ಚುಟುಕಗಳು: ಮಾಂತೇಶ ಗೂಳಪ್ಪ ಅಕ್ಕೂರ

೧. ಪ್ರೀತಿ ಕುರುಡು.

ನಿಜವಾಗಿಯೂ ಪ್ರೀತಿ
ಕುರುಡು

ಹಾಗಾಗಿಯೇ ನಾನದರ
ಕಣ್ಣಿಗೆ ಕಾಣಿಸಿಕೊಳ್ಳಲಿಲ್ಲ ಬಿಡು..!

೨. ಮುತ್ತು ಹವಳ.

ಕೈಯ ಹಿಡಿದಾಕ್ಷಣ ನಾನವಳ
ಸಿಕ್ಕಂತಾಯಿತಂಥವಳಿಗೆ ಮುತ್ತು ಹವಳ
ಇದ್ದರೂ ಇರಬಹುದೇನೋ ನನ್ನಂಥ
ಹುಡುಗರು ತುಂಬಾ ವಿರಳ..!

೩. ಪ್ರೀತಿ & ಮೋಸ

ನಾ ಒರಗುವ ದಿಂಬಿಗೂ
ಕರಗುವ ಕಣ್ಣ್ ಕಂಬನಿಗೂ
ಮಾತ್ರ ಗೊತ್ತು ಗೆಳತಿ ನಾನು ನಿನ್ನ
ಪ್ರೀತಿ ಮಾಡಿದ್ದು.

ನನ್ನ್ ಕಣ್ಣಿಗೆ ಚುಚ್ಚಿದ ಸೂಜಿಯಿಂದ
ಹಿಡಿದು ನಮ್ಮಿಬ್ಬರನ್ನು ರಾಜಿ ಮಾಡಲು
ಬಂದವರಿಗೆಲ್ಲ ಗೊತ್ತು ಗೆಳತಿ ನೀನು ನನಗೆ
ಮೋಸ ಮಾಡಿದ್ದು..!

೪. Block..

ರೆಕ್ಕೆಗಳಿರದಿದ್ದರು ಹಾರಿ ಬಂದು ಸಾರಿ
ಸಾರಿ ಹೇಳುತ್ತಿದ್ದವು ನನ್ನ ಕಣ್ಣೀರು
ನಾ ನಿನ್ನಾ ಎಷ್ಟು ಪ್ರೀತಿಸುವೆ ಎಂದು ,

ಹಾರಿಬರುವ ದಾರಿಯನ್ನು
ನೀ ಬ್ಲಾಕ್ ಮಾಡಿದೆ ಇದ್ದಿದ್ದರೆ..!

೫. ಸಹನೆ..

ಕಾಡಿನ ಹೂವಿಗೆ
ಪಟ್ಟಣದ ಸೂಜಿದಾರ ಗಳಿಂದ
ನೋವಾದಾಗ
“ವಿಧಿಲಿಖಿತ” ಎಂದು
ಸಹನೆ
ಮೆರೆಯಿತು..!

೬. ಸುಖ…

ಯಾವುದರಲ್ಲೂ ಸುಖವಿಲ್ಲ ಎಂದು
ಸುಖದ ಹಾದಿ ಹಿಡಿದವರನ್ನು
ನಮ್ಮ ಜನಾ ಸನ್ಯಾಸಿ ಎಂದು ಕರೆದರೂ

ಕಷ್ಟದ ಸರಮಾಲೆ ಹಾಕಿಕೊಂಡು
ದುರಾದೃಷ್ಟವನ್ನು ಹಣೆಗೆ ಬಳಿದುಕೊಂಡ
ವರನ್ನು ನಾಸ್ತಿಕ ಎಂದರು…

೭. ಕೈಯ ಬಳಿ..

ಆಸೆಗಳೇ ಇರಲಿಲ್ಲ
ನನ್ನ ಬಳಿ
ಆಸೆಗಳ‌ ಸದ್ದು ಮಾಡಿದ್ದು
ಅವಳ ಕೈಯ ಬಳಿ..!

೮. Break up..

ನಮ್ಮಿಬ್ಬರ ಗುದ್ದಾಟ ವನ್ನು
ಸದ್ದಿಲ್ಲದೆ
ಕದ್ದಾಲಿಸಿದ ಮನದಗೋಡೆ ಇಂದು
ಬಿರುಕು ಬಿಟ್ಟಿದೆ

ಅದಕ್ಕೆ ಅವಳು
break up
ಎಂದು ಹೆಸರಿಟ್ಟಳು..!

೯. ಕಣ್ಣೀರು..

ಇಂದಿನ ಸಮುದ್ರದ
ಉಪ್ಪು ನೀರು
ಮುಗ್ಧರು ಮೋಸವನು
ಅರಿಯದೆ
ತಪ್ಪಿ ಹಾಕಿದ ಕಣ್ಣೀರು...!

೧೦. ಜಾತಕ ಸತ್ಯ..

ಮೋಸಗಾರರಿಗೆ ಮುಗ್ಧತೆಯೇ
ಮೊದಲ ಮೆಟ್ಟಿಲು ಎಂಬ
ಜಾತಕ ಸತ್ಯ…

ನಿರೂಪಿಸಿತು ಪ್ರೀತಿಯಲಿ
ಅವಳು ಮಾಡಿದ
ಘಾತುಕ ಕೃತ್ಯ..

೧೧. ಮುಂಗುರುಳು..

ಅದಲು ಬದಲು ಆಗವಾಸೆ
ನನ್ನ ಕೂದಲಿಗೆ
ಅವಳು,
ಮುಂಗುರುಳನು
ಎಷ್ಟೇ
ದಿಕ್ಕರಿಸಿದರು
ಕೆನ್ನೆ ಕಚ್ಚುತ್ತಿರುವುದನ್ನು ನೋಡಿದಾಗಿನಿಂದ ..

೧೨. ಆತಂಕ….

ಕಡೂಮೌನವ ಮುರಿದು
ಎರಡು ಅಂಕಣವಾ ದಾಟಿ
ನನ್ನ ನೋಡ ಬಂದ ನಿನಗೆ

ಮುಕ್ಕಾಗದ ನನ್ನ ಮುಗುಳ್ನಗೆಗೆ
ಕಾರಣ ನೀನೆಂದು ಕಳಂಕ ಹೊರೆಸಿ
ನಕ್ಕಾರೆಂಬ ಸಣ್ಣ ಆತಂಕನನಗೆ..

೧೩. ಕರ್ತವ್ಯಭ್ರಷ್ಟ…

ನಿನ್ನ ಕನಸಿಗೆ ನನ್ನ
ರಾತ್ರಿಯ ನಿದ್ದೆಯೇ ಕಾವಲು

ಕ್ಷಮಿಸಿಬಿಡು ಗೆಳತಿ
ಒಮ್ಮೊಮ್ಮೆ ಕರ್ತವ್ಯಭ್ರಷ್ಟನಾಗಿ
ನಿದ್ದೆ ಕಣ್ಣಲ್ಲೇ ದಿಗ್ಗನೆ ಎದ್ದು ಬಿಡುವೆ
ನೀನು ಕನಸಿನಲ್ಲಿಯೇ
ಮೆಲ್ಲ ಕೂಗಲು..!

೧೪. ಬಿಟ್ಟು ಬಿಡುವೆ…

ರಾಮನಿಗೂ ಬಂದಿತ್ತು ಅನುಮಾನದ ವ್ಯಾಧಿ:
ಕೆಲ ಕಾಲ ಬಂದ್ ಆಗಿತ್ತು ನನ್ನ ಮನ
ಅದನ್ನೋದಿ;
ನನಗೂ ಬಂತೊಂದು ದಿನ ಅಂತಹ ಪರಿಸ್ಥಿತಿ!
ಅದಕ್ಕೆ ಕಾರಣ ಅವಳ ಮೇಲಿನ
ಅತಿಯಾದ “ಪ್ರೀತಿ”
ಬಿಟ್ಟು ಬಂದನವ ಅವಳನು ಕಾಡಿನಲೆ !
ಅಷ್ಟೊಂದು ಕ್ರೂರಿ ನಾನಲ್ಲ
ಬಿಟ್ಟು ಬಿಡುವೆ ನಾನವ‌ಳನು ಕಾಡದಲೆ…

೧೫. ಎಲ್ಲಿಗೆ ಹೋರಟು ಹೋದೆ..

ಪ್ರತಿ ಕಣ್ಣ ಹನಿಗಳಲ್ಲಿಯೂ
ನಿನ್ನದೇ ಮಾತು
ಎಲ್ಲಿಗೆ ಹೊರಟು ಹೋದೆ ದೂರ..?
ನನ್ನ ಮೌನದೊಂದಿಗೆ ಬೆರೆತು..!

೧೬. ಹಾಗಾಗಿ ..

ನೀ ಹೊರ ನೆಡೆದಾಗಲೆಲ್ಲ
ತಳಮಳಿಸುತ್ತದೆ ನನ್ನ ಜೀವ ..!
ನೀ ಒಳಬಂದರೆ ಸಾಕು
ನಿರಾಳವಾಗುತ್ತದೆ ನನ್ನ ಭಾವ..!

ಹೊಸ್ತಿಲ ಒಳಗಿನ ರಾಹು;
ಹೊಸ್ತಿಲ ಹೊರಗಿನ ಕೇತು;
ನಿನ್ನ ಹೆಗಲೇರಲು ಕಾಯ್ದು ಕುಂತ
“ಶನಿಗಳು” ಹಾಗಾಗಿ..!

೧೭. ಬದಲಾವಣೆ ಜಗದ ನಿಯಮ..

ನಿಘಂಟಿನ ಪುಸ್ತಕವ ತೆರೆದು
” ಪ್ರೀತಿ “
ಅರ್ಥ ಹುಡುಕುತ್ತಿದ್ದ ನನಗೆ
ಅದು ಬದಲಾಗಿದೆ ಎಂದು ಸಮಾಧಾನಿಸಿದೆ..!

ಬದಲಾದದ್ದನ್ನೂ ಹುಡುಕುವಷ್ಟರಲ್ಲಿಯೇ
ನೀನೇ ಬದಲಾಗಿ
ಬದಲಾವಣೆ ಜಗದ ನಿಯಮ
ಎಂದು ಅರ್ಥೈಸಿದೇ..!

೧೮. ಲೆಕ್ಕ( + – * / )..

ನನ್ನ ಕನಸಿಗೆ ನಿನ್ನ ನೆನಪುಗಳನ್ನು ಕುಡಿಸಿ +
ಪ್ರೀತಿಯಲಿ ಕಣ್ಣಾಮುಚ್ಚಾಲೆ ಆಟವಾಡುತ್ತಾ
ಕೆಲ ಹೊತ್ತು ಕಾಲಕಳೆದೆ –

ಪ್ರೀತಿಯ ಲೆಕ್ಕ ಸಿಗುತ್ತಿಲ್ಲವೆಂದು ನಮ್ಮಿಬ್ಬರ
ಮನಗಳ ಗುಣಿಸಿ ನೋಡುವಷ್ಟರಲ್ಲಿಯೇ *

ಭಾಗಾಕಾರ ಒಂದನ್ನೂ ಮರೆತಿರುವೆ ಎಂದು!
ಮನಗಳ ಭಾಗಿಸಿ /
ನನಗೆ ಸರಿಯಾದ ಪಾಠ ಕಲಿಸಿದೆ….

೧೯. ಅರಿವಿಲ್ಲದೆ ..

ಕಣ್ಣಂಚಿನ ಕಣ್ಣಿರು ಹಿಡಿದು
ಅಂಚೆ ಡಬ್ಬಿಗೆ ಹಾಕಿದೆ
ನಿನ್ನ
ಮುಂಚಿನ ವಿಳಾಸ ಬರೆದು

ನೀನು ಆಗಾಗ ಮನೆ, ಮನಗಳ
ಬದಲಿಸುವವಳೆಂಬ
ಕೊಂಚವೂ ಅರಿವಿಲ್ಲದೆ..!

೨೦. ವ್ಯಾಪಾರಿ…

ವ್ಯಾಪಾರಿ ನಾನಲ್ಲ ಎಂದು
ಬೆಲೆಬಾಳುವ ಮುತ್ತುಗಳನ್ನು ಕೊಟ್ಟಳು
ನಾನು ಸಹ ವ್ಯಾಪಾರಿ ಅಲ್ಲ
ಹಿಂದಿರುಗಿಸಿ ಬಿಡುವೆ..

-ಮಾಂತೇಶ ಗೂಳಪ್ಪ ಅಕ್ಕೂರ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x