ವೆಂಕಿ ಬಂದನೇ?: ಸುವ್ರತಾ ಅಡಿಗ ಮಣೂರು
ವೆಂಕಿ ಬರ್ತಾನೆ ಅಂತ ಹೇಳಿದ್ದ, ಇನ್ನು ಬಂದಿಲ್ಲ. ಕಳೆದ ಭಾನುವಾರ ಅವನ ಸೊಸೆಯ ಫೋನಿಗೆ ಕಾಲ್ ಮಾಡಿದ್ದೆ. ʻಪದೇ ಪದೇ ಕಾಲ್ ಮಾಡ್ಬೇಡ್ವೋ ಇವರಿಗೆ ಕಿರಿಕಿರಿ ಆಗುತ್ತೆʼ ಅಂತ ಹೇಳಿದ್ದ. ಮುಂದಿನ ಭಾನ್ವಾರ ಬರ್ತಿನಿ ಅಂತ ಹೇಳಿದ್ದ. ಇನ್ನೂ ಬಂದಿಲ್ವಲ್ಲ ಎಂದುಕೊಳ್ಳುತ್ತಾ ರಾಯರು, ಬಾಗಿಲು ತೆರೆದು ನೋಡಿದರು.“ಮಾವ … ಧೂಳ್ ಬರುತ್ತೆ ಬಾಗಿಲು ಹಾಕಿ” ಎಂದು ಅಡುಗೆ ಮನೆಯಿಂದ ಸುಮ ಕೂಗಿಕೊಂಡಳು.ಅಬ್ಬ.. ಅವಳ ಕಿವಿ ಎಷ್ಟು ಚುರುಕು. ಎಲ್ಲವೂ ಕೇಳಿಸುತ್ತೆ, ಹಿಂದೊಮ್ಮೆ ವೆಂಕಿ ಬಂದಾಗ, ನಾವು ನಿಧಾನವಾಗಿಯೆ … Read more