“ಗಾಂಧಿ ಆಗ್ಬೇಕಂದುಕೊಂಡಾಗ” ಪುಸ್ತಕ ಪರಿಚಯ: ಸುನೀಲ ಚಲವಾದಿ

ನಮ್ಮ ಹೆಮ್ಮೆಯ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಮಂಠಾಳ ಗ್ರಾಮದವರಾದ “ವೀರಣ್ಣ ಮಂಠಾಳಕರ” ಬರೆದಿರುವಂತಹ ಒಂದು ಕವನ ಸಂಕಲನ “ಗಾಂಧಿ ಆಗ್ಬೇಕಂದುಕೊಂಂಡಾಗ” ಎಂಬ ಪುಸ್ತಕದ ಒದುಗನಾದ ನಾನು ನಿಮ್ಮೆಲ್ಲರಿಗು ಪರಿಚಯಿಸುವುದಕ್ಕೆ ತುಂಬಾನೇ ಸಂತಸವಾಗುತ್ತಿದೆ.

ಶ್ರೀಯುತ ವೀರಣ್ಣ ಮಂಠಾಳಕರ್ ಅವರು ಈ ವರೆಗೆ ಒಟ್ಟು 13 ಕೃತಿಗಳನ್ನು, ಬರೆದಿದ್ದಾರೆ. ಚುಟುಕು, ಹನಿಗವನ, ಕಥಾಸಂಕಲನ, ಮಾಧ್ಯಮದ ಕುರಿತಾದ ಲೇಖನಗಳನ್ನು ರಚಿಸಿ ಓದುಗರಿಗೆ ಕೊಡುಗೆಯಾಗಿ ನೀಡಿರುವುದು ಅವರ ಸಾಹಿತ್ಯ ಕೃಷಿಯ ಕನ್ನಡಿ ನಮ್ಮ ಕಣ್ಣೆದುರಿಗೆ ಬಂದು ನಿಲ್ಲುತ್ತದೆ.

ವೀರಣ್ಣ ಮಂಠಾಳಕರ್ ಅವರು ವೃತ್ತಿಯಲ್ಲಿ ಕೃಷಿ ಕುಟುಂಬದಿಂದ ಬಂದವರು, ವೀರ ಸಂಕಲ್ಪ ಮೀಡಿಯಾ ಪ್ರಧಾನ ಸಂಪಾದಕರಾಗಿ ಸಧ್ಯ ಕಾರ್ಯ ನಿರ್ವಹಿಸುತಿದ್ದಾರೆ.

ಈ ಹಿಂದೆ ವಿವಿಧ ರಾಜ್ಯ ಮಟ್ಟದ ದಿನ ಪತ್ರಿಕೆಗಳ ಹಾಗೂ, ಮಾಸಿಕ, ವಾರ ಪತ್ರಿಕೆಗಳ ಸಂಪಾದಕರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಮಾಧ್ಯನ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದರೂ ಪ್ರವೃತ್ತಿಯಲ್ಲಿ ಅವರೊಬ್ಬರು ಕ್ರಿಯಾಶೀಲ ಯುವ ಸಾಹಿತಿಗಳಾಗಿದ್ದಾರೆ.

“ಈ ಗಾಂಧಿ ಆಗ್ಬೆಕಂದುಕೊಂಡಾಗ” ಎಂಬ ಪುಸ್ತಕವು ನನಗೆ ತಲುಪಿ ಕೆಲ ದಿನಗಳೆ ಆಗಿದ್ದವು ಆದರೆ ಅದನ್ನು ಪೂರ್ತಿಯಾಗಿ ಓದೋಕ್ಕೆ ಅಷ್ಟೊಂದು ಸಮಯ ಸಿಕ್ಕಿರಲಿಲ್ಲ ಈಗ ಪುಸ್ತಕವನ್ನು ಪೂರ್ತಿ ಓದಿ ಒಂದು ವಿಮರ್ಶಾ ಲೇಖನ ಬರೆಯುತ್ತಿದ್ದೇನೆ.

ವೀರಣ್ಣನವರು ತಮ್ಮ ಸಂಕಲನದಲ್ಲಿ ಒಂದೊಂದು ಅಕ್ಷರಗಳನ್ನು ಅರ್ಥಪೂರ್ಣವಾಗಿ ಮತ್ತು ರಸವತ್ತಾಗಿ ಪೋಣಿಸುವ ಬಗೆ ಓದುಗರಲ್ಲಿ ಕುತೂಹಲ ಹುಟ್ಟಿಸುತ್ತಾರೆ. ತುಂಬಾ ಸುಂದರವಾದ. ಈ ಕೃತಿಯಲ್ಲಿ ಇರುವಂತಹ ಕವನಗಳು ಪ್ರೇಮ ನಿವೆದನೆ, ಭಗ್ನಪ್ರೆಮಿಯ ಮನದ ಪ್ರಲಾಪ, ಹೀಗೆ ಬಾಳೀಗೊಂದು ಚೈತನ್ಯ ನೀಡುವ ಕವನಗಳು ತುಂಬಾ ಒಳ್ಳೆ ರೀತಿಯಿಂದ, ಸಾಮಾಜಿಕ ವಿಡಂಬನೆ, ರಾಜಕೀಯ, ಅನ್ಯಾಯ, ಭ್ರಷ್ಟಾಚಾರದ ಕುರಿತ ಹಾಗೂ ಮಹಾತ್ಮರ ಕೊಡುಗೆ ಇವರ ಕವನಗಳಲ್ಲಿ ಒಳಗೊಂಡಿವೆ.

ವಾಸ್ತವ ಜಗತ್ತಿನ ಬಡವರ ಕಷ್ಟ, ಸಮಾಜವು ಒಂದು ಹೆಣ್ಣನ್ನು ನೋಡಿಕೊಳ್ಳುತ್ತಿರುವ ರೀತಿ, ಕಾಮ, ಮೋಹ, ಮುಂತಾದವುಗಳ ಬಗ್ಗೆ “ಗಾಂಧಿ ಆಗಬೇಕಂದುಕೊಂಡಾಗ” ಕವನ ಸಂಕಲನದಲ್ಲಿ ಪ್ರಸ್ತುತವಾಗಿ ಗಾಂಧೀಜಿಯವರು ಬದುಕಿದಿದ್ದರೆ ಈ ಸಮಾಜ ಅವರನ್ನು ಹೇಗೆ ನೊಇಡುತಿತ್ತು ಎಂಬುದಕ್ಕೆ ವಿಡಂಬನಾತ್ಮಕವಾಗಿ, ಮಾರ್ಮಿಕವಾದ ಭಾವನೆಗಳು ವೀರಣ್ಣ ಮಂಠಾಳಕರ್ ಅವರನ್ನು ಗಾಂಧಿ ಎಂಬ ಪ್ರತಿಮೆ ತೀರ್ವವಾಗಿ ಕಾಡಿದಂತಿದೆ.

“ಗಾಂಧಿ” ಕುರಿತು ಒಂದು ಕವನ ಹೀಗಿದೆ.

“ಗಾಂಧಿ ಆಗ್ಬೇಕಂದುಕೊಂಡಾಗ
ತುಂಡು ಬಟ್ಟೆಯಲ್ಲಿ ತಿರಗಾಡ್ಬೇಕಲ್ಲ
ಜನ ನನ್ನ ನೋಡಿ ಬೆತ್ತಲೆ ಕತೆ
ಕಟ್ಟುತ್ತಾರೆಂಬ ಚಿಂತೆ”

ಗಾಂಧಿ ಆಗ್ಬೇಕಂದುಕೊಂಡಾಗ
ಕೋಲು ಹಿಡಿದು ತಿರಗಾಡ್ಬೇಕಲ್ಲ
ಕೋಲು ಕಂಡ ಜನ, ಕೋಲಾಹಲ
ಎಬ್ಬಿಸುವರೆಂಬ ಚಿಂತೆ. . !

ಗಾಂಧಿ ಆಗ್ಬೇಕಂದುಕೊಂಡಾಗ
ಬೋಳು ತಲೆಯಲ್ಲಿ ತಿರಗಾಡ್ಬೇಕಲ್ಲ
ಬಿಸಿಲು ಧಗೆಯಲ್ಲಿ ಜನ, ಮೊಟ್ಟೆ ಬೇಯಿಸಿ
ಹೊಟ್ಟೆ ತುಂಬಿಸಿಕೊಳ್ಳುತ್ತಾರೆಂಬ ಚಿಂತೆ. . !

ಗಾಂಧಿ ಆಗ್ಬೇಕಂದುಕೊಂಡಾಗ
ದಪ್ಪ ಕನ್ನಡಕ ಕಣ್ಣಿಗೆ ಹಚ್ಚಬೇಕಲ್ಲ
ಕನ್ನಡಕ ಕಂಡ ಜನ, ಕಣ್ ಕಾಣ್ಸೋದಿಲ್ಲಂತ
ತಿಳಿದು, ಕಂಡಲ್ಲಿ ಗುಂಡಿಟ್ಟು ಕೊಲ್ಲುತ್ತಾರೆಂಬ ಚಿಂತೆ. !

“ಹೀಗೆ ಈ ಸಂದರ್ಭದಲ್ಲಿ ಗಾಂಧಿ ಎಂಬ ಮಹಾತ್ಮನಾಗಲು ಹೊರಟರೆ ಎದುರಿಸುವ ತೊಂದರೆ, ಅನಾಹುತಗಳನ್ನು ತಮ್ಮ ಕವನದಲ್ಲಿ ಅನಾವರಣಗೊಳಿಸಿದ್ದಾರೆ ವೀರಣ್ಣ ಮಂಠಾಳಕರ್ ಅವರು”

ಹಲವು ವಿಷಯಗಳ ಕುರಿತು ಅನಾವರಣಗೊಂಡಿರುವ ಸಂಕಲನದಲ್ಲಿ ಹೀಗೆ ಹಲವಾರು ವೈಶಿಷ್ಟ್ಯವಾದ ಕವನಗಳನ್ನು ರಚಿಸುವುದರ ಜೊತೆಗೆ ಸಾಹಿತ್ಯ ಪ್ರೆಮಿ, ಕಥೆಗಾರ ಶ್ರೀಕಾಂತ ಪಾಟೀಲರ ಒಡನಾಟದ ಬಗ್ಗೆ ಕೂಡ ಅರ್ಥಪೂರ್ಣವಾಗಿ ಕವನ ರಚಿಸಿದ್ದಾರೆ.

ಈ ಸಂಕಲನದಲ್ಲಾದ ಒಂದು ಕವನವಾದ “ಆ ನತದೃಷ್ಟ ಹುಡುಗಿ” ಎಂಬುದು ಸಮಾಜದ ಎಲ್ಲರ ಪರವಾಗಿ, ಈ ಸಮಾಜ ಶತ-ಶತಮಾನಗಳಿಂದ ಹೆಣ್ಣನ್ನು ಒಂದು ಕೈಲಾಗದ ಹಾಗೂ ತೃತೀಯ ದರ್ಜೆಗೆ ಸೇರಿದ ಕ್ಷುದ್ರ ಜಂತೆಂದು ಭಾವಿಸಿದ್ದೆವೆ ಹೊರತು ಅವಳ ಕಷ್ಟಕಾರ್ಪಣ್ಯಗಳನ್ನು ನಾವು ಎಂದು ಅರಿಯಲಿಲ್ಲ. ಎಂಬುದನ್ನು ಬೆಳಕು ಚೆಲ್ಲಿದ್ದಾರೆ.

ಶ್ರೀಯುತ ವೀರಣ್ಣನವರು ವಾಸ್ತವ ಜಗತ್ತಿನ ಭರವಸೆ, ನಂಬಿಕೆ ಎಂಬ ಮುಖವಾಡ ತೊಟ್ಟಿರುವ ಜನಗಳ ಬಗ್ಗೆ ಹತಾಶೆಯನ್ನು ಹೊರ ಹಾಕಿದ್ದಾರೆ . ವಿನಹ ಕಷ್ಟದ ಸಮಯ, ಜೀವನದ ಜಂಝಾಟದ ಬದುಕಿನಲ್ಲೀ ಜೀವನ ನಡೆಸುತ್ತಿರುವವರು ಹಸಿವೆಂಬ ಹೆಬ್ಬಾವಿನ ಸುಳಿಯಲಿ ಸಿಲುಕಿರುವುದನ್ನು ಗಮನ ಸೆಳೆಯುತ್ತಾರೆ.

ದುಡ್ಡಿನ ಮದ, ಮೋಹದಲಿ ಹೆಣ್ಣೆಂಬ ವಸ್ತುವಿಗೆ ಭೊಗಿಸುವ ಯಂತ್ರವನ್ನಾಗಿ ಮಾಡಿಕೊಂಡಿದ್ದಾರೆ ಎಂದು ಅತ್ಯಂತ ಬೇಸರದಿಂದ ಕವನದಲ್ಲಿ ಸಾರುತ್ತಾರೆ.

ಅವಳು ಈ ಮೊಸಗಾರರ ಕರಿನೆರಳಿನಿಂದ ದೂರ ಸರಿದು ಬಿಡುಗಡೆಯೆಂಬ ಮಹತ್ತರ ಕನಸೊಂದನ್ನು ಮನದಲ್ಲೇ ಬಿತ್ತಿಕೊಂಡಿದ್ದಾಳೆ ಬಿಡುಗಡೆ. . . ಬಿಡುಗಡೆಯೊಂದೆ ಅವಳ ಪಾಲಿನ ಮಹಾಮಂತ್ರ. ಎಂಬುದನ್ನು ಎಚ್ಚರಿಸುತ್ತಾರೆ.

ಹೀಗೆ ವೀರಣ್ಣ ಮಂಠಾಳಕರ್ ಅವರು ಸದರಿ ಪುಸ್ತಕದಲ್ಲಿ ಸುತ್ತಮುತ್ತಲಿನ ಸಾಮಾಜಿಕ ಸಮಸ್ಯೆಗಳ ಕುರಿತು ರಚಿಸಿರುವಂತಹ ಕವನಗಳು ಗಮನಾರ್ಹವಾಗಿವೆ. “ಗಾಂಧಿ ಆಗ್ಬೇಕಂದುಕೊಂಡಾಗ” ಎಂಬ ಪುಸ್ತಕ ಅಂತರಂಗದ ಬರಹಗಳು ಓದುಗರಿಗೆ ಮುದ ನೀಡುವುದಂತೂ ಸತ್ಯ.

ಅದರ ಜೊತೆಗೆ ತಲ್ಲಣವನ್ನು ಸೃಷ್ಟಿಮಾಡುವಂತಹ ಈ ಪುಸ್ತಕದ ಮುಖಪುಟವು ಕೂಡಾ ಓದುಗರಿಗೆ ರೊಮಾಂಚನಗೊಳಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಬದುಕಿರುವವರೆಗೂ ಏನಾದರು ಸಾಧಿಸಿ, ಗುರಿಯನ್ನು ಮುಟ್ಟುವ ಸಂಕಲ್ಪವನ್ನು ಹೊಂದಿರುವ ಇವರು ಯುವಕರಲ್ಲಿಯೂ ಹಾಗೂ ಓದುಗರಿಗೆ ಯುವ ಚೈತನ್ಯ ನೀಡುವ ಮಾತು, ಕೊರೆಯುವ ಚಳಿಯಾದರು ಸರಿ . . ಅದರಲ್ಲಿಯೇ ನುಗ್ಗಿ ಗುರಿಮುಟ್ಟು ಎಂದು ಸಂದೇಶ ಸಾರುತ್ತಾರೆ.

ಅನ್ಯಾಯ, ಹುಸಿಭರವಸೆಗಳ ಮಾಲಿಕರಿಗೆ ನಿಮ್ಮ ದಿಟ್ಟ ಉತ್ತರಗಳ ಮೂಲಕ ಎದುರಿಸಿ, ಪ್ರತಿಭಟಿಸದೇ ಯಾವುದೇ ಪ್ರತಿಫಲ ಸಿಗದು ಎಂದು ಹೇಳಿ ತಮ್ಮ ಕವನಗಳ ಮೂಲಕ ಸಮಸ್ತ ನಾಡಿನ ಜನತೆಗೆ ಅನ್ಯಾಯದ ವಿರುದ್ಧ ಎಚ್ಚರಿಕೆ ಕರೆಯನ್ನು ವೀರಣ್ಣ ಮಂಠಾಳಕರ್ ಕೊಡುತ್ತಿದ್ದಾರೆ.

ನಗುಮೊಗದ ಶ್ರೀ ವೀರಣ್ಣ ಮಂಠಾಳಕರ್ ಅವರ ಸಾಹಿತ್ಯ ಸೇವೆ ಹೀಗೆ ನಿರಂತರ ಸಾಗುತ್ತಿರಲಿ ಇನ್ನೂ ಹೆಚ್ಚು ಹೆಚ್ಚು ಪುಸ್ತಕಗಳನ್ನೂ ಬರೆದು ನಮ್ಮ ಕನ್ನಡ ಸಾಹಿತ್ಯಲೊಕದ ಮಡಿಲಿಗೆ ಕೊಡುಗೆಯಾಗಿ ನೀಡಲಿ ಎಂದು ಹಾರೈಸುತ್ತಾ ಅವರಿಗೆ ಹೃದಯಪುರ್ವಕವಾಗಿ ಶುಭಹಾರೈಸುತ್ತೇನೆ.

-ಸುನೀಲ ಚಲವಾದಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x