ ಜೀವಾಳ ಅಂತ ತಿಳಿದು ಬದುಕಿದನನಗೆ ನಿನ್ನಿಂದ ಯಾವ ಉತ್ತರಗಳು ಬರಲೇ ಇಲ್ಲ. ಮುಂದೆ ಬರುವುದು ಇಲ್ಲ.‌ನಿನ್ನ ಆಗಾಧವಾದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಒಳತೋಟಿ: ಆನಂದ್ ಗೋಪಾಲ್

‘ಒಂದು ಶುಕ್ರವಾರ ಸರಿ; ಪ್ರತಿ ಶುಕ್ರವಾರವೂ ಕಾಲೇಜಿಗೆ ತಡ ಎಂದರೆ ಯಾವ ಪ್ರಿನ್ಸಿಪಾಲ್ ತಾನೆ ಸುಮ್ಮನಿರುತ್ತಾರೆ?’ – ಹೀಗೆ ಯೋಚಿಸುತ್ತಲೇ ಶೀಲಶ್ರೀ ಪ್ರಿನ್ಸಿಪಾಲರ ಕಚೇರಿಯೊಳಗೆ ಕಾಲಿಟ್ಟಳು. ಅದೇ ಅಲ್ಲಿಂದ ಎಲ್ಲಿಗೋ ಹೊರಟಿದ್ದ ಅವರು ಇವಳತ್ತ ನೋಡಲೂ ಸಮಯವಿಲ್ಲದವರಂತೆ ದುಡುದುಡು ನಡದೆಬಿಟ್ಟರು. ಶೀಲಶ್ರೀಗೆ ಇದು ತುಸು ಸಮಾಧಾನ ತಂದಿತು. ಆದರೂ ‘ವಾರದ ಮೀಟಿಂಗ್’ನಲ್ಲಿ ಇದನ್ನು ಅವರು ಪ್ರಸ್ತಾಪಿಸದೆ ಬಿಡುವವರಲ್ಲ ಎಂದು ಅವಳಿಗೆ ಗೊತ್ತಿತ್ತು! ಸದ್ಯ ಇವತ್ತಿಗೆ ಮುಜುಗರ ತಪ್ಪಿತು ಎಂದು ಹಾಜರಾತಿ ವಹಿಯಲ್ಲಿ ಸಹಿ ಹಾಕಿ ಕ್ಲಾಸ್ನತ್ತ ನಡೆದಳು. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸುಳ್ಳ ಸಾಕ್ಷಿಗಳ ಊರಿಗೆ: ಅಶ್ಫಾಕ್ ಪೀರಜಾದೆ

1 – Balu is imprisoned for murder. come soon sms ಓದುತ್ತಿದ್ದಂತೆಯೇ ನನಗೆ ದಿಗ್ಭ್ರಮೆಯಾಯಿತು ಮತ್ತು ಕಣ್ಣು ಸುತ್ತು ಬಂದಂತಾಗಿತ್ತು. ಬಾಲು ಒಂದು ಹೆಣ್ಣಿನ ಕೊಲೆ ಮಾಡಿ ಪೋಲೀಸರ ಅತಿಥಿಯಾಗಿದ್ದಾನೆ ಎಂದು ನನ್ನ ಇನ್ನೊಬ್ಬ ಗೆಳೆಯ ಕುಮಾರ್ ಬರೆದಿದ್ದ. ಆತ ಹೆಚ್ಚಿನ ವಿವರವೇನೂ ನೀಡಿರಲಿಲ್ಲ. ನನಗೆ ಕುಮಾರ್ ತಿಳಿಸಿದ ಸುದ್ದಿಯಿಂದ ಆಘಾತವಾಗಿದ್ದರೂ ಇದೆಲ್ಲ ಸತ್ಯವಾಗಿರಲಿಕ್ಕಿಲ್ಲ ಸತ್ಯವಾಗುವುದೂ ಬೇಡವೆಂದು ಮನದಲ್ಲಿ ಪ್ರಾರ್ಥಿಸಿದೆ. ಏಕೆಂದರೆ ಬಾಲುವಿನ ನಡವಳಿಕೆ ಸ್ವಭಾವದ ಪೂರ್ಣ ಪರಿಚಯ ನನಗಿದೆ. ಅವನ ನಿರ್ಮಲವಾದ ಪ್ರಶಾಂತವಾದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬಸವಣ್ಣನ ವಚನಗಳಲ್ಲಿ ‘ಅವಳು’: ಮನು ಗುರುಸ್ವಾಮಿ

“ಹೆಣ್ಣಿನ ಚಂಚಲ ಮನಸ್ಥಿತಿಯ ಮೇಲೆ ಬಸವಣ್ಣನವರ ವಚನಗಳ ಪ್ರಯೋಗ”ಅವಳ ವಚನ ಬೆಲ್ಲದಂತೆ!ಹೃದಯದಲಿಪ್ಪುದೆಲ್ಲಾ ನಂಜು ಕಂಡಯ್ಯ!!ಕಂಗಳಲೊಬ್ಬನ ಕರೆವಳು ಮನದಲೊಬ್ಬನ ನೆನೆವಳು,ವಚನದಲೊಬ್ಬನ ನೆರೆವಳು!ಇಂತಿವಳ ತನು ಒಂದೆಸೆ, ಮನ ಒಂದೆಸೆ, ಮಾತೊಂದೆಸೆ!!ಈ ಮಾನಿಸಗಳ್ಳಿಯ ನನ್ನವಳೆಂದು ನಂಬುವಕುರಿನರರನೇನೆಂಬೆನಯ್ಯ ಕೂಡಲಸಂಗಮದೇವ. ಬಸವಣ್ಣನವರ ಇದೊಂದು ವಚನ ನನ್ನನ್ನು ತುಂಬಾ ಆಳವಾಗಿ ಚಿಂತನೆಗೆ ಗುರಿ ಮಾಡಿದೆ. ಮಹಾಮಾನವತಾವಾದಿಯಾದ ಬಸವಣ್ಣನವರ ವಚನವೊಂದು ದೃಢ ಮನಸ್ಸಿಲ್ಲದ ಹೆಣ್ಣೊಬ್ಬಳ ಬಗ್ಗೆ ಮಾತನಾಡುತ್ತಿರುವುದು, ‘ಹೆಣ್ಣು ಚಂಚಲೆ’ ಎಂಬ ವಿಚಾರವನ್ನು ಒತ್ತಿ ಹೇಳುತ್ತಿರುವುದು ಬಹಳ ಅಚ್ಚರಿ ತಂದಿತು. ಅನುಭವ ಇಲ್ಲದವ ಕವಿಯಾಗಲಾರ ಎಂಬ ಮಾತಿನಂತೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕ್ಷಮಿಸಿ ಸಂಪಾದಕರೇ. . ಕತೆ ಕಳುಹಿಸಲಾಗುತ್ತಿಲ್ಲ. . : ಸತೀಶ್ ಶೆಟ್ಟಿ ವಕ್ವಾಡಿ

“ಏನ್ರೀ ಅದು, ಅಷ್ಟು ಡೀಪಾಗಿ ಮೊಬೈಲ್ ನೋಡ್ತಾ ಇದ್ದೀರಾ, ಏನ್ ಗರ್ಲ್ ಫ್ರೆಂಡ್ ಮೆಸೇಜಾ ? ” ರಾತ್ರಿ ಊಟದ ಸಮಯದಲ್ಲಿ ಗೆಳೆಯ ಪ್ರಕಾಶ ಮೈಸೂರಿನ ಅಕ್ಕನ ಮನೆಗೆ ಹೋದವ ತಂದು ಕೊಟ್ಟ ನಾಟಿ ಕೋಳಿಯಿಂದ ಮಾಡಿದ ಚಿಕ್ಕನ್ ಸುಕ್ಕ ಮೆಲ್ಲುತ್ತಿದ್ದ ಹೆಂಡತಿ ನನ್ನ ಕಾಲೆಳೆದಿದ್ದಳು ” ಅಲ್ಲ ಕಣೆ. . ಪ್ರಪಂಚದಲ್ಲಿ ಯಾವ ಗಂಡಸಿಗಾದರೂ ಹೆಂಡತಿ ಎದುರುಗಡೆ ತನ್ನ ಗರ್ಲ್ ಫ್ರೆಂಡ್ ಮೆಸೇಜ್ ನೋಡುವ ಧೈರ್ಯ ಇರುತ್ತೆ ಹೇಳು ? ಅದು ನಮ್ಮ ನಟರಾಜ್ ಡಾಕ್ಟರ್ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಜವಾಬ್ದಾರಿ: ಬಂಡು ಕೋಳಿ

ಗುರುಪ್ಪ ಚಿಂತಿ ಮನಿ ಹೊಕ್ಕು ಕುಂತಿದ್ದ. ಹಿಂದಿನ ದಿನ ಊರಿಂದ ಬಂದಾಗಿಂದ ಅವ್ನ ಮಾರಿ ಮ್ಯಾಲಿನ ಕಳೀನ ಉಡುಗಿತ್ತು. ಅವ್ವ ಅಂದಿದ್ದ ಮಾತು ಖರೇನ ಅವ್ನ ಆತ್ಮಕ್ಕ ಚೂಪಾದ ಬಾಣದಂಗ ನಟ್ಟಿತ್ತು. ಅದೆಷ್ಟ ಅಲಕ್ಷ ಮಾಡಾಕ ಪ್ರಯತ್ನಿಸಿದ್ರೂ ಆತ್ಮಸಾಕ್ಷಿ ಅವನನ್ನ ಅಣಕಿಸಿ ಮತ್ಮತ್ತ ಹಿಂಸಿಸಾಕ ಹತ್ತಿತ್ತು. ಮನಸ್ಸಿನ ಮೂಲ್ಯಾಗ ಒಂದ್ಕಡಿ ತಾನು ಹಡೆದಾವ್ರಿಗಿ ಮೋಸಾ ಮಾಡಾಕ ಹತ್ತೇನಿ ಅನ್ಸಾಕ ಹತ್ತಿತ್ತು. ಒಂದ್ರೀತಿ ಅಂವಗ ಎದ್ರಾಗೂ ಚೌವ್ವ ಇಲ್ದಂಗಾಗಿ ತನ್ನಷ್ಟಕ್ಕ ತಾನ ಅಪರಾಧಿ ಮನಸ್ಥಿತಿಯೊಳ್ಗ ಕುಸ್ದ ಕುಂತಿದ್ದ. ಕಾಲೇಜಿನ್ಯಾಗ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಇಡಿ ಕಿಡಿ ಕವಿತೆಗಳು: ಅನುಸೂಯ ಯತೀಶ್

ಮಂತ್ರಮುಗ್ಧಗೊಳಿಸುವಅಕ್ಷರ ಮಾಂತ್ರಿಕನ ಕಾವ್ಯ ಚಮತ್ಕಾರಿಕೆಯಲ್ಲರಳಿದಇಡಿ ಕಿಡಿ ಕವಿತೆಗಳು. ಹನಿಗವಿತೆಗಳ ಚಕ್ರವರ್ತಿ, ಚುಟುಕುಗಳು ರಾಜ, ಶಬ್ದ ಗಾರುಡಿಗ, ಹರಟೆಯ ಕವಿ, ಕಾವ್ಯ ಲೋಕದ ವಿದೂಷಕ, ಹಾಸ್ಯ ಲೇಖಕ, ನಗು ಬಿಗುವಿನ ಕವಿ, ಸಾಮಾಜಿಕ ಪ್ರಜ್ಞೆಯ ಬರಹಗಾರ ಮುಂತಾದ ನಾಮಾಂಕಿತಗಳಿಗೆ ಭಾಜನರಾದ ನಮ್ಮ ನಾಡಿನ ಹೆಮ್ಮೆಯ ಕವಿಯನ್ನು ಕನ್ನಡದ ಹಿರಿಯ ಹಾಗೂ ಶ್ರೇಷ್ಠ ಸಾಹಿತಿಗಳಾದ ಅ.ರಾ.ಮಿತ್ರರವರು “ಇಡಿ ಕಿಡಿ ಕವನಗಳು” ಕೃತಿಯ ಮುನ್ನುಡಿಯಲ್ಲಿ ಓದುಗರಿಗೆ ಪರಿಚಯಿಸಿರುವ ಪರಿಯಿದು. “ಚೇಷ್ಟೆಯ ಬುದ್ಧಿಯ ತುಂಟತನ ಇವಗುಂಟುಶಬ್ದಗಳ ವಕ್ರ ಸಂಚಾರವೂ ಉಂಟುಮೂಲೆ ಮೂಲೆಗಳಲ್ಲಿ ಬಾಯಾಡಿಸುವ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಂಜಿನಂತೆ ಮರೆಯಾದ ಮಂಜುಳಾ: ಎಂ. ಜಿ. ರವೀಂದ್ರ

ಚಂದನವನದ ಮಂಜುಳಾ ರವರು ಮರೆಯಾಗಿ 35 ವರ್ಷಗಳು ಗತಿಸಿದರೂ ಅವರ ಮನೋಜ್ಞ ಪಾತ್ರಗಳು ಇಂದಿಗೂ ಜೀವಂತ. ಸ್ವಾಭಿಮಾನಿ ಹೆಣ್ಣಿನ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿದಂತೆ ಅಭಿನಯಿಸುತ್ತಿದ್ದರು. ಸುಮಾರು 100ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಎರಡು ಕನಸು, ಸಂಪತ್ತಿಗೆ ಸವಾಲ್, ಮೂರುವರೆ ವಜ್ರಗಳು ಮುಂತಾದ ಚಿತ್ರಗಳಲ್ಲಿ ಡಾ. ರಾಜಕುಮಾರ್ ರವರ ಜೊತೆ ನಟಿಸಿ ತಮ್ಮ ಅಭಿನಯ ಪ್ರೌಢ ಪ್ರತಿಭೆ ಪ್ರದರ್ಶಿಸಿ ಇಂದಿಗೂ ಚಿರಸ್ಥಾಯಿಯಾಗಿ ಜನಮಾನಸದಲ್ಲಿ ಉಳಿದಿದ್ದಾರೆ. ವಿಷ್ಣುವರ್ಧನ್, ಶಂಕರನಾಗ್, ಶ್ರೀನಾಥ್ ಮುಂತಾದ ನಟರ ಜೊತೆಗೆ ಅತ್ಯುತ್ತಮ ವಾಗಿ ಆಭಿನಯಿಸಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ