ಚಡಗ ಕಾದಂಬರಿ ಪ್ರಶಸ್ತಿಗಾಗಿ ಕೃತಿಗಳ ಆಹ್ವಾನ

ಕೋಟೇಶ್ವರದ ಎನ್.ಆರ್.ಎ.ಎಂ.ಎಚ್. ಪ್ರಕಾಶನ ಮತ್ತು ಸ್ಥಿತಿಗತಿ ತ್ರೈಮಾಸಿಕ ಪತ್ರಿಕೆಗಳ ಆಶ್ರಯದಲ್ಲಿ, ಕನ್ನಡದ ಹೆಸರಾಂತ ಕಾದಂಬರಿಕಾರ, ಸಂಘಟಕ ದಿ. ಪಾಂಡೇಶ್ವರ ಸೂರ್ಯನಾರಾಯಣ ಚಡಗರ ನೆನಪಿನಲ್ಲಿ ಕೊಡುವ ಹನ್ನೊಂದನೆಯ ವರ್ಷದ ಕಾದಂಬರಿ ಪ್ರಶಸ್ತಿಗೆ 2020ರಲ್ಲಿ ಪ್ರಥಮ ಆವೃತ್ತಿಯಾಗಿ ಪ್ರಕಟವಾದ ಕಾದಂಬರಿಗಳನ್ನು ಲೇಖಕ/ ಪ್ರಕಾಶಕರಿಂದ ಆಹ್ವಾನಿಸಿದೆ.

ಆಸಕ್ತರು ತಮ್ಮ ಕೃತಿಯ ಮೂರು ಪ್ರತಿಗಳನ್ನು ಸ್ಪರ್ಧೆಯ ಸಂಚಾಲಕರಾದ ಪ್ರೊ. ಉಪೇಂದ್ರ ಸೋಮಯಾಜಿ, “ಶ್ರೀ” ಚಿತ್ರಪಾಡಿ, ಅಂಚೆ: ಸಾಲಿಗ್ರಾಮ, ಉಡುಪಿ ಜಿಲ್ಲೆ – 575225 (9740842722) ಇವರಿಗೆ ಸೆಪ್ಟೆಂಬರ್ 30, 2021 ರ ಒಳಗೆ ತಲುಪುವಂತೆ ಕಳುಹಿಸಿಕೊಡಬಹುದು. ನವೆಂಬರ್ ತಿಂಗಳಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಪ್ರದಾನಗೊಳ್ಳಲಿರುವ ಈ ಪ್ರಶಸ್ತಿಯು, ಪ್ರಶಸ್ತಿ ಪತ್ರ, ಸ್ಮರಣಿಕೆ, ಹಾಗೂ ಹತ್ತು ಸಾವಿರ ರೂ ನಗದನ್ನು ಒಳಗೊಂಡಿದೆ.

ಕನ್ನಡದ ಪ್ರಮುಖ ಲೇಖಕರಾದ ನಾ. ಮೊಗಸಾಲೆ, ಬೊಳುವಾರು, ಕೆ. ಸತ್ಯನಾರಾಯಣ, ವಸುಮತಿ ಉಡುಪ, ರೇಖಾ ಕಾಖಂಡಕಿ, ಗೋಪಾಲಕೃಷ್ಣ ಪೈ, ಎಂ. ಆರ್. ದತ್ತಾತ್ರಿ, ಗುರುಪ್ರಸಾದ್ ಕಾಗಿನೆಲೆ, ವೈ. ಎಸ್. ಹರಗಿ, ಶ್ರೀಧರ ಬನವಾಸಿ, ಆಶಾ ರಘು, ಸಹನಾ ವಿಜಯಕುಮಾರ್ ಮತ್ತು ವಸುಧೇಂದ್ರರ ಕಾದಂಬರಿಗಳಿಗೆ ಹಿಂದಿನ ವರ್ಷಗಳಲ್ಲಿ ಈ ಪ್ರಶಸ್ತಿ ಸಿಕ್ಕಿರುವುದನ್ನು ತಾವು ಗಮನಿಸಿರಬಹುದು.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x